ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಸ್ವಂತ ಮನೆಯನ್ನು ಮಾಡಿಕೊಳ್ಳುವುದು ಒಂದು ಮೈಲಿಗಲ್ಲಾಗಿದೆ. ಮನೆ ಖರೀದಿಸಲು, ಅನೇಕ ಬಾರಿ ಒಬ್ಬ ವ್ಯಕ್ತಿಯು ಸಾಲದಾತರಿಂದ ಹಣಕಾಸಿನ ನೆರವನ್ನು ಬಳಸುತ್ತಾರೆ, ಈ ನಿರ್ದಿಷ್ಟ ರೀತಿಯ ಲೋನನ್ನು ಹೋಮ್ ಲೋನ್ ಎಂದು ಕರೆಯಲಾಗುತ್ತದೆ.
ಹೋಮ್ ಲೋನ್ ಪ್ರಕ್ರಿಯೆಯ ಭಾಗವಾಗಿ, ಹಣಕಾಸು ಸಂಸ್ಥೆಗಳು ಅಥವಾ ಬ್ಯಾಂಕುಗಳು ಡಾಕ್ಯುಮೆಂಟ್ ಪರಿಶೀಲನೆ, ಮುಂಚಿತ-ಮಂಜೂರಾತಿ ತಪಾಸಣೆ, ಕಾನೂನು ಕಾರ್ಯಾಚರಣೆಗಳು ಮುಂತಾದ ಕಾರ್ಯಗಳನ್ನು ನಡೆಸುತ್ತವೆ, ಇದಕ್ಕಾಗಿ ಅವರು ಕೆಲವು ಶುಲ್ಕವನ್ನು ವಿಧಿಸುತ್ತಾರೆ. ಈ ಶುಲ್ಕವನ್ನು ಸಾಮಾನ್ಯವಾಗಿ ಹೋಮ್ ಲೋನ್ ಪ್ರಕ್ರಿಯಾ ಶುಲ್ಕ ಎಂದು ಕರೆಯಲಾಗುತ್ತದೆ.
ಹೋಮ್ ಲೋನ್ ಪ್ರಕ್ರಿಯಾ ಶುಲ್ಕ ಎಂದರೇನು?
ಹೋಮ್ ಲೋನ್ ಪ್ರಕ್ರಿಯಾ ಶುಲ್ಕವನ್ನು ಅಪ್ಲಿಕೇಶನ್ ಶುಲ್ಕ ಎಂದು ಕೂಡ ಕರೆಯಲಾಗುತ್ತದೆ, ಇದು ಲೋನ್ ಪ್ರಕ್ರಿಯೆಯ ಭಾಗವಾಗಿ ಹಣಕಾಸು ಸಂಸ್ಥೆಗಳು ವಿಧಿಸುವ ಶುಲ್ಕಗಳಲ್ಲಿ ಒಂದಾಗಿದೆ. ಅನೇಕ ಸಂಸ್ಥೆಗಳು ಇದನ್ನು ಒಂದು ಬಾರಿ ವಿಧಿಸಿದರೆ, ಅವುಗಳಲ್ಲಿ ಕೆಲವು ಸಂಸ್ಥೆಗಳು, ಲಾಗಿನ್ ಸಮಯದಲ್ಲಿ ಒಂದು ಭಾಗವನ್ನು ಮತ್ತು ವಿತರಣೆಯ ಸಮಯದಲ್ಲಿ ಉಳಿದ ಇನ್ನೊಂದು ಭಾಗವನ್ನು 2 ಭಾಗಗಳಾಗಿ ಈ ಪ್ರಕ್ರಿಯಾ ಶುಲ್ಕವನ್ನು ವಿಧಿಸುತ್ತವೆ. ಮಾಹಿತಿಯುಕ್ತ ನಿರ್ಧಾರವನ್ನು ತೆಗೆದುಕೊಳ್ಳಲು ಅರ್ಜಿದಾರರು ತಮ್ಮ ಆಯ್ಕೆ ಮಾಡಿದ ಸಾಲದಾತರು ವಿಧಿಸುವ ಹೋಮ್ ಲೋನ್ ಪ್ರಕ್ರಿಯಾ ಶುಲ್ಕಗಳ ಬಗ್ಗೆ ತಿಳಿದುಕೊಳ್ಳುವುದು ಮುಖ್ಯವಾಗಿದೆ.
ಹೌಸಿಂಗ್ ಲೋನ್ ಪ್ರಕ್ರಿಯಾ ಶುಲ್ಕ ಎಷ್ಟು?
ಹೌಸಿಂಗ್ ಲೋನ್ ಪ್ರಕ್ರಿಯಾ ಶುಲ್ಕವು ಒಟ್ಟು ಲೋನ್ ಮೊತ್ತದ ಶೇಕಡಾವಾರು ಆಗಿದೆ. ಹೋಮ್ ಲೋನ್ ಆಯ್ಕೆ ಮಾಡಲು ಬಯಸುವವರು ಸಾಲ ನೀಡುವ ಕಂಪನಿಗೆ ಪಾವತಿಸಬೇಕಾದ ಮೊತ್ತದ ಕುರಿತು ಚೆನ್ನಾಗಿ ತಿಳಿದಿರಬೇಕು.
ಮೊತ್ತವು ವಿವಿಧ ಹಣಕಾಸು ಸಂಸ್ಥೆಗಳ ನಡುವೆ ಭಿನ್ನವಾಗಿರುವಾಗ, ಪಿಎನ್‌ಬಿ ಹೌಸಿಂಗ್ ಹೋಮ್ ಲೋನ್ ಪ್ರಕ್ರಿಯಾ ಶುಲ್ಕ* ಹೋಮ್ ಲೋನ್‌ಗೆ 1% ವರೆಗೆ ಇರುತ್ತದೆ. ಕೆಲವು ಸಾಲದಾತರು ಶೂನ್ಯ ಪ್ರಕ್ರಿಯಾ ಶುಲ್ಕವನ್ನು ಕೂಡ ಒದಗಿಸುತ್ತಾರೆ. ಕೆಲವು ಸಾಲದಾತರು ಸಂಬಳ ಪಡೆಯುವ ಗ್ರಾಹಕರಿಗೆ ವಿಶೇಷ ಆಫರ್‌ಗಳನ್ನು ನೀಡುತ್ತಾರೆ. ಪ್ರಸ್ತುತ ಪ್ರಕ್ರಿಯಾ ಶುಲ್ಕದ ಆಫರ್‌ಗಳ ಕುರಿತು ನಿಮ್ಮ ಸಾಲದಾತರಿಂದ ನೀವು ಮಾಹಿತಿ ಪಡೆಯಬಹುದು.
ಓದಲೇಬೇಕಾದವು: ಹೋಮ್ ಲೋನಿಗೆ ಉತ್ತಮ ಸಿಬಿಲ್ ಸ್ಕೋರ್ ಎಷ್ಟು?
ಹೋಮ್ ಲೋನ್‌ಗೆ ಅನ್ವಯವಾಗುವ ಇತರ ಶುಲ್ಕಗಳ ಲಿಸ್ಟ್
ಹಣಕಾಸು ಸಂಸ್ಥೆಯು ಹೋಮ್ ಲೋನ್ ನೀಡಿದಾಗ, ಹೋಮ್ ಲೋನ್‌ನ ಪ್ರಕ್ರಿಯಾ ಶುಲ್ಕಗಳಲ್ಲಿ ಸೇರಿರದ ಹಲವಾರು ಇತರ ಶುಲ್ಕಗಳನ್ನು ವಿಧಿಸಬಹುದು. ಈ ಶುಲ್ಕಗಳನ್ನು ಪ್ರತಿ ಹಣಕಾಸು ಸಂಸ್ಥೆಯು ಬೇರೆ ಬೇರೆ ಹೆಸರಿನಿಂದ ಗುರುತಿಸಬಹುದು.
ಹೋಮ್ ಲೋನ್‌ಗೆ ಅಪ್ಲೈ ಮಾಡುವಾಗ, ಅರ್ಜಿದಾರರು ಈ ಕೆಳಗಿನ ಫೀಸ್ ಮತ್ತು ಶುಲ್ಕಗಳ ಬಗ್ಗೆ ತಿಳಿದುಕೊಳ್ಳುವುದು ಮುಖ್ಯವಾಗಿದೆ:
ಆಸ್ತಿಯ ಮೇಲೆ ಇನ್ಶೂರೆನ್ಸ್
ಯಾವುದೇ ಅಹಿತಕರ ಘಟನೆ ನಡೆದ ಸಂದರ್ಭದಲ್ಲಿ ಹೊಣೆಗಾರಿಕೆಯ ಮೇಲೆ ಸುರಕ್ಷಿತವಾಗಿರುವ ಉದ್ದೇಶಕ್ಕಾಗಿ ಖರೀದಿಸಿದ ಆಸ್ತಿಯ ಮೇಲೆ ಇನ್ಶೂರೆನ್ಸ್ ತೆಗೆದುಕೊಳ್ಳುವಂತೆ ಸಲಹೆ ನೀಡಲಾಗಿದೆ. ಸಾಲದಾತರು ಸಾಮಾನ್ಯವಾಗಿ ಈ ಶುಲ್ಕಗಳನ್ನು ಇಎಂಐ ನೊಂದಿಗೆ ತೆಗೆದುಕೊಳ್ಳುತ್ತಾರೆ.
ತಡವಾದ ಪಾವತಿ
ಸಾಲಗಾರರು ತಮ್ಮ ಮಾಸಿಕ ಇಎಂಐ ಅನ್ನು ತಪ್ಪಿಸಿದಾಗ, ಅವರು ದಂಡ ಶುಲ್ಕಗಳನ್ನು ಪಾವತಿಸಲು ಬದ್ಧರಾಗಿರುತ್ತಾರೆ. ಕೆಲವು ಸಾಲದಾತರು 2% ವರೆಗೆ ಈ ಶುಲ್ಕಗಳನ್ನು ವಿಧಿಸಬಹುದು. ವಿಳಂಬ ಪಾವತಿಗಳು ಮರುಕಳಿಸುತ್ತಿದ್ದರೆ ಅರ್ಜಿದಾರರ ಸಿಬಿಲ್ ಸ್ಕೋರ್ ಮೇಲೆ ಕಳಪೆ ಪರಿಣಾಮ ಬೀರಬಹುದು, ಇದು ಭವಿಷ್ಯದ ಹಣಕಾಸಿನ ಟ್ರಾನ್ಸಾಕ್ಷನ್‌ಗಳಿಗೆ ಅಡಚಣೆಯನ್ನು ಸೃಷ್ಟಿಸಬಹುದು.
ಪೂರ್ವಪಾವತಿ ಶುಲ್ಕಗಳು
ಸಾಲಗಾರರು ಮೆಚ್ಯೂರಿಟಿಗೆ ಮೊದಲು ಲೋನ್ ಅನ್ನು ಮುಚ್ಚಲು ನಿರ್ಧರಿಸಿದರೆ, ಸಾಲದಾತರು ಮುಂಗಡ ಪಾವತಿ ದಂಡವನ್ನು ವಿಧಿಸಬಹುದು. ಈ ಶುಲ್ಕಗಳನ್ನು ಪ್ರಿ-ಕ್ಲೋಸರ್ ಅಥವಾ ಫೋರ್‌ಕ್ಲೋಸರ್ ಶುಲ್ಕಗಳು ಎಂದೂ ಕರೆಯಲಾಗುತ್ತದೆ.
ಓದಲೇಬೇಕಾದವು: 45 ರ ನಂತರ ಹೋಮ್ ಲೋನ್‌ಗೆ ಅಪ್ಲೈ ಮಾಡಲು ಸಲಹೆಗಳು
ಮುಕ್ತಾಯ
ಪಿಎನ್‌ಬಿ ಹೌಸಿಂಗ್ ಸಂಬಳ ಪಡೆಯುವವರಿಗೆ ವರ್ಷಕ್ಕೆ 8.75%* ರಿಂದ ಮತ್ತು ಸ್ವಯಂ ಉದ್ಯೋಗಿ ಅರ್ಜಿದಾರರಿಗೆ 8.80%* ರಿಂದ ಆರಂಭವಾಗುವ ಕಡಿಮೆ ಬಡ್ಡಿ ದರಗಳಲ್ಲಿ ಹೋಮ್ ಲೋನ್‌ಗಳನ್ನು ಒದಗಿಸುತ್ತದೆ. ಹೋಮ್ ಲೋನ್ ಬಡ್ಡಿ ದರವು ಅರ್ಜಿದಾರರ ಸಿಬಿಲ್ ಸ್ಕೋರ್ ಮತ್ತು ಲೋನ್ ಮೊತ್ತ, ಅಸ್ತಿತ್ವದಲ್ಲಿರುವ ಲೋನ್‌ಗಳು, ಕಾಲಾವಧಿ ಮುಂತಾದ ಇತರ ಅಂಶಗಳನ್ನು ಅವಲಂಬಿಸಿರುತ್ತದೆ. ಈ ಲೋನ್‌ನ ಅವಧಿಯು ಅರ್ಹತೆ ಮತ್ತು ಲೋನ್ ಮೊತ್ತವನ್ನು ಅವಲಂಬಿಸಿರುತ್ತದೆ.
ಪಿಎನ್‌ಬಿ ಹೌಸಿಂಗ್‌ನಲ್ಲಿ, ನೀವು ಪ್ರತ್ಯೇಕ ರಿಲೇಶನ್‌ಶಿಪ್ ಮ್ಯಾನೇಜರ್, ಅನೇಕ ಮರುಪಾವತಿ ಆಯ್ಕೆಗಳು ಮತ್ತು ಕಸ್ಟಮೈಸ್ ಮಾಡಿದ ಅರ್ಹತಾ ಕಾರ್ಯಕ್ರಮಗಳ ಬೆಂಬಲದೊಂದಿಗೆ ಕಡಿಮೆ ಹೋಮ್ ಲೋನ್ ಪ್ರಕ್ರಿಯಾ ಶುಲ್ಕವನ್ನು ಆನಂದಿಸಬಹುದು.
ಗಮನಿಸಿ:- ಮೇಲೆ ತಿಳಿಸಿದ ಫೀಸ್/ಶುಲ್ಕಗಳು ಮತ್ತು ದರಗಳು ಕಂಪನಿಯ ವಿವೇಚನೆಯನ್ನು ಅನುಸರಿಸಿ ಬದಲಾಗಬಹುದು.