PNB Housing Finance Limited

ಎನ್ಎಸ್ಇ:

ಬಿಎಸ್ಇ:

ಕೊನೆಯ ಅಪ್ಡೇಟ್:

ಏಕೆ 

ಪಿಎನ್‌ಬಿ ಹೌಸಿಂಗ್ ಹೋಮ್ ಲೋನ್ ಆಯ್ಕೆ ಮಾಡಬೇಕು?

ಹೊಂದಿಕೊಳ್ಳುವಿಕೆ
ಡಾಕ್ಯುಮೆಂಟೇಶನ್‌ನಲ್ಲಿ
ಹೆಚ್ಚಿನ ಕಾಲಾವಧಿ
ಲೋನ್
90% ವರೆಗೆ ಫಂಡ್
ಲೋನ್ ಮೊತ್ತ
ತ್ವರಿತ ಮಂಜೂರಾತಿ
ಮತ್ತು ವಿತರಣೆ
ಕಸ್ಟಮೈಸ್ ಮಾಡಲಾದ
ಆದಾಯದ ಪ್ರಕಾರ ಅರ್ಹತೆ
ಡೋರ್‌ಸ್ಟೆಪ್
ಸೇವೆ

ಗ್ರಾಹಕರ ಪ್ರಶಂಸಾಪತ್ರಗಳು

ನಮ್ಮ ಗ್ರಾಹಕರ ಮಾತು ಕೇಳಿ!

ಹುಡುಕಿ

ನಿಮ್ಮ ಅಗತ್ಯಗಳಿಗೆ ಸರಿಯಾದ ಪರಿಹಾರ

ಹೋಮ್ ಲೋನ್ ಗೊಂದಲಮಯವಾಗಿರಬಹುದು. ಪ್ರಶ್ನೆಗಳನ್ನು ಹೊಂದಿದ್ದೀರಾ? ಯಾವ ತೊಂದರೆಯೂ ಇಲ್ಲ! ನಿಮಗೆ ಪ್ರತಿ ಹೆಜ್ಜೆಯಲ್ಲಿಯೂ ಸಹಾಯ ಮಾಡಲು ನಾವಿದ್ದೇವೆ. ಪಿಎನ್‌ಬಿ ಹೌಸಿಂಗ್ ಫೈನಾನ್ಸ್‌ನಲ್ಲಿ, ನಿಮ್ಮ ಎಲ್ಲಾ ಹೋಮ್ ಫೈನಾನ್ಸ್ ಪ್ರಶ್ನೆಗಳಿಗೆ ತ್ವರಿತ ಪರಿಹಾರವನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ.

ಮೊದಲ ಬಾರಿಯ ಖರೀದಿದಾರ

ಅಸ್ತಿತ್ವದಲ್ಲಿರುವ
ಪಿಎನ್‌ಬಿ ಹೌಸಿಂಗ್ ಗ್ರಾಹಕ

ಪಿಎನ್‌ಬಿ ಹೌಸಿಂಗ್‌ಗೆ ರಿಫೈನಾನ್ಸ್ / ಬ್ಯಾಲೆನ್ಸ್ ಟ್ರಾನ್ಸ್‌ಫರ್

ರೋಶ್ನಿ ಹೋಮ್ ಲೋನ್‌ ಹುಡುಕುತ್ತಿದ್ದೀರಾ

ಆಸ್ತಿ ಮೇಲಿನ ಲೋನ್

ನಿಮ್ಮ
ಪ್ರಸ್ತುತ ಆದಾಯದ ಸ್ಥಿತಿ?
ನಾನು ಸಂಬಳ ಪಡೆಯುವ ವ್ಯಕ್ತಿ
ನಾನು ಸಂಬಳ ಪಡೆಯದ/ಸ್ವಯಂ ಉದ್ಯೋಗಿ ವ್ಯಕ್ತಿ
ಮೌಲ್ಯಯುತ ಪಿಎನ್‌ಬಿ ಹೌಸಿಂಗ್ ಗ್ರಾಹಕರು

ನೀವು ಈಗ ನಿಮ್ಮ ಬೆರಳತುದಿಯಲ್ಲಿ ನಮ್ಮ ಗ್ರಾಹಕ ಸಹಾಯವಾಣಿ ಪರಿಹಾರಗಳ ಅನುಕೂಲ ಮತ್ತು ಸುಲಭವನ್ನು ಆನಂದಿಸಬಹುದು. ದರ ಪರಿವರ್ತನೆ ಮತ್ತು ಭಾಗಶಃ ಪಾವತಿಯಂತಹ ವಿವಿಧ ಸೇವೆಗಳನ್ನು ನೀವು ಆನ್ಲೈನ್‌ನಲ್ಲಿಯೇ, ಶಾಖೆಗೆ ಭೇಟಿ ನೀಡದೆ ಪಡೆಯಬಹುದು. ನಮ್ಮ ಸುರಕ್ಷಿತ ಆನ್ಲೈನ್ ಸೇವೆಗಳೊಂದಿಗೆ, ನೀವು ಆತ್ಮವಿಶ್ವಾಸದೊಂದಿಗೆ ಮತ್ತು ಯಾವುದೇ ಒತ್ತಡವಿಲ್ಲದೆ ನಿಮ್ಮ ಗರಿಷ್ಠ ಟ್ರಾನ್ಸಾಕ್ಷನ್‌ಗಳನ್ನು ಮಾಡಬಹುದು. ಆದ್ದರಿಂದ ಪಿಎನ್‌ಬಿ ಹೌಸಿಂಗ್‌ನೊಂದಿಗೆ ತೊಂದರೆ ರಹಿತ ಹೋಮ್ ಲೋನ್‌ಗಳಿಂದ ಪ್ರಯೋಜನ ಪಡೆಯಲು ಸಿದ್ಧರಾಗಿ.

ಅಥವಾ

ಸೇವೆಯನ್ನು ಆಯ್ಕೆಮಾಡಿ

ಆನ್ಲೈನ್ ಪಾವತಿ ಮಾಡಿ
ಬಡ್ಡಿ ದರ ಕಡಿತದ ಕುರಿತು ಆಗಾಗ ಕೇಳುವ ಪ್ರಶ್ನೆಗಳು
ಟಾಪ್-ಅಪ್‌ಗೆ ಅಪ್ಲೈ ಮಾಡಿ
ಎರಡನೇ ಮನೆಗಾಗಿ ಹಣಕಾಸು ಹುಡುಕುತ್ತಿದ್ದೀರಾ

ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಲು ಅಥವಾ ಹೆಚ್ಚುವರಿ ಆದಾಯ ಉತ್ಪಾದಿಸಲು ಬಯಸುವವರಿಗೆ ಎರಡನೇ ಹೌಸ್ ಲೋನ್ ಅತ್ಯುತ್ತಮ ಆಯ್ಕೆಯಾಗಿದೆ. ನಾವು ಕೈಗೆಟಕುವ ಬಡ್ಡಿ ದರಗಳು ಮತ್ತು ಹೆಚ್ಚು ಹೊಂದಿಕೊಳ್ಳುವ ಅರ್ಹತಾ ಅವಶ್ಯಕತೆಗಳನ್ನು ಒದಗಿಸುತ್ತೇವೆ, ಮತ್ತು ಸಾಲಗಾರರು ಮನೆ ನಿರ್ಮಾಣ ಅಥವಾ ಖರೀದಿ ಬೆಲೆಯ 90% ವರೆಗೆ ಪಡೆಯಬಹುದು. ಇದಲ್ಲದೆ, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ ಮತ್ತು 24 ಅಡಿಯಲ್ಲಿ ಎರಡನೇ ಹೋಮ್ ಲೋನ್‌ಗಳ ಮೇಲೆ ತೆರಿಗೆ ವಿನಾಯಿತಿಗಳು ಲಭ್ಯವಿವೆ. ಸೆಕ್ಷನ್ 80ಸಿ ಅಸಲು ಪಾವತಿಗಳ ಮೇಲೆ ಗರಿಷ್ಠ 1.5 ಲಕ್ಷ ಕಡಿತಕ್ಕೆ ಅನುಮತಿ ನೀಡುತ್ತದೆ ಹಾಗೂ ಸೆಕ್ಷನ್ 24 ಬಡ್ಡಿ ಪಾವತಿಗಳ ಮೇಲೆ ಗರಿಷ್ಠ 2 ಲಕ್ಷ ಕಡಿತಕ್ಕೆ ಅನುಮತಿ ನೀಡುತ್ತದೆ. ಎರಡನೇ ಹೋಮ್ ಲೋನ್‌ಗೆ ಅಪ್ಲೈ ಮಾಡುವ ಮೊದಲು, ಈ ಲಾಭಗಳ ಜಟಿಲತೆಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಅರ್ಹತೆಯನ್ನು ನಿರ್ಧರಿಸಲು ಇಎಂಐ ಕ್ಯಾಲ್ಕುಲೇಟರ್ ಬಳಸುವುದು ಮುಖ್ಯವಾಗಿದೆ.

ನಾನು ಸಂಬಳ ಪಡೆಯುವ ವ್ಯಕ್ತಿ
ನಾನು ಸಂಬಳ ಪಡೆಯದ/ಸ್ವಯಂ ಉದ್ಯೋಗಿ ವ್ಯಕ್ತಿ
ಕೇವಲ 3 ನಿಮಿಷಗಳಲ್ಲಿ
3 ನಿಮಿಷಗಳು, ತೊಂದರೆ-ರಹಿತ!
ಹೋಮ್ ಲೋನ್‌ ಬ್ಯಾಲೆನ್ಸ್ ಟ್ರಾನ್ಸ್‌ಫರ್

ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ನಿಮ್ಮ ಬಾಕಿ ಉಳಿಕೆಯನ್ನು ಅನುಕೂಲಕರ ಬಡ್ಡಿ ದರದೊಂದಿಗೆ ಪಿಎನ್‌ಬಿ ಹೌಸಿಂಗ್‌ಗೆ ಟ್ರಾನ್ಸ್‌ಫರ್ ಮಾಡಲು ಸಹಕರಿಸುತ್ತದೆ. ಅತ್ಯುತ್ತಮ ಕ್ರೆಡಿಟ್ ಸ್ಕೋರ್, ನಿರಂತರ ಆದಾಯ ಮತ್ತು ಮರುಪಾವತಿ ಟ್ರ್ಯಾಕ್ ರೆಕಾರ್ಡ್ ಮತ್ತು ಆಸ್ತಿ ಡಾಕ್ಯುಮೆಂಟ್‌ಗಳಂಥ ದಾಖಲೆಗಳನ್ನು ಹೊಂದುವ ಮೂಲಕ ನೀವು ಮಾಸಿಕ ಪಾವತಿಗಳು ಮತ್ತು ಒಟ್ಟಾರೆ ಬಡ್ಡಿಯ ಮೇಲೆ ಹಣವನ್ನು ಉಳಿಸಬಹುದು. ಈ ಪ್ರಕ್ರಿಯೆಯು ಅಪ್ಲೈ ಮಾಡುವುದು, ಪೇಪರ್‌ವರ್ಕ್ ಸಲ್ಲಿಸುವುದು, ಶುಲ್ಕಗಳನ್ನು ಪಾವತಿಸುವುದು ಮತ್ತು ಅನುಮೋದನೆಯನ್ನು ಪಡೆಯುವುದನ್ನು ಒಳಗೊಂಡಿದೆ.

ಇನ್ನಷ್ಟು ತಿಳಿಯಿರಿ
ಆಸ್ತಿ ಮೇಲಿನ ಲೋನ್

ಬಿಸಿನೆಸ್ ವಿಸ್ತರಣೆ, ಶಿಕ್ಷಣ, ವೈದ್ಯಕೀಯ ವೆಚ್ಚಗಳು ಮುಂತಾದ ಕಾನೂನುಬದ್ಧ ಉದ್ದೇಶಗಳಿಗಾಗಿ ನಮ್ಮ ಬ್ರಾಂಚ್ ಸ್ಥಳಗಳಲ್ಲಿ ಅಸ್ತಿತ್ವದಲ್ಲಿರುವ ವಸತಿ/ವಾಣಿಜ್ಯ ಆಸ್ತಿಗಳ ಅಡಮಾನದ ಮೇಲೆ ನಾವು ಲೋನ್‌ಗಳನ್ನು ಒದಗಿಸುತ್ತೇವೆ. ನಾವು ವಿಶಾಲ ಶ್ರೇಣಿಯ ನಾನ್-ಹೋಮ್ ಲೋನ್ ಪ್ರಾಡಕ್ಟ್‌ಗಳನ್ನು, ಭಾರತದಾದ್ಯಂತ ಬ್ರಾಂಚ್ ನೆಟ್ವರ್ಕ್, ಮನೆಬಾಗಿಲಿನ ಸೇವೆಗಳು, ವಿತರಣೆಯ ನಂತರದ ಅತ್ಯುತ್ತಮ ಸೇವೆಗಳು, ನೈತಿಕ ಅಭ್ಯಾಸಗಳು ಮತ್ತು ವಿವಿಧ ಮರುಪಾವತಿ ಆಯ್ಕೆಗಳನ್ನು ಹೊಂದಿದ್ದೇವೆ. ವೆಚ್ಚ ಹೆಚ್ಚಳದ ಸಂದರ್ಭದಲ್ಲಿ ನಮ್ಮ ಅನುಭವಿ ತಂಡವು ಗ್ರಾಹಕರ ತೃಪ್ತಿ ಮತ್ತು ಲೋನ್ ಮೊತ್ತವನ್ನು ಹೆಚ್ಚಿಸುವುದನ್ನು ಖಚಿತಪಡಿಸುತ್ತದೆ.

ಡಾಕ್ಯುಮೆಂಟ್ ಚೆಕ್‌ಲಿಸ್ಟ್
ಪ್ರಕ್ರಿಯಾ ಶುಲ್ಕಗಳು
ಅರ್ಹತಾ ಮಾನದಂಡ
ಪ್ರಾಪರ್ಟಿ ಇನ್ಶೂರೆನ್ಸ್/ಗ್ರಾಹಕರ ಸುರಕ್ಷತೆ ಮೇಲಿನ ಲೋನ್
ಆಸ್ತಿ ಮೇಲಿನ ಲೋನ್‌ಗಾಗಿ ನಮ್ಮನ್ನು ಸಂಪರ್ಕಿಸಿ
ಇನ್ನಷ್ಟು ತಿಳಿಯಿರಿ
ಕೇವಲ 3 ನಿಮಿಷಗಳಲ್ಲಿ
3 ನಿಮಿಷಗಳು, ತೊಂದರೆ-ರಹಿತ!

ಪಿಎನ್‌ಬಿ ಹೌಸಿಂಗ್

ಹೋಮ್ ಲೋನ್ ಕ್ಯಾಲ್ಕುಲೇಟರ್‌ಗಳು

ಇಎಂಐ ಕ್ಯಾಲ್ಕುಲೇಟರ್
ನಮ್ಮ ಸುಲಭ ಮತ್ತು ಸರಳ ಹೋಮ್ ಲೋನ್ ಇಎಂಐ ಕ್ಯಾಲ್ಕುಲೇಟರ್‌ ಮೂಲಕ ನಿಮ್ಮ ಇಎಂಐಗಳನ್ನು ಲೆಕ್ಕ ಹಾಕಿ
ಅರ್ಹತಾ ಕ್ಯಾಲ್ಕುಲೇಟರ್
ಆದಾಯ, ಕಾಲಾವಧಿ, ಮಾಸಿಕ ಆದಾಯದ ಇತರ ಮೂಲಗಳು, ಮುಂಚಿತ-ಅಸ್ತಿತ್ವದಲ್ಲಿರುವ ಲೋನ್‌ಗಳು ಮತ್ತು ಇಎಂಐಗಳನ್ನು ಪರಿಗಣಿಸುವ ಮೂಲಕ ನಿಮ್ಮ ಅರ್ಹತೆಯನ್ನು ನಾವು ಮೌಲ್ಯಮಾಪನ ಮಾಡುತ್ತೇವೆ.
 ಹೋಮ್ ಲೋನ್ ಕೈಗೆಟುಕುವಿಕೆ
ಕ್ಯಾಲ್ಕುಲೇಟರ್ 
ನೀವು ಖರೀದಿಸಬಹುದಾದ ಆಸ್ತಿಯ ಮೌಲ್ಯ ಮತ್ತು ನಿಮ್ಮ ಅರ್ಹ ಹೋಮ್ ಲೋನ್ ಮೊತ್ತವನ್ನು ಅಳೆಯಲು ಸಹಾಯ ಮಾಡುವ ಕ್ಯಾಲ್ಕುಲೇಟರ್ ಆಗಿದೆ.
ಸ್ಟ್ಯಾಂಪ್ ಡ್ಯೂಟಿ ಮತ್ತು ಮುಂಗಡ ವೆಚ್ಚಗಳ ಕ್ಯಾಲ್ಕುಲೇಟರ್
ಸರ್ಕಾರಿ ವೆಚ್ಚಗಳು, ಸ್ಟ್ಯಾಂಪ್ ಡ್ಯೂಟಿ ಮತ್ತು ಶುಲ್ಕಗಳು ಸೇರಿದಂತೆ ಆಸ್ತಿಯನ್ನು ಖರೀದಿಸುವ ಇತರ ವೆಚ್ಚಗಳನ್ನು ಅಂದಾಜು ಮಾಡಿ.
ಕ್ರೆಡಿಟ್ ಚೆಕ್ 
ನಿಮ್ಮ ಕ್ರೆಡಿಟ್ ಸ್ಕೋರ್ ಪರಿಶೀಲಿಸಿ ಮತ್ತು ನೀವು ಮಾರ್ಕೆಟ್‌ನಲ್ಲಿ ಅತ್ಯುತ್ತಮ ಲೋನ್ ದರಗಳನ್ನು ಪಡೆಯಬಹುದೇ ಎಂದು ನಿರ್ಧರಿಸಿ.

ಪ್ರಶ್ನೆಗಳಿವೆಯೇ?

ನಿಮಗೆ ಸಹಾಯ ಮಾಡಲು ನಾವು ಸಂತೋಷಪಡುತ್ತೇವೆ.

ಸಂಜಯ್ ವರ್ಮಾ

ಮಾರಾಟ ನಿರ್ವಾಹಕ, ಪಿಎನ್‌ಬಿ ಹೌಸಿಂಗ್

ತ್ವರಿತ ಹೋಮ್ ಲೋನ್ ಅನುಮೋದನೆಗಳನ್ನು ಒದಗಿಸುವ 

ಪಿಎನ್‌ಬಿ ಹೌಸಿಂಗ್‌ನ ಎಸಿಇ ಪ್ಲಾಟ್‌ಫಾರ್ಮ್

  • ಸೂಪರ್‌ಫಾಸ್ಟ್ ಆನ್-ಬೋರ್ಡಿಂಗ್
  • ಪೂರ್ಣಗೊಳಿಸಿ ಲೋನ್ ಅಪ್ಲಿಕೇಶನ್ ನಿಮಿಷಗಳಲ್ಲಿ
  • ವೇಗದ ಮಂಜೂರಾತಿಗಳು ಮತ್ತು ವಿತರಣೆಗಳು
  • ಸಂಪೂರ್ಣ ಸುರಕ್ಷಿತ ಮತ್ತು ಎನ್‌ಕ್ರಿಪ್ಟ್ ಮಾಡಲಾದ ಅಪ್ಲಿಕೇಶನ್

ಎಸಿಇ ಪ್ಲಾಟ್‌ಫಾರ್ಮ್‌ನಲ್ಲಿ ಹೋಮ್ ಲೋನ್‌ಗೆ ಅಪ್ಲೈ ಮಾಡುವುದು ಹೇಗೆ

video-Icon
How to Apply for a Home Loan on the ACE platform

ಪಿಎನ್‌ಬಿ ಹೌಸಿಂಗ್ 

ಹೋಮ್ ಲೋನ್ ಪ್ರಾಡಕ್ಟ್‌ಗಳು

Loan_product

ಪಿಎನ್‌ಬಿ ಹೌಸಿಂಗ್ ಬ್ಲಾಗ್‌ಗಳು

ಪಿಎನ್‌ಬಿ ಹೌಸಿಂಗ್ ನ್ಯೂಸ್ ಮತ್ತು ಅಪ್ಡೇಟ್‌ಗಳು

ಓದಿ ಅಪ್ಡೇಟೆಡ್

ಆಗಾಗ ಕೇಳುವ ಪ್ರಶ್ನೆಗಳು

ಹೋಮ್ ಲೋನ್‌ಗೆ ಅಪ್ಲೈ ಮಾಡುವ ಪ್ರಕ್ರಿಯೆ ಏನು?

ಹಂತ 1:ಅಗತ್ಯವಿರುವ ಡಾಕ್ಯುಮೆಂಟ್‌ಗಳೊಂದಿಗೆ ನಿಮ್ಮ ಲೋನ್ ಅಪ್ಲಿಕೇಶನ್ ಸಲ್ಲಿಸಿ.

ಹಂತ 2:ವಿವಿಧ ಅರ್ಹತೆ ಮತ್ತು ಫಂಡಿಂಗ್ ನಿಯಮಗಳ ಆಧಾರದಲ್ಲಿ ನಿಮ್ಮ ಅಪ್ಲಿಕೇಶನ್‌ನ ಮೌಲ್ಯಮಾಪನ ಮಾಡಲಾಗುತ್ತದೆ.

ಹಂತ 3:ಲೋನ್ ಮೊತ್ತವನ್ನು ತಲುಪಲು ಆಸ್ತಿ ಮೌಲ್ಯ ಮತ್ತು ಆಸ್ತಿಯ ಕಾನೂನು ಕ್ಲಿಯರೆನ್ಸ್ ಅನ್ನು ನಿರ್ಧರಿಸಲು ಕಂಪನಿಯ ಪ್ರತಿನಿಧಿಯು ಆಸ್ತಿ ಮೌಲ್ಯಮಾಪನ ಮತ್ತು ಶೀರ್ಷಿಕೆ ಪರಿಶೀಲನೆಯನ್ನು ನಡೆಸಬಹುದು.

ಹಂತ 4:ಆಂತರಿಕ ಮತ್ತು ನಿಯಂತ್ರಕ ಮಾರ್ಗಸೂಚಿಗಳ ಆಧಾರದ ಮೇಲೆ, ಪಿಎನ್‌ಬಿ ಹೌಸಿಂಗ್ ಲೋನ್ ಅಪ್ಲಿಕೇಶನ್ ಅನ್ನು ಅನುಮೋದಿಸಬಹುದು ಅಥವಾ ತಿರಸ್ಕರಿಸಬಹುದು.

ಹಂತ 5:ಒಪ್ಪಂದಗಳ ಸಹಿ, ನೋಂದಾಯಿತ ಆಸ್ತಿ ಪತ್ರಗಳ ಹಸ್ತಾಂತರ ಮತ್ತು ಪೋಸ್ಟ್-ಡೇಟೆಡ್ ಚೆಕ್‌ಗಳು/ಇಸಿಎಸ್ ಸಲ್ಲಿಸುವುದರ ಜೊತೆಗೆ ಮೂಲ ಆಸ್ತಿ ಡಾಕ್ಯುಮೆಂಟ್‌ಗಳನ್ನು ಸಲ್ಲಿಸುವ ಅಗತ್ಯವಿದೆ.

ಹಂತ 6: ಎಲ್ಲಾ ಡಾಕ್ಯುಮೆಂಟ್‌ಗಳನ್ನು ಆರ್ಡರ್‌ನಲ್ಲಿ ಪಡೆದ ನಂತರ, ನಿರ್ಮಾಣದ ಪ್ರಗತಿಯ ಆಧಾರದ ಮೇಲೆ ಪಿಎನ್‌ಬಿ ಹೌಸಿಂಗ್ ಡೆವಲಪರ್/ ಕಾಂಟ್ರಾಕ್ಟರ್‌ಗೆ ಲೋನ್ ಮೊತ್ತವನ್ನು ವಿತರಿಸುತ್ತದೆ. ವಿತರಣೆಯ ನಂತರ ಇಎಂಐ/ಮುಂಚಿತ-ಇಎಂಐ ಆರಂಭವಾಗುತ್ತದೆ.

ನಾನು ಹೋಮ್ ಲೋನ್‌ಗೆ ಅರ್ಹನಾಗಿದ್ದೇನೆಯೇ?

ನೀವು ಭಾರತೀಯ ನಾಗರಿಕರಾಗಿದ್ದರೆ ಅಥವಾ ಭಾರತೀಯ ಮೂಲದ ವ್ಯಕ್ತಿಯಾಗಿದ್ದರೆ ಮತ್ತು ಸಂಬಳ ಪಡೆಯುವ ವ್ಯಕ್ತಿ / ಸ್ವಯಂ ಉದ್ಯೋಗಿ ವೃತ್ತಿಪರ/ಬಿಸಿನೆಸ್ ಮ್ಯಾನ್ ಆಗಿದ್ದರೆ ನೀವು ಲೋನ್‌ಗೆ ಅರ್ಹರಾಗುತ್ತೀರಿ. ವೃತ್ತಿಪರ ಆದಾಯ, ವಯಸ್ಸು, ಅರ್ಹತೆಗಳು, ಅವಲಂಬಿತರ ಸಂಖ್ಯೆ, ಸಹ-ಅರ್ಜಿದಾರರ ಆದಾಯ, ಸ್ವತ್ತುಗಳು, ಹೊಣೆಗಾರಿಕೆಗಳು, ಉದ್ಯೋಗದ ಸ್ಥಿರತೆ ಮತ್ತು ಮುಂದುವರಿಕೆ, ಉಳಿತಾಯ ಮತ್ತು ಮುಂಚಿತ ಕ್ರೆಡಿಟ್ ಇತಿಹಾಸದ ಆಧಾರದ ಮೇಲೆ ನಿಮ್ಮ ಲೋನ್ ಅರ್ಹತೆಯನ್ನು ಪಿಎನ್‌ಬಿ ಎಚ್‌ಎಫ್‌ಎಲ್‌ ನಿರ್ಧರಿಸುತ್ತದೆ. ಇದಲ್ಲದೆ, ಲೋನ್ ಅರ್ಹತೆಯು ನೀವು ಆಯ್ಕೆ ಮಾಡಿದ ಆಸ್ತಿಯ ಮೌಲ್ಯವನ್ನು ಕೂಡ ಅವಲಂಬಿಸಿರುತ್ತದೆ.

ಆಸ್ತಿ ಮೌಲ್ಯದ ಎಷ್ಟು ಶೇಕಡಾವಾರು ಹಣಕಾಸು ಸಿಗುತ್ತದೆ?

ಹೋಮ್ ಲೋನ್ ಸಂದರ್ಭದಲ್ಲಿ ನಾವು ಆಸ್ತಿ ಮೌಲ್ಯದ 90% ವರೆಗೆ ಮತ್ತು ಆಸ್ತಿ ಮೇಲಿನ ಲೋನ್ ಸಂದರ್ಭದಲ್ಲಿ 60% ವರೆಗೆ ಹಣಕಾಸು ಒದಗಿಸಬಹುದು. ಆದಾಗ್ಯೂ, ಪಿಎನ್‌ಬಿ ಎಚ್‌ಎಫ್‌ಎಲ್ ಫಂಡಿಂಗ್ ನಿಯಮಗಳು ಕಾಲಕಾಲಕ್ಕೆ ಮತ್ತು ಆಸ್ತಿಯಿಂದ ಆಸ್ತಿಗೆ ಅಥವಾ ಲೋನ್ ಮೊತ್ತದ ಆಧಾರದ ಮೇಲೆ ಬದಲಾಗಬಹುದು.

ಇಎಂಐ ಮತ್ತು ಮುಂಚಿತ-ಇಎಂಐ ಎಂದರೇನು?

ನಿಮ್ಮ ಲೋನ್ ಅನ್ನು ಸಮನಾದ ಮಾಸಿಕ ಕಂತುಗಳ (ಇಎಂಐ) ಮೂಲಕ ಮರುಪಾವತಿಸಲಾಗುತ್ತದೆ, ಇದು ಅಸಲು ಮತ್ತು ಬಡ್ಡಿಯನ್ನು ಒಳಗೊಂಡಿರುತ್ತದೆ. ಅಂತಿಮ ವಿತರಣೆಯ ತಿಂಗಳ ನಂತರದ ತಿಂಗಳಿಂದ ಇಎಂಐ ಮರುಪಾವತಿ ಆರಂಭವಾಗುತ್ತದೆ. ಪೂರ್ವ-ಇಎಂಐ ಬಡ್ಡಿಯು ಸರಳ ಬಡ್ಡಿಯಾಗಿದ್ದು, ಲೋನ್ ಮೊತ್ತವನ್ನು ಸಂಪೂರ್ಣವಾಗಿ ವಿತರಿಸದ ಸಮಯದವರೆಗೆ ಪ್ರತಿ ತಿಂಗಳು ಪಾವತಿಸಬೇಕಾಗುತ್ತದೆ.

ಪಿಎನ್‌ಬಿ ಹೌಸಿಂಗ್‌ನೊಂದಿಗೆ ಯಾರು ಎಫ್‌ಡಿ ಅಕೌಂಟ್ ತೆರೆಯಬಹುದು?

ನಿವಾಸಿ ವ್ಯಕ್ತಿಗಳು / ಎಚ್‌ಯುಎಫ್‌ಗಳು / ಪಬ್ಲಿಕ್ / ಪ್ರೈವೇಟ್ ಕಂಪನಿಗಳು / ಅನಿವಾಸಿ ಭಾರತೀಯರು / ಕೋ-ಆಪರೇಟಿವ್ ಸೊಸೈಟಿಗಳು / ಕೋ-ಆಪರೇಟಿವ್ ಬ್ಯಾಂಕ್‌ಗಳು / ಟ್ರಸ್ಟ್ / ಅಸೋಸಿಯೇಶನ್ ಆಫ್ ಪರ್ಸನ್, ಪಿಎಫ್ ಟ್ರಸ್ಟ್ ಇತ್ಯಾದಿಗಳಿಂದ ಫಿಕ್ಸೆಡ್ ಡೆಪಾಸಿಟ್ ಅಂಗೀಕರಿಸಲಾಗುತ್ತದೆ.

ಡೆಪಾಸಿಟ್ ಮಾಡುವುದು ಹೇಗೆ?

ನಿರೀಕ್ಷಿತ ಡೆಪಾಸಿಟರ್ ಎಲ್ಲಾ ಕೆವೈಸಿ ಡಾಕ್ಯುಮೆಂಟ್‌ಗಳು ಮತ್ತು ಪಿಎನ್‌ಬಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್‌ನ ಪರವಾಗಿರುವ ಅಕೌಂಟ್ ಪೇಯೀ ಚೆಕ್/ ಡಿಮ್ಯಾಂಡ್ ಡ್ರಾಫ್ಟ್/ ಎನ್ಇಎಫ್‌ಟಿ/ ಆರ್‌ಟಿಜಿಎಸ್ ಜೊತೆಗೆ ನಿಗದಿತ "ಡೆಪಾಸಿಟ್ ಅಪ್ಲಿಕೇಶನ್ ಫಾರ್ಮ್" ಅನ್ನು ಭರ್ತಿ ಮಾಡಬೇಕು. ಎಲ್ಲಾ ಪಿಎನ್‌ಬಿ ಹೌಸಿಂಗ್ ಬ್ರಾಂಚ್‌ಗಳಲ್ಲಿ ಮತ್ತು ಅದರ ಅಧಿಕೃತ ಬ್ರೋಕರ್‌ಗಳಲ್ಲಿ ಡೆಪಾಸಿಟ್ ಅಪ್ಲಿಕೇಶನ್‌ಗಳು ಲಭ್ಯವಿವೆ. ಡೆಪಾಸಿಟ್ ಫಾರ್ಮ್‌ಗಳನ್ನು ಕಂಪನಿಯ ವೆಬ್‌ಸೈಟ್‌ನಿಂದ ಡೌನ್ಲೋಡ್ ಮಾಡಬಹುದು:www.pnbhousing.com.

ಆಸ್ತಿಯನ್ನು ಇನ್ಶೂರ್ ಮಾಡಬೇಕೇ?

ಲೋನ್ ಅವಧಿಯಲ್ಲಿ ಭೂಕಂಪ, ಬೆಂಕಿ ಅವಘಡ ಅಥವಾ ನೈಸರ್ಗಿಕ ಮತ್ತು ಮಾನವ ನಿರ್ಮಿತ ವಿಕೋಪಗಳಿಂದಾಗಿ ಯಾವುದೇ ಹಾನಿ ಮತ್ತು ವಿನಾಶದಂತಹ ಅನಿಶ್ಚಿತತೆಗಳಿಂದ ನಿಮ್ಮ ಆಸ್ತಿಯನ್ನು ರಕ್ಷಿಸಲು ಪ್ರಾಪರ್ಟಿ ಇನ್ಶೂರೆನ್ಸ್ ಕಡ್ಡಾಯವಾಗಿದೆ.

ಪಿಎನ್‌ಬಿ ಹೌಸಿಂಗ್‌ನಲ್ಲಿ ಎಫ್‌ಡಿ ರಚಿಸಲು ಕನಿಷ್ಠ ಮೊತ್ತ ಎಷ್ಟು?

ಒಟ್ಟುಗೂಡಿಸಿದ ಡೆಪಾಸಿಟ್ – inr 10000
ಒಟ್ಟುಗೂಡಿಸದ ಡೆಪಾಸಿಟ್ –
ಮಾಸಿಕ ಆದಾಯ ಪ್ಲಾನ್ – ₹100000
ತ್ರೈಮಾಸಿಕ ಆದಾಯ ಪ್ಲಾನ್ – ₹50000
ಅರ್ಧ ವಾರ್ಷಿಕ ಆದಾಯ ಪ್ಲಾನ್ - ₹20000
ವಾರ್ಷಿಕ ಆದಾಯ ಪ್ಲಾನ್ – ₹20000

ಗ್ರಾಹಕರು ಎಫ್‌ಡಿ ಅಕೌಂಟ್ ಹೊಂದಬಹುದಾದ ಅವಧಿಯ ಶ್ರೇಣಿ ಎಷ್ಟು?

ಗ್ರಾಹಕರು ನಿವಾಸಿ ಭಾರತೀಯ/ಘಟಕ/ಟ್ರಸ್ಟ್ ಆಗಿದ್ದರೆ ಕನಿಷ್ಠ ಕಾಲಾವಧಿ 1 ವರ್ಷ ಮತ್ತು ಗರಿಷ್ಠ ಕಾಲಾವಧಿ 10 ವರ್ಷಗಳು.

ಪಿಎನ್‌ಬಿ ಹೌಸಿಂಗ್‌ನೊಂದಿಗೆ ಗ್ರಾಹಕರು ಡೆಪಾಸಿಟ್ ರಶೀದಿಯನ್ನು ಪಡೆಯುತ್ತಾರೆಯೇ?

ಹೌದು, ನಮ್ಮೊಂದಿಗೆ ಗ್ರಾಹಕರು ಡೆಪಾಸಿಟ್ ಮಾಡಿದ ಹಣಕ್ಕೆ ಪಿಎನ್‌ಬಿ ಹೌಸಿಂಗ್ ಎಫ್‌ಡಿ ರಶೀದಿಯನ್ನು ನೀಡುತ್ತದೆ.

ನಿಮ್ಮ ಗ್ರಾಹಕರನ್ನು ತಿಳಿಯಿರಿ (ಕೆವೈಸಿ) ಡಾಕ್ಯುಮೆಂಟ್‌ಗಳು ಎಲ್ಲಾ ಡೆಪಾಸಿಟರ್‌ಗಳಿಗೆ ಬೇಕಾಗುತ್ತವೆಯೇ?

ಹೌದು.

ನಿಮ್ಮ ಗ್ರಾಹಕರನ್ನು ತಿಳಿಯಿರಿ (ಕೆವೈಸಿ) ಅನುಸರಣೆಯ ಚೆಕ್‌ಲಿಸ್ಟ್?

ಮನಿ ಲಾಂಡರಿಂಗ್ ತಡೆಗಟ್ಟುವಿಕೆ ಕಾಯ್ದೆ 2002 ರ ಪ್ರಕಾರ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನೀಡಿದ ಕೆವೈಸಿ ಮಾರ್ಗಸೂಚಿಗಳು ಮತ್ತು ಅಲ್ಲಿ ಸೂಚಿಸಲಾದ ನಿಯಮಗಳ ಪ್ರಕಾರ, ಈ ಕೆಳಗಿನ ಡಾಕ್ಯುಮೆಂಟ್‌ಗಳನ್ನು ಸಲ್ಲಿಸುವ ಮೂಲಕ ಪ್ರತಿ ಡೆಪಾಸಿಟರ್ ಕೆವೈಸಿ ಅವಶ್ಯಕತೆಗಳನ್ನು ಅನುಸರಿಸಬೇಕಾಗುತ್ತದೆ:

  • ಇತ್ತೀಚಿನ ಫೋಟೋಗ್ರಾಫ್.
  • ಪ್ಯಾನ್‌ ಕಾರ್ಡ್, ಆಧಾರ್ ಕಾರ್ಡ್, ಪಾಸ್‌ಪೋರ್ಟ್ ಮುಂತಾದ ಗುರುತಿನ ಪುರಾವೆಯ ಪ್ರಮಾಣೀಕೃತ ಕಾಪಿ.
  • ವಿಳಾಸದ ಪುರಾವೆಯ ಪ್ರಮಾಣೀಕೃತ ಕಾಪಿ, ಕಾರ್ಪೊರೇಟ್‌ಗಳಿಗೆ ಇದು ಸಂಘಟನೆಯ ಪ್ರಮಾಣಪತ್ರ, ಪ್ಯಾನ್‌ಕಾರ್ಡ್ ನೋಂದಣಿ ಸಂಖ್ಯೆ / ಟ್ರಸ್ಟ್ ಡೀಡ್.
ಪಿಎನ್‌ಬಿ ಎಚ್‌ಎಫ್‌ಎಲ್ ಫಿಕ್ಸೆಡ್ ಡೆಪಾಸಿಟ್‌ನ ಸೆಕ್ಯೂರಿಟಿಯ ಮೇಲೆ ಪಿಎನ್‌ಬಿ ಎಚ್‌ಎಫ್‌ಎಲ್‌ನಿಂದ ಲೋನ್ ಪಡೆಯಬಹುದೇ?

ಹೌದು, ಪಿಎನ್‌ಬಿ ಹೌಸಿಂಗ್‌ನ ವಿವೇಚನೆಯ ಮೇರೆಗೆ ಲೋನ್ ಸೌಲಭ್ಯ ಲಭ್ಯವಿದ್ದು, ಡೆಪಾಸಿಟ್ ದಿನಾಂಕದಿಂದ ಮೂರು ತಿಂಗಳ ನಂತರ ಮತ್ತು ಕೆಲವು ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟು ಡೆಪಾಸಿಟ್ ಮೊತ್ತದ 75% ವರೆಗೆ ಮಾತ್ರ ಲೋನ್ ಪಡೆಯಬಹುದು. ಅಂತಹ ಲೋನ್‌ಗಳ ಮೇಲಿನ ಬಡ್ಡಿ ದರವು ಡೆಪಾಸಿಟರ್‌ಗೆ ಪಾವತಿಸುವ ಡೆಪಾಸಿಟ್ ಮೇಲಿನ ಬಡ್ಡಿ ದರಕ್ಕಿಂತ 2% ಅಧಿಕವಾಗಿರುತ್ತದೆ.

ಮೊರಟೋರಿಯಂ ಅವಧಿ ಎಂದರೇನು?

ಮೊರಟೋರಿಯಂ ಎಂದರೆ ಪಾವತಿ ರಜಾದಿನ ಎಂದರ್ಥ. ಅಂದರೆ, ಮೊರಟೋರಿಯಂ ಅವಧಿಯಲ್ಲಿ ಲೋನ್ ನೀಡುವ ಸಂಸ್ಥೆಗೆ (ಪಿಎನ್‌ಬಿಎಚ್‌ಎಫ್‌ಎಲ್) ಗ್ರಾಹಕರು ಯಾವುದೇ ಪಾವತಿಯನ್ನು ಮಾಡಬೇಕಾಗಿಲ್ಲ. ಮೊರಟೋರಿಯಂ ಅವಧಿಯಲ್ಲಿ ಸಂಗ್ರಹಿಸಲಾದ ಬಡ್ಡಿಯನ್ನು ಮೊರಟೋರಿಯಂ ಅವಧಿಯ ನಂತರ ಪಾವತಿಸಬೇಕಾಗುತ್ತದೆ. ಹೀಗಾಗಿ ಇದು ಪಾವತಿಯ ಮುಂದೂಡುವಿಕೆಯಾಗಿದೆ.

ಮೊರಟೋರಿಯಂ ವಿಸ್ತರಣೆಯ ಪ್ರಮುಖ ಪರಿಣಾಮವೇನು?

ಎಲ್ಲಾ ಲೋನ್ ಗ್ರಾಹಕರು ಈಗ ಆಗಸ್ಟ್ 2020 ವರೆಗೆ ಪಾವತಿಸಬೇಕಾದ ಇಎಂಐಗಳಿಗೆ ಮೊರಟೋರಿಯಂ ಪಡೆಯಬಹುದು. ಗ್ರಾಹಕರು ಆಯ್ಕೆ ಮಾಡಿದರೆ, ಅವರು ಜೂನ್, ಜುಲೈ, ಆಗಸ್ಟ್ 2020 ರ ಇಎಂಐಗಳನ್ನು ಪಾವತಿಸಬೇಕಾಗಿಲ್ಲ. ಮರುಪಾವತಿಯು ಸೆಪ್ಟೆಂಬರ್ 2020 ರಿಂದ ಮರು-ಆರಂಭಗೊಳ್ಳುತ್ತದೆ :

  • ಮೊರಟೋರಿಯಂ 1.0 ಸಮಯದಲ್ಲಿ ಮೊರಟೋರಿಯಂ ಪಡೆದ ಮತ್ತು ಮಾರ್ಚ್ ಮತ್ತು/ಅಥವಾ ಏಪ್ರಿಲ್‌ ಮತ್ತು/ಅಥವಾ ಮೇ ಇಎಂಐಗಳನ್ನು ಪಾವತಿಸದ ಗ್ರಾಹಕರು ಮೊರಟೋರಿಯಂ ವಿಸ್ತರಿಸಲು ಆಯ್ಕೆ ಮಾಡಬಹುದು ಮತ್ತು ಜೂನ್, ಜುಲೈ, ಆಗಸ್ಟ್ 2020 ರ ಇಎಂಐಗಳನ್ನು ಪಾವತಿಸದೇ ಇರಬಹುದು ;
  • 20 ಮೇ 2020 ರವರೆಗೆ ಮೊರಟೋರಿಯಂ 1.0 ಪಡೆಯದ ಗ್ರಾಹಕರು ಹೊಸ ಮೊರಟೋರಿಯಂ ಪಡೆಯಬಹುದು, ಇದರಿಂದಾಗಿ ಅವರು ಜೂನ್, ಜುಲೈ ಮತ್ತು ಆಗಸ್ಟ್ 2020 ರ ಇಎಂಐಗಳನ್ನು ಪಾವತಿಸಬೇಕಿಲ್ಲ ;

ಮೊರಟೋರಿಯಂ 1.0 ರಂತೆ, ಮೊರಟೋರಿಯಂ ವಿಸ್ತರಣೆಯು "ಇಎಂಐ ಮನ್ನಾ" ಎಂದರ್ಥವಲ್ಲ. ಏಕೆಂದರೆ ಪಾವತಿಸದ ಅಸಲಿನ ಮೇಲೆ ಬಡ್ಡಿಯು ಮುಂದುವರೆಯುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಸಂಗ್ರಹಿಸಿದ ಬಡ್ಡಿಯನ್ನು ಬಾಕಿ ಅಸಲಿಗೆ ಸೇರಿಸಲಾಗುತ್ತದೆ ಮತ್ತು ಪರಿಷ್ಕೃತ ಇಎಂಐ ಅನ್ನು ಸೆಪ್ಟೆಂಬರ್ 2020 ರಿಂದ ಹೆಚ್ಚಿನ ಅಸಲಿನ ಮೇಲೆ ಪಾವತಿಸಲಾಗುತ್ತದೆ.

ಲೋನ್ ಅವಧಿಗಳ ಮೊರಟೋರಿಯಂನ ಪರಿಣಾಮ ಎಂದರೇನು?

ಲೋನ್ ಅವಧಿಯ ಪರಿಣಾಮವನ್ನು ಕೆಳಗೆ ವಿವರಿಸಲಾಗಿದೆ:

  • ಮೊರಟೋರಿಯಂ ಅವಧಿಯ ಬಡ್ಡಿಯನ್ನು ಅಸಲಿಗೆ ಸೇರಿಸಲಾಗುತ್ತದೆ ;
  • ಲೋನ್‌ನ ಬ್ಯಾಲೆನ್ಸ್ ಅವಧಿಯು ಪಡೆದ ಮೊರಟೋರಿಯಂ ಅವಧಿಯಷ್ಟು ಹೆಚ್ಚಾಗುತ್ತದೆ. ಈ ಮೊದಲು 3 ತಿಂಗಳ ಮೊರಟೋರಿಯಂ ಪಡೆದ ಮತ್ತು ಈಗ ಅದನ್ನು ಮತ್ತೆ 3 ತಿಂಗಳವರೆಗೆ ವಿಸ್ತರಿಸಿದ ಗ್ರಾಹಕರಿಗೆ, ಬ್ಯಾಲೆನ್ಸ್ ಅವಧಿಯನ್ನು 6 ತಿಂಗಳುಗಳವರೆಗೆ ವಿಸ್ತರಿಸಲಾಗುತ್ತದೆ. ಈಗ ಮೊರಟೋರಿಯಂ ತೆಗೆದುಕೊಳ್ಳುವ ಗ್ರಾಹಕರಿಗೆ - ಮೊರಟೋರಿಯಂ 3 ತಿಂಗಳಾಗಿರುತ್ತದೆ ಮತ್ತು ಅವಧಿಯನ್ನು 3 ತಿಂಗಳುಗಳವರೆಗೆ ವಿಸ್ತರಿಸಲಾಗುತ್ತದೆ ;
  • ಹೊಸ ಇಎಂಐ ಅನ್ನು ಹೆಚ್ಚಿನ ಪಿಒಎಸ್ (ಮೇಲಿನ ಪಾಯಿಂಟ್ (ಎ)) ಮತ್ತು ಬ್ಯಾಲೆನ್ಸ್ ಅವಧಿ (ಮೇಲಿನ ಪಾಯಿಂಟ್ (ಬಿ)) ಪ್ರಕಾರ ಲೆಕ್ಕ ಹಾಕಲಾಗುತ್ತದೆ. ಹೊಸ ಇಎಂಐ ಅನ್ನು ಸೆಪ್ಟೆಂಬರ್ 2020 ರಿಂದ ಪಾವತಿಸಲಾಗುತ್ತದೆ ;

ಐಬಿಎ ಮತ್ತು ಆರ್‌ಬಿಐ ಬಿಡುಗಡೆ ಮಾಡಿದಂತೆ "ಬಡ್ಡಿ ರಿಫಂಡ್ ಮೇಲಿನ ಬಡ್ಡಿ" ಮಾರ್ಗಸೂಚಿ ಎಂದರೇನು?

ಸುಪ್ರೀಂ ಕೋರ್ಟ್ ಮಾರ್ಚ್ 2021 ರಲ್ಲಿ ತೀರ್ಪು ನೀಡಿದ್ದು, ಅದರಲ್ಲಿ ಮೊರಟೋರಿಯಂ ಅವಧಿಯಲ್ಲಿ ಲೋನ್‌ಗಳ ಮೇಲೆ ವಿಧಿಸಲಾದ ಸಂಯುಕ್ತ / ದಂಡದ ಬಡ್ಡಿಯನ್ನು ರಿಫಂಡ್ ಮಾಡಬೇಕು ಎಂದು ನಿರ್ದೇಶಿಸಿದೆ. ಅದಕ್ಕೆ ಅನುಗುಣವಾಗಿ, ಮಾರ್ಚ್ 2020 ರಿಂದ ಆಗಸ್ಟ್ 2020 ವರೆಗೆ ಮೊರಟೋರಿಯಂ ಅವಧಿಯನ್ನು ಪಡೆದ ಲೋನ್ ಅಕೌಂಟ್‌ಗಳ ಮೇಲೆ ವಿಧಿಸಲಾದ ಸಂಯುಕ್ತ ಬಡ್ಡಿ ಮತ್ತು ಸರಳ ಬಡ್ಡಿಯ ನಡುವಿನ ವ್ಯತ್ಯಾಸವನ್ನು ರಿಫಂಡ್ ಮಾಡಲು ಆರ್‌ಬಿಐ ಎಲ್ಲಾ ಹಣಕಾಸು ಸಂಸ್ಥೆಗಳಿಗೆ ನಿರ್ದೇಶಿಸಿದೆ. ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ (ಐಬಿಎ) ಏಪ್ರಿಲ್ 21 ರಲ್ಲಿ ವಿವರವಾದ ಮಾರ್ಗಸೂಚಿಗಳನ್ನು ನಿರ್ಧರಿಸಿದ್ದು, ಅದನ್ನು ಸಂಸ್ಥೆಗಳು ಅನುಸರಿಸಲಿವೆ.

ಮಾರ್ಚ್ 2020 ರಲ್ಲಿ ಆರ್‌ಬಿಐ ಘೋಷಿಸಿದ ಕೋವಿಡ್-19 ಪ್ಯಾಕೇಜ್‌ನ ಭಾಗವಾಗಿ (ಮತ್ತು ಮೇ
2020 ರಲ್ಲಿ ವಿಸ್ತರಿಸಲಾದ), 29 ಫೆಬ್ರವರಿ 2020 ರಂದು 90 ಡಿಪಿಡಿಗಿಂತ ಕಡಿಮೆ ಇರುವ, 29 ಫೆಬ್ರವರಿ 2020 ರಂದು ಬಾಕಿ ಇರುವ ಲೋನ್ ಹೊಂದಿರುವ ಗ್ರಾಹಕರಿಗೆ 6 ತಿಂಗಳ ಸಂಚಿತ ಅವಧಿಗೆ ಅಂದರೆ ಮಾರ್ಚ್ 2020 ರಿಂದ ಆಗಸ್ಟ್ 2020 ವರೆಗೆ ಒಂದು ಬಾರಿಯ ಮರುಪಾವತಿಯ ಮೊರಟೋರಿಯಂ ಪರಿಹಾರವನ್ನು ನೀಡಲಾಗಿದೆ. ಮೊರಟೋರಿಯಂ ಅವಧಿಯಲ್ಲಿ, ಸಾಲದಾತರಿಗೆ ಯಾವುದೇ ಪಾವತಿ ಮಾಡದಂತೆ ಗ್ರಾಹಕರಿಗೆ ವಿನಾಯಿತಿ ನೀಡಲಾಗಿದೆ. ಮೊರಟೋರಿಯಂ ಸಮಯದಲ್ಲಿ, ಸಾಲದಾತರು ಮಾಸಿಕ ಆಧಾರದ ಮೇಲೆ ಬಾಕಿ ಬಡ್ಡಿಯನ್ನು ಸಂಯೋಜಿಸಿದ್ದಾರೆ. ಹೀಗಾಗಿ, ಮೊರಟೋರಿಯಂ ಅವಧಿಯ ಕೊನೆಯಲ್ಲಿ ಬಾಕಿ ಉಳಿದ ಲೋನ್ ಮೊರಟೋರಿಯಂ ಆರಂಭದಲ್ಲಿ ಬಾಕಿ ಇದ್ದ ಅಸಲನ್ನು ಮತ್ತು ಮೊರಟೋರಿಯಂ ಪಡೆದ ತಿಂಗಳುಗಳಲ್ಲಿ ಅದರ ಮೇಲಿನ ಸಂಯುಕ್ತ ಬಡ್ಡಿಯನ್ನು ಒಳಗೊಂಡಿದೆ, ಇದನ್ನು "ಬಡ್ಡಿ ಮೇಲಿನ ಬಡ್ಡಿ" ಎಂದು ಕರೆಯಲಾಗುತ್ತದೆ - ಸರಳ ಬಡ್ಡಿ ಮತ್ತು ಮೊರಟೋರಿಯಂ ಅವಧಿಯಲ್ಲಿ ವಿಧಿಸಲಾದ ಸಂಯುಕ್ತ ಬಡ್ಡಿಯ ನಡುವಿನ ವ್ಯತ್ಯಾಸ ಎಂದರ್ಥ.

ಮೊರಟೋರಿಯಂ ಪಡೆದ ಗ್ರಾಹಕರಿಗೆ ಪಿಎನ್‌ಬಿಎಚ್‌ಎಫ್‌ಎಲ್ ಮೊರಟೋರಿಯಂ ಅವಧಿಗೆ ಬಡ್ಡಿಯನ್ನು ಕೂಡ ಸಂಯೋಜಿಸಿದೆ. ಅದಕ್ಕೆ ಅನುಗುಣವಾಗಿ ಬಡ್ಡಿಯ ಮೇಲಿನ ಬಡ್ಡಿಯನ್ನು ರಿಫಂಡ್ ಮಾಡಲಾಗುತ್ತದೆ.

ಆರ್‌ಬಿಐ ಸರ್ಕ್ಯುಲರ್ ಅಡಿಯಲ್ಲಿ ಯಾವ ಎಲ್ಲಾ ಲೋನ್‌ಗಳು/ಸೌಲಭ್ಯಗಳು ರಿಫಂಡ್‌ಗೆ ಅರ್ಹವಾಗಿವೆ?

ಎಲ್ಲಾ "ಸ್ಟ್ಯಾಂಡರ್ಡ್ ಅಕೌಂಟ್‌ಗಳಿಗೆ" ವಿನಾಯಿತಿಯ ಪ್ರಯೋಜನವನ್ನು ನೀಡಬೇಕು. ಈ ಉದ್ದೇಶಕ್ಕಾಗಿ ನಿರ್ಧಾರದ ದಿನಾಂಕವು 29 ಫೆಬ್ರವರಿ, 2020 ಆಗಿದೆ. ಅಂದರೆ, ಹಿಂದಿನ ಬಾಕಿ ದಿನಗಳು (ಡಿಪಿಡಿ) ಸ್ಟೇಟಸ್ 29.02.2020 ರ ಪ್ರಕಾರ 90 ಡಿಪಿಡಿಗಿಂತ ಕಡಿಮೆ ಇರಬೇಕು (“ಅರ್ಹ ಅಕೌಂಟ್‌ಗಳು”).
ಆರ್‌ಬಿಐ ಸರ್ಕ್ಯುಲರ್ ಅಡಿಯಲ್ಲಿ ವಿನಾಯಿತಿಗೆ ಅರ್ಹವಲ್ಲದ ಅಕೌಂಟ್‌ಗಳು:

  • 29 ಫೆಬ್ರವರಿ 2020 ರಂತೆ ಎನ್‌ಪಿಎ ಎಂದು ವರ್ಗೀಕರಿಸಲಾದ ಅಕೌಂಟ್‌ಗಳು ;
  • ಸರಳ ಬಡ್ಡಿಯೊಂದಿಗೆ ವಿಧಿಸಲಾದ ಲೋನ್ ಸೌಲಭ್ಯಗಳು ;
  • ನವೆಂಬರ್ 20* ರ ಎಕ್ಸ್-ಗ್ರೇಶಿಯಾ ಸ್ಕೀಮ್ ಅಡಿಯಲ್ಲಿ ಬಡ್ಡಿಯ ಮೇಲಿನ ಬಡ್ಡಿಯನ್ನು ಈಗಾಗಲೇ ರಿಫಂಡ್ ಮಾಡಿರುವ ಅಕೌಂಟ್‌ಗಳು* ;

ಹೀಗಾಗಿ,

  • ಅಕ್ಟೋಬರ್-ನವೆಂಬರ್ 2020 ರ ಎಕ್ಸ್-ಗ್ರೇಶಿಯಾ 1 ಸ್ಕೀಮ್‌ನಲ್ಲಿ ಬಿಟ್ಟು ಹೋಗಿರುವ ಲೋನ್ ಅಕೌಂಟ್‌ಗಳಲ್ಲಿ (29.02.2020 ರಂದು ಸ್ಟ್ಯಾಂಡರ್ಡ್) ಈಗ ರಿಫಂಡ್ ನೀಡಲಾಗುತ್ತದೆ. ಅದು ಒಳಗೊಂಡಿದೆ- ;
    • ಎಲ್ಲಾ ಲೋನ್‌ಗಳು* (29.02.2020 ರ ಪ್ರಕಾರ ಸ್ಟ್ಯಾಂಡರ್ಡ್) ಲೋನ್ (ವಿತರಣೆ) ₹2 ಕೋಟಿ ಆಗಿತ್ತು.
    • All Loans* (standard as on 29.02.2020) where the exposure (disbursement) was<= INR 2 crore but the market exposure (basis CIBIL) was > INR 2crores.

    * ರಿಟೇಲ್ ಮತ್ತು ಕಾರ್ಪೊರೇಟ್ ಫೈನಾನ್ಸ್ ಎರಡೂ ಲೋನ್‌ಗಳು ಅರ್ಹವಾಗಿರುತ್ತವೆ

  • ಮೊರಟೋರಿಯಂ ಪಡೆಯಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಹೊರತುಪಡಿಸಿ ಲೋನ್‌ಗಳು ಅರ್ಹವಾಗಿರುತ್ತವೆ. ಆದಾಗ್ಯೂ, ಬಡ್ಡಿಯ ಮೇಲಿನ ಬಡ್ಡಿಗೆ ಶುಲ್ಕ ವಿಧಿಸಿದರೆ ಮಾತ್ರ ಅದನ್ನು ರಿಫಂಡ್ ಮಾಡಲಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಬಡ್ಡಿಯ ಮೇಲೆ ಯಾವುದೇ ಬಡ್ಡಿಯನ್ನು ವಿಧಿಸದೇ ಇದ್ದರೆ ಪಿಎನ್‌ಬಿಎಚ್‌ಎಫ್‌ಎಲ್ ಮೇಲೆ ಅನ್ವಯವಾಗುವುದಿಲ್ಲ.
ಒಂದು ವೇಳೆ 29 ಫೆಬ್ರವರಿ 2020 ರಂದು ಲೋನ್ ಸ್ಟ್ಯಾಂಡರ್ಡ್ ಆಗಿದ್ದರೆ, ಆದರೆ ಮುಂದಿನ ಕೆಲವು ತಿಂಗಳುಗಳಲ್ಲಿ ಎನ್‌ಪಿಎ ಆದರೆ, ನಾವು ರಿಫಂಡ್ ಪ್ರಕ್ರಿಯೆಗೊಳಿಸಬಹುದೇ?

ಹೌದು, 29/02/2020 ರಂದು ಲೋನ್ ಸ್ಟ್ಯಾಂಡರ್ಡ್ (ಎನ್‌ಪಿಎ ಅಲ್ಲ) ಆಗಿರುವುದರಿಂದ ಮತ್ತು ಮೊರಟೋರಿಯಂ ಪಡೆದಿರುವುದರಿಂದ, ಅದು ನಂತರ ಎನ್‌ಪಿಎ ಆಗಿದ್ದರೂ ಸಹ ಬಡ್ಡಿಯ ಮೇಲಿನ ರಿಫಂಡ್‌ಗೆ ಅರ್ಹವಾಗಿರುತ್ತದೆ.

ಸಂಪರ್ಕದಲ್ಲಿರಿ

ಹೋಮ್ ಲೋನ್ ಕುರಿತು ವಿಚಾರಿಸಿ

+91

ಫ್ರಂಟ್ ಡೆಸ್ಕ್

ಟೋಲ್ ಫ್ರೀ- 1800 120 8800

ಇಮೇಲ್- customercare@pnbhousing.com

ಎನ್‌ಆರ್‌ಐ ಗ್ರಾಹಕರಿಗೆ- nricare@pnbhousing.com

ಸಂಪರ್ಕದಲ್ಲಿರಿ

ಬ್ರಾಂಚ್ ಲೊಕೇಟರ್

ಅನುಕೂಲಕರ ಮತ್ತು ವಿಶ್ವಾಸಾರ್ಹ ಸೇವೆಗಳಿಗಾಗಿ ನಿಮ್ಮ ಹತ್ತಿರದ ಪಿಎನ್‌ಬಿ ಹೌಸಿಂಗ್ ಬ್ರಾಂಚ್ ಹುಡುಕಿ

ಗ್ರಾಹಕರ ಲಾಗಿನ್

ಅಸ್ತಿತ್ವದಲ್ಲಿರುವ ಪಿಎನ್‌ಬಿ ಹೌಸಿಂಗ್ ಗ್ರಾಹಕರಿಗೆ

Request Call Back at PNB Housing
ಕಾಲ್ ಬ್ಯಾಕ್ ಮಾಡಿ