PNB Housing Finance Limited

ಎನ್ಎಸ್ಇ:

ಬಿಎಸ್ಇ:

ಕೊನೆಯ ಅಪ್ಡೇಟ್:

ಪಿಎನ್‌ಬಿ ಹೌಸಿಂಗ್

ರೋಶ್ನಿ ಹೋಮ್ ಲೋನ್‌ಗಳು 

ಪಿಎನ್‌ಬಿ ಹೌಸಿಂಗ್ ಫೈನಾನ್ಸ್ ಹೊಸ ಕೈಗೆಟಕುವ ಹೋಮ್ ಲೋನ್ ಸ್ಕೀಮ್- ರೋಶ್ನಿ ಹೋಮ್ ಲೋನ್‌ಗಳನ್ನು ಪ್ರಾರಂಭಿಸಿದೆ- ಇದು ಮನೆ ಹೊಂದುವ ಜನರ ಕನಸನ್ನು ಸಬಲೀಕರಣ ಮತ್ತು ಬೆಂಬಲಿಸುವ ದೀರ್ಘಾವಧಿಯ ಗುರಿಯನ್ನು ಹೊಂದಿದೆ
ಪಿಎನ್‌ಬಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ರೋಶ್ನಿ ಹೋಮ್ ಲೋನ್‌ಗಳೊಂದಿಗೆ ಗ್ರಾಹಕರಿಗೆ ಹೊಸ ಭರವಸೆ ಮತ್ತು ಅವಕಾಶಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ
ಪರಿಣಾಮವಾಗಿ, ಲೋನ್ ಅರ್ಜಿದಾರರು ಕ್ರೆಡಿಟ್‌ಗೆ ಹೊಸಬರಾಗಿದ್ದರೂ, ಕಡಿಮೆ/ಮಧ್ಯಮ ಆದಾಯ ಗುಂಪಿಗೆ ಸೇರಿದ ಅನೌಪಚಾರಿಕ ಆದಾಯದೊಂದಿಗೆ
ಮಾಸಿಕ ₹10,000 ಕ್ಕಿಂತ ಕಡಿಮೆ ಕುಟುಂಬ ಆದಾಯ ಹೊಂದಿರುವ ಸ್ವಯಂ ಉದ್ಯೋಗಿಯಾಗಿದ್ದರೂ, ಮರುಪಾವತಿ ಮಾಡುವ ಗಂಭೀರ ಉದ್ದೇಶವನ್ನು ಹೊಂದಿರುವವರಿಗೆ,
ರೋಶ್ನಿ ಹೋಮ್ ಲೋನ್‌ಗಳು ಅವರಿಗೆ ಅರ್ಹತೆಯ ಅಡೆತಡೆಗಳನ್ನು ಪರಿಹರಿಸಲು ಸಹಾಯ ಮಾಡುತ್ತವೆ.

ಪ್ರಮುಖ ಫೀಚರ್‌ಗಳು ಮತ್ತು ಅನುಕೂಲಗಳು:

₹5 ಲಕ್ಷದಿಂದ ₹50 ಲಕ್ಷದವರೆಗಿನ ಹೋಮ್ ಲೋನ್‌ಗಳು

ಆಸ್ತಿಯ ಮಾರುಕಟ್ಟೆ ಮೌಲ್ಯದ 90%* ವರೆಗೆ ಫಂಡಿಂಗ್

ಆಕರ್ಷಕ ಬಡ್ಡಿ ದರಗಳು

ಸುವ್ಯವಸ್ಥಿತ ಸೇವಾ ಡೆಲಿವರಿ ಮಾದರಿ - ಲೋನ್‌ಗಳ ಸುಲಭ ಹಾಗೂ ತ್ವರಿತ ಅನುಮೋದನೆ ಮತ್ತು ವಿತರಣೆಯನ್ನು ಖಚಿತಪಡಿಸುವ ಮನೆಬಾಗಿಲಿನ ಸೇವೆಗಳು

ಶ್ರೇಣಿ 2 ಮತ್ತು ಶ್ರೇಣಿ 3 ಕವರೇಜ್‌ನೊಂದಿಗೆ ಭಾರತದಾದ್ಯಂತ ಬ್ರಾಂಚ್ ನೆಟ್ವರ್ಕ್‌, ಹೆಚ್ಚುವರಿ ಶ್ರೇಣಿ 2 ಮತ್ತು ಶ್ರೇಣಿ 3 ಕವರೇಜ್‌ನೊಂದಿಗೆ ಭಾರತದಾದ್ಯಂತ ಬ್ರಾಂಚ್ ನೆಟ್ವರ್ಕ್‌

ಕನಿಷ್ಠ ಫಾರ್ಮಲ್ ಆದಾಯ ಡಾಕ್ಯುಮೆಂಟೇಶನ್

30 ವರ್ಷಗಳ ಅವಧಿಯೊಂದಿಗೆ ಕಡಿಮೆ ಇಎಂಐಗಳು

ನಿಮ್ಮ ಅಗತ್ಯಗಳನ್ನು ಪೂರೈಸಲು ಅನುಗುಣವಾದ ಅರ್ಹತೆ

35 ವರ್ಷಗಳಿಗಿಂತ ಹೆಚ್ಚಿನ ಅನುಭವ ಹೊಂದಿರುವ ವಿಶ್ವಾಸಾರ್ಹ ಮತ್ತು ನಂಬಿಕಸ್ಥ ಬ್ರ್ಯಾಂಡ್
ಪಿಎನ್‌ಬಿ ಹೌಸಿಂಗ್ ರೋಶ್ನಿ ಹೋಮ್ ಲೋನ್
₹ 1 ಲಕ್ಷ ₹ 5 ಕೋಟಿ
%
10.50% 15%
ವರ್ಷ
1 ವರ್ಷ 30 ವರ್ಷ

ನಿಮ್ಮ ಇಎಂಐ

17,674

ಬಡ್ಡಿ ಮೊತ್ತ₹ 2,241,811

ಪಾವತಿಸಬೇಕಾದ ಒಟ್ಟು ಮೊತ್ತ₹ 4,241,811

₹ 10 ಸಾವಿರ ₹ 10 ಲಕ್ಷ
%
10.50% 15%
ವರ್ಷ
1 ವರ್ಷ 30 ವರ್ಷಗಳು
₹ 10 ಸಾವಿರ ₹ 10 ಲಕ್ಷ

ನಿಮ್ಮ ಮಾಸಿಕ ಇಎಂಐ

5,000

ಅರ್ಹ ಲೋನ್ ಮೊತ್ತ ₹565,796

ರೋಶ್ನಿ ಹೋಮ್ ಲೋನ್‌ಗಳು

ಬಡ್ಡಿ ದರ

ಎಲ್ಲಾ ಹೊಸ ಲೋನ್‌ಗಳಿಗೆ (ಹೌಸಿಂಗ್/ನಾನ್-ಹೌಸಿಂಗ್) ಪಿಎನ್‌ಬಿಆರ್‌ಆರ್ (ರಿಟೇಲ್ ರೆಫರೆನ್ಸ್ ದರ) - ಜೂನ್ 1, 2023 ನಂತರ ಆನ್‌ಬೋರ್ಡ್ – ವರ್ಷಕ್ಕೆ 12.85%.
ಹೋಮ್ ಲೋನ್‌ ಬಡ್ಡಿ ದರ

ಸಂಬಳ ಪಡೆಯುವ ಉದ್ಯೋಗಿಗಳಿಗೆ

10.5% ನಿಂದ 14.25%

…
ಹೋಮ್ ಲೋನ್‌ ಬಡ್ಡಿ ದರ

ಸ್ವ ಉದ್ಯೋಗಿಗಳಿಗಾಗಿ

11.50% ನಿಂದ 14.50%

…
ಬಡ್ಡಿ ದರ

ಆಸ್ತಿ ಮೇಲಿನ ಲೋನ್‌ಗಾಗಿ

11.5% ನಿಂದ 15%

…

ರೋಶ್ನಿ ಹೋಮ್ ಲೋನ್‌ಗಳು

ಅರ್ಹತಾ ಮಾನದಂಡ

ಈ ಕೆಳಗಿನವರಿಗೆ ಮನೆ ಖರೀದಿ ಲೋನ್‌ಗಳು ಲಭ್ಯವಿವೆ:
  • Right Arrow Button = “>”

    ಸ್ಥಳೀಯ ಮತ್ತು ಸ್ಥಿರ ಬಿಸಿನೆಸ್ ಸಂಸ್ಥೆಯ ಸಂಬಳದ ಉದ್ಯೋಗಿ. ಉದ್ಯೋಗದಾತರ ಕಂಪನಿಯು ಏಕಮಾತ್ರ ಮಾಲೀಕತ್ವ/ಪಾಲುದಾರಿಕೆ/ಪ್ರೈವೇಟ್ ಲಿಮಿಟೆಡ್/ಲಿಮಿಟೆಡ್ ಕಂಪನಿ/ಟ್ರಸ್ಟ್ ಹೀಗೆ ಯಾವುದೂ ಆಗಿರಬಹುದು.

  • Right Arrow Button = “>”

    ಕಡಿಮೆ/ಮಧ್ಯಮ ಆದಾಯ ಗುಂಪಿಗೆ ಸೇರಿದ ಅನೌಪಚಾರಿಕ ಆದಾಯದೊಂದಿಗೆ, ಮಾಸಿಕ ₹10,000 ದಷ್ಟು ಕಡಿಮೆ ಕುಟುಂಬ ಆದಾಯ ಹೊಂದಿರುವ ಸ್ವಯಂ ಉದ್ಯೋಗಿ ವ್ಯಕ್ತಿ. ಸಹ-ಅರ್ಜಿದಾರರು ಇರುವಾಗ ಇದು ಸಂಯೋಜಿತ ಆದಾಯಕ್ಕೆ ಕೂಡ ಅನ್ವಯವಾಗುತ್ತದೆ.

  • Right Arrow Button = “>”

    ಲೋನ್ ಮೆಚ್ಯೂರಿಟಿ ಸಮಯದಲ್ಲಿ, ನಿಮ್ಮ ವಯಸ್ಸು 70 ವರ್ಷಗಳಿಗಿಂತ ಹೆಚ್ಚಾಗಿರಬಾರದು.

ಬೇರೆ ಏನನ್ನಾದರೂ ನೋಡುತ್ತಿದ್ದೀರಾ?

ನಮ್ಮನ್ನು ಸಂಪರ್ಕಿಸಿ

ನಿಮ್ಮ ಮನೆಯಿಂದಲೇ ಆರಾಮಾಗಿ ನಿಮ್ಮ ಕಂಪ್ಯೂಟರ್ ಅಥವಾ ಸ್ಮಾರ್ಟ್‌ಫೋನ್ ಬಳಸಿ.
ಕಾಲ್ ಬ್ಯಾಕಿಗೆ ಕೋರಿಕೆ ಸಲ್ಲಿಸಿ
ನಿಮ್ಮ ಅವಶ್ಯಕತೆಯ ಬಗ್ಗೆ ಮಾರ್ಗದರ್ಶನ ನೀಡಲು ಸಹಾಯ ಮಾಡುವ ರಿಲೇಶನ್‌ಶಿಪ್ ಮ್ಯಾನೇಜರ್‌ ಜೊತೆಗೆ ಮಾತನಾಡಿ.
ನೀವು pnbhfl ಎಂದು ಟೈಪ್ ಮಾಡಿ ಅದನ್ನು 56161 ಗೆ ಎಸ್‍ಎಂಎಸ್ ಕಳುಹಿಸಬಹುದು
800-120-8800 ನಲ್ಲಿ ನೀವು ನಮ್ಮ ಎಕ್ಸ್‌ಪರ್ಟ್ ಅನ್ನು ಸಂಪರ್ಕಿಸಬಹುದು ಮತ್ತು ನಿಮ್ಮ ಫೈನಾನ್ಶಿಯಲ್ ಅವಶ್ಯಕತೆಗಳನ್ನು ಶೇರ್ ಮಾಡಬಹುದು

ರೋಶ್ನಿ ಹೋಮ್ ಲೋನ್‌ಗಳು 

ಆಗಾಗ ಕೇಳುವ ಪ್ರಶ್ನೆಗಳು

ನಾನು ಪಿಎನ್‌ಬಿ ಹೌಸಿಂಗ್ ರೋಶ್ನಿ ಹೋಮ್ ಲೋನಿಗೆ ಅರ್ಹನಾಗಿದ್ದೇನೆಯೇ?

ಸ್ಥಿರ ಆದಾಯ ಮೂಲದೊಂದಿಗೆ 21-65 ವಯಸ್ಸಿನ ಯಾವುದೇ ಸಂಬಳ ಪಡೆಯುವ ಅಥವಾ ಸ್ವಯಂ ಉದ್ಯೋಗಿ ವ್ಯಕ್ತಿ ಅರ್ಹರಾಗಿರುತ್ತಾರೆ. ಆದಾಯ, ಕ್ರೆಡಿಟ್ ಇತಿಹಾಸ, ಆಸ್ತಿ ಪ್ರಕಾರ, ಸಹ-ಅರ್ಜಿದಾರರ ಲಭ್ಯತೆ ಮತ್ತು ಮರುಪಾವತಿ ಸಾಮರ್ಥ್ಯದ ಆಧಾರದ ಮೇಲೆ ನಾವು ಕಸ್ಟಮೈಜ್ ಮಾಡಿದ ಲೋನ್ ಪರಿಹಾರಗಳನ್ನು ಒದಗಿಸುತ್ತೇವೆ. ನಿಮಗೆ ಖಚಿತತೆ ಇಲ್ಲದಿದ್ದರೆ, ನಿಮ್ಮ ಅರ್ಹತೆಯ ಬಗ್ಗೆ ತ್ವರಿತವಾಗಿ ನಿಮಗೆ ಮಾರ್ಗದರ್ಶನ ನೀಡಲು ನಮ್ಮ ತಜ್ಞರು ಇಲ್ಲಿದ್ದಾರೆ.

ನಾನು ಎಷ್ಟು ಲೋನ್ ಮೊತ್ತವನ್ನು ಪಡೆಯಬಹುದು ಮತ್ತು ಅದನ್ನು ಹೇಗೆ ನಿರ್ಧರಿಸಲಾಗುತ್ತದೆ?

ಲೋನ್ ಮೊತ್ತಗಳು ಸಾಮಾನ್ಯವಾಗಿ ಆಸ್ತಿಯ ಮಾರುಕಟ್ಟೆ ಮೌಲ್ಯದ 70% ರಿಂದ 90% ವರೆಗೆ ಇರುತ್ತವೆ. ಇದನ್ನು ಆಸ್ತಿ ಪ್ರಕಾರ ಮತ್ತು ಮೌಲ್ಯ, ಲೋನ್ ಪ್ರಕಾರ, ನಿಮ್ಮ ಆದಾಯ ಮತ್ತು ಮರುಪಾವತಿ ಸಾಮರ್ಥ್ಯ ಮತ್ತು ಕ್ರೆಡಿಟ್ ಸ್ಕೋರ್ ಮುಂತಾದ ಅಂಶಗಳಿಂದ ನಿರ್ಧರಿಸಲಾಗುತ್ತದೆ. ನಮ್ಮ ಆನ್ಲೈನ್ ಕ್ಯಾಲ್ಕುಲೇಟರ್ ಬಳಸಿಕೊಂಡು ನೀವು ನಿಮ್ಮ ಅರ್ಹತೆಯನ್ನು ತ್ವರಿತವಾಗಿ ಅಂದಾಜು ಮಾಡಬಹುದು.

ಪಿಎನ್‌ಬಿ ಹೌಸಿಂಗ್ ರೋಶ್ನಿ ಹೋಮ್ ಲೋನ್‌ಗಳಿಗೆ ಬಡ್ಡಿ ದರಗಳು ಮತ್ತು ಕಾಲಾವಧಿಯ ಆಯ್ಕೆಗಳು ಯಾವುವು?

30 ವರ್ಷಗಳವರೆಗಿನ ಅವಧಿಗಳೊಂದಿಗೆ ನಮ್ಮ ರೋಶ್ನಿ ಹೋಮ್ ಲೋನ್ ಬಡ್ಡಿ ದರಗಳು ವರ್ಷಕ್ಕೆ 10.50% ರಿಂದ ಆರಂಭವಾಗುತ್ತವೆ. ಫ್ಲೆಕ್ಸಿಬಲ್ ಕಾಲಾವಧಿ ಆಯ್ಕೆಗಳು ನಿಮ್ಮ ಹಣಕಾಸಿನ ಯೋಜನೆಗಳಿಗೆ ಸರಿಹೊಂದುವ ಮರುಪಾವತಿ ಅವಧಿಯನ್ನು ಆಯ್ಕೆ ಮಾಡಲು ನಿಮಗೆ ಅನುಮತಿ ನೀಡುತ್ತವೆ.

ಆದಾಯ ತೆರಿಗೆ ರಿಟರ್ನ್ ಇಲ್ಲದೆ ಅಥವಾ ನಗದು ಆದಾಯದೊಂದಿಗೆ ನಾನು ರೋಶ್ನಿ ಹೋಮ್ ಲೋನ್ ಪಡೆಯಬಹುದೇ?

ಹೌದು, ಔಪಚಾರಿಕ ಆದಾಯ ತೆರಿಗೆ ದಾಖಲೆಗಳನ್ನು ಹೊಂದಿಲ್ಲದಿರಬಹುದಾದ ಆದರೆ ಪರಿಶೀಲಿಸಬಹುದಾದ ಆದಾಯ ಮೂಲಗಳನ್ನು ಹೊಂದಿರುವ ಗ್ರಾಹಕರಿಗೆ ನಾವು ಆಯ್ಕೆಗಳನ್ನು ಹೊಂದಿದ್ದೇವೆ. ನಮ್ಮ ಲೋನ್ ಸಲಹೆಗಾರರು ನಿಮ್ಮ ಪ್ರಕರಣವನ್ನು ಮೌಲ್ಯಮಾಪನ ಮಾಡಲು ಮತ್ತು ಅಂತಹ ಸಂದರ್ಭದಲ್ಲಿ ಅತ್ಯುತ್ತಮ ಲೋನ್ ಆಯ್ಕೆಗಳನ್ನು ಸೂಚಿಸಿ ಸಹಾಯ ಮಾಡಬಹುದು.

ಹೋಮ್ ಲೋನ್‌ಗಳಿಗೆ ಫಿಕ್ಸೆಡ್ ಮತ್ತು ಫ್ಲೋಟಿಂಗ್ ಬಡ್ಡಿ ದರದ ನಡುವಿನ ವ್ಯತ್ಯಾಸವೇನು?

ಫಿಕ್ಸೆಡ್ ಬಡ್ಡಿ ದರವು ಲೋನ್ ಅವಧಿಯುದ್ದಕ್ಕೂ ಸ್ಥಿರವಾಗಿರುತ್ತದೆ, ಅಂದಾಜು ಇಎಂಐಗಳನ್ನು ಒದಗಿಸುತ್ತದೆ. ಆದಾಗ್ಯೂ, ಫ್ಲೋಟಿಂಗ್ ದರವು ಮಾರುಕಟ್ಟೆಯ ಏರಿಳಿತಗಳ ಆಧಾರದ ಮೇಲೆ ಬದಲಾಗಬಹುದು, ಬಡ್ಡಿ ದರಗಳು ಕಡಿಮೆಯಾದರೆ ಸಂಭಾವ್ಯವಾಗಿ ಕಡಿಮೆ ಪಾವತಿಗಳಿಗೆ ಕಾರಣವಾಗುತ್ತದೆ. ಪಿಎನ್‌ಬಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ನಿಮ್ಮ ಹಣಕಾಸಿನ ಗುರಿಗಳಿಗೆ ಸರಿಹೊಂದುವಂತೆ ಫಿಕ್ಸೆಡ್ ಮತ್ತು ಫ್ಲೋಟಿಂಗ್ ಎರಡೂ ಆಯ್ಕೆಗಳನ್ನು ಒದಗಿಸುತ್ತದೆ.

ನಾನು ನನ್ನ ಹೋಮ್ ಲೋನನ್ನು ಮುಂಗಡ ಪಾವತಿ ಮಾಡಬಹುದೇ ಮತ್ತು ಯಾವುದೇ ಶುಲ್ಕಗಳಿವೆಯೇ?

ಹೌದು, ನಿಮ್ಮ ಒಟ್ಟಾರೆ ಬಡ್ಡಿ ಹೊರೆಯನ್ನು ಕಡಿಮೆ ಮಾಡಲು ನೀವು ನಿಮ್ಮ ಹೋಮ್ ಲೋನನ್ನು ಭಾಗಶಃ ಅಥವಾ ಪೂರ್ಣವಾಗಿ* ಮುಂಗಡ ಪಾವತಿ ಮಾಡಬಹುದು. ಪಿಎನ್‌ಬಿ ಹೌಸಿಂಗ್ ಫ್ಲೆಕ್ಸಿಬಲ್ ಮುಂಪಾವತಿ ಆಯ್ಕೆಗಳನ್ನು ಒದಗಿಸುತ್ತದೆ ಮತ್ತು ಸಾಮಾನ್ಯವಾಗಿ ಫ್ಲೋಟಿಂಗ್-ದರದ ಲೋನ್‌ಗಳ ಮೇಲೆ ಯಾವುದೇ ಶುಲ್ಕಗಳಿಲ್ಲ* (ವೈಯಕ್ತಿಕ ಹೋಮ್ ಲೋನ್‌ಗಳಿಗೆ ಮಾತ್ರ ಅನ್ವಯವಾಗುತ್ತದೆ). ಫಿಕ್ಸೆಡ್-ದರದ ಲೋನ್‌ಗಳಿಗೆ, ಕನಿಷ್ಠ ಶುಲ್ಕಗಳು* ಅನ್ವಯವಾಗಬಹುದು ಮತ್ತು ನಮ್ಮ ಸಲಹೆಗಾರರು ನಿಮ್ಮ ಲೋನ್ ಪ್ರಕಾರದ ಆಧಾರದ ಮೇಲೆ ನಿರ್ದಿಷ್ಟ ಮಾರ್ಗದರ್ಶನವನ್ನು ಒದಗಿಸಬಹುದು.

ಪಿಎನ್‌ಬಿ ಹೌಸಿಂಗ್ ರೋಶ್ನಿ ಹೋಮ್ ಲೋನಿಗೆ ನಾನು ಹೇಗೆ ಅಪ್ಲೈ ಮಾಡಬಹುದು?

ಈ ಪುಟದಲ್ಲಿ ನಮ್ಮ ತ್ವರಿತ ಲೀಡ್ ಫಾರ್ಮ್ ಅನ್ನು ಭರ್ತಿ ಮಾಡುವ ಮೂಲಕ ನೀವು ನಿಮ್ಮ ಅಪ್ಲಿಕೇಶನ್ ಅನ್ನು ಆರಂಭಿಸಬಹುದು. ಮುಂದಿನ ಹಂತಗಳ ಮೂಲಕ ನಿಮಗೆ ಮಾರ್ಗದರ್ಶನ ನೀಡಲು ನಮ್ಮ ತಜ್ಞರಲ್ಲಿ ಒಬ್ಬರು ಆದಷ್ಟು ಬೇಗ ನಿಮ್ಮನ್ನು ಸಂಪರ್ಕಿಸುತ್ತಾರೆ.

Request Call Back at PNB Housing
ಕಾಲ್ ಬ್ಯಾಕ್ ಮಾಡಿ