ಈ ಆಧುನಿಕ ಜಗತ್ತಿನಲ್ಲಿ ಮನೆ ಖರೀದಿಸುವುದು ಅನೇಕ ವ್ಯಕ್ತಿಗಳಿಗೆ ಕನಸಾಗಿದೆ. ಅತ್ಯುತ್ತಮ ಆಸ್ತಿ ಮತ್ತು ಸರಿಯಾದ ಹಣಕಾಸಿನ ಯೋಜನೆಯನ್ನು ಅಂತಿಮಗೊಳಿಸುವ ಅಪಾರ ಕಠಿಣ ಪರಿಶ್ರಮದೊಂದಿಗೆ, ಈ ಕನಸನ್ನು ನನಸಾಗಿಸಲು ಜನರು ಹೋಮ್ ಲೋನ್‌ಗಳಿಗೆ ಅಪ್ಲೈ ಮಾಡುತ್ತಾರೆ.
ಡೌನ್ ಪೇಮೆಂಟ್ ಮಾಡಿದ ನಂತರ ಮನೆ ಖರೀದಿದಾರರು ಸಮಾನ ಮಾಸಿಕ ಕಂತುಗಳಲ್ಲಿ (ಇಎಂಐ) ಲೋನ್ ಮೊತ್ತವನ್ನು ಮರುಪಾವತಿಸಲು ಆರಂಭಿಸುತ್ತಾರೆ. ಹೋಮ್ ಲೋನ್ ಹೊಂದಿದ್ದರೂ, ಕೆಲವು ಸಂದರ್ಭಗಳಲ್ಲಿ ವ್ಯಕ್ತಿಗಳಿಗೆ ಹೆಚ್ಚಿನ ಹಣದ ಅಗತ್ಯವಿರಬಹುದು. ಅಂತಹ ಪರಿಸ್ಥಿತಿಯಲ್ಲಿ, ಅನೇಕ ಹಣಕಾಸು ಸಂಸ್ಥೆಗಳು ತಮ್ಮ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಹೋಮ್ ಲೋನ್ ಟಾಪ್-ಅಪ್ ಅನ್ನು ಒದಗಿಸುತ್ತವೆ. ತಕ್ಷಣದ ಹಣದ ಅವಶ್ಯಕತೆಯು ಈ ಹೋಮ್ ಲೋನ್ ಟಾಪ್-ಅಪ್‌ನಿಂದ ತ್ವರಿತವಾಗಿ ಕಡಿಮೆಯಾಗಬಹುದು.
ನೀವು ಹೋಮ್ ಲೋನ್ ಅರ್ಜಿದಾರರಾಗಿದ್ದರೆ ಮತ್ತು ಹೆಚ್ಚುವರಿ ಹಣದ ಅಗತ್ಯವಿದ್ದರೆ, ನೀವು ಖಂಡಿತವಾಗಿಯೂ ತ್ವರಿತ ಹೋಮ್ ಲೋನ್ ಟಾಪ್-ಅಪ್ ಆಯ್ಕೆ ಮಾಡುವುದನ್ನು ಪರಿಗಣಿಸಬೇಕು.
ಹೋಮ್ ಲೋನ್ ಮೇಲೆ ಟಾಪ್-ಅಪ್ ಲೋನ್ ಎಂದರೇನು?
ಹೋಮ್ ಲೋನ್ ಮೇಲಿನ ಟಾಪ್-ಅಪ್ ನಿಮ್ಮ ಪ್ರಸ್ತುತ ಹೋಮ್ ಲೋನ್‌ಗೆ ಹೆಚ್ಚುವರಿಯಾಗಿ ಲೋನ್ ಪಡೆದ ಹೆಚ್ಚುವರಿ ಮೊತ್ತವಾಗಿದೆ. ಈ ಹೆಚ್ಚುವರಿ ಹಣವನ್ನು ಮನೆ ಸುಧಾರಣೆಗಳು, ಬಿಸಿನೆಸ್ ವಿಸ್ತರಣೆ, ಅನಿರೀಕ್ಷಿತ ವೈದ್ಯಕೀಯ ವೆಚ್ಚಗಳು, ಪ್ರಯಾಣ, ಶಿಕ್ಷಣ ಇತ್ಯಾದಿಗಳಿಗೆ ಬಳಸಬಹುದು. ನಿಮ್ಮ ಇಎಂಐ ಅನ್ನು ಸ್ವಲ್ಪ ಹೆಚ್ಚಿಸುವ ಮೂಲಕ ನೀವು ಈ ಹೆಚ್ಚುವರಿ ಮೊತ್ತವನ್ನು ಮರಳಿ ಪಾವತಿಸಬಹುದು.
ಅನೇಕ ಹಣಕಾಸು ಸಂಸ್ಥೆಗಳು ನಿಮಗಾಗಿ ಹೆಚ್ಚು ಪರಿಣಾಮಕಾರಿ ಆಗಿರುವ ಟಾಪ್-ಅಪ್ ಹೌಸಿಂಗ್ ಲೋನ್ ಆಯ್ಕೆ ಮಾಡುವ ಆಕರ್ಷಕ ಹೋಮ್ ಲೋನ್ ಫೀಚರ್‌ಗಳನ್ನು ಒದಗಿಸುತ್ತವೆ. ಇವುಗಳ ಕೆಲವು ಪ್ರಯೋಜನಗಳನ್ನು ಈ ಲೇಖನದಲ್ಲಿ ನಮೂದಿಸಲಾಗಿದೆ.
ತ್ವರಿತ ಹೋಮ್ ಲೋನ್ ಟಾಪ್-ಅಪ್‌ನ ಪ್ರಯೋಜನಗಳು
ದೀರ್ಘ ಮರುಪಾವತಿ ಅವಧಿ
ನೀವು ಹೋಮ್ ಲೋನ್ ಟಾಪ್-ಅಪ್ ಆಯ್ಕೆ ಮಾಡಿದಾಗ, ಪರ್ಸನಲ್ ಅಥವಾ ಬಿಸಿನೆಸ್ ಲೋನ್‌ಗೆ ಹೋಲಿಸಿದರೆ ಮರುಪಾವತಿ ಅವಧಿಯು ಹೆಚ್ಚು ದೀರ್ಘವಾಗಿರುತ್ತದೆ. ಉದಾಹರಣೆಗೆ, ನೀವು 15 ವರ್ಷಗಳ ಅವಧಿಯ ಹೋಮ್ ಲೋನ್ ಹೊಂದಿದ್ದರೆ, ನೀವು ಕಡಿಮೆ ಅಥವಾ ಅದೇ ಅವಧಿಯ ಹೋಮ್ ಲೋನ್ ಟಾಪ್-ಅಪ್‌ಗೆ ಅಪ್ಲೈ ಮಾಡಬಹುದು. ದೀರ್ಘ ಮರುಪಾವತಿ ಅವಧಿಯು ಇಎಂಐಗಳನ್ನು ಕಡಿಮೆ ಮಾಡುವ ಮೂಲಕ ವೆಚ್ಚಗಳ ಹೊರೆಯನ್ನು ಸುಲಭಗೊಳಿಸಬಹುದು ಮತ್ತು ನಿಮ್ಮ ಹಣಕಾಸನ್ನು ಕಾರ್ಯತಂತ್ರವಾಗಿ ಯೋಜಿಸಲು ನಿಮಗೆ ಸಹಾಯ ಮಾಡಬಹುದು. ಟಾಪ್-ಅಪ್ ಲೋನ್ ಗರಿಷ್ಠ 15 ವರ್ಷಗಳ ಅವಧಿಯೊಂದಿಗೆ ಅಸ್ತಿತ್ವದಲ್ಲಿರುವ ಹೋಮ್ ಲೋನ್‌ಗೆ ಸಮಾನವಾಗಿ ನಡೆಯುತ್ತದೆ.
ಕಡಿಮೆ ಬಡ್ಡಿದರಗಳು
ಹೋಮ್ ಲೋನ್‌ಗಳು "ಸುರಕ್ಷಿತ ಲೋನ್‌ಗಳ" ವರ್ಗದಲ್ಲಿ ಬರುತ್ತವೆ ಹಾಗೂ ಸಾಮಾನ್ಯವಾಗಿ ಕಡಿಮೆ ಬಡ್ಡಿ ದರಗಳನ್ನು ಹೊಂದಿರುತ್ತವೆ. ಪರಿಣಾಮವಾಗಿ, ನೀವು ತ್ವರಿತ ಹೋಮ್ ಲೋನ್ ಟಾಪ್-ಅಪ್ ಆಯ್ಕೆ ಮಾಡಿದರೆ, ಹೆಚ್ಚುವರಿ ಮೊತ್ತದ ಮೇಲಿನ ಬಡ್ಡಿ ದರವೂ ಕಡಿಮೆಯಾಗಿರುತ್ತದೆ. ನಿಮ್ಮ ಅಸ್ತಿತ್ವದಲ್ಲಿರುವ ಹೋಮ್ ಲೋನ್‌ಗಿಂತ ಇದು ಸ್ವಲ್ಪ ಹೆಚ್ಚುವರಿಯಾಗಿರಬಹುದು.
ತ್ವರಿತ ಪ್ರಕ್ರಿಯೆ
ಹೋಮ್ ಲೋನ್ ಮೇಲಿನ ಟಾಪ್-ಅಪ್ ಲೋನ್‌ನ ಪ್ರಯೋಜನಗಳಲ್ಲಿ ಅದರ ತ್ವರಿತ ಪ್ರಕ್ರಿಯೆ ಪ್ರಮುಖವಾಗಿದೆ. ಅನೇಕ ಹಣಕಾಸು ಸಂಸ್ಥೆಗಳು ಅರ್ಜಿದಾರರಿಗೆ ಮುಂಚಿತ-ಅನುಮೋದಿತ ಟಾಪ್-ಅಪ್ ಲೋನ್‌ಗೆ ಅಪ್ಲೈ ಮಾಡಲು ಅನುವು ಮಾಡಿಕೊಡುತ್ತವೆ. ಟಾಪ್-ಅಪ್ ಹೌಸಿಂಗ್ ಲೋನ್‌ಗೆ ಅಪ್ಲೈ ಮಾಡುವಾಗ, ಕನಿಷ್ಠ ಡಾಕ್ಯುಮೆಂಟೇಶನ್ ಮಾತ್ರ ಅಗತ್ಯವಿದೆ. ಸಾಮಾನ್ಯವಾಗಿ, ತ್ವರಿತ ಹೋಮ್ ಲೋನ್ ಟಾಪ್-ಅಪ್ ಅನ್ನು ಕೆಲವು ದಿನಗಳಲ್ಲಿ ವಿತರಿಸಲಾಗುತ್ತದೆ.
ಹೆಚ್ಚಿನ ಲೋನ್ ಮೊತ್ತ
ನೀವು ಇಎಂಐ ಪಾವತಿಗಳಲ್ಲಿ ಸ್ಥಿರವಾಗಿರುವಾಗ ಮತ್ತು ಗಣನೀಯ ಮೊತ್ತವನ್ನು ಮರುಪಾವತಿಸಿದಾಗ ಹೆಚ್ಚಿನ ಟಾಪ್-ಅಪ್ ಲೋನ್ ಮೊತ್ತವನ್ನು ಪಡೆಯುವ ಸಾಧ್ಯತೆಗಳು ಹೆಚ್ಚಾಗುತ್ತವೆ. ಟಾಪ್-ಅಪ್ ಲೋನ್ ನೀಡುವ ಮೊದಲು ಹಣಕಾಸು ಸಂಸ್ಥೆಯು ಕ್ರೆಡಿಟ್ ಸ್ಕೋರ್ ಅನ್ನು ಪರಿಶೀಲಿಸುತ್ತದೆ.
ತೆರಿಗೆಯ ಪ್ರಯೋಜನಗಳು
ಟಾಪ್-ಅಪ್ ಹೋಮ್ ಲೋನ್ ಅನ್ನು ಸ್ವಾಧೀನ, ನಿರ್ಮಾಣ, ನವೀಕರಣಗಳು ಮತ್ತು ದುರಸ್ತಿಗಾಗಿ ಬಳಸಿದರೆ, ಸೆಕ್ಷನ್ 24ಬಿ ಮತ್ತು ಸೆಕ್ಷನ್ 80ಸಿ ಮಿತಿಗಳ ಅನುಸಾರ ತೆರಿಗೆ ಕಡಿತಗಳು ಅನ್ವಯವಾಗುತ್ತವೆ. ಹೆಚ್ಚಿನ ವಿವರಗಳಿಗಾಗಿ ನಿಮ್ಮ ಹಣಕಾಸು ಸಲಹೆಗಾರರನ್ನು ಸಂಪರ್ಕಿಸಿ.
ತ್ವರಿತ ಹೋಮ್ ಲೋನ್ ಟಾಪ್-ಅಪ್‌ಗೆ ಅರ್ಹತಾ ಮಾನದಂಡ
ನೀವು ಈಗಾಗಲೇ ನಿರ್ದಿಷ್ಟ ಹಣಕಾಸು ಸಂಸ್ಥೆಯ ಅಸ್ತಿತ್ವದಲ್ಲಿರುವ ಗ್ರಾಹಕರಾಗಿದ್ದರೆ ಮಾತ್ರ ಹೋಮ್ ಲೋನ್ ಮೇಲೆ ಟಾಪ್-ಅಪ್ ಲೋನ್‌ಗೆ ಅಪ್ಲೈ ಮಾಡಬಹುದು. ನೀವು ಕನಿಷ್ಠ ಒಂದು ವರ್ಷದವರೆಗೆ ನಿಮ್ಮ ಇಎಂಐ ಅನ್ನು ಯಶಸ್ವಿಯಾಗಿ ಮರುಪಾವತಿಸದ ಹೊರತು ಸಂಸ್ಥೆಯು ನಿಮಗೆ ಹೋಮ್ ಲೋನ್ ಟಾಪ್-ಅಪ್ ಅನ್ನು ನೀಡುವುದಿಲ್ಲ.
ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಬಳಸಿಕೊಂಡು ನೀವು ಹೋಮ್ ಲೋನ್ ಅರ್ಹತೆಯನ್ನು ಲೆಕ್ಕ ಹಾಕಬಹುದು. ಎಲ್ಲಾ ಅವಶ್ಯಕತೆಗಳನ್ನು ಪೂರೈಸಿದ ನಂತರ, ಹಣಕಾಸು ಸಂಸ್ಥೆಯು ಟಾಪ್-ಅಪ್ ಲೋನ್ ಮೊತ್ತವನ್ನು ವಿತರಿಸುತ್ತದೆ.
ತ್ವರಿತ ಹೋಮ್ ಲೋನ್ ಟಾಪ್-ಅಪ್‌ಗೆ ಅಪ್ಲೈ ಮಾಡುವಲ್ಲಿ ಒಳಗೊಂಡಿರುವ ಹಂತಗಳು
ಈಗ ನಿಮಗೆ ತಿಳಿದಿರುವಂತೆ, ತ್ವರಿತ ಹೋಮ್ ಲೋನ್ ಟಾಪ್-ಅಪ್‌ಗೆ ಅಪ್ಲೈ ಮಾಡುವ ಮೊದಲು ನೀವು ಅಸ್ತಿತ್ವದಲ್ಲಿರುವ ಹೋಮ್ ಲೋನ್ ಅಭ್ಯರ್ಥಿಯಾಗಿರಬೇಕು. ಕನಿಷ್ಠ ಡಾಕ್ಯುಮೆಂಟೇಶನ್‌ನೊಂದಿಗೆ, ನಿಮ್ಮ ಹಣಕಾಸು ಸಂಸ್ಥೆಯಿಂದ ನೀವು ಟಾಪ್-ಅಪ್ ಹೌಸಿಂಗ್ ಲೋನ್ ಪಡೆಯಬಹುದು.
ಪಿಎನ್‌ಬಿ ಹೌಸಿಂಗ್ ಅವಶ್ಯಕತೆ ಮತ್ತು ಅರ್ಹತೆಯ ಆಧಾರದ ಮೇಲೆ ತಮ್ಮ ಎಲ್ಲಾ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ತ್ವರಿತ ಹೋಮ್ ಲೋನ್ ಟಾಪ್-ಅಪ್ ಅನ್ನು ಒದಗಿಸುತ್ತದೆ. ಅರ್ಹತಾ ಮಾನದಂಡಗಳ ಆಧಾರದ ಮೇಲೆ ತಮ್ಮ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಕನಿಷ್ಠ ಡಾಕ್ಯುಮೆಂಟೇಶನ್‌ನೊಂದಿಗೆ ಪಿಎನ್‌ಬಿ ಹೌಸಿಂಗ್ ಈ ಲೋನ್‌ಗಳನ್ನು ಒದಗಿಸುತ್ತದೆ. ಜೊತೆಗೆ, ವಿತರಣೆಯು ತೊಂದರೆ ರಹಿತವಾಗಿದೆ.
ಮುಕ್ತಾಯ
ತ್ವರಿತ ಹೋಮ್ ಲೋನ್ ಟಾಪ್-ಅಪ್ ನಿಮ್ಮ ಅಸ್ತಿತ್ವದಲ್ಲಿರುವ ಹೋಮ್ ಲೋನ್ ಮೇಲೆ ಹೆಚ್ಚಿನ ಹಣವನ್ನು ಲೋನ್ ಆಗಿ ಪಡೆಯಲು ಉತ್ತಮ ಮಾರ್ಗವಾಗಿದೆ. ಈ ಹಣವನ್ನು ವಿವಿಧ ಹಣಕಾಸಿನ ಅವಶ್ಯಕತೆಗಳಿಗೆ ಬಳಸಬಹುದು. ಇಎಂಐ ಮತ್ತು ಕಾಲಾವಧಿಯೊಂದಿಗೆ ಈ ಲೋನ್‌ನ ಮರುಪಾವತಿಯನ್ನು ಮಾಡಬಹುದು.
ಪಿಎನ್‌ಬಿ ಹೌಸಿಂಗ್ ಯಾವುದೇ ಹೆಚ್ಚುವರಿ ಮತ್ತು ತಕ್ಷಣದ ಹಣಕಾಸಿನ ಅವಶ್ಯಕತೆಗಳಿಗೆ ತ್ವರಿತ, ಸುಲಭ ಮತ್ತು ತೊಂದರೆ ರಹಿತ ಹೋಮ್ ಲೋನ್ ಟಾಪ್-ಅಪ್ ಅನ್ನು ಒದಗಿಸುತ್ತದೆ.