ಭಾರತವು ಜಾಗತಿಕ ಸನ್ನಿವೇಶದ ಪ್ರಕಾರ ಹೆಚ್ಚಿನ ಆದಾಯವನ್ನು ನೀಡುವ ಕೆಲವು ದೇಶಗಳಲ್ಲಿ ಒಂದಾಗಿದೆ ಮತ್ತು ಫಿಕ್ಸೆಡ್ ಡೆಪಾಸಿಟ್ ಅಂತಹ ಒಂದು ಸಾಧನವಾಗಿದೆ. ಅನಿವಾಸಿ ಭಾರತೀಯರ (ಎನ್‌ಆರ್‌ಐ) ಸಂಖ್ಯೆಯು ಪ್ರತಿ ದಿನ ಹೆಚ್ಚಾಗುತ್ತಿರುವುದರಿಂದ, ಅನೇಕರು ಭಾರತದಲ್ಲಿ ತಮ್ಮ ದೊಡ್ಡ ಮೊತ್ತವನ್ನು ಮರಳಿ ಹೂಡಿಕೆ ಮಾಡುವುದು ಲಾಭದಾಯಕವಾಗಿದೆ ಎಂದು ಕಂಡುಕೊಳ್ಳುತ್ತಾರೆ. ಫಿಕ್ಸೆಡ್ ಡೆಪಾಸಿಟ್‌ಗಳಲ್ಲಿ ಹೂಡಿಕೆಗಳು ಇತರ ಭಾರತೀಯ ಹಣಕಾಸು ಸಾಧನಗಳ ನಡುವೆ, ಕಡಿಮೆ ಅಪಾಯದ ಆದಾಯದ ಕಾರಣದಿಂದಾಗಿ ಮತ್ತು ಮಾರುಕಟ್ಟೆಯ ಚಂಚಲತೆಯ ವಿರುದ್ಧ ರಕ್ಷಣಾತ್ಮಕವಾಗಿ ಇರುವುದರಿಂದ ಸಾಮಾನ್ಯವಾಗಿ ಆದ್ಯತೆ ನೀಡಲಾಗುತ್ತದೆ.
ಬ್ಯಾಂಕುಗಳು, ಕಾರ್ಪೊರೇಟ್‌ಗಳು ಮತ್ತು ಹೌಸಿಂಗ್ ಫೈನಾನ್ಸ್ ಕಂಪನಿಗಳಂತಹ ಅನೇಕ ಹಣಕಾಸು ಸಂಸ್ಥೆಗಳು ಅನಿವಾಸಿ ಭಾರತೀಯರಿಗೆ ಫಿಕ್ಸೆಡ್ ಡೆಪಾಸಿಟ್‌ಗಳನ್ನು ಒದಗಿಸುತ್ತವೆ. ಕಾರ್ಪೊರೇಟ್‌ಗಳು ಮತ್ತು ಎಚ್ಎಫ್ಸಿಗಳು ನೀಡುವ ಬಡ್ಡಿ ದರವು ಸಾಮಾನ್ಯವಾಗಿ ಬ್ಯಾಂಕುಗಳು ನೀಡುವ ಬಡ್ಡಿಗಿಂತ ಹೆಚ್ಚಾಗಿರುತ್ತದೆ.
ಈಗ ನಾವು ಎನ್ಆರ್‌ಐಗಾಗಿ ಫಿಕ್ಸೆಡ್ ಡೆಪಾಸಿಟ್ ಹೂಡಿಕೆಯ ಅಗತ್ಯತೆಗಳಿಗೆ ಬರೋಣ. ಅಂತಹ ಟ್ರಾನ್ಸಾಕ್ಷನ್‌ಗಳನ್ನು ಮಾಡುವಾಗ, ಎನ್ಆರ್‌ಐ ಅರ್ಜಿದಾರರು ಈ ಕೆಳಗಿನ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.
- ಅರ್ಜಿದಾರರು ತಮ್ಮ ಅನಿವಾಸಿ ಸಾಮಾನ್ಯ (ಎನ್‌ಆರ್‌ಒ) ಅಕೌಂಟ್ ಮೂಲಕ ಭಾರತೀಯ ಕಾರ್ಪೊರೇಟ್‌ಗಳು ಮತ್ತು ಹೌಸಿಂಗ್ ಫೈನಾನ್ಸ್ ಕಂಪನಿಗಳು ನೀಡುವ ಫಿಕ್ಸೆಡ್ ಡೆಪಾಸಿಟ್‌ಗಳಲ್ಲಿ ಮಾತ್ರ ಹೂಡಿಕೆ ಮಾಡಬಹುದು ಎಂಬುದನ್ನು ನೆನಪಿಡಬೇಕು. ಅದೇ ರೀತಿ, ಮೆಚ್ಯೂರಿಟಿ ಸಮಯದಲ್ಲಿ ಗಳಿಸಿದ ದೊಡ್ಡ ಮೊತ್ತವನ್ನು ಅವರ ಎನ್‌ಆರ್‌ಒ ಅಕೌಂಟ್‌ಗಳಿಗೆ ಮಾತ್ರ ಕ್ರೆಡಿಟ್ ಮಾಡಲಾಗುತ್ತದೆ. ಇವುಗಳು ಎಲ್ಲಾ ಟ್ರಾನ್ಸಾಕ್ಷನ್‌ಗಳು ಭಾರತೀಯ ಕರೆನ್ಸಿಯಲ್ಲಿ ಮಾತ್ರ ನಡೆಯುವ ಅಕೌಂಟ್‌ಗಳಾಗಿವೆ.
- ಪಿಎನ್‌ಬಿ ಹೌಸಿಂಗ್ ಎಫ್‌ಡಿಯಲ್ಲಿ ಹೂಡಿಕೆ ಮಾಡಲು, ಎನ್‌ಆರ್‌ಐ ಅರ್ಜಿದಾರರು ಈ ಕೆಳಗಿನ ಡಾಕ್ಯುಮೆಂಟ್‌ಗಳನ್ನು ಒದಗಿಸಬೇಕು.
- ಫೋಟೋ
- ಗುರುತಿನ ಪುರಾವೆ
- ಪ್ಯಾನ್ ಪ್ರತಿ
- ವಿಳಾಸದ ಪುರಾವೆ
- ಪಾಸ್‌ಪೋರ್ಟ್ ಪ್ರತಿ
- ಎಫ್ಎಟಿಸಿಎ ಫಾರ್ಮ್
- ಎನ್ಆರ್‌ಐಗಳು ಕನಿಷ್ಠ ₹ 10,000 ಮೊತ್ತದೊಂದಿಗೆ ಪಿಎನ್‌ಬಿ ಹೌಸಿಂಗ್‌ನಲ್ಲಿ ಎಫ್‌ಡಿ ತೆರೆಯಬಹುದು. 1 ರಿಂದ 3 ವರ್ಷಗಳ ಕಾಲಾವಧಿಗಾಗಿ ಹೂಡಿಕೆಯನ್ನು ಮಾಡಬಹುದು.
- ಕೆಲವು ದೇಶಗಳ ವಿಷಯದಲ್ಲಿ 30% ರಿಂದ 5% ವರೆಗೆ ತೆರಿಗೆ ದರವನ್ನು ಕಡಿಮೆ ಮಾಡುವ ಮೂಲಕ ಡಬಲ್ ತೆರಿಗೆ ತಪ್ಪಿಸುವ ಒಪ್ಪಂದ (ಡಿಟಿಎಎ) ಎನ್‌ಆರ್‌ಐ ಎಫ್‌ಡಿಗಳನ್ನು ಇನ್ನಷ್ಟು ಆಕರ್ಷಕವಾಗಿಸುತ್ತದೆ. ಎನ್ಆರ್‌ಐ ಅರ್ಜಿದಾರರು ಡಿಟಿಎಎ ಅಡಿಯಲ್ಲಿ ಬರುವ ಘೋಷಣೆಯನ್ನು ಸಲ್ಲಿಸುವ ಮೂಲಕ ಪ್ರಯೋಜನವನ್ನು ಪಡೆಯಬಹುದು.
ಕಾರ್ಪೊರೇಟ್‌ಗಳು ಮತ್ತು ಹೌಸಿಂಗ್ ಫೈನಾನ್ಸ್ ಕಂಪನಿಗಳು ಒದಗಿಸುವ ಇನ್ನೊಂದು ಪ್ರಯೋಜನವೆಂದರೆ ಅವರು ತಮ್ಮ ಗ್ರಾಹಕರಿಗೆ ನೀಡುವ ಹಲವಾರು ಸೇವೆಗಳಾಗಿವೆ. ನಿರ್ದಿಷ್ಟವಾಗಿ, ಪಿಎನ್‌ಬಿ ಹೌಸಿಂಗ್ ಫಿಕ್ಸೆಡ್ ಡೆಪಾಸಿಟ್‌ಗಳನ್ನು ಗ್ರಾಹಕ ಪೋರ್ಟಲ್ ಮೂಲಕ ಅಕ್ಸೆಸ್ ಮಾಡಬಹುದು, ಅಲ್ಲಿ ನೀವು ಲೈವ್ ಚಾಟ್ ಮೂಲಕ ಕಂಪನಿ ಅಧಿಕಾರಿಗಳೊಂದಿಗೆ ಮಾತನಾಡಬಹುದು. ಈ ಫೀಚರ್ ಮೂಲಕ ಒಬ್ಬರು ಆಟೋ ರಿನೀವಲ್ ಮತ್ತು ಅಕೌಂಟ್‌ಗಳ ಸ್ಟೇಟ್ಮೆಂಟ್ (ಎಸ್ಒಎ) ಅನ್ನು ಕೂಡ ಪಡೆಯಬಹುದು.
ನೀವು ಭಾರತೀಯ ಹೂಡಿಕೆ ಸಾಧನಗಳಲ್ಲಿ ಹೂಡಿಕೆ ಮಾಡಲು ಯೋಜಿಸುತ್ತಿರುವ ಎನ್ಆರ್‌ಐ ಆಗಿದ್ದರೆ ಮತ್ತು ಕನಿಷ್ಠ ಅಪಾಯದೊಂದಿಗೆ ಖಚಿತವಾದ ಆದಾಯವನ್ನು ಹುಡುಕುತ್ತಿದ್ದರೆ, ಕಾರ್ಪೊರೇಟ್‌ಗಳು ಮತ್ತು ಎಚ್ಎಫ್ಸಿಗಳು ನೀಡುವ ಎಫ್‌ಡಿಗಳು ನಿಜವಾಗಿಯೂ ಉತ್ತಮ ಆಯ್ಕೆಯಾಗಿರಬಹುದು !!