PNB Housing Finance Limited

ಎನ್ಎಸ್ಇ:

ಬಿಎಸ್ಇ:

ಕೊನೆಯ ಅಪ್ಡೇಟ್:

()
ಸರಾಸರಿ ರೇಟಿಂಗ್
ಹಂಚಿಕೊಳ್ಳಿ
ಕಾಪಿ ಮಾಡಿ

ಹೋಮ್ ಲೋನ್ ಎಂದರೆ ಏನು? ಹೌಸಿಂಗ್ ಲೋನ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವೂ

give your alt text here

ಸಾಧ್ಯವಾದಷ್ಟು ಉತ್ತಮ ಮನೆಯನ್ನು ಖರೀದಿಸಲು ನಾವೆಲ್ಲರೂ ಕನಸು ಕಾಣುತ್ತೇವೆ. ಆದರೆ, ಆಸ್ತಿ ಬೆಲೆಗಳು ಗಗನಕ್ಕೆ ಮುಟ್ಟಿ ಮತ್ತಷ್ಟು ಹೆಚ್ಚುತ್ತಿರುವಾಗ, ಕನಸನ್ನು ನನಸಾಗಿಸುವುದು ತುಂಬಾ ದೂರದ ಮಾತಾಗಬಹುದು. ಇಲ್ಲಿ, ಹೋಮ್ ಲೋನ್ ರಕ್ಷಣೆಗೆ ಬರುತ್ತದೆ.

ಹೋಮ್ ಲೋನ್ ತೆಗೆದುಕೊಳ್ಳುವುದು ದೊಡ್ಡ ಹಂತವಾಗಿರಬಹುದು. ಹಣಕಾಸಿನ ಪ್ಲಾನಿಂಗ್‌ನಿಂದ ಹಿಡಿದು, ಲೋನ್ ಅನುಮೋದನೆ ಪಡೆಯುವ ದೀರ್ಘ ಪ್ರಕ್ರಿಯೆಯವರೆಗೆ, ಸಾಮಾನ್ಯವಾಗಿ ಮೊದಲ ಬಾರಿಗೆ ಹೋಮ್ ಲೋನ್ ಪಡೆಯುವವರಿಗೆ ಇದು ಕಠಿಣ ಪ್ರಕ್ರಿಯೆ ಎಂದು ಕಾಣಬಹುದು. ಆದರೆ ಅದು ಹಾಗಿರಬೇಕಿಲ್ಲ!

ಭಾರತದಲ್ಲಿ ಹೋಮ್ ಲೋನ್ ಮಾಹಿತಿಯನ್ನು ನೋಡೋಣ.

ಹೌಸಿಂಗ್ ಲೋನ್ ಎಂದರೇನು?

ಹೆಸರೇ ಸೂಚಿಸುವಂತೆ, ಹೋಮ್ ಲೋನ್ ಎಂಬುದು ಒಬ್ಬ ವ್ಯಕ್ತಿಯು ವಸತಿ ಅಥವಾ ವಾಣಿಜ್ಯ ಆಸ್ತಿಯನ್ನು ಖರೀದಿಸಲು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯಿಂದ ಪಡೆಯುವ ಮೊತ್ತವಾಗಿದೆ. ನಂತರ ವ್ಯಕ್ತಿಯು ನಿರ್ದಿಷ್ಟ ಹೋಮ್ ಲೋನ್ ಬಡ್ಡಿ ದರ ದಲ್ಲಿ ಸುಲಭ ಮಾಸಿಕ ಕಂತುಗಳಲ್ಲಿ (ಇಎಂಐ) ಸಾಲದಾತರಿಗೆ ಲೋನ್ ಅನ್ನು ಮರುಪಾವತಿಸಬೇಕು.

ಭಾರತದಲ್ಲಿ ಹೋಮ್ ಲೋನ್‌ಗಳ ವಿಧಗಳು

ನಿಮ್ಮ ಅಗತ್ಯಗಳನ್ನು ಅವಲಂಬಿಸಿ ವಿವಿಧ ರೀತಿಯ ಹೋಮ್ ಲೋನ್‌ಗಳಲ್ಲಿ ನಿಮಗೆ ಆಯ್ಕೆ ಮಾಡಲು ಲಭ್ಯವಿವೆ.

ಕೆಲವು ಜನಪ್ರಿಯ ಆಯ್ಕೆಗಳು:

  1. ಮನೆ ಖರೀದಿ ಲೋನ್ – ಇದು ನಿಮ್ಮ ಬಜೆಟ್‌ಗೆ ಸರಿಹೊಂದುವ ನಿಮ್ಮ ಕನಸಿನ ಮನೆಯನ್ನು ಖರೀದಿಸಲು ನಿಮಗೆ ಅವಕಾಶ ನೀಡುತ್ತದೆ.
  2. ನಿರ್ಮಾಣ ಹೋಮ್ ಲೋನ್ ನೀವು ನಿಮ್ಮ ಸ್ವಂತ ಮನೆಯನ್ನು ನಿರ್ಮಿಸಲು ಬಯಸಿದರೆ, ಇದು ನಿಮಗೆ ಸೂಕ್ತವಾಗಿದೆ!
  3. ಜಮೀನು ಖರೀದಿ ಲೋನ್ – ಹೆಸರೇ ಸೂಚಿಸುವಂತೆ, ಇದು ಭೂಮಿಯನ್ನು ಖರೀದಿಸಲು ನಿಮಗೆ ಅನುಮತಿಸುತ್ತದೆ.
  4. ಮನೆ ಸುಧಾರಣೆ ಲೋನ್ – ಯಾವುದೇ ನವೀಕರಣಗಳು ಅಥವಾ ಪುನರ್ನಿರ್ಮಾಣಗಳು ಇದರ ಅಡಿಯಲ್ಲಿ ಬರುತ್ತವೆ.
  5. ಮನೆ ರಿಪೇರಿ ಲೋನ್ – ಇದು ಮುಖ್ಯವಾಗಿ ಮನೆಯ ಸುತ್ತಮುತ್ತಲಿನ ಅಗತ್ಯವಿರುವ ರಿಪೇರಿಗಳಿಗೆ ಮಾತ್ರ.
  6. ಮನೆ ವಿಸ್ತರಣೆ ಲೋನ್ – ನೀವು ನಿಮ್ಮ ಮನೆಯನ್ನು ಹೆಚ್ಚು ದೊಡ್ಡ ಮತ್ತು ವಿಶಾಲವಾಗಿಸಲು ನಿರ್ಧರಿಸಿದರೆ, ಇದು ಉತ್ತಮ ಆಯ್ಕೆಯಾಗಿದೆ!

ಓದಲೇಬೇಕಾದವು: ಹೋಮ್ ಲೋನ್ ಸಾಲದಾತರನ್ನು ಆಯ್ಕೆ ಮಾಡುವುದು ಹೇಗೆ

ಕೇವಲ 3 ನಿಮಿಷಗಳಲ್ಲಿ
3 ನಿಮಿಷಗಳು, ತೊಂದರೆ-ರಹಿತ!

ಪಿಎನ್‌ಬಿ ಹೌಸಿಂಗ್

ಅನ್ವೇಷಿಸಲು ಇತರ ವಿಷಯಗಳು

Request Call Back at PNB Housing
ಕಾಲ್ ಬ್ಯಾಕ್ ಮಾಡಿ