ನಿಮ್ಮ ಸೇವಿಂಗ್ಸ್ ಅಥವಾ ಕರೆಂಟ್ ಅಕೌಂಟ್ ಬಳಸಿ ನಿಮ್ಮ ಬ್ಯಾಂಕ್‌ನಲ್ಲಿ ಹೊಸ ಎಫ್‌ಡಿ ಅಕೌಂಟ್ ತೆರೆಯುವ ಪ್ರಕ್ರಿಯೆಯನ್ನು ನೀವು ತಿಳಿದುಕೊಳ್ಳಬಹುದು. ಆದರೆ, ಹೊಸ ಕಾರ್ಪೊರೇಟ್ ಫಿಕ್ಸೆಡ್ ಡೆಪಾಸಿಟ್ ಅಕೌಂಟ್ ತೆರೆಯುವಾಗ ಇದು ಬೇರೆ ಪ್ರಕ್ರಿಯೆಯನ್ನು ಅನುಸರಿಸುತ್ತದೆ. ನೀವು ನಿಮ್ಮ ಅಕೌಂಟ್ ನಿರ್ವಹಿಸುವ ಬ್ಯಾಂಕ್ ಬ್ರಾಂಚ್‌ನಲ್ಲಿ, ಹೊಸ ಎಫ್‌ಡಿ ಪ್ರಮಾಣಪತ್ರವನ್ನು ಪಡೆಯಲು ನೀವು ಭರ್ತಿ ಮಾಡಿದ ಅಪ್ಲಿಕೇಶನ್ ಫಾರ್ಮ್ ಮತ್ತು ಚೆಕ್ ಸಲ್ಲಿಸಿದರೆ ಸಾಕು. ಆದರೆ, ಪಿಎನ್‌ಬಿ ಹೌಸಿಂಗ್‌ನಂತಹ ಎಚ್ಎಫ್‌ಸಿಯಲ್ಲಿ, ಫಿಕ್ಸೆಡ್ ಡೆಪಾಸಿಟ್ ಅಕೌಂಟ್ ತೆರೆಯುವ ಪ್ರಕ್ರಿಯೆಯು ವೈಯಕ್ತಿಕ ಮತ್ತು ವೈಯಕ್ತಿಕವಲ್ಲದ ಎಫ್‌ಡಿಗೆ ಸ್ವಲ್ಪ ಭಿನ್ನವಾಗಿದೆ.
ವೈಯಕ್ತಿಕ ಫಿಕ್ಸೆಡ್ ಡೆಪಾಸಿಟ್‌ಗೆ ಅಗತ್ಯವಿರುವ ಡಾಕ್ಯುಮೆಂಟ್‌ಗಳು
- ಇತ್ತೀಚಿನ ಒಂದು ಪಾಸ್‌ಪೋರ್ಟ್ ಸೈಜ್ ಕಲರ್ ಫೋಟೋ
- ಪ್ಯಾನ್ ಕಾರ್ಡ್‌ನ ಸ್ವಯಂ-ದೃಢೀಕೃತ ಪ್ರತಿ
- ವೋಟರ್-ಐಡಿ ಕಾರ್ಡ್ ಅಥವಾ ಆಧಾರ್ ಕಾರ್ಡ್ ಮುಂತಾದ ವಿಳಾಸದ ಪುರಾವೆಯ ಸ್ವಯಂ-ದೃಢೀಕೃತ ಪ್ರತಿ.
ವೈಯಕ್ತಿಕವಲ್ಲದ ಫಿಕ್ಸೆಡ್ ಡೆಪಾಸಿಟ್‌ಗೆ ಅಗತ್ಯವಿರುವ ಡಾಕ್ಯುಮೆಂಟ್‌ಗಳು
ವ್ಯಕ್ತಿಗಳು-ಅಲ್ಲದ ಟ್ರಸ್ಟ್‌ಗಳು, ಕ್ಲಬ್‌ಗಳು, ಅಸೋಸಿಯೇಶನ್‌ಗಳು, ಪಬ್ಲಿಕ್/ಪ್ರೈವೇಟ್ ಲಿಮಿಟೆಡ್ ಕಂಪನಿಗಳು, ಸಹಕಾರಿ ಸಂಘಗಳು, ಸಹಕಾರಿ ಬ್ಯಾಂಕ್‌ಗಳು ಮತ್ತು ಪಾಲುದಾರಿಕೆ ಸಂಸ್ಥೆಗಳನ್ನು ಒಳಗೊಂಡಿರುತ್ತಾರೆ. ಎಫ್‌ಡಿ ಹೊಸ ಅಕೌಂಟ್ ತೆರೆಯಲು, ಘಟಕವು ಎಲ್ಲಾ ಅಧಿಕೃತ ವ್ಯಕ್ತಿಗಳ ಮಾದರಿ ಸಹಿಗಳೊಂದಿಗೆ ಸಂಯೋಜನೆ ಮತ್ತು ನೋಂದಣಿಯ ಎಲ್ಲಾ ಕಾನೂನು ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕು. ಎಫ್‌ಡಿ ಅಕೌಂಟಿಗೆ ಅಗತ್ಯವಿರುವ ಇತರ ಸಾಮಾನ್ಯ ಡಾಕ್ಯುಮೆಂಟ್‌ಗಳು:
- ಘಟಕದ ಪ್ಯಾನ್ ಕಾರ್ಡ್‌ನ ಪ್ರತಿ
- ಘಟಕದ ವಿಳಾಸದ ಪುರಾವೆಯ ಪ್ರತಿ
- ಇತ್ತೀಚಿನ ಕಲರ್ ಪಾಸ್‌ಪೋರ್ಟ್ ಸೈಜ್ ಫೋಟೋ, ಪ್ಯಾನ್ ಕಾರ್ಡ್ ಮತ್ತು ಅಧಿಕೃತ ವ್ಯಕ್ತಿಗಳ ವಿಳಾಸದ ಪುರಾವೆ
ಫಿಕ್ಸೆಡ್ ಡೆಪಾಸಿಟ್ ಅಕೌಂಟ್ ತೆರೆಯುವ ವಿಧಾನ
ನಿಮ್ಮ ಹತ್ತಿರದಲ್ಲಿ ಪಿಎನ್‌ಬಿ ಹೌಸಿಂಗ್ ಬ್ರಾಂಚ್ ಇದ್ದರೆ, ಅಪ್ಲಿಕೇಶನ್ ಫಾರ್ಮ್ ಪಡೆಯಲು ಬ್ರಾಂಚ್‌ಗೆ ಭೇಟಿ ನೀಡಿ ಅಥವಾ, ಕಂಪನಿಯ ಪ್ರತಿನಿಧಿಯಿಂದ ಮನೆಬಾಗಿಲಿನ ನೆರವು ಪಡೆಯಲು ಹೆಸರು, ಸಂಪರ್ಕ ಸಂಖ್ಯೆ, ಇಮೇಲ್, ನಗರ ಮತ್ತು ಎಫ್‌ಡಿ ಮೊತ್ತದಂತಹ ನಿಮ್ಮ ವಿವರಗಳನ್ನು ಹಂಚಿಕೊಳ್ಳುವ ಆನ್ಲೈನ್ ಅಪ್ಲಿಕೇಶನ್ ಫಾರ್ಮ್ ಅನ್ನು ನೀವು ಭರ್ತಿ ಮಾಡಬಹುದು
ಓದಲೇಬೇಕಾದವು: ಫಿಕ್ಸೆಡ್ ಡೆಪಾಸಿಟ್ ಅಕೌಂಟ್‌ನ ಫೀಚರ್‌ಗಳು ಮತ್ತು ಪ್ರಯೋಜನಗಳು ಯಾವುವು?
ಪಿಎನ್‌ಬಿ ಹೌಸಿಂಗ್‌ನೊಂದಿಗೆ ಫಿಕ್ಸೆಡ್ ಡೆಪಾಸಿಟ್ ಅಕೌಂಟ್ ತೆರೆಯಲು ಹಂತವಾರು ಪ್ರಕ್ರಿಯೆ
ಹಂತ 1
ಅಗತ್ಯ ವಿವರಗಳೊಂದಿಗೆ ಅಪ್ಲಿಕೇಶನ್ ಫಾರ್ಮ್ ಅನ್ನು ಸರಿಯಾಗಿ ಭರ್ತಿ ಮಾಡಿ. ಎಫ್‌ಡಿ ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡುವಾಗ ಗಮನಿಸಬೇಕಾದ ಪ್ರಮುಖ ಅಂಶಗಳು ಈ ಕೆಳಗಿನಂತಿವೆ:
- ಯಾವುದೇ ತಪ್ಪಿಲ್ಲದೆ ಅರ್ಜಿದಾರರ ಹೆಸರು, ವಿಳಾಸ, ಪ್ಯಾನ್ ಮತ್ತು ಬ್ಯಾಂಕ್ ವಿವರಗಳನ್ನು ಒಳಗೊಂಡಂತೆ ನಿಮ್ಮ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ
- ತಿಂಗಳುಗಳಲ್ಲಿ ಫಿಕ್ಸೆಡ್ ಡೆಪಾಸಿಟ್ ಅವಧಿ
- ಪಾವತಿ ವಿವರಗಳು (ಚೆಕ್, ಡ್ರಾಫ್ಟ್, ಆರ್‌ಟಿಜಿಎಸ್/ಎನ್‌ಇಎಫ್‌ಟಿ, ಯುಟಿಆರ್ ನಂಬರ್)
- ಡೆಪಾಸಿಟ್ ಆಯ್ಕೆ, ಒಟ್ಟುಗೂಡಿಸಿದ ಅಥವಾ ಒಟ್ಟುಗೂಡಿಸದ (ಮಾಸಿಕ/ತ್ರೈಮಾಸಿಕ/ಅರ್ಧ-ವಾರ್ಷಿಕ/ವಾರ್ಷಿಕ)
- ಮರುಪಾವತಿ ಸೂಚನೆ (ಮೊದಲ ಅರ್ಜಿದಾರ, ಮೊದಲ ಅರ್ಜಿದಾರ ಅಥವಾ ಬದುಕುಳಿದವರು)
- ತೆರಿಗೆ ಸೂಚನೆ
- ಎಫ್‌ಡಿ ಪ್ರಮಾಣಪತ್ರವನ್ನು ರವಾನಿಸುವ ವಿಧಾನ (ಅಂಚೆ/ಕೊರಿಯರ್/ಸ್ವತಃ/ಬ್ರೋಕರ್ ಮೂಲಕ)
- ಎರಡನೇ ಪುಟದಲ್ಲಿ, ಮರುಪಾವತಿ ಮತ್ತು ನಾಮಿನಿ ವಿವರಗಳಿಗಾಗಿ ಬ್ಯಾಂಕ್ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ
- ನಿಮ್ಮ ಇತ್ತೀಚಿನ ಕಲರ್ ಪಾಸ್‌ಪೋರ್ಟ್ ಸೈಜ್ ಫೋಟೋವನ್ನು ಅಂಟಿಸಿ ಮತ್ತು ಅದರ ಮೇಲೆ ಸಹಿ ಮಾಡಿ
- ಮತ್ತು ಅಂತಿಮವಾಗಿ, ಅಪ್ಲಿಕೇಶನ್ ಫಾರ್ಮ್‌ನಲ್ಲಿ ಸೂಚಿಸಲಾದ ಸ್ಥಳದಲ್ಲಿ ನಿಮ್ಮ ಸಹಿ ಮಾಡಿ
ಹಂತ 2
ನೀವು ಸಲ್ಲಿಸಲು ಬಯಸುವ, ಅರ್ಜಿದಾರರ ಕೆವೈಸಿ ಡಾಕ್ಯುಮೆಂಟ್‌ಗಳ (ಪ್ಯಾನ್ ಕಾರ್ಡ್, ಆಧಾರ್, ವೋಟರ್ ಐಡಿ) ಸ್ವಯಂ-ದೃಢೀಕೃತ ಪ್ರತಿಗಳನ್ನು ಜೋಡಿಸಿ.
ಹಂತ 3
ಈಗ ಸರಿಯಾಗಿ ಭರ್ತಿ ಮಾಡಿದ ಅಪ್ಲಿಕೇಶನ್ ಫಾರ್ಮ್, ಕೆವೈಸಿ ಡಾಕ್ಯುಮೆಂಟ್‌ಗಳು ಮತ್ತು ಚೆಕ್/ಡ್ರಾಫ್ಟ್ ಅನ್ನು ಹತ್ತಿರದ ಪಿಎನ್‌ಬಿ ಹೌಸಿಂಗ್ ಬ್ರಾಂಚ್‌ನಲ್ಲಿ ಸಲ್ಲಿಸಿ. ನೀವು ಮನೆಬಾಗಿಲಿನ ಸಹಾಯವನ್ನು ಆಯ್ಕೆ ಮಾಡಿದ್ದರೆ, ನೀವು ಕಂಪನಿಯ ಪ್ರತಿನಿಧಿಗೆ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬಹುದು.
ಹಂತ 4
ಅಪ್ಲಿಕೇಶನ್ ಫಾರ್ಮ್ ಮತ್ತು ಕೆವೈಸಿ ಡಾಕ್ಯುಮೆಂಟ್‌ಗಳ ಮೌಲ್ಯಮಾಪನದ ನಂತರ, ನಿಮ್ಮ ಎಫ್‌ಡಿಯನ್ನು ಬುಕ್ ಮಾಡಲಾಗುತ್ತದೆ ಮತ್ತು ಪ್ರಮಾಣಪತ್ರವನ್ನು ನೀವು ನೀಡಿರುವ ವಿಳಾಸಕ್ಕೆ ಕಳುಹಿಸಲಾಗುತ್ತದೆ. ನಿಮ್ಮ ನೋಂದಾಯಿತ ಮೊಬೈಲ್ ನಂಬರ್‌ಗೆ ಎಸ್ಎಂಎಸ್ ದೃಢೀಕರಣವನ್ನು ಕೂಡ ಕಳುಹಿಸಲಾಗುತ್ತದೆ.
ಓದಲೇಬೇಕಾದವು: ಯುವ ಮತ್ತು ಹಿರಿಯ ನಾಗರಿಕರಿಗೆ ಫಿಕ್ಸೆಡ್ ಡೆಪಾಸಿಟ್‌ನ ಪ್ರಯೋಜನಗಳು
ಪಿಎನ್‌ಬಿ ಹೌಸಿಂಗ್ ಫಿಕ್ಸೆಡ್ ಡೆಪಾಸಿಟ್‌ಗಳ ಫೀಚರ್‌ಗಳು
- ಹೆಚ್ಚಿನ ಸುರಕ್ಷತಾ ಮಾನದಂಡ (ಕ್ರಿಸಿಲ್ ಎಫ್‌ಎಎ+/ಸ್ಥಿರ)
- ಪ್ರತಿ ಹಣಕಾಸು ವರ್ಷಕ್ಕೆ ₹5,000 ವರೆಗಿನ ಬಡ್ಡಿ ಆದಾಯದ ಮೇಲೆ ಯಾವುದೇ ಟಿಡಿಎಸ್ ಇಲ್ಲ
- ಡೆಪಾಸಿಟ್ ಮೇಲೆ ಲೋನ್ ಸೌಲಭ್ಯ
- ಕಡ್ಡಾಯ 3 ತಿಂಗಳ ಲಾಕ್-ಇನ್ ಅವಧಿಯ ನಂತರ ಅವಧಿ ಪೂರ್ವ ವಿತ್‌ಡ್ರಾವಲ್