PNB Housing Finance Limited

ಎನ್ಎಸ್ಇ:

ಬಿಎಸ್ಇ:

ಕೊನೆಯ ಅಪ್ಡೇಟ್:

()
ಸರಾಸರಿ ರೇಟಿಂಗ್
ಹಂಚಿಕೊಳ್ಳಿ
ಕಾಪಿ ಮಾಡಿ

ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಇಇ - ಸಂಪೂರ್ಣ ಮಾರ್ಗದರ್ಶಿ

give your alt text here

ಭಾರತೀಯ ಆದಾಯ ತೆರಿಗೆ ಕಾನೂನಿನ ಸೆಕ್ಷನ್ 80ಇಇ ಮೊದಲ ಬಾರಿಯ ಮನೆ ಖರೀದಿದಾರರಿಗೆ ಹೋಮ್ ಲೋನ್ ಮೇಲೆ ಪಾವತಿಸಬೇಕಾದ ಬಡ್ಡಿಯ ಮೇಲೆ ತೆರಿಗೆ ಕಡಿತಗಳನ್ನು ಪಡೆಯಲು ಅನುಮತಿ ನೀಡುತ್ತದೆ. ಈ ಸೆಕ್ಷನ್ ಪ್ರಕಾರ ನೀವು ಪ್ರತಿ ಹಣಕಾಸು ವರ್ಷಕ್ಕೆ ₹50,000 ವರೆಗಿನ ಕಡಿತವನ್ನು ಕ್ಲೈಮ್ ಮಾಡಬಹುದು. ನೀವು ಸಂಪೂರ್ಣವಾಗಿ ಲೋನ್ ಮರುಪಾವತಿಸುವವರೆಗೆ ಈ ಕಡಿತವನ್ನು ಕ್ಲೈಮ್ ಮಾಡುವುದನ್ನು ಮುಂದುವರೆಸಬಹುದು.

ಆದರೆ ಈ ತೆರಿಗೆ ಕಡಿತಗಳಿಂದ ನೀವು ಎಲ್ಲಿ ಮತ್ತು ಹೇಗೆ ಪ್ರಯೋಜನ ಪಡೆಯಬಹುದು?? ಸೆಕ್ಷನ್ 80ಇಇ ಅಡಿಯಲ್ಲಿ ತೆರಿಗೆ ಪ್ರಯೋಜನಗಳ ಬಗ್ಗೆ ಎಲ್ಲವನ್ನೂ ತಿಳಿಯಲು ಓದಿ.

ಸೆಕ್ಷನ್ 80ಇಇ ಪ್ರಕಾರ ತೆರಿಗೆ ಕಡಿತಕ್ಕೆ ಅರ್ಹತಾ ಮಾನದಂಡ

  • ನಿಮ್ಮ ಆಸ್ತಿ ಮೌಲ್ಯವು ₹50 ಲಕ್ಷಗಳು ಮತ್ತು ಅದಕ್ಕಿಂತ ಕಡಿಮೆ ಇರಬೇಕು.
  • ಲೋನ್ ಮಂಜೂರು ಮಾಡಿದ ದಿನದ ಪ್ರಕಾರ ನೀವು ಇನ್ನೊಂದು ವಸತಿ ಆಸ್ತಿಯನ್ನು ಹೊಂದಿರಬಾರದು.
  • ಸೆಕ್ಷನ್ 80ಇಇ ಅಡಿಯಲ್ಲಿ ತೆರಿಗೆ ಪ್ರಯೋಜನಗಳು ವಸತಿ ಆಸ್ತಿಗೆ ಮಾತ್ರ ಅನ್ವಯವಾಗುತ್ತವೆ.
  • ಹೋಮ್ ಲೋನ್ ಆಗಿ ತೆಗೆದುಕೊಳ್ಳಲಾದ ಮೊತ್ತವು ₹35 ಲಕ್ಷಗಳನ್ನು ಮೀರಬಾರದು ಅಥವಾ.
  • ಲೋನ್ ಅನ್ನು ಫೈನಾನ್ಶಿಯಲ್ ಸಂಸ್ಥೆ ಅಥವಾ ಹೌಸಿಂಗ್ ಫೈನಾನ್ಸ್ ಕಂಪನಿಯು ಮಂಜೂರು ಮಾಡಬೇಕು
  • ಲೋನ್ 01.04.2016 ರಿಂದ 31.03.2017 ನಡುವೆ ಮಂಜೂರಾಗಿರಬೇಕು

ಓದಲೇಬೇಕಾದವು: ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 24 ಎಂದರೇನು?

ಸೆಕ್ಷನ್ 80ಇಇ ಅಡಿಯಲ್ಲಿ ತೆರಿಗೆ ಪ್ರಯೋಜನದ ಕಡಿತಗಳನ್ನು ಅಕ್ಸೆಸ್ ಮಾಡಬಹುದಾದ ಗುಂಪುಗಳು ಅಥವಾ ವ್ಯಕ್ತಿಗಳ ವರ್ಗಗಳು

  • ಯಾವುದೇ ಇತರ ವಸತಿ ಆಸ್ತಿ ಇಲ್ಲದೆ ಲೋನ್ ಮೂಲಕ ಮನೆ ಖರೀದಿಸಿದ ಮೊದಲ ಬಾರಿಯ ಮನೆ ಖರೀದಿದಾರರು.
  • ಒಬ್ಬ ವೈಯಕ್ತಿಕ ತೆರಿಗೆದಾರರು ಸೆಕ್ಷನ್ 80ಇಇ ಅಡಿಯಲ್ಲಿ ತೆರಿಗೆ ಕಡಿತಕ್ಕೆ ಅರ್ಹರಾಗಿರುತ್ತಾರೆ
  • ಸಹ-ಸಾಲಗಾರರು ಪ್ರತ್ಯೇಕವಾಗಿ ಸೆಕ್ಷನ್ 80ಇಇ ಅಡಿಯಲ್ಲಿ ತೆರಿಗೆ ಕಡಿತಗಳಿಗೆ ಅರ್ಹರಾಗಿರುತ್ತಾರೆ.
  • ಖರೀದಿಸಿದ ಮನೆಯಲ್ಲಿ ವಾಸಿಸುತ್ತಿರಲಿ ಅಥವಾ ಅದನ್ನು ಅವರು ಬಾಡಿಗೆಗೆ ನೀಡಿರಲಿ, ಎರಡೂ ಸಂದರ್ಭಗಳಲ್ಲಿ ತೆರಿಗೆ ಪ್ರಯೋಜನಗಳಿಗೆ ಅರ್ಹರಾಗಬಹುದು.

ಸೆಕ್ಷನ್ 80ಇಇ ಅಡಿಯಲ್ಲಿ ತೆರಿಗೆ ಪ್ರಯೋಜನಗಳನ್ನು ಪಡೆಯಲು ಸಾಧ್ಯವಿಲ್ಲದ ಗುಂಪುಗಳು ಅಥವಾ ವ್ಯಕ್ತಿಗಳ ವರ್ಗಗಳು

  • ಸೆಕ್ಷನ್ 80ಇಇ ಅಡಿಯಲ್ಲಿ ವ್ಯಕ್ತಿಗಳ ಅಸೋಸಿಯೇಶನ್, ಹಿಂದೂ ಅವಿಭಕ್ತ ಕುಟುಂಬಗಳು ಅಥವಾ ಯಾವುದೇ ರೀತಿಯ ಟ್ರಸ್ಟ್‌ಗಳಿಗೆ ತೆರಿಗೆ ಪ್ರಯೋಜನಗಳು ಅನ್ವಯವಾಗುವುದಿಲ್ಲ.
  • ನೀವು ಲೋನ್ ತೆಗೆದುಕೊಂಡರೂ ಸಹ ನಿಮ್ಮ ಸಂಗಾತಿಯ ಮಾಲೀಕತ್ವದ ಮನೆ ಆಸ್ತಿಯ ಮೇಲೆ ಕಡಿತವನ್ನು ಕ್ಲೈಮ್ ಮಾಡಲು ಸಾಧ್ಯವಿಲ್ಲ ; ಸಂಗಾತಿಯು ಸಹ-ಸಾಲಗಾರರಾಗಿದ್ದರೆ ಅಥವಾ ಸಹ-ಮಾಲೀಕರಾಗಿ ನಾಮಿನೇಟ್ ಮಾಡಿದರೆ ಮಾತ್ರ ಇದನ್ನು ಮಾಡಬಹುದು.

ನಿಮ್ಮ ಹೋಮ್ ಲೋನ್ ಮೇಲೆ ತೆರಿಗೆ ಪ್ರಯೋಜನಗಳನ್ನು ಕ್ಲೈಮ್ ಮಾಡುವ ಹಂತಗಳು

  1. ಅಗತ್ಯವಿರುವ ಆಸ್ತಿ ಮತ್ತು ಹೋಮ್ ಲೋನ್ ಡಾಕ್ಯುಮೆಂಟ್‌ಗಳನ್ನು ಸಿದ್ಧಪಡಿಸಿ

ನೀವು ಆಸ್ತಿಯ ಸಹ-ಮಾಲೀಕರಾಗಿದ್ದರೆ, ನಿಮ್ಮ ಹೆಸರು ಮತ್ತು ಸಹ-ಮಾಲೀಕರ ಹೆಸರು ಕೂಡ ಇರುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ನೀವಿಬ್ಬರೂ ಪ್ರತ್ಯೇಕವಾಗಿ ತೆರಿಗೆ ಕಡಿತಗಳನ್ನು ಕ್ಲೈಮ್ ಮಾಡಬಹುದು. ಆದಾಗ್ಯೂ, ಇಬ್ಬರೂ ಸಹ-ಸಾಲಗಾರರು ತೆರಿಗೆ ಪ್ರಯೋಜನಗಳಿಗಾಗಿ ಇಎಂಐಗಳನ್ನು ಪಾವತಿಸಬೇಕಾಗುತ್ತದೆ.

ನಿಮ್ಮ ಸಾಲದಾತರಿಂದ ನೀವು ನಿಮ್ಮ ಲೋನ್ ಮತ್ತು ಬಡ್ಡಿ ವಿವರಗಳನ್ನು ಸೂಚಿಸುವ ಪ್ರಮಾಣಪತ್ರವನ್ನು ಪಡೆಯುತ್ತೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ನೆನಪಿಡಿ, ಸೆಕ್ಷನ್ 80 ಇಇ ಪ್ರಕಾರ ತೆರಿಗೆ ಪ್ರಯೋಜನಗಳಿಗೆ ಅರ್ಹತೆ ಪಡೆಯಲು ನಿಮ್ಮ ಹೋಮ್ ಲೋನ್‌ಗೆ ಅನುಮೋದನೆ ಸಿಕ್ಕಿರಬೇಕು.

  1. ನಿಮ್ಮ ಉದ್ಯೋಗದಾತರಿಗೆ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ

ನಿಮ್ಮ ಹೋಮ್ ಲೋನ್ ಮೇಲೆ ತೆರಿಗೆ ಕಡಿತಗಳನ್ನು ಕ್ಲೈಮ್ ಮಾಡುವಾಗ:

  • ನೀವು ಹೋಮ್ ಲೋನಿನೊಂದಿಗೆ ನಿಮ್ಮ ಮನೆಯನ್ನು ಖರೀದಿಸಿದ ಅಥವಾ ನಿರ್ಮಿಸಿದ ನಂತರ ನಿಮ್ಮ ಉದ್ಯೋಗದಾತರಿಗೆ ತಿಳಿಸಿ. ನಂತರ ನಿಮ್ಮ ಉದ್ಯೋಗದಾತರು ತೆರಿಗೆಗಾಗಿ ನಿಮ್ಮ ಆದಾಯದಿಂದ ಕಡಿತಗೊಳಿಸಲಾದ ಮೊತ್ತವನ್ನು ಕಡಿಮೆ ಮಾಡಲು ಟಿಡಿಎಸ್ ಅನ್ನು ಸರಿಹೊಂದಿಸುತ್ತಾರೆ.
  • ವರ್ಷದ ಕೊನೆಯವರೆಗೆ ಕಾಯಿರಿ, ತೆರಿಗೆ ಹೊಣೆಗಾರಿಕೆಗಳನ್ನು ಹುಡುಕಿ ಮತ್ತು ಹೊಂದಾಣಿಕೆಗಳನ್ನು ಮಾಡಿ.

ಒಂದು ವೇಳೆ ನೀವು ಉದ್ಯೋಗಿಯಾಗಿಲ್ಲದಿದ್ದರೆ: ಯಾವುದೇ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಡಿ.

ಓದಲೇಬೇಕಾದವು: ಎರಡನೇ ಹೋಮ್ ಲೋನ್ ಮೇಲೆ ತೆರಿಗೆ ಪ್ರಯೋಜನಗಳನ್ನು ಕ್ಲೈಮ್ ಮಾಡುವುದು ಹೇಗೆ?

ಮುಕ್ತಾಯ

  • ಸೆಕ್ಷನ್ 80ಇಇ ಎಂಬುದು ಆದಾಯ ತೆರಿಗೆ ಕಾನೂನಾಗಿದ್ದು, ಇದು ವಸತಿ ಮನೆಯನ್ನು ಖರೀದಿಸಲು ಅಥವಾ ನಿರ್ಮಿಸಲು ನೀವು ಹೋಮ್ ಲೋನನ್ನು ಬಳಸಿದಾಗ ತೆರಿಗೆ ಪ್ರಯೋಜನಗಳನ್ನು ಖಚಿತಪಡಿಸುತ್ತದೆ. ನಿಮ್ಮ ತೆರಿಗೆಗಳನ್ನು ಸಲ್ಲಿಸುವಾಗ, ನೀವು ಪಾವತಿಸಿದ ಬಡ್ಡಿಯಲ್ಲಿ 50,000 ವರೆಗೆ ಕಡಿತ ಮಾಡಬಹುದು.
  • ಆಸ್ತಿಯು ಸಹ-ಮಾಲೀಕತ್ವದಲ್ಲಿದ್ದರೆ, ತೆರಿಗೆ ಪ್ರಯೋಜನಗಳನ್ನು ಪ್ರತ್ಯೇಕವಾಗಿ ಕ್ಲೈಮ್ ಮಾಡಬಹುದು. ಆದಾಗ್ಯೂ, ಸಹ-ಸಾಲಗಾರರು ಇಎಂಐಗಳನ್ನು ಪಾವತಿಸಬೇಕು ಮತ್ತು ಸೆಕ್ಷನ್ 80ಇಇ ಕಡಿತಗಳಿಗೆ ಅರ್ಹತೆ ಪಡೆಯಲು ಆಸ್ತಿಯು ಎರಡೂ ಹೆಸರುಗಳಲ್ಲಿರಬೇಕು.
  • ಸೆಕ್ಷನ್ 80ಇಇ ತೆರಿಗೆ ಕಡಿತಗಳು ಪಾವತಿಸಿದ ಬಡ್ಡಿಗೆ ಮಾತ್ರ ಲಭ್ಯವಿವೆ, ಅಸಲಿಗೆ ಅಲ್ಲ.
  • ತೆರಿಗೆ ಕಡಿತಕ್ಕೆ ಅರ್ಹತೆ ಪಡೆಯಲು, ಹೋಮ್ ಲೋನ್‌ನೊಂದಿಗೆ ಖರೀದಿಸಿದ ಅಥವಾ ನಿರ್ಮಿಸಿದ ಆಸ್ತಿಯು 50 ಲಕ್ಷಕ್ಕಿಂತ ಕಡಿಮೆ ಇರಬೇಕು. ಇದಲ್ಲದೆ, ನಿಮ್ಮ ಹೋಮ್ ಲೋನ್ ಅನುಮೋದಿಸುವ ಸಮಯದಲ್ಲಿ ನೀವು ಇತರ ಯಾವುದೇ ಆಸ್ತಿಯನ್ನು ಹೊಂದಿರಬಾರದು.
ಕೇವಲ 3 ನಿಮಿಷಗಳಲ್ಲಿ
3 ನಿಮಿಷಗಳು, ತೊಂದರೆ-ರಹಿತ!

ಪಿಎನ್‌ಬಿ ಹೌಸಿಂಗ್

ಅನ್ವೇಷಿಸಲು ಇತರ ವಿಷಯಗಳು

Request Call Back at PNB Housing
ಕಾಲ್ ಬ್ಯಾಕ್ ಮಾಡಿ