ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಂಭ್ರಮದಿಂದ ಆಚರಿಸುವ ಹೊಸ ವರ್ಷವು ಹತ್ತಿರದಲ್ಲಿದೆ. ಇದು ನಿಮ್ಮ ಪ್ರೀತಿಪಾತ್ರರಿಗೆ ಉಡುಗೊರೆಗಳನ್ನು ನೀಡುವ ಮತ್ತು ಅವರು ನಿಮಗೆ ಎಷ್ಟು ಮುಖ್ಯರೆಂದು ತಿಳಿಸುವ ಸಮಯ. ಆದರೆ, ಚಾಕೊಲೇಟ್‌ಗಳು, ಸಿಹಿತಿಂಡಿಗಳು ಮತ್ತು ಬಟ್ಟೆಗಳಿಗೆ ಹಣ ಖರ್ಚು ಮಾಡುವ ಬದಲು, ಅವರಿಗೆ ಭದ್ರತೆ ನೀಡುವುದು ಉತ್ತಮವಲ್ಲವೇ?? ಈಗ, ಭದ್ರತಾ ಕ್ಯಾಮರಾಗಳ ಬಗ್ಗೆ ಯೋಚಿಸಬೇಡಿ, ನಾವು ಹೇಳುತ್ತಿರುವುದು ಹಣಕಾಸಿನ ಭದ್ರತೆಯ ಬಗ್ಗೆ. ನೀವು ಅದನ್ನು ಹೇಗೆ ಮಾಡಬಹುದು?? ನೀವು ಅನೇಕ ಹಣಕಾಸು ಯೋಜನೆಗಳಿಂದ ಒಂದನ್ನು ಆಯ್ಕೆ ಮಾಡಬಹುದು. ಆದರೆ ದೀರ್ಘಾವಧಿಯಲ್ಲಿ, ಫಿಕ್ಸೆಡ್ ಡೆಪಾಸಿಟ್ ಹೂಡಿಕೆಗಳು ಅಪಾಯ ಮತ್ತು ಆದಾಯದ ನಡುವೆ ಪರಿಪೂರ್ಣ ಬ್ಯಾಲೆನ್ಸ್ ಅನ್ನು ಒದಗಿಸುತ್ತವೆ.
ನೀವು ಮಾಡಬೇಕಾಗಿರುವುದು ಇಷ್ಟೇ, ನಿಮ್ಮ ಪ್ರೀತಿಪಾತ್ರರ ಹೆಸರಿನಲ್ಲಿ ಎಫ್‌ಡಿ ಖರೀದಿಸಿ ಮತ್ತು ಅವರು ಆದಾಯವನ್ನು ಗಳಿಸುತ್ತಾರೆ ಮತ್ತು ಡೆಪಾಸಿಟ್ ಮೆಚ್ಯೂರ್ ಆದಾಗ ಹಣವನ್ನು ಪಡೆಯುತ್ತಾರೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಆದರೆ, ಅದಕ್ಕೂ ಮೊದಲು, ನೀವು ತಿಳಿದಿರಬೇಕಾದ ಕೆಲವು ಸಲಹೆಗಳು ಇಲ್ಲಿವೆ:
ದೀರ್ಘ ಅವಧಿಯು ನಿಮಗೆ ಹೆಚ್ಚಿನ ಬಡ್ಡಿ ದರವನ್ನು ನೀಡುತ್ತದೆ
ಡೆಪಾಸಿಟ್ ಮಾಡಿದ ಮೊತ್ತದಿಂದ ನಿಮ್ಮ ಪ್ರೀತಿಪಾತ್ರರು ಸಾಧ್ಯವಾದಷ್ಟು ಹೆಚ್ಚಿನ ಬಡ್ಡಿಯನ್ನು ಗಳಿಸುತ್ತಾರೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಎಫ್‌ಡಿ ಉಡುಗೊರೆ ನೀಡುವ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಅದಕ್ಕಾಗಿ ನೀವು ಏನು ಮಾಡಬೇಕೆಂದರೆ, ದೀರ್ಘ ಅವಧಿಯನ್ನು ಆಯ್ಕೆ ಮಾಡಬೇಕು! ನೀವೇ ಸ್ವತಃ ವ್ಯತ್ಯಾಸವನ್ನು ಲೆಕ್ಕ ಹಾಕಬಹುದು – ಪಿಎನ್‌ಬಿ ಹೌಸಿಂಗ್ ಹನ್ನೆರಡು ತಿಂಗಳಿಗೆ 8.05%* ಮತ್ತು ಅರವತ್ತು ತಿಂಗಳಿಗೆ 8.45%* ಎಫ್‌ಡಿ ಬಡ್ಡಿ ದರಗಳನ್ನು ಒದಗಿಸುತ್ತದೆ. ಇವುಗಳ ನಡುವೆ ಸುಮಾರು 40 ಬಿಪಿಎಸ್ ವ್ಯತ್ಯಾಸವಿದೆ ಮತ್ತು ಅಂತಿಮಗೊಳಿಸುವ ಮೊದಲು ನೀವು ಅದನ್ನು ಗಣನೆಗೆ ತೆಗೆದುಕೊಳ್ಳಬೇಕು.
ಓದಲೇಬೇಕಾದವು: ಫಿಕ್ಸೆಡ್ ಡೆಪಾಸಿಟ್ ಅಕೌಂಟ್‌ನ ಫೀಚರ್‌ಗಳು ಮತ್ತು ಪ್ರಯೋಜನಗಳು ಯಾವುವು?
ನೀವು ಉಡುಗೊರೆ ಪಡೆಯುವವರ ಅಗತ್ಯಗಳಿಗೆ ಅನುಗುಣವಾಗಿ ಎಫ್‌ಡಿಯನ್ನು ಉಡುಗೊರೆಯಾಗಿ ನೀಡಿ
ಉಡುಗೊರೆ ಪಡೆಯುವವರ ಅಗತ್ಯಗಳನ್ನು ನೀವು ಅರ್ಥಮಾಡಿಕೊಂಡರೆ ಹೊಸ ವರ್ಷದಂದು ಆನಂದವನ್ನು ತರುವುದು ಸುಲಭ! ವ್ಯಕ್ತಿಗೆ ನಿಯಮಿತ ಆದಾಯ ಮೂಲದ ಅಗತ್ಯವಿದೆಯೇ? ಹೌದಾದರೆ, ಒಟ್ಟುಗೂಡಿಸದ ಎಫ್‌ಡಿಯನ್ನು ಆಯ್ಕೆ ಮಾಡಿ, ಇದರಲ್ಲಿ ನೀವು ಡೆಪಾಸಿಟರ್ ಆಗಿ ಹೆಸರಿಸುವ ವ್ಯಕ್ತಿಯು ಮಾಸಿಕ ತ್ರೈಮಾಸಿಕ, ಆರು ಮಾಸಿಕ ಅಥವಾ ವಾರ್ಷಿಕ ಪಾವತಿಗಳನ್ನು ಪಡೆಯಬಹುದು . ನಿಗದಿತ ಆದಾಯ ಮೂಲವು ವರ್ಷದಾದ್ಯಂತ ಉತ್ಸಾಹವನ್ನು ನೀಡುತ್ತದೆ. ಇನ್ನೊಂದು ಆಯ್ಕೆಯು ಒಟ್ಟುಗೂಡಿಸಿದ ಆಯ್ಕೆಯಾಗಿದ್ದು, ಅದರಲ್ಲಿ ಮೊತ್ತವನ್ನು ಒಂದು ಕಾಲಾವಧಿಗೆ ಡೆಪಾಸಿಟ್ ಮಾಡಲಾಗುತ್ತದೆ ಮತ್ತು ಮೆಚ್ಯೂರಿಟಿಯಲ್ಲಿ ಬಡ್ಡಿಯನ್ನು ಗಳಿಸಲಾಗುತ್ತದೆ.
ಆಫರ್‌ನ ನಿಯಮ ಮತ್ತು ಷರತ್ತುಗಳನ್ನು ಅರ್ಥಮಾಡಿಕೊಳ್ಳಿ
ಎಫ್‌ಡಿ ರಚಿಸಲು ಮತ್ತು ಗಿಫ್ಟ್ ಮಾಡಲು ನೀವು ಅನುಸರಿಸಬೇಕಾದ ಕೆಲವು ನಿಯಮ ಮತ್ತು ಷರತ್ತುಗಳನ್ನು ಪಿಎನ್‌ಬಿ ಹೌಸಿಂಗ್ ಹೊಂದಿದೆ. ಉದಾಹರಣೆಗೆ, ನೀವು ಒಟ್ಟುಗೂಡಿಸಿದ ಎಫ್‌ಡಿ ಆಯ್ಕೆ ಮಾಡುತ್ತಿದ್ದರೆ, ಅದಕ್ಕೆ ಫಿಕ್ಸೆಡ್ ಡೆಪಾಸಿಟ್ ಕನಿಷ್ಠ ಮೊತ್ತವಾಗಿ ₹ 10,000 ಅಗತ್ಯವಿರುತ್ತದೆ. ಅಕಾಲಿಕ ವಿತ್‌ಡ್ರಾವಲ್ ಮತ್ತು ಲೋನ್ ಸೌಲಭ್ಯದಂತಹ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಿ, ಇದರಿಂದಾಗಿ ತುರ್ತು ಪರಿಸ್ಥಿತಿಯಲ್ಲಿ ಉಡುಗೊರೆಯನ್ನು ಬಳಸಬಹುದು. ನೀವು ಅನ್ವಯಿಸುವ ಉಡುಗೊರೆ ತೆರಿಗೆಗಳು ಮತ್ತು ಡೆಪಾಸಿಟರ್ ಎಂದು ಹೆಸರಿಸಲು ಉಡುಗೊರೆದಾರರ ಅರ್ಹತೆಯನ್ನು ಸಹ ಪರಿಗಣಿಸಬೇಕಾಗುತ್ತದೆ.
ಹಿರಿಯ ನಾಗರಿಕರಿಗೆ ಎಫ್‌ಡಿ ಉಡುಗೊರೆ ನೀಡಲು ಹೆಚ್ಚು ಯೋಚಿಸಬೇಡಿ
ಹಿರಿಯ ನಾಗರಿಕರ ಪ್ರಮುಖ ಅಗತ್ಯತೆಗಳಲ್ಲಿ ಸ್ಥಿರ ಆದಾಯದ ಮೂಲವೂ ಒಂದಾಗಿದೆ ಮತ್ತು, ಭಾರತದಲ್ಲಿ ಹಿರಿಯ ನಾಗರಿಕರ ಎಫ್‌ಡಿ ಪ್ರಯೋಜನಗಳು ಅನೇಕವಾಗಿವೆ. ಹೆಚ್ಚಿನ ಬಡ್ಡಿ ದರಗಳಿಗೆ ಅರ್ಹರಾಗಿರುವುದರಿಂದ ಮತ್ತು ಆದಾಯದ ಭರವಸೆ ಇರುವುದರಿಂದ ಅವುಗಳು ಉತ್ತಮ ಉಡುಗೊರೆ ಆಯ್ಕೆಯಾಗಿವೆ. ಪಿಎನ್‌ಬಿ ಹೌಸಿಂಗ್ ಹಿರಿಯ ನಾಗರಿಕರಿಗೆ 0.25% ಹೆಚ್ಚಿನ ಎಫ್‌ಡಿ ಬಡ್ಡಿ ದರಗಳನ್ನು ನೀಡುತ್ತದೆ.
ಓದಲೇಬೇಕಾದವು: ಆನ್ಲೈನ್‌ನಲ್ಲಿ ಫಿಕ್ಸೆಡ್ ಡೆಪಾಸಿಟ್ ಅಕೌಂಟ್ ತೆರೆಯುವುದು ಹೇಗೆ?
ಹೂಡಿಕೆ ಮಾಡುವ ಮೊದಲು ಎಲ್ಲಾ ಸಂದೇಹಗಳನ್ನು ಪರಿಹರಿಸಿಕೊಳ್ಳಿ
ಕ್ರಿಸಿಲ್ ರೇಟಿಂಗ್ ನೋಡಲು ಮರೆಯಬೇಡಿ. ಯಾವುದೇ ಸಂದೇಹವಿದ್ದರೆ, ವಿವರಗಳನ್ನು ಅರ್ಥಮಾಡಿಕೊಳ್ಳಲು ನೀವು ಗ್ರಾಹಕ ಸಹಾಯವಾಣಿ ಪ್ರತಿನಿಧಿಗಳಿಗೆ ಕರೆ ಮಾಡಬಹುದು ಅಥವಾ ಹತ್ತಿರದ ಪಿಎನ್‌ಬಿ ಹೌಸಿಂಗ್ ಬ್ರಾಂಚ್ ಗೆ ಭೇಟಿ ನೀಡಬಹುದು. ನಿಮಗೆ ಮತ್ತು ನಿಮ್ಮ ಪ್ರೀತಿ-ಪಾತ್ರರಿಗೆ ಈ ಹೂಡಿಕೆ ಅನುಭವವು ಆನಂದಮಯವಾಗಿರಲು ಎಫ್‌ಡಿ ಆಯ್ಕೆ ಮಾಡುವ ಮೊದಲು ನಿಮ್ಮ ಸಂಶೋಧನೆಯನ್ನು ನೀವು ಮಾಡಿ.
ಫಿಕ್ಸೆಡ್ ಡೆಪಾಸಿಟ್‌ಗಳಲ್ಲಿ ಹೂಡಿಕೆ ಮಾಡುವ ಕುರಿತಾದ ಅಗತ್ಯ ಸಲಹೆಗಳು ಈಗ ನಿಮಗೆ ತಿಳಿದಿದ್ದು, ಮುಂದುವರಿಯಿರಿ ಮತ್ತು ನಿಮ್ಮ ಪ್ರೀತಿಪಾತ್ರರಿಗೆ 2023 ರ ನಂತರವೂ ಉಳಿಯುವ ಹಣಕಾಸಿನ ಸ್ಥಿರತೆಯ ಸಂತೋಷವನ್ನು ನೀಡಿ!