ಅಗತ್ಯ ಹಣಕಾಸಿನ ಸಂಪನ್ಮೂಲಗಳಿಲ್ಲದೆ ಅನೇಕ ಜನರಿಗೆ ತಮ್ಮ ಕನಸಿನ ಮನೆಯನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ. ಅಂತಹ ಸಂದರ್ಭಗಳಲ್ಲಿ ಹೋಮ್ ಲೋನ್ ಅತ್ಯುತ್ತಮ ಆಯ್ಕೆಯಾಗಿದೆ. ಏಕೆಂದರೆ ಇದು ಜನರಿಗೆ ಒಂದೇ ಬಾರಿಗೆ ಮುಂಗಡವಾಗಿ ಹಣ ಪಾವತಿಸದೆ ಸ್ವಂತ ಮನೆ ಹೊಂದುವ ಸ್ವಾತಂತ್ರ್ಯವನ್ನು ನೀಡುತ್ತದೆ. ಲೋನಿನ ಒಪ್ಪಿದ ನಿಯಮಗಳ ಪ್ರಕಾರ, ನಿರ್ದಿಷ್ಟ ಅವಧಿಯಲ್ಲಿ ಬಡ್ಡಿಯೊಂದಿಗೆ ಸಂಪೂರ್ಣ ಲೋನ್ ಮೊತ್ತವನ್ನು ಪಾವತಿಸಬಹುದು.
ಇದನ್ನೇ ನಾವು ಹೋಮ್ ಲೋನ್‌ನ ಮರುಪಾವತಿ ಅವಧಿ ಎಂದು ಕರೆಯುತ್ತೇವೆ. ಸಾಮಾನ್ಯವಾಗಿ 30 ವರ್ಷಗಳವರೆಗೆ ಇರುವ, ಹೋಮ್ ಲೋನ್ ಕಾಲಾವಧಿಗಳು ನಿಮ್ಮ ಹಣಕಾಸಿಗೆ ಹಾನಿ ಮಾಡದ ಅವಧಿಯನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ಒದಗಿಸುತ್ತವೆ. ಆದರೆ ಅನೇಕ ಅರ್ಜಿದಾರರು ಹೋಮ್ ಲೋನ್ ಮರುಪಾವತಿ ಅವಧಿಗೆ ಸಂಬಂಧಿಸಿದಂತೆ- ಸೂಕ್ತ ಅವಧಿ ಎಂದರೇನು ಮತ್ತು ಅದನ್ನು ಹೇಗೆ ಆಯ್ಕೆ ಮಾಡುವುದು ಎಂಬಿತ್ಯಾದಿ ಪ್ರಶ್ನೆಗಳನ್ನು ಹೊಂದಿದ್ದಾರೆ. ಈ ಬ್ಲಾಗ್‌ನಲ್ಲಿ, ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು ನಾವು ಬಯಸುತ್ತೇವೆ.
ಲೋನ್ ಕಾಲಾವಧಿ ಎಂದರೇನು? ಹೋಮ್ ಲೋನ್‌ನ ಸೂಕ್ತ ಮತ್ತು ಗರಿಷ್ಠ ಕಾಲಾವಧಿಯನ್ನು ತಿಳಿಯಿರಿ
ಬ್ಯಾಂಕಿಂಗ್‌ನಲ್ಲಿ ಲೋನ್ ಕಾಲಾವಧಿ ಎಂಬುದು, ನೀವು ಸಂಪೂರ್ಣ ಲೋನ್ ಮೊತ್ತವನ್ನು ಪಾವತಿಸಲು ನಿಮ್ಮ ಲೋನ್ ಇಎಂಐ ಪಾವತಿಗಳನ್ನು ವಿಸ್ತರಿಸುವ ಒಟ್ಟು ಅವಧಿಯಾಗಿದೆ. ಇದು 30 ವರ್ಷಗಳಿಗಿಂತ ಹೆಚ್ಚು ಇರಬಹುದು. ಸಾಮಾನ್ಯವಾಗಿ ಅರ್ಜಿದಾರರ ನಿವೃತ್ತಿ ವಯಸ್ಸಿನ ಆಧಾರದ ಮೇಲೆ ಗರಿಷ್ಠ ಹೋಮ್ ಲೋನ್ ಅವಧಿಯನ್ನು ನಿರ್ಧರಿಸಲಾಗುತ್ತದೆ. ಆದರೆ ಇತರ ಅಂಶಗಳನ್ನು ಕೂಡ ಪರಿಗಣಿಸಲಾಗುತ್ತದೆ.
ಹೋಮ್ ಲೋನ್ ಅವಧಿಯನ್ನು ಹೋಮ್ ಲೋನ್ ಮರುಪಾವತಿ ಅವಧಿ ಎಂದು ಕೂಡ ಕರೆಯಲಾಗುತ್ತದೆ, ಅಂದರೆ ಇದು ನಿರ್ದಿಷ್ಟ ಸಮಯದ ಅವಧಿಯಾಗಿದೆ, ಈ ಸಮಯದಲ್ಲಿ ನೀವು ಬಡ್ಡಿಯೊಂದಿಗೆ ನಿಮ್ಮ ಸಂಪೂರ್ಣ ಹೋಮ್ ಲೋನ್ ಅನ್ನು ಪಾವತಿಸಬೇಕು. ಈಗ, ಹೋಮ್ ಲೋನ್ ಸಾಮಾನ್ಯವಾಗಿ ದೀರ್ಘಾವಧಿ ಅಥವಾ ಅಲ್ಪಾವಧಿ ಆಗಿರುತ್ತದೆ. ಹೋಮ್ ಲೋನ್ ಗರಿಷ್ಠ ಕಾಲಾವಧಿಯು 30 ವರ್ಷಗಳವರೆಗೆ ಇರಬಹುದು. ಇನ್ನಷ್ಟು ತಿಳಿಯೋಣ:
ದೀರ್ಘಾವಧಿಯ ಹೋಮ್ ಲೋನ್ ಅವಧಿ
- ಐದು ವರ್ಷಗಳಿಗಿಂತ ಹೆಚ್ಚು ದೀರ್ಘಾವಧಿಯ ಲೋನ್‌ಗಳು. ಗರಿಷ್ಠ ಹೋಮ್ ಲೋನ್ ಅವಧಿಯು 30 ವರ್ಷಗಳವರೆಗೆ ಹೋಗಬಹುದು.
- ದೀರ್ಘಾವಧಿಯ ಲೋನ್‌ಗಳು ಗಮನಾರ್ಹ ಅವಧಿಯವರೆಗೆ ಇರುವುದರಿಂದ, ದೀರ್ಘಾವಧಿಯು ಲೋನ್ ಅರ್ಹತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
- ಲೋನ್ ಅವಧಿಯ ಪ್ರಕಾರ, ಇಎಂಐಗಳು ಕಡಿಮೆ ಇರುತ್ತವೆ. ಆದ್ದರಿಂದ, ದೀರ್ಘಾವಧಿಯ ಹೋಮ್ ಲೋನ್ ಅವಧಿಗಳು ದೀರ್ಘಾವಧಿಯಲ್ಲಿ ಹೆಚ್ಚು ಕೈಗೆಟಕುವಂತಿವೆ.
- ಆದಾಗ್ಯೂ, ದೀರ್ಘ ಅವಧಿಗೆ ಹೋಮ್ ಲೋನ್‌ನ ಬಡ್ಡಿ ಅಂಶವು ಹೆಚ್ಚಾಗಿರುತ್ತದೆ.
ಅಲ್ಪಾವಧಿಯ ಹೌಸಿಂಗ್ ಲೋನ್ ಅವಧಿ
- ಐದು ವರ್ಷ ಅಥವಾ ಅದಕ್ಕಿಂತ ಕಡಿಮೆ ಅವಧಿಯ ಯಾವುದೇ ಹೋಮ್ ಲೋನ್ ಅನ್ನು ಅಲ್ಪಾವಧಿಯ ಹೌಸಿಂಗ್ ಲೋನ್ ಎಂದು ಪರಿಗಣಿಸಲಾಗುತ್ತದೆ. ಹೋಮ್ ಲೋನ್‌ನ ಕನಿಷ್ಠ ಕಾಲಾವಧಿಯನ್ನು ಸಾಮಾನ್ಯವಾಗಿ 2 ವರ್ಷಗಳಿಗೆ ನಿಗದಿಪಡಿಸಲಾಗಿದೆ.
- ಅಂತಹ ಲೋನ್‌ನ ಪ್ರಯೋಜನವೆಂದರೆ, ನೀವು ತ್ವರಿತವಾಗಿ ಸಾಲದಿಂದ ಹೊರಬರುತ್ತೀರಿ ಮತ್ತು ಕಡಿಮೆ ಸಮಯದಲ್ಲಿ ನಿಮ್ಮ ನೋಂದಾಯಿತ ಹೆಸರಿನಲ್ಲಿ ಆಸ್ತಿಯನ್ನು ಪಡೆಯುತ್ತೀರಿ.
- ಏಕೆಂದರೆ ಹೋಮ್ ಲೋನ್ ಅವಧಿ ಕಡಿಮೆ ಇರುವುದರಿಂದ, ಕಡಿಮೆ ಲೋನ್ ಅವಧಿಯನ್ನು ಸರಿದೂಗಿಸಲು ಬ್ಯಾಂಕ್‌ಗಳು ಲೋನ್‌ಗಳ ಮೇಲೆ ಹೆಚ್ಚಿನ ಬಡ್ಡಿ ದರಗಳನ್ನು ವಿಧಿಸುತ್ತವೆ.
- ಏಕೆಂದರೆ ಅಲ್ಪಾವಧಿಯ ಲೋನ್‌ಗಳು ಕಡಿಮೆ ಸಮಯದಲ್ಲಿ ಹರಡಿರುವುದರಿಂದ, ಇಎಂಐಗಳು ಸಾಮಾನ್ಯವಾಗಿ ಅಧಿಕವಾಗಿರುತ್ತವೆ. ಆದಾಗ್ಯೂ, ಲೋನ್ ಮೇಲಿನ ಒಟ್ಟು ಬಡ್ಡಿ ಮೊತ್ತವು ದೀರ್ಘಾವಧಿಯ ಹೋಮ್ ಲೋನ್‌ಗಿಂತ ಕಡಿಮೆ ಇರುತ್ತದೆ.
ಅಲ್ಪಾವಧಿ ವರ್ಸಸ್ ದೀರ್ಘಾವಧಿಯ ಲೋನ್‌ಗಳು
ದೀರ್ಘಾವಧಿಯ ಅಥವಾ ಅಲ್ಪಾವಧಿಯ ಹೋಮ್ ಲೋನ್ ಅವಧಿಯ ನಡುವಿನ ಆಯ್ಕೆಯು ನಿಮ್ಮ ಅಗತ್ಯಗಳು, ಹಣಕಾಸಿನ ಸಾಮರ್ಥ್ಯಗಳು ಮತ್ತು ಅರ್ಹತೆಯನ್ನು ಪರಿಗಣಿಸುತ್ತದೆ.
ನೀವು ಪ್ರತಿ ತಿಂಗಳು ಕಡಿಮೆ ಇಎಂಐ ಮೊತ್ತವನ್ನು ಪಾವತಿಸಲು ಬಯಸಿದರೆ ಮತ್ತು ಲೋನ್ ಬಡ್ಡಿಯಾಗಿ ಎಷ್ಟು ಹಣ ಪಾವತಿಸುತ್ತೀರಿ ಎಂಬುದರ ಬಗ್ಗೆ ಕಾಳಜಿ ವಹಿಸದಿದ್ದರೆ, ನೀವು ದೀರ್ಘಾವಧಿಯ ಲೋನ್ ಆಯ್ಕೆಯನ್ನು ಆರಿಸಿಕೊಳ್ಳಬಹುದು. ಸ್ವಾಭಾವಿಕವಾಗಿ, ದೀರ್ಘ ಅವಧಿಯ ಹೋಮ್ ಲೋನ್‌ಗಳನ್ನು ಸಾಮಾನ್ಯವಾಗಿ ಯುವ ಅರ್ಜಿದಾರರಿಗೆ ಒದಗಿಸಲಾಗುತ್ತದೆ.
ಮತ್ತೊಂದೆಡೆ, ನೀವು ತ್ವರಿತವಾಗಿ ಲೋನ್ ಮರುಪಾವತಿ ಮಾಡಲು ಬಯಸಿದರೆ ಮತ್ತು ಹೆಚ್ಚಿನ ಬಡ್ಡಿ ದರಗಳ ಬಗ್ಗೆ ಕಾಳಜಿ ವಹಿಸದಿದ್ದರೆ ಅಲ್ಪಾವಧಿಯ ಲೋನ್‌ಗಳು ಉತ್ತಮವಾಗಿರುತ್ತವೆ. ನೀವು ಹಿರಿಯ ಅರ್ಜಿದಾರರಾಗಿದ್ದರೆ, ನಿಮ್ಮ ಹೋಮ್ ಲೋನ್ ಅವಧಿಯು ಸಾಮಾನ್ಯವಾಗಿ ಕಡಿಮೆಯಾಗಿರುತ್ತದೆ ಮತ್ತು ನೀವು ನಿವೃತ್ತಿ ಹೊಂದುವ ಸಮಯದೊಳಗೆ ಕೊನೆಗೊಳ್ಳುತ್ತದೆ.
ಹೌಸಿಂಗ್ ಲೋನ್ ಕಾಲಾವಧಿಯು ನಿಮ್ಮ ಇಎಂಐ ಮತ್ತು ಬಡ್ಡಿಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಲೆಕ್ಕ ಹಾಕಲು, ನೀವು ನಮ್ಮ ವೆಬ್‌ಸೈಟ್‌ನಲ್ಲಿ ಹೋಮ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಟೂಲ್ ಬಳಸಬಹುದು.
ಅತ್ಯುತ್ತಮ ಹೋಮ್ ಲೋನ್ ಕಾಲಾವಧಿಯನ್ನು ಆಯ್ಕೆ ಮಾಡುವುದು ಹೇಗೆ
ನೀವು ಹೌಸಿಂಗ್ ಲೋನ್ ಅವಧಿಯನ್ನು ನಿರ್ಧರಿಸುವ ಮೊದಲು ಅನೇಕ ಅಂಶಗಳನ್ನು ಯೋಚಿಸಬೇಕು. ಅವುಗಳು ಹೀಗಿವೆ:
- ಲೋನ್ ಮೊತ್ತ – ದೊಡ್ಡ ಹೋಮ್ ಲೋನ್ ಮೊತ್ತದ ಸಂದರ್ಭದಲ್ಲಿ ನಿಮ್ಮ ಹೋಮ್ ಲೋನ್ ಅರ್ಹತೆಯನ್ನು ಸುಧಾರಿಸಲು, ದೀರ್ಘ ಹೋಮ್ ಲೋನ್ ಅವಧಿಯನ್ನು ಪಡೆಯುವುದು ಯಾವಾಗಲೂ ಉತ್ತಮ ವಿಚಾರವಾಗಿದೆ. ಏಕೆಂದರೆ ದೀರ್ಘ ಹೋಮ್ ಲೋನ್‌ಗಳು ನಿಮ್ಮ ಇಎಂಐ ಅನ್ನು ಕಡಿಮೆ ಮಾಡುತ್ತವೆ, ಇದು ಸಾಲದಾತರಿಗೆ ಲೋನ್ ಮರುಪಾವತಿಸುವ ನಿಮ್ಮ ಸಾಮರ್ಥ್ಯದ ಬಗ್ಗೆ ಹೆಚ್ಚು ಆತ್ಮವಿಶ್ವಾಸ ಮೂಡಿಸುತ್ತದೆ.
- ಇಎಂಐ – ನೀವು ದೀರ್ಘಾವಧಿಯಲ್ಲಿ ಎಷ್ಟು ಇಎಂಐಯನ್ನು ನಿಭಾಯಿಸಬಹುದು ಎಂಬುದು ನಿಮ್ಮ ಕಾಲಾವಧಿಯ ನಿರ್ಧಾರದ ಮೇಲೆ ಪರಿಣಾಮ ಬೀರುತ್ತದೆ. ನೀವು ಈಗಾಗಲೇ ಪ್ರತಿ ತಿಂಗಳು ಇತರ ಇಎಂಐಗಳನ್ನು ಪಾವತಿಸುತ್ತಿದ್ದರೆ, ಈಗ ನೀವು ದೊಡ್ಡ ಹೋಮ್ ಲೋನ್ ಇಎಂಐ ತೆಗೆದುಕೊಳ್ಳಲು ಸಾಧ್ಯವಿಲ್ಲ. ದೀರ್ಘಾವಧಿಯ ಲೋನ್ ಕಡಿಮೆ ಇಎಂಐ ಹೊಂದಿದ್ದರೂ, ನೀವು ಹೆಚ್ಚಿನ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ ಎಂಬುದನ್ನು ನೆನಪಿಡಿ.
- ವಯಸ್ಸು – ನೀವು ಸುಸ್ಥಿರ, ನಿಯಮಿತ ಆದಾಯದೊಂದಿಗೆ ಯುವಕರಾಗಿದ್ದರೆ, ನಿಮ್ಮ ಹಣಕಾಸಿನ ಆರೋಗ್ಯದ ಪ್ರಕಾರ ದೀರ್ಘಾವಧಿಯ ಮತ್ತು ಅಲ್ಪಾವಧಿಯ ಲೋನ್‌ಗಳ ನಡುವೆ ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ಹೊಂದಿರುತ್ತೀರಿ.
ಮುಕ್ತಾಯ
ಆದ್ದರಿಂದ, ನಿಮ್ಮ ಹೋಮ್ ಲೋನ್ ಅವಧಿಯನ್ನು ಅತ್ಯುತ್ತಮಗೊಳಿಸುವ ಮೂಲಕ, ನಿಮ್ಮ ಒಟ್ಟಾರೆ ಬಡ್ಡಿ ವೆಚ್ಚವನ್ನು ಕಡಿಮೆ ಮಾಡುವ ಜೊತೆಗೆ ನೀವು ಇಎಂಐಗಳನ್ನು ನಿಯಂತ್ರಿಸಬಹುದು. ಆದ್ದರಿಂದ, ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುವುದು ಅತ್ಯಂತ ಮುಖ್ಯವಾಗಿದೆ!
ನಿಮಗೆ ಆತಂಕವಾಗುತ್ತಿದ್ದರೆ, ಚಿಂತಿಸಬೇಡಿ! ಪಿಎನ್‌ಬಿ ಹೌಸಿಂಗ್‌ನಲ್ಲಿ, ಸೂಕ್ತವಾದ ಹೋಮ್ ಲೋನ್ ಅವಧಿಯನ್ನು ಆಯ್ಕೆ ಮಾಡುವುದು ಹೇಗೆ ಎಂಬುದನ್ನು ಒಳಗೊಂಡಂತೆ ನಿಮ್ಮ ಎಲ್ಲಾ ಹೋಮ್ ಲೋನ್ ಪ್ರಶ್ನೆಗಳಿಗೆ ಉತ್ತರಿಸಲು ನಮ್ಮ ಪ್ರತಿನಿಧಿಗಳು ಯಾವಾಗಲೂ ಸಿದ್ಧರಿರುತ್ತಾರೆ. ಇಂದೇ ಸಂಪರ್ಕಿಸಿ!