ಜಂಟಿ ಹೋಮ್ ಲೋನ್‌ಗಳು ಎಂದರೇನು? ಲೋನ್ ಅನುಮೋದನೆಗೆ ಅಗತ್ಯವಿರುವ ಅರ್ಹತೆ ಮತ್ತು ಡಾಕ್ಯುಮೆಂಟ್‌ಗಳು
ಸಾರಾಂಶ: ಜಂಟಿ ಹೋಮ್ ಲೋನ್‌ಗಳು ನಿಮ್ಮ ಮನೆಯನ್ನು ನಿರ್ಮಿಸಲು ಅಪೇಕ್ಷಿತ ಲೋನ್ ಮೊತ್ತವನ್ನು ಪಡೆಯುವ ಉತ್ತಮ ಮಾರ್ಗವಾಗಿದೆ. ಜಂಟಿ ಹೋಮ್ ಲೋನ್‌ಗಳು, ಅವುಗಳ ಪ್ರಯೋಜನಗಳು, ಅರ್ಹತಾ ಮಾನದಂಡಗಳು ಮತ್ತು ಅಪ್ಲಿಕೇಶನ್‌ಗೆ ಅಗತ್ಯವಿರುವ ಡಾಕ್ಯುಮೆಂಟ್‌ಗಳ ಬಗ್ಗೆ ತಿಳಿಯಲು ಲೇಖನವನ್ನು ಪರಿಶೀಲಿಸಿ.
ಮನೆ ಖರೀದಿಸುವುದು ಅಥವಾ ಸಂಪೂರ್ಣವಾಗಿ ಅದನ್ನು ನಿರ್ಮಿಸುವುದಕ್ಕೆ ದೊಡ್ಡ ಹೂಡಿಕೆಯ ಅಗತ್ಯವಿದೆ ಮತ್ತು ಸರಿಯಾದ ಹಣಕಾಸಿನ ಯೋಜನೆಯ ಕೊರತೆಯು ನಿಮ್ಮ ಎಲ್ಲಾ ಉಳಿತಾಯವನ್ನು ಖಾಲಿ ಮಾಡಬಹುದು. ನಿಮ್ಮ ಜೀವನದ ಗಳಿಕೆ ಅಥವಾ ನಿಮ್ಮ ಜೀವನದ ಕಷ್ಟಪಟ್ಟು ಗಳಿಸಿದ ಉಳಿತಾಯದ ಮೇಲೆ ರಾಜಿಮಾಡಿಕೊಳ್ಳದೆ ನೀವು ಯಾವಾಗಲೂ ಬಯಸಿದ ಮನೆಯನ್ನು ಹೊಂದುವ ಅಥವಾ ನಿರ್ಮಿಸುವ ನಿಮ್ಮ ಕನಸುಗಳನ್ನು ನನಸಾಗಿಸಲು, ಸಮಂಜಸವಾದ ಹೋಮ್ ಲೋನ್ ತೆಗೆದುಕೊಳ್ಳುವುದನ್ನು ಪರಿಗಣಿಸಬಹುದು.
ಒಂದು ಕಾಲದಲ್ಲಿ ಹೋಮ್ ಲೋನ್ ಪಡೆದುಕೊಳ್ಳುವುದು ಕಠಿಣ ಕಾರ್ಯವಾಗಿತ್ತು, ಆದರೆ ಇಂದು ಇದು ತುಂಬಾ ಸುಲಭವಾಗಿದೆ. ತ್ವರಿತ ಲೋನ್ ಅನುಮೋದನೆಗಾಗಿ ನಿಯಮಿತ ಆದಾಯ, ಉತ್ತಮ ಕ್ರೆಡಿಟ್ ಸ್ಕೋರ್ ಮತ್ತು ಅಗತ್ಯವಿರುವ ಡಾಕ್ಯುಮೆಂಟ್‌ಗಳು ಪುರಾವೆಯಾಗಿದೆ. ಆದಾಗ್ಯೂ, ಇದು ನಿಮ್ಮ ಮರುಪಾವತಿ ಸಾಮರ್ಥ್ಯ ಮತ್ತು ಹಿಂದಿನ ಮರುಪಾವತಿ ಟ್ರ್ಯಾಕ್ ದಾಖಲೆಯನ್ನು ಅವಲಂಬಿಸಿರುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ.
ನೀವು ಮನೆ ಖರೀದಿಸಲು ಅಥವಾ ನಿರ್ಮಿಸಲು ಅಗತ್ಯವಿರುವ ಮೊತ್ತಕ್ಕೆ ನೀವು ಅರ್ಹರಾಗದಿದ್ದರೆ ಏನಾಗುತ್ತದೆ?? ಅನೇಕ ಹಣಕಾಸು ಸಂಸ್ಥೆಗಳು ಜಂಟಿ ಹೋಮ್ ಲೋನ್ ಅಪ್ಲಿಕೇಶನ್‌ಗಳನ್ನು ಮಾಡಲು ನಿಮಗೆ ಅನುಮತಿ ನೀಡುತ್ತಿದ್ದು, ಲೋನ್ ಪಡೆಯುವ ಸಾಧ್ಯತೆಗಳನ್ನು ಗಣನೀಯವಾಗಿ ಹೆಚ್ಚಿಸುತ್ತವೆ.
ಜಂಟಿ ಹೋಮ್ ಲೋನ್ ಎಂದರೇನು?
ಇದರರ್ಥ, ಇಬ್ಬರು ಸೇರಿ ಒಂದೇ ಲೋನ್ ಅಪ್ಲಿಕೇಶನ್ ಸಲ್ಲಿಸುವುದು ಎಂದರ್ಥ. ಜಂಟಿ ಹೋಮ್ ಲೋನ್‌ಗೆ ಅಪ್ಲೈ ಮಾಡುವಾಗ, ನೀವು ನಿಮ್ಮ ಅಪ್ಲಿಕೇಶನ್‌ನಲ್ಲಿ ನಿಮ್ಮ ಸಂಗಾತಿ ಅಥವಾ ಹತ್ತಿರದ ಕುಟುಂಬದ ಸದಸ್ಯರನ್ನು ಸೇರಿಸಬಹುದು. ಇದು ಲೋನ್ ಹೊರೆಯನ್ನು ಇಬ್ಬರೂ ಹಂಚಿಕೊಳ್ಳಲು ಮತ್ತು ನಿಶ್ಚಿತವಾಗಿ ಹೆಚ್ಚಿನ ಮೊತ್ತಕ್ಕೆ ಅರ್ಹತೆ ಪಡೆಯುವ ಸಾಧ್ಯತೆಗಳನ್ನು ಹೆಚ್ಚಿಸಲು ಅನುಮತಿಸುತ್ತದೆ.
ಉತ್ತಮ ಕ್ರೆಡಿಟ್ ಸ್ಕೋರ್‌ನೊಂದಿಗೆ ಆದಾಯ ಗಳಿಸುವ ಸಹ-ಅರ್ಜಿದಾರರನ್ನು ಸೇರಿಸಿದಾಗ ಲೋನ್ ಪಡೆಯುವ ನಿಮ್ಮ ಅರ್ಹತೆಯು ಹೆಚ್ಚಾಗುತ್ತದೆ. ಹೆಚ್ಚಿನ ಹೋಮ್ ಲೋನ್ ಅರ್ಹತೆ ಜೊತೆಗೆ, ನಿಮ್ಮ ಸಹ-ಅರ್ಜಿದಾರರು ನಿಮ್ಮೊಂದಿಗೆ ಇಎಂಐಗಳನ್ನು ಪಾವತಿಸುವುದರಿಂದ ನೀವು ದೊಡ್ಡ ಮೊತ್ತವನ್ನು ಪಡೆಯುತ್ತೀರಿ (ಕಂತುಗಳ ಗಾತ್ರವನ್ನು ಹೆಚ್ಚಿಸುತ್ತದೆ).
ಓದಲೇಬೇಕಾದವು: ಜಂಟಿ ಹೋಮ್ ಲೋನ್ ತೆಗೆದುಕೊಳ್ಳುವ ಪ್ರಯೋಜನಗಳು
ಜಂಟಿ ಹೋಮ್ ಲೋನ್ ಅರ್ಹತೆ
ಈಗ, ಇದು ಸ್ವಲ್ಪ ಕಷ್ಟವಾಗಿದೆ, ಮತ್ತು ನಿಮ್ಮ ಹಣಕಾಸಿನ ಅವಶ್ಯಕತೆಗಳನ್ನು ಪೂರೈಸುವ ಸಂಭಾವ್ಯ ಹಣಕಾಸು ಸಂಸ್ಥೆಗಳನ್ನು ನೀವು ಎಚ್ಚರಿಕೆಯಿಂದ ಆರಿಸಬೇಕು. ನಿಯಮ ಮತ್ತು ಷರತ್ತುಗಳನ್ನು- ನಿಮ್ಮ ವಯಸ್ಸು, ಕ್ರೆಡಿಟ್ ಸ್ಕೋರ್ ಮತ್ತು ಆದಾಯವನ್ನು ನೀವು ಎಚ್ಚರಿಕೆಯಿಂದ ಪರಿಶೀಲಿಸಬೇಕು.
ನೀವು ನಿಮ್ಮ ಸಂಗಾತಿ, ಸಹೋದರರು ಅಥವಾ ಪೋಷಕರೊಂದಿಗೆ ಜಂಟಿ ಹೋಮ್ ಲೋನ್‌ಗೆ ಅಪ್ಲೈ ಮಾಡಬಹುದು. ಯಾವುದೇ ಹಣಕಾಸು ಸಂಸ್ಥೆಯು ನಿಮ್ಮ ಕುಟುಂಬದ ಭಾಗವಾಗದ ಸ್ನೇಹಿತರು, ಬಿಸಿನೆಸ್ ಪಾಲುದಾರರು ಅಥವಾ ಇತರ ಜನರೊಂದಿಗೆ ಅರ್ಜಿಯನ್ನು ಅನುಮತಿಸುವುದಿಲ್ಲ ; ಆದ್ದರಿಂದ, ನೀವು ಕುಟುಂಬದ ಸದಸ್ಯರನ್ನು ಮಾತ್ರ ಸೇರಿಸಬೇಕು. ಅಲ್ಲದೆ, ನಿಮ್ಮ ಸಹ-ಅರ್ಜಿದಾರರು ಸ್ಥಿರ ಆದಾಯದ ಮೂಲವನ್ನು ಹೊಂದಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
ಜಂಟಿ ಹೋಮ್ ಲೋನ್‌ಗಳಿಗೆ ಅಗತ್ಯವಿರುವ ಡಾಕ್ಯುಮೆಂಟ್‌ಗಳು
ಹೋಮ್ ಲೋನ್ ಪಡೆಯಲು ಹೋಮ್ ಲೋನ್ ಡಾಕ್ಯುಮೆಂಟ್‌ಗಳು ಕಡ್ಡಾಯವಾಗಿವೆ. ಇವುಗಳು ಅರ್ಜಿದಾರರ ಬಗ್ಗೆ ಪ್ರಮುಖ ಮಾಹಿತಿಯನ್ನು, ಅಂದರೆ ವಯಸ್ಸು, ವಿಳಾಸ, ಆದಾಯ, ಉದ್ಯೋಗ, ಆದಾಯ ತೆರಿಗೆ ಇತ್ಯಾದಿಗಳನ್ನು ಒದಗಿಸುತ್ತವೆ. ಸಂಬಳ ಪಡೆಯುವ ಮತ್ತು ಸ್ವಯಂ ಉದ್ಯೋಗಿ ಅರ್ಜಿದಾರರಿಗೆ ಹೋಮ್ ಲೋನ್ ಡಾಕ್ಯುಮೆಂಟ್‌ಗಳು ಸ್ವಲ್ಪ ಭಿನ್ನವಾಗಿರುತ್ತವೆ ಎಂಬುದನ್ನು ನೆನಪಿಡಿ.
ಸಂಬಳ ಪಡೆಯುವ ವೃತ್ತಿಪರರು ಹೋಮ್ ಲೋನ್‌ಗಳನ್ನು ಪಡೆಯಲು
- ವಿಳಾಸದ ಪುರಾವೆ – ಆಧಾರ್ ಕಾರ್ಡ್, ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಟೆಲಿಫೋನ್ ಬಿಲ್, ರೇಷನ್ ಕಾರ್ಡ್, ಎಲೆಕ್ಷನ್ ಕಾರ್ಡ್ ಅಥವಾ ಶಾಸನಬದ್ಧ ಪ್ರಾಧಿಕಾರದಿಂದ ಯಾವುದೇ ಇತರ ಪ್ರಮಾಣಪತ್ರ
- ವಯಸ್ಸಿನ ಪುರಾವೆ – ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್ ಅಥವಾ ಶಾಸನಬದ್ಧ ಪ್ರಾಧಿಕಾರದಿಂದ ಯಾವುದೇ ಇತರ ಪ್ರಮಾಣಪತ್ರ
- ಆದಾಯ ಪುರಾವೆ – ಕಳೆದ 3 ತಿಂಗಳ ಸಂಬಳದ ಸ್ಲಿಪ್‌ಗಳು, ಕಳೆದ 2 ವರ್ಷಗಳ ಫಾರ್ಮ್ 16 ಮತ್ತು ಕಳೆದ 6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ ಒಳಗೊಂಡಿದೆ
ಸ್ವಯಂ ಉದ್ಯೋಗಿ ವ್ಯಕ್ತಿಗಳಿಗೆ ಹೋಮ್ ಲೋನ್‌ಗಳನ್ನು ಪಡೆಯಲು
- ವಿಳಾಸದ ಪುರಾವೆ – ಆಧಾರ್ ಕಾರ್ಡ್, ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಟೆಲಿಫೋನ್ ಬಿಲ್, ರೇಷನ್ ಕಾರ್ಡ್, ಎಲೆಕ್ಷನ್ ಕಾರ್ಡ್, ಶಾಸನಬದ್ಧ ಪ್ರಾಧಿಕಾರದಿಂದ ಯಾವುದೇ ಇತರ ಪ್ರಮಾಣಪತ್ರ,
- ವಯಸ್ಸಿನ ಪುರಾವೆ – ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್ ಅಥವಾ ಶಾಸನಬದ್ಧ ಪ್ರಾಧಿಕಾರದಿಂದ ಯಾವುದೇ ಇತರ ಪ್ರಮಾಣಪತ್ರ
- ಆದಾಯ ಪುರಾವೆ – ಬಿಸಿನೆಸ್ ಮತ್ತು ITR ಗೆ ಸಂಬಂಧಿಸಿದಂತೆ, ಬಿಸಿನೆಸ್ ಅಸ್ತಿತ್ವದ ಪುರಾವೆ, ಕಳೆದ 3 ವರ್ಷಗಳ ಆದಾಯ ತೆರಿಗೆ ರಿಟರ್ನ್ಸ್, ಅಕೌಂಟೆಂಟ್-ಪ್ರಮಾಣೀಕೃತ ಬ್ಯಾಲೆನ್ಸ್ ಶೀಟ್‌ಗಳು ಮತ್ತು ಕಳೆದ 12 ತಿಂಗಳ ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್
ಓದಲೇಬೇಕಾದವು: ಜಂಟಿ ಹೋಮ್ ಲೋನ್ ಮೇಲೆ ತೆರಿಗೆ ಪ್ರಯೋಜನಗಳನ್ನು ಪಡೆಯುವುದು ಹೇಗೆ (3 ಸಾಧ್ಯವಾದ ವಿಧಾನಗಳು)
ಜಂಟಿ ಹೋಮ್ ಲೋನ್ ಪಡೆಯುವ ಪ್ರಯೋಜನಗಳು
- ನೀವು ಮಹಿಳಾ ಅರ್ಜಿದಾರರನ್ನು ಸೇರಿಸಿದಾಗ ಸ್ಟ್ಯಾಂಪ್ ಡ್ಯೂಟಿ ಕಡಿಮೆ ಆಗುತ್ತದೆ
- ಅರ್ಹತೆ ಹೆಚ್ಚುತ್ತದೆ.
- ನೀವು ಒಟ್ಟಿಗೆ ಅಪ್ಲೈ ಮಾಡುವಾಗ ದೊಡ್ಡ ಹೋಮ್ ಲೋನಿಗೆ ಅರ್ಹರಾಗಿರುತ್ತೀರಿ
- ಮರುಪಾವತಿ ಅವಧಿಯಲ್ಲಿ ಸರ್ಕಾರಿ ಪ್ರಯೋಜನಗಳನ್ನು ಹಂಚಿಕೊಳ್ಳುವುದು.
- ಹಂಚಿಕೊಂಡ ಮರುಪಾವತಿ ಜವಾಬ್ದಾರಿಯಿಂದಾಗಿ ಕಡಿಮೆ ಮರುಪಾವತಿ ಹೊರೆ
- ಜಂಟಿ ಹೋಮ್ ಲೋನಿನೊಂದಿಗೆ ಖರೀದಿಸಿದ ಆಸ್ತಿಗೆ ಸುಲಭ ಮಾಲೀಕತ್ವದ ವರ್ಗಾವಣೆ
ಮುಕ್ತಾಯ
ನಿಮ್ಮ ಕನಸಿನ ಮನೆಗೆ ತೊಂದರೆಯಾಗುವಾಗ, ಜಂಟಿ ಹೋಮ್ ಲೋನ್ ಉತ್ತಮ ಸಹಾಯವಾಗಬಹುದು. ಉತ್ತಮ ಕ್ರೆಡಿಟ್ ಸ್ಕೋರ್ ಮತ್ತು ಆದಾಯ ಹೊಂದಿರುವ ಸಹ-ಅರ್ಜಿದಾರರು ನಿಮ್ಮ ಕನಸಿನ ಮನೆಗೆ ಹೆಚ್ಚಿನ ಮೊತ್ತವನ್ನು ಪಡೆಯುವ ಸಾಧ್ಯತೆಗಳನ್ನು ಹೆಚ್ಚಿಸುತ್ತಾರೆ. ನೀವು ಸಹ-ಸಾಲಗಾರರೊಂದಿಗೆ ಜವಾಬ್ದಾರಿಯನ್ನು ಹಂಚಿಕೊಳ್ಳುವುದರಿಂದ ಮರುಪಾವತಿ ಹೊರೆಯು ಕಡಿಮೆಯಾಗುತ್ತದೆ. ಆದಾಗ್ಯೂ, ನಿಮಗೆ ಅತ್ಯುತ್ತಮ ಡೀಲ್‌ಗಳನ್ನು ಒದಗಿಸುವ ಅತ್ಯುತ್ತಮ ಹಣಕಾಸು ಸಂಸ್ಥೆಗಳನ್ನು ಹುಡುಕುವುದು ಮುಖ್ಯವಾಗಿದೆ, ಆದ್ದರಿಂದ ನಿಮ್ಮ ಅಗತ್ಯಗಳಿಗೆ ಸೂಕ್ತವಾದ ಹೋಮ್ ಲೋನ್ ಸೆಟಲ್ ಮಾಡುವ ಮೊದಲು ನಿಮ್ಮ ಸರಿಯಾದ ಪರಿಶೀಲನೆಯನ್ನು ಮಾಡಿ.
ಆದ್ದರಿಂದ ತಯಾರಿ ನಡೆಸಿ, ಸಂಶೋಧನೆ ಮಾಡಿ ಮತ್ತು ಆತ್ಮವಿಶ್ವಾಸದೊಂದಿಗೆ ಅಪ್ಲೈ ಮಾಡಿ.