ರೆಪೋ ದರವು ದೇಶದ ಕೇಂದ್ರ ಬ್ಯಾಂಕ್ (ಭಾರತದ ವಿಷಯದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್) ಹಣದ ಕೊರತೆಯ ಸಂದರ್ಭದಲ್ಲಿ ವಾಣಿಜ್ಯ ಬ್ಯಾಂಕುಗಳಿಗೆ ಸಾಲವನ್ನು ನೀಡುವ ದರವಾಗಿದೆ. ಹಣದುಬ್ಬರವನ್ನು ನಿಯಂತ್ರಿಸಲು ಹಣಕಾಸು ಅಧಿಕಾರಿಗಳು ರೆಪೋ ದರವನ್ನು ಬಳಸುತ್ತಾರೆ.
ರೆಪೋ ದರವು ಹೇಗೆ ಕೆಲಸ ಮಾಡುತ್ತದೆ?
ರೆಪೋ ದರಗಳು ಯಾವುದೇ ಕೇಂದ್ರ ಬ್ಯಾಂಕ್ ತನ್ನ ಕಿಟ್ಟಿಯಲ್ಲಿ ಹೊಂದಿರುವ ಅತ್ಯಂತ ನಿರ್ಣಾಯಕ ಸಾಧನಗಳಲ್ಲಿ ಒಂದಾಗಿದ್ದು, ಇದರ ಮೂಲಕ ಅದು ಆರ್ಥಿಕತೆಯ ಉತ್ತಮ ಮತ್ತು ದೃಢವಾದ ಹಣಕಾಸು ವ್ಯವಸ್ಥೆಯನ್ನು ನಿರ್ವಹಿಸಲು ಮತ್ತು ಉಳಿಸಿಕೊಂಡು ಹೋಗಲು ತನ್ನ ಅಧಿಕಾರವನ್ನು ಕಾರ್ಯಗತಗೊಳಿಸುತ್ತದೆ. ಇದನ್ನು ಕೇಂದ್ರ ಬ್ಯಾಂಕ್ ವಾಣಿಜ್ಯ ಬ್ಯಾಂಕುಗಳಿಗೆ ಹಣವನ್ನು ನೀಡುವ ಬಡ್ಡಿ ದರವೆಂದು ವಿಸ್ತಾರವಾಗಿ ವ್ಯಾಖ್ಯಾನಿಸಲಾಗಿದೆ. ಭಾರತದಲ್ಲಿನ ಕೇಂದ್ರ ಬ್ಯಾಂಕ್ ಅಂದರೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹಣಕಾಸು ವ್ಯವಸ್ಥೆಯಲ್ಲಿ ಆರೋಗ್ಯಕರ ಮತ್ತು ಸುಸ್ಥಿರ ಲಿಕ್ವಿಡಿಟಿಯನ್ನು ನಿರ್ವಹಿಸಲು ಮತ್ತು ಉಳಿಸಿಕೊಂಡು ಹೋಗಲು ರೆಪೋ ದರವನ್ನು ಬಳಸುತ್ತದೆ. ಫಂಡ್‌ಗಳ ಕೊರತೆ ಇರುವಾಗ, ಕಮರ್ಷಿಯಲ್ ಬ್ಯಾಂಕ್‌ಗಳು ಆರ್‌ಬಿಐನಿಂದ ಹಣವನ್ನು ಸಾಲ ಪಡೆಯುತ್ತವೆ, ಇದನ್ನು ರೆಪೋ ದರದ ಪ್ರಕಾರ ಮರಳಿ ಪಾವತಿಸಲಾಗುತ್ತದೆ. ಬೆಲೆಗಳನ್ನು ನಿಯಂತ್ರಿಸಲು ಮತ್ತು ಸಾಲಗಳನ್ನು ನಿರ್ಬಂಧಿಸಲು ಅಗತ್ಯವಿದ್ದಾಗ ಕೇಂದ್ರ ಬ್ಯಾಂಕ್ ರೆಪೋ ದರವನ್ನು ಹೆಚ್ಚಿಸುತ್ತದೆ. ಮತ್ತೊಂದೆಡೆ, ಮಾರುಕಟ್ಟೆಗೆ ಹೆಚ್ಚು ಹಣವನ್ನು ಸೇರಿಸುವ ಮತ್ತು ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸುವ ಅಗತ್ಯವಿದ್ದಾಗ ರೆಪೋ ದರವನ್ನು ಕಡಿಮೆ ಮಾಡಲಾಗುತ್ತದೆ.
ರಿವರ್ಸ್ ರೆಪೋ ದರದ ಅರ್ಥ
ಕೇಂದ್ರ ಬ್ಯಾಂಕಿನಲ್ಲಿ ತಮ್ಮ ಹೆಚ್ಚುವರಿ ಹಣವನ್ನು ಇರಿಸಲು ಆರ್‌ಬಿಐ ವಾಣಿಜ್ಯ ಬ್ಯಾಂಕುಗಳಿಗೆ ನೀಡುವ ದರ. ರಿವರ್ಸ್ ರೆಪೋ ದರವು ಮಾರುಕಟ್ಟೆಯಲ್ಲಿ ಹಣದ ಹರಿವನ್ನು ನಿರ್ವಹಿಸಲು ಆರ್‌ಬಿಐ ನಿಯಂತ್ರಿಸುವ ಹಣಕಾಸಿನ ಪಾಲಿಸಿ ಕೂಡ ಆಗಿದೆ. ಅವಶ್ಯಕತೆಯ ಪ್ರಕಾರ, ಆರ್‌ಬಿಐ ವಾಣಿಜ್ಯ ಬ್ಯಾಂಕುಗಳಿಂದ ಹಣವನ್ನು ಪಡೆಯುತ್ತದೆ ಮತ್ತು ಅನ್ವಯವಾಗುವ ರಿವರ್ಸ್ ರೆಪೋ ದರದ ಪ್ರಕಾರ ಅವುಗಳಿಗೆ ಬಡ್ಡಿಯನ್ನು ಪಾವತಿಸುತ್ತದೆ. ಒಂದು ನಿರ್ದಿಷ್ಟ ಸಮಯದಲ್ಲಿ, ಆರ್‌ಬಿಐ ಒದಗಿಸುವ ರಿವರ್ಸ್ ರೆಪೋ ದರವು ಸಾಮಾನ್ಯವಾಗಿ ರೆಪೋ ದರಕ್ಕಿಂತ ಕಡಿಮೆಯಾಗಿರುತ್ತದೆ. ಆರ್ಥಿಕತೆಯಲ್ಲಿ ಲಿಕ್ವಿಡಿಟಿಯನ್ನು ನಿಯಂತ್ರಿಸಲು ರೆಪೋ ದರವನ್ನು ಬಳಸಿದಾಗ, ಮಾರುಕಟ್ಟೆಯಲ್ಲಿ ನಗದು ಹರಿವನ್ನು ನಿಯಂತ್ರಿಸಲು ರಿವರ್ಸ್ ರೆಪೋ ದರವನ್ನು ಬಳಸಲಾಗುತ್ತದೆ. ರೆಪೋ ದರಕ್ಕೆ ವಿರುದ್ಧವಾಗಿ, ಕೇಂದ್ರ ಬ್ಯಾಂಕಿನಲ್ಲಿ ಡೆಪಾಸಿಟ್‌ಗಳನ್ನು ಮಾಡಲು ಮತ್ತು ಹಣದುಬ್ಬರದ ಸಮಯದಲ್ಲಿ ಆದಾಯವನ್ನು ಗಳಿಸಲು ವಾಣಿಜ್ಯ ಬ್ಯಾಂಕುಗಳನ್ನು ಪ್ರೋತ್ಸಾಹಿಸಲು ಆರ್‌ಬಿಐ ರಿವರ್ಸ್ ರೆಪೋ ದರವನ್ನು ಹೆಚ್ಚಿಸುತ್ತದೆ.
ಓದಲೇಬೇಕಾದವು: ಫಿಕ್ಸೆಡ್ ವರ್ಸಸ್ ಫ್ಲೋಟಿಂಗ್ ಬಡ್ಡಿ ದರ: ಹೋಮ್ ಲೋನ್‌ಗೆ ಯಾವುದು ಉತ್ತಮ?
ರೆಪೋ ದರ ಮತ್ತು I ಹೋಮ್ I ಲೋನ್‌ಗಳ ಮೇಲೆ ಅದರ ಪರಿಣಾಮ
ರೆಪೋ ದರದ ಹೆಚ್ಚಳ ಎಂದರೆ ಆರ್‌ಬಿಐನಿಂದ ವಾಣಿಜ್ಯ ಬ್ಯಾಂಕುಗಳು ಆರ್‌ಬಿಐನಿಂದ ಪಡೆಯುವ ಹಣಕ್ಕೆ ಹೆಚ್ಚಿನ ಬಡ್ಡಿಯನ್ನು ಪಾವತಿಸಬೇಕು. ಆದ್ದರಿಂದ, ರೆಪೋ ದರದಲ್ಲಿನ ಬದಲಾವಣೆಯು ಅಂತಿಮವಾಗಿ ಹೋಮ್ ಲೋನ್‌ಗಳಂತಹ ಸಾರ್ವಜನಿಕ ಸಾಲಗಳ ಮೇಲೆ ಪರಿಣಾಮ ಬೀರುತ್ತದೆ . ಕಮರ್ಷಿಯಲ್ ಬ್ಯಾಂಕ್‌ಗಳು ಲೋನ್‌ಗಳ ಮೇಲೆ ವಿಧಿಸುವ ಬಡ್ಡಿಯಿಂದ ಹಿಡಿದು ಡೆಪಾಸಿಟ್‌ಗಳಿಂದ ಆದಾಯದವರೆಗೆ ಪರೋಕ್ಷವಾಗಿ ರೆಪೋ ದರವನ್ನು ಅವಲಂಬಿಸಿರುತ್ತವೆ.
ರೆಪೋ ದರದಲ್ಲಿ ಹೆಚ್ಚಳವಿದ್ದಾಗ, ಹೋಮ್ ಲೋನ್‌ಗಳ ಬೆಲೆ ಹೆಚ್ಚಾಗುತ್ತದೆ ಮತ್ತು ಫ್ಲೋಟಿಂಗ್ ಬಡ್ಡಿ ದರಗಳನ್ನು ಹೊಂದಿರುವ ಅಸ್ತಿತ್ವದಲ್ಲಿರುವ ಹೆಚ್ಚಿನ ಹೋಮ್ ಲೋನ್‌ಗಳು ತಮ್ಮ ಇಎಂಐಗಳಲ್ಲಿ (ಸಮನಾದ ಮಾಸಿಕ ಕಂತುಗಳು) ಹೆಚ್ಚಳವನ್ನು ನೋಡುತ್ತವೆ.
ಹೆಚ್ಚುವರಿಯಾಗಿ, ಅಸ್ತಿತ್ವದಲ್ಲಿರುವ ಸಾಲಗಾರರಿಗೆ ಬಡ್ಡಿದರಗಳು ಹಣಕಾಸು ಸಂಸ್ಥೆಯ ಆಂತರಿಕ ಮಾನದಂಡಗಳ ದರಕ್ಕೆ ಸಂಬಂಧಿಸಿವೆ, ಇದು ಪರೋಕ್ಷವಾಗಿ ಪ್ರಸ್ತುತ ರೆಪೋ ದರವನ್ನು ಅಂದರೆ ಮಾರುಕಟ್ಟೆಯಿಂದ ಹಣವನ್ನು ಎರವಲು ಪಡೆಯುವ ವೆಚ್ಚವನ್ನು ಅವಲಂಬಿಸಿದೆ. ಅನ್ವಯವಾಗುವ ಬಡ್ಡಿ ದರ, ಹಾಗಾಗಿ ಸಾಲದ ವೆಚ್ಚ, ಆಂತರಿಕ ಬೆಂಚ್‌ಮಾರ್ಕ್ ದರ ಮತ್ತು ಕ್ರೆಡಿಟ್ ಸ್ಪ್ರೆಡ್‌ನಲ್ಲಿನ ಅಂಶಗಳನ್ನು ಪರಿಗಣಿಸಿದ ನಂತರ ಲೆಕ್ಕ ಹಾಕಲಾಗುತ್ತದೆ.
ರೆಪೋ ದರವು ಇಎಂಐ ಮೇಲೆ ಹೇಗೆ ಪರಿಣಾಮ ಬೀರುತ್ತದೆ
ಉದಾಹರಣೆಗೆ, 7% ಮಾಸಿಕ ಬಡ್ಡಿಯಲ್ಲಿ 20 ವರ್ಷಗಳ ಅವಧಿಯೊಂದಿಗೆ ₹ 50 ಲಕ್ಷದ ಹೋಮ್ ಲೋನ್ ಮೇಲೆ, ದರವು 7.4% ಗೆ ಹೆಚ್ಚಾದರೆ, ಇಎಂಐ ₹ 38,765 ರಿಂದ ₹ 39,974 ಗೆ ಹೆಚ್ಚಾಗುತ್ತದೆ. ಪರ್ಯಾಯವಾಗಿ, ಲೋನ್ ಅವಧಿಯನ್ನು ಹೆಚ್ಚಿಸುವ ಮೂಲಕ ಬಡ್ಡಿ ದರದಲ್ಲಿ ಹೆಚ್ಚಳವನ್ನು ಅನುಕೂಲ ರೂಪಕ್ಕೆ ತರಬಹುದು, ಇದು ಇಎಂಐ ಅನ್ನು ಒಂದೇ ರೀತಿಯಲ್ಲಿ ಇಟ್ಟುಕೊಳ್ಳುತ್ತದೆ. ಇಂತಹ ಯಾವುದೇ ಸಂದರ್ಭದಲ್ಲಿ, ಹಣಕಾಸು ಸಂಸ್ಥೆಯು ತನ್ನ ಗ್ರಾಹಕರಿಗೆ ಇಎಂಐ ಅಥವಾ ಲೋನ್ ಕಾಲಾವಧಿಯ ಬಗ್ಗೆ ತಿಳಿಸುತ್ತದೆ.
ಪ್ರಸ್ತುತ ರೆಪೋ ದರ
ಜೂನ್ ದ್ವಿ-ಮಾಸಿಕ ಸಭೆಯಲ್ಲಿ, ಭಾರತೀಯ ರಿಸರ್ವ್ ಬ್ಯಾಂಕ್ ಜೂನ್ 8, 2022 ರಂದು ರೆಪೋ ದರವನ್ನು 50 ಬೇಸಿಸ್ ಪಾಯಿಂಟ್‌ಗಳಿಂದ 4.90% ಗೆ ಮತ್ತೆ ಹೆಚ್ಚಿಸಿತು. ಆಗಸ್ಟ್ 2018 ರ ನಂತರ ಮೊದಲ ಬಾರಿಗೆ, ರೆಪೋ ದರವನ್ನು ಮೇ 4, 2022 ರಂದು 40 ಬೇಸಿಸ್ ಪಾಯಿಂಟ್‌ಗಳಿಂದ 4.40% ಹೆಚ್ಚಿಸಲಾಯಿತು, ಇದು ಹಣಕಾಸು ವರ್ಷ 2022-2023 ರಿಂದ ಆರಂಭವಾಗಿದೆ.