PNB Housing Finance Limited

ಎನ್ಎಸ್ಇ:

ಬಿಎಸ್ಇ:

ಕೊನೆಯ ಅಪ್ಡೇಟ್:

()
ಸರಾಸರಿ ರೇಟಿಂಗ್
ಹಂಚಿಕೊಳ್ಳಿ
ಕಾಪಿ ಮಾಡಿ

ಕಂಪನಿ ಫಿಕ್ಸೆಡ್ ಡೆಪಾಸಿಟ್ ಆಯ್ಕೆ ಮಾಡುವ 6 ಪ್ರಮುಖ ಪ್ರಯೋಜನಗಳು

6 Major Benefits of Choosing Company Fixed Deposit

ಅತ್ಯುತ್ತಮ ಕಾರ್ಯಕ್ಷಮತೆಗಾಗಿ ನಿಮ್ಮ ಪೋರ್ಟ್‌ಫೋಲಿಯೋ ವೈವಿಧ್ಯಮಯ ಹೂಡಿಕೆಗಳನ್ನು ಹೊಂದಿರಬೇಕು. ನೀವು ಷೇರುಗಳು, ಮ್ಯೂಚುಯಲ್ ಫಂಡ್‌ಗಳು, ಬಾಂಡ್‌ಗಳು ಮತ್ತು ಬ್ಯಾಂಕ್ ಫಿಕ್ಸೆಡ್ ಡೆಪಾಸಿಟ್‌ಗಳಲ್ಲಿ ಹೂಡಿಕೆ ಮಾಡಿದ್ದರೂ, ಕಂಪನಿ ಡೆಪಾಸಿಟ್‌ಗಳು ನೀವು ಕಡೆಗಣಿಸಿರುವ ಹೂಡಿಕೆ ಆಯ್ಕೆಯಾಗಿದೆ. ನೀವು ಕಂಪನಿ ಡೆಪಾಸಿಟ್‌ಗಳನ್ನು ಕೂಡಾ ಏಕೆ ಪರಿಗಣಿಸಬೇಕು ಎಂಬುದು ಇಲ್ಲಿದೆ:

ವೈವಿಧ್ಯೀಕರಣ: ಹೂಡಿಕೆ ಪೋರ್ಟ್‌ಫೋಲಿಯೋದಲ್ಲಿ ಸ್ಥಿರ ಮತ್ತು ಸುರಕ್ಷಿತ ಆದಾಯವು ಪೋರ್ಟ್‌ಫೋಲಿಯೋ ಅಪಾಯವನ್ನು ಸೀಮಿತಗೊಳಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ನೀವು ನಿರೀಕ್ಷಿತ ಆದಾಯವನ್ನು ಹೊಂದಿರುವಾಗ, ಅದಕ್ಕೆ ಅನುಗುಣವಾಗಿ ನಿಮ್ಮ ಭವಿಷ್ಯದ ಯೋಜನೆಗಳನ್ನು ಮಾಡಬಹುದು. ಕಂಪನಿ ಫಿಕ್ಸೆಡ್ ಡೆಪಾಸಿಟ್‌ಗಳು ನಿಗದಿತ ಅವಧಿಯಲ್ಲಿ ನಿಮಗೆ ಸ್ಥಿರ ಆದಾಯವನ್ನು ನೀಡುತ್ತವೆ.

ಹೆಚ್ಚಿನ ಆದಾಯದ ದರ: ಕಂಪನಿ ಫಿಕ್ಸೆಡ್ ಡೆಪಾಸಿಟ್‌ಗಳು ಬ್ಯಾಂಕ್ ಫಿಕ್ಸೆಡ್ ಡೆಪಾಸಿಟ್‌ಗಳಿಗಿಂತ ಹೆಚ್ಚಿನ ಬಡ್ಡಿ ದರವನ್ನು ನೀಡಬಹುದು.

ತೆರಿಗೆ ಪ್ರಯೋಜನಗಳು: ಕಂಪನಿಯ ಫಿಕ್ಸೆಡ್ ಡೆಪಾಸಿಟ್‌ನಿಂದ ನಿಮ್ಮ ವಾರ್ಷಿಕ ಬಡ್ಡಿ ಆದಾಯವು ₹ 5,000 ಕ್ಕಿಂತ ಕಡಿಮೆ ಇದ್ದರೆ ನಿಮ್ಮ ಕಂಪನಿಯ ಫಿಕ್ಸೆಡ್ ಡೆಪಾಸಿಟ್‌ನಿಂದ ಪಡೆದ ಆದಾಯದ ಮೇಲೆ ನೀವು ಯಾವುದೇ ಆದಾಯ ತೆರಿಗೆಯನ್ನು ಪಾವತಿಸಬೇಕಾಗಿಲ್ಲ.

ನಾಮಿನೇಶನ್ ಸೌಲಭ್ಯ: ನೀವು ಕಂಪನಿಯ ಫಿಕ್ಸೆಡ್ ಡೆಪಾಸಿಟ್‌ನಲ್ಲಿ ಹೂಡಿಕೆ ಮಾಡಿದಾಗ ನಿಮ್ಮ ಮರಣದ ಸಂದರ್ಭದಲ್ಲಿ ಡೆಪಾಸಿಟ್‌ನ ಆದಾಯವನ್ನು ಪಡೆಯಲು ನಿಮ್ಮ ಕುಟುಂಬದಿಂದ ಯಾರನ್ನಾದರೂ ನಾಮಿನೇಟ್ ಮಾಡಬಹುದು. ಇದು ಕಾಗದಪತ್ರದ ಕೆಲಸವನ್ನು ಕಡಿಮೆ ಮಾಡುತ್ತದೆ ಮತ್ತು ಹೂಡಿಕೆದಾರರಿಗೆ ಅತ್ಯಂತ ಉಪಯುಕ್ತ ಸೌಲಭ್ಯವಾಗಿದೆ.

ಫ್ಲೆಕ್ಸಿಬಿಲಿಟಿ: ಕಂಪನಿಯ ಫಿಕ್ಸೆಡ್ ಡೆಪಾಸಿಟ್‌ಗಳು ಲಿಕ್ವಿಡಿಟಿಯ ವಿಷಯದಲ್ಲಿ ಸೂಕ್ತವಾದ ಹೂಡಿಕೆಗಳಾಗಿವೆ. ಹಣಕಾಸಿನ ತುರ್ತುಸ್ಥಿತಿಯ ಸಂದರ್ಭದಲ್ಲಿ, ನೀವು ಕಂಪನಿಯ ಫಿಕ್ಸೆಡ್ ಡೆಪಾಸಿಟ್‌ನಿಂದ ಮೆಚ್ಯೂರಿಟಿಗೆ ಮುಂಚಿತವಾಗಿ ಹಣವನ್ನು ವಿತ್‌ಡ್ರಾ ಮಾಡಬಹುದು. ಕನಿಷ್ಠ 3 ತಿಂಗಳ ಲಾಕ್-ಇನ್ ಅವಧಿ ಅನ್ವಯವಾಗುತ್ತದೆ. ಅಕಾಲಿಕ ವಿತ್‌ಡ್ರಾವಲ್ ಸಂದರ್ಭದಲ್ಲಿ, ಈ ಕೆಳಗಿನ ನಿಯಮಗಳು ಅನ್ವಯವಾಗುತ್ತವೆ:

ಹೂಡಿಕೆದಾರರ ವರ್ಗ ಅಕಾಲಿಕ ವಾಪಸಾತಿ ಪಾವತಿಸಬೇಕಾದ ಬಡ್ಡಿ ಅಕಾಲಿಕ ವಾಪಸಾತಿ ಪಾವತಿಸಬೇಕಾದ ಬಡ್ಡಿ
ವೈಯಕ್ತಿಕ ಹೂಡಿಕೆದಾರ 3 ತಿಂಗಳ ನಂತರ ಆದರೆ 6 ತಿಂಗಳ ಮೊದಲು 4 ಪ್ರತಿಶತ 6 ತಿಂಗಳ ನಂತರ ಆದರೆ ಮೆಚ್ಯೂರಿಟಿ ದಿನಾಂಕಕ್ಕಿಂತ ಮೊದಲು ಡೆಪಾಸಿಟ್‌ ಚಾಲ್ತಿಯಲ್ಲಿದ್ದ ಅವಧಿಗೆ ಸಾರ್ವಜನಿಕ ಡೆಪಾಸಿಟ್ ಮೇಲಿನ ಬಡ್ಡಿಗಿಂತ 1 ಪ್ರತಿಶತ ಕಡಿಮೆ ಇದೆ.
ಇತರೆ ಹೂಡಿಕೆದಾರರು 3 ತಿಂಗಳ ನಂತರ ಆದರೆ 6 ತಿಂಗಳ ಮೊದಲು ಯಾವುದೂ ಅಲ್ಲ 6 ತಿಂಗಳ ನಂತರ ಆದರೆ ಮೆಚ್ಯೂರಿಟಿ ದಿನಾಂಕಕ್ಕಿಂತ ಮೊದಲು ಡೆಪಾಸಿಟ್‌ ಚಾಲ್ತಿಯಲ್ಲಿದ್ದ ಅವಧಿಗೆ ಸಾರ್ವಜನಿಕ ಡೆಪಾಸಿಟ್ ಮೇಲಿನ ಬಡ್ಡಿಗಿಂತ 1 ಪ್ರತಿಶತ ಕಡಿಮೆ ಇದೆ.

ಫಿಕ್ಸೆಡ್ ಡೆಪಾಸಿಟ್‌ಗಳ ಮೇಲೆ ಲೋನ್: ನಿಮಗೆ ಹಣದ ಅಗತ್ಯವಿದ್ದರೆ, ನೀವು ನಿಮ್ಮ ಕಂಪನಿಯ ಫಿಕ್ಸೆಡ್ ಡೆಪಾಸಿಟ್ ಮೇಲೆ ಲೋನ್ ಪಡೆಯಬಹುದು. ಬಿಸಿನೆಸ್ ಅಥವಾ ಖಾಸಗಿ ಉದ್ದೇಶಗಳಿಗಾಗಿ ತಮ್ಮ ಡೆಪಾಸಿಟ್‌ಗಳನ್ನು ಅಡಮಾನವಾಗಿ ಬಳಸಲು ಬಯಸುವ ಹೂಡಿಕೆದಾರರಿಗೆ ಇದು ಉಪಯುಕ್ತವಾಗಿದೆ. ಡೆಪಾಸಿಟ್‌ನ 75 ಪ್ರತಿಶತದವರೆಗೆ ಲೋನ್‌ಗಳನ್ನು ತೆಗೆದುಕೊಳ್ಳಬಹುದು.

ಕಂಪನಿ ಡೆಪಾಸಿಟ್‌ಗಳು ಹೂಡಿಕೆದಾರರು ಖಂಡಿತವಾಗಿಯೂ ಅನ್ವೇಷಿಸಬೇಕಾದ ಇನ್ನೊಂದು ಆಯ್ಕೆಯಾಗಿದೆ ; ಅವುಗಳು ಸಾಮಾನ್ಯ ಬ್ಯಾಂಕ್ ಡೆಪಾಸಿಟ್‌ಗಳಿಗಿಂತ ಹೆಚ್ಚಿನ ಆದಾಯವನ್ನು ನೀಡಬಹುದು. ಪಿಎನ್‌ಬಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಕಂಪನಿ ಫಿಕ್ಸೆಡ್ ಡೆಪಾಸಿಟ್‌ಗಳನ್ನು ಒದಗಿಸುತ್ತದೆ ಮತ್ತು ಹಣಕಾಸು ಸೇವಾ ಉದ್ಯಮದಲ್ಲಿ ಎರಡು ದಶಕಗಳಿಗೂ ಹೆಚ್ಚು ಅನುಭವವನ್ನು ಹೊಂದಿದೆ. ಕಂಪನಿಯು ಭಾರತದಾದ್ಯಂತ ಬ್ರಾಂಚ್‌ಗಳ ನೆಟ್ವರ್ಕ್ ಹೊಂದಿದೆ.

ಕಂಪನಿಯು ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ಅಧೀನದಲ್ಲಿದೆ ಮತ್ತು ಇದು ಮಾರುಕಟ್ಟೆಯಲ್ಲಿ ಪ್ರಸಿದ್ಧ ಹೆಸರಾಗಿದೆ. ಕಂಪನಿಯ ಫಿಕ್ಸೆಡ್ ಡೆಪಾಸಿಟ್‌ಗಳಿಗೆ ಕ್ರಿಸಿಲ್ ಎಫ್‌ಎಎಎ ರೇಟಿಂಗ್ ನೀಡಿದ್ದು, ಇದು ರೇಟಿಂಗ್ ಏಜೆನ್ಸಿಯು ನೀಡುವ ಅತ್ಯಧಿಕ ಸುರಕ್ಷತಾ ರೇಟಿಂಗ್ ಆಗಿದೆ.

ಕೇವಲ 3 ನಿಮಿಷಗಳಲ್ಲಿ
3 ನಿಮಿಷಗಳು, ತೊಂದರೆ-ರಹಿತ!

ಪಿಎನ್‌ಬಿ ಹೌಸಿಂಗ್

ಅನ್ವೇಷಿಸಲು ಇತರ ವಿಷಯಗಳು

Request Call Back at PNB Housing
ಕಾಲ್ ಬ್ಯಾಕ್ ಮಾಡಿ