PNB Housing Finance Limited

ಎನ್ಎಸ್ಇ:

ಬಿಎಸ್ಇ:

ಕೊನೆಯ ಅಪ್ಡೇಟ್:

()
ಸರಾಸರಿ ರೇಟಿಂಗ್
ಹಂಚಿಕೊಳ್ಳಿ
ಕಾಪಿ ಮಾಡಿ

ಜಂಟಿ ಹೋಮ್ ಲೋನ್‌ಗಳು ಎಂದರೇನು? ಲೋನ್ ಅನುಮೋದನೆಗೆ ಅಗತ್ಯವಿರುವ ಅರ್ಹತೆ ಮತ್ತು ಡಾಕ್ಯುಮೆಂಟ್‌ಗಳು

give your alt text here

ಸಾರಾಂಶ: ಅನ್ಯಾಯದ ಬಿಲ್ಡರ್‌ಗಳ ವಂಚನೆಗಳಿಂದ ಮನೆ ಖರೀದಿಸುವವರ ಹಿತಾಸಕ್ತಿಯನ್ನು ರಕ್ಷಿಸುವ ಉದ್ದೇಶದಿಂದ ಮತ್ತು ರಿಯಲ್ ಎಸ್ಟೇಟ್ ಮಾರಾಟದಿಂದ ಉಂಟಾಗುವ ವಿವಾದಗಳನ್ನು ಸುಗಮವಾಗಿ ಪರಿಹರಿಸುವ ಉದ್ದೇಶದಿಂದ ಮಹಾರಾಷ್ಟ್ರ ಸರ್ಕಾರವು 2017 ರಲ್ಲಿ ಮಹಾರಾಷ್ಟ್ರ ರಿಯಲ್ ಎಸ್ಟೇಟ್ ನಿಯಂತ್ರಕ ಪ್ರಾಧಿಕಾರವನ್ನು ("ಮಹಾ ರೇರಾ ಅಥವಾ ಪ್ರಾಧಿಕಾರ") ಸ್ಥಾಪಿಸಿತು. ವಾಣಿಜ್ಯ ಮತ್ತು ವಸತಿ ಯೋಜನೆಗಳ ನೋಂದಣಿ ಮತ್ತು ಮಾರಾಟ, ವಿವಾದಗಳ ತ್ವರಿತ ಪರಿಹಾರ, ಯೋಜನೆಯ ಪ್ರಗತಿಯನ್ನು ಮೇಲ್ವಿಚಾರಣೆ ಮಾಡುವುದು ಮತ್ತು ಪ್ರಮೋಟರ್‌ಗಳ ಮೇಲೆ ವಿಧಿಸಲಾದ ಜವಾಬ್ದಾರಿಗಳ ಅಗತ್ಯ ಅನುಸರಣೆಯನ್ನು ಖಚಿತಪಡಿಸುವುದು ಸೇರಿದಂತೆ, ಆದರೆ ಅಷ್ಟಕ್ಕೇ ಸೀಮಿತವಾಗಿರದಂತೆ ರಿಯಲ್ ಎಸ್ಟೇಟ್ ಮಾರಾಟ ಟ್ರಾನ್ಸಾಕ್ಷನ್‌‌ಗಳನ್ನು ನಿಯಂತ್ರಿಸುವ ನಿಯಮಗಳನ್ನು ರೂಪಿಸುವುದು ಅದರ ಸ್ಥಾಪನೆಯ ಹಿಂದಿನ ಉದ್ದೇಶವಾಗಿದೆ.

ರಿಯಲ್ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆ, 2016 ರ ಅಧಿಸೂಚನೆಗೆ ಅನುಗುಣವಾಗಿ ಮಹಾರಾಷ್ಟ್ರ ಸರ್ಕಾರವು 2017 ರಲ್ಲಿ ಮಹಾರೇರಾವನ್ನು ಸ್ಥಾಪಿಸಿತು. ಸಾರ್ವಜನಿಕರ / ಮನೆ ಖರೀದಿದಾರರ ಆಸಕ್ತಿಯನ್ನು ರಕ್ಷಿಸುವುದು ಮತ್ತು ರಾಜ್ಯದ ರಿಯಲ್ ಎಸ್ಟೇಟ್ ವಲಯವನ್ನು ಉತ್ತೇಜಿಸುವುದು ಮತ್ತು ನಿಯಂತ್ರಿಸುವುದು ಇದರ ರಚನೆಯ ಮೂಲ ಉದ್ದೇಶವಾಗಿದೆ. ರಿಯಲ್ ಎಸ್ಟೇಟ್ ಟ್ರಾನ್ಸಾಕ್ಷನ್‌ನ ಪ್ರತಿಯೊಂದು ಹಂತದಲ್ಲೂ ಸಂಪೂರ್ಣ ಪಾರದರ್ಶಕತೆ ಇರುವುದನ್ನು ಖಚಿತಪಡಿಸಿಕೊಳ್ಳುವ ಮೂಲಕ ಖರೀದಿದಾರರಿಗೆ ಪ್ರಾಧಿಕಾರ ಪ್ರಯೋಜನಗಳನ್ನು ನೀಡುತ್ತದೆ ಮತ್ತು ಆಯಾ ವಾಣಿಜ್ಯ / ರಿಯಲ್ ಎಸ್ಟೇಟ್ ಯೋಜನೆಗಳ ವಿವರವಾದ ಮಾಹಿತಿಯನ್ನು ನೋಂದಾಯಿಸುವ ಮತ್ತು ಒದಗಿಸುವ ಮೂಲಕ ಪ್ರಮೋಟರ್‌ಗಳು / ಬಿಲ್ಡರ್‌ಗಳಿಗೆ ಸಹಾಯ ಮಾಡುತ್ತದೆ. ಇದು ಖರೀದಿದಾರರ ವಿಶ್ವಾಸವನ್ನು ಹೆಚ್ಚಿಸುತ್ತದೆ ಮತ್ತು ರಿಯಲ್ ಎಸ್ಟೇಟ್ ಬಿಸಿನೆಸ್ ಅನ್ನು ಉತ್ತೇಜಿಸುತ್ತದೆ.

ಮಹಾರಾಷ್ಟ್ರದಲ್ಲಿ ಹೋಮ್ ಲೋನ್ ಪಡೆಯುವ ಮೊದಲು ಮಹಾರೇರಾ ಬಗ್ಗೆ ಮಾಹಿತಿ ಪಡೆಯುವುದು ಮುಖ್ಯವಾಗಿದೆ. ಅದರಲ್ಲಿ ಒಳಗೊಂಡಿರುವ ಸಂಕೀರ್ಣತೆಗಳು ಮತ್ತು ಅದರ ಕಾರ್ಯ ಚಟುವಟಿಕೆಗೆ ಸಂಬಂಧಿಸಿದಂತೆ ಸಾಮಾನ್ಯ ಜನರಲ್ಲಿ ಅರಿವಿನ ಕೊರತೆಯಿಂದಾಗಿ ಮಹಾರೇರಾ ಪಾತ್ರವನ್ನು ಅರ್ಥಮಾಡಿಕೊಳ್ಳುವುದು ಸ್ವಲ್ಪ ಸವಾಲಿನ ಸಂಗತಿಯಾಗಿದೆ. ಮೊದಲ ನೋಟದಲ್ಲಿ, ಕಾಯ್ದೆಯು ಸಾರ್ವಜನಿಕರನ್ನು ಗೊಂದಲಕ್ಕೀಡು ಮಾಡುವಂತೆ ಅನ್ನಿಸಬಹುದು. ಆದ್ದರಿಂದ, ಪ್ರಸ್ತುತ ಲೇಖನದ ಮುಂದಿನ ಪ್ಯಾರಾಗ್ರಾಫ್‌ಗಳಲ್ಲಿ ಮೇಲೆ ತಿಳಿಸಿದ ಸಮಸ್ಯೆಗಳ ಸುತ್ತಮುತ್ತಲಿನ ಅಸ್ಪಷ್ಟತೆಯನ್ನು ಪರಿಹರಿಸಲು ಪ್ರಯತ್ನಿಸಲಾಗುತ್ತದೆ. ಈ ಕಾಯ್ದೆಯ ಬಗ್ಗೆ ತಿಳಿದುಕೊಳ್ಳುವುದು ಸಂಭಾವ್ಯ ಖರೀದಿದಾರರಿಗೆ ತಾವು ಸರಿಯಾದ ಆಸ್ತಿ / ಪ್ರಾಜೆಕ್ಟ್‌ನಲ್ಲಿ ಹೂಡಿಕೆ ಮಾಡುತ್ತಿದ್ದೇವೆಯೇ ಎಂಬುದನ್ನು ನಿರ್ಧರಿಸಲು ಮಾತ್ರವಲ್ಲದೆ, ಬಿಲ್ಡರ್‌ಗಳ ಜೊತೆಗಿನ ತಮ್ಮ ವಿವಾದಗಳನ್ನು ನಿರ್ವಹಿಸಲು ಸಮಾನ ಪರಿಹಾರ ಕಾರ್ಯವಿಧಾನವನ್ನು ಒದಗಿಸಲು ಸಹಾಯ ಮಾಡುತ್ತದೆ.

ಕಾಯ್ದೆ, ನೋಂದಣಿ ಪ್ರಕ್ರಿಯೆ ಮತ್ತು ಇತರ ವಿವರಗಳ ಬಗ್ಗೆ ಗಮನಹರಿಸುವ ತ್ವರಿತ ಮಾರ್ಗದರ್ಶಿ ಇಲ್ಲಿದೆ.

ಮಹಾರಾಷ್ಟ್ರದಲ್ಲಿ ರೇರಾ ಕಾಯ್ದೆ ಎಂದರೇನು?

ರಿಯಲ್ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ಧಿ), 2016 ("ರೇರಾ ಕಾಯ್ದೆ" ಅಥವಾ "ಕಾಯ್ದೆ") ಪ್ರಾಥಮಿಕವಾಗಿ ಎಲ್ಲಾ ರಾಜ್ಯಗಳಲ್ಲಿ ರಿಯಲ್ ಎಸ್ಟೇಟ್ ನಿಯಂತ್ರಕ ಪ್ರಾಧಿಕಾರವನ್ನು ಸ್ಥಾಪಿಸುವುದರ ಮೇಲೆ ಗಮನ ಕೇಂದ್ರೀಕರಿಸಿದೆ. ರಾಜ್ಯದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರಗಳನ್ನು ನಡೆಸುವ ನಿಯಮಗಳನ್ನು ಈ ಕಾಯ್ದೆ ವ್ಯಾಖ್ಯಾನಿಸುತ್ತದೆ ಮತ್ತು ಗ್ರಾಹಕರು / ಮನೆ ಖರೀದಿಸುವವರ ಹಿತಾಸಕ್ತಿಯನ್ನು ರಕ್ಷಿಸಲು ಪ್ರಯತ್ನಿಸುತ್ತದೆ. ಇದು ಪ್ರಾಜೆಕ್ಟ್‌ಗಳು ಮತ್ತು ಏಜೆಂಟ್‌ಗಳ ನೋಂದಣಿಗೆ ಸಂಬಂಧಿಸಿದ ಕಾರ್ಯಾಚರಣೆಗಳು, ಹಂಚಿಕೆದಾರರ ಕುಂದುಕೊರತೆಗಳನ್ನು ಪರಿಹರಿಸುವುದು, ಪ್ರಮೋಟರ್‌ಗಳ ಮೇಲೆ ವಿಧಿಸಲಾದ ಕಟ್ಟುಪಾಡುಗಳ ಕಟ್ಟುನಿಟ್ಟಾದ ಅನುಸರಣೆಯನ್ನು ಖಚಿತಪಡಿಸುವುದು ಮತ್ತು ಕಾಯ್ದೆಯಡಿ ವಿವರಿಸಿದಂತೆ ಪ್ರಾಜೆಕ್ಟ್ ಪೂರ್ಣಗೊಳಿಸಲು ಅಗತ್ಯ ಅನುಮೋದನೆಗಳು ಮತ್ತು ಅನುಮತಿಗಳನ್ನು ಒದಗಿಸುವುದನ್ನು ಒಳಗೊಂಡಿದೆ. ಮಹಾರಾಷ್ಟ್ರವು ಈ ಕಾರ್ಯವನ್ನು ಸರಿಯಾಗಿ ಅನುಷ್ಠಾನಗೊಳಿಸಿದ ಮತ್ತು ರಿಯಲ್ ಎಸ್ಟೇಟ್ ನಿಯಂತ್ರಕ ಪ್ರಾಧಿಕಾರವನ್ನು ಸ್ಥಾಪಿಸಿದ ಮೊದಲ ಭಾರತೀಯ ರಾಜ್ಯ ಎಂಬುದನ್ನು ಗಮನಿಸಿ.

ಮಹಾರೇರಾ ರಚನೆಯ ಪ್ರಾಥಮಿಕ ಉದ್ದೇಶವೆಂದರೆ, ಸರ್ಕಾರ ಮತ್ತು ಸಂಬಂಧಿತ ಪ್ರಾಧಿಕಾರಗಳ ಜೊತೆಗೆ ನೋಂದಾಯಿಸಲ್ಪಟ್ಟ ಪ್ರಾಜೆಕ್ಟ್‌ಗಳ ಮಾಲೀಕತ್ವ ಮತ್ತು ಮೇಲ್ವಿಚಾರಣೆಯನ್ನು ಒಳಗೊಂಡಂತೆ ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲಾ ಆಸ್ತಿ ಟ್ರಾನ್ಸಾಕ್ಷನ್‌‌ಗಳ ಬಗ್ಗೆ ಮಾಹಿತಿ ನೀಡುವುದು. ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಲು ಸಾಮಾನ್ಯ ಜನರಲ್ಲಿ ವಿಶ್ವಾಸ ಮೂಡಿಸುವುದು ಮತ್ತು ಸಂಪೂರ್ಣ ಪ್ರಕ್ರಿಯೆಗೆ ಪಾರದರ್ಶಕತೆಯನ್ನು ತರುವುದು ಇದರ ಕಲ್ಪನೆಯಾಗಿದೆ. ಇದಲ್ಲದೆ, ನೋಂದಾಯಿಸದ ಯೋಜನೆಗಳ ನಿರ್ಮಾಣವನ್ನು ಮಹಾರೇರಾ ನಿಷೇಧಿಸುತ್ತದೆ. ಖರೀದಿದಾರರು, ಮಾರಾಟಗಾರರು, ಬ್ರೋಕರ್‌ಗಳು, ಬಿಲ್ಡರ್‌ಗಳು, ಏಜೆಂಟ್‌ಗಳು ಮುಂತಾದವರನ್ನು ಒಳಗೊಂಡಂತೆ ರಿಯಲ್ ಎಸ್ಟೇಟ್ ಡೀಲ್‌ನಲ್ಲಿ ಒಳಗೊಂಡಿರುವ ಎಲ್ಲಾ ಪಾರ್ಟಿಗಳಿಗೆ ಈ ಕಾಯ್ದೆಯು ಪ್ರಯೋಜನ ನೀಡುತ್ತದೆ.

ಓದಲೇಬೇಕಾದವು: ರೇರಾ ಕಾಯ್ದೆ: ರಿಯಲ್ ಎಸ್ಟೇಟ್ ನಿಯಂತ್ರಕ ಪ್ರಾಧಿಕಾರಕ್ಕೆ ಅಂತಿಮ ಮಾರ್ಗದರ್ಶಿ

ಮಹಾರೇರಾ ನೋಂದಣಿ ಪ್ರಕ್ರಿಯೆ

ಮಹಾರಾಷ್ಟ್ರದಲ್ಲಿ ಯಾವುದೇ ಆಸ್ತಿ / ರಿಯಲ್ ಎಸ್ಟೇಟ್ ಯೋಜನೆಯನ್ನು ಖರೀದಿಸುವ ಅಥವಾ ವ್ಯವಹರಿಸುವ ಮೊದಲು, ನೋಂದಣಿ ಪ್ರಕ್ರಿಯೆಯ ಕುರಿತು ತಿಳಿದುಕೊಳ್ಳುವ ಸಲಹೆ ನೀಡಲಾಗಿದೆ:

  • https://maharerait.mahaonline.gov.in/ ನಲ್ಲಿ ಮಹಾರೇರಾದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
  • 'ಹೊಸ ನೋಂದಣಿ' ಮೇಲೆ ಕ್ಲಿಕ್ ಮಾಡಿ’.
  • ಪ್ರಮೋಟರ್, ದೂರುದಾರ ಮತ್ತು ರಿಯಲ್ ಎಸ್ಟೇಟ್ ಏಜೆಂಟ್‌- ಈ ಮೂರು ಆಯ್ಕೆಗಳಲ್ಲಿ ಒಂದನ್ನು ಆರಿಸಿ.
  • ಅಗತ್ಯ ವಿವರಗಳನ್ನು ನಮೂದಿಸಿ ಮತ್ತು ಪ್ಯಾನ್ ಕಾರ್ಡ್, ಸಂಪರ್ಕ ಮತ್ತು ವಿಳಾಸ ಮಾಹಿತಿ, ಹಿಂದಿನ ಯೋಜನೆಯ ವಿವರಗಳು, ಸಾಲದ ಹೊಣೆಗಾರಿಕೆ ಪ್ರಮಾಣಪತ್ರ ಇತ್ಯಾದಿಗಳನ್ನು ಒಳಗೊಂಡಂತೆ ಅಗತ್ಯ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ.
  • ಇತರ ನೋಂದಣಿ ಔಪಚಾರಿಕತೆಗಳನ್ನು ಪೂರ್ಣಗೊಳಿಸಿ.

ಮಹಾರೇರಾದ ಪ್ರಯೋಜನಗಳು

ರಿಯಲ್ ಎಸ್ಟೇಟ್ ಟ್ರಾನ್ಸಾಕ್ಷನ್‌ನಲ್ಲಿ ಒಳಗೊಂಡಿರುವ ಎಲ್ಲಾ ಪಾರ್ಟಿಗಳಿಗೆ ಮಹಾರೇರಾ ಹಲವಾರು ಪ್ರಯೋಜನಗಳನ್ನು ಒದಗಿಸುತ್ತದೆ. ಅವುಗಳಲ್ಲಿ ಕೆಲವನ್ನು ಇಲ್ಲಿ ತಿಳಿಸಲಾಗಿದೆ:

  • ನೋಂದಣಿ ಇಲ್ಲದೆ ನಡೆಸಲಾದವುಗಳನ್ನೂ ಒಳಗೊಂಡಂತೆ ಎಲ್ಲಾ ರಿಯಲ್ ಎಸ್ಟೇಟ್ ಯೋಜನೆಗಳಲ್ಲಿ ಪಾರದರ್ಶಕತೆಯನ್ನು ಖಚಿತಪಡಿಸುತ್ತದೆ.
  • ಟ್ರಾನ್ಸಾಕ್ಷನ್‌ನಲ್ಲಿ ಭಾಗವಹಿಸುವ ಎಲ್ಲಾ ಪಾರ್ಟಿಗಳು ಮತ್ತು ಅಂತಹ ಪಾರ್ಟಿಗಳ ಹಕ್ಕುಗಳ ರಕ್ಷಣೆಯು ಒಳಗೊಂಡಿರುತ್ತದೆ.
  • ಕಾರ್ಯಾಚರಣೆಯ ಮತ್ತು ಹಣಕಾಸಿನ ಶಿಸ್ತನ್ನು ನಿರ್ವಹಿಸಲು ನಿಯಮಗಳನ್ನು ಕೂಡ ರೂಪಿಸುತ್ತದೆ
  • ಮಾರಾಟಗಾರರು ಖರೀದಿದಾರರ ಅವಶ್ಯಕತೆಗಳನ್ನು ಅನುಸರಿಸುತ್ತಾರೆ ಮತ್ತು ನಿರ್ದಿಷ್ಟ ಸಮಯದ ಚೌಕಟ್ಟಿನೊಳಗೆ ದೂರುಗಳನ್ನು ಪರಿಹರಿಸುತ್ತಾರೆ ಎಂಬುದನ್ನು ಖಚಿತಪಡಿಸುತ್ತದೆ.
  • ಯೋಜನೆಯ ವಿವರಗಳು, ನೋಂದಣಿ ಮಾಹಿತಿ ಹಾಗೂ ಸ್ಥಿತಿ ಮತ್ತು ಇನ್ನೂ ಮುಂತಾದವುಗಳಂತಹ ರಿಯಲ್ ಎಸ್ಟೇಟ್ ಯೋಜನೆಗಳಿಗೆ ಸಂಬಂಧಿಸಿದ ಮಾಹಿತಿಗೆ ಸಮಯಕ್ಕೆ ಸರಿಯಾಗಿ ಅಕ್ಸೆಸ್ ಒದಗಿಸುತ್ತದೆ.
  • ಸ್ವಾಧೀನದಲ್ಲಿ ವಿಳಂಬ, ಮೋಸದ ಚಟುವಟಿಕೆಗಳು ಮತ್ತು ತಪ್ಪಾದ ಬೆಲೆಗಳಿಂದ ಖರೀದಿದಾರರನ್ನು ರಕ್ಷಿಸುತ್ತದೆ.
  • ಮಧ್ಯಸ್ಥಿಕೆಯ ಮೂಲಕ ವಿವಾದಗಳನ್ನು ಪರಿಹರಿಸಲು ಖರೀದಿದಾರರು ಮತ್ತು ಮಾರಾಟಗಾರರಿಗೆ ಪ್ಲಾಟ್‌ಫಾರ್ಮ್ ಅನ್ನು ಒದಗಿಸುತ್ತದೆ.

ಮಹಾರಾಷ್ಟ್ರದಲ್ಲಿ ರೇರಾ ಕಾಯ್ದೆಯ ನಿಯಮ ಮತ್ತು ನಿಬಂಧನೆಗಳು

ರೇರಾ ನಿಯಮ ಮತ್ತು ನಿಬಂಧನೆಗಳು ಅನೇಕ ಪುಟಗಳಾಗಿ ಚಾಲನೆಯಲ್ಲಿರುವಾಗ, ಪ್ರಮುಖ ನಿಬಂಧನೆಯ ಸಮಗ್ರ ಪಟ್ಟಿಯನ್ನು ಇಲ್ಲಿ ಒದಗಿಸಲಾಗುತ್ತದೆ:

  • ಮಹಾರೇರಾದಲ್ಲಿ ನೋಂದಾಯಿಸಬೇಕಾದ ಪ್ರತಿಯೊಂದು ವಸತಿ ಮತ್ತು ವಾಣಿಜ್ಯ ಯೋಜನೆಗೆ ಇದು ಕಡ್ಡಾಯವಾಗಿದೆ.
  • ತಮ್ಮ ಚಾಲ್ತಿಯಲ್ಲಿರುವ ಯೋಜನೆಗಳ ಬಗ್ಗೆ ನಿಯಮಿತ ಅಪ್ಡೇಟ್‌ಗಳನ್ನು ಸಲ್ಲಿಸಲು ರಿಯಲ್ ಎಸ್ಟೇಟ್ ಡೆವಲಪರ್‌ಗಳ ಮೇಲೆ ಹೊಣೆಗಾರಿಕೆ ಉಂಟುಮಾಡುತ್ತದೆ ಮತ್ತು ಅದು ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ಕಾಣಿಸಿಕೊಳ್ಳುತ್ತದೆ.
  • ಹೆಚ್ಚುವರಿ ಶುಲ್ಕಗಳು ಮತ್ತು ದಂಡಗಳನ್ನು ತಪ್ಪಿಸಲು ಸಂಯೋಜನೆ ಸಂಬಂಧಿತ ಷರತ್ತುಗಳನ್ನು ಖಚಿತಪಡಿಸುವ ಮಾರಾಟ ಒಪ್ಪಂದಗಳಿಗೆ ಮಾನದಂಡದ ಫಾರ್ಮ್ಯಾಟ್.
  • ಆಸ್ತಿಯನ್ನು ಮಾರಾಟ ಮಾಡಿದ ಐದು ವರ್ಷಗಳ ಒಳಗೆ ಡೆವಲಪರ್‌ಗಳು ಯಾವುದೇ ದೋಷಗಳನ್ನು ಸರಿಪಡಿಸಬೇಕು.
  • ಮನೆ ಖರೀದಿಸುವವರು ಯಾವುದೇ ಸೂಪರ್-ಬಿಲ್ಟ್ ಏರಿಯಾ ಬದಲಾಗಿ ಯೋಜನೆಯ ವಿವರಗಳಲ್ಲಿ ನಮೂದಿಸಿದ ಕಾರ್ಪೆಟ್ ಏರಿಯಾಕ್ಕೆ ಮಾತ್ರ ಪಾವತಿಸಬೇಕು.
  • ಪ್ರಮೋಟರ್‌ಗಳು ಎಲ್ಲಾ ಸ್ಪಷ್ಟ ಪ್ರಾಜೆಕ್ಟ್ ಶೀರ್ಷಿಕೆಗಳನ್ನು ಬಹಿರಂಗಪಡಿಸಬೇಕು.
  • ಡೆವಲಪರ್‌ಗಳು ಸಮಯಕ್ಕೆ ಸರಿಯಾಗಿ ನಿರ್ಮಾಣವನ್ನು ಪೂರ್ಣಗೊಳಿಸಲು ವಿಫಲವಾದರೆ ಮತ್ತು ಸ್ವಾಧೀನವನ್ನು ಒದಗಿಸದಿದ್ದರೆ, ಮನೆ ಖರೀದಿದಾರರು ಪಾವತಿಸಿದ ಸಂಪೂರ್ಣ ಮೊತ್ತ ಮತ್ತು ರಿಫಂಡ್ ಮೇಲೆ ಬಡ್ಡಿಯನ್ನು ಪಡೆಯಲು ಅರ್ಹರಾಗಿರುತ್ತಾರೆ .
  • ಚಾಲ್ತಿಯಲ್ಲಿರುವ ಯೋಜನೆಯ ಪ್ಲಾನ್ ಅನ್ನು ಬದಲಾಯಿಸುವ ಮೊದಲು, ಪ್ರತಿಯೊಬ್ಬ ಸದಸ್ಯರಿಂದ ಅನುಮತಿಯನ್ನು ತೆಗೆದುಕೊಳ್ಳುವುದು ಅಗತ್ಯವಾಗಿದೆ.
  • ಮಹಾರೇರಾ ಕಾಯ್ದೆಯ ಅಧ್ಯಾಯ II ರಲ್ಲಿ ಒಳಗೊಂಡಿರುವ ನಿಬಂಧನೆಯ ಪ್ರಕಾರ ಏಜೆಂಟ್‌ಗಳು ತಮ್ಮನ್ನು ತಾವು ನೋಂದಣಿ ಮಾಡಿಸಿಕೊಳ್ಳಬೇಕು.
  • ಮನೆ ಖರೀದಿದಾರರು ಸಲ್ಲಿಸಿದ ಯಾವುದೇ ದೂರನ್ನು ನಿಗದಿತ ಪ್ರಾಧಿಕಾರಗಳು 120 ದಿನಗಳ ಒಳಗೆ ಪರಿಹರಿಸಬೇಕು.

ಮಹಾರೇರಾ ಉದ್ದೇಶಗಳು

ರಿಯಲ್ ಎಸ್ಟೇಟ್ ವಲಯದಲ್ಲಿ ಈ ಕೆಳಗಿನ ಸಮಸ್ಯೆಗಳನ್ನು ಪರಿಹರಿಸುವ ಮತ್ತು ನಿಭಾಯಿಸುವ ಗುರಿಯನ್ನು ಮಹಾರೇರಾ ಹೊಂದಿದೆ:

  • ಯೋಜನೆ ಪೂರ್ಣಗೊಳಿಸುವಲ್ಲಿ ಗಮನಾರ್ಹ ವಿಳಂಬ.
  • ಮನೆ ಖರೀದಿದಾರರಿಗೆ ತಪ್ಪಾದ ಮಾಹಿತಿಯನ್ನು ನೀಡುವುದು.
  • ಇತರ ಯೋಜನೆಗಳಿಗೆ ಹಣದ ಸೈಫೊನಿಂಗ್.
  • ಪ್ರಿ-ಬುಕಿಂಗ್‌ಗಳನ್ನು ಆಕರ್ಷಿಸಲು ದಾರಿ ತಪ್ಪಿಸುವ ಆಫರ್‌ಗಳು.
  • ಮಾರಾಟ ಒಪ್ಪಂದದಲ್ಲಿ ಸ್ವಾಧೀನ ದಿನಾಂಕ ಇಲ್ಲದಿರುವುದು.
  • ಖರೀದಿದಾರರ ಒಪ್ಪಿಗೆಯಿಲ್ಲದೆ ಯೋಜನೆಯ ಪ್ಲಾನ್ ಅನ್ನು ಬದಲಾಯಿಸುವುದು.

ಓದಲೇಬೇಕಾದವು: ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಇಇ - ಸಂಪೂರ್ಣ ಮಾರ್ಗದರ್ಶಿ

ಮುಕ್ತಾಯ

ಮಹಾರಾಷ್ಟ್ರದಲ್ಲಿ ಆಸ್ತಿಗಳನ್ನು ವ್ಯವಹರಿಸುವಾಗ, ಮಹಾರೇರಾದ ಪಾತ್ರದ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಖರೀದಿದಾರರನ್ನು ವಂಚನೆಯಿಂದ ರಕ್ಷಿಸಲು, ಮಾರಾಟಗಾರರ ಹಣಕಾಸಿನ ಭದ್ರತೆಗೆ ಭರವಸೆ ನೀಡಲು ಮತ್ತು ಸಮಯಕ್ಕೆ ಸರಿಯಾಗಿ ಆಸ್ತಿ ನಿರ್ಮಾಣವನ್ನು ಖಚಿತಪಡಿಸಿಕೊಳ್ಳಲು ರೇರಾ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ಮೇಲೆ ತಿಳಿಸಿದ ಉದ್ದೇಶಗಳನ್ನು ಜಾರಿಗೊಳಿಸಲು, 2017 ರಲ್ಲಿ ಮಹಾರೇರಾವನ್ನು ಸ್ಥಾಪಿಸಲಾಯಿತು. ಮಹಾರೇರಾ ರಿಯಲ್ ಎಸ್ಟೇಟ್ ಟ್ರಾನ್ಸಾಕ್ಷನ್‌‌ಗಳನ್ನು ನಿಯಂತ್ರಿಸುವುದು ಮಾತ್ರವಲ್ಲದೆ, ಮನೆ ಖರೀದಿಸುವವರಿಗೆ ಕುಂದುಕೊರತೆ ಪರಿಹಾರ ಕಾರ್ಯವಿಧಾನವನ್ನು ಒದಗಿಸುತ್ತದೆ ಮತ್ತು ನಿರ್ಮಾಣ ಹಂತದಲ್ಲಿರುವ ಯೋಜನೆಗಳ ನಿಯತಕಾಲಿಕ ಪರಿಶೀಲನೆಯನ್ನು ನಡೆಸುತ್ತದೆ.

ಕೇವಲ 3 ನಿಮಿಷಗಳಲ್ಲಿ
3 ನಿಮಿಷಗಳು, ತೊಂದರೆ-ರಹಿತ!

ಪಿಎನ್‌ಬಿ ಹೌಸಿಂಗ್

ಅನ್ವೇಷಿಸಲು ಇತರ ವಿಷಯಗಳು

Request Call Back at PNB Housing
ಕಾಲ್ ಬ್ಯಾಕ್ ಮಾಡಿ