PNB Housing Finance Limited

ಎನ್ಎಸ್ಇ:

ಬಿಎಸ್ಇ:

ಕೊನೆಯ ಅಪ್ಡೇಟ್:

()
ಸರಾಸರಿ ರೇಟಿಂಗ್
ಹಂಚಿಕೊಳ್ಳಿ
ಕಾಪಿ ಮಾಡಿ

ಕಂಪನಿಯ ಫಿಕ್ಸೆಡ್ ಡೆಪಾಸಿಟ್‌ನಲ್ಲಿ ನೋಡಬೇಕಾದ 5 ವಿಷಯಗಳು

give your alt text here

ಕಂಪನಿ ಫಿಕ್ಸೆಡ್ ಡೆಪಾಸಿಟ್‌ಗಳು (ಎಫ್‌ಡಿಗಳು) ಸಾಮಾನ್ಯ ಬ್ಯಾಂಕ್ ಡೆಪಾಸಿಟ್‌ಗಳಿಗಿಂತ ಹೆಚ್ಚಿನ ಆದಾಯದ ದರವನ್ನು ನೀಡಬಹುದು. ನಿಮ್ಮ ಪೋರ್ಟ್‌ಫೋಲಿಯೋದ ವೈವಿಧ್ಯತೆಯ ಭಾಗವಾಗಿ, ಕಂಪನಿ ಎಫ್‌ಡಿಗಳಲ್ಲಿ ಹೂಡಿಕೆ ಮಾಡಲು ಸಲಹೆ ನೀಡಲಾಗುತ್ತದೆ. ಆದರೆ ಹೂಡಿಕೆ ಮಾಡುವ ಮೊದಲು ನೀವು ಕೆಲವು ಪ್ರಮುಖ ವಿಷಯಗಳನ್ನು ಗಮನಿಸಬೇಕು

ನೀವು ಕಂಪನಿ ಎಫ್‌ಡಿ ಆಯ್ಕೆ ಮಾಡುವ ಮೊದಲು ಗಮನಿಸಬೇಕಾದ 5 ವಿಷಯಗಳು ಇಲ್ಲಿವೆ:

  1. ಕ್ರೆಡಿಟ್ ರೇಟಿಂಗ್: ಡೆಪಾಸಿಟ್ ಸ್ವೀಕರಿಸುತ್ತಿರುವ ಕಂಪನಿಯ ಕ್ರೆಡಿಟ್ ಅರ್ಹತೆಯನ್ನು ಗಮನಿಸುವ ರೇಟಿಂಗ್ ಏಜೆನ್ಸಿಯಿಂದ ರೇಟಿಂಗ್ ಅನ್ನು ನಿಗದಿಪಡಿಸಲಾಗಿದೆ. ನೀವು ಕಂಪನಿ ಡೆಪಾಸಿಟ್ ಆಯ್ಕೆ ಮಾಡಿದಾಗ, ರೇಟಿಂಗ್ ಇರದ ಫಿಕ್ಸೆಡ್ ಡೆಪಾಸಿಟ್‌ಗಳನ್ನು ಆಯ್ಕೆ ಮಾಡಬೇಡಿ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿ (ಎನ್‌ಬಿಎಫ್‌ಸಿ) ಡೆಪಾಸಿಟ್‌ಗಳಿಗೆ ಡೆಪಾಸಿಟ್ ನೀಡುವ ಮೊದಲು ಕನಿಷ್ಠ ಎ ರೇಟಿಂಗ್ ಹೊಂದುವುದನ್ನು ಕಡ್ಡಾಯಗೊಳಿಸಿದೆ. ನೀವು ಎಎಎ ರೇಟಿಂಗ್‌ಗಳನ್ನು ಹೊಂದಿರುವ ಸ್ಕೀಮ್‌ಗಳನ್ನು ಪರಿಗಣಿಸಬೇಕು.
  2. ಹಿನ್ನೆಲೆ: ನೀವು ಕಂಪನಿಯ ಹಿನ್ನೆಲೆಯ ಬಗ್ಗೆ ತಿಳಿದುಕೊಳ್ಳುವುದು ಅನಿವಾರ್ಯವಾಗಿದೆ. ನೀವು ಮರುಪಾವತಿ ಇತಿಹಾಸ ಮತ್ತು ಅಂತಹ ಸ್ಥಾಪಿತ ಕಂಪನಿಗಳ ಹೆಸರನ್ನು ಸಂಶೋಧಿಸಬಹುದು ಮತ್ತು ಸುರಕ್ಷಿತ ಕಂಪನಿ ಡೆಪಾಸಿಟ್ ಆಯ್ಕೆ ಮಾಡಲು ನಿಮ್ಮ ಹಣಕಾಸು ಸಲಹೆಗಾರರ ಮಾರ್ಗದರ್ಶನವನ್ನು ಬಳಸಬಹುದು.
  3. ಲಿಕ್ವಿಡಿಟಿ: ಕಂಪನಿ ಎಫ್‌ಡಿಗಳು ಒಂದು ಅವಧಿಯ ನಂತರ ನೀವು ಹಣವನ್ನು ವಿತ್‌ಡ್ರಾ ಮಾಡಬಹುದಾದ ಅರ್ಥದಲ್ಲಿ ಲಿಕ್ವಿಡಿಟಿಯ ಅಂಶವನ್ನು ಹೊಂದಿವೆ. ಲಾಕ್-ಇನ್ ಅವಧಿಯು 3 ತಿಂಗಳಷ್ಟು ಕಡಿಮೆ ಇರಬಹುದು. ನೀವು ಮೆಚ್ಯೂರ್‌ಗಿಂತ ಮುಂಚಿತವಾಗಿ ವಿತ್‌ಡ್ರಾವಲ್ ಮಾಡಿದರೆ ಈ ಕೆಳಗಿನ ದಂಡಗಳು ಅನ್ವಯವಾಗುತ್ತವೆ:
    ಹೂಡಿಕೆದಾರರ ವರ್ಗ ಅಕಾಲಿಕ ವಾಪಸಾತಿ ಪಾವತಿಸಬೇಕಾದ ಬಡ್ಡಿ ಅಕಾಲಿಕ ವಾಪಸಾತಿ ಪಾವತಿಸಬೇಕಾದ ಬಡ್ಡಿ
    ವೈಯಕ್ತಿಕ ಹೂಡಿಕೆದಾರ 3 ತಿಂಗಳ ನಂತರ ಆದರೆ 6 ತಿಂಗಳ ಮೊದಲು 4 ಪ್ರತಿಶತ 6 ತಿಂಗಳ ನಂತರ ಆದರೆ ಮೆಚ್ಯೂರಿಟಿ ದಿನಾಂಕಕ್ಕಿಂತ ಮೊದಲು ಡೆಪಾಸಿಟ್‌ ಚಾಲ್ತಿಯಲ್ಲಿದ್ದ ಅವಧಿಗೆ ಸಾರ್ವಜನಿಕ ಡೆಪಾಸಿಟ್ ಮೇಲಿನ ಬಡ್ಡಿಗಿಂತ 1 ಪ್ರತಿಶತ ಕಡಿಮೆ ಇದೆ.
    ಇತರೆ ಹೂಡಿಕೆದಾರರು 3 ತಿಂಗಳ ನಂತರ ಆದರೆ 6 ತಿಂಗಳ ಮೊದಲು ಯಾವುದೂ ಅಲ್ಲ 6 ತಿಂಗಳ ನಂತರ ಆದರೆ ಮೆಚ್ಯೂರಿಟಿ ದಿನಾಂಕಕ್ಕಿಂತ ಮೊದಲು ಡೆಪಾಸಿಟ್‌ ಚಾಲ್ತಿಯಲ್ಲಿದ್ದ ಅವಧಿಗೆ ಸಾರ್ವಜನಿಕ ಡೆಪಾಸಿಟ್ ಮೇಲಿನ ಬಡ್ಡಿಗಿಂತ 1 ಪ್ರತಿಶತ ಕಡಿಮೆ ಇದೆ.
  4. ಬಡ್ಡಿ ಪಾವತಿಗಳು: ನೀವು ಮಾಸಿಕ, ತ್ರೈಮಾಸಿಕ, ಅರ್ಧ-ವಾರ್ಷಿಕ ಅಥವಾ ವಾರ್ಷಿಕವಾಗಿ ಬಡ್ಡಿ ಪಾವತಿಗಳನ್ನು ಪಡೆಯಲು ಆಯ್ಕೆ ಮಾಡಬಹುದು. ಬಡ್ಡಿ ಪಾವತಿಯ ಆವರ್ತನವನ್ನು ಅವಲಂಬಿಸಿ ಬಡ್ಡಿ ದರವು ಬದಲಾಗಬಹುದು ಎಂಬುದನ್ನು ದಯವಿಟ್ಟು ಗಮನಿಸಿ.
  5. ಸೌಲಭ್ಯಗಳು: ಕಂಪನಿ ಫಿಕ್ಸೆಡ್ ಡೆಪಾಸಿಟ್‌ಗಳು ಡೆಪಾಸಿಟರ್‌ಗಳಿಗೆ ಅನೇಕ ಸೌಲಭ್ಯಗಳನ್ನು ಒದಗಿಸುತ್ತವೆ. ಇವುಗಳಲ್ಲಿ ಕೆಲವು:
    ನಾಮ ನಿರ್ದೇಶನ: ಡೆಪಾಸಿಟ್ ಮೆಚ್ಯೂರಿಟಿಗೂ ಮೊದಲು ನೀವು ಮರಣಿಸಿದ ಸಂದರ್ಭದಲ್ಲಿ ನಿಮ್ಮ ಡೆಪಾಸಿಟ್‌ನ ಆದಾಯವನ್ನು ಪಡೆಯಬಹುದಾದ ನಾಮಿನಿಯನ್ನು ನೀವು ನೇಮಿಸಬಹುದು.
    ಸಂಪೂರ್ಣ ನಗದೀಕರಣ: ನೀವು ನಿಮ್ಮ ಬಡ್ಡಿ ಪಾವತಿಗಳನ್ನು ಪಡೆಯಬಹುದು ಅಥವಾ ಎಟ್ ಪಾರ್ ಚೆಕ್‌ ಪಡೆಯುವ ಮೂಲಕ ನಿಮ್ಮ ಎಫ್‌ಡಿಗಳನ್ನು ನಗದು ಮಾಡಬಹುದು.
    ಎಫ್‌ಡಿಗಳ ಮೇಲೆ ಲೋನ್‌ಗಳು: ನಿಮ್ಮ ಕಂಪನಿ ಫಿಕ್ಸೆಡ್ ಡೆಪಾಸಿಟ್‌ಗಳ ಮೇಲೆ ಡೆಪಾಸಿಟ್ ಮೊತ್ತದ 75 ಪ್ರತಿಶತದವರೆಗೆ ಲೋನ್ ತೆಗೆದುಕೊಳ್ಳಬಹುದು.

ಓದಲೇಬೇಕಾದವು: ಕಾರ್ಪೊರೇಟ್ ಫಿಕ್ಸೆಡ್ ಡೆಪಾಸಿಟ್‌ಗಳು - ಪ್ರಯೋಜನಗಳು, ತೆರಿಗೆಗಳು ಮತ್ತು ಸುರಕ್ಷತೆ

ಡೆಪಾಸಿಟರ್ ಹಿನ್ನೆಲೆ ಮತ್ತು ಡೆಪಾಸಿಟ್ ನೀಡುವ ಕಂಪನಿಯ ಕ್ರೆಡಿಟ್ ಅರ್ಹತೆಗೆ ಸಂಬಂಧಿಸಿದಂತೆ ತನ್ನ ಹೋಮ್‌ವರ್ಕ್ ಮತ್ತು ಸಂಶೋಧನೆಗಳನ್ನು ಶ್ರದ್ಧೆಯಿಂದ ಮಾಡಿದರೆ ಕಂಪನಿಯ ಫಿಕ್ಸೆಡ್ ಡೆಪಾಸಿಟ್‌ಗಳು ಸುರಕ್ಷಿತವಾಗಿರುತ್ತವೆ.

ಪಿಎನ್‌ಬಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ 2 ದಶಕಗಳಿಗಿಂತ ಹೆಚ್ಚು ಹಳೆಯ ಡೆಪಾಸಿಟ್ ತೆಗೆದುಕೊಳ್ಳುವ ಕಂಪನಿಯಾಗಿದೆ. ಕಂಪನಿಯು ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ಅಧೀನದಲ್ಲಿದೆ ಮತ್ತು ಇದು ಮಾರುಕಟ್ಟೆಯಲ್ಲಿ ಪ್ರಸಿದ್ಧ ಹೆಸರಾಗಿದೆ.

ಕಂಪನಿಯ ಫಿಕ್ಸೆಡ್ ಡೆಪಾಸಿಟ್‌ಗಳಿಗೆ ಕ್ರಿಸಿಲ್ ಎಫ್‌ಎಎಎ ರೇಟಿಂಗ್ ನೀಡಿದ್ದು, ಇದು ರೇಟಿಂಗ್ ಏಜೆನ್ಸಿಯು ನೀಡುವ ಅತ್ಯಧಿಕ ಸುರಕ್ಷತಾ ರೇಟಿಂಗ್ ಆಗಿದೆ.

ಕೇವಲ 3 ನಿಮಿಷಗಳಲ್ಲಿ
3 ನಿಮಿಷಗಳು, ತೊಂದರೆ-ರಹಿತ!

ಪಿಎನ್‌ಬಿ ಹೌಸಿಂಗ್

ಅನ್ವೇಷಿಸಲು ಇತರ ವಿಷಯಗಳು

Request Call Back at PNB Housing
ಕಾಲ್ ಬ್ಯಾಕ್ ಮಾಡಿ