PNB Housing Finance Limited

ಎನ್ಎಸ್ಇ:

ಬಿಎಸ್ಇ:

ಕೊನೆಯ ಅಪ್ಡೇಟ್:

ಕುರಿತು

ಪೆಹೆಲ್ ಫೌಂಡೇಶನ್

ಪಿಎನ್‌ಬಿ ಹೌಸಿಂಗ್ ಫೈನಾನ್ಸ್ ಸೀಮಿತ ಸಮುದಾಯಗಳನ್ನು ತಲುಪುವ ಮತ್ತು ಫಲಾನುಭವಿಗಳಿಗೆ ಗರಿಷ್ಠ ಪರಿಣಾಮ ಬೀರುವ ತಮ್ಮ ಉತ್ತಮ ಮತ್ತು ಬೆಳವಣಿಗೆ ತರುವ ಪರಿಹಾರಗಳನ್ನು ಒದಗಿಸುವ ಪ್ರಾಜೆಕ್ಟ್‌ಗಳನ್ನು ನೀಡುವ ಗುರಿಯನ್ನು ಹೊಂದಿದೆ. ಪೆಹೆಲ್ ಫೌಂಡೇಶನ್, ಪಿಎನ್‌ಬಿ ಹೌಸಿಂಗ್ ಫೈನಾನ್ಸ್‌ನ ಸಿಎಸ್ಆರ್ ಆರ್ಮ್ ಅದೇ ದಿಕ್ಕಿನಲ್ಲಿ ವಿನ್ಯಾಸಗೊಳಿಸಲಾದ ಸಿಎಸ್ಆರ್ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಮತ್ತು ಬಲಪಡಿಸಲು ಮಾಧ್ಯಮವಾಗಿ ಕಾರ್ಯನಿರ್ವಹಿಸುತ್ತದೆ. ಸಮಾಜದ ಅಭಿವೃದ್ಧಿ ಕಾಣದ ವರ್ಗಗಳ ಬೆಳವಣಿಗೆ ಮತ್ತು ಕಲ್ಯಾಣವನ್ನು ಖಚಿತಪಡಿಸಿಕೊಳ್ಳಲು ಇದು ನಮ್ಮ ನಿರಂತರ 'ಪ್ರಯತ್ನ' ಮತ್ತು 'ತೊಡಗುವಿಕೆ'ಯನ್ನು ಸಂಕೇತಿಸುತ್ತದೆ. ಹೆಚ್ಚು ಹೆಚ್ಚಿನ ಜೀವನವನ್ನು ಸುಧಾರಿಸಲು ತಲುಪುವಿಕೆಯನ್ನು ಹೆಚ್ಚಿಸುವುದು ನಮ್ಮ ಸಮಗ್ರ ಗುರಿಯಾಗಿದೆ.

ಹಣಕಾಸು ವರ್ಷ 2019-20 ರಲ್ಲಿ, ಪಿಎನ್‌ಬಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ 'ಪೆಹೆಲ್ ಫೌಂಡೇಶನ್' ಅನ್ನು ಸ್ಥಾಪಿಸಿದೆ’. ಸಿಎಸ್ಆರ್ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಮತ್ತು ಬಲಪಡಿಸಲು ಇದು ಮಾಧ್ಯಮವಾಗಿದೆ. ಸಮಾಜದ ಅಭಿವೃದ್ಧಿ ಕಾಣದ ವರ್ಗಗಳ ಬೆಳವಣಿಗೆ ಮತ್ತು ಕಲ್ಯಾಣವನ್ನು ಖಚಿತಪಡಿಸಿಕೊಳ್ಳಲು ಇದು ನಮ್ಮ ನಿರಂತರ 'ಪ್ರಯತ್ನ' ಮತ್ತು 'ತೊಡಗುವಿಕೆ'ಯನ್ನು ಸಂಕೇತಿಸುತ್ತದೆ. ಹೆಚ್ಚು ಹೆಚ್ಚಿನ ಜೀವನವನ್ನು ಸುಧಾರಿಸಲು ತಲುಪುವಿಕೆಯನ್ನು ಹೆಚ್ಚಿಸುವುದು ನಮ್ಮ ಸಮಗ್ರ ಗುರಿಯಾಗಿದೆ.

ಪಿಎನ್‌ಬಿ ಹೌಸಿಂಗ್

ಸಿಎಸ್ಆರ್ ಮಧ್ಯಸ್ಥಿಕೆಗಳು

  • 3.5 ಲಕ್ಷಕ್ಕೂ ಹೆಚ್ಚು ಜನರು ಪ್ರಾಜೆಕ್ಟ್‌ಗಳಿಂದ ಪ್ರಯೋಜನ ಪಡೆದರು, ಅದರಲ್ಲಿ 55,898 ಜೀವನವು ವಿವಿಧ ಮಧ್ಯಸ್ಥಿಕೆಗಳ ಮೂಲಕ ನೇರವಾಗಿ ಮುಟ್ಟಿತು.

  • 6. ಉತ್ತಮ ಸೌಲಭ್ಯಗಳಿಂದ ಹಿಡಿದು ಸುಧಾರಿತ ಪ್ರಯೋಗಾಲಯಗಳು ಮತ್ತು ಸಲಕರಣೆಗಳವರೆಗೆ ಉತ್ತಮ ಮೂಲಸೌಕರ್ಯದೊಂದಿಗೆ ಆರೋಗ್ಯ ಕೇಂದ್ರಗಳು ಮತ್ತು 2 ಸರ್ಕಾರಿ ಆಸ್ಪತ್ರೆಗಳನ್ನು ನವೀಕರಿಸಲಾಯಿತು.

  • 250 ಕಿವುಡ ಮಕ್ಕಳಿಗೆ ಅವರು ಕೇಳಲು ಸಾಧ್ಯವಾಗುವ ಸಹಾಯದಂತಿರುವ ಶ್ರವಣ ಸಾಧನಗಳನ್ನು ನೀಡಿ ಬೆಂಬಲಿಸಲಾಯಿತು.

  • ಇ-ಲರ್ನಿಂಗ್ ಸೆಟಪ್‌ನಂತಹ ಸುಧಾರಿತ ಮೂಲಸೌಕರ್ಯದೊಂದಿಗೆ 73 ಶಾಲೆಗಳನ್ನು ಬೆಂಬಲಿಸಲಾಗಿದೆ

  • ಮಸಾಲೆ ಸಂಸ್ಕರಣಾ ಘಟಕಗಳು, ಸ್ಯಾನಿಟರಿ ನ್ಯಾಪ್‌ಕಿನ್ ಉತ್ಪಾದನಾ ಘಟಕ ಮತ್ತು ರಗ್‌ಗಳ ತಯಾರಿಕೆಯಂತಹ 7 ಮಹಿಳೆಯರು ನಡೆಸಬಲ್ಲ ಬಿಸಿನೆಸ್‌ಗಳನ್ನು ಸ್ಥಾಪಿಸಲಾಗಿದೆ.

  • ಮಧ್ಯಪ್ರದೇಶದ ಹಳ್ಳಿಗಳಲ್ಲಿ ನಿರ್ಮಿಸಲಾದ ಹೊಂಡಗಳಿಂದ ವಾರ್ಷಿಕವಾಗಿ 2 ಮಿಲಿಯನ್ ಲೀಟರ್ ನೀರು ಕೊಯ್ಲು ನಿರೀಕ್ಷಿಸಲಾಗಿದೆ.

ಮಹಿಳಾ ಸಬಲೀಕರಣದಲ್ಲಿ, ಕಡೆಗಣನೆಯಾಗಿರುವ ಸಮುದಾಯಕ್ಕೆ ಸೇರಿದ ಮಹಿಳೆಯರ ಒಟ್ಟಾರೆ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಸಾಧಿಸಲು ನಾವು ದೃಷ್ಟಿ ಹರಿಸುತ್ತೇವೆ. ನಾವು ಮಹಿಳೆಯರ ವರ್ಧಿತ ಆದಾಯ ಮಟ್ಟವನ್ನು ಸಾಧಿಸುವ ಗುರಿಯನ್ನು ಹೊಂದಿದ್ದೇವೆ, ಆರ್ಥಿಕ ಸ್ವಾತಂತ್ರ್ಯ ಮತ್ತು ಆತ್ಮವಿಶ್ವಾಸವನ್ನು ತುಂಬುವುದು ಮತ್ತು ಮಹಿಳೆಯರ ಆರೋಗ್ಯ ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿರುವ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸುವುದು.
 

ಬೆಂಬಲಿತ/ಆರಂಭಿಸಲಾದ ಮಹಿಳಾ ಸಬಲೀಕರಣ ಯೋಜನೆಗಳು ಈ ಕೆಳಗಿನಂತಿವೆ:
 

  1. ಎ. ಕಳೆದ ಹಣಕಾಸು ವರ್ಷದಲ್ಲಿ ಎರಡು ನ್ಯಾಪ್‌ಕಿನ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲಾಯಿತು. ಒಂದು ಲಕ್ನೋದಲ್ಲಿದೆ ಮತ್ತು ಇನ್ನೊಂದು ಗುಜರಾತ್‌ನ ವಲ್ಸಾಡ್‌ನಲ್ಲಿದೆ. ಹತ್ತಿರದ ಹಳ್ಳಿಗಳ 64 ಮಹಿಳೆಯರು ಸದ್ಯಕ್ಕೆ ನ್ಯಾಪ್‌ಕಿನ್‌ಗಳ ಉತ್ಪಾದನೆ, ಪ್ಯಾಕೇಜಿಂಗ್ ಮತ್ತು ಮಾರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಋತುಸ್ರಾವದ ಸ್ವಚ್ಛತೆಯ ಬಗ್ಗೆ ಜಾಗೃತಿ ಇಲ್ಲದ ಕಾರಣದಿಂದಾಗಿ ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ಇತರ ಗ್ರಾಮೀಣ ಮಹಿಳೆಯರಿಗೆ ತಮ್ಮ ಹಳ್ಳಿಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲು ಮಹಿಳೆಯರು ತೊಡಗಿಸಿಕೊಂಡಿದ್ದಾರೆ. 200 ಹಳ್ಳಿಗಳಲ್ಲಿ ಗ್ರಾಮೀಣ ಮಹಿಳೆಯರನ್ನು ತಲುಪುವುದು ಇದರ ಗುರಿಯಾಗಿದೆ.
  2.  
  3. ಬಿ. ಮಸಾಲೆ ಮತ್ತು ಉಪ್ಪಿನ ಉತ್ಪಾದನೆಯ ಮೂರು ಘಟಕಗಳನ್ನು ಸ್ಥಾಪಿಸಲಾಗಿದ್ದು, ಉತ್ಪಾದನೆ, ಪ್ಯಾಕೇಜಿಂಗ್ ಮತ್ತು ಮಾರಾಟದಲ್ಲಿ 115 ಗ್ರಾಮೀಣ ಮಹಿಳೆಯರು ತೊಡಗಿಸಿಕೊಂಡಿದ್ದಾರೆ. ಘಟಕವನ್ನು ನಡೆಸುತ್ತಿರುವ ಎಲ್ಲಾ ಮಹಿಳೆಯರನ್ನು ಸ್ವ ಸಹಾಯ ಸಂಘವಾಗಿ ಆಯೋಜಿಸಲಾಗಿದೆ. ಅವರು ಗಳಿಸಿದ ಲಾಭಗಳನ್ನು ಬಿಸಿನೆಸ್ ಅನ್ನು ಬೆಳೆಸಲು ಮತ್ತು ಸದಸ್ಯರ ನಡುವೆ ವಿತರಿಸಲು ಬಳಸಲಾಗುತ್ತದೆ.
  4.  
  5. ಸಿ. 'ಜೀವನ ಮಟ್ಟ ಸುಧಾರಣೆಯನ್ನು' ಖಚಿತಪಡಿಸಿಕೊಳ್ಳುವ ಗುರಿಯೊಂದಿಗೆ, ಕೋವಿಡ್ ಕಾರಣದಿಂದಾಗಿ ತೊಂದರೆಗೆ ಒಳಗಾದ ವಲಸಿಗ ಜನಸಂಖ್ಯೆಗೆ ಪ್ರಯೋಜನ ನೀಡುವ ಗುರಿ ಹೊಂದಿರುವ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ. ಈ ಯೋಜನೆಯಲ್ಲಿ ನಿರ್ಮಾಣ ಕೆಲಸದಲ್ಲಿ ತೊಡಗಿಕೊಳ್ಳುವ 150 ಮಹಿಳೆಯರಿಗೆ ತರಬೇತಿ ನೀಡಲಾಯಿತು ಮತ್ತು ಅವರನ್ನು ಫ್ಯಾಷನ್ ಉದ್ಯಮದಲ್ಲಿ ಸೇರಿಸಲಾಯಿತು. ಈ ಸುಧಾರಿತ ತರಬೇತಿಯಲ್ಲಿ ವಿಶೇಷ ಹೊಲಿಗೆ ಯಂತ್ರಗಳನ್ನು ಜಪಾನ್‌ನಿಂದ ಆಮದು ಮಾಡಿಕೊಳ್ಳಲಾಗಿದ್ದು, ಅದನ್ನು ಬಳಸಿ ಮಹಿಳೆಯರು ಹೊಲಿಗೆ ಕಲಿತರು ಮತ್ತು ಫ್ಯಾಷನ್ ಕ್ಷೇತ್ರದಲ್ಲಿ ಕೆಲಸ ಪಡೆದರು. ಆ ಮಹಿಳೆಯರು ತಿಂಗಳಿಗೆ ಸರಾಸರಿ ₹10,000 ಗಳಿಸುತ್ತಿದ್ದಾರೆ.
  6.  
  7. ಡಿ. 4 ವಿವಿಧ ವೃತ್ತಿಗಳಲ್ಲಿ 420 ಶ್ರವಣ ದೋಷವುಳ್ಳ ಮಹಿಳೆಯರಿಗೆ ಕೌಶಲ್ಯ ಅಭಿವೃದ್ಧಿ ಯೋಜನೆಯನ್ನು ಯೋಜಿಸಲಾಗಿದೆ. ಆ ವೃತ್ತಿಗಳು- ಮಿಕ್ಸರ್ ಗ್ರೈಂಡರ್ ರಿಪೇರಿ, ಎಲ್‌ಇಡಿ ರಿಪೇರಿ, ಮೊಬೈಲ್ ರಿಪೇರಿ ಮತ್ತು ಎಲೆಕ್ಟ್ರಿಕಲ್ ಕೆಲಸಗಳಾಗಿವೆ. ತರಬೇತಿ ಪಡೆದ ನಂತರ ಈ ಮಹಿಳೆಯರು ಆಯಾ ವೃತ್ತಿಗಳಲ್ಲಿ ಕೌಶಲ್ಯ ಹೊಂದುತ್ತಾರೆ ಹಾಗೂ ಇದು ಅವರಿಗೆ ಆರ್ಥಿಕ ಸ್ವಾತಂತ್ರ್ಯ ಗಳಿಸಲು ಅನುವು ಮಾಡಿಕೊಡುತ್ತದೆ.
  8.  
  9. ಇ. ಒಡಿಶಾದ ಭುವನೇಶ್ವರದ ಎಲ್‌ವಿ ಪ್ರಸಾದ್ ಕಣ್ಣಿನ ಆಸ್ಪತ್ರೆಯಲ್ಲಿ ಮಹಿಳಾ ಸಿಬ್ಬಂದಿಯ ಮಕ್ಕಳನ್ನು (10 ವರ್ಷದವರೆಗೆ) ನೋಡಿಕೊಳ್ಳಲು ಒಂದು ಶಿಶುವಿಹಾರವನ್ನು ನಿರ್ಮಿಸಲಾಗಿದೆ. ಈ ಉಪಕ್ರಮದಿಂದಾಗಿ, ಕೆಲಸ ಮತ್ತು ಕುಟುಂಬದ ನಡುವೆ ಆಯ್ಕೆ ಮಾಡುವ ಸಂಘರ್ಷವನ್ನು ಎದುರಿಸದೆ ತಮ್ಮ ಉದ್ಯೋಗವನ್ನು ಮುಂದುವರಿಸಲು ಮಹಿಳೆಯರು ಸಬಲರಾಗಿದ್ದಾರೆ. ಈ ಉಪಕ್ರಮದ ನಂತರ, ಕೆಲವು ಮಹಿಳಾ ಉದ್ಯೋಗಿಗಳು ಈ ಮೊದಲು ತೊರೆದ ಕೆಲಸಕ್ಕೆ ಮರಳಿ ಬರಲು ಮುಂದಾಗಿದ್ದಾರೆ.
  10.  
  11. ಎಫ್. ರಾಜಸ್ಥಾನದ 7 ಗ್ರಾಮೀಣ ಕೇಂದ್ರಗಳಲ್ಲಿ 120 ಗ್ರಾಮೀಣ ಮಹಿಳೆಯರಿಗೆ ಕೌಶಲ್ಯ ಅಭಿವೃದ್ಧಿ ಯೋಜನೆಯನ್ನು ಕಾರ್ಯಗತಗೊಳಿಸಲಾಗಿದೆ. ಅವರು 6 ತಿಂಗಳ ತರಬೇತಿ ಪಡೆದರು ಹಾಗೂ ಆನಂತರ ಅವರು ಈ ಯೋಜನೆಯ ಮೂಲಕ ತಮಗೆ ಒದಗಿಸಲಾದ ಮಗ್ಗಗಳ ಕೆಲಸದಲ್ಲಿ ತೊಡಗಿದರು. ಅವರು ಕಾರ್ಪೆಟ್‌ಗಳನ್ನು ತಯಾರಿಸಿ ಮಾರಾಟ ಮಾಡಿದರು ಮತ್ತು ಪ್ರಸ್ತುತ ಕಾರ್ಪೆಟ್ ತಯಾರಿಕೆ ವಲಯದಲ್ಲಿ ಉತ್ತಮ ಲಾಭವನ್ನು ಗಳಿಸುತ್ತಿದ್ದಾರೆ.

ಆರೋಗ್ಯ, ಮತ್ತೊಂದು ಪ್ರಮುಖ ವಿಷಯವಾಗಿದ್ದು, ಉತ್ತಮ ಆರೋಗ್ಯ ಸೇವೆಗಳು, ಸುಧಾರಿತ ಆರೋಗ್ಯ ಮೂಲಸೌಕರ್ಯ ಮತ್ತು ವಂಚಿತ ಸಮುದಾಯಕ್ಕೆ ಆರೋಗ್ಯ ಸೇವೆಗಳ ಉತ್ತಮ ತಲುಪುವಿಕೆಯನ್ನು ಭರವಸೆ ನೀಡುವ ಯೋಜನೆಗಳನ್ನು ವಿನ್ಯಾಸಗೊಳಿಸಲು ನಾವು ಪ್ರಯತ್ನಿಸುತ್ತೇವೆ.
 

ಬೆಂಬಲಿತ/ಆರಂಭಿಸಲಾದ ಸಿಎಸ್ಆರ್ ಯೋಜನೆಗಳು ಈ ಕೆಳಗಿನಂತಿವೆ:
 

  1. ಎ. 6 ಪಿಎಚ್‌ಸಿ (ಪ್ರಾಥಮಿಕ ಆರೋಗ್ಯ ಕೇಂದ್ರ)/ಸಿಎಚ್‌ಸಿ (ಸಮುದಾಯ ಆರೋಗ್ಯ ಕೇಂದ್ರ) ಬೆಂಬಲಿತವಾಗಿದ್ದು, ಇಲ್ಲಿ ಮೂಲಸೌಕರ್ಯವನ್ನು ಸಂಪೂರ್ಣವಾಗಿ ಉತ್ತಮ ಮಾನದಂಡಗಳಾಗಿ ಪರಿವರ್ತಿಸಲಾಗಿದೆ. ಇವುಗಳಲ್ಲಿ ಕೆಲವು ಕೇಂದ್ರಗಳಲ್ಲಿ ಸುಧಾರಿತ ಪ್ರಯೋಗಾಲಯಗಳು ಮತ್ತು ಪರೀಕ್ಷಾ ಯಂತ್ರಗಳಂತಹ ಹಲವಾರು ವೈದ್ಯಕೀಯ ಮತ್ತು ಲ್ಯಾಬ್ ಸಲಕರಣೆಗಳನ್ನು ಸ್ಥಾಪಿಸಲಾಗಿದೆ.
  2.  
  3. ಬಿ. ಮೂಲಸೌಕರ್ಯ ನವೀಕರಣದೊಂದಿಗೆ ಹಲವಾರು ವೈದ್ಯಕೀಯ ಮತ್ತು ಲ್ಯಾಬ್ ಸಲಕರಣೆಗಳೊಂದಿಗೆ 2 ಸರ್ಕಾರಿ ಆಸ್ಪತ್ರೆಗಳನ್ನು ಬೆಂಬಲಿಸಲಾಯಿತು. ಅವುಗಳಲ್ಲಿ ಒಂದಾದ (ಸಸೂನ್ ಜನರಲ್ ಆಸ್ಪತ್ರೆ, ಪುಣೆ) ಇದು 4000 ಒಪಿಡಿ ರೋಗಿಗಳು ಮತ್ತು 1500 ಒಳಾಂಗಣ ರೋಗಿಗಳ ಅಡಿಪಾಯವನ್ನು ಹೊಂದಿದ್ದು, ಮೂಲಸೌಕರ್ಯ ಮೇಲ್ದರ್ಜೆಗೇರಿಸುವಿಕೆ ಮತ್ತು ಸುಧಾರಿತ ಪ್ರಯೋಗಾಲಯ ಸ್ಥಾಪನೆಯೊಂದಿಗೆ ತುಂಬಾ ದೊಡ್ಡ ಪ್ರಮಾಣದಲ್ಲಿ ಬೆಂಬಲಿತವಾಗಿದೆ, ಇದು ದೈನಂದಿನ 500 ಲ್ಯಾಬ್ ಪರೀಕ್ಷೆಗಳನ್ನು ಖಚಿತಪಡಿಸುತ್ತದೆ.
  4.  
  5. ಸಿ. ಕೆಲಸಗಾರರ ಜನಸಂಖ್ಯೆಯನ್ನು ಪೂರೈಸಲು 4 ಸ್ಥಳಗಳಲ್ಲಿ (ದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ಚೆನ್ನೈ) 4 ಮೊಬೈಲ್ ಮೆಡಿಕಲ್ ಕ್ಲಿನಿಕ್‌ಗಳನ್ನು ಪ್ಲಾನ್ ಮಾಡಲಾಗಿದೆ. ಸಾಮಾನ್ಯ ಆರೋಗ್ಯ ಕೇಂದ್ರಗಳಿಗೆ ಪ್ರವೇಶಿಸಲು ಸಾಧ್ಯವಾಗದ ಕಟ್ಟಡ ಕಾರ್ಮಿಕರಿಗೆ ಸೈಟ್‌ಗಳಲ್ಲಿಯೇ ಆರೋಗ್ಯ ಸೇವೆಗಳನ್ನು ಉಚಿತವಾಗಿ ನೀಡಲು ಈ ಸಂಚಾರಿ ಚಿಕಿತ್ಸಾಲಯಗಳು ಸ್ಲಂ ವಾಸಸ್ಥಳಗಳು ಮತ್ತು ನಿರ್ಮಾಣ ಸ್ಥಳಗಳ ಸುತ್ತಮುತ್ತಲಿನ ಪ್ರದೇಶಗಳಿಗೆ ತಲುಪುತ್ತವೆ.
  6.  
  7. ಡಿ. ರೋಗಿಗಳನ್ನು ಹತ್ತಿರದ ಆರೋಗ್ಯ ಕೇಂದ್ರಗಳಿಗೆ ತಲುಪಿಸಲು 2 ರೋಗಿಗಳ ಸಾರಿಗೆ ಬಸ್‌ಗಳನ್ನು ಯೋಜಿಸಲಾಗಿದೆ. ಗ್ರಾಮೀಣ ಒಳಗಿನ ಹಳ್ಳಿಗಳಲ್ಲಿ ವಾಸಿಸುವ ಮತ್ತು ಆರೋಗ್ಯ ಕೇಂದ್ರಗಳಿಗೆ ಅನುಕೂಲಕರ ಪ್ರವೇಶವನ್ನು ಹೊಂದಿರದ ಈ ರೋಗಿಗಳು ಈಗ ಈ ಸಾರಿಗೆಯ ಮೂಲಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಬಹುದು.
  8.  
  9. ಇ. 250 ಶ್ರವಣ ಸಾಧನಗಳನ್ನು ಶ್ರವಣ ದೋಷವಿರುವ ಮಕ್ಕಳಿಗೆ ವಿತರಿಸಲಾಯಿತು. ಈ ಶ್ರವಣ ಸಾಧನಗಳು ಈ ಮಕ್ಕಳಿಗೆ ಆಶೀರ್ವಾದದಂತೆ ದೊರಕಿವೆ. ಶ್ರವಣ ಸಹಾಯಗಳನ್ನು ಬಳಸಿದ ನಂತರ ಅವರಿಗೆ ಮಾತಿನ ಮೂಲಕ ತರಬೇತಿ ನೀಡಬಹುದು ಮತ್ತು ಅವರು ಮಾತನಾಡಲು ಆರಂಭಿಸಿದ್ದಾರೆ.

ಶಿಕ್ಷಣದಲ್ಲಿ ಸುಧಾರಿತ ಕಲಿಕಾ ತಂತ್ರಜ್ಞಾನ, ಉತ್ತಮ ಮೂಲಸೌಕರ್ಯ, ಸ್ಕಾಲರ್‌ಶಿಪ್ ಮತ್ತು ಕಲಿಕಾ ನೆರವು ಸೇರಿದಂತೆ ಮಧ್ಯಸ್ಥಿಕೆಗಳ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮ ಕಲಿಕೆಯ ಪ್ರಯಾಣ ಮತ್ತು ಭವಿಷ್ಯವನ್ನು ನೀಡುವ ಭರವಸೆ ನೀಡುವ ಪ್ರಾಜೆಕ್ಟ್‌ಗಳನ್ನು ನಾವು ಆಯ್ದುಕೊಳ್ಳುತ್ತೇವೆ.
 

ಬೆಂಬಲಿತ/ಆರಂಭಿಸಲಾದ ಪ್ರಾಜೆಕ್ಟ್‌ಗಳು ಈ ಕೆಳಗಿನಂತಿವೆ:
 

  1. ಎ. 4 ಸರ್ಕಾರಿ ಅಂಗನವಾಡಿಗಳನ್ನು ಉತ್ತಮ ಮೂಲಸೌಕರ್ಯ, ಶೈಕ್ಷಣಿಕ ಸಾಮಗ್ರಿಗಳು, ಆಟದ ಪ್ರದೇಶ ಮತ್ತು ಆಟಿಕೆಗಳೊಂದಿಗೆ ಅಪ್ಗ್ರೇಡ್ ಮಾಡಲಾಗಿದೆ. ಇದೇ ರೀತಿಯ ಕೆಲಸವು ಇನ್ನೊಂದು ಐದು ಅಂಗನವಾಡಿಯಲ್ಲಿ ಪ್ರಗತಿಯಲ್ಲಿದೆ. ಎಲ್ಲಾ ಅಪ್ಗ್ರೇಡೇಶನ್ ಚಟುವಟಿಕೆಗಳು ದೈನಂದಿನ ಆಧಾರದ ಮೇಲೆ ಅಂಗನವಾಡಿಗಳಿಗೆ ಬರಲು ಹೆಚ್ಚು ಮಕ್ಕಳನ್ನು ಪ್ರೋತ್ಸಾಹಿಸಿವೆ.
  2.  
  3. ಬಿ. ಮೂಲಸೌಕರ್ಯ ಅಭಿವೃದ್ಧಿ, ಕಲಿಕಾ ಸಾಧನಗಳು ಮತ್ತು ವಿದ್ಯಾರ್ಥಿಗಳಿಗೆ ತಿಳಿವಳಿಕೆ ನೀಡುವ ವಾಲ್ ಆರ್ಟ್‌ನೊಂದಿಗೆ 2 ಶಾಲೆಗಳಲ್ಲಿ ಶಾಲಾ ರೂಪಾಂತರವನ್ನು ಮಾಡಲಾಗಿದೆ. ನವೀನ ಆಟದ ಪ್ರದೇಶ, 'ಸ್ವಚ್ಛತಾ ವಾಹಿನಿ' ಎಂದು ಹೆಸರಿಸಲಾದ ನೈರ್ಮಲ್ಯ ಶೌಚಾಲಯಗಳನ್ನು ಬಸ್‌ನ ಆಕಾರದಲ್ಲಿ ನಿರ್ಮಿಸಲಾಗಿದೆ ಮತ್ತು ವಿಶೇಷವಾದ ಊಟದ ಪ್ರದೇಶವು ಈ ಸರ್ಕಾರಿ ಶಾಲೆಗಳನ್ನು ಪ್ರದೇಶದಲ್ಲಿ ಎದ್ದು ಕಾಣುವಂತೆ ಮಾಡುವ ವಿಶಿಷ್ಟ ಲಕ್ಷಣಗಳಾಗಿವೆ ಮತ್ತು ಹತ್ತಿರದ ಹಳ್ಳಿಗಳಿಂದ ಹೆಚ್ಚಿನ ಪ್ರವೇಶಗಳನ್ನು ಆಕರ್ಷಿಸುತ್ತವೆ.
  4.  
  5. ಸಿ. ವಿದ್ಯುತ್ ಸಂಪರ್ಕವು ತಲುಪಿದ ಆದರೆ ಲೋಡ್ ಶೆಡ್ಡಿಂಗ್ ದೊಡ್ಡ ಸವಾಲಾಗಿರುವ ಗ್ರಾಮೀಣ ಹಳ್ಳಿಗಳಲ್ಲಿ 23 ಸರ್ಕಾರಿ ಶಾಲೆಗಳಲ್ಲಿ ಸೌರ ಪ್ಯಾನೆಲ್‌ಗಳನ್ನು ಸ್ಥಾಪಿಸಲಾಗಿದೆ. ವಿಶೇಷವಾಗಿ ಬೇಸಿಗೆ ಕಾಲದಲ್ಲಿ ದಿನದ ಸಮಯದಲ್ಲಿ ಕರೆಂಟ್ ಇಲ್ಲದಿದ್ದಾಗ, ಲೋಡ್ ಶೆಡ್ಡಿಂಗ್ ಕಾರಣದಿಂದಾಗಿ ವಿದ್ಯಾರ್ಥಿಗಳಿಗೆ ಅನಾನುಕೂಲತೆಯಿಂದಾಗಿ ಉಂಟಾಗುವ ಗೈರು ಹಾಜರಿಯನ್ನು ಈ ಮಧ್ಯಸ್ಥಿಕೆಯು ಕಡಿಮೆ ಮಾಡುತ್ತದೆ.
  6.  
  7. ಡಿ. ಇ-ಲರ್ನಿಂಗ್ ಮೂಲಸೌಕರ್ಯವನ್ನು 47 ಸರ್ಕಾರಿ ಶಾಲೆಗಳಲ್ಲಿ ಸ್ಥಾಪಿಸಲಾಗಿದೆ, ಅಲ್ಲಿ ವಿದ್ಯಾರ್ಥಿಗಳು ಕಲಿಕೆಗಾಗಿ ಆಡಿಯೋ-ವಿಶ್ಯುಯಲ್ ಸಹಾಯಗಳಿಗೆ ಅಕ್ಸೆಸ್ ಹೊಂದಿರುತ್ತಾರೆ. 4500 ವಿದ್ಯಾರ್ಥಿಗಳು ತಮ್ಮ ಕಲಿಕೆಯ ಸೂಚಕ ರೇಖೆಗಳನ್ನು ಮೇಲಕ್ಕೇರಿಸಲು ಸ್ಥಾಪಿಸಲಾದ ಇ-ಲರ್ನಿಂಗ್ ಮೂಲಸೌಕರ್ಯದ ಮೂಲಕ ಪ್ರತಿದಿನ ಆನ್‌ಲೈನ್ ಸಂವಾದಾತ್ಮಕ ತರಗತಿಗಳಿಗೆ ಪ್ರವೇಶವನ್ನು ಹೊಂದಿರುತ್ತಾರೆ.
  8.  
  9. ಇ. ಸಮಾಜದ ಎಲ್ಲಾ ವರ್ಗಗಳ ಹಿಂದುಳಿದ ವಿದ್ಯಾರ್ಥಿಗಳನ್ನು ಅವರ ಅಧ್ಯಯನವನ್ನು ಪೂರ್ಣಗೊಳಿಸಲು ಬೆಂಬಲಿಸಲು ಮತ್ತು ಪ್ರೇರೇಪಿಸಲು ಅವರನ್ನು ತಲುಪಲು ವಿದ್ಯಾರ್ಥಿವೇತನ ಪ್ರಾಜೆಕ್ಟ್ ಅನ್ನು ಪ್ರಾರಂಭಿಸಲಾಗಿದೆ. ಈ ವಿದ್ಯಾರ್ಥಿವೇತನವನ್ನು ಭಾರತದಾದ್ಯಂತ 400 ವಿದ್ಯಾರ್ಥಿಗಳಿಗೆ ನೀಡಲಾಗುವುದು.
  10.  
  11. ಎಫ್. ಜಾರ್ಖಂಡ್‌ನ ಗ್ರಾಮೀಣ ಸ್ಥಳಗಳಲ್ಲಿ ಹಲವಾರು ಬುಡಕಟ್ಟು ಹಳ್ಳಿಗಳಿಂದ ಹತ್ತಿರದ ಶಾಲೆಗೆ ವಿದ್ಯಾರ್ಥಿಗಳ ಸಾರಿಗೆಗೆ 1 ಶಾಲಾ ಬಸ್‌ನ ಬೆಂಬಲ ನೀಡಲಾಗಿದೆ. ಕುಟುಂಬದ ಕಳಪೆ ಆದಾಯ ಮತ್ತು ಹೆಚ್ಚಾಗಿ ಒಳ ಪ್ರದೇಶಗಳಿಂದ ಬರುವುದರಿಂದ ಬುಡಕಟ್ಟು ಶಾಲಾ ಮಕ್ಕಳಿಗೆ ಶಾಲೆಗೆ ಸಾರಿಗೆ ಸೌಲಭ್ಯವಿಲ್ಲ. ಶಾಲಾ ಬಸ್‌ನ ಸೌಲಭ್ಯವು ಅವರಿಗೆ ಶಾಲೆಗೆ ಹಾಜರಾಗಲು ಹಿಂಜರಿಕೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ ಮತ್ತು ಅವರಿಗೆ ಸಮಾನ ಶೈಕ್ಷಣಿಕ ಅವಕಾಶಗಳಿಗೆ ಪ್ರವೇಶವನ್ನು ನೀಡುತ್ತದೆ.
  12.  
  13. ಜಿ. ಸ್ಟೆಮ್ (ಸೈನ್ಸ್, ಟೆಕ್ನಾಲಜಿ ಎಂಜಿನಿಯರಿಂಗ್, ಗಣಿತ) ಕಲಿಕೆಯನ್ನು 20 ಶಾಲೆಗಳಲ್ಲಿ ಬೆಂಬಲಿಸಬೇಕು. ಈ ಪ್ರಾಜೆಕ್ಟ್ ವಿವಿಧ ಪ್ರಾಯೋಗಿಕ ಚಟುವಟಿಕೆಗಳು, ಕಾರ್ಯಾಗಾರಗಳು, ಅನುಭವಕ್ಕೆ ಬರುವ ಅಭ್ಯಾಸ ಮತ್ತು ವಿದ್ಯಾರ್ಥಿಗಳಿಗೆ ವಿವಿಧ ಪರಿಕಲ್ಪನೆಗಳು ಮತ್ತು ಕೌಶಲ್ಯಗಳನ್ನು ಕಲಿಯಲು ಸಹಾಯ ಮಾಡುವ ಅನುಭವದ ಮೋಜಿನ ಕಲಿಕೆಯನ್ನು ನಡೆಸುವ ಮೂಲಕ ಗುಣಮಟ್ಟದ ಎಸ್‌ಟಿಇಎಂ ಶಿಕ್ಷಣವನ್ನು ನೀಡುತ್ತದೆ. ಇದು ಕಂಪ್ಯೂಟೇಶನಲ್ ಥಿಂಕಿಂಗ್, ಸಮಸ್ಯೆ-ಪರಿಹರಿಸುವ ಕೌಶಲ್ಯಗಳು, ಸೃಜನಶೀಲ ಚಿಂತನೆ, ತಾರ್ಕಿಕ ಕಾರಣ, ಉತ್ತಮ ನಿರ್ಧಾರ ತೆಗೆದುಕೊಳ್ಳುವಿಕೆ ಮತ್ತು ಉತ್ತಮ ಪರಿಶೀಲನಾ ಶಕ್ತಿಯಂತಹ ನವೀನ ಕೌಶಲ್ಯಗಳನ್ನು ವೃದ್ಧಿಸುತ್ತದೆ.

ಪರಿಸರವನ್ನು ಪುನರುಜ್ಜೀವನಗೊಳಿಸಲು ಮತ್ತು ನಮ್ಮ ಸಮಾಜಕ್ಕೆ ಮರಳಿ ನೀಡಲು, ತ್ಯಾಜ್ಯದಿಂದಾಗಿ ಉಂಟಾಗುವ ಮಾಲಿನ್ಯವನ್ನು ಕಡಿಮೆ ಮಾಡುವ ಮತ್ತು ಫಲಾನುಭವಿಗಳಿಗೆ ಶುದ್ಧ ನೀರನ್ನು ಒದಗಿಸುವ ಮರುಪೂರಣ, ಮರುಬಳಕೆ ಮತ್ತು ನೈಸರ್ಗಿಕ ಸಂಪನ್ಮೂಲ ನಿರ್ವಹಣೆಯ ಕ್ಷೇತ್ರದಲ್ಲಿ ಕೆಲಸ ಮಾಡುವ ಜವಾಬ್ದಾರಿಯನ್ನು ನಾವು ಕೈಗೊಂಡಿದ್ದೇವೆ.
 

ಬೆಂಬಲಿತ/ಆರಂಭಿಸಲಾದ ಪ್ರಾಜೆಕ್ಟ್‌ಗಳು ಈ ಕೆಳಗಿನಂತಿವೆ:
 

  1. ಎ. ವಾರ್ಷಿಕವಾಗಿ 27.22 ಮಿಲಿಯನ್ ಲೀಟರ್ ನೀರನ್ನು ಸಂಗ್ರಹಿಸುವ ಸಾಮರ್ಥ್ಯ ಹೊಂದಿರುವ 1606 ಗ್ರಾಮವಾಸಿಗಳಿಗಾಗಿ ಎರಡು ಕೊಳಗಳನ್ನು ಮೊದಲಿನಿಂದ ಅಭಿವೃದ್ಧಿಪಡಿಸಲಾಗಿದೆ. ಇದು ಅವರಿಗೆ ಕೃಷಿ, ತೋಟಗಾರಿಕೆ ಮತ್ತು ಪ್ರಾಣಿಗಳಿಗೆ ನೀರಿನ ಸೌಕರ್ಯವನ್ನು ಒದಗಿಸುವ ಮೂಲಕ, ಹಳ್ಳಿಗಳ ಆದಾಯ ಹೆಚ್ಚಳಕ್ಕೆ ಕಾರಣವಾಗುತ್ತದೆ.
  2.  
  3. ಬಿ. ರಾಜಸ್ಥಾನದ ಎರಡು ಹಳ್ಳಿಗಳಲ್ಲಿ, ಗೌಲಾ ಮತ್ತು ಮಾಲ್ಕಿ ಟೂಸ್‌ನಲ್ಲಿ ಶುದ್ಧ ಕುಡಿಯುವ ನೀರು ಸರಬರಾಜು ವ್ಯವಸ್ಥೆಯನ್ನು ಮಾಡಲಾಗಿದೆ. ಈ 2 ಹಳ್ಳಿಗಳಲ್ಲಿ 944 ಮಂದಿ ತಮ್ಮ ಜೀವನದಲ್ಲಿ ಮೊದಲ ಬಾರಿಗೆ ನೇರ ನೀರಿನ ಪೈಪ್‌ಲೈನ್ ಸಂಪರ್ಕವನ್ನು ಪಡೆಯುತ್ತಿದ್ದಾರೆ. ಈ ಯೋಜನೆಯಲ್ಲಿ ಸೋಲಾರ್ ವಾಟರ್ ಲಿಫ್ಟಿಂಗ್ ವ್ಯವಸ್ಥೆಯೊಂದಿಗೆ ಓವರ್‌ಹೆಡ್ ಟ್ಯಾಂಕ್ ನಿರ್ಮಿಸಲಾಗಿದೆ ಮತ್ತು ಈ ವ್ಯವಸ್ಥೆಯ ಸುಸ್ಥಿರ ಕಾರ್ಯ ನಿರ್ವಹಣೆಗಾಗಿ ಜಲ ಸಮಿತಿಯನ್ನು ರಚಿಸಲಾಗಿದೆ.
  4.  
  5. ಸಿ. ನೀರಿನ ಲಭ್ಯತೆ ಮತ್ತು ನೀರಿನ ಗುಣಮಟ್ಟವು ದೊಡ್ಡ ಸಮಸ್ಯೆಯಾಗಿರುವ ಪ್ರದೇಶಗಳಲ್ಲಿ, ಒಂದು ಗಂಟೆಯಲ್ಲಿ 1000 ಲೀಟರ್ ನೀರು ವಿತರಿಸುವ ಸಾಮರ್ಥ್ಯದ ಮೂರು ಆರ್‌ಒ ಘಟಕಗಳನ್ನು ಸ್ಥಾಪಿಸಲಾಗಿದೆ. 3 ಘಟಕಗಳಿಂದ ಒಟ್ಟಾರೆಯಾಗಿ, ವಾರ್ಷಿಕವಾಗಿ 75000 ಜನಸಂಖ್ಯೆಗೆ ಪ್ರಯೋಜನವಾಗುವುದನ್ನು ನಿರೀಕ್ಷಿಸಲಾಗಿದೆ.
  6.  
  7. ಡಿ. ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಯಲ್ಲಿ, ದೊಡ್ಡ ಪ್ರಮಾಣದಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಉತ್ಪತ್ತಿ ಮಾಡುವ ಸಾರ್ವಜನಿಕ ಸ್ಥಳಗಳಲ್ಲಿ 16 ಪ್ಲಾಸ್ಟಿಕ್ ಬಾಟಲ್ ಕ್ರಷರ್‌ಗಳ ಅಳವಡಿಕೆ ನಡೆಯುತ್ತಿದೆ. ಈ ಯೋಜನೆಯ ಮೂಲಕ ಪ್ಲಾಸ್ಟಿಕ್ ಪೆಟ್ ಬಾಟಲಿಗಳನ್ನು ಈ ಯಂತ್ರಗಳಲ್ಲಿ ವಿಲೇವಾರಿ ಮಾಡಲು ಸಾರ್ವಜನಿಕರನ್ನು ಪ್ರೇರೇಪಿಸುವ ಗುರಿಯನ್ನು ನಾವು ಹೊಂದಿದ್ದು, ಬಾಟಲಿಗಳನ್ನು ಯಂತ್ರಗಳಲ್ಲಿ ಪುಡಿ ಮಾಡಿ ಮರುಬಳಕೆಗಾಗಿ ಮರುಬಳಕೆ ಘಟಕಗಳಿಗೆ ಕಳುಹಿಸಲಾಗುತ್ತದೆ. ಈ ಯೋಜನೆಯು ಹಲವಾರು ಟನ್‌ಗಳಷ್ಟು ಪ್ಲಾಸ್ಟಿಕ್ ತ್ಯಾಜ್ಯ ಪರಿಸರಕ್ಕೆ ಸೇರುವುದನ್ನು ಕಡಿಮೆ ಮಾಡುತ್ತದೆ ಮತ್ತು ಅವುಗಳನ್ನು ನೇರವಾಗಿ ಮರುಬಳಕೆಗಾಗಿ ಕಳುಹಿಸಲಾಗುತ್ತದೆ.

ಪಿಎನ್‌ಬಿ ಹೌಸಿಂಗ್

ದೊಡ್ಡ ಸಂಸ್ಥೆಯ ಸಾಮಾಜಿಕ ಜವಾಬ್ದಾರಿ

ವಿಷನ್ ಸ್ಟೇಟ್ಮೆಂಟ್

ಪಿಎನ್‌ಬಿ ಹೌಸಿಂಗ್ ಫೈನಾನ್ಸ್‌ನಲ್ಲಿ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯು ಜೀವನದ ಭಾಗವೇ ಆಗಿದೆ. ನಮ್ಮ ಬಿಸಿನೆಸ್ ತತ್ವ ಮತ್ತು ಕಾರ್ಯಾಚರಣೆಗಳಲ್ಲಿ ನಾವು ಕಾರ್ಪೊರೇಟ್ ಜವಾಬ್ದಾರಿಯ ತತ್ವಗಳನ್ನು ಒಳಗೊಂಡಿದ್ದೇವೆ. ಇಲ್ಲಿಯವರೆಗಿನ ನಮ್ಮ ಪ್ರಯಾಣದಲ್ಲಿ, ನಾವು ಸುಸ್ಥಿರ ಬಿಸಿನೆಸ್ ಮಾದರಿಯನ್ನು ನಿರ್ಮಿಸಿದ್ದೇವೆ ಮತ್ತು ನಮ್ಮ ಪಾಲುದಾರರಿಗೆ ಮೌಲ್ಯವನ್ನು ರಚಿಸಿದ್ದೇವೆ. ಹಿಂದುಳಿದವರ ಜೀವನವನ್ನು ಸುಧಾರಿಸಲು ಮತ್ತು ರಾಷ್ಟ್ರ ನಿರ್ಮಾಣಕ್ಕಾಗಿ ನಮ್ಮ ವಿನಮ್ರ ಸಾಮೂಹಿಕ ಪ್ರಯತ್ನಗಳನ್ನು ಬಲಪಡಿಸಲು ನಮಗೆ ಸಾಧ್ಯವಾಗುತ್ತದೆ ಎಂದು ನಮಗೆ ವಿಶ್ವಾಸವಿದೆ.

ಮಿಷನ್ ಸ್ಟೇಟ್ಮೆಂಟ್

ಸಮಗ್ರ ಮಧ್ಯಸ್ಥಿಕೆಗಳನ್ನು ಯೋಜಿಸುವುದು ಮತ್ತು ಸಮುದಾಯದ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಪ್ರಯತ್ನಿಸುವುದು. ಮಧ್ಯಸ್ಥಿಕೆಗಳು ನೇರ ಫಲಾನುಭವಿಗಳ ಅಭಿವೃದ್ಧಿಯ ಮೇಲೆ ಮಾತ್ರ ಪರಿಣಾಮ ಬೀರುವುದಿಲ್ಲ, ಪ್ರಭಾವ ಬೀರುವ ಪ್ರದೇಶದ ಪರಿಸರ ವ್ಯವಸ್ಥೆಯಲ್ಲಿ ಇರುವವರ ಜೀವನದ ಗುಣಮಟ್ಟವನ್ನು ಹೆಚ್ಚಿಸಲು ಪ್ರಯತ್ನಿಸುತ್ತದೆ.

ಪಿಎನ್‌ಬಿ ಹೌಸಿಂಗ್

ಸಿಎಸ್ಆರ್ ಕಾರ್ಯತಂತ್ರ

ಬಿಸಿನೆಸ್ ಎಂಬುದು ಸಮಾಜ ಆಧಾರಿತವಾಗಿರಬೇಕು ಎಂಬ ಬಲವಾದ ನಂಬಿಕೆಯನ್ನು ಕಂಪನಿಯು ಹೊಂದಿದೆ. ಮತ್ತು ಮಧ್ಯಸ್ಥಗಾರರು ಎಂಬ ಪದವು ನಮ್ಮ ಗ್ರಾಹಕರು ಮತ್ತು ಸಹವರ್ತಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಇದು ತಮ್ಮ ಸಾಮಾಜಿಕ ಮತ್ತು ದೈಹಿಕ ಸಂಪನ್ಮೂಲಗಳನ್ನು ಹೂಡಿಕೆ ಮಾಡುವ ಸಮುದಾಯವನ್ನು ಕೂಡ ಒಳಗೊಂಡಿದೆ. ನಮ್ಮ ಮಧ್ಯಸ್ಥಗಾರರ ರಚನೆಯನ್ನು ನಾವು ವ್ಯಾಖ್ಯಾನಿಸುವಾಗ ಮತ್ತು ಮೌಲ್ಯಮಾಪನ ಮಾಡುವಾಗ, ಗಮನಾರ್ಹವಾಗಿ ಕೊಡುಗೆ ನೀಡುವ ಸಮುದಾಯಗಳು ಯಾವುವು ಎಂದರೆ:

ನಿರ್ಮಾಣ ಕಾರ್ಮಿಕ ಸಮುದಾಯ

ನಿರ್ಮಾಣ ಕಾರ್ಮಿಕರು, ವಲಸಿಗರ ಸಮುದಾಯ, ಅವರ ಕುಟುಂಬಗಳು, ಅವಲಂಬಿತರು ಮತ್ತು ಅವರ ಸಂಪೂರ್ಣ ಪರಿಸರ ವ್ಯವಸ್ಥೆ. ಅವರು ಪಿರಮಿಡ್‌ನ ಕೆಳಭಾಗದಲ್ಲಿ ಮುಂದುವರಿಯುತ್ತಾರೆ. ನಾವು ನಮ್ಮ ಕಾರ್ಯತಂತ್ರದ ಸಿಎಸ್ಆರ್ ಮಧ್ಯಸ್ಥಿಕೆಯನ್ನು ಯೋಜಿಸುವಾಗ, ನಾವು ನಿರ್ಮಾಣ ಕಾರ್ಮಿಕರು ಮತ್ತು ಅವರ ಕುಟುಂಬಗಳನ್ನು ನಮ್ಮ ಪ್ರಮುಖ ಪಾಲುದಾರ ಮತ್ತು ಪ್ರಾಥಮಿಕ ಫಲಾನುಭವಿಗಳಾಗಿ ಹೊಂದಿದ್ದೇವೆ.

ಸ್ಥಳೀಯ ಪ್ರದೇಶದ ಸಮುದಾಯ

ನಮ್ಮ ಉಪಸ್ಥಿತಿಯ ಪ್ರದೇಶಗಳಲ್ಲಿನ ಸಮುದಾಯಗಳಿಗೆ, ಒಟ್ಟಾರೆ ಉನ್ನತಿ, ವಾಸಿಸಲು ಉತ್ತಮ ಸ್ಥಳ, ಆರೋಗ್ಯಕರ ಜೀವನ, ಉತ್ತಮ ಶಿಕ್ಷಣ, ಸಬಲೀಕೃತ ಮಹಿಳೆಯರು, ಕೌಶಲ್ಯ, ಹಸಿರು ಮತ್ತು ಸ್ವಚ್ಛ ಪರಿಸರ ಮತ್ತು ಅಗತ್ಯ ಆಧಾರಿತ ಚಟುವಟಿಕೆಗಳ ವಿಷಯದಲ್ಲಿ ನಮ್ಮ ಬೆಂಬಲದ ಅಗತ್ಯವಿದೆ.

ಈ ಪ್ರಯತ್ನದಲ್ಲಿ ಸಮುದಾಯದ ಅಗತ್ಯಗಳೊಂದಿಗೆ ನಮ್ಮ ಪ್ರಮುಖ ವಿಷಯಾಧಾರಿತ ಕ್ಷೇತ್ರಗಳನ್ನು ಸಂಯೋಜಿಸುವ ಯೋಜನೆಗಳನ್ನು ನಾವು ವಿನ್ಯಾಸಗೊಳಿಸುತ್ತೇವೆ. ಸಮುದಾಯದ ಪ್ರಸ್ತುತ ಪರಿಸ್ಥಿತಿಯಲ್ಲಿ ಬೆಳವಣಿಗೆ ಮತ್ತು ಸಕಾರಾತ್ಮಕ ಬದಲಾವಣೆಯನ್ನು ತರಲು ವಿವಿಧ ಮಧ್ಯಸ್ಥಿಕೆಗಳನ್ನು ಒಳಗೊಳ್ಳುವ ರೀತಿಯಲ್ಲಿ ಯೋಜನೆಗಳನ್ನು ವಿನ್ಯಾಸಗೊಳಿಸಲಾಗಿದೆ.
Request Call Back at PNB Housing
ಕಾಲ್ ಬ್ಯಾಕ್ ಮಾಡಿ