PNB Housing Finance Limited

ಎನ್ಎಸ್ಇ:

ಬಿಎಸ್ಇ:

ಕೊನೆಯ ಅಪ್ಡೇಟ್:

ಪಿಎನ್‌ಬಿ ಹೌಸಿಂಗ್

ಹೋಮ್‌ ಲೋನ್ ಇಎಂಐ ಕ್ಯಾಲ್ಕುಲೇಟರ್

₹ 1 ಲಕ್ಷ ₹ 5 ಕೋಟಿ
%
5% 20%
ವರ್ಷ
1 ವರ್ಷ 30 ವರ್ಷ

ನಿಮ್ಮ ಇಎಂಐ

17,674

ಬಡ್ಡಿ ಮೊತ್ತ₹ 2,241,811

ಪಾವತಿಸಬೇಕಾದ ಒಟ್ಟು ಮೊತ್ತ₹ 4,241,811

ಪಿಎನ್‌ಬಿ ಹೌಸಿಂಗ್

ಅಮೊರ್ಟೈಸೇಶನ್ ಚಾರ್ಟ್

ಅಮೊರ್ಟೈಸೇಶನ್ ಎಂದರೆ ನಿಮ್ಮ ಲೋನನ್ನು ಸಮಾನ ಕಂತುಗಳಲ್ಲಿ ನಂತರದಲ್ಲಿ ಪಾವತಿಸುವುದಾಗಿದೆ. ನಿಮ್ಮ ಹೋಮ್ ಲೋನ್ ಅವಧಿಯು ಪ್ರಗತಿಯಾಗುತ್ತಿರುವಾಗ, ನಿಮ್ಮ ಅವಧಿಯ ಕೊನೆಯಲ್ಲಿ ಲೋನನ್ನು ಪೂರ್ಣವಾಗಿ ಪಾವತಿಸುವವರೆಗೆ ನಿಮ್ಮ ಪಾವತಿಯ ದೊಡ್ಡ ಭಾಗವು ಅಸಲನ್ನು ಕಡಿಮೆ ಮಾಡುವುದಕ್ಕೆ ಹೋಗುತ್ತದೆ. ಈ ಚಾರ್ಟ್ ಅಸಲು ಮತ್ತು ಬಡ್ಡಿ ಮೊತ್ತಕ್ಕೆ ನೀವು ಪ್ರತಿ ವರ್ಷ ಪಾವತಿಸುವುದನ್ನು ವಿವರಿಸುತ್ತದೆ

ಹೋಮ್ ಲೋನ್ ಪ್ರಯಾಣ

ಮುಂದುವರೆಯುವುದು ಹೇಗೆ

ಕಾಯಿರಿ! ನೀವು ಹೋಮ್ ಲೋನ್ ಅಪ್ಲಿಕೇಶನ್ ಪ್ರಕ್ರಿಯೆಯನ್ನು ಆರಂಭಿಸುವ ಮೊದಲು, ನೀವು ಕೆಲವು ಹೆಚ್ಚುವರಿ ವಿಷಯಗಳ ಬಗ್ಗೆ ಯೋಚಿಸಬೇಕು. ನಿಮ್ಮ ಸಮಯವನ್ನು ಉಳಿಸಲು ನಾವು ಚೆಕ್‌ಲಿಸ್ಟ್ ತಯಾರಿಸಿದ್ದೇವೆ!

ಹಂತ01

ನಿಮ್ಮ ಕ್ರೆಡಿಟ್ ಸ್ಕೋರ್ ಪರಿಶೀಲಿಸಿ

ನಿಮ್ಮ ಕನಸಿನ ಮನೆಗೆ ಬಾಗಿಲುಗಳನ್ನು ತೆರೆಯಲು ಬಯಸುತ್ತಿದ್ದೀರಾ?? ನೀವು ಹೌಸಿಂಗ್ ಲೋನಿಗೆ ಅರ್ಹರಾಗಿದ್ದೀರಾ ಎಂದು ನೋಡಲು ಇಂದೇ ನಿಮ್ಮ ಕ್ರೆಡಿಟ್ ಸ್ಕೋರ್ ಪರಿಶೀಲಿಸುವ ಮೂಲಕ ಪ್ರಾರಂಭಿಸಿ. ಮನೆ ಖರೀದಿ ಪ್ರಕ್ರಿಯೆಯಲ್ಲಿ ಈ ನಿರ್ಣಾಯಕ ಹಂತವನ್ನು ತಪ್ಪಿಸಿಕೊಳ್ಳಬೇಡಿ! ನಿಮ್ಮ ಕ್ರೆಡಿಟ್ ಸ್ಕೋರ್ ಪರಿಶೀಲಿಸಿ

ನಿಮ್ಮ ಅರ್ಹ ಲೋನ್ ಮೊತ್ತವನ್ನು ನಿರ್ಧರಿಸಿ

ನಮ್ಮ ಸುಲಭವಾದ ಲೋನ್ ಕ್ಯಾಲ್ಕುಲೇಟರ್‌ನೊಂದಿಗೆ ನೀವು ಎಷ್ಟು ಲೋನ್ ಪಡೆಯಬಹುದು ಎಂಬುದನ್ನು ತಿಳಿಯಿರಿ! ಪಿಎನ್‌ಬಿ ಹೌಸಿಂಗ್ ಆಸ್ತಿ ವೆಚ್ಚದ 90%* ವರೆಗೆ ಹೋಮ್ ಲೋನ್ ಒದಗಿಸುತ್ತದೆ. ನಿಮ್ಮ ಅರ್ಹ ಲೋನ್ ಮೊತ್ತವನ್ನು ಈಗಲೇ ಕಂಡುಕೊಳ್ಳಿ. ನಿಮ್ಮ ಅರ್ಹ ಲೋನ್ ಮೊತ್ತವನ್ನು ಪರಿಶೀಲಿಸಿ ಹಂತ02
ಹಂತ03

ನಿಮ್ಮ ಹೋಮ್ ಲೋನ್ ಅನ್ನು - ಪ್ರಿನ್ಸಿಪಲ್ ಮಂಜೂರಾತಿ ಪತ್ರದೊಂದಿಗೆ ಪಡೆಯಿರಿ

ನಮ್ಮ ತ್ವರಿತ ಪ್ರಕ್ರಿಯೆಯೊಂದಿಗೆ, ನೀವು ಕೇವಲ 3 ನಿಮಿಷಗಳಲ್ಲಿ ನಿಮ್ಮ ಪ್ರಿನ್ಸಿಪಲ್ ಮಂಜೂರಾತಿ ಪತ್ರವನ್ನು ಪಡೆಯಬಹುದು, ಇದರಿಂದಾಗಿ ನೀವು ನಿಮ್ಮ ಕನಸಿನ ಮನೆಯನ್ನು ಆತ್ಮವಿಶ್ವಾಸದೊಂದಿಗೆ ಹುಡುಕುವುದರತ್ತ ಗಮನಹರಿಸಬಹುದು. 3 ನಿಮಿಷಗಳಲ್ಲಿ ತ್ವರಿತ ಅನುಮೋದನೆ ಪಡೆಯಿರಿ

ಪಿಎನ್‌ಬಿ ಹೌಸಿಂಗ್ ಅನುಮೋದಿತ ಯೋಜನೆಗಳನ್ನು ಪರಿಶೀಲಿಸಿ

ನೀವು ಖರೀದಿಸುತ್ತಿರುವ ಆಸ್ತಿಯು ಹಣಕಾಸು ಪಡೆಯಲು ಅನುಮೋದಿಸಲ್ಪಟ್ಟಿದೆಯೇ ಎಂದು ಪರಿಶೀಲಿಸಿ
ನಮ್ಮ ಎಕ್ಸ್‌ಪರ್ಟ್ ಜೊತೆ ಮಾತನಾಡಿ
ಹಂತ04
ಹಂತ05

ಡಾಕ್ಯುಮೆಂಟೇಶನ್‌ನೊಂದಿಗೆ ನಿಮ್ಮ ಅಪ್ಲಿಕೇಶನ್ ಪ್ರಕ್ರಿಯೆಯನ್ನು ಸರಳಗೊಳಿಸಿ

ಅಪ್ಲಿಕೇಶನ್ ಪ್ರಕ್ರಿಯೆಯು ಕಷ್ಟವಾಗಬಹುದು ಎಂದು ಪಿಎನ್‌ಬಿ ಹೌಸಿಂಗ್ ಅರ್ಥಮಾಡಿಕೊಳ್ಳುತ್ತದೆ. ಅದಕ್ಕಾಗಿಯೇ, ನಿಮ್ಮ ಕ್ರೆಡಿಟ್ ಸ್ಕೋರ್ ಆಧಾರದ ಮೇಲೆ, ನಾವು ಹೊಂದಿಕೊಳ್ಳುವ ವಿಧಾನವನ್ನು ತೆಗೆದುಕೊಳ್ಳುತ್ತೇವೆ ಮತ್ತು ಅಗತ್ಯ ಡಾಕ್ಯುಮೆಂಟೇಶನ್ ಮೇಲೆ ವೈಯಕ್ತಿಕಗೊಳಿಸಿದ ಸಹಾಯವನ್ನು ಒದಗಿಸುತ್ತೇವೆ. ಅಗತ್ಯವಿರುವ ಡಾಕ್ಯುಮೆಂಟ್‌ಗಳ ಸಮಗ್ರ ಪಟ್ಟಿಯನ್ನು ಪರಿಶೀಲಿಸಿ
ಆರಂಭಿಸಲಾಗುತ್ತಿದೆ ಹೋಮ್ ಲೋನ್‌ ಅಪ್ಲಿಕೇಶನ್ ಕಷ್ಟಕರವಾಗಿರಬಹುದು, ಆದರೆ ಸಹಾಯ ಮಾಡಲು ನಾವು ಇಲ್ಲಿದ್ದೇವೆ. ನಮ್ಮ ಲೀಡ್ ಫಾರ್ಮ್ ಭರ್ತಿ ಮಾಡುವ ಮೂಲಕ, ಲಭ್ಯವಿರುವ ಅತ್ಯುತ್ತಮ ಹೋಮ್ ಲೋನ್ ಆಯ್ಕೆಗಳನ್ನು ಪಡೆಯಲು ನೀವು ಒಂದು ಹೆಜ್ಜೆ ಹತ್ತಿರವಾಗಿದ್ದೀರಿ. ನಮ್ಮ ಎಕ್ಸ್‌ಪರ್ಟ್ ತಂಡವು ಪ್ರಕ್ರಿಯೆಯುದ್ದಕ್ಕೂ ನಿಮಗೆ ಮಾರ್ಗದರ್ಶನ ನೀಡುತ್ತದೆ ಮತ್ತು ನೀವು ತೊಂದರೆ ರಹಿತ ಅನುಭವ ಪಡೆಯುತ್ತೀರಿ ಎಂದು ಖಚಿತಪಡಿಸುತ್ತದೆ.
ನಮ್ಮ ತಂಡದಿಂದ ಮರಳಿ ಕರೆ ಪಡೆಯಿರಿ
ಡಿಜಿಟಲ್ ಅಪ್ಲಿಕೇಶನ್ ಹಂತ06
ಕೇವಲ 3 ನಿಮಿಷಗಳಲ್ಲಿ
3 ನಿಮಿಷಗಳು, ತೊಂದರೆ-ರಹಿತ!

ಮೇಲ್ನೋಟ

ಹೋಮ್‌ ಲೋನ್ ಇಎಂಐ ಕ್ಯಾಲ್ಕುಲೇಟರ್

ಹೋಮ್ ಲೋನ್ ಕ್ಯಾಲ್ಕುಲೇಟರ್ ಬಳಸಿ
  ಪಿಎನ್‌ಬಿ ಹೌಸಿಂಗ್‌ನ ಸುಲಭ ಮತ್ತು ಅರ್ಥಪೂರ್ಣ ಹೋಮ್ ಲೋನ್ ಇಎಂಐ ಕ್ಯಾಲ್ಕುಲೇಟರ್‌ನೊಂದಿಗೆ ನಿಮ್ಮ ಇಎಂಐಗಳನ್ನು ಲೆಕ್ಕ ಹಾಕಿ. ನೀವು ಆಯ್ಕೆ ಮಾಡಿದ ಲೋನ್ ಮೊತ್ತ,
ಬಡ್ಡಿ ದರ, ಮತ್ತು ಲೋನ್ ಅವಧಿಯನ್ನು ನಮೂದಿಸಿ ಮತ್ತು 'ಕ್ಯಾಲ್ಕುಲೇಟ್' ಮೇಲೆ ಕ್ಲಿಕ್ ಮಾಡಿ. ನಮ್ಮ ಇಎಂಐ ಕ್ಯಾಲ್ಕುಲೇಟರ್ ನಿಮ್ಮ ಇನ್ಪುಟ್ ಆಧಾರದ ಮೇಲೆ ಅಂದಾಜು ಮೊತ್ತವನ್ನು ತಿಳಿಸುತ್ತದೆ
ಮಾನ್ಯುಯಲ್ ದೋಷಗಳು ಮತ್ತು ಕಠಿಣ ಲೆಕ್ಕಾಚಾರಗಳಿಗೆ ವಿದಾಯ ಹೇಳಿ; ಸೆಕೆಂಡ್‌ಗಳಲ್ಲಿ ನಿಮ್ಮ ಹೋಮ್ ಲೋನ್ ಯೋಜಿಸಲು ನಮ್ಮ ಕ್ಯಾಲ್ಕುಲೇಟರ್ ಬಳಸಿ. ನಮ್ಮ ಗ್ರಾಹಕ ಸೇವೆಯನ್ನು ಸಂಪರ್ಕಿಸಿ
ಹೋಮ್ ಲೋನ್‌ಗಳ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ಮಾರ್ಗದರ್ಶನಕ್ಕಾಗಿ ನಮ್ಮ ಗ್ರಾಹಕ ಸೇವಾ ಎಕ್ಸ್‌ಪರ್ಟ್‌ಗಳನ್ನು ಸಂಪರ್ಕಿಸಿ.
ಹೋಮ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಎಂದರೇನು?
 ಹೋಮ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಒಂದು ಆನ್ಲೈನ್ ಸಾಧನವಾಗಿದ್ದು, ಇದು ಇಎಂಐಗಳಾಗಿ ನಿಮ್ಮ ಮಾಸಿಕ ಪಾವತಿಯನ್ನು ಅಂದಾಜು ಮಾಡಲು ನಿಮಗೆ ಸಹಾಯ ಮಾಡುತ್ತದೆ. 
ಹೋಮ್ ಲೋನ್ ಇಎಂಐ ಅನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ?
 ಹೋಮ್ ಲೋನ್ ಇಎಂಐ ಅನ್ನು ಹಣಕಾಸು ಸಂಸ್ಥೆಗಳು (ಎಫ್‌ಐ) ಅಸಲು, ಪಾವತಿಸಬೇಕಾದ ಬಡ್ಡಿ ಮತ್ತು ಕಾಲಾವಧಿಯ ಆಧಾರದಲ್ಲಿ ಲೆಕ್ಕ ಹಾಕುತ್ತವೆ
ಲೋನ್‌ನ ಆರಂಭಿಕ ವರ್ಷಗಳಲ್ಲಿ, ಅಸಲು ಮೊತ್ತವು ದೊಡ್ಡದಾಗಿರುವುದರಿಂದ ಇಎಂಐನ ಪ್ರಮುಖ ಭಾಗವು ಪಾವತಿಸಬೇಕಾದ ಬಡ್ಡಿಯನ್ನು ಒಳಗೊಂಡಿರುತ್ತದೆ. ಲೋನ್ ಅವಧಿ ಮುಗಿಯುತ್ತಾ ಬಂದಾಗ,
ಅಸಲು ಅಂಶವು ಕ್ರಮೇಣ ಹೆಚ್ಚಾಗುತ್ತದೆ ಮತ್ತು ಬಡ್ಡಿಯ ಅಂಶವು ಕಡಿಮೆಯಾಗುತ್ತದೆ.
ಹೋಮ್ ಲೋನ್ ಇಎಂಐ ಲೆಕ್ಕ ಹಾಕಲು ಫಾರ್ಮುಲಾ
 ಹೋಮ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಹೇಗೆ ಕೆಲಸ ಮಾಡುತ್ತದೆ ಎಂದು ಯೋಚಿಸುತ್ತಿದ್ದೀರಾ? ಫಾರ್ಮುಲಾ ಇಲ್ಲಿದೆ:
e = [p x r x (1+r)n ]/[(1+r)n-1]
p = ಅಸಲು ಲೋನ್ ಮೊತ್ತ
r = ಮಾಸಿಕ ಬಡ್ಡಿ ದರ, ಅಂದರೆ, 12 ರಿಂದ ವಿಭಜಿಸಲಾದ ಶೇಕಡಾವಾರು ಬಡ್ಡಿ ದರ
t = ಒಟ್ಟು ಹೋಮ್ ಲೋನ್ ಕಾಲಾವಧಿ, ತಿಂಗಳುಗಳಲ್ಲಿ
e = ಹೋಮ್ ಲೋನ್ ಇಎಂಐ

ಒಂದು ಉದಾಹರಣೆ ನೋಡೋಣ. ನೀವು ವಾರ್ಷಿಕ 7.99% ಬಡ್ಡಿ ದರದಲ್ಲಿ ₹ 20 ಲಕ್ಷದ ಹೌಸಿಂಗ್ ಲೋನ್ ಆಯ್ಕೆ ಮಾಡಿದರೆ ಮತ್ತು ನಿಮ್ಮ ಕಾಲಾವಧಿ 20 ವರ್ಷಗಳು ಅಂದರೆ, 240
ತಿಂಗಳುಗಳಾಗಿದ್ದರೆ, ನಂತರ ನಿಮ್ಮ ಇಎಂಐ ಅನ್ನು ಈ ರೀತಿಯಾಗಿ ಲೆಕ್ಕ ಹಾಕಬಹುದು:
ಇಎಂಐ = 20,00,000*r*[(r+1) 240/(r+1)240-1]ಈಗ, r = (8.00/100)/12 = 0.00667

ಫಾರ್ಮುಲಾದಲ್ಲಿ ಸರಿಯಾದ r-ಮೌಲ್ಯವನ್ನು ಹಾಕಿದ ನಂತರ, ನಾವು ₹16,729 ಇಎಂಐ ಪಡೆಯುತ್ತೇವೆ. ಇದರಿಂದ, ಹೋಮ್ ಲೋನ್ ಪಡೆದ ನಂತರ ನೀವು ಹಣಕಾಸು ಸಂಸ್ಥೆಗಳಿಗೆ ನೀಡಬೇಕಾದ
ಒಟ್ಟು ಮೊತ್ತವನ್ನು ಕೂಡ ಲೆಕ್ಕ ಹಾಕಬಹುದು.

ಒಟ್ಟು ಮೊತ್ತ = ಇಎಂಐ*t = 16729*240 = ₹ 40,14,912/-

ಬಳಸುವುದು ಹೇಗೆ

ಹೋಮ್‌ ಲೋನ್ ಇಎಂಐ ಕ್ಯಾಲ್ಕುಲೇಟರ್

ನಮ್ಮಲ್ಲಿ ಅನೇಕರಿಗೆ, ಸ್ವಂತ ಮನೆ ಹೊಂದುವುದು ಜೀವನದ ಅತ್ಯಂತ ಸಂತೃಪ್ತ ಮತ್ತು ಲಾಭದಾಯಕ ಯೋಜನೆ ಆಗಿರುತ್ತದೆ. ನೀವು ಆಸ್ತಿಯನ್ನು ಬಲವಾಗಿ ಅಪೇಕ್ಷಿಸುತ್ತಿದ್ದೀರಾ, ಆದರೆ ಒಳಗೊಂಡಿರುವ
ಇಎಂಐ (ಸಮನಾದ ಮಾಸಿಕ ಕಂತುಗಳು) ಸಂಕೀರ್ಣತೆಗಳ ಬಗ್ಗೆ ಯೋಚಿಸುತ್ತಿದ್ದೀರಾ?
ಪಿಎನ್‌ಬಿ ಹೌಸಿಂಗ್ ಫೈನಾನ್ಸ್ - ಹೋಮ್ ಲೋನ್ ಇಎಂಐ ಕ್ಯಾಲ್ಕುಲೇಟರ್‌ ಮೂಲಕ ಮಾಸಿಕ ಮರುಪಾವತಿ ಮೊತ್ತವನ್ನು ಲೆಕ್ಕ ಹಾಕುವ ಕಠಿಣ ಮತ್ತು ಸುದೀರ್ಘ ಕೆಲಸದಿಂದ ಬಿಡುಗಡೆ ಪಡೆಯಿರಿ.

 

ಈ ಸರಳ, ಬಳಕೆದಾರ-ಸ್ನೇಹಿ ಸಾಧನ ವಿನ್ಯಾಸವು ಹೋಮ್ ಲೋನ್ ಮೇಲಿನ ಮಾಸಿಕ ಇಎಂಐನ ಅಂದಾಜು ಮೌಲ್ಯವನ್ನು ತಕ್ಷಣವೇ ನಿಮಗೆ ನೀಡುತ್ತದೆ.

1. ನೀವು ತೆಗೆದುಕೊಳ್ಳಲು ಬಯಸುವ ಅಸಲು ಹೋಮ್ ಲೋನ್ ಮೊತ್ತವನ್ನು ನಮೂದಿಸಿ,
2. ಲೋನ್ ಅವಧಿ (ಲೋನ್ ಕಾಲಾವಧಿ)
3. ಆಯಾ ಕ್ಷೇತ್ರಗಳಲ್ಲಿ ನಿರೀಕ್ಷಿತ ಬಡ್ಡಿ ದರ (ಆರ್‌ಒಐ)

 

ಈ ಸಾಧನವು ನಿಮ್ಮ ಕನಸಿನ ಮನೆಗೆ ಹಣಕಾಸು ಒದಗಿಸಲು ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು, ಹೋಮ್ ಲೋನ್ ಇಎಂಐ ಲೆಕ್ಕಾಚಾರ ಪ್ರಕ್ರಿಯೆ ಕೆಲಸ ಮಾಡುತ್ತದೆ,
ಲಭ್ಯವಿರುವ ವೇರಿಯಬಲ್ ಆಯ್ಕೆಗಳು, ಮತ್ತು ಪ್ರತಿ ತಿಂಗಳು ಮರುಪಾವತಿಸಬೇಕಾದ ನಿಖರವಾದ ಇಎಂಐ ಮೊತ್ತವನ್ನು ನಿಮಗೆ ನೀಡಲು ಇಎಂಐ ಕ್ಯಾಲ್ಕುಲೇಟರ್ ನಂಬರ್‌ಗಳನ್ನು ಹೇಗೆ ಬಳಸುತ್ತದೆ ಎಂಬ ಸಂಕ್ಷಿಪ್ತ ಚಿತ್ರಣ
ಇಲ್ಲಿದೆ.

ಈ ಸಾಧನವು ನಿಮ್ಮ ಮನೆಗಾಗಿ ಪಾವತಿಸಬೇಕಾದ ಮಾಸಿಕ ಹೊರಹರಿವಿನ ಸಮಂಜಸವಾದ ಕಲ್ಪನೆಯನ್ನು ನೀಡುವ ಇಎಂಐ ಮೊತ್ತವನ್ನು
ತಕ್ಷಣವೇ ಲೆಕ್ಕ ಹಾಕುತ್ತದೆ.

ಪ್ರಯೋಜನಗಳು ಮತ್ತು ಬಳಕೆಗಳು

ಹೋಮ್‌ ಲೋನ್ ಇಎಂಐ ಕ್ಯಾಲ್ಕುಲೇಟರ್

ಒಂದು ಆನ್ಲೈನ್ ಸಾಧನ, ಅನೇಕ ಬಳಕೆಗಳು. ನಮ್ಮ ಆನ್ಲೈನ್ ಹೋಮ್ ಲೋನ್ ಕ್ಯಾಲ್ಕುಲೇಟರ್ ಬಳಕೆಗಳ ಲಿಸ್ಟ್ ಇಲ್ಲಿದೆ.

ನಿಮ್ಮ ಹೋಮ್ ಲೋನ್ ಇಎಂಐ ಲೆಕ್ಕ ಹಾಕಿ

ಹೌಸಿಂಗ್ ಲೋನ್ ವಿಷಯಕ್ಕೆ ಬಂದಾಗ ಹಣಕಾಸಿನ ಯೋಜನೆಗೆ ಯಾವುದೇ ಉತ್ತಮ ಸಾಧನವಿಲ್ಲ. ನೀವು ನಮ್ಮ ಹೋಮ್ ಲೋನ್ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿದ ನಂತರ ಮತ್ತು ನೀವು ಎಷ್ಟು ಹೋಮ್ ಲೋನ್ ಪಡೆಯಬಹುದು ಎಂಬುದನ್ನು ನಿರ್ಧರಿಸಲು ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಬಳಸಿದ ನಂತರ, ಹೌಸ್ ಲೋನ್ ಕ್ಯಾಲ್ಕುಲೇಟರ್‌ನೊಂದಿಗೆ ನಿಖರವಾಗಿ ಮತ್ತು ತ್ವರಿತವಾಗಿ ಹೋಮ್ ಲೋನ್ ಇಎಂಐ ಅನ್ನು ಲೆಕ್ಕ ಹಾಕಿ.

ಒಟ್ಟು ಹೋಮ್ ಲೋನ್ ಬಡ್ಡಿ ಅಂಶವನ್ನು ಕಂಡುಹಿಡಿಯಿರಿ

ಒಮ್ಮೆ ನೀವು ಲೋನ್ ಮೊತ್ತ, ಹೋಮ್ ಲೋನ್ ಬಡ್ಡಿ ದರ ಮತ್ತು ಕಾಲಾವಧಿಯನ್ನು ನಮೂದಿಸಿದ ನಂತರ, ಹೌಸ್ ಲೋನ್ ಕ್ಯಾಲ್ಕುಲೇಟರ್ ಒಟ್ಟು ಬಡ್ಡಿ ಅಂಶ ಮತ್ತು ಒಟ್ಟು ಪಾವತಿ ಮೊತ್ತಗಳೆರಡನ್ನೂ ತೋರಿಸುತ್ತದೆ. ನಿಮ್ಮ ಲೋನ್ ಮೇಲೆ ನೀವು ಎಷ್ಟು ಬಡ್ಡಿಯನ್ನು ಪಾವತಿಸುತ್ತೀರಿ ಎಂಬುದರ ಬಗ್ಗೆ ಇದು ನಿಮಗೆ ನ್ಯಾಯೋಚಿತ ಕಲ್ಪನೆಯನ್ನು ನೀಡುತ್ತದೆ.

ಎರಡು ಅಥವಾ ಅದಕ್ಕಿಂತ ಹೆಚ್ಚಿನ ಹೋಮ್ ಲೋನ್ ಆಫರ್‌ಗಳನ್ನು ಹೋಲಿಕೆ ಮಾಡಿ

ವಿವಿಧ ಕಾಲಾವಧಿಗಳು ಮತ್ತು ಬಡ್ಡಿ ದರಗಳ ಅನೇಕ ಹೋಮ್ ಲೋನ್‌ಗಳನ್ನು ಪಡೆದಿದ್ದೀರಾ? ಹೋಮ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಿ ಪ್ರತಿ ಆಫರ್‌ನ ಮಾಸಿಕ ಕಂತುಗಳನ್ನು ಕಂಡುಹಿಡಿಯುವ ಮೂಲಕ ಅವುಗಳನ್ನು ಹೋಲಿಕೆ ಮಾಡಿ.

ಸರಿಯಾದ ಕಾಲಾವಧಿಯನ್ನು ನಿರ್ಧರಿಸಿ

ಮೇಲಿನ ಹೋಮ್ ಲೋನ್ ಕಾಲಾವಧಿ ಕ್ಯಾಲ್ಕುಲೇಟರ್‌ನಲ್ಲಿ ಕಾಲಾವಧಿ ಸ್ಲೈಡರ್ ಅನ್ನು ಆಚೀಚೆ ಮಾಡುವ ಮೂಲಕ, ನೀವು ಹೋಮ್ ಲೋನ್‌ಗೆ ಸೂಕ್ತವಾದ ಇಎಂಐ ಅನ್ನು ತಿಳಿಯಬಹುದು. ಅದಕ್ಕೆ ಸಂಬಂಧಿಸಿದ ಯಾವುದೇ ಕಾಲಾವಧಿಯು ನಿಮಗೆ ಸರಿಯಾದ ಕಾಲಾವಧಿಯಾಗಿದೆ. ನೆನಪಿಡಿ, ಕಾಲಾವಧಿ ದೀರ್ಘವಾಗಿದ್ದರೆ, ಇಎಂಐ ಕಡಿಮೆ ಇರುತ್ತದೆ.

ಅಮೊರ್ಟೈಸೇಶನ್ ಶೆಡ್ಯೂಲ್ ಪರಿಶೀಲಿಸಿ

ನಮ್ಮ ಸುಧಾರಿತ ಹೌಸ್ ಇಎಂಐ ಕ್ಯಾಲ್ಕುಲೇಟರ್ ನಿಮ್ಮ ಹೋಮ್ ಲೋನ್ ಅಮೊರ್ಟೈಸೇಶನ್ ಶೆಡ್ಯೂಲ್ ಬ್ರೇಕ್‌ಡೌನ್ ಅನ್ನು ಕೂಡ ತೋರಿಸುತ್ತದೆ. ನಿಮ್ಮ ಸಮನಾದ ಮಾಸಿಕ ಕಂತುಗಳ ಎರಡು ಅಂಶಗಳು ಕಾಲಾವಧಿಯುದ್ದಕ್ಕೂ ಹೇಗೆ ಬದಲಾಗುತ್ತವೆ- ಬಡ್ಡಿಯ ಅಂಶವು ಕಡಿಮೆಯಾಗುತ್ತದೆ ಮತ್ತು ಅಸಲು ಅಂಶವು ಹೆಚ್ಚುತ್ತದೆ ಎಂಬುದರ ಬಗ್ಗೆ ಇದು ನಿಮಗೆ ಒಳನೋಟವನ್ನು ನೀಡುತ್ತದೆ.

ಓದಿ ಅಪ್ಡೇಟೆಡ್ 

ಆಗಾಗ ಕೇಳುವ ಪ್ರಶ್ನೆಗಳು

ಹೋಮ್ ಲೋನ್ ಇಎಂಐ ಎಂದರೇನು?

ಹೋಮ್ ಲೋನ್ ಇಎಂಐ ಎಂದರೆ ನಿಮ್ಮ ಮನೆಗೆ ಹಣಕಾಸು ಒದಗಿಸಲು ಸಾಲ ಪಡೆದ ಲೋನ್ ಮರುಪಾವತಿಗಾಗಿ ಸಾಲದಾತರಿಗೆ ಪಾವತಿಸಲಾಗುವ ಮೊತ್ತವಾಗಿದೆ. ಹೋಮ್ ಲೋನ್ ಪಡೆಯುವ ಸಮಯದಲ್ಲಿ, ನಿಮಗೆ ಲೋನ್ ನೀಡುವ ಸಂಸ್ಥೆಯು ಪಡೆದ ಲೋನ್ ಮೊತ್ತ, ಅನುಮೋದಿತ ಬಡ್ಡಿ ದರ ಮತ್ತು ಲೋನ್ ಅವಧಿಯ ಆಧಾರದ ಮೇಲೆ ನಿಮ್ಮ ಇಎಂಐ ಅನ್ನು ಲೆಕ್ಕ ಹಾಕುತ್ತದೆ. ಈಗ, ನೀವು ಪಿಎನ್‌ಬಿ ಹೌಸಿಂಗ್‌ನ ಹೋಮ್ ಲೋನ್ ಮರುಪಾವತಿ ಕ್ಯಾಲ್ಕುಲೇಟರ್ ಬಳಸಿ ಅದನ್ನು ಸುಲಭವಾಗಿ ಲೆಕ್ಕ ಹಾಕಬಹುದು.

ಹೋಮ್ ಲೋನ್ ಇಎಂಐ ಮೇಲೆ ಪರಿಣಾಮ ಬೀರುವ ಅಂಶಗಳು ಯಾವುವು?

ನಿಮ್ಮ ಹೋಮ್ ಲೋನ್ ಮೇಲೆ ನೀವು ಎಷ್ಟು ಇಎಂಐ ಪಾವತಿಸಬಹುದು ಎಂಬುದನ್ನು ಅನೇಕ ವಿಷಯಗಳನ್ನು ಆಧರಿಸಿ ನಿರ್ಧರಿಸಲಾಗುತ್ತದೆ.. ಇವುಗಳು ಹೋಮ್ ಲೋನ್ ಅವಧಿ, ಹೋಮ್ ಲೋನ್ ಬಡ್ಡಿ ದರ, ಡೌನ್ ಪೇಮೆಂಟ್, ಮುಂಗಡ ಪಾವತಿ, ಮಾಸಿಕ ಆದಾಯ ಇತ್ಯಾದಿಗಳನ್ನು ಒಳಗೊಂಡಿವೆ. ಈ ಮೌಲ್ಯಗಳನ್ನು ಬದಲಾಯಿಸುವ ಮೂಲಕ, ನೀವು ಪಾವತಿಸಬಹುದಾದ ಸೂಕ್ತ ಮಾಸಿಕ ಕಂತುಗಳನ್ನು ಪಡೆಯಬಹುದು. ನಮ್ಮ ಹೋಮ್ ಲೋನ್ ಬಡ್ಡಿ ಕ್ಯಾಲ್ಕುಲೇಟರ್ ಸಾಧನದಲ್ಲಿ ಲೆಕ್ಕಾಚಾರ ಮಾಡುವಾಗ ವಿವಿಧ ಅಂಶಗಳಲ್ಲಿ ವಿವಿಧ ಸಂಖ್ಯೆಗಳನ್ನು ನಮೂದಿಸಿದಾಗ ಇದು ನಿಮಗೆ ಸ್ಪಷ್ಟವಾಗುತ್ತದೆ.

ನಿಮ್ಮ ಹೋಮ್ ಲೋನ್ ಇಎಂಐ ಕಡಿಮೆ ಮಾಡುವುದು ಹೇಗೆ?

ನೀವು ಕಡಿಮೆ ಹೋಮ್ ಲೋನ್ ಇಎಂಐ ಏಕೆ ಬಯಸುತ್ತೀರಿ ಎಂದು ಅರ್ಥವಾಗುತ್ತದೆ. ನಿಮ್ಮ ಮಾಸಿಕ ಕಂತು ಕಡಿಮೆಯಾದರೆ, ನೀವು ಹೆಚ್ಚು ಆದಾಯವನ್ನು ಮತ್ತು ಆ ಮೂಲಕ ಹೆಚ್ಚುವರಿ ಇಎಂಐಗಳನ್ನು ಪಡೆಯುವ ಅವಕಾಶ ಹೊಂದಿರುತ್ತೀರಿ.

ನೀವು ಕೇವಲ ಹೋಮ್ ಲೋನ್ ತೆಗೆದುಕೊಳ್ಳುತ್ತಿದ್ದರೆ, ಮೊದಲು, ಹೌಸ್ ಲೋನ್ ಕ್ಯಾಲ್ಕುಲೇಟರ್ ಟೂಲ್‌ ಮೂಲಕ ನೀವು ಎಷ್ಟು ಇಎಂಐಗೆ ಅರ್ಹರಾಗಿದ್ದೀರಿ ಎಂಬುದನ್ನು ಪರಿಶೀಲಿಸಿ. ಈಗ, ಅದನ್ನು ಇನ್ನಷ್ಟು ಕಡಿಮೆ ಮಾಡಲು, ನಿಮ್ಮ ಕಾಲಾವಧಿಯನ್ನು ಹೆಚ್ಚಿಸುವುದನ್ನು ಪರಿಗಣಿಸಿ ಅಥವಾ ಉತ್ತಮ ಬಡ್ಡಿ ದರಗಳನ್ನು ಪಡೆಯಿರಿ. ಕಡಿಮೆ ಇಎಂಐಗಳಿಗಾಗಿ ನೀವು ನಿಮ್ಮ ಲೋನ್‌ನ ಡೌನ್ ಪೇಮೆಂಟ್ ಮೊತ್ತವನ್ನು ಕೂಡ ಹೆಚ್ಚಿಸಬಹುದು.

ಒಂದು ವೇಳೆ ನೀವು ಈಗಾಗಲೇ ಹೋಮ್ ಲೋನ್ ಪಾವತಿಸುತ್ತಿದ್ದರೆ, ಈಗಲೂ ನಿಮ್ಮ ಅಸ್ತಿತ್ವದಲ್ಲಿರುವ ಇಎಂಐ ಕಡಿಮೆ ಮಾಡಲು ಸಾಧ್ಯ. ಇದು ಅನೇಕ ಅಂಶಗಳನ್ನು ಅವಲಂಬಿಸಿರುತ್ತದೆ:

  • ಭಾಗಶಃ ಮುಂಗಡ ಪಾವತಿಗಳನ್ನು ಮಾಡಿ
  • ಉತ್ತಮ ಬಡ್ಡಿ ನಿಯಮಗಳನ್ನು ಕೇಳಿ
  • ಉತ್ತಮ ನಿಯಮಗಳನ್ನು ನೀಡುವ ಸಾಲದಾತರಿಗೆ ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಮಾಡಿ
ಹೋಮ್ ಲೋನ್ ಇಎಂಐಗೆ ಕನಿಷ್ಠ ಮೊತ್ತ ಎಷ್ಟು?

ನೆನಪಿಡಿ, ನಿಮ್ಮ ಹೋಮ್ ಲೋನ್ ಇಎಂಐ ಅನ್ನು ಕಾಲಾವಧಿ, ಲೋನ್ ಮೊತ್ತ ಮತ್ತು ಬಡ್ಡಿ ದರದ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ. ನೀವು ಹೋಮ್ ಲೋನ್ ಬಡ್ಡಿ ಕ್ಯಾಲ್ಕುಲೇಟರ್‌ನಲ್ಲಿ ನೋಡಿದ ಹಾಗೆ, ಈ ಯಾವುದೇ ಮಾನದಂಡಗಳನ್ನು ಬದಲಾಯಿಸುವುದು ಇಎಂಐ ಮೌಲ್ಯವನ್ನು ನಿರ್ಧರಿಸುತ್ತದೆ. ಆದ್ದರಿಂದ, ನೀವು ಕನಿಷ್ಠ ಮೊತ್ತದ ಹೋಮ್ ಲೋನ್ ಪಡೆದರೆ, ಕಾಲಾವಧಿಯನ್ನು ಗರಿಷ್ಠಗೊಳಿಸಿ ಮತ್ತು ಬಡ್ಡಿ ದರವನ್ನು ಕಡಿಮೆ ಮಾಡಿ, ಆಗ ನೀವು ಹೋಮ್ ಲೋನ್ ಇಎಂಐನ ಕನಿಷ್ಠ ಮೊತ್ತವನ್ನು ಪಡೆಯುತ್ತೀರಿ.

ಹೋಮ್ ಲೋನ್ ಇಎಂಐನಲ್ಲಿ ಯಾವ ಅಂಶಗಳು ಒಳಗೊಂಡಿವೆ?

ನೀವು ಪ್ರತಿ ಬಾರಿ ಹೌಸ್ ಲೋನ್ ಇಎಂಐ ಪಾವತಿಸುವಾಗ, ಅದನ್ನು ಎರಡು ಅಂಶಗಳಾಗಿ ವಿಂಗಡಿಸಲಾಗುತ್ತದೆ: ಅಸಲು ಪಾವತಿ ಮತ್ತು ಸಂಬಂಧಿತ ಬಡ್ಡಿ ಪಾವತಿ. ಅಸಲು ಪಾವತಿಯು ಮುಖ್ಯವಾಗಿ ನಿಮ್ಮ ಹೋಮ್ ಲೋನ್ ಮೊತ್ತವಾಗಿದೆ ಹಾಗೂ ನಿಮ್ಮ ಬಡ್ಡಿ ದರದ ಆಧಾರದ ಮೇಲೆ ಬಡ್ಡಿಯನ್ನು ಲೆಕ್ಕ ಹಾಕಲಾಗುತ್ತದೆ. ನೀವು ಲೆಕ್ಕಾಚಾರ ಮಾಡುವಾಗ ಹೋಮ್ ಲೋನ್ ಬಡ್ಡಿ ದರದ ಕ್ಯಾಲ್ಕುಲೇಟರ್ ಯಾವಾಗಲೂ ಈ ಎರಡು ಅಂಶಗಳನ್ನು ತೋರಿಸುತ್ತದೆ.

ಸಾಲಗಾರರಾಗಿ, ನೆನಪಿಡಬೇಕಾದ ಅತ್ಯಂತ ಪ್ರಮುಖ ಮಾಹಿತಿ ಇಲ್ಲಿದೆ:

ನೀವು ಇಎಂಐಗಳನ್ನು ಪಾವತಿಸಲು ಆರಂಭಿಸಿದಾಗ ನಿಮ್ಮ ಬಡ್ಡಿಯ ಅಂಶವು ಹೆಚ್ಚಾಗಿರುತ್ತದೆ- ಮತ್ತು ಪ್ರತಿ ಪಾವತಿಯೊಂದಿಗೆ ಅದು ಕಡಿಮೆಯಾಗುತ್ತಾ ಹೋಗುತ್ತದೆ. ನಿಮ್ಮ ಹೋಮ್ ಲೋನ್ ಇಎಂಐ ಅವಧಿಯ ಕೊನೆಯ ಹಂತಗಳಲ್ಲಿ, ನಿಮ್ಮ ಹೆಚ್ಚಿನ ಇಎಂಐ ಅಸಲು ಮೊತ್ತದ ಅಂಶವನ್ನು ಮಾತ್ರ ಒಳಗೊಂಡಿರುತ್ತದೆ.

Request Call Back at PNB Housing
ಕಾಲ್ ಬ್ಯಾಕ್ ಮಾಡಿ