PNB Housing Finance Limited

ಎನ್ಎಸ್ಇ:

ಬಿಎಸ್ಇ:

ಕೊನೆಯ ಅಪ್ಡೇಟ್:

ಪಿಎನ್‌ಬಿ ಹೌಸಿಂಗ್

ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಮೂಲಕ  

₹ 10 ಸಾವಿರ ₹ 10 ಲಕ್ಷ
%
10% 20%
ವರ್ಷ
1 ವರ್ಷ 30 ವರ್ಷಗಳು
₹ 10 ಸಾವಿರ ₹ 10 ಲಕ್ಷ

ನಿಮ್ಮ ಮಾಸಿಕ ಇಎಂಐ

5,000

ಅರ್ಹ ಲೋನ್ ಮೊತ್ತ ₹565,796

ಹೋಮ್ ಲೋನ್ ಪ್ರಯಾಣ

ಮುಂದುವರೆಯುವುದು ಹೇಗೆ

ಕಾಯಿರಿ! ನೀವು ಹೋಮ್ ಲೋನ್ ಅಪ್ಲಿಕೇಶನ್ ಪ್ರಕ್ರಿಯೆಯನ್ನು ಆರಂಭಿಸುವ ಮೊದಲು, ನೀವು ಕೆಲವು ಹೆಚ್ಚುವರಿ ವಿಷಯಗಳ ಬಗ್ಗೆ ಯೋಚಿಸಬೇಕು. ನಿಮ್ಮ ಸಮಯವನ್ನು ಉಳಿಸಲು ನಾವು ಚೆಕ್‌ಲಿಸ್ಟ್ ತಯಾರಿಸಿದ್ದೇವೆ!

ಹಂತ01

ನಿಮ್ಮ ಕ್ರೆಡಿಟ್ ಸ್ಕೋರ್ ಪರಿಶೀಲಿಸಿ

ನಿಮ್ಮ ಕನಸಿನ ಮನೆಗೆ ಬಾಗಿಲುಗಳನ್ನು ತೆರೆಯಲು ಬಯಸುತ್ತಿದ್ದೀರಾ?? ನೀವು ಹೌಸಿಂಗ್ ಲೋನಿಗೆ ಅರ್ಹರಾಗಿದ್ದೀರಾ ಎಂದು ನೋಡಲು ಇಂದೇ ನಿಮ್ಮ ಕ್ರೆಡಿಟ್ ಸ್ಕೋರ್ ಪರಿಶೀಲಿಸುವ ಮೂಲಕ ಪ್ರಾರಂಭಿಸಿ. ಮನೆ ಖರೀದಿ ಪ್ರಕ್ರಿಯೆಯಲ್ಲಿ ಈ ನಿರ್ಣಾಯಕ ಹಂತವನ್ನು ತಪ್ಪಿಸಿಕೊಳ್ಳಬೇಡಿ! ನಿಮ್ಮ ಕ್ರೆಡಿಟ್ ಸ್ಕೋರ್ ಪರಿಶೀಲಿಸಿ

ನಿಮ್ಮ ಅರ್ಹ ಲೋನ್ ಮೊತ್ತವನ್ನು ನಿರ್ಧರಿಸಿ

ನಮ್ಮ ಸುಲಭವಾದ ಲೋನ್ ಕ್ಯಾಲ್ಕುಲೇಟರ್‌ನೊಂದಿಗೆ ನೀವು ಎಷ್ಟು ಲೋನ್ ಪಡೆಯಬಹುದು ಎಂಬುದನ್ನು ತಿಳಿಯಿರಿ! ಪಿಎನ್‌ಬಿ ಹೌಸಿಂಗ್ ಆಸ್ತಿ ವೆಚ್ಚದ 90%* ವರೆಗೆ ಹೋಮ್ ಲೋನ್ ಒದಗಿಸುತ್ತದೆ. ನಿಮ್ಮ ಅರ್ಹ ಲೋನ್ ಮೊತ್ತವನ್ನು ಈಗಲೇ ಕಂಡುಕೊಳ್ಳಿ. ನಿಮ್ಮ ಅರ್ಹ ಲೋನ್ ಮೊತ್ತವನ್ನು ಪರಿಶೀಲಿಸಿ ಹಂತ02
ಹಂತ03

ನಿಮ್ಮ ಹೋಮ್ ಲೋನ್ ಅನ್ನು - ಪ್ರಿನ್ಸಿಪಲ್ ಮಂಜೂರಾತಿ ಪತ್ರದೊಂದಿಗೆ ಪಡೆಯಿರಿ

ನಮ್ಮ ತ್ವರಿತ ಪ್ರಕ್ರಿಯೆಯೊಂದಿಗೆ, ನೀವು ಕೇವಲ 3 ನಿಮಿಷಗಳಲ್ಲಿ ನಿಮ್ಮ ಪ್ರಿನ್ಸಿಪಲ್ ಮಂಜೂರಾತಿ ಪತ್ರವನ್ನು ಪಡೆಯಬಹುದು, ಇದರಿಂದಾಗಿ ನೀವು ನಿಮ್ಮ ಕನಸಿನ ಮನೆಯನ್ನು ಆತ್ಮವಿಶ್ವಾಸದೊಂದಿಗೆ ಹುಡುಕುವುದರತ್ತ ಗಮನಹರಿಸಬಹುದು. 3 ನಿಮಿಷಗಳಲ್ಲಿ ತ್ವರಿತ ಅನುಮೋದನೆ ಪಡೆಯಿರಿ

ಪಿಎನ್‌ಬಿ ಹೌಸಿಂಗ್ ಅನುಮೋದಿತ ಯೋಜನೆಗಳನ್ನು ಪರಿಶೀಲಿಸಿ

ನೀವು ಖರೀದಿಸುತ್ತಿರುವ ಆಸ್ತಿಯು ಹಣಕಾಸು ಪಡೆಯಲು ಅನುಮೋದಿಸಲ್ಪಟ್ಟಿದೆಯೇ ಎಂದು ಪರಿಶೀಲಿಸಿ
ನಮ್ಮ ಎಕ್ಸ್‌ಪರ್ಟ್ ಜೊತೆ ಮಾತನಾಡಿ
ಹಂತ04
ಹಂತ05

ಡಾಕ್ಯುಮೆಂಟೇಶನ್‌ನೊಂದಿಗೆ ನಿಮ್ಮ ಅಪ್ಲಿಕೇಶನ್ ಪ್ರಕ್ರಿಯೆಯನ್ನು ಸರಳಗೊಳಿಸಿ

ಅಪ್ಲಿಕೇಶನ್ ಪ್ರಕ್ರಿಯೆಯು ಕಷ್ಟವಾಗಬಹುದು ಎಂದು ಪಿಎನ್‌ಬಿ ಹೌಸಿಂಗ್ ಅರ್ಥಮಾಡಿಕೊಳ್ಳುತ್ತದೆ. ಅದಕ್ಕಾಗಿಯೇ, ನಿಮ್ಮ ಕ್ರೆಡಿಟ್ ಸ್ಕೋರ್ ಆಧಾರದ ಮೇಲೆ, ನಾವು ಹೊಂದಿಕೊಳ್ಳುವ ವಿಧಾನವನ್ನು ತೆಗೆದುಕೊಳ್ಳುತ್ತೇವೆ ಮತ್ತು ಅಗತ್ಯ ಡಾಕ್ಯುಮೆಂಟೇಶನ್ ಮೇಲೆ ವೈಯಕ್ತಿಕಗೊಳಿಸಿದ ಸಹಾಯವನ್ನು ಒದಗಿಸುತ್ತೇವೆ. ಅಗತ್ಯವಿರುವ ಡಾಕ್ಯುಮೆಂಟ್‌ಗಳ ಸಮಗ್ರ ಪಟ್ಟಿಯನ್ನು ಪರಿಶೀಲಿಸಿ
ಆರಂಭಿಸಲಾಗುತ್ತಿದೆ ಹೋಮ್ ಲೋನ್‌ ಅಪ್ಲಿಕೇಶನ್ ಕಷ್ಟಕರವಾಗಿರಬಹುದು, ಆದರೆ ಸಹಾಯ ಮಾಡಲು ನಾವು ಇಲ್ಲಿದ್ದೇವೆ. ನಮ್ಮ ಲೀಡ್ ಫಾರ್ಮ್ ಭರ್ತಿ ಮಾಡುವ ಮೂಲಕ, ಲಭ್ಯವಿರುವ ಅತ್ಯುತ್ತಮ ಹೋಮ್ ಲೋನ್ ಆಯ್ಕೆಗಳನ್ನು ಪಡೆಯಲು ನೀವು ಒಂದು ಹೆಜ್ಜೆ ಹತ್ತಿರವಾಗಿದ್ದೀರಿ. ನಮ್ಮ ಎಕ್ಸ್‌ಪರ್ಟ್ ತಂಡವು ಪ್ರಕ್ರಿಯೆಯುದ್ದಕ್ಕೂ ನಿಮಗೆ ಮಾರ್ಗದರ್ಶನ ನೀಡುತ್ತದೆ ಮತ್ತು ನೀವು ತೊಂದರೆ ರಹಿತ ಅನುಭವ ಪಡೆಯುತ್ತೀರಿ ಎಂದು ಖಚಿತಪಡಿಸುತ್ತದೆ.
ನಮ್ಮ ತಂಡದಿಂದ ಮರಳಿ ಕರೆ ಪಡೆಯಿರಿ
ಡಿಜಿಟಲ್ ಅಪ್ಲಿಕೇಶನ್ ಹಂತ06
ಕೇವಲ 3 ನಿಮಿಷಗಳಲ್ಲಿ
3 ನಿಮಿಷಗಳು, ತೊಂದರೆ-ರಹಿತ!

ಮೇಲ್ನೋಟ

ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಮೂಲಕ

ಹೋಮ್ ಲೋನ್‌ಗೆ ಅರ್ಹತೆಯನ್ನು ಲೆಕ್ಕ ಹಾಕಿ
ಪಿಎನ್‌ಬಿ ಹೌಸಿಂಗ್‌ನ ಸುಲಭ ಮತ್ತು ಅರ್ಥಪೂರ್ಣ ಹೋಮ್ ಲೋನ್ ಇಎಂಐ ಕ್ಯಾಲ್ಕುಲೇಟರ್‌ನೊಂದಿಗೆ ನಿಮ್ಮ ಇಎಂಐಗಳನ್ನು ಲೆಕ್ಕ ಹಾಕಿ. ನೀವು ಆಯ್ಕೆ ಮಾಡಿದ ಲೋನ್ ಮೊತ್ತ,
ಬಡ್ಡಿ ದರ, ಮತ್ತು ಲೋನ್ ಅವಧಿಯನ್ನು ನಮೂದಿಸಿ ಮತ್ತು 'ಕ್ಯಾಲ್ಕುಲೇಟ್' ಮೇಲೆ ಕ್ಲಿಕ್ ಮಾಡಿ. ನಮ್ಮ ಇಎಂಐ ಕ್ಯಾಲ್ಕುಲೇಟರ್ ನಿಮ್ಮ ಇನ್ಪುಟ್ ಆಧಾರದ ಮೇಲೆ ಅಂದಾಜು ಮೊತ್ತವನ್ನು ತಿಳಿಸುತ್ತದೆ
ಮಾನ್ಯುಯಲ್ ದೋಷಗಳು ಮತ್ತು ಕಠಿಣ ಲೆಕ್ಕಾಚಾರಗಳಿಗೆ ವಿದಾಯ ಹೇಳಿ; ನಮ್ಮ ಕ್ಯಾಲ್ಕುಲೇಟರ್ ಬಳಸಿ ನಿಮ್ಮ ಹೋಮ್ ಲೋನ್‌ ಸೆಕೆಂಡುಗಳ ಒಳಗೆ. ನಮ್ಮ ಗ್ರಾಹಕ ಸೇವೆಯನ್ನು ಸಂಪರ್ಕಿಸಿ
ಹೋಮ್ ಲೋನ್‌ಗಳ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ಮಾರ್ಗದರ್ಶನಕ್ಕಾಗಿ ನಮ್ಮ ಗ್ರಾಹಕ ಸೇವಾ ಎಕ್ಸ್‌ಪರ್ಟ್‌ಗಳನ್ನು ಸಂಪರ್ಕಿಸಿ.
ಹೋಮ್ ಲೋನ್ ಅರ್ಹತೆ ಕ್ಯಾಲ್ಕುಲೇಟರ್ ಎಂದರೇನು?
ಹೋಮ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಒಂದು ಆನ್ಲೈನ್ ಸಾಧನವಾಗಿದ್ದು, ಇದು ಇಎಂಐಗಳಾಗಿ ನಿಮ್ಮ ಮಾಸಿಕ ಪಾವತಿಯನ್ನು ಅಂದಾಜು ಮಾಡಲು ನಿಮಗೆ ಸಹಾಯ ಮಾಡುತ್ತದೆ.
ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಹೇಗೆ ಕೆಲಸ ಮಾಡುತ್ತದೆ?
  ಹಾಗಾದರೆ, ನಮ್ಮ ಸುಧಾರಿತ ಹೌಸಿಂಗ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ನಿಮಗೆ ನಿಖರ ಮತ್ತು ವೇಗವಾಗಿ ತ್ವರಿತ ಫಲಿತಾಂಶಗಳನ್ನು ಹೇಗೆ ಒದಗಿಸುತ್ತದೆ? ಇದು ನಿಮ್ಮ ವಿವರಗಳನ್ನು ತೆಗೆದುಕೊಳ್ಳುತ್ತದೆ
ಮತ್ತು ನಿಯಮಿತವಾಗಿ ಅಪ್ಡೇಟ್ ಆದ ಅದರ ಡೇಟಾಬೇಸ್‌ನಲ್ಲಿ ನಿಗದಿತ ಮೊತ್ತದ ಹೌಸಿಂಗ್ ಲೋನ್ ಪಡೆಯಲು ಅಗತ್ಯವಿರುವ ವಿವಿಧ ಮಾನದಂಡಗಳೊಂದಿಗೆ ಅವುಗಳನ್ನು ಹೋಲಿಕೆ ಮಾಡುತ್ತದೆ.
ಆನಂತರ, ಹೊಂದಿಕೆಯಾಗುವ ಮಾನದಂಡಗಳ ಪ್ರಕಾರ ನಿಮಗೆ ಹತ್ತಿರದ ಅಂದಾಜು ಸಿಗುತ್ತದೆ.

ಪಿಎನ್‌ಬಿ ಹೌಸಿಂಗ್ ಬಳಸುವ ಹಂತಗಳು

ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಮೂಲಕ

 
 ನಮ್ಮ ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್‌ನಿಂದ ನೀವು ನಿಮ್ಮ ಅರ್ಹತೆಯನ್ನು ಸುಲಭವಾಗಿ ಪರಿಶೀಲಿಸಬಹುದು. ಕೆಳಗೆ ನಮೂದಿಸಿದ ಹಂತಗಳನ್ನು ಅನುಸರಿಸಿ ಮತ್ತು ಕ್ಯಾಲ್ಕುಲೇಟರ್
ನಿಮ್ಮ ಅರ್ಹತೆಯನ್ನು ತೋರಿಸುತ್ತದೆ:
  • ಹಂತ01
    ನಮೂದಿಸಿ

    ಒಟ್ಟು ತಿಂಗಳ ಆದಾಯ

  • ಹಂತ02
    ನಮೂದಿಸಿ

    ಲೋನ್ ಅವಧಿ

  • ಹಂತ03
    ನಮೂದಿಸಿ

    ನಿವ್ವಳ ಬಡ್ಡಿ ದರ

  • ಹಂತ04
    ನಮೂದಿಸಿ

    ಇರುವ ಇತರ ಇಎಂಐಗಳು

ಅಪೇಕ್ಷಿತ ಕೋಟ್ ಪಡೆಯಲು ಮತ್ತು ಹೋಮ್ ಲೋನ್ ಅರ್ಹತೆಯನ್ನು ಲೆಕ್ಕ ಹಾಕಲು ಸ್ಲೈಡರ್‌ಗಳನ್ನು ಬಳಸಿ. ನಮ್ಮ ಪ್ರತಿನಿಧಿಗಳೊಂದಿಗೆ ಹೋಮ್ ಲೋನ್‌ಗೆ ನಿಮ್ಮ ಅರ್ಹತೆ ಮತ್ತು ಕಸ್ಟಮೈಜ್ ಮಾಡಿದ ಕೋಟ್ ಬಗ್ಗೆ ಚರ್ಚಿಸಲು ನೀವು ಮರಳಿ ಕರೆ ಆಯ್ಕೆ ಮಾಡಬಹುದು ಅಥವಾ ನೀವು ಅರ್ಹರಾಗಿದ್ದರೆ ತ್ವರಿತ ಇ-ಮಂಜೂರಾತಿಯನ್ನು ಪಡೆಯಬಹುದು!  

ಹೋಮ್ ಲೋನ್‌

ಅರ್ಹತಾ ಮಾನದಂಡ

 ನಮ್ಮ ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್‌ನಿಂದ ನೀವು ನಿಮ್ಮ ಅರ್ಹತೆಯನ್ನು ಸುಲಭವಾಗಿ ಪರಿಶೀಲಿಸಬಹುದು. ಕೆಳಗೆ ನಮೂದಿಸಿದ ಹಂತಗಳನ್ನು ಅನುಸರಿಸಿ ಮತ್ತು ಕ್ಯಾಲ್ಕುಲೇಟರ್
ನಿಮ್ಮ ಅರ್ಹತೆಯನ್ನು ತೋರಿಸುತ್ತದೆ:
ಅಂಶಗಳು ವೇತನದಾರ ಸ್ವಯಂ ಉದ್ಯೋಗಿ/ಬಿಸಿನೆಸ್ ಮಾಲೀಕರು
ವಯಸ್ಸು 21 ನಿಂದ 70** 21 ನಿಂದ 70**
ಕೆಲಸದ ಅನುಭವ 3+ year 3+ year
ಬಿಸಿನೆಸ್ ಮುಂದುವರಿಕೆ 3+ year
ಸಿಬಿಲ್ ಸ್ಕೋರ್ 611+ 611+
ಕನಿಷ್ಠ ಸಂಬಳ 15000
ಲೋನ್ ಮೊತ್ತ 8 ಲಕ್ಷದಿಂದ ಶುರು 8 ಲಕ್ಷದಿಂದ ಶುರು
ಗರಿಷ್ಠ ಕಾಲಾವಧಿ 30 20
ರಾಷ್ಟ್ರೀಯತೆ ಭಾರತೀಯ/ಎನ್ಆರ್‌ಐ ಭಾರತೀಯ

5 ಪ್ರಮುಖ ಅಂಶಗಳು

ಹೋಮ್ ಲೋನ್ ಅರ್ಹತೆಯ ಮೇಲೆ ಪರಿಣಾಮ ಬೀರುತ್ತದೆ

 ಭಾರತದಲ್ಲಿ ಮತ್ತು ಜಗತ್ತಿನಾದ್ಯಂತ ನಿಮ್ಮ ಮರು ಪಾವತಿ ಸಾಮರ್ಥ್ಯದ ಆಧಾರದಲ್ಲಿ ಹೋಮ್ ಲೋನ್ ಅರ್ಹತೆಯನ್ನು ತೀರ್ಮಾನಿಸಲಾಗುತ್ತದೆ. ಪರಿಣಾಮಕಾರಿಯಾಗಿ, ನಿಮ್ಮ ಹೋಮ್ ಲೋನ್ ಅರ್ಹತೆಯನ್ನು ಸಾಲದಾತರು ಇವುಗಳನ್ನು ಆಧರಿಸಿ ನಿರ್ಧರಿಸುತ್ತಾರೆ:
ನಿಮ್ಮ ಹೋಮ್ ಲೋನ್ ಅರ್ಹತೆಯನ್ನು ನೀವು ಹೇಗೆ ಹೆಚ್ಚಿಸಬಹುದು?
  • Right Arrow Button = “>”

    ನಿಮ್ಮ ವಯಸ್ಸು – ಇದು ಲೋನ್‌ನ ಅವಧಿ ಏನು ಎಂಬುದನ್ನು ನಿರ್ಧರಿಸುವ ಮೂಲಕ ನಿಮ್ಮ ಹೋಮ್ ಲೋನ್ ಇಎಂಐ ಅನ್ನು ನಿರ್ಧರಿಸುತ್ತದೆ. ನೀಡಲಾದ ಲೋನ್ ಮೊತ್ತ ಮತ್ತು ಬಡ್ಡಿ ದರಕ್ಕೆ ಅವಧಿ ದೀರ್ಘವಾಗಿದ್ದರೆ ಇಎಂಐ ಕಡಿಮೆಯಾಗಿರುತ್ತದೆ ಮತ್ತು ಅವಧಿ ಕಡಿಮೆಯಿದ್ದರೆ ಇಎಂಐ ಅಧಿಕವಾಗಿರುತ್ತದೆ.

  • Right Arrow Button = “>”

    ನಿಮ್ಮ ಆದಾಯದ ಸ್ವರೂಪ ಮತ್ತು ಗಾತ್ರ – ನಿಮ್ಮ ಮಾಸಿಕ ಆದಾಯವು ನೀವು ಎಷ್ಟು ಇಎಂಐ ಬದ್ಧತೆಯನ್ನು ಹೊಂದಲು ಸಾಧ್ಯ ಎಂಬುದನ್ನು ನಿರ್ಧರಿಸುತ್ತದೆ. ನಿಮ್ಮ ಇತರ ಹಣಕಾಸಿನ ಬದ್ಧತೆಗಳನ್ನು ಪೂರೈಸಿದ ನಂತರ ಇಎಂಐ ಮೂಲಕ ನಿಮ್ಮ ಲೋನ್ ಮರುಪಾವತಿಸಲು ನೀವು ಎಷ್ಟು ಮೊತ್ತವನ್ನು ಹೊಂದಿರುತ್ತೀರಿ ಎಂಬುದನ್ನು ಇದು ನಿರ್ಧರಿಸುತ್ತದೆ.

  • Right Arrow Button = “>”

    ನಿಮ್ಮ ಮುಂಚಿತ ಲೋನ್ ಬದ್ಧತೆಗಳು – ನಿಮ್ಮ ಅಸ್ತಿತ್ವದಲ್ಲಿರುವ ಹಣಕಾಸಿನ ಬದ್ಧತೆಯು ನಿಮ್ಮ ಅರ್ಹತೆಯ ಮೇಲೆ ಪರಿಣಾಮ ಬೀರುತ್ತದೆ. ಯಾಕೆಂದರೆ ಅದನ್ನು ನಿಮ್ಮ ಅಸ್ತಿತ್ವದಲ್ಲಿರುವ ಆದಾಯದಿಂದ ಕಡಿತಗೊಳಿಸಿದ ನಂತರ ಹೋಮ್ ಲೋನ್ ಮರುಪಾವತಿಗಾಗಿ ಉಳಿಯುವ ಇಎಂಐನ ಮೊತ್ತವನ್ನು ಲೆಕ್ಕ ಹಾಕಲಾಗುತ್ತದೆ.

  • Right Arrow Button = “>”

    ನಿಮ್ಮ ಕ್ರೆಡಿಟ್ ರಿಪೋರ್ಟ್ – ನಿಮ್ಮ ಲೋನ್ ಅನುಮೋದನೆ ಅಥವಾ ತಿರಸ್ಕಾರಕ್ಕೆ ಪ್ರಮುಖ ಮಾನದಂಡವಾಗುವ ಇತರ ಬದ್ಧತೆಗಳನ್ನು ಆಧರಿಸಿ ನಿಮ್ಮ ಮರುಪಾವತಿ ಹೆಲ್ತ್ ಸ್ಕೋರ್ ಅನ್ನು ನಿರ್ಧರಿಸಲು ನಿಮ್ಮ ಕ್ರೆಡಿಟ್ ರಿಪೋರ್ಟ್ ಸಾಲದಾತರಿಗೆ ಸಹಾಯ ಮಾಡುತ್ತದೆ.

  • Right Arrow Button = “>”

    ನಿಯಂತ್ರಕ ಮಾರ್ಗಸೂಚಿಗಳು – ಎನ್‍ಎಚ್‌ಬಿ ಕೂಡ ಮನೆ ವೆಚ್ಚದ ಶೇಕಡಾವಾರು ರೂಪದಲ್ಲಿ ಗರಿಷ್ಠ ಲೋನ್ ಮೊತ್ತದ ಮೇಲೆ ನಿರ್ಬಂಧಗಳನ್ನು ಹೇರಿದೆ. ಈ ಮಿತಿಯು ಆಸ್ತಿ ವೆಚ್ಚದ ಆಧಾರದ ಮೇಲೆ ಸ್ವಲ್ಪ ಬದಲಾಗುತ್ತದೆ, ಕಡಿಮೆ ವೆಚ್ಚದ ಮನೆಗಳು ಹೆಚ್ಚಿನ ಮಿತಿಗೆ ಮತ್ತು ಅಧಿಕ ವೆಚ್ಚದ ಮನೆಗಳು ಕಡಿಮೆ ಮಿತಿಗೆ ಅರ್ಹವಾಗಿರುತ್ತವೆ.

ಓದಿ ಅಪ್ಡೇಟೆಡ್

ಆಗಾಗ ಕೇಳುವ ಪ್ರಶ್ನೆಗಳು

ಹೋಮ್ ಲೋನ್ ಅರ್ಹತೆ ಕ್ಯಾಲ್ಕುಲೇಟರ್ ಎಂದರೇನು?

ಹೆಸರೇ ಸೂಚಿಸುವಂತೆ, ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಎಂಬುದು ಹೋಮ್ ಲೋನ್ ಅರ್ಹತೆಯನ್ನು ಲೆಕ್ಕ ಹಾಕಲು ನೀವು ಬಳಸಬಹುದಾದ ಆನ್ಲೈನ್ ಸಾಧನವಾಗಿದೆ. ನಿಮ್ಮ ಸಾಲದಾತರು ಅಥವಾ ಹಣಕಾಸು ಸೇವಾ ಪೂರೈಕೆದಾರರ ವೆಬ್‌ಸೈಟ್ ಅಥವಾ ಆ್ಯಪ್‌ಗಳಲ್ಲಿ ಹೋಮ್ ಲೋನ್ ಅರ್ಹತೆಗಾಗಿ ನೀವು ಅಂತಹ ಕ್ಯಾಲ್ಕುಲೇಟರ್ ಅನ್ನು ನೋಡಬಹುದು. ಇದು ಉತ್ತಮ ಫೈನಾನ್ಶಿಯಲ್ ಪ್ಲಾನಿಂಗ್ ಸಾಧನವಾಗಿದ್ದು, ಬಳಸಲು ಸುಲಭವಾಗಿದೆ ಮತ್ತು ನೀವು ಇನ್ಪುಟ್ ಮಾಡುವ ವಿವಿಧ ಅಂಶಗಳ ಆಧಾರದ ಮೇಲೆ ನೀವು ಎಷ್ಟು ಹೋಮ್ ಲೋನ್ ಮೊತ್ತ ಮತ್ತು ಮಾಸಿಕ ಇಎಂಐಗೆ ಅರ್ಹರಾಗಿದ್ದೀರಿ ಎಂಬುದನ್ನು ಕಂಡುಹಿಡಿಯಲು ನಿಮಗೆ ಅವಕಾಶ ನೀಡುತ್ತದೆ. 

ನೀವು ಮಾಡಬೇಕಾಗಿರುವುದು ಇಷ್ಟೇ, ಈ ಕೆಳಗಿನ ಮಾಹಿತಿಯನ್ನು ನಮೂದಿಸಿ:

  • ಒಟ್ಟು ಮಾಸಿಕ ಆದಾಯ
  • ಅಪೇಕ್ಷಿತ ಹೋಮ್ ಲೋನ್ ಅವಧಿ
  • ಬಡ್ಡಿ ದರ
  • ಯಾವುದೇ ಅಸ್ತಿತ್ವದಲ್ಲಿರುವ ಇಎಂಐಗಳು
  • ಪಿಎನ್‌ಬಿ ಹೌಸಿಂಗ್ ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್‌ನೊಂದಿಗೆ, ನೀವು ಮರಳಿ ಕರೆ ಪಡೆಯಲು ಕೋರಿಕೆ ಸಲ್ಲಿಸುವ ಅಥವಾ ತ್ವರಿತ ಇ-ಮಂಜೂರಾತಿ ಪಡೆಯುವ ಆಯ್ಕೆಯನ್ನು ಕೂಡ ಹೊಂದಿರುತ್ತೀರಿ! 
ಸಂಬಳದ ಆಧಾರದ ಮೇಲೆ ಹೋಮ್ ಲೋನ್ ಅರ್ಹತೆಯನ್ನು ಪರಿಶೀಲಿಸುವುದು ಹೇಗೆ?

ನಿಮ್ಮ ಹೌಸಿಂಗ್ ಲೋನ್ ಅರ್ಹತೆಗೆ ಆದಾಯ/ಸಂಬಳವು ಮುಖ್ಯ ಅಂಶ ಎಂದು ನಮಗೆಲ್ಲರಿಗೂ ತಿಳಿದಿದೆ. ನೀವು ಎಷ್ಟು ಗಳಿಸುತ್ತೀರಿ ಎಂಬುದು ನಿರ್ದಿಷ್ಟ ಮೊತ್ತದ ಹೋಮ್ ಲೋನ್ ಅನ್ನು ಯಾವಾಗ ಮರು ಪಾವತಿಸಲು ಸಾಧ್ಯವಾಗುತ್ತದೆ ಎಂಬುದನ್ನು ಸೂಚಿಸುತ್ತದೆ. ಪಿಎನ್‌ಬಿ ಹೌಸಿಂಗ್ ಹೋಮ್ ಲೋನ್‌ಗೆ ಅರ್ಹತೆ ಪಡೆಯಲು, ನೀವು ಕನಿಷ್ಠ ₹15,000 ಒಟ್ಟು ಮಾಸಿಕ ಆದಾಯ ಹೊಂದಿರಬೇಕು. ನೀವು ಸಂಬಳ ಪಡೆಯುವ ವ್ಯಕ್ತಿಯಾಗಿರಲಿ ಅಥವಾ ಸ್ವಯಂ ಉದ್ಯೋಗಿಯಾಗಿರಲಿ ಇದು ಅನ್ವಯವಾಗುತ್ತದೆ.

ನಾನು ಎರಡು ಹೋಮ್ ಲೋನ್‌ಗಳನ್ನು ಪಡೆಯಬಹುದೇ?

ನೀವು ಉತ್ತಮ ಕ್ರೆಡಿಟ್ ಇತಿಹಾಸದೊಂದಿಗೆ ಆರ್ಥಿಕವಾಗಿ ಸಾಮರ್ಥ್ಯ ಹೊಂದಿದ್ದರೆ, ಏಕೆ ಪಡೆಯಬಾರದು? ಒಬ್ಬ ವ್ಯಕ್ತಿಯು ಕೇವಲ ಒಂದು ಹೋಮ್ ಲೋನ್‌ ಮಾತ್ರ ತೆಗೆದುಕೊಳ್ಳಬೇಕು ಎಂದು ನಿರ್ಬಂಧಿಸುವ ಯಾವುದೇ ಲಿಖಿತ ನಿಯಮ ಅಥವಾ ಕಾನೂನು ಇಲ್ಲ. ಹೀಗಾಗಿ, ನೀವು ಬಯಸುವಷ್ಟು ಹೋಮ್ ಲೋನ್‌ಗಳಿಗೆ ಅಪ್ಲೈ ಮಾಡಬಹುದು - ಅದು ಕೇವಲ ಎರಡು ಅಥವಾ ಅದಕ್ಕಿಂತ ಹೆಚ್ಚಾಗಿರಬಹುದು. ಹಿಂದಿನ ಹೋಮ್ ಲೋನ್‌ಗಳನ್ನು ಮರುಪಾವತಿಸುವಲ್ಲಿ ಉತ್ತಮ ಟ್ರ್ಯಾಕ್ ರೆಕಾರ್ಡ್ ಹೊಂದಿರುವ ಆಧಾರದ ಮೇಲೆ ಆಸ್ತಿ ಮತ್ತು ರಿಯಲ್ ಎಸ್ಟೇಟ್ ಹೂಡಿಕೆದಾರರು ಸಾಮಾನ್ಯವಾಗಿ ಒಂದಕ್ಕಿಂತ ಹೆಚ್ಚು ಹೋಮ್ ಲೋನ್ ತೆಗೆದುಕೊಳ್ಳುತ್ತಾರೆ. ಅನೇಕ ಹೋಮ್ ಲೋನ್ ಇಎಂಐಗಳನ್ನು ಪಾವತಿಸುವುದು ಆರ್ಥಿಕವಾಗಿ ದೊಡ್ಡ ಹೊರೆಯಾಗಬಹುದು. ಆದ್ದರಿಂದ, ಎರಡು ಅಥವಾ ಅದಕ್ಕಿಂತ ಹೆಚ್ಚು ಹೋಮ್ ಲೋನ್‌ಗಳನ್ನು ತೆಗೆದುಕೊಳ್ಳುವ ಮೊದಲು ಸರಿಯಾದ ಫೈನಾನ್ಶಿಯಲ್ ಯೋಜನೆ ಹೊಂದಿರುವುದನ್ನು ನಮ್ಮ ಎಕ್ಸ್‌ಪರ್ಟ್ ಶಿಫಾರಸು ಮಾಡುತ್ತಾರೆ. ಎರಡು ಅಥವಾ ಹೆಚ್ಚು ಹೋಮ್ ಲೋನ್‌ಗಳನ್ನು ಪಡೆಯುವುದು ಹೇಗೆ ಎಂಬುದರ ಬಗ್ಗೆ ಸರಿಯಾದ ಮಾರ್ಗದರ್ಶನಕ್ಕಾಗಿ ಇಂದೇ ನಮ್ಮ ಗ್ರಾಹಕ ಸಹಾಯವಾಣಿಯನ್ನು ಸಂಪರ್ಕಿಸಿ!

ಹೋಮ್ ಲೋನ್‌ಗೆ ಅಪ್ಲೈ ಮಾಡಲು ಕನಿಷ್ಠ ವಯಸ್ಸು ಎಷ್ಟು?

ಪಿಎನ್‌ಬಿ ಹೌಸಿಂಗ್‌ನಿಂದ ಹೋಮ್ ಲೋನ್‌ಗೆ ಅಪ್ಲೈ ಮಾಡುವ ಸಮಯದಲ್ಲಿ ನಿಮ್ಮ ವಯಸ್ಸು 21 ವರ್ಷಗಳಾಗಿರಬೇಕು.

ಹೋಮ್ ಲೋನ್ ಅರ್ಹತೆಯನ್ನು ಲೆಕ್ಕ ಹಾಕುವುದು ಹೇಗೆ?

ನಮ್ಮ ಆನ್ಲೈನ್ ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್‌ನಲ್ಲಿ ನಿಮ್ಮ ವಿವರಗಳನ್ನು ಭರ್ತಿ ಮಾಡುವ ಮೂಲಕ ನೀವು ಅರ್ಹರಾಗಿರುವ ಲೋನ್ ಮೊತ್ತವನ್ನು ಪರಿಶೀಲಿಸಬಹುದು.

ಹೋಮ್ ಲೋನ್ ಅರ್ಹತೆ ವಯಸ್ಸಿನೊಂದಿಗೆ ಲಿಂಕ್ ಆಗಿದೆಯೇ?

ಹೌದು, ಲೋನ್ ಮೆಚ್ಯೂರಿಟಿ ಸಮಯದಲ್ಲಿ ನಿಮ್ಮ ವಯಸ್ಸು 70 ವರ್ಷಗಳಿಗಿಂತ ಹೆಚ್ಚಾಗಿರಬಾರದು. ಉದಾಹರಣೆಗೆ: ನೀವು 45 ವರ್ಷ ವಯಸ್ಸಿನವರಾಗಿದ್ದರೆ, ನೀವು ಗರಿಷ್ಠ 25 ವರ್ಷಗಳಿಗೆ ಲೋನ್ ಪಡೆಯಬಹುದು ಮತ್ತು ಇಎಂಐ ಆ ಲೋನ್ ಅವಧಿಯುದ್ದಕ್ಕೂ ಹರಡುತ್ತದೆ.

Request Call Back at PNB Housing
ಕಾಲ್ ಬ್ಯಾಕ್ ಮಾಡಿ