ನಿಮ್ಮ ಉಳಿತಾಯವನ್ನು ಹೂಡಿಕೆ ಮಾಡುವ ವಿಷಯಕ್ಕೆ ಬಂದಾಗ, ಫಿಕ್ಸೆಡ್ ಡೆಪಾಸಿಟ್‌ಗಳು ಅನೇಕರ ಮೊದಲ ಆಯ್ಕೆಯಾಗಿದೆ. ದಶಕಗಳವರೆಗೆ, ಇದು ಹೂಡಿಕೆಯ ಆದ್ಯತೆಯ ಆಯ್ಕೆಗಳಲ್ಲಿ ಪ್ರಮುಖವಾಗಿದೆ ಮತ್ತು ಇದನ್ನು ಉತ್ತಮ ಹೂಡಿಕೆ ಮಾರ್ಗವೆಂದು ಪರಿಗಣಿಸಲಾಗುತ್ತದೆ.
ಆದ್ದರಿಂದ, ಇದನ್ನು ಜನಪ್ರಿಯ ಹೂಡಿಕೆ ಆಯ್ಕೆಯಾಗಿ ಮಾಡುವ ಎಲ್ಲಾ ಫೀಚರ್‌ಗಳನ್ನು ನಾವು ನೋಡೋಣ.
- ಎಫ್‌ಡಿ ಖಚಿತ ಆದಾಯದ ದರವನ್ನು ನೀಡುತ್ತದೆ: ಒಮ್ಮೆ ಫಂಡ್‌ಗಳನ್ನು ಫಿಕ್ಸೆಡ್ ಡೆಪಾಸಿಟ್ ನಲ್ಲಿ ಹೂಡಿಕೆ ಮಾಡಿದ ನಂತರ, ಡೆಪಾಸಿಟರ್ ಮೆಚ್ಯೂರಿಟಿಯಲ್ಲಿ ನಿಗದಿತ ಆದಾಯದ ದರವನ್ನು ಪಡೆಯುತ್ತಾರೆ. ಫೈನಾನ್ಶಿಯಲ್ ಸಂಸ್ಥೆಗಳು ಎಫ್‌ಡಿ ಕ್ಯಾಲ್ಕುಲೇಟರ್ ಅನ್ನು ಕೂಡ ಒದಗಿಸುತ್ತವೆ, ಅದು ಕಾಲಾವಧಿಯ ಕೊನೆಯಲ್ಲಿ ಹೂಡಿಕೆಯ ಮೌಲ್ಯವನ್ನು ಕಂಡುಹಿಡಿಯಲು ಸಹಾಯ ಮಾಡುತ್ತದೆ.
- ಹಿರಿಯ ನಾಗರಿಕರಿಗೆ ಎಫ್‌ಡಿ ಹೆಚ್ಚಿನ ಆದಾಯವನ್ನು ಒದಗಿಸುತ್ತದೆ: ಫೈನಾನ್ಶಿಯಲ್ ಸಂಸ್ಥೆಗಳು ಹಿರಿಯ ನಾಗರಿಕರಿಗೆ ಹೆಚ್ಚಿನ ಫಿಕ್ಸೆಡ್ ಡೆಪಾಸಿಟ್ ಬಡ್ಡಿ ದರಗಳನ್ನು ನೀಡುತ್ತವೆ, ಇದು ಸಾಮಾನ್ಯವಾಗಿ ನಿಯಮಿತ ಎಫ್‌ಡಿ ದರಗಳಿಗಿಂತ 0.25-0.50% ಹೆಚ್ಚಾಗಿರುತ್ತದೆ. ಜೀವಮಾನದ ಉಳಿತಾಯವನ್ನು ಹೂಡಿಕೆ ಮಾಡಲು ಮತ್ತು ನಿಯಮಿತ ಆದಾಯದ ಮೂಲವನ್ನು ರಚಿಸುವ ಫಿಕ್ಸೆಡ್ ಡೆಪಾಸಿಟ್‌ಗಳು ಹಿರಿಯ ನಾಗರಿಕರಿಗೆ ಬಹಳ ಸೂಕ್ತವಾಗಿದೆ.
- ಎಫ್‌ಡಿ ಅಕೌಂಟ್‌ಗಳ ಅವಧಿಯು ಫ್ಲೆಕ್ಸಿಬಲ್ ಆಗಿದೆ: ಎಫ್‌ಡಿ ಅವಧಿಯು 7 ದಿನಗಳಿಂದ 10 ವರ್ಷಗಳ ನಡುವೆ ಇದ್ದು, ಎಫ್‌ಡಿ ಅಕೌಂಟ್‌ನ ಅವಧಿಯನ್ನು ನಿರ್ಧರಿಸಲು ಡೆಪಾಸಿಟರ್‌ಗಳಿಗೆ ಸಾಕಷ್ಟು ಫ್ಲೆಕ್ಸಿಬಿಲಿಟಿಯನ್ನು ನೀಡುತ್ತದೆ. ಇದಲ್ಲದೆ, ಡೆಪಾಸಿಟರ್ ಅದೇ ಅವಧಿಗೆ ಅಥವಾ ಮೆಚ್ಯೂರಿಟಿ ಸಮಯದ ಅಗತ್ಯಕ್ಕೆ ಅನುಗುಣವಾಗಿ ಎಫ್‌ಡಿಯ ಕಾಲಾವಧಿಯನ್ನು ಕೂಡ ವಿಸ್ತರಿಸಬಹುದು. ಸಾಮಾನ್ಯವಾಗಿ, ಡೆಪಾಸಿಟರ್‌ಗಳು ಗರಿಷ್ಠ ಬಡ್ಡಿ ದರಗಳನ್ನು ನೀಡುವ ಕಾಲಾವಧಿಯಲ್ಲಿ ಹೂಡಿಕೆ ಮಾಡುವ ಒಲವು ತೋರುತ್ತಾರೆ. ಸಾಮಾನ್ಯವಾಗಿ, ಡೆಪಾಸಿಟರ್‌ಗಳು ಗರಿಷ್ಠ ಬಡ್ಡಿ ದರಗಳನ್ನು ನೀಡುವ ಕಾಲಾವಧಿಯಲ್ಲಿ ಹೂಡಿಕೆ ಮಾಡುವ ಒಲವು ತೋರುತ್ತಾರೆ.
- ಎಫ್‌ಡಿ ನಿಮಗೆ ಸುಲಭವಾದ ಲಿಕ್ವಿಡೇಶನ್ ಆಯ್ಕೆಯನ್ನು ನೀಡುತ್ತದೆ: ಮೆಚ್ಯೂರಿಟಿಗೆ ಮೊದಲು ಹಣದ ಅಗತ್ಯವಿದ್ದರೆ, ಹಣಕಾಸು ಸಂಸ್ಥೆಗೆ ಸಣ್ಣ ದಂಡವನ್ನು ಪಾವತಿಸುವ ಮೂಲಕ ಫಿಕ್ಸೆಡ್ ಡೆಪಾಸಿಟ್‌ಗಳನ್ನು ಸುಲಭವಾಗಿ ಲಿಕ್ವಿಡೇಟ್ ಮಾಡಬಹುದು. ಕೆಲವು ಹಣಕಾಸು ಸಂಸ್ಥೆಗಳು ಡೆಪಾಸಿಟ್ ಸೌಲಭ್ಯಗಳ ಮೇಲೆ ಲೋನ್‌ಗಳನ್ನು ಕೂಡ ಒದಗಿಸುತ್ತವೆ.
ಓದಲೇಬೇಕಾದವು: ಆನ್ಲೈನ್‌ನಲ್ಲಿ ಫಿಕ್ಸೆಡ್ ಡೆಪಾಸಿಟ್ ಅಕೌಂಟ್ ತೆರೆಯುವುದು ಹೇಗೆ?
ಪಿಎನ್‌ಬಿ ಹೌಸಿಂಗ್ ಫೈನಾನ್ಸ್ ಎಫ್‌ಡಿ ಪ್ರಯೋಜನಗಳು
ಪಿಎನ್‌ಬಿ ಹೌಸಿಂಗ್, ಹೌಸಿಂಗ್ ಫೈನಾನ್ಸ್ ವಲಯದಲ್ಲಿ ಜನಪ್ರಿಯ ಹೆಸರಾಗಿದೆ ಮತ್ತು ಭಾರತದಲ್ಲಿ 2ನೇ ಅತಿ ದೊಡ್ಡ ಡೆಪಾಸಿಟ್-ಪಡೆಯುತ್ತಿರುವ ಎಚ್ಎಫ್‌ಸಿ ಆಗಿದೆ. ಇದು ತನ್ನ ಡೆಪಾಸಿಟರ್‌ಗಳಿಗೆ ವಿವಿಧ ಕಾಲಾವಧಿಗಳಲ್ಲಿ ಸ್ಪರ್ಧಾತ್ಮಕ ಫಿಕ್ಸೆಡ್ ಡೆಪಾಸಿಟ್ ದರಗಳನ್ನು ಒದಗಿಸುತ್ತದೆ.
ಫಿಕ್ಸೆಡ್ ಡೆಪಾಸಿಟ್‌ಗಳ (ಎಫ್‌ಡಿ) ಅಕೌಂಟ್‌ನ ಅನುಕೂಲಗಳು:
- ಹೆಚ್ಚಿನ ಸುರಕ್ಷತಾ ಮಾನದಂಡ: ಫಿಕ್ಸೆಡ್ ಡೆಪಾಸಿಟ್‌ಗಳಿಗೆ ಕ್ರಿಸಿಲ್ ಎಫ್‌ಎಎಎ+/ಸ್ಥಿರ ರೇಟಿಂಗ್ ನೀಡಲಾಗಿದೆ, ಇದು ಹೆಚ್ಚಿನ ಸುರಕ್ಷತಾ ಮಾನದಂಡ ಮತ್ತು ಸಮಯಕ್ಕೆ ಸರಿಯಾದ ಬಡ್ಡಿ ಮತ್ತು ಅಸಲು ಮರುಪಾವತಿಯನ್ನು ಸೂಚಿಸುತ್ತದೆ.
- ಹೆಚ್ಚಿನ ಬಡ್ಡಿ ದರ: ಇದು ವಿವಿಧ ಅವಧಿಯಲ್ಲಿ ಹೆಚ್ಚಿನ ಫಿಕ್ಸೆಡ್ ಡೆಪಾಸಿಟ್ ದರಗಳನ್ನು ನೀಡುತ್ತದೆ.
- ಹಿರಿಯ ನಾಗರಿಕರಿಗೆ ಪ್ರಯೋಜನಗಳು: ಇದು ಎಲ್ಲಾ ಕಾಲಾವಧಿಯಲ್ಲಿ ಡೆಪಾಸಿಟ್‌ಗಳ ಮೇಲೆ 0.25% ಹೆಚ್ಚಿನ ಬಡ್ಡಿ ದರವನ್ನು ನೀಡುತ್ತದೆ.
- ಲೋನ್ ಸೌಲಭ್ಯ: ಪಿಎನ್‌ಬಿ ಹೌಸಿಂಗ್ ಒಟ್ಟು ಅಸಲು ಡೆಪಾಸಿಟ್‌ನ 75% ವರೆಗೆ ಫಿಕ್ಸೆಡ್ ಡೆಪಾಸಿಟ್‌ಗಳ ಮೇಲೆ ಲೋನ್ ಸೌಲಭ್ಯವನ್ನು ಒದಗಿಸುತ್ತದೆ
- ಬಡ್ಡಿ ಆದಾಯದ ಮೇಲೆ ಯಾವುದೇ ಟಿಡಿಎಸ್ ಇಲ್ಲ: ಪ್ರತಿ ಹಣಕಾಸು ವರ್ಷಕ್ಕೆ ₹ 5,000 ವರೆಗಿನ ಬಡ್ಡಿ ಆದಾಯದ ಮೇಲೆ ಮೂಲದಲ್ಲಿ ಯಾವುದೇ ತೆರಿಗೆಯನ್ನು ಕಡಿತಗೊಳಿಸಲಾಗುವುದಿಲ್ಲ
- ಅವಧಿ ಪೂರ್ವ ವಿತ್‌ಡ್ರಾವಲ್: 3 ತಿಂಗಳ ಕಡ್ಡಾಯ ಲಾಕ್-ಇನ್ ನಂತರ ಡೆಪಾಸಿಟ್‌ಗಳ ಅವಧಿ ಪೂರ್ವ ವಿತ್‌ಡ್ರಾವಲ್‌ಗೆ ಅನುಮತಿ ಇದೆ