ಸಾರಾಂಶ: ಹೋಮ್ ಲೋನ್‌ನ ಭಾಗಶಃ-ಪಾವತಿ ಎಂದರೆ, ಲೋನ್‌ನ ಅವಧಿ ಮುಗಿಯುವ ಮೊದಲು ಅದರ ಭಾಗವನ್ನು ಮರುಪಾವತಿಸುವುದು ಎಂದರ್ಥ. ಅದರ ಬಳಕೆಗಳು ಮತ್ತು ಪ್ರಯೋಜನಗಳನ್ನು ತಿಳಿದುಕೊಳ್ಳಲು ಓದಿ.
ಹೋಮ್ ಲೋನ್ ಮೇಲಿನ ಭಾಗಶಃ-ಪಾವತಿ ಎಂದರೆ ಅದರ ಕಾಲಾವಧಿ ಪೂರ್ಣಗೊಳ್ಳುವ ಮೊದಲು ಹೋಮ್ ಲೋನ್ ಮೊತ್ತದ ಗಣನೀಯ ಭಾಗವನ್ನು ಮರಳಿ ಪಾವತಿಸುವುದಾಗಿದೆ. ಉದಾಹರಣೆಗೆ, ನೀವು ₹20 ಲಕ್ಷಕ್ಕೆ ಹೋಮ್ ಲೋನ್ ಪಡೆದಿದ್ದೀರಿ ಮತ್ತು ಅದನ್ನು 30 ವರ್ಷಗಳಲ್ಲಿ (ಕಾಲಾವಧಿ) ಮರುಪಾವತಿಸಬೇಕಿದೆ. ನೀವು ₹1 ಲಕ್ಷದ ಮುಂಗಡ ಮೊತ್ತವನ್ನು ಪಾವತಿಸುತ್ತೀರಿ ಮತ್ತು ನಂತರ ನಿಮ್ಮ ಅವಧಿಯ ಕೊನೆಯವರೆಗೆ ಲೋನ್ ಒಪ್ಪಂದದ ಪ್ರಕಾರ ನಿಯಮಿತ ಪಾವತಿಗಳನ್ನು ಮಾಡುತ್ತೀರಿ. ಆದಾಗ್ಯೂ, ನೀವು ಕೆಲವು ಅನಿರೀಕ್ಷಿತ ಲಾಭಗಳನ್ನು ಗಳಿಸುತ್ತೀರಿ ಮತ್ತು ಅಸಲು ಮೊತ್ತದ ದೊಡ್ಡ ಭಾಗವನ್ನು ಮರಳಿ ಪಾವತಿಸುವ ಮೂಲಕ ನಿಮ್ಮ ಹೊಣೆಗಾರಿಕೆಯನ್ನು ಮುಂಚಿತವಾಗಿ ಕಡಿಮೆ ಮಾಡಲು ಬಯಸುತ್ತೀರಿ. ನೀವು ಹೋಮ್ ಲೋನ್‌ನ ಭಾಗಶಃ ಪಾವತಿ ಅಥವಾ ಹೋಮ್ ಲೋನ್‌ನ ಭಾಗಶಃ ಮರುಪಾವತಿಯನ್ನು ಮಾಡಬಹುದು. ಇದು ನಿಮ್ಮ ಒಟ್ಟು ಬಡ್ಡಿಯ ಹೊರೆಯನ್ನು ಕಡಿಮೆ ಮಾಡುತ್ತದೆ, ಮತ್ತು ನೀವು ನಿಮ್ಮ ಇಎಂಐಗಳನ್ನು (ಸಮನಾದ ಮಾಸಿಕ ಕಂತುಗಳು) ಕಡಿಮೆ ಮಾಡಬಹುದು ಅಥವಾ ಕಡಿಮೆ ಮರುಪಾವತಿ ಅವಧಿಯನ್ನು ಕೂಡ ಹೊಂದಬಹುದು.
ಸಾಲಗಾರರು ಹಲವಾರು ರೀತಿಯಲ್ಲಿ ಹೌಸಿಂಗ್ ಲೋನ್ ಅನ್ನು ಭಾಗಶಃ ಮರುಪಾವತಿ ಮಾಡಬಹುದು. ಹೋಮ್ ಲೋನ್ ಭಾಗಶಃ ಪಾವತಿಗಾಗಿ ಯಾವ ಆಯ್ಕೆಗಳು ಲಭ್ಯವಿವೆ ಎಂಬುದನ್ನು ತಿಳಿದುಕೊಳ್ಳಲು ನಿಮ್ಮ ಆದ್ಯತೆಯ ಹಣಕಾಸು ಸಂಸ್ಥೆಯನ್ನು ಸಂಪರ್ಕಿಸಿ.
ಭಾಗಶಃ ಪಾವತಿ ಮತ್ತು ಮುಂಗಡ ಪಾವತಿ ಒಂದೇ ಆಗಿದೆಯೇ?
ಹೋಮ್ ಲೋನ್‌ನ ಭಾಗಶಃ ಪಾವತಿ ಎಂದರೆ ನೀವು ನಿಮ್ಮ ಹೋಮ್ ಲೋನ್ನ ಸ್ವಲ್ಪ ಭಾಗವನ್ನು ಮರಳಿ ಪಾವತಿಸುವುದು, ಮತ್ತು ನೀವು ನಿಮ್ಮ ಲೋನ್ ಅನ್ನು ಸಂಪೂರ್ಣವಾಗಿ ಕ್ಲಿಯರ್ ಮಾಡುವುದಕ್ಕೆ ಮುಂಗಡ ಪಾವತಿ ಎನ್ನುತ್ತಾರೆ.
ಹೋಮ್ ಲೋನ್‌ನ ಭಾಗಶಃ ಪಾವತಿಗಳ 4 ಪ್ರಯೋಜನಗಳು
1. ಬಡ್ಡಿ ಹೊರೆಯನ್ನು ಕಡಿಮೆ ಮಾಡುತ್ತದೆ
ಸಾಲದಾತರು ವಿಧಿಸುವ ಹೋಮ್ ಲೋನ್ ಬಡ್ಡಿ ದರಗಳು ಮತ್ತು ಮೂಲ ದರದ ಆಧಾರದ ಮೇಲೆ ಪಾವತಿಸಬೇಕಾದ ಮಾಸಿಕ ಮೊತ್ತವನ್ನು (ಇಎಂಐ) ಲೆಕ್ಕ ಹಾಕಲಾಗುತ್ತದೆ. ನೀವು ಪಾವತಿಸುವ ಇಎಂಐ ಎರಡು ಅಂಶಗಳನ್ನು ಒಳಗೊಂಡಿದೆ: ಅಸಲು ಮೊತ್ತ ಮತ್ತು ಬಡ್ಡಿ. ನೀವು ಹೋಮ್ ಲೋನ್ ಮೇಲೆ ಭಾಗಶಃ ಪಾವತಿ ಮಾಡಿದಾಗ, ಮೊತ್ತವು ಅಸಲು ಮೊತ್ತಕ್ಕೆ ಹೋಗುತ್ತದೆ. ಇದು ಬಡ್ಡಿಯ ಹೊರೆಯನ್ನು ಮತ್ತು ಆ ಮೂಲಕ ನೀವು ಪಾವತಿಸುವ ಇಎಂಐಗಳನ್ನು ಕಡಿಮೆ ಮಾಡುತ್ತದೆ.
ಓದಲೇಬೇಕಾದವು: ನಿಮ್ಮ ಹೋಮ್ ಲೋನ್ ಬಡ್ಡಿ ಹೊರೆಯನ್ನು ಕಡಿಮೆ ಮಾಡುವುದು ಹೇಗೆ (4 ಸರಳ ಸಲಹೆಗಳು)
2. ನೀವು ನಿಮ್ಮ ಹೋಮ್ ಲೋನ್‌ನ ಅವಧಿಯನ್ನು ಕಡಿಮೆ ಮಾಡಬಹುದು
ಜನರು ತಮ್ಮ ಹೋಮ್ ಲೋನ್‌ಗಳನ್ನು ಮುಂಚಿತವಾಗಿ ಮುಚ್ಚಲು, ಸಾಧ್ಯವಾದಾಗಲೆಲ್ಲಾ ಮುಂಗಡ ಪಾವತಿಗಳನ್ನು ಮಾಡುವುದನ್ನು ಪರಿಗಣಿಸುತ್ತಾರೆ. ನೀವು ಭಾಗಶಃ-ಪಾವತಿ ಮಾಡಿದಾಗ, ಹೋಮ್ ಲೋನ್ ಅನ್ನು ಶೀಘ್ರದಲ್ಲಿ ಪಾವತಿಸಲು ನೀವು ಅದೇ ಕಾಲಾವಧಿಯನ್ನು ನಿರ್ವಹಿಸಲು ಮತ್ತು ನಿಮ್ಮ ಇಎಂಐಗಳನ್ನು ಕಡಿಮೆ ಮಾಡಲು ಆಯ್ಕೆ ಮಾಡಬಹುದು ಅಥವಾ ಅದೇ ಇಎಂಐ ನಿರ್ವಹಿಸಲು ಮತ್ತು ನಿಮ್ಮ ಲೋನ್ ಕಾಲಾವಧಿಯನ್ನು ಕಡಿಮೆ ಮಾಡಲು ಆಯ್ಕೆ ಮಾಡಬಹುದು.
3. ಇದು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಸುಧಾರಿಸಬಹುದು
ನಿಮ್ಮ ಹೋಮ್ ಲೋನ್ ಮುಂಗಡ ಪಾವತಿ ಮಾಡುವುದು ನಿಮ್ಮ ಕ್ರೆಡಿಟ್ ಹೊರೆಯನ್ನು ಕಡಿಮೆ ಮಾಡುತ್ತದೆ ಮತ್ತು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.
4. ಸಾಲ ಮುಕ್ತರಾಗಿ
ನಿಮ್ಮ ಬಳಿ ಹೆಚ್ಚುವರಿ ಹಣವಿದ್ದಾಗ ಪೂರ್ವಪಾವತಿ ಮಾಡುವುದು ಸೂಕ್ತವಾಗಿದೆ. ಈ ರೀತಿಯಲ್ಲಿ, ನೀವು ಬಡ್ಡಿ ದರ ಮತ್ತು ಕಾಲಾವಧಿಯನ್ನು ಕಡಿಮೆ ಮಾಡಬಹುದು ಮತ್ತು ಶೀಘ್ರದಲ್ಲೇ ಸಾಲ-ಮುಕ್ತರಾಗಬಹುದು.
ಗರಿಷ್ಠ ಪ್ರಯೋಜನಗಳಿಗೆ ಮುಂಗಡ ಪಾವತಿಯನ್ನು ಯಾವಾಗ ಮಾಡಬೇಕು?
ಹೋಮ್ ಲೋನ್‌ನ ಆರಂಭಿಕ ಹಂತದಲ್ಲಿ, ನಿಮ್ಮ ಇಎಂಐಗಳ ಪ್ರಮುಖ ಅಂಶವು ಬಡ್ಡಿ ಪಾವತಿಗೆ ಸಂದಾಯವಾಗುತ್ತದೆ. ಅವಧಿ ಕಳೆದಂತೆ, ಈ ಪರಿಸ್ಥಿತಿಯು ಬದಲಾಗುತ್ತದೆ ಮತ್ತು ಇಎಂಐಗಳು ಅಸಲು ಮೊತ್ತಕ್ಕೆ ಹೋಗುತ್ತವೆ. ಆರಂಭಿಕ ಹಂತದಲ್ಲಿ ಮುಂಗಡ ಪಾವತಿ ಮಾಡುವುದು ಬಡ್ಡಿಯನ್ನು ಗಣನೀಯವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಹೆಚ್ಚು ಉಳಿತಾಯ ಮಾಡಲು ನಿಮಗೆ ಸಹಾಯ ಮಾಡುತ್ತದೆ.
ಓದಲೇಬೇಕಾದವು: ಹೋಮ್ ಲೋನ್ ಮುಂಗಡ ಪಾವತಿ ಮಾಡುವುದು ಉತ್ತಮ ಯೋಚನೆಯೇ?
ಮುಕ್ತಾಯ
ಹೋಮ್ ಲೋನ್ ಭಾಗಶಃ ಪಾವತಿಯು ಬಡ್ಡಿಯನ್ನು ಉಳಿಸಲು ಮತ್ತು ಕಾಲಾವಧಿಯನ್ನು ಕಡಿಮೆ ಮಾಡಲು ಅತ್ಯುತ್ತಮ ಮಾರ್ಗವಾಗಿದೆ. ಲೋನ್ ಫೋರ್‌ಕ್ಲೋಸ್ ಮಾಡುವುದು ಉತ್ತಮ ಯೋಚನೆ ಆಗದೇ ಇರಬಹುದು, ಯಾಕೆಂದರೆ ನಿಮ್ಮ ಹೋಮ್ ಲೋನ್ ಮರುಪಾವತಿಯ ಮೇಲೆ ವರ್ಷ ವರ್ಷವೂ ನೀವು ಆನಂದಿಸುವ ಸರ್ಕಾರಿ ತೆರಿಗೆ ಪ್ರಯೋಜನಗಳನ್ನು ನೀವು ಕಳೆದುಕೊಳ್ಳಬೇಕಾಗುತ್ತದೆ. ಆದ್ದರಿಂದ, ನಿರ್ಧಾರ ತೆಗೆದುಕೊಳ್ಳುವ ಮೊದಲು ಎಲ್ಲಾ ನಿಯಮ ಮತ್ತು ಷರತ್ತುಗಳನ್ನು ನೋಡಲು ಶಿಫಾರಸು ಮಾಡಲಾಗಿದೆ.