ಮನಸ್ಸಿದ್ದಲ್ಲೇ ಮನೆ ಇರುತ್ತದೆ, ಎಂಬ ಒಂದು ಹಳೆಯ ಇಂಗ್ಲಿಷ್ ನಾಣ್ಣುಡಿಯಿದೆ. ವಾಸ್ತವವಾಗಿ, ನಮ್ಮಲ್ಲಿ ಅನೇಕರಿಗೆ, ನಾವು ಎಲ್ಲಿದ್ದರೂ ನಮ್ಮ ಮನೆಗಳು ಯಾವಾಗಲೂ ಆಳವಾದ ಪ್ರೀತಿಯನ್ನು ಅನುಭವಿಸುವ ಸ್ಥಳವಾಗಿದೆ.
ಮನೆಯು ನಮ್ಮ ಜೀವಮಾನದಲ್ಲಿ ನಾವು ಹೂಡಿಕೆ ಮಾಡುವ ಅತ್ಯಂತ ಪ್ರಮುಖ ಸ್ವತ್ತುಗಳಲ್ಲಿ ಒಂದಾಗಿದೆ. ದೇಶಾದ್ಯಂತದ ಹೆಚ್ಚಿನ ನಗರ ಕೇಂದ್ರಗಳಲ್ಲಿ ಹೆಚ್ಚಿನ ರಿಯಲ್ ಎಸ್ಟೇಟ್ ದರಗಳನ್ನು ನೀಡಬೇಕಾಗಿರುವುದರಿಂದ, ಮನೆ ಖರೀದಿಯು ತುಂಬಾ ಬಂಡವಾಳ ಬೇಡುತ್ತದೆ. ಹಣಕಾಸು ಸಂಸ್ಥೆಯಿಂದ ಅನುಮೋದಿತ ಲೋನ್ ಮೊತ್ತವು ಆ ಕನಸಿನ ಮನೆಯ ಬೆಲೆಗಿಂತ ಕಡಿಮೆಯಿರುವ ಪರಿಸ್ಥಿತಿಯನ್ನು ನಮ್ಮಲ್ಲಿ ಕೆಲವರು ಎದುರಿಸಿರಬಹುದು.
ಆದ್ದರಿಂದ, ಒಬ್ಬ ವ್ಯಕ್ತಿಯು ದೊಡ್ಡ ಮೊತ್ತದ ಹೋಮ್ ಲೋನ್ ಹೇಗೆ ಪಡೆದುಕೊಳ್ಳಬಹುದು? ಪರಿಹಾರ ಸರಳವಾಗಿದೆ. ಸಹ-ಅರ್ಜಿದಾರರೊಂದಿಗೆ ಜಂಟಿಯಾಗಿ ಲೋನ್‌ಗೆ ಅಪ್ಲೈ ಮಾಡಿ. ಇದರೊಂದಿಗೆ, ಆದಾಯವನ್ನು ಒಟ್ಟುಗೂಡಿಸಿ, ಒಟ್ಟು ಆದಾಯವನ್ನು ಪರಿಗಣನೆಗೆ ಹೆಚ್ಚಿಸುವ ಮೂಲಕ ಮತ್ತು ಮರುಪಾವತಿಯ ಸಾಮರ್ಥ್ಯವು ಹೆಚ್ಚಾಗುವುದರಿಂದ ನೀವು ದೊಡ್ಡ ಮೊತ್ತದ ಲೋನ್ ಪಡೆಯುವ ನಿಮ್ಮ ಅವಕಾಶವನ್ನು ಗಣನೀಯವಾಗಿ ಹೆಚ್ಚಿಸಬಹುದು.
ಆದರೆ ನೆನಪಿಡಿ, ಹೋಮ್ ಲೋನ್‌ಗೆ ಎಲ್ಲಾ ಸಹ-ಮಾಲೀಕರು ಕೂಡ ಸಹ-ಅರ್ಜಿದಾರರಾಗಿರಬೇಕು, ಎಲ್ಲಾ ಸಹ-ಅರ್ಜಿದಾರರು ಸಹ-ಮಾಲೀಕರಾಗಿರಬೇಕಾಗಿಲ್ಲ. ಇದಲ್ಲದೆ, ಸುಗಮ ಟ್ರಾನ್ಸಾಕ್ಷನ್‌ಗಾಗಿ, ನಿಮ್ಮ ಸಹ-ಅರ್ಜಿದಾರರು ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಿ, ಏಕೆಂದರೆ ಒಂದು ಅರ್ಜಿದಾರರ ಕಡಿಮೆ ಸ್ಕೋರ್ ಕೂಡ ಸಂಯೋಜಿತ ಕ್ರೆಡಿಟ್ ಸ್ಕೋರ್ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಯಾವುದೇ ದುರದೃಷ್ಟಕರ ಘಟನೆ ಅಥವಾ ಯಾವುದೇ ಅರ್ಜಿದಾರರ ಹಠಾತ್ ಮರಣದ ಸಂದರ್ಭದಲ್ಲಿ ಹಣಕಾಸಿನ ಹೊರೆಯನ್ನು ಕಡಿಮೆ ಮಾಡಲು ಸಹ-ಅರ್ಜಿದಾರರು ಪ್ರತ್ಯೇಕ ಇನ್ಶೂರೆನ್ಸ್ ಹೊಂದುವಂತೆಯೂ ಕೂಡ ಸಲಹೆ ನೀಡಲಾಗುತ್ತದೆ.
ಈಗ ಹೋಮ್ ಲೋನ್‌ಗಳಿಗೆ ನಿರೀಕ್ಷಿತ ಸಹ-ಅರ್ಜಿದಾರರು ಯಾರಾಗಬಹುದು ಎಂಬ ಸಂಬಂಧಿತ ಪ್ರಶ್ನೆ ಉದ್ಭವಿಸುತ್ತದೆ. ಭಾರತೀಯ ಸನ್ನಿವೇಶದಲ್ಲಿ, ವಿವಾಹಿತ ದಂಪತಿಗಳು, ತಂದೆ ಮತ್ತು ಮಗ (ಅಲ್ಲಿ ಹಲವು ಉತ್ತರಾಧಿಕಾರಿಗಳ ಸಂದರ್ಭದಲ್ಲಿ ಮಗ ಪ್ರಾಥಮಿಕ ಮಾಲೀಕನಾಗಿದ್ದರೆ) ಅಥವಾ ತಂದೆ ಮತ್ತು ಅವಿವಾಹಿತ ಮಗಳು (ಮಗಳು ಪ್ರಾಥಮಿಕ ಮಾಲೀಕರಾಗಿದ್ದರೆ), ಸಹೋದರರು (ಸಹ-ಮಾಲೀಕತ್ವದ ಆಸ್ತಿಯ ಸಂದರ್ಭದಲ್ಲಿ) ಮತ್ತು ಕಂಪನಿಯೊಂದಿಗೆ ಉದ್ಯಮಿಯು ಸಹ-ಅರ್ಜಿದಾರರಾಗಬಹುದು.
ಜಂಟಿ ಹೋಮ್ ಲೋನ್‌ನಲ್ಲಿ ಇರುವ ಅನೇಕ ಪ್ರಯೋಜನಗಳು ಹೀಗಿವೆ:
ಓದಲೇಬೇಕಾದ ಜಂಟಿ ಹೋಮ್ ಲೋನ್‌ನ 6 ಪ್ರಯೋಜನಗಳು
ಲೋನ್ ಅರ್ಹತೆಯಲ್ಲಿ ಹೆಚ್ಚಳ:
ಆದಾಯದ ಆಧಾರದ ಮೇಲೆ ಅರ್ಜಿದಾರರ ಮರುಪಾವತಿ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಿದ ನಂತರ ಲೋನನ್ನು ಮಂಜೂರು ಮಾಡಲಾಗುತ್ತದೆ. ಸಹ-ಅರ್ಜಿದಾರರ ಆದಾಯವನ್ನು ಸೇರಿಸುವ ಮೂಲಕ, ಒಬ್ಬ ವ್ಯಕ್ತಿಯು ದೊಡ್ಡ ಮೊತ್ತದ ಲೋನನ್ನು ಪಡೆಯಬಹುದು.
ಇದರ ಬಗ್ಗೆ ತಿಳಿಯಿರಿ: ನಿಮ್ಮ ಹೋಮ್ ಲೋನ್ ಅರ್ಹತೆಯನ್ನು ಸುಧಾರಿಸುವುದು ಹೇಗೆ
ದೊಡ್ಡ ಮನೆಯನ್ನು ಪಡೆಯಿರಿ:
ಅರ್ಹತೆಯು ಗಮನಾರ್ಹವಾಗಿ ಹೆಚ್ಚುತ್ತಿರುವುದರಿಂದ, ಕನಸಿನ ಮನೆಯನ್ನು ಖರೀದಿಸುವ ಸಾಧ್ಯತೆಗಳು ವಾಸ್ತವಕ್ಕೆ ಹತ್ತಿರವಾಗಬಹುದು.
ಹಂಚಿಕೊಂಡ ಜವಾಬ್ದಾರಿ:
ನೀವು ನಿಮ್ಮ ಹೋಮ್ ಲೋನ್‌ಗೆ ಸಹ-ಅರ್ಜಿದಾರರನ್ನು ಸೇರಿಸಿದಾಗ, ಹೋಮ್ ಲೋನ್ ಮರು ಪಾವತಿಸುವ ಜವಾಬ್ದಾರಿಯನ್ನು ನೀವು ಹಂಚಿಕೊಳ್ಳುತ್ತೀರಿ. ಇದು ಮಾಲೀಕತ್ವದ ಹಂಚಿಕೆಯ ಅರ್ಥವನ್ನು ಬೆಳೆಸಲು ಸಹಾಯ ಮಾಡುತ್ತದೆ ಮತ್ತು ವ್ಯಕ್ತಿಯ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡುತ್ತದೆ.
ತೆರಿಗೆಯ ಪ್ರಯೋಜನಗಳು:
ನಿಮ್ಮ ಸಹ-ಅರ್ಜಿದಾರರು ಮತ್ತು ನೀವು ಸೆಕ್ಷನ್ 80 ಸಿ ಅಡಿಯಲ್ಲಿ ಹೋಮ್ ಲೋನ್ ಅಸಲು ಮೊತ್ತದ ಮರುಪಾವತಿಯ ಮೇಲೆ ತಲಾ ₹1.5 ಲಕ್ಷದವರೆಗೆ ಮತ್ತು ಆದಾಯ ತೆರಿಗೆ ನಿಯಮಗಳ ಸೆಕ್ಷನ್ 24 ರ ಅಡಿಯಲ್ಲಿ ತಲಾ ₹2 ಲಕ್ಷದವರೆಗೆ ಆದಾಯ ತೆರಿಗೆ ರಿಯಾಯಿತಿಗೆ ಅರ್ಹರಾಗಿದ್ದೀರಿ. ಹೋಮ್ ಲೋನ್ ಬಡ್ಡಿ ಮೇಲಿನ ಕಡಿತ ಮತ್ತು ಅಸಲು ಮರುಪಾವತಿ ಎರಡರ ತೆರಿಗೆ ಪ್ರಯೋಜನವನ್ನು ಆಸ್ತಿಯ ನಿರ್ಮಾಣ ಪೂರ್ಣಗೊಂಡ ನಂತರ ಮಾತ್ರ ಕ್ಲೈಮ್ ಮಾಡಬಹುದು ಎಂಬುದನ್ನು ಗಮನಿಸುವುದು ಮುಖ್ಯ. ಹೆಚ್ಚು ವಿವರವಾದ ಮಾಹಿತಿ ಮತ್ತು ಪ್ರಯೋಜನಗಳಿಗಾಗಿ ನಿಮ್ಮ ತೆರಿಗೆ ಸಲಹೆಗಾರರು ಅಥವಾ ಹಣಕಾಸು ಸಲಹೆಗಾರರನ್ನು ಸಂಪರ್ಕಿಸುವುದು ಸೂಕ್ತ.
ಮಾಲೀಕತ್ವದ ವರ್ಗಾವಣೆ:
ಮೇಲಿನ ಪ್ರಯೋಜನಗಳನ್ನು ಹೊರತುಪಡಿಸಿ, ಜಂಟಿ ಹೋಮ್ ಲೋನ್‌ಗೆ ಕಾರಣವಾಗುವ ಜಂಟಿ ಆಸ್ತಿ ಮಾಲೀಕತ್ವವು ಯಾವುದೇ ಅನಿರೀಕ್ಷಿತ ಸಂದರ್ಭದಲ್ಲಿ ಇತರ ಅರ್ಜಿದಾರರ ಪರವಾಗಿ (ಸಹ-ಮಾಲೀಕರಾಗಿರುವವರು) ಮಾಲೀಕತ್ವವನ್ನು ವರ್ಗಾಯಿಸುವ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ.
ಮಹಿಳಾ ಸಹ-ಅರ್ಜಿದಾರರೊಂದಿಗೆ ಸ್ಟ್ಯಾಂಪ್ ಡ್ಯೂಟಿ ಶುಲ್ಕಗಳಲ್ಲಿ ಪ್ರಯೋಜನ:
ನಿಮ್ಮ ಸಹ-ಅರ್ಜಿದಾರರು ಮಹಿಳೆಯರಾಗಿದ್ದರೆ ಕೆಲವು ರಾಜ್ಯಗಳು ಸ್ಟ್ಯಾಂಪ್ ಡ್ಯೂಟಿ ಶುಲ್ಕಗಳಲ್ಲಿ ಕಡಿತವನ್ನು ನೀಡುತ್ತವೆ ಎಂಬುದು ಅನೇಕರಿಗೆ ತಿಳಿದಿರುವುದಿಲ್ಲ. ಉದಾಹರಣೆಗೆ, ದೆಹಲಿಯಲ್ಲಿ, ಅರ್ಜಿದಾರರು ಮಹಿಳೆಯಾಗಿದ್ದರೆ 4%, ವಿವಾಹಿತ ದಂಪತಿಗಳಿಗೆ 5% ಮತ್ತು ಒಬ್ಬ ಪುರುಷ ಅರ್ಜಿದಾರರಿಗೆ 6% ಸ್ಟ್ಯಾಂಪ್ ಡ್ಯೂಟಿ ಶುಲ್ಕ ವಿಧಿಸಲಾಗುತ್ತದೆ.
ಓದಲೇಬೇಕಾದವು: ನಿಮ್ಮ ಹೋಮ್ ಲೋನ್ ಅರ್ಹತೆಯನ್ನು ಪರಿಶೀಲಿಸಿ
ಶಾಜಿ ವರ್ಗೀಸ್, ಬಿಸಿನೆಸ್ ಹೆಡ್ ಆಂಡ್ ಜನರಲ್ ಮ್ಯಾನೇಜರ್, ಪಿಎನ್‌ಬಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್