ನಾವು ಸಾಮಾನ್ಯವಾಗಿ ಮಹತ್ವದ ಯಾವುದಾದರೂ ಖರೀದಿ ಅಥವಾ ಹೂಡಿಕೆಯ ವಿಷಯದಲ್ಲಿ ಪರಿಪೂರ್ಣ ಸಮಯ ಮತ್ತು ಪರಿಸ್ಥಿತಿಗಾಗಿ ಕಾಯುತ್ತೇವೆ. ಎಚ್ಚರಿಕೆಯಿಂದ ಯೋಜಿಸುವುದು ಮುಖವಾಗಿದೆ. ಆದರೆ ಕೆಲವೊಮ್ಮೆ ನಾವು ಸರಿಯಾದ ಸಮಯಕ್ಕಾಗಿ ಬಹಳ ಸಮಯ ಕಾಯುತ್ತೇವೆ ಮತ್ತು ಆ ಪ್ರಕ್ರಿಯೆಯಲ್ಲಿ ಒಳ್ಳೆಯ ಅವಕಾಶಗಳನ್ನು ತಪ್ಪಿಸಿಕೊಳ್ಳುತ್ತೇವೆ. ನಿಮಗಾಗಿ ಮನೆಯನ್ನು ಖರೀದಿಸುವುದು ಅಥವಾ ಹೂಡಿಕೆ ಮಾಡುವುದು ನಿಮ್ಮ ಪ್ರಸ್ತುತ ಮತ್ತು ಭವಿಷ್ಯದ ಹಣಕಾಸಿನ ಪರಿಸ್ಥಿತಿ, ನಿಮ್ಮ ಅಸ್ತಿತ್ವದಲ್ಲಿರುವ ಜವಾಬ್ದಾರಿಗಳು, ನಿಮ್ಮ ಅರ್ಹತೆ, ನಿಮ್ಮ ಅಸ್ತಿತ್ವದಲ್ಲಿರುವ ಮಾಸಿಕ ಬಾಡಿಗೆ ಇತ್ಯಾದಿಗಳ ವಿಷಯಗಳನ್ನು ಪರಿಗಣಿಸಿ ಶ್ರದ್ಧೆ ಮತ್ತು ಎಚ್ಚರಿಕೆಯ ಯೋಜನೆಯನ್ನು ಸಹ ಬಯಸುತ್ತದೆ.
ಒಬ್ಬ ವ್ಯಕ್ತಿಗೆ, ಹೆಚ್ಚಿನ ಸಂದರ್ಭಗಳಲ್ಲಿ ಮನೆಯಂಥ ದೊಡ್ಡ ಹೂಡಿಕೆಗಾಗಿ ಹೋಮ್ ಲೋನ್ ಪಡೆಯುವುದು ಅಗತ್ಯವಾಗಿರುತ್ತದೆ. ಅದೃಷ್ಟವಶಾತ್, ಹೋಮ್ ಲೋನ್ ಸಂಸ್ಥೆಗಳು ಈಗ 5 ಅಥವಾ 10 ವರ್ಷಗಳ ಹಿಂದೆ ನೀಡುತ್ತಿದ್ದ ಹೋಮ್ ಲೋನ್ ವೆಚ್ಚದ ಶೇಕಡಾವಾರಿಗಿಂತ ಹೆಚ್ಚು ಹಣಕಾಸು ಒದಗಿಸುತ್ತವೆ. ನಮ್ಮ ದೇಶದ ಹೆಚ್ಚಿನ ನಿವ್ವಳ ಆದಾಯ ಮತ್ತು ಉತ್ತಮ ಉದ್ಯೋಗ ಸನ್ನಿವೇಶದೊಂದಿಗೆ, ಮನೆ ಖರೀದಿದಾರರು ಈಗ ಸಣ್ಣ ವಯಸ್ಸಿನಲ್ಲಿಯೇ ತಮ್ಮ ಕನಸಿನ ಮನೆಯಲ್ಲಿ ಹೂಡಿಕೆ ಮಾಡಲು ಸಮರ್ಥರಾಗಿದ್ದಾರೆ. ಹಣಕಾಸಿನ ನಿಯಮಗಳು ಈಗ ಮನೆ ಮೌಲ್ಯದ 80-90% ಶ್ರೇಣಿಯಲ್ಲಿವೆ ಮತ್ತು ಇದು ಮನೆ ಖರೀದಿಸಲು ಹಣ ಸಂಗ್ರಹಿಸಲು ತೆಗೆದುಕೊಳ್ಳುವ ಸಮಯವನ್ನು ಕಡಿಮೆ ಮಾಡುತ್ತದೆ ಮತ್ತು ನಮ್ಮ ಹೋಮ್ ಲೋನ್ ಖರೀದಿದಾರರಿಗೆ ನಾವು ನೀಡುವ ಸಲಹೆಗೆ ಆಧಾರವಾಗಿದೆ.
ಓದಲೇಬೇಕಾದವು: ನಿಮ್ಮ ಹೋಮ್ ಲೋನ್ ಬಡ್ಡಿ ಹೊರೆಯನ್ನು ಕಡಿಮೆ ಮಾಡುವುದು ಹೇಗೆ (4 ಸರಳ ಸಲಹೆಗಳು)
ಮನೆ ಖರೀದಿಸಲು ನೀವು ದೊಡ್ಡ ಸಂಪತ್ತನ್ನು ಹೊಂದಿರಬೇಕಿಲ್ಲ:
ನೀವು ಮನೆ ಖರೀದಿಸಲು ಉಳಿತಾಯ ಮಾಡುತ್ತಿದ್ದರೆ, ನಿಮ್ಮ ಯೋಚನೆಯಲ್ಲಿ ನೀವು ಒಂದು ಮೂಲಭೂತ ಸಮಸ್ಯೆಯನ್ನು ಗುರುತಿಸಿದ್ದೀರಾ?? ನೀವು ನಿಜವಾಗಿಯೂ ಮನೆ ಖರೀದಿಸುವ ಸಮಯದಲ್ಲಿ, ರಿಯಲ್ ಎಸ್ಟೇಟ್ ಬೆಲೆಗಳು ಎರಡು ವರ್ಷಗಳಲ್ಲಿ ಹೆಚ್ಚಾಗಿರುತ್ತವೆ, ಆದ್ದರಿಂದ ಕಾಯುವುದು ನಿಮ್ಮ ಉದ್ದೇಶವನ್ನು ಈಡೇರಿಸುವುದಿಲ್ಲ. ಸಾಲ ನೀಡುವ ಸಂಸ್ಥೆಗಳು ಈಗ ಮನೆ ವೆಚ್ಚದ 90%* ವರೆಗೆ ಹಣಕಾಸು ಒದಗಿಸುವುದರಿಂದ, ಅದರ ಪ್ರಯೋಜನ ಪಡೆಯುವುದು ಮತ್ತು ಈಗಲೇ ಮನೆ ಖರೀದಿಸುವುದು ವಿವೇಕಯುತವಾಗಿದೆ.
ನೀವು ಯುವಕರಾಗಿದ್ದಾಗಲೇ ನಿಮ್ಮ ಕನಸಿನ ಮನೆಯನ್ನು ಖರೀದಿಸಿ:
ನಿಮ್ಮ ನಿವ್ವಳ ಆದಾಯವು ಕಡಿಮೆ ಇರಬಹುದು, ಆದರೆ ನೀವು ಸಣ್ಣ ವಯಸ್ಸಿನಲ್ಲಿಯೇ ನಿಮ್ಮ ಸ್ವಂತ ಮನೆಯಲ್ಲಿ ಹೂಡಿಕೆ ಮಾಡಿದರೆ, ನೀವು ಬಹಳ ಬೇಗ ಮರುಪಾವತಿಸಲು ಸಾಧ್ಯವಾಗುತ್ತದೆ. ನೀವು ನಿಮ್ಮ ಸ್ವಂತ ಮನೆಯನ್ನು ಹೊಂದಿದ್ದೀರಿ ಮತ್ತು ನಿಮ್ಮ ಆರಂಭಿಕ ವರ್ಷಗಳಲ್ಲಿ ನೀವು ಅದರ ಒಂದು ಭಾಗವನ್ನು ಮರುಪಾವತಿಸಿದ್ದೀರಿ ಎಂಬುದು ನಿಮಗೆ ಇತರ ಅವಕಾಶಗಳಲ್ಲಿ ಹೂಡಿಕೆ ಮಾಡಲು ಅನುವು ಮಾಡಿಕೊಡುತ್ತದೆ. ನೀವು ಹೆಚ್ಚು ಸಮಯ ಕಾಯುತ್ತಿದ್ದರೆ, ನಿಮ್ಮ ಆದ್ಯತೆಗಳು ಬದಲಾಗುತ್ತವೆ ಮತ್ತು ಮನೆ ಖರೀದಿಸುವುದು ಸ್ವಲ್ಪ ಕಷ್ಟವಾಗುತ್ತದೆ. ಅಲ್ಲದೆ, ಸಣ್ಣ ವಯಸ್ಸಿನಲ್ಲಿ ಪ್ರತಿ ತಿಂಗಳ ಇಎಂಐ ಹೊರೆಯನ್ನು ಕಡಿಮೆ ಮಾಡುವ ದೊಡ್ಡ ಕಾಲಾವಧಿಯನ್ನು ಆಯ್ಕೆ ಮಾಡುವ ಆಯ್ಕೆಯನ್ನು ನೀವು ಪಡೆಯುತ್ತೀರಿ. ನೀವು ಹೋಮ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಿ ವಿವಿಧ ಕಾಲಾವಧಿಗಳಿಗೆ ಇಎಂಐನಲ್ಲಿ ಆಗುವ ವ್ಯತ್ಯಾಸವನ್ನು ಲೆಕ್ಕ ಹಾಕಬಹುದು
ನಿಮ್ಮ ಬಜೆಟ್‌ಗೆ ಸೂಕ್ತವಾದ ಮನೆಯನ್ನು ಖರೀದಿಸಿ:
ಒಂದು ಬಾರಿಗೆ ಒಂದು ಹೆಜ್ಜೆ ಇಡಿ. ಬಜೆಟ್ ಸಮಸ್ಯೆಯಾಗಿದ್ದರೆ ಸರಣಿ ಹಂತಗಳಲ್ಲಿ ನಿಮ್ಮ ಕನಸಿನ ಮನೆಯ ಮೇಲೆ ಕೆಲಸ ಮಾಡಿ. ನೀವು ಇಷ್ಟಪಡುವ ಮನೆಯು ನಿಮ್ಮ ಬಜೆಟ್‌ನಿಂದ ಹೊರಗಿರಬಹುದು. ನೀವು ಬಯಸುವ ಕನಸಿನ ಮನೆಯನ್ನು ಖರೀದಿಸಲು ಪ್ರಸ್ತುತ ಸಂಪನ್ಮೂಲಗಳನ್ನು ಹೊಂದಿಲ್ಲದಿದ್ದರೆ ಕೈಗೆಟಕುವ ದರದ ಮೊದಲ ಮನೆ ಖರೀದಿಸುವುದು ಉತ್ತಮ. ಕೆಲವು ವರ್ಷಗಳ ನಂತರ, ನಿಮ್ಮ ಅರ್ಹತೆಯು ಹೆಚ್ಚಾಗುವುದರಿಂದ ನೀವು ದೊಡ್ಡ ಆಸ್ತಿಯನ್ನು ಖರೀದಿಸಬಹುದು. ಮನೆ ಖರೀದಿಸಲು ನೀವು ಎಷ್ಟು ಲೋನ್ ಪಡೆಯಬಹುದು ಎಂಬುದನ್ನು ತಿಳಿದುಕೊಳ್ಳಲು ಹೌಸ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಬಳಸಿ.
ಓದಲೇಬೇಕಾದವು: ಹೋಮ್ ಲೋನ್‌ಗೆ ಡೌನ್ ಪೇಮೆಂಟ್ ಎಂದರೇನು?
ನಿರ್ಮಾಣದಲ್ಲಿರುವ ಮನೆಗಳಲ್ಲಿ ಹೂಡಿಕೆ ಮಾಡಿ:
ಅನೇಕ ಹೌಸಿಂಗ್ ಫೈನಾನ್ಸ್ ಕಂಪನಿಗಳು ಅನುಮೋದಿತ ನಿರ್ಮಾಣ ಹಂತದಲ್ಲಿರುವ ಆಸ್ತಿಗಳಿಗೆ ಹೋಮ್ ಲೋನ್‌ಗಳನ್ನು ಒದಗಿಸಲು ಸೂಕ್ತವಾಗಿವೆ. ಸಾಮಾನ್ಯವಾಗಿ ನಿರ್ಮಾಣ ಹಂತದಲ್ಲಿರುವ ಆಸ್ತಿಗಳು ಕಡಿಮೆ ವೆಚ್ಚದಲ್ಲಿ ಸಿಗುತ್ತವೆ ಮತ್ತು ಅಂತಹ ಆಸ್ತಿಗಳು ನಿಮಗೆ ಹಣಕಾಸಿನ ವ್ಯವಸ್ಥೆ ಮಾಡಲು ಸಾಕಷ್ಟು ಸಮಯವನ್ನು ನೀಡುತ್ತವೆ. ಯಾಕೆಂದರೆ ನೀವು ನಿರ್ಮಾಣ ಹಂತಕ್ಕೆ ಅನುಗುಣವಾಗಿ ಕಂತುಗಳಲ್ಲಿ ಹಣ ಪಾವತಿಸಬೇಕಾಗುತ್ತದೆ.