PNB Housing Finance Limited

ಎನ್ಎಸ್ಇ:

ಬಿಎಸ್ಇ:

ಕೊನೆಯ ಅಪ್ಡೇಟ್:

 

ಹೋಮ್ ಲೋನ್‌

ಬಡ್ಡಿ ದರ

ಪಿಎನ್‌ಬಿ ಹೌಸಿಂಗ್‌ನೊಂದಿಗೆ ನಿಮ್ಮ ಹೊಸ ಮನೆ ಖರೀದಿ, ನಿರ್ಮಾಣ ಅಥವಾ ನವೀಕರಣಕ್ಕೆ ಹಣಕಾಸು ಒದಗಿಸುವುದು ಎಂದೆಂದಿಗಿಂತ ಸುಲಭ.

ನಿಮ್ಮ ಹೋಮ್ ಲೋನ್ ಬಡ್ಡಿ ದರಗಳು ಸಾಧ್ಯವಾದಷ್ಟು ಕಡಿಮೆ ಮತ್ತು ಕೈಗೆಟಕುವಂತೆ ಇರಬೇಕು ಎಂದು ನಾವು ನಂಬುತ್ತೇವೆ. ಆದ್ದರಿಂದ ನಾವು ಎಲ್ಲಾ ಅರ್ಜಿದಾರರಿಗೆ- ಸಂಬಳ ಪಡೆಯುವವರಾಗಿರಲಿ ಅಥವಾ ಸ್ವಯಂ ಉದ್ಯೋಗಿಯಾಗಿರಲಿ, ಆಕರ್ಷಕ ಹೌಸಿಂಗ್ ಲೋನ್ ಬಡ್ಡಿ ದರಗಳನ್ನು ಒದಗಿಸುತ್ತೇವೆ.

*ಗಮನಿಸಿ: ಪಿಎನ್‌ಬಿ ಹೌಸಿಂಗ್ ಫ್ಲೋಟಿಂಗ್ ಬಡ್ಡಿ ದರಗಳಲ್ಲಿ ಹೋಮ್ ಲೋನ್‌ಗಳನ್ನು ಒದಗಿಸುತ್ತದೆ.
ಪಿಎನ್‌ಬಿ ಹೌಸಿಂಗ್ ನೀಡುವ ಕಡಿಮೆ ಬಡ್ಡಿ ದರಗಳೊಂದಿಗೆ ನಿಮ್ಮ ಮನೆಯ ಕನಸನ್ನು ನನಸಾಗಿಸಿಕೊಳ್ಳಿ
ನಿಮ್ಮ ಕ್ರೆಡಿಟ್ ಸ್ಕೋರ್‌ಗೆ ಒಳಪಟ್ಟು, ಪ್ರಸ್ತುತ ಆಫರ್ ಮೇಲಿನ ಹೋಮ್ ಲೋನ್ ದರಗಳಿಗಾಗಿ ಕೆಳಗಿನ ಟೇಬಲ್ ಪರಿಶೀಲಿಸಿ.
ಕ್ರೆಡಿಟ್ ಸ್ಕೋರ್ ವೇತನದಾರ ಸಂಬಳ ಪಡೆಯದವರು
>=825 8.5% ನಿಂದ 9% 8.8% ನಿಂದ 9.3%
>800 ನಿಂದ 825 8.8% ನಿಂದ 9.3% 8.95% ನಿಂದ 9.45%
>775 ನಿಂದ 799 9.1% ನಿಂದ 9.6% 9.65% ನಿಂದ 10.15%
>750 ನಿಂದ <=775 9.25% ನಿಂದ 9.75% 9.8% ನಿಂದ 10.3%
> 725 ನಿಂದ < =750 9.55% ನಿಂದ 10.05% 10.25% ನಿಂದ 10.75%
> 700 ನಿಂದ <= 725 9.85% ನಿಂದ 10.35% 10.55% ನಿಂದ 11.05%
>650 ನಿಂದ <=700 10.25% ನಿಂದ 10.75% 10.75% ನಿಂದ 11.25%
650 ರ ವರೆಗೆ 10.25% ನಿಂದ 10.75% 10.75% ನಿಂದ 11.25%
ಎನ್‌ಟಿಸಿ ಸಿಬಿಲ್ >=170 10.25% ನಿಂದ 10.75% 10.65% ನಿಂದ 11.15%
ಎನ್‌ಟಿಸಿ ಸಿಬಿಲ್ <170 10.15% ನಿಂದ 10.65% 10.55% ನಿಂದ 11.05%

ಹೋಮ್ ಲೋನ್‌ಗೆ ಫಿಕ್ಸೆಡ್ ದರ – 14.75%

*ಬಡ್ಡಿ ದರಗಳು ಪಿಎನ್‌ಬಿ ಹೌಸಿಂಗ್‌ನ ಸ್ವಂತ ವಿವೇಚನೆಯಿಂದ ಬದಲಾಗಬಹುದು.

**ಎನ್‌ಟಿಸಿ: ಕ್ರೆಡಿಟ್‌ಗೆ ಹೊಸತು

₹ 35 ಲಕ್ಷಕ್ಕಿಂತ ಹೆಚ್ಚಿನ ಹೋಮ್ ಲೋನ್ ಮೊತ್ತವನ್ನು ಹುಡುಕುತ್ತಿದ್ದೀರಾ? ಚಿಂತೆ ಬೇಡ! ಪಿಎನ್‌ಬಿ ಹೌಸಿಂಗ್ ಹೆಚ್ಚಿನ ಹೋಮ್ ಲೋನ್ ಮೊತ್ತದ ಅಗತ್ಯವಿರುವ ಅರ್ಜಿದಾರರಿಗೆ ಹೋಮ್ ಲೋನ್‌ಗಳ ಮೇಲೆ ಆಕರ್ಷಕ ಬಡ್ಡಿ ದರವನ್ನು ನೀಡುತ್ತದೆ
ಹೆಚ್ಚಿನ ಹೋಮ್ ಲೋನ್ ಮೊತ್ತದ ಅಗತ್ಯವಿರುವ ಅರ್ಜಿದಾರರು. ಹೆಚ್ಚಿನ ವಿವರಗಳಿಗಾಗಿ ಕೆಳಗಿನ ಟೇಬಲ್ ಪರಿಶೀಲಿಸಿ ಮತ್ತು ನಿಮ್ಮ   ಹೋಮ್ ಲೋನ್ ದಾಖಲೆಗಳು    
ಜೊತೆಗೆ ಇರಿಸಿಕೊಳ್ಳಿ!
ಕ್ರೆಡಿಟ್ ಸ್ಕೋರ್ ವೇತನದಾರ ಸಂಬಳ ಪಡೆಯದವರು
>=825 8.5% ನಿಂದ 9% 8.8% ನಿಂದ 9.3%
>800 ನಿಂದ 825 8.8% ನಿಂದ 9.3% 8.95% ನಿಂದ 9.45%
>775 ನಿಂದ 799 9.2% ನಿಂದ 9.7% 9.8% ನಿಂದ 10.3%
>750 ನಿಂದ =775 9.35% ನಿಂದ 9.85% 10.15% ನಿಂದ 10.65%
>725 ನಿಂದ =750 9.7% ನಿಂದ 10.2% 10.3% ನಿಂದ 10.8%
>700 ನಿಂದ = 725 10.05% ನಿಂದ 10.55% 10.75% ನಿಂದ 11.25%
>650 ನಿಂದ = 700 10.45% ನಿಂದ 10.95% 10.95% ನಿಂದ 11.45%
650 ರ ವರೆಗೆ 10.45% ನಿಂದ 10.95% 10.95% ನಿಂದ 11.45%
ಎನ್‌ಟಿಸಿ ಸಿಬಿಲ್ >=170 10.45% ನಿಂದ 10.95% 10.85% ನಿಂದ 11.35%
ಎನ್‌ಟಿಸಿ ಸಿಬಿಲ್ <170 10.35% ನಿಂದ 10.85% 10.75% ನಿಂದ 11.25%

ಪಿಎನ್‌ಬಿ ಹೌಸಿಂಗ್ ಕಡಿಮೆ ಬಡ್ಡಿಯ ಹೋಮ್ ಲೋನ್‌ಗಳನ್ನು ಪಡೆಯಲು ಸಲಹೆಗಳು

ಭಾರತದಲ್ಲಿ ಆದಾಯ, ಲೋನ್ ಮೊತ್ತ, ಉದ್ಯೋಗದ ಪ್ರಕಾರ, ಸಿಬಿಲ್ ಸ್ಕೋರ್ ಇತ್ಯಾದಿಗಳಂತಹ ಹೌಸಿಂಗ್ ಲೋನ್ ಬಡ್ಡಿ ದರದ ಮೇಲೆ ಪರಿಣಾಮ ಬೀರುವ ಅನೇಕ ಅಂಶಗಳೊಂದಿಗೆ, ಗ್ರಾಹಕರು ಕಡಿಮೆ ಬಡ್ಡಿ ದರಕ್ಕೆ ತಮ್ಮ ಅರ್ಹತೆಯನ್ನು ಸುಧಾರಿಸಬಹುದು ಎಂದು ಖಚಿತಪಡಿಸಿಕೊಳ್ಳಬಹುದು.

ಭಾರತದಲ್ಲಿ ಅತ್ಯುತ್ತಮ ಹೋಮ್ ಲೋನ್ ದರಗಳನ್ನು ಪಡೆಯುವುದು ಹೇಗೆ ಎಂಬುದರ ಬಗ್ಗೆ ಕೆಲವು ಉಪಯುಕ್ತ ಸಲಹೆಗಳು ಇಲ್ಲಿವೆ:

  • ನಿಮ್ಮ ಡೌನ್ ಪೇಮೆಂಟ್ ಮತ್ತು ಕಾಲಾವಧಿಯನ್ನು ಹೆಚ್ಚಿಸಿ: ಸಾಮಾನ್ಯವಾಗಿ, ಹೆಚ್ಚಿನ ಲೋನ್ ಮೊತ್ತಗಳಿಗೆ ಹೋಲಿಸಿದರೆ ₹35 ಲಕ್ಷದವರೆಗಿನ ಹೋಮ್ ಲೋನ್ ಮೊತ್ತವು ಕಡಿಮೆ ಬಡ್ಡಿ ದರದಲ್ಲಿ ಲಭ್ಯವಿದೆ. ಆದ್ದರಿಂದ, ನಿಮ್ಮ ಲೋನ್ ಮೊತ್ತವನ್ನು ಕಡಿಮೆ ಮಾಡಲು ಡೌನ್ ಪೇಮೆಂಟ್‌ನಲ್ಲಿ ಸಾಧ್ಯವಾದಷ್ಟು ಪಾವತಿಸಲು ಪ್ರಯತ್ನಿಸಿ. ಹೆಚ್ಚುವರಿಯಾಗಿ, ನಿಮ್ಮ ಇಎಂಐ ಹೊರೆಯನ್ನು ಕಡಿಮೆ ಮಾಡಲು ಸಾಮಾನ್ಯವಾಗಿ 15-20 ಕ್ಕಿಂತ ಹೆಚ್ಚು ವರ್ಷದ ದೀರ್ಘ ಕಾಲಾವಧಿಯನ್ನು ಆಯ್ಕೆ ಮಾಡಿ.

  • ಸರಿಯಾದ ಬಡ್ಡಿ ದರವನ್ನು ಆಯ್ಕೆಮಾಡಿ: ಫಿಕ್ಸೆಡ್ ಬಡ್ಡಿ ದರವು ನಿಗದಿತ ಅವಧಿಗೆ ನಿಗದಿತ ಇಎಂಐ ಖರ್ಚನ್ನು ನಿಮಗೆ ನೀಡುತ್ತದೆ, ಆದರೆ ಫ್ಲೋಟಿಂಗ್ ಬಡ್ಡಿ ದರವು ಮಾರ್ಕೆಟ್ ಬಡ್ಡಿ ದರಗಳಲ್ಲಿ ಯಾವುದೇ ಅಸ್ಥಿರತೆಯ ಪ್ರಕಾರ ನಿಮ್ಮ ಕಾಲಾವಧಿಯನ್ನು ಹೆಚ್ಚಿಸುತ್ತದೆ ಅಥವಾ ಕಡಿಮೆ ಮಾಡುತ್ತದೆ. ಸಾಮಾನ್ಯವಾಗಿ, ಎರಡನೆಯದು ಮೊದಲಿಗಿಂತ ಸ್ವಲ್ಪ ಹೆಚ್ಚಾಗಿರುತ್ತದೆ. ಆದರೆ ಫಿಕ್ಸೆಡ್-ಬಡ್ಡಿ ಹೋಮ್ ಲೋನ್‌ಗಳು ಮಾರ್ಕೆಟ್‌ನಲ್ಲಿ ಅಪರೂಪಕ್ಕೆ ಲಭ್ಯವಿವೆ. ಅವರ ಬಡ್ಡಿ ದರಗಳನ್ನು ಅರ್ಥಮಾಡಿಕೊಳ್ಳಲು ನಿಮ್ಮ ಸಾಲದಾತರೊಂದಿಗೆ ಪರಿಶೀಲಿಸಿ.

  • ಆದಾಯ ಮತ್ತು ಉದ್ಯೋಗ ಸ್ಥಿತಿಯ ಅಂಶ: ಹೋಮ್ ಲೋನ್ ಅರ್ಜಿದಾರರು ಸ್ಥಿರ, ಸಾಕಷ್ಟು ಆದಾಯವನ್ನು ಹೊಂದಿದ್ದಾರೆ ಮತ್ತು ಆಕರ್ಷಕ ಬಡ್ಡಿ ದರಗಳನ್ನು ಪಡೆಯಲು ಪಿಎಸ್‌ಯು ಅಥವಾ ಪ್ರತಿಷ್ಠಿತ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಿ

  • ನಿಮ್ಮ ಕ್ರೆಡಿಟ್ ಸ್ಕೋರ್ ಹೆಚ್ಚಿಸಿಕೊಳ್ಳಿ: ನೀವು 750+ ಕ್ರೆಡಿಟ್ ಸ್ಕೋರ್ ಹೊಂದಿದ್ದರೆ, ಸಾಲದಾತರು ನಿಮ್ಮ ಹೋಮ್ ಲೋನ್ ಅರ್ಹತೆಯನ್ನು ವಿಶ್ವಾಸಾರ್ಹವೆಂದು ಪರಿಗಣಿಸುತ್ತಾರೆ. ಆದ್ದರಿಂದ, ಕಡಿಮೆ ಬಡ್ಡಿಯ ಹೋಮ್ ಲೋನ್‌ಗೆ ಅಪ್ಲೈ ಮಾಡುವ ಮೊದಲು ನಿಮ್ಮ ಕ್ರೆಡಿಟ್ ಅರ್ಹತೆಯನ್ನು ಸುಧಾರಿಸಲು ಪ್ರಯತ್ನಿಸಿ.

  • ಮಹಿಳಾ ಅರ್ಜಿದಾರರನ್ನು ಪರಿಗಣಿಸಿ: ಅನೇಕ ಸಾಲದಾತರು ಮಹಿಳಾ ಹೋಮ್ ಲೋನ್ ಅರ್ಜಿದಾರರಿಗೆ ಬಡ್ಡಿ ದರದಲ್ಲಿ ಕೆಲವು ರಿಯಾಯಿತಿಯನ್ನು ಒದಗಿಸುತ್ತಾರೆ ಎಂದು ನಿಮಗೆ ತಿಳಿದಿದೆಯೇ? ಮಹಿಳೆಯರನ್ನು ಪ್ರಾಥಮಿಕ ಅರ್ಜಿದಾರರನ್ನಾಗಿ ಮಾಡುವುದು ಕಡಿಮೆ ಹೌಸಿಂಗ್ ಲೋನ್ ಬಡ್ಡಿ ದರವನ್ನು ಪಡೆಯಲು ನಿಮಗೆ ಸಹಾಯ ಮಾಡುವುದೇ ಎಂದು ತಿಳಿಯಲು ನಿಮ್ಮ ಸಾಲದಾತರೊಂದಿಗೆ ಚರ್ಚಿಸಿ.

  • ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಆಯ್ಕೆ ಮಾಡಿ: ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಸೌಲಭ್ಯವು ಅಸ್ತಿತ್ವದಲ್ಲಿರುವ ಹೋಮ್ ಲೋನ್ ಹೊಂದಿರುವ ಎಲ್ಲರಿಗೂ ತಮ್ಮ ಬಾಕಿ ಮೊತ್ತವನ್ನು ಹೆಚ್ಚು ಅನುಕೂಲಕರ ನಿಯಮಗಳನ್ನು ಒದಗಿಸುವ ಇನ್ನೊಂದು ಸಾಲದಾತರಿಗೆ ಟ್ರಾನ್ಸ್‌ಫರ್ ಮಾಡಲು ಅನುವು ಮಾಡಿಕೊಡುತ್ತದೆ. ನಿಮ್ಮ ಕಾಲಾವಧಿಯ ಮಧ್ಯದಲ್ಲಿ ಕಡಿಮೆ ಹೋಮ್ ಲೋನ್ ಬಡ್ಡಿಯನ್ನು ಪಡೆಯಲು ಇದು ಉತ್ತಮ ಮಾರ್ಗವಾಗಿದೆ.

  • ಪ್ರೋಮೋಗಳು ಮತ್ತು ಆಫರ್‌ಗಳನ್ನು ನೋಡಿ: ಯಾವುದೇ ಹಬ್ಬದ ಋತುವಿನ ಆಫರ್‌ಗಳು, ಸಾಲದಾತರ ಟೈ-ಅಪ್‌ಗಳು ಅಥವಾ ವಿಶೇಷ ಪ್ರೋಮೋಗಳ ಮೇಲೆ ಕಣ್ಣಿಡಿ ಮತ್ತು ಆ ಪ್ರಕಾರ ಆಯ್ಕೆ ಮಾಡಿ ಹೋಮ್ ಲೋನ್‌. ಈ ಆಫರ್‌ಗಳು ಸಾಮಾನ್ಯವಾಗಿ ಮಾರ್ಕೆಟ್‌ಗಿಂತ ಸ್ವಲ್ಪ ಉತ್ತಮ ಹೋಮ್ ಲೋನ್ ಬಡ್ಡಿ ದರವನ್ನು ನಿಮಗೆ ಒದಗಿಸುತ್ತವೆ.

ಹೋಮ್ ಲೋನ್ ಬಡ್ಡಿ ದರಗಳ ಮೇಲೆ ಪರಿಣಾಮ ಬೀರುವ ಅಂಶಗಳು

ಪ್ರತಿಯೊಬ್ಬರೂ ಸಾಧ್ಯವಾದಷ್ಟು ಕಡಿಮೆ ಬಡ್ಡಿ ದರದಲ್ಲಿ ಹೋಮ್ ಲೋನ್ ಪಡೆಯಲು ಬಯಸುತ್ತಾರೆ. ನೀವು ಪಡೆಯಲು ಅರ್ಹರಾಗಿರುವ ಬಡ್ಡಿ ದರವನ್ನು ನಮ್ಮ ಹೋಮ್ ಲೋನ್ ಇಎಂಐ ಕ್ಯಾಲ್ಕುಲೇಟರ್ ನಲ್ಲಿ ನಮೂದಿಸುವ ಮೂಲಕ, ನೀವು ಎಷ್ಟು ಹೋಮ್ ಲೋನ್ ಬಡ್ಡಿಯನ್ನು ಪಾವತಿಸಬೇಕು ಎಂಬುದರ ನಿಖರ ಮತ್ತು ತ್ವರಿತ ಅಂದಾಜು ಪಡೆಯಬಹುದು. ಆದರೆ ಇವೆಲ್ಲವೂ ಅನೇಕ ಅಂಶಗಳನ್ನು ಅವಲಂಬಿಸಿರುತ್ತದೆ - ಮತ್ತು ಹೋಮ್ ಲೋನ್ ಅನ್ನು ಹೆಚ್ಚು ಕೈಗೆಟಕುವಂತೆ ಮಾಡಲು ಅವುಗಳನ್ನು ಸಹ ಕಡಿಮೆ ಮಾಡಬಹುದು!

ನಿಮ್ಮ ಹೋಮ್ ಲೋನ್ ಮೇಲೆ ಅನುಕೂಲಕರ ಬಡ್ಡಿ ದರವನ್ನು ಕೇಳುವಾಗ ನಿಮ್ಮ ಹೋಮ್ ಲೋನ್ ಬಡ್ಡಿ ದರಗಳ ಮೇಲೆ ಪರಿಣಾಮ ಬೀರುವ ಈ 8 ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ:

  • ಆದಾಯ: ಸ್ವಾಭಾವಿಕವಾಗಿ, ನಿಮ್ಮ ಮಾಸಿಕ ಆದಾಯದ ಮೊತ್ತ ಮತ್ತು ಸ್ವರೂಪವು ನಿಮ್ಮ ಲೋನ್ ಮರುಪಾವತಿಯ ಬಗ್ಗೆ ಸಾಲದಾತರಿಗೆ ತುಂಬಾ ತಿಳಿಸುತ್ತದೆ. ಆದಾಯವು ನಿಯಮಿತ, ಸ್ಥಿರ ಮತ್ತು ಅಧಿಕವಾಗಿದ್ದಷ್ಟೂ, ನಿಮಗೆ ಹೋಮ್ ಲೋನ್ ಒದಗಿಸುವುದಕ್ಕೆ ಸಂಬಂಧಿಸಿದ ಅಪಾಯವು ಕಡಿಮೆಯಾಗಿರುತ್ತದೆ. ಪರಿಣಾಮವಾಗಿ, ನಿಮ್ಮ ಬಡ್ಡಿ ದರ ಕಡಿಮೆಯಾಗುತ್ತದೆ!

  • ಲೋನ್ ಮೊತ್ತ: ಖಂಡಿತವಾಗಿ, ನೀವು ಎಷ್ಟು ಲೋನ್ ಮೊತ್ತವನ್ನು ಆಯ್ಕೆ ಮಾಡುತ್ತಿದ್ದೀರಿ ಎಂಬುದರ ಮೇಲೆ ಎಲ್ಲಾ ಹೋಮ್ ಲೋನ್ ಲೆಕ್ಕಾಚಾರಗಳನ್ನು ಮಾಡಲಾಗುತ್ತದೆ. ಹೋಮ್ ಲೋನ್ ಇಎಂಐ ಕ್ಯಾಲ್ಕುಲೇಟರ್‌ನಲ್ಲಿಯೂ ಅದನ್ನು ನೋಡಬಹುದು! ಸಾಮಾನ್ಯವಾಗಿ, ಹೆಚ್ಚಿನ ಲೋನ್ ಮೊತ್ತವು ಹೆಚ್ಚಿನ ಬಡ್ಡಿ ದರಕ್ಕೆ ಕಾರಣವಾಗಬಹುದು.

  • ಬಡ್ಡಿ ದರದ ವಿಧ: ನೀವು ಹೋಮ್ ಲೋನ್ ಬಡ್ಡಿ ದರವನ್ನು ಪ್ರಭಾವಿಸಬಹುದಾದ ಇನ್ನೊಂದು ವಿಧಾನವೆಂದರೆ ಫಿಕ್ಸೆಡ್ ಬಡ್ಡಿ ದರ ಮತ್ತು ಫ್ಲೋಟಿಂಗ್ ಬಡ್ಡಿ ದರದ ನಡುವೆ ಆಯ್ಕೆ ಮಾಡುವುದು. ಎರಡನೆಯದ್ದು ಏರಿಳಿತಗಳಿಗೆ ಒಳಪಟ್ಟಿರುತ್ತದೆ ಮತ್ತು ಮೊದಲನೆಯದು ಸಾಮಾನ್ಯವಾಗಿ ಹೆಚ್ಚಾಗಿರುತ್ತದೆ.

  • ಕ್ರೆಡಿಟ್ ಸ್ಕೋರ್: ಲೋನ್ ಪ್ರಕ್ರಿಯೆಯ ಸಮಯದಲ್ಲಿ ಅಗತ್ಯವಿರುವ ಅತ್ಯಂತ ಪ್ರಮುಖ ಹೋಮ್ ಲೋನ್ ಡಾಕ್ಯುಮೆಂಟ್‌ಗಳಲ್ಲಿ ನಿಮ್ಮ ಕ್ರೆಡಿಟ್ ರಿಪೋರ್ಟ್ ಒಂದಾಗಿದೆ. ಉತ್ತಮ ಕ್ರೆಡಿಟ್ ಇತಿಹಾಸ ಮತ್ತು ಸ್ಕೋರ್, ಅಂದರೆ ಸಾಮಾನ್ಯವಾಗಿ, 750+ ಸಿಬಿಲ್ ಸ್ಕೋರ್ ಹೊಂದಿರುವುದು ಕಡಿಮೆ ಹೋಮ್ ಲೋನ್ ಬಡ್ಡಿ ದರವನ್ನು ಪಡೆಯಲು ನಿಮಗೆ ಅರ್ಹತೆ ನೀಡುತ್ತದೆ.

  • ಉದ್ಯೋಗದ ಪ್ರಕಾರ: ನಾವು ಆದಾಯವನ್ನು ಹೇಗೆ ಅಂಶವಾಗಿ ನಮೂದಿಸಿದ್ದೇವೆ ಎಂಬುದನ್ನು ನೆನಪಿಡಿ?? ನಿಮ್ಮ ಆದಾಯದ ಪ್ರಕಾರ- ಅಂದರೆ ಉದ್ಯೋಗದ ಪ್ರಕಾರವೂ ಒಂದು ಪ್ರಮುಖ ಅಂಶವಾಗಿದೆ. ನಿಯಮದ ಪ್ರಕಾರ, ಪ್ರತಿ ಸಾಲದಾತರು ಸಂಬಳ ಪಡೆಯುವ ಮತ್ತು ಸ್ವಯಂ ಉದ್ಯೋಗಿ ಅರ್ಜಿದಾರರಿಗೆ ಪ್ರತ್ಯೇಕ ಬಡ್ಡಿ ದರದ ಸ್ಲ್ಯಾಬ್‌ಗಳನ್ನು ಹೊಂದಿರುತ್ತಾರೆ. ಹೋಲಿಕೆ ಮಾಡಿದರೆ, ಸಂಬಳ ಪಡೆಯುವ ಅರ್ಜಿದಾರರಿಗೆ ಬಡ್ಡಿ ದರಗಳು ಸಾಮಾನ್ಯವಾಗಿ ಕಡಿಮೆಯಾಗಿರುತ್ತವೆ.

  • ಹೋಮ್ ಲೋನ್ ಪ್ರಕಾರ: ನೀವು ತೆಗೆದುಕೊಳ್ಳಲು ಬಯಸುವ ಹೋಮ್ ಲೋನ್ ಮೇಲೆಯೂ ಕೂಡ ಬಡ್ಡಿ ದರಗಳು ಭಿನ್ನವಾಗಿರಬಹುದು. ಸಾಮಾನ್ಯ ಹೋಮ್ ಲೋನ್‌ಗಳಿಗೆ ಹೋಲಿಸಿದರೆ, ಪ್ಲಾಟ್ ಲೋನ್‌ಗಳು, ಲ್ಯಾಂಡ್ ಲೋನ್‌ಗಳು ಅಥವಾ ಟಾಪ್-ಅಪ್ ಲೋನ್‌ಗಳಂತಹ ವಿಶೇಷ ಹೋಮ್ ಲೋನ್‌ಗಳು ಹೆಚ್ಚಿನ ಬಡ್ಡಿ ದರಕ್ಕೆ ಕಾರಣವಾಗಬಹುದು.

ಪಿಎನ್‌ಬಿಆರ್‌ಆರ್‌ಆರ್ ಮತ್ತು ಹಿಂದಿನ ಪಿಎನ್‌ಬಿಎಚ್‍ಎಫ್‌ಆರ್

01ನೇ ಸೆಪ್ಟೆಂಬರ್'2024 ರಂದು ಮತ್ತು ನಂತರ ಪಡೆದ ಗ್ರಾಹಕರಿಗೆ (ಲೋನ್ ವಿತರಿಸಲಾದ) ಪಿಎನ್‌ಬಿಆರ್‌ಆರ್ 13.25% ಆಗಿದೆ

25 ಸೆಪ್ಟೆಂಬರ್ 2020 ರಂದು ಮತ್ತು ನಂತರ ಪಡೆದ ಹೊಸ ಗ್ರಾಹಕರಿಗೆ (ಲೋನ್ ವಿತರಣೆಯಾದ) ಪಿಎನ್‌ಬಿಎಚ್‌ಎಫ್‌ಆರ್ ಸರಣಿ 5 ಮೂಲ ದರ 2020 ಈ ಕೆಳಗಿನಂತಿದೆ:

  • Right Arrow Button

    ಪಿಎನ್‌ಬಿಎಚ್‍ಎಫ್‌ಆರ್ ಹೋಮ್ ಲೋನ್ - ಸಂಬಳದ/ಸ್ವಯಂ ಉದ್ಯೋಗಿ ವೃತ್ತಿಪರರು: ವಾರ್ಷಿಕ 12.90%.

  • Right Arrow Button

    ಪಿಎನ್‌ಬಿಎಚ್‍ಎಫ್‌ಆರ್ ಹೋಮ್ ಲೋನ್ - ಬಿಸಿನೆಸ್‌ಮೆನ್/ಸ್ವಯಂ ಉದ್ಯೋಗಿ ವೃತ್ತಿಪರರಲ್ಲದವರು: ವಾರ್ಷಿಕ 13.50%.

ಈ ದಿನಾಂಕದಂದು ಮತ್ತು ನಂತರ ಪಡೆದ ಹೊಸ ಗ್ರಾಹಕರಿಗೆ (ಲೋನ್ ವಿತರಿಸಲಾಗಿದೆ) ಪಿಎನ್‌ಬಿಎಚ್‌ಎಫ್‌ಆರ್ ಸರಣಿ 4  ಮಾರ್ಚ್ 16, 2020 ಈ ಕೆಳಗಿನಂತಿದೆ:

  • Right Arrow Button

    ಪಿಎನ್‌ಬಿಎಚ್‍ಎಫ್‌ಆರ್ ಹೋಮ್ ಲೋನ್ - ಸಂಬಳದ/ಸ್ವಯಂ ಉದ್ಯೋಗಿ ವೃತ್ತಿಪರರು: ವಾರ್ಷಿಕ 11.30%.

  • Right Arrow Button

    ಪಿಎನ್‌ಬಿಎಚ್‍ಎಫ್‌ಆರ್ ಹೋಮ್ ಲೋನ್ - ಬಿಸಿನೆಸ್‌ಮೆನ್/ಸ್ವಯಂ ಉದ್ಯೋಗಿ ವೃತ್ತಿಪರರಲ್ಲದವರು: ವಾರ್ಷಿಕ 11.35%.

ಜೂನ್ 01, 2019 ರಂದು ಮತ್ತು ನಂತರ ಪಡೆದ ಹೊಸ ಗ್ರಾಹಕರಿಗೆ (ಲೋನ್ ವಿತರಣೆಯಾದ) ಪಿಎನ್‌ಬಿಎಚ್‌ಎಫ್‌ಆರ್ ಸರಣಿ 3 ಈ ಕೆಳಗಿನಂತಿದೆ:

  • ಪಿಎನ್‌ಬಿಎಚ್‍ಎಫ್‌ಆರ್ ಹೋಮ್ ಲೋನ್ - ಸಂಬಳದ/ಸ್ವಯಂ ಉದ್ಯೋಗಿ ವೃತ್ತಿಪರರು: ವಾರ್ಷಿಕ 11.65%.

  • ಪಿಎನ್‌ಬಿಎಚ್‍ಎಫ್‌ಆರ್ ಹೋಮ್ ಲೋನ್ - ಬಿಸಿನೆಸ್‌ಮೆನ್/ಸ್ವಯಂ ಉದ್ಯೋಗಿ ವೃತ್ತಿಪರರಲ್ಲದವರು: ವಾರ್ಷಿಕ 11.70%.

ಈ ದಿನಾಂಕದಂದು ಮತ್ತು ನಂತರ ಪಡೆದ ಹೊಸ ಗ್ರಾಹಕರಿಗೆ (ಲೋನ್ ವಿತರಿಸಲಾಗಿದೆ) ಪಿಎನ್‌ಬಿಎಚ್‌ಎಫ್‌ಆರ್ ಸರಣಿ 2 ಮಾರ್ಚ್ 06, 2019 ಈ ಕೆಳಗಿನಂತಿದೆ:

  • ಪಿಎನ್‌ಬಿಎಚ್‍ಎಫ್‌ಆರ್ ಹೋಮ್ ಲೋನ್ - ಸಂಬಳದ/ಸ್ವಯಂ ಉದ್ಯೋಗಿ ವೃತ್ತಿಪರರು: ವಾರ್ಷಿಕ 12.04%.

  • ಪಿಎನ್‌ಬಿಎಚ್‍ಎಫ್‌ಆರ್ ಹೋಮ್ ಲೋನ್ - ಬಿಸಿನೆಸ್‌ಮೆನ್/ಸ್ವಯಂ ಉದ್ಯೋಗಿ ವೃತ್ತಿಪರರಲ್ಲದವರು: ವಾರ್ಷಿಕ 12.10%.

ಈ ದಿನಾಂಕದಂದು ಮತ್ತು ನಂತರ ಪಡೆದ ಹೊಸ ಗ್ರಾಹಕರಿಗೆ (ಲೋನ್ ವಿತರಿಸಲಾಗಿದೆ) ಪಿಎನ್‌ಬಿಎಚ್‌ಎಫ್‌ಆರ್ ಸರಣಿ 1 ಜುಲೈ 01, 2018 ಈ ಕೆಳಗಿನಂತಿದೆ:

  • ಪಿಎನ್‌ಬಿಎಚ್‍ಎಫ್‌ಆರ್ ಹೋಮ್ ಲೋನ್ - ಸಂಬಳದ/ಸ್ವಯಂ ಉದ್ಯೋಗಿ ವೃತ್ತಿಪರರು: ವಾರ್ಷಿಕ 12.15%.

  • ಪಿಎನ್‌ಬಿಎಚ್‍ಎಫ್‌ಆರ್ ಹೋಮ್ ಲೋನ್ - ಬಿಸಿನೆಸ್‌ಮೆನ್/ಸ್ವಯಂ ಉದ್ಯೋಗಿ ವೃತ್ತಿಪರರಲ್ಲದವರು: ವಾರ್ಷಿಕ 12.30%.

ಮಾರ್ಚ್ 01, 2017 – ಜೂನ್ 30, 2018 ನಡುವೆ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ (ಲೋನ್ ವಿತರಣೆಯಾದ) ಪಿಎನ್‌ಬಿಎಚ್‍ಎಫ್‌ಆರ್ ಸರಣಿ 0 ಈ ಕೆಳಗಿನಂತಿದೆ:

  • ಪಿಎನ್‌ಬಿಎಚ್‍ಎಫ್‌ಆರ್ ಹೋಮ್ ಲೋನ್ - ಸಂಬಳದ/ಸ್ವಯಂ ಉದ್ಯೋಗಿ ವೃತ್ತಿಪರರು: ವಾರ್ಷಿಕ 12.25%.

  • ಪಿಎನ್‌ಬಿಎಚ್‍ಎಫ್‌ಆರ್ ಹೋಮ್ ಲೋನ್ - ಬಿಸಿನೆಸ್‌ಮೆನ್/ಸ್ವಯಂ ಉದ್ಯೋಗಿ ವೃತ್ತಿಪರರಲ್ಲದವರು: ವಾರ್ಷಿಕ 12.30%.

ಇದಕ್ಕೂ ಮೊದಲು ಅಸ್ತಿತ್ವದಲ್ಲಿರುವ ಗ್ರಾಹಕರಿಗೆ (ಲೋನ್ ವಿತರಿಸಲಾಗಿದೆ) ಪಿಎನ್‌ಬಿಎಚ್‌ಎಫ್‌ಆರ್ ಮಾರ್ಚ್ 01, 2017: ವಾರ್ಷಿಕ 17.47%.

ಶಿಫಾರಸು ಮಾಡಲಾದ ಬರಹಗಳು

ಹೋಮ್ ಲೋನ್ ಬ್ಲಾಗ್‌ಗಳು

ಹೋಮ್ ಲೋನ್ ಬಡ್ಡಿ ದರ ಸಂಬಂಧಿತ

ಆಗಾಗ ಕೇಳುವ ಪ್ರಶ್ನೆಗಳು

ಹೋಮ್ ಲೋನ್ ಬಡ್ಡಿ ದರ ಎಂದರೇನು?

ಪ್ರತಿ ಸಾಲದಾತರು ನೀವು ಅವರಿಂದ ಪಡೆಯುವ ಒಟ್ಟು ಅಸಲು ಹೋಮ್ ಲೋನ್ ಮೊತ್ತದ ಮೇಲೆ ಬಡ್ಡಿಯನ್ನು ವಿಧಿಸುತ್ತಾರೆ. ಹೋಮ್ ಲೋನ್ ಬಡ್ಡಿ ದರ ಎಂಬ ಶೇಕಡಾವಾರು ಮೊತ್ತದ ಆಧಾರದ ಮೇಲೆ ಈ ಬಡ್ಡಿ ಮೊತ್ತವನ್ನು ಲೆಕ್ಕ ಹಾಕಲಾಗುತ್ತದೆ. ಹೋಮ್ ಲೋನ್ ಇಎಂಐ ಕ್ಯಾಲ್ಕುಲೇಟರ್‌ನಲ್ಲಿ ಹೋಮ್ ಲೋನ್ ಬಡ್ಡಿ ದರ, ಹೋಮ್ ಲೋನ್ ಮೊತ್ತ ಮತ್ತು ಲೋನ್‌ನ ಕಾಲಾವಧಿಯನ್ನು ನಮೂದಿಸುವ ಮೂಲಕ, ನೀವು ಯಾವುದೇ ಹೋಮ್ ಲೋನ್ ಮೊತ್ತಕ್ಕೆ ಮಾಸಿಕ ಪಾವತಿಸಬೇಕಾದ ಇಎಂಐ ಮತ್ತು ಒಟ್ಟು ಬಡ್ಡಿ ಅಂಶವನ್ನು ನಿರ್ಧರಿಸಬಹುದು! ಪಿಎನ್‌ಬಿ ಹೌಸಿಂಗ್‌ನಲ್ಲಿ, ನೀವು ನಮ್ಮ ಸುಲಭ ಅರ್ಹತಾ ಮಾನದಂಡಗಳನ್ನು ಪೂರೈಸುವ ಷರತ್ತಿಗೆ ಒಳಪಟ್ಟು ಮಾರ್ಕೆಟ್‌ನಲ್ಲಿ ಅತ್ಯುತ್ತಮ ಹೋಮ್ ಲೋನ್ ದರಗಳನ್ನು ಪಡೆಯುತ್ತೀರಿ.

ಪ್ರಸ್ತುತ ಹೋಮ್ ಲೋನ್ ಬಡ್ಡಿ ದರ ಎಷ್ಟು?

ಯಾವುದೇ ಸಮಯದಲ್ಲಿ, ದೇಶಾದ್ಯಂತದ ಹೋಮ್ ಲೋನ್ ದರಗಳು ಸಾಮಾನ್ಯವಾಗಿ ಮಾರ್ಕೆಟ್ ಮತ್ತು ಇತರ ಅಂಶಗಳನ್ನು ಅವಲಂಬಿಸಿ ಸಾಮಾನ್ಯ ಅಂಕಿ-ಅಂಶದ ಸುತ್ತ ಸುತ್ತುತ್ತವೆ. ಪಿಎನ್‌ಬಿ ಹೌಸಿಂಗ್‌ನಲ್ಲಿ ಇಂದು ಹೋಮ್ ಲೋನ್ ಬಡ್ಡಿ ದರವು ವರ್ಷಕ್ಕೆ 8.75%* ರಿಂದ ಆರಂಭವಾಗುತ್ತದೆ. ಆದಾಗ್ಯೂ, ಇದು ಅಂತಿಮ ಬಡ್ಡಿ ದರವಲ್ಲ. ಅಂತಿಮವಾಗಿ ನೀವು ಏನನ್ನು ಪಡೆಯುತ್ತೀರಿ ಎಂಬುದು ಆದಾಯ, ಲೋನ್ ಮೊತ್ತ, ಬಡ್ಡಿ ದರದ ಪ್ರಕಾರ, ಕ್ರೆಡಿಟ್ ಸ್ಕೋರ್, ಹೋಮ್ ಲೋನ್ ಪ್ರಕಾರ ಇತ್ಯಾದಿಗಳಂತಹ ಅಂಶಗಳನ್ನು ಅವಲಂಬಿಸಿರುತ್ತದೆ.

ಹೌಸಿಂಗ್ ಲೋನ್ ಮೇಲೆ ಅನ್ವಯವಾಗುವ ಕನಿಷ್ಠ ಬಡ್ಡಿ ದರ ಎಷ್ಟು?

ನಿಮಗೆ ಅನ್ವಯವಾಗುವ ಕನಿಷ್ಠ ಹೋಮ್ ಲೋನ್ ಬಡ್ಡಿ ದರವು ಸಾಮಾನ್ಯವಾಗಿ ಮಾರ್ಕೆಟ್ ಪರಿಸ್ಥಿತಿಗಳು ಮತ್ತು ಅರ್ಜಿದಾರರ ಆದಾಯ, ಉದ್ಯೋಗದ ಪ್ರಕಾರ, ಕ್ರೆಡಿಟ್ ಸ್ಕೋರ್, ಹೋಮ್ ಲೋನ್ ಮೊತ್ತ, ಆಯ್ಕೆ ಮಾಡಿದ ಬಡ್ಡಿಯ ಪ್ರಕಾರ ಇತ್ಯಾದಿ ಅಂಶಗಳಿಗೆ ಒಳಪಟ್ಟಿರುತ್ತದೆ. ಆದ್ದರಿಂದ, ಇದು ಸಾಲದಾತರಿಂದ ಸಾಲದಾತರಿಗೆ ಮತ್ತು ಅರ್ಜಿದಾರರಿಂದ ಅರ್ಜಿದಾರರಿಗೆ ಬದಲಾಗುತ್ತದೆ.

Request Call Back at PNB Housing
ಕಾಲ್ ಬ್ಯಾಕ್ ಮಾಡಿ