ಸಾರಾಂಶ: ಹೋಮ್ ಲೋನ್ ಇನ್ಶೂರೆನ್ಸ್ ಹೋಮ್ ಲೋನ್‌ಗಳನ್ನು ತೆಗೆದುಕೊಳ್ಳುವ ಸಾಲಗಾರರನ್ನು ರಕ್ಷಿಸುತ್ತದೆ. ಅದು ಏನು ಎಂಬುದನ್ನು ಅರ್ಥಮಾಡಿಕೊಳ್ಳಿ ಮತ್ತು ಅನೇಕ ಜನರು ಅದನ್ನು ಏಕೆ ತೆಗೆದುಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಿ.
ಮನೆ ಖರೀದಿಸುವುದು ಎಂದರೆ ಅನೇಕ ಜನರಿಗೆ ಕನಸು ನನಸಾಗುವುದು ಎಂದರ್ಥ. ಇದು ಭಾವನಾತ್ಮಕ ಮತ್ತು ಹಣಕಾಸಿನ ಮೈಲಿಗಲ್ಲು ಎರಡೂ ಆಗಿದೆ.
ನೀವು ದೊಡ್ಡ ಹೋಮ್ ಲೋನ್ ಹೊಂದಿದ್ದರೆ ಮತ್ತು ಅನಿರೀಕ್ಷಿತ ಘಟನೆ ನಡೆದರೆ ಮುಂದೆ ಅದನ್ನು ಯಾರು ಮರುಪಾವತಿಸುತ್ತಾರೆ ಎಂಬ ಚಿಂತೆಯಿದ್ದರೆ, ಹೋಮ್ ಲೋನ್ ಇನ್ಶೂರೆನ್ಸ್ ಪಾಲಿಸಿಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಿ.
ಮರಣ, ಅಪಘಾತ ಅಥವಾ ಉದ್ಯೋಗ ನಷ್ಟದಂತಹ ಅನಿರೀಕ್ಷಿತ ಸಂದರ್ಭಗಳಿಂದಾಗಿ ಸಾಲಗಾರರಿಗೆ ಇಎಂಐಗಳನ್ನು ಮರುಪಾವತಿಸಲು ಸಾಧ್ಯವಾಗದಿದ್ದರೆ, ಹೋಮ್ ಲೋನ್ ಇನ್ಶೂರೆನ್ಸ್ ಪ್ರಾರಂಭವಾಗುತ್ತದೆ. ಹೋಮ್ ಲೋನ್ ಇನ್ಶೂರೆನ್ಸ್ ಎಂದೂ ಕರೆಯಲ್ಪಡುವ ಅಡಮಾನ ಇನ್ಶೂರೆನ್ಸ್, ಸಾಲಗಾರರನ್ನು ರಕ್ಷಿಸುತ್ತದೆ ಮತ್ತು ಲೋನ್ ಮರುಪಾವತಿಯನ್ನು ಖಚಿತಪಡಿಸುತ್ತದೆ. ಯಾವುದೇ ಅನಿರೀಕ್ಷಿತ ಸಂದರ್ಭಗಳಲ್ಲಿ ನಿಮ್ಮ ಲೋನ್ ಅನ್ನು ಪಾವತಿಸಲಾಗುತ್ತದೆ ಎಂದು ಹೋಮ್ ಲೋನ್ ಇನ್ಶೂರೆನ್ಸ್ ಭರವಸೆ ನೀಡುತ್ತದೆ.
ಹೋಮ್ ಲೋನ್ ಇನ್ಶೂರೆನ್ಸ್ ಎಂದರೇನು?
ಹೋಮ್ ಲೋನ್ ಇನ್ಶೂರೆನ್ಸ್ ಅನ್ನು ಹೋಮ್ ಲೋನ್ ಪ್ರೊಟೆಕ್ಷನ್ ಪ್ಲಾನ್ (ಎಚ್‌ಎಲ್‌ಪಿಪಿ) ಎಂದು ಕೂಡ ಕರೆಯಲಾಗುತ್ತದೆ. ಹೋಮ್ ಲೋನ್ ಮರುಪಾವತಿ ಅವಧಿಯಲ್ಲಿ ಸಾಲಗಾರರು ಮರಣ ಹೊಂದಿದರೆ, ವಿಮಾದಾತರು ಹೋಮ್ ಲೋನ್‌ನ ಬಾಕಿ ಉಳಿಕೆಯನ್ನು ಸಾಲದಾತರಿಗೆ ಪಾವತಿಸುತ್ತಾರೆ.
ಪಾಲಿಸಿ ಮತ್ತು ಲೋನ್ ನಿಯಮಗಳು ಸಾಮಾನ್ಯವಾಗಿ ಒಂದೇ ಆಗಿರುತ್ತವೆ. ಒಂದುವೇಳೆ ತಮ್ಮ ಮರಣದ ನಂತರ ಹೋಮ್ ಲೋನ್ ಬಾಕಿ ಉಳಿದಿದ್ದರೆ ತಮ್ಮ ಕುಟುಂಬವು ಅದನ್ನು ಮರು ಪಾವತಿಸಬೇಕಾಗಿಲ್ಲ ಅಥವಾ ಆಸ್ತಿಯನ್ನು ಕೈ ಬಿಡಬೇಕಾಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವ ಕಡೆಗೆ ಹೋಮ್ ಲೋನ್ ಇನ್ಶೂರೆನ್ಸ್ ಖರೀದಿಸುವ ಸಾಲಗಾರರು ಗಮನಹರಿಸುತ್ತಾರೆ.
ಹೋಮ್ ಲೋನ್‌ಗಳಿಗೆ ಇನ್ಶೂರೆನ್ಸ್ ಕಡ್ಡಾಯವೇ? ಇಲ್ಲ, ಆದರೆ ಅದನ್ನು ಬಲವಾಗಿ ಶಿಫಾರಸು ಮಾಡಲಾಗಿದೆ.
ಯಾಕೆ ನೀವು ಹೋಮ್ ಲೋನ್ ಇನ್ಶೂರೆನ್ಸ್ ಪಡೆಯುವುದನ್ನು ಪರಿಗಣಿಸಬೇಕು?
ಹೋಮ್ ಲೋನ್ ಇನ್ಶೂರೆನ್ಸ್ ಪಡೆಯುವುದು ಯಾಕೆ ಉತ್ತಮ ಎಂಬುದಕ್ಕೆ ಹಲವಾರು ಕಾರಣಗಳಿವೆ.
- ಇನ್ಶೂರೆನ್ಸ್ ಹೊಂದಿರದೇ ಇರುವುದು ಅನಿರೀಕ್ಷಿತ ಘಟನೆಗಳ ಸಂದರ್ಭದಲ್ಲಿ ನಿಮ್ಮನ್ನು ಆರ್ಥಿಕ ನಷ್ಟಕ್ಕೆ ಒಡ್ಡುತ್ತದೆ. ಉದಾಹರಣೆಗೆ, ನೀವು ನಿಮ್ಮ ಕೆಲಸ ಕಳೆದುಕೊಂಡರೆ ಮತ್ತು ನಿಮ್ಮ ಮಾಸಿಕ ಪಾವತಿಗಳನ್ನು ಮಾಡಲು ಸಾಧ್ಯವಾಗದಿದ್ದರೆ, ನೀವು ಇನ್ಶೂರೆನ್ಸ್ ಹೊಂದಿಲ್ಲದಿದ್ದರೆ ನಿಮ್ಮ ಮನೆಯನ್ನು ಕಳೆದುಕೊಳ್ಳಬಹುದು. ಹೋಮ್ ಲೋನ್ ಇನ್ಶೂರೆನ್ಸ್ ಪ್ರಸ್ತುತ ಅಡಮಾನವನ್ನು ಪಾವತಿಸಲು ಬಳಸಬಹುದಾದ ಒಟ್ಟು ಮೊತ್ತವನ್ನು ಪಾವತಿಸುತ್ತದೆ. ಪಾಲಿಸಿದಾರರು ಅಥವಾ ಲೋನ್ ಪಡೆದವರು ಒಟ್ಟು ಮೊತ್ತದ ಪಾವತಿಯನ್ನು ಪಡೆಯುತ್ತಾರೆ.
- ಜಂಟಿ ಹೋಮ್ ಲೋನ್ ಸಾಲಗಾರರನ್ನು ಒಂದೇ ಹೋಮ್ ಲೋನ್ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ಕವರ್ ಮಾಡಬಹುದು.
- ಹೆಚ್ಚುವರಿ ಶುಲ್ಕಕ್ಕಾಗಿ, ವೈದ್ಯಕೀಯ ಸಮಸ್ಯೆಗಳು, ಗಂಭೀರ ಅನಾರೋಗ್ಯ ಅಥವಾ ಅಂಗವೈಕಲ್ಯವನ್ನು ಹೋಮ್ ಲೋನ್ ಇನ್ಶೂರೆನ್ಸ್ ಪಾಲಿಸಿಗೆ ಸೇರಿಸಬಹುದು.
- ಹೆಚ್ಚಿನ ಹೋಮ್ ಲೋನ್ ಇನ್ಶೂರೆನ್ಸ್ ಪಾಲಿಸಿಗಳು ಸಿಂಗಲ್-ಪ್ರೀಮಿಯಂ ಪಾಲಿಸಿಗಳಾಗಿದ್ದು, ನೀವು ಒಮ್ಮೆ ಮಾತ್ರ ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಹೆಚ್ಚಿನ ಸಾಲದಾತರು ಲೋನ್ ಮೊತ್ತಕ್ಕೆ ಪ್ರೀಮಿಯಂ ಸೇರಿಸಲು ನಿಮಗೆ ಅನುಮತಿ ನೀಡುತ್ತಾರೆ. ಈ ರೀತಿಯಲ್ಲಿ, ಪ್ರೀಮಿಯಂ ಅನ್ನು ಇಎಂಐನೊಂದಿಗೆ ಕಡಿತಗೊಳಿಸಲಾಗುತ್ತದೆ.
- ತೆರಿಗೆ ಪ್ರಯೋಜನ: ಹೋಮ್ ಲೋನ್ ಇನ್ಶೂರೆನ್ಸ್ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ಪ್ರಯೋಜನಗಳನ್ನು ಒದಗಿಸುತ್ತದೆ. ನೀವು ನಿಮ್ಮ ಲೋನ್ ಮೊತ್ತಕ್ಕೆ ಪ್ರೀಮಿಯಂ ಸೇರಿಸಿದರೆ ಮತ್ತು ಇಎಂಐಗಳ ಮೂಲಕ ಪ್ರೀಮಿಯಂ ಪಾವತಿಸಿದರೆ ನೀವು ತೆರಿಗೆ ಪ್ರಯೋಜನವನ್ನು ಪಡೆಯುವುದಿಲ್ಲ ಎಂಬುದನ್ನು ದಯವಿಟ್ಟು ಗಮನದಲ್ಲಿಡಿ.
ಇದು ಇಬ್ಬರಿಗೂ ಲಾಭದಾಯಕ
ಹೋಮ್ ಲೋನ್‌ಗಳಿಗೆ, ಎರಡು ರೀತಿಯ ಇನ್ಶೂರೆನ್ಸ್ ಪಾಲಿಸಿಗಳು ಲಭ್ಯವಿವೆ: ಪ್ರಾಪರ್ಟಿ ಇನ್ಶೂರೆನ್ಸ್ ಮತ್ತು ಅಡಮಾನ ಪಾವತಿ ರಕ್ಷಣೆ.
ಮೊದಲನೆಯದು ನಿಮ್ಮ ಮನೆಯನ್ನು ಬೆಂಕಿ, ಪ್ರವಾಹ ಅಥವಾ ಇತರ ಅಪಾಯಗಳಿಂದ ರಕ್ಷಿಸುತ್ತದೆ, ಎರಡನೆಯದು ಸಾವು, ಉದ್ಯೋಗ ನಷ್ಟ ಅಥವಾ ಅಪಘಾತ ಅಥವಾ ಅನಾರೋಗ್ಯದಿಂದಾಗಿ ಕೆಲಸ ಮಾಡಲು ಸಾಧ್ಯವಾಗದಿದ್ದರೆ ನಿಮ್ಮ ಲೋನ್ ಪಾವತಿಗಳನ್ನು ಕವರ್ ಮಾಡಲು ಸಹಾಯ ಮಾಡುತ್ತದೆ.
ನೀವು ನೋಡುವಂತೆ, ಹೋಮ್ ಲೋನ್ ಇನ್ಶೂರೆನ್ಸ್ ಸಾಲಗಾರರು ಮತ್ತು ಸಾಲದಾತರು- ಇಬ್ಬರ ಹಿತಾಸಕ್ತಿಗಳನ್ನೂ ರಕ್ಷಿಸುತ್ತದೆ, ಇದು ಎರಡೂ ಪಕ್ಷಗಳಿಗೆ ಲಾಭದಾಯಕ ಸ್ಥಿತಿಯನ್ನು ಒದಗಿಸುತ್ತದೆ.
ಮುಕ್ತಾಯ
ಮನೆ ಖರೀದಿಸುವುದು ಗಮನಾರ್ಹ ಹೂಡಿಕೆಯಾಗಿದೆ. ಲೋನ್ ಪಡೆಯಲು ಹೋಮ್ ಲೋನ್ ಇನ್ಶೂರೆನ್ಸ್ ಅಗತ್ಯವಿಲ್ಲದಿದ್ದರೂ, ದುರದೃಷ್ಟಕರ ಘಟನೆ ಸಂಭವಿಸಿದರೆ ನಿಮ್ಮ ಅತ್ಯಂತ ಮೌಲ್ಯಯುತ ಆಸ್ತಿಯನ್ನು ನೀವು ಕಳೆದುಕೊಳ್ಳುವುದಿಲ್ಲ ಎಂದು ಅದು ಖಚಿತಪಡಿಸುತ್ತದೆ.