PNB Housing Finance Limited

ಎನ್ಎಸ್ಇ:

ಬಿಎಸ್ಇ:

ಕೊನೆಯ ಅಪ್ಡೇಟ್:

()
ಸರಾಸರಿ ರೇಟಿಂಗ್
ಹಂಚಿಕೊಳ್ಳಿ
ಕಾಪಿ ಮಾಡಿ

ಸರಿಯಾದ ಹೋಮ್ ಲೋನ್ ಸಾಲದಾತರನ್ನು ಆಯ್ಕೆ ಮಾಡುವುದು ಹೇಗೆ

give your alt text here

ಕನಸಿನ ಮನೆ ಖರೀದಿಸುವುದು ನೀವು ಪ್ರತಿದಿನ ಮಾಡುವ ಕೆಲಸವಲ್ಲ. ಅದೇ ರೀತಿ ನಿಮ್ಮ ಹೋಮ್ ಲೋನ್ ಕೂಡ. ಇದು ದೊಡ್ಡ ಹಣಕಾಸಿನ ನಿರ್ಧಾರವಾಗಿದೆ ಮತ್ತು ಖರೀದಿ ಮುಗಿದ ನಂತರ ನಿಮ್ಮ ಹಣದ ಮೇಲೆ ದೀರ್ಘಕಾಲದವರೆಗೆ ಪರಿಣಾಮ ಬೀರುತ್ತದೆ. ಇದು ಸಾಲ ನೀಡುವ ಸಂಸ್ಥೆಯನ್ನು ಆಯ್ಕೆ ಮಾಡುವ ವಿಷಯದ ಚರ್ಚೆಯನ್ನು ಆರಂಭಿಸುತ್ತದೆ. ನೀವು ಅದನ್ನು ಹೇಗೆ ತಿಳಿಯುತ್ತೀರಿ?

ಅದನ್ನು ಎಚ್ಚರಿಕೆಯಿಂದ ಪರಿಗಣಿಸುವುದು ಮುಖ್ಯವಾಗಿದೆ. ಎಷ್ಟೇ ಆದರೂ, ಬಡ್ಡಿ ದರಕ್ಕಿಂತ ಹೋಮ್ ಲೋನ್ ಹೆಚ್ಚಿನ ಪ್ರಯೋಜನವನ್ನು ಹೊಂದಿದೆ. ಹೋಮ್ ಲೋನ್ ಸಂಸ್ಥೆಯನ್ನು ಆಯ್ಕೆ ಮಾಡುವಾಗ ಗಮನದಲ್ಲಿಟ್ಟುಕೊಳ್ಳಬೇಕಾದ ಫೀಚರ್‌ಗಳು ಮತ್ತು ಅಂಶಗಳನ್ನು ಪರಿಶೀಲಿಸೋಣ.

ಹೆಸರು ಮತ್ತು ಅನುಭವವನ್ನು ಹೊಂದಿರುವ ಸಾಲದಾತರನ್ನು ಆಯ್ಕೆಮಾಡಿ

ಗ್ರಾಹಕರ ನಂಬಿಕೆ ಮತ್ತು ವಿಶ್ವಾಸವನ್ನು ಆನಂದಿಸುವ ಉತ್ತಮ ಬ್ರ್ಯಾಂಡ್ ಮತ್ತು ಪರಂಪರೆಯನ್ನು ಹೊಂದಿರುವ ಮತ್ತು ಅನುಕೂಲಕರ ಪರಿಹಾರವನ್ನು ಒದಗಿಸುವ ಅನುಭವವನ್ನು ಹೊಂದಿರುವ ಸಂಸ್ಥೆಯನ್ನು ಆಯ್ಕೆ ಮಾಡಿ. ಪಿಎನ್‌ಬಿ ಹೌಸಿಂಗ್ 25 ವರ್ಷಗಳಿಗಿಂತ ಹೆಚ್ಚು ಕಾಲ ಹೌಸಿಂಗ್ ಫೈನಾನ್ಸ್ ಬಿಸಿನೆಸ್‌ನಲ್ಲಿದೆ.

ನಾವು ದೇಶದ ಎರಡನೇ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಿಂದ ಪ್ರಚಲಿತರಾಗಿದ್ದೇವೆ. ಎಂಎನ್‌ಸಿಯ ಸೇವಾ ಮಾನದಂಡಗಳ ಜೊತೆಗೆ ಪಿಎಸ್‌ಯು ವಿಶ್ವಾಸಾರ್ಹ ಮಟ್ಟಗಳನ್ನು ಒದಗಿಸುವ ಎರಡು ಪರಿಕಲ್ಪನೆಯ ಮೇಲೆ ನಾವು ಕೆಲಸ ಮಾಡುತ್ತೇವೆ. ಹೋಮ್ ಫೈನಾನ್ಸ್‌ ಕ್ಷೇತ್ರದ ಎಕ್ಸ್‌ಪರ್ಟ್ ಆಗಿ, ಗ್ರಾಹಕರ ಅವಶ್ಯಕತೆಗಳನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಮತ್ತು ಅವರ ಅಗತ್ಯಗಳಿಗೆ ಅನುಗುಣವಾಗಿ ಕಸ್ಟಮೈಜ್ ಮಾಡಿದ ಪರಿಹಾರಗಳನ್ನು ಒದಗಿಸಲು ಇದು ಸಹಾಯ ಮಾಡುತ್ತದೆ.

ದೀರ್ಘಾವಧಿಯಲ್ಲಿ ಆರ್ಥಿಕ ಸಮರ್ಥತೆ ನೀಡಬಲ್ಲ ಸಾಲದಾತರನ್ನು ಆಯ್ಕೆಮಾಡಿ

ಹೋಮ್ ಲೋನ್ ದೀರ್ಘಾವಧಿಯ ಸಂಬಂಧವಾಗಿರುವುದರಿಂದ, ಆರಂಭಿಕ ಕೊಡುಗೆಗಳನ್ನು ನೋಡುವ ಮೂಲಕ ನಿರ್ಧಾರವನ್ನು ತೆಗೆದುಕೊಳ್ಳಬಾರದು. ಲೋನ್ ಅವಧಿಯಲ್ಲಿ ಫ್ಲೋಟಿಂಗ್ ದರಗಳು ಅನೇಕ ಬಾರಿ ಬದಲಾಗಬಹುದು, ಆದ್ದರಿಂದ ಆರಂಭದಲ್ಲಿ ಕಡಿಮೆ ದರಗಳನ್ನು ನೀಡುವ ಸಂಸ್ಥೆಗಳು ದೀರ್ಘಾವಧಿಗೆ ಆರ್ಥಿಕವಾಗಿ ಅನುಕೂಲಕರವಾಗಿರುವುದಿಲ್ಲ ಎಂಬುದು ನಿಜವಾಗಿರಬಹುದು. ಸಾಲದಾತರನ್ನು ನಿರ್ಧರಿಸಲು ಕಳೆದ ಕೆಲವು ವರ್ಷಗಳಲ್ಲಿ ಒಟ್ಟಾರೆ ದರದ ಚಲನೆಯ ಸನ್ನಿವೇಶವನ್ನು ನೋಡಬೇಕು.

ಪಿಎನ್‌ಬಿ ಹೌಸಿಂಗ್‌ನಲ್ಲಿ ನಾವು ನಮ್ಮ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಕನಿಷ್ಠ ದರದ ಹೆಚ್ಚಳಗಳನ್ನು ನೀಡುತ್ತೇವೆ ಮತ್ತು ಇದು ಹೆಚ್ಚಿನ ಆರ್ಥಿಕ ಸುಭದ್ರತೆಗೆ ಕಾರಣವಾಗುತ್ತದೆ.

ಭಾರತದಾದ್ಯಂತ ಶಾಖೆಯ ನೆಟ್ವರ್ಕ್ ಹೊಂದಿರುವ ಸಾಲದಾತರನ್ನು ಆಯ್ಕೆಮಾಡಿ

ನೀವು ಇಂದು ದೆಹಲಿಯಲ್ಲಿರಬಹುದು, ಹಾಗೆಯೇ ನಾಳೆ ಚೆನ್ನೈನಲ್ಲಿರಬಹುದು. ನೀವು ಎಲ್ಲಿಯೇ ಇದ್ದರೂ, ಅದೇ ಮಟ್ಟದ ಸೇವೆಗಳನ್ನು ನೀಡಲು ನಿಮ್ಮ ಸಾಲ ನೀಡುವ ಸಂಸ್ಥೆಯು ಭಾರತದಾದ್ಯಂತ ನೆಟ್ವರ್ಕ್ ಹೊಂದಿರಬೇಕು.

ಪಿಎನ್‌ಬಿ ಹೌಸಿಂಗ್ ಫೈನಾನ್ಸ್ ಎಲ್ಲಾ ಪ್ರಮುಖ ಸ್ಥಳಗಳಲ್ಲಿ ರಾಷ್ಟ್ರವ್ಯಾಪಿ ಉಪಸ್ಥಿತಿಯನ್ನು ಹೊಂದಿದೆ. ಒಂದು ವೇಳೆ ಗ್ರಾಹಕರು ಲೋನ್ ಅವಧಿಯಲ್ಲಿ ಇತರ ಸ್ಥಳಕ್ಕೆ ಸ್ಥಳಾಂತರಗೊಂಡರೆ, ವಿತರಣೆಯ ನಂತರದ ಸೇವೆಗಳಿಗೆ ಸಂಬಂಧಿಸಿದಂತೆ ಅವರು ಯಾವುದೇ ಸಮಸ್ಯೆಗಳನ್ನು ಎದುರಿಸುವುದಿಲ್ಲ.

ಓದಲೇಬೇಕಾದವು: ಹೋಮ್ ಲೋನ್‌ಗೆ ಡೌನ್ ಪೇಮೆಂಟ್ ಎಂದರೇನು?

ನಿಮಗೆ ಗ್ರಾಹಕ ಸ್ನೇಹಿ ಫೀಚರ್‌ಗಳಿಗೆ ಅಕ್ಸೆಸ್ ನೀಡುವ ಸಾಲದಾತರನ್ನು ಆಯ್ಕೆ ಮಾಡಿ

ನಿಮ್ಮ ಸಾಲ ನೀಡುವ ಸಂಸ್ಥೆಯು ತ್ವರಿತ ಆನ್ಲೈನ್ ಲೋನ್ ಅನುಮೋದನೆಗಳು, ಮನೆಬಾಗಿಲಿನ ಸೇವೆ, ಮೀಸಲಾದ ರಿಲೇಶನ್‌ಶಿಪ್ ಮ್ಯಾನೇಜರ್‌ಗಳು ಮತ್ತು ಮಾರಾಟ ನಂತರದ ಬಲವಾದ ಸೇವೆಯಂತಹ ಫೀಚರ್‌ಗಳು ಮತ್ತು ಅನುಕೂಲಗಳನ್ನು ಹೊಂದಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಪಿಎನ್‌ಬಿ ಹೌಸಿಂಗ್ ಮೇಲಿನ ಎಲ್ಲಾ ಸೇವೆಗಳನ್ನು ಒದಗಿಸುವಲ್ಲಿ ಮಾತ್ರವಲ್ಲದೆ ಯಾವುದೇ ದುರದೃಷ್ಟಕರ ತಪ್ಪಾದ ಸಂದರ್ಭದಲ್ಲಿ ತನ್ನ ಗ್ರಾಹಕರನ್ನು ರಕ್ಷಿಸಲು ಐಚ್ಛಿಕ ಇನ್ಶೂರೆನ್ಸ್ ಸೌಲಭ್ಯದಂತಹ ಮೌಲ್ಯವರ್ಧನೆಗಳನ್ನು ಒದಗಿಸುತ್ತದೆ.

ನಿಮಗೆ ಫ್ಲೆಕ್ಸಿಬಿಲಿಟಿ ಮತ್ತು ವೈವಿಧ್ಯತೆಯನ್ನು ಒದಗಿಸುವ ಸಾಲದಾತರನ್ನು ಆಯ್ಕೆಮಾಡಿ

ನಿಮ್ಮ ಸಾಲ ನೀಡುವ ಸಂಸ್ಥೆಯಿಂದ ಹೆಚ್ಚಿನ ಮಟ್ಟದ ಫ್ಲೆಕ್ಸಿಬಿಲಿಟಿ ಮತ್ತು ವೈವಿಧ್ಯತೆಯನ್ನು ಬೇಡುವ ಪ್ರತಿಯೊಂದು ಹಕ್ಕನ್ನು ನೀವು ಹೊಂದಿದ್ದೀರಿ - ಅದು ಗರಿಷ್ಠ ಹೋಮ್ ಲೋನ್ ಅರ್ಹತೆ ಮೇಲೆ ಕೆಲಸ ಮಾಡುವುದಾಗಿರಲಿ, ಕಸ್ಟಮೈಜ್ ಮಾಡಿದ ಇಎಂಐ ಆಯ್ಕೆಗಳನ್ನು ಒದಗಿಸುವುದು, ಫಿಕ್ಸೆಡ್ ದರದಿಂದ ಫ್ಲೋಟಿಂಗ್ ದರಕ್ಕೆ ಬದಲಾಯಿಸುವುದು ಮತ್ತು ಹೀಗೆಯೇ ವಿಲೋಮವಾಗಿ ಬದಲಾಯಿಸುವ ಆಯ್ಕೆಯನ್ನು ಒದಗಿಸುವುದು ಅಥವಾ ಇನ್ನೂ ಹೆಚ್ಚಿನದ್ದಾಗಿರಲಿ.

ನಮ್ಮ ಗ್ರಾಹಕರಿಗೆ ಗರಿಷ್ಠ ಲೋನ್ ಅರ್ಹತೆಯನ್ನು ಪರಿಚಯಿಸುವುದು ನಮ್ಮ ಪ್ರಯತ್ನವಾಗಿದೆ, ಸಾಧ್ಯವಾದಷ್ಟು ಹೆಚ್ಚಿನ ಲೋನ್ ಅರ್ಹತೆಯನ್ನು ಪರಿಗಣಿಸಲು ನಾವು ವಿವಿಧ ಪ್ರಾತಿನಿಧಿಕ ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ.

ನಿಮಗೆ ಹೆಚ್ಚಿನ ಲೋನ್ ಅವಧಿಯನ್ನು ನೀಡುವ ಸಾಲದಾತರನ್ನು ಆಯ್ಕೆ ಮಾಡಿ

ನಿಮಗೆ ತುಲನಾತ್ಮಕವಾಗಿ ಹೆಚ್ಚಿನ ಲೋನ್ ಅವಧಿಯನ್ನು ನೀಡಲು ಬಯಸುವ ಸಂಸ್ಥೆಯನ್ನು ಆಯ್ಕೆ ಮಾಡಿ - ಇದು ನಿಮಗೆ ಹೆಚ್ಚಿನ ಲೋನ್ ಮೊತ್ತಕ್ಕೆ ಅರ್ಹತೆ ನೀಡುವುದಲ್ಲದೆ ಇಎಂಐ ಹೊರೆಯನ್ನು ಕೂಡ ಕಡಿಮೆ ಮಾಡುತ್ತದೆ. ಇದರಿಂದ ನೀವು ನಿಮ್ಮ ಎಲ್ಲಾ ಕನಸುಗಳನ್ನು ನನಸಾಗಿಸಬಹುದು.

ಓದಲೇಬೇಕಾದವು: ಹೋಮ್ ಲೋನ್‌ನ ಮರುಪಾವತಿ ಅವಧಿ ಎಷ್ಟು?

ಪಿಎನ್‌ಬಿ ಹೌಸಿಂಗ್ ಹೋಮ್ ಲೋನ್‌ನೊಂದಿಗೆ, ನಿಮ್ಮ ಹೋಮ್ ಲೋನ್‌ಗೆ 30 ವರ್ಷಗಳವರೆಗಿನ ಅವಧಿಯನ್ನು ಆಯ್ಕೆ ಮಾಡುವ ಆಯ್ಕೆಯನ್ನು ನೀವು ಹೊಂದಿದ್ದೀರಿ. ದೀರ್ಘಾವಧಿಯ ಆಯ್ಕೆಗಳು ಇಎಂಐ ಹೊರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ ಮತ್ತು ನಿಮ್ಮನ್ನು ಹೆಚ್ಚಿನ ಲೋನ್ ಮೊತ್ತಕ್ಕೆ ಅರ್ಹವಾಗುವಂತೆ ಮಾಡುತ್ತವೆ

ನಿಮಗೆ ಹೋಮ್ ಲೋನ್ ಮುಂಪಾವತಿ ಆಯ್ಕೆಗಳನ್ನು ಒದಗಿಸುವ ಸಾಲದಾತರನ್ನು ಆಯ್ಕೆಮಾಡಿ

ಹೋಮ್ ಲೋನ್ ಸ್ವಾತಂತ್ರ್ಯದ ವಿಷಯವೇ ಹೊರತು, ನಿರ್ಬಂಧಗಳ ವಿಷಯವಲ್ಲ. ನೀವು ಬಯಸಿದಷ್ಟು ಬಾರಿ ಮರುಪಾವತಿ ಮಾಡಲು ಅನುವು ಮಾಡಿಕೊಡುವ ಮರುಪಾವತಿ ಷರತ್ತಿಗೆ ನೀವು ಅರ್ಹರಾಗಿರುತ್ತೀರಿ.

ಪಿಎನ್‌ಬಿ ಹೌಸಿಂಗ್ ಗ್ರಾಹಕರು ಯಾವುದೇ ಪೂರ್ವಪಾವತಿ ದಂಡವಿಲ್ಲದೆ ಯಾವುದೇ ಸಮಯದಲ್ಲಿ ತಮ್ಮ ಲೋನನ್ನು ಮರುಪಾವತಿಸಲು ಮುಕ್ತರಾಗಿರುತ್ತಾರೆ*

ಯಾವಾಗಲೂ ವಿಶ್ವಾಸಾರ್ಹ ಸಾಲದಾತರನ್ನು ಆಯ್ಕೆ ಮಾಡಿ

ಕೊನೆಯದಾಗಿ, ಇದು ದೀರ್ಘಾವಧಿಯ ಸಂಬಂಧವಾಗಿರುವುದರಿಂದ, ಗ್ರಾಹಕರ ಡಾಕ್ಯುಮೆಂಟ್‌ಗಳು ಸುರಕ್ಷಿತ ಕಸ್ಟಡಿಯಲ್ಲಿರುವುದು ಮತ್ತು ಸಾಲ ನೀಡುವ ಸಂಸ್ಥೆಯು ಪಾರದರ್ಶಕ ರೀತಿಯಲ್ಲಿ ಎಲ್ಲಾ ಮಾಹಿತಿಗೆ ಅಕ್ಸೆಸ್ ಒದಗಿಸುವುದು ಮುಖ್ಯವಾಗಿದೆ.

ಪಿಎನ್‌ಬಿ ಹೌಸಿಂಗ್ ತನ್ನ ನ್ಯಾಯೋಚಿತ ವ್ಯವಹಾರ ಮತ್ತು ನೈತಿಕ ನಡವಳಿಕೆ, ಲೋನ್ ಅಕೌಂಟ್ ಮಾಹಿತಿಗೆ ಸುಲಭ ಅಕ್ಸೆಸ್ ಅಥವಾ ಯಾವುದೇ ರೀತಿಯ ವಿತರಣೆ ನಂತರದ ಸೇವೆಯ ಅವಶ್ಯಕತೆಗೆ ಹೆಸರುವಾಸಿಯಾಗಿದೆ, ಗ್ರಾಹಕರು ಸುಲಭವಾಗಿ ನಮ್ಮನ್ನು ನಂಬಬಹುದು.

*ಷರತ್ತು ಅನ್ವಯ

ಕೇವಲ 3 ನಿಮಿಷಗಳಲ್ಲಿ
3 ನಿಮಿಷಗಳು, ತೊಂದರೆ-ರಹಿತ!

ಪಿಎನ್‌ಬಿ ಹೌಸಿಂಗ್

ಅನ್ವೇಷಿಸಲು ಇತರ ವಿಷಯಗಳು

Request Call Back at PNB Housing
ಕಾಲ್ ಬ್ಯಾಕ್ ಮಾಡಿ