ಮನೆಯನ್ನು ಹೊಂದುವುದು ಕೇವಲ ಸಂಪತ್ತಿನ ಗುರುತು ಮಾತ್ರವಲ್ಲ, ಇದು ನಮಗೆ ಮತ್ತು ನಮ್ಮ ಕುಟುಂಬಗಳಿಗೆ, ಸ್ಥಿರತೆ ಮತ್ತು ಭಾವನಾತ್ಮಕ ಭದ್ರತೆಯನ್ನು ನೀಡುತ್ತದೆ. ನೀವು ಮನೆ ಖರೀದಿಸಲು ಹಿಂಜರಿಯಲು ಕಾರಣ ಹೋಮ್ ಲೋನ್ ಪಡೆಯುವುದು ಕಷ್ಟಕರ ಕೆಲಸವಾಗಿದೆ ಎಂದು ನೀವು ಭಾವಿಸುತ್ತೀರಿ. ಚಿಂತಿಸಬೇಡಿ! ಹೋಮ್ ಲೋನ್ ಗೆ ಅಪ್ಲೈ ಮಾಡುವುದು ತುಂಬಾ ಸರಳ ಪ್ರಕ್ರಿಯೆಯಾಗಿದೆ.
ನೀವು ಆರಂಭದಲ್ಲಿ ಕೆಲವು ಪ್ರಮುಖ ವಿವರಗಳ ಕಡೆ ಗಮನ ಹರಿಸಿದರೆ, ಹೋಮ್ ಲೋನ್ ಪಡೆಯುವುದು ಸುಲಭ.
ಪಿಎನ್‌ಬಿ ಹೌಸಿಂಗ್ ಲೋನ್ ಪ್ರಕ್ರಿಯೆಯ 3 ಹಂತಗಳು
ಹಂತ 1: ಹೋಮ್ ಲೋನ್‌ಗೆ ಅಪ್ಲೈ ಮಾಡುವುದು
- ವಿಚಾರಣೆಯನ್ನು ಸಲ್ಲಿಸಿ: ನೀವು ಕಂಪನಿಯ ವೆಬ್‌ಸೈಟ್‌ನಲ್ಲಿ ವಿಚಾರಣೆಯನ್ನು ಮಾಡಬಹುದಾಗಿದ್ದು, ಇದು ಸುಲಭವಾದ ವಿಧಾನವಾಗಿದೆ ಮತ್ತು ಕಂಪನಿಯ ಪ್ರತಿನಿಧಿ ನಿಮ್ಮನ್ನು ಸಂಪರ್ಕಿಸುತ್ತಾರೆ. ನೀವು ಟೋಲ್-ಫ್ರೀ ನಂಬರ್ (1800 120 8800) ಗೆ ಕೂಡ ಕರೆ ಮಾಡಬಹುದು ಅಥವಾ ಬ್ರಾಂಚ್ ಹತ್ತಿರದಲ್ಲಿದ್ದರೆ, ಬ್ರಾಂಚ್‌ಗೆ ಭೇಟಿ ನೀಡಿ ಮತ್ತು ಹೋಮ್ ಲೋನ್ ಅಪ್ಲಿಕೇಶನ್ ಭರ್ತಿ ಮಾಡಿ.
- ಅಗತ್ಯವಿರುವ ಡಾಕ್ಯುಮೆಂಟ್‌ಗಳು: ನಿಮ್ಮ ಹೋಮ್ ಲೋನ್ ಪ್ರಕ್ರಿಯೆಗೆ ಅಗತ್ಯವಿರುವ ಕೆಲವು ಅಗತ್ಯ ಪ್ರಮುಖ ಡಾಕ್ಯುಮೆಂಟ್‌ಗಳನ್ನು ಸಿದ್ಧವಾಗಿಟ್ಟುಕೊಳ್ಳುವುದು ಯಾವಾಗಲೂ ಸಹಾಯ ಮಾಡುತ್ತದೆ. ಅವುಗಳು ಕೆಳಗಿನಂತಿವೆ ಹೋಮ್ ಲೋನಿಗೆ ಅಗತ್ಯವಿರುವ ದಾಖಲೆಗಳು ಅಗತ್ಯಗಳ ಮೂಲ ಸೆಟ್ ರೂಪಿಸುತ್ತವೆ:
- ವಯಸ್ಸು ಮತ್ತು ಗುರುತಿನ ಪುರಾವೆ
- ನಿವಾಸದ ವಿಳಾಸದ ಪುರಾವೆ
- ಆದಾಯ ಪುರಾವೆ ಅಂದರೆ ಸಂಬಳದ ಸ್ಲಿಪ್‌ಗಳು, ಫಾರ್ಮ್ 16, ಆದಾಯ ತೆರಿಗೆ ರಿಟರ್ನ್
- ಅಕೌಂಟ್‌ಗಳ ಸ್ಟೇಟ್ಮೆಂಟ್‌ನೊಂದಿಗೆ ಜವಾಬ್ದಾರಿ ವಿವರಗಳು
- ಆಸ್ತಿಯನ್ನು ಅಂತಿಮಗೊಳಿಸಿದರೆ ಆಸ್ತಿ ಡಾಕ್ಯುಮೆಂಟ್‌ಗಳು, ಅಂದರೆ ಆಸ್ತಿಯನ್ನು ಮರುಮಾರಾಟ ಮಾಡಿದರೆ ಮಾರಾಟ ಮತ್ತು ಹಿಂದಿನ ಆಸ್ತಿ ಚೈನ್ ಲಿಂಕ್ ಡಾಕ್ಯುಮೆಂಟ್‌ಗಳ ಒಪ್ಪಂದದ ಹಂಚಿಕೆ ಪತ್ರ
- ಮನೆಬಾಗಿಲಿನ ಸೇವೆ – ಡಾಕ್ಯುಮೆಂಟ್‌ಗಳ ಪಿಕಪ್: ಬ್ರಾಂಚ್ ಪ್ರತಿನಿಧಿಯು ನಿಮ್ಮ ಅನುಕೂಲಕ್ಕೆ ಸರಿಯಾದ ಜಾಗಕ್ಕೆ ಭೇಟಿ ನೀಡುತ್ತಾರೆ, ಡಾಕ್ಯುಮೆಂಟ್‌ಗಳನ್ನು ಸಂಗ್ರಹಿಸುತ್ತಾರೆ ಮತ್ತು ಪ್ರಕ್ರಿಯಾ ಶುಲ್ಕದೊಂದಿಗೆ ಅವುಗಳನ್ನು ಸಲ್ಲಿಸುತ್ತಾರೆ.
ಓದಲೇಬೇಕಾದವು: ಹೋಮ್ ಲೋನ್ ಅರ್ಹತೆಯನ್ನು ಹೆಚ್ಚಿಸುವುದು ಹೇಗೆ?
ಹಂತ 2: ಹೋಮ್ ಲೋನ್ ಮಂಜೂರಾತಿ
- ಹಣಕಾಸಿನ ಅರ್ಹತೆಯ ನಿರ್ಧಾರ: ನಿಮ್ಮ ಆದಾಯ, ವಯಸ್ಸು, ಅಸ್ತಿತ್ವದಲ್ಲಿರುವ ಲೋನ್‌ಗಳು ಮತ್ತು ಅವುಗಳ ಮರುಪಾವತಿ ಟ್ರ್ಯಾಕ್ ಆಧಾರದ ಮೇಲೆ ನಿಮ್ಮ ಹಣಕಾಸಿನ ಅರ್ಹತೆಯನ್ನು ನಿರ್ಧರಿಸಲು ನೀವು ಒದಗಿಸಿದ ಮಾಹಿತಿಯನ್ನು ಸಾಲದಾತರು ಬಳಸುತ್ತಾರೆ ಮತ್ತು ಅದು ನಿವಾಸ ಮತ್ತು ಕಚೇರಿ ಪರಿಶೀಲನೆಗೆ ಒಳಪಟ್ಟಿರುತ್ತದೆ.
- ಆಸ್ತಿ ಮೌಲ್ಯಮಾಪನ: ಒಮ್ಮೆ ನಿಮ್ಮ ಹಣಕಾಸಿನ ಅರ್ಹತೆಯನ್ನು ನಿರ್ಧರಿಸಿದ ನಂತರ, ಅಂತಿಮ ಅರ್ಹತೆಯನ್ನು ತಲುಪಲು ಸಾಲದಾತರು ಆಸ್ತಿ ಮೌಲ್ಯವನ್ನು ಕೂಡ ಮೌಲ್ಯಮಾಪನ ಮಾಡುತ್ತಾರೆ.
- ಕಾನೂನು ಮೌಲ್ಯಮಾಪನ: ನಿಮ್ಮ ಆಸ್ತಿಯು ಎಲ್ಲಾ ಕಾನೂನು ಹೊಣೆಗಾರಿಕೆಗಳಿಂದ ಮುಕ್ತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಸಾಲದಾತರು ಕಾನೂನು ಪರಿಶೀಲನೆಯನ್ನು ನಡೆಸುತ್ತಾರೆ.
- ಮುಂಚಿತ-ಅನುಮೋದಿತ ಹೋಮ್ ಲೋನ್: ನೀವು ಆಸ್ತಿಯನ್ನು ಹೊಂದುವ ಮೊದಲು ಕೂಡ ನೀವು ಮುಂಚಿತ-ಅನುಮೋದಿತ ಹೋಮ್ ಲೋನ್ ಪಡೆಯಬಹುದು.
ಹಂತ 3: ಹೋಮ್ ಲೋನ್ ವಿತರಣೆ
- ಹೋಮ್ ಲೋನ್ ಒಪ್ಪಂದಕ್ಕೆ ಸಹಿ ಮಾಡುವುದು: ನೀವು ಈಗ ಹೋಮ್ ಲೋನ್ ಒಪ್ಪಂದಕ್ಕೆ ಸಹಿ ಮಾಡಲು ಸಿದ್ಧರಾಗಿದ್ದೀರಿ. ನಿಮ್ಮ ಮೂಲ ಆಸ್ತಿ ಡಾಕ್ಯುಮೆಂಟ್‌ಗಳು, ಕೆಲವು ಪೋಸ್ಟ್ ಡೇಟೆಡ್ ಚೆಕ್‌ಗಳು ಮತ್ತು ಲೋನ್ ಒಪ್ಪಂದವನ್ನು ಸಲ್ಲಿಸುವುದಷ್ಟೇ ಬಾಕಿ ಉಳಿದಿದೆ.
- ವಿತರಣೆ: ಅಷ್ಟೇ! ಸಾಲದಾತರು ಮಾರಾಟಗಾರರು/ಬಿಲ್ಡರ್ ಪರವಾಗಿ ಚೆಕ್ ನೀಡುತ್ತಾರೆ ಮತ್ತು ಮನೆ ಹೊಂದುವ ನಿಮ್ಮ ಕನಸು ನನಸಾಗುತ್ತದೆ. ವಿತರಣೆಯ ದಿನದಿಂದ ನಿಮ್ಮ ಇಎಂಐ ಆರಂಭವಾಗುತ್ತದೆ.
ಟಾಪ್-ಅಪ್ / ಲೋನ್ ವರ್ಧನೆ
ತಡೆಯಿರಿ, ಇನ್ನೂ ಇದೆ - ನಿಮ್ಮ ಲೋನ್ ಅವಧಿಯ ಯಾವುದೇ ಸಮಯದಲ್ಲಿ, ನಿಮಗೆ ನಿಮ್ಮ ಹೋಮ್ ಲೋನ್ ಮೇಲೆ ಟಾಪ್-ಅಪ್ ಅಥವಾ ವರ್ಧನೆಯ ಅಗತ್ಯವಿದ್ದರೆ, ನೀವು ಅದನ್ನು ಕೂಡ ಪಡೆಯಬಹುದು. ನಿಮ್ಮ ಅವಶ್ಯಕತೆಯೊಂದಿಗೆ ನಿಮ್ಮ ಪ್ರತಿನಿಧಿ ಅಥವಾ ಟೋಲ್-ಫ್ರೀ ನಂಬರ್‌ಗೆ ಕರೆ ಮಾಡಿ ಮತ್ತು ಕೆಲವು ಪರಿಶೀಲನೆಗಳ ಆಧಾರದ ಮೇಲೆ, ಲೋನ್ ವರ್ಧನೆ ಅಥವಾ ಟಾಪ್-ಅಪ್ ಲೋನ್ ಅನ್ನು ನೀಡಲಾಗುತ್ತದೆ.
ವಿತರಣೆ ಪಡೆಯಲು ನೀವು ನಿಮ್ಮ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿದ ದಿನದಿಂದ ಸಂಪೂರ್ಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸುಮಾರು 5-8 ದಿನಗಳನ್ನು ತೆಗೆದುಕೊಳ್ಳುತ್ತದೆ.
ಓದಲೇಬೇಕಾದವು: ಹೋಮ್ ಲೋನ್ ಟಾಪ್-ಅಪ್ ಎಂದರೇನು?
ಮುಕ್ತಾಯ
ಪಿಎನ್‌ಬಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್‌ನಲ್ಲಿ ನಾವು ಈ ಸುಲಭ ಪ್ರಕ್ರಿಯೆಯನ್ನು ಗ್ರಾಹಕ-ಸ್ನೇಹಿ ಫೀಚರ್‌ಗಳಾದ ತ್ವರಿತ ಲೋನ್ ಅನುಮೋದನೆ ಮತ್ತು ಮನೆಬಾಗಿಲಿನ ಸೇವೆಗಳೊಂದಿಗೆ ಮತ್ತಷ್ಟು ಸುಲಭಗೊಳಿಸುತ್ತೇವೆ. ನೀವು ರಿಕ್ಲೈನರ್ ಮೇಲೆ ಕುಳಿತು ಆರಾಮಾಗಿ ನಿಮ್ಮ ಶಾಶ್ವತ ಕನಸಿನ ಮನೆಯ ಪ್ರಯಾಣವನ್ನು ಸುಲಭಗೊಳಿಸಲು ನಿಮಗೆ ಸಹಾಯ ಮಾಡುತ್ತೇವೆ.