ನೀವು ಲೋನ್ ಪಡೆದಾಗ, ನೀವು ಅದನ್ನು ನಿರ್ದಿಷ್ಟ ಸಮಯದ ಒಳಗೆ ಮರಳಿ ಪಾವತಿಸಬೇಕಾಗುತ್ತದೆ. ನಿಮಗೆ ತಿಳಿದಿರುವ ಹಾಗೆ, ಅಸಲು ಮೊತ್ತ ಮತ್ತು ಬಡ್ಡಿಯನ್ನು ಕೆಲವು ಮಾಸಿಕ ಕಂತುಗಳಲ್ಲಿ ಮರುಪಾವತಿಸಲಾಗುತ್ತದೆ. ಇಲ್ಲಿ, ಕಂತಿನ ವೇಳಾಪಟ್ಟಿಯನ್ನು ಸ್ಪಷ್ಟವಾಗಿ ವಿವರಿಸುವ ಚಾರ್ಟ್ ಗ್ರಾಹಕರ ಬಳಿ ಇದ್ದರೆ ಉತ್ತಮವಲ್ಲವೇ?
ಹಾಗಾಗಿಯೇ. ಇಲ್ಲಿ ಲೋನ್ ಮರುಪಾವತಿ ಶೆಡ್ಯೂಲ್ ಸಹಾಯಕ್ಕೆ ಬರುತ್ತದೆ. ಸರಳವಾಗಿ ಹೇಳುವುದಾದರೆ, ಮರುಪಾವತಿ ಶೆಡ್ಯೂಲ್ ಎಂಬುದು ನೀವು ನಿಯಮಿತ ಕಂತುಗಳ ಸರಣಿಯ ಮೂಲಕ ಹೋಮ್ ಲೋನ್ ಅನ್ನು ಹೇಗೆ ಮರುಪಾವತಿಸುತ್ತೀರಿ ಎಂದು ವಿವರಿಸುವ ಚಾರ್ಟ್ ಅಥವಾ ಗ್ರಾಫ್ ಆಗಿದೆ. ಈ ಕಂತುಗಳನ್ನು, ಅಸಲು ಮೊತ್ತ ಮತ್ತು ಬಡ್ಡಿ ಘಟಕವನ್ನು ಒಳಗೊಂಡಿರುವ ಇಎಂಐಗಳೆಂದು ಸಾಮಾನ್ಯವಾಗಿ ಕರೆಯಲಾಗುತ್ತದೆ.
ಪರ್ಯಾಯವಾಗಿ, ವೇಳಾಪಟ್ಟಿಯನ್ನು ಅಮೊರ್ಟೈಸೇಶನ್ ಚಾರ್ಟ್ ಅಥವಾ ಟೇಬಲ್ ಎಂದು ಕೂಡ ಕರೆಯಲಾಗುತ್ತದೆ.
ಅಮೊರ್ಟೈಸೇಶನ್ ಟೇಬಲ್ ಎಂದರೇನು?
ಹೋಮ್ ಲೋನ್ ಪೇಬ್ಯಾಕ್ ಶೆಡ್ಯೂಲನ್ನು ಅಮೊರ್ಟೈಸೇಶನ್ ಟೇಬಲ್ ಅಥವಾ ಅಮೊರ್ಟೈಸೇಶನ್ ಶೆಡ್ಯೂಲ್‌ನಲ್ಲಿ ವಿವರಿಸಲಾಗಿದೆ, ಇದನ್ನು ಸಾಲದಾತರು ಸಾಲಗಾರರೊಂದಿಗೆ ಹಂಚಿಕೊಳ್ಳುತ್ತಾರೆ. ಅಮೊರ್ಟೈಸೇಶನ್ ಎಂದರೆ ಲೋನ್ ಅವಧಿಯಲ್ಲಿ ಅಸಲು ಮತ್ತು ಲೋನ್ ಬಡ್ಡಿಯ ಮಾಸಿಕ ವಿಭಜನೆಯಾಗಿದೆ. ಸಾಮಾನ್ಯವಾಗಿ ಈ ಟೇಬಲ್ ರಚಿಸಲು ಲೋನ್ ಅಮೊರ್ಟೈಸೇಶನ್ ಕ್ಯಾಲ್ಕುಲೇಟರ್ ಬಳಸಲಾಗುತ್ತದೆ. ಲೋನ್ ಅವಧಿ ಮತ್ತು ಬಡ್ಡಿ ದರವನ್ನು ಅವಲಂಬಿಸಿ, ಸಾಲಗಾರರು ಮಾಸಿಕ ಇಎಂಐ ಅಸಲು ಮರುಪಾವತಿ ಮತ್ತು ಬಡ್ಡಿ ಪಾವತಿಗಳಿಗೆ ಹೇಗೆ ಹೋಗುತ್ತಿದೆ ಎಂಬುದನ್ನು ನೋಡಬಹುದು.
ಸಾಮಾನ್ಯವಾಗಿ, ನಿಮ್ಮ ಲೋನ್ ಮರುಪಾವತಿ ಶೆಡ್ಯೂಲ್ ಈ ಕೆಳಗಿನ ಮಾಹಿತಿಯನ್ನು ಒಳಗೊಂಡಿರುತ್ತದೆ:
- ಕಂತಿನ ಸೀರಿಯಲ್ ನಂಬರ್
- ಮರುಪಾವತಿ ಶೆಡ್ಯೂಲ್ ಒಳಗೊಂಡಿರುವ ಪ್ರತಿ ಇಎಂಐ ಪಾವತಿಯ ಗಡುವು ದಿನಾಂಕ
- ಹೋಮ್ ಲೋನ್ ಬಗ್ಗೆ ಪ್ರಮುಖ ಮಾಹಿತಿ
- ಪ್ರತಿ ತಿಂಗಳ ಆರಂಭದಲ್ಲಿ ವಿಧಿಸಲಾಗುವ ಬಡ್ಡಿಯನ್ನು ಸೂಚಿಸುವ ಆರಂಭಿಕ ಅಸಲು ಮೊತ್ತ
- ಇಎಂಐ ಪಾವತಿಸಿದ ನಂತರ ಉಳಿದ ಅಸಲು ಮೊತ್ತವನ್ನು ಮುಕ್ತಾಯದ ಅಸಲು ಮೊತ್ತವು ಸೂಚಿಸುತ್ತದೆ
- ಬಡ್ಡಿ ದರದ ಘಟಕ
ಹೋಮ್ ಲೋನ್ ಮರುಪಾವತಿ ಶೆಡ್ಯೂಲ್ ಏಕೆ ಮುಖ್ಯವಾಗಿದೆ?
ಹೋಮ್ ಲೋನ್ ಮರುಪಾವತಿ ಶೆಡ್ಯೂಲ್ ಹೊಂದುವುದರಿಂದ ಸಾಲದಾತರು ಮತ್ತು ಸಾಲಗಾರರು ಹಿಂದಿನ ಮತ್ತು ಮುಂಬರುವ ಕಂತುಗಳನ್ನು ಟ್ರ್ಯಾಕ್ ಮಾಡಲು ಅವಕಾಶ ನೀಡುತ್ತದೆ. ಹೆಚ್ಚುವರಿಯಾಗಿ, ಇದು ಕಾಲಾವಧಿಯಲ್ಲಿ ಯಾವುದೇ ಸಮಯದಲ್ಲಿ ಬಾಕಿ ಉಳಿಕೆ ಅಥವಾ ಬಡ್ಡಿಯ ಸ್ಪಷ್ಟ ಚಿತ್ರಣವನ್ನು ಕೂಡ ನೀಡುತ್ತದೆ.
ಆಸಕ್ತಿಕಾರಕ ವಿಷಯವೆಂದರೆ, ಅಮೊರ್ಟೈಸೇಶನ್ ಶೆಡ್ಯೂಲ್ ತಿಳಿದುಕೊಳ್ಳಲು ನೀವು ಹೋಮ್ ಲೋನ್ ಪಡೆಯಬೇಕಾಗಿಲ್ಲ. ಪಿಎನ್‌ಬಿ ಹೌಸಿಂಗ್‌ನಂತಹ ಕೆಲವು ಸಾಲದಾತರು ಹೋಮ್ ಲೋನ್ ಪಡೆಯುವ ಆರಂಭಿಕ ಹಂತಗಳಲ್ಲಿ ಹೋಮ್ ಲೋನ್ ಇಎಂಐ ಅನ್ನು ಲೆಕ್ಕ ಹಾಕುವಾಗ ಶೆಡ್ಯೂಲ್ ಪರಿಶೀಲಿಸಲು ನಿಮಗೆ ಅನುಮತಿ ನೀಡುತ್ತಾರೆ. ಇದು ಆಸಕ್ತಿದಾಯಕ ಪ್ರಶ್ನೆಯನ್ನು ನಮ್ಮ ಮುಂದಿಡುತ್ತದೆ: ಹೋಮ್ ಲೋನ್ ಮರುಪಾವತಿ ಶೆಡ್ಯೂಲನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ?? ಕಣ್ಣು ಹಾಯಿಸೋಣ.
ಓದಲೇಬೇಕಾದವು: ನಿಮ್ಮ ಹೋಮ್ ಲೋನ್ ಅರ್ಹತೆಯನ್ನು ಸುಧಾರಿಸುವುದು ಹೇಗೆ?
ಹೋಮ್ ಲೋನ್ ಇಎಂಐ ಕ್ಯಾಲ್ಕುಲೇಟರ್‌ನೊಂದಿಗೆ ಲೋನ್ ಮರುಪಾವತಿ ಶೆಡ್ಯೂಲನ್ನು ಲೆಕ್ಕ ಹಾಕುವುದು ಹೇಗೆ
ಪಿಎನ್‌ಬಿ ಹೌಸಿಂಗ್‌ನಂತಹ ಸಾಲದಾತರಿಂದ ಹೋಮ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಇಎಂಐ ಲೆಕ್ಕಾಚಾರಗಳನ್ನು ಸರಳಗೊಳಿಸುತ್ತದೆ ಹಾಗೆಯೇ ಜೊತೆಗೆ ಅರ್ಜಿದಾರರಿಗೆ ಸಾಧ್ಯವಾದ ಹೋಮ್ ಲೋನ್ ಮರುಪಾವತಿ ಶೆಡ್ಯೂಲ್ ತಿಳಿದುಕೊಳ್ಳಲು ಅನುವು ಮಾಡಿಕೊಡುತ್ತದೆ. ಇಎಂಐ ಕ್ಯಾಲ್ಕುಲೇಟರ್ ಟೂಲ್ ಬಳಸಿಕೊಂಡು ಮರುಪಾವತಿ ಶೆಡ್ಯೂಲ್ ಅನ್ನು ಲೆಕ್ಕ ಹಾಕಲಾಗುತ್ತದೆ ಎಂದು ನಾವು ಹೇಳಬಹುದು. ಎಲ್ಲಕ್ಕಿಂತ ಹೆಚ್ಚಾಗಿ, ನಿರ್ದಿಷ್ಟ ಲೋನ್ ಮೊತ್ತ, ಲೋನ್ ಅವಧಿ ಮತ್ತು ಬಡ್ಡಿ ದರಕ್ಕೆ ಸಂಭಾವ್ಯ ಇಎಂಐ ಅನ್ನು ಲೆಕ್ಕ ಹಾಕುವುದರಿಂದ ಅದನ್ನು ನಿಯತಕಾಲಿಕ ರೀತಿಯಲ್ಲಿ ಹೇಗೆ ಪಾವತಿಸಬಹುದು ಎಂಬುದಕ್ಕೆ ಉತ್ತರವನ್ನು ಒದಗಿಸುತ್ತದೆ.
ಹೀಗಾಗಿ, ಹೋಮ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಒಂದು ದಕ್ಷ ಮತ್ತು ಸರಳ ಆನ್ಲೈನ್ ಸಾಧನವಾಗಿದ್ದು, ಇದು ನಿಮ್ಮ ಇಎಂಐಗಳು, ಒಟ್ಟು ಹೌಸ್ ಲೋನ್ ಪಾವತಿ ಮತ್ತು ಬಡ್ಡಿ ಪಾವತಿ ಶೆಡ್ಯೂಲ್ ಎಲ್ಲವನ್ನೂ ಒಂದೇ ಬಾರಿಗೆ ಅಂದಾಜು ಮಾಡುತ್ತದೆ.
ಹೌಸ್ ಲೋನ್‌ಗೆ ಇಎಂಐ ಕ್ಯಾಲ್ಕುಲೇಟರ್ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ನೀವು ತಿಳಿದುಕೊಳ್ಳಲು ಬಯಸುವಿರಾ?? ನಮೂದಿಸಿದ ಅಸಲು ಮೊತ್ತ, ಕಾಲಾವಧಿ ಮತ್ತು ಬಡ್ಡಿ ದರದ ಆಧಾರದ ಮೇಲೆ ಇಎಂಐ ಮತ್ತು ಅದರ ಮರುಪಾವತಿ ಶೆಡ್ಯೂಲ್ ಅನ್ನು ಲೆಕ್ಕ ಹಾಕಲು ಫಾರ್ಮುಲಾವನ್ನು ಬಳಸುತ್ತದೆ:
E = [P x R x (1+R)N ]/[(1+R)N-1], ಇಲ್ಲಿ:
p = ಅಸಲು ಲೋನ್ ಮೊತ್ತ
r = ಮಾಸಿಕ ಬಡ್ಡಿ ದರ, ಅಂದರೆ, 12 ರಿಂದ ವಿಭಜಿಸಲಾದ ಶೇಕಡಾವಾರು ಬಡ್ಡಿ ದರ
t = ಒಟ್ಟು ಹೋಮ್ ಲೋನ್ ಕಾಲಾವಧಿ, ತಿಂಗಳುಗಳಲ್ಲಿ
e = ಹೋಮ್ ಲೋನ್ ಇಎಂಐ
ಆದರೆ ಲೆಕ್ಕಾಚಾರಗಳು ಇಲ್ಲಿಗೆ ನಿಲ್ಲುವುದಿಲ್ಲ. ಈ ಫಾರ್ಮುಲಾ ನಮಗೆ ಮಾಸಿಕ ಇಎಂಐ ಅನ್ನು ನೀಡುತ್ತದೆ. ಆದರೆ ಲೋನ್ ಅಮೊರ್ಟೈಸೇಶನ್ ಶೆಡ್ಯೂಲ್ ಇಎಂಐನ ಎಷ್ಟು ಭಾಗವು ಅಸಲು ಪಾವತಿಗೆ ಹೋಗುತ್ತದೆ ಮತ್ತು ಬಡ್ಡಿಗೆ ಏನು ಹೋಗುತ್ತದೆ ಎಂಬುದರ ಬಗ್ಗೆ ವಿವರಗಳನ್ನು ನೀಡುತ್ತದೆ. ಇದನ್ನು ಲೆಕ್ಕ ಹಾಕಲು, ಈ ಕೆಳಗಿನ ಫಾರ್ಮುಲಾವನ್ನು ಬಳಸಬಹುದು:
ಅಸಲು ಪಾವತಿ = ಇಎಂಐ – [ಬಾಕಿ ಉಳಿದ ಹೋಮ್ ಲೋನ್ ಬ್ಯಾಲೆನ್ಸ್ x ಮಾಸಿಕ ಬಡ್ಡಿ ದರ]
ಉದಾಹರಣೆಗೆ, 50 ಲಕ್ಷದ ಲೋನ್ ಮೊತ್ತ, 30-ವರ್ಷದ ಅವಧಿ, 6% ಬಡ್ಡಿ ದರ ಮತ್ತು 29,978 ಇಎಂಐ ಅನ್ನು ಪರಿಗಣಿಸೋಣ. ಮೇಲಿನ ಫಾರ್ಮುಲಾ ಬಳಸಿ, ಮೊದಲ ಇಎಂಐ ಪಾವತಿಯ ವಿವರಗಳನ್ನು ನಾವು ಕಂಡುಕೊಳ್ಳಬಹುದು.
ತಿಂಗಳು 1 ರ ಅಸಲು ಪಾವತಿ = 29,978 – (5000000 x 6%/12) = 4,978
ಅದೇ ರೀತಿ, ತಿಂಗಳು 1 ರ ಬಡ್ಡಿಯ ಅಂಶವು 29,978 – 4,978 ಅಂದರೆ, 25,000 ಆಗಿರುತ್ತದೆ.
ಇದೇ ರೀತಿಯಲ್ಲಿ, ಮೇಲೆ ತಿಳಿಸಿದ ಫಾರ್ಮುಲಾವನ್ನು ಬಳಸಿಕೊಂಡು ನೀವು ಉಳಿದ ತಿಂಗಳ ಅಸಲು ಪಾವತಿ ಮತ್ತು ಬಡ್ಡಿ ಅಂಶಗಳನ್ನು ಲೆಕ್ಕ ಹಾಕಬಹುದು. ನೀವು ನೋಡುವಂತೆ, ಇದು ನಿಮಗೆ ವಿವಿಧ ರೀತಿಯ ಪಟ್ಟಿಯನ್ನು ನೀಡುತ್ತದೆ, ಅಲ್ಲಿ ಬಡ್ಡಿಯ ಭಾಗವು ಕಡಿಮೆಯಾಗುತ್ತಾ ಹೋದಂತೆ ನಿಮ್ಮ ಇಎಂಐನ ಅಸಲು ಅಂಶವು ಹೆಚ್ಚುತ್ತಾ ಮುಂದುವರೆಯುತ್ತದೆ.
ಪಿಎನ್‌ಬಿ ಹೌಸಿಂಗ್ ಇಎಂಐ ಕ್ಯಾಲ್ಕುಲೇಟರ್ ಅದೇ ಲೆಕ್ಕಾಚಾರ ತಂತ್ರಗಳನ್ನು ಬಳಸಿಕೊಂಡು ನಿಮ್ಮ ಅಮೊರ್ಟೈಸೇಶನ್ ಶೆಡ್ಯೂಲಿನ ವರ್ಷವಾರು ವಿಭಜಿತ ಮೊತ್ತದ ವಿವರವನ್ನು ನಿಮಗೆ ನೀಡುತ್ತದೆ.
ಮುಕ್ತಾಯ
ಹೋಮ್ ಲೋನ್ ಮರುಪಾವತಿ ಶೆಡ್ಯೂಲ್ ಬಗ್ಗೆ ಎಲ್ಲವೂ ಈಗ ನಿಮಗೆ ತಿಳಿದಿರುವುದರಿಂದ, - ಕಡಿಮೆ ಅವಧಿ ಅಥವಾ ದೀರ್ಘ ಅವಧಿಗೆ ಯಾವುದು ನಿಮಗೆ ಉತ್ತಮ ಅಮೊರ್ಟೈಸೇಶನ್ ನೀಡಬಹುದು ಎಂದು ನೀವು ಯೋಚಿಸುತ್ತಿರಬಹುದು?
ಸ್ವಾಭಾವಿಕವಾಗಿ, ಕಾಲಾವಧಿ ಕಡಿಮೆಯಾದಷ್ಟೂ, ನಿಮ್ಮ ಅಮೊರ್ಟೈಸೇಶನ್ ಶೆಡ್ಯೂಲ್ ಕಡಿಮೆಯಾಗಿರುತ್ತದೆ. ಈ ರೀತಿಯಲ್ಲಿ, ನೀವು ಹೋಮ್ ಲೋನಿನ ಬಡ್ಡಿಯ ಅಂಶದ ಮೇಲೆ ಉಳಿತಾಯ ಮಾಡಲು ಸಾಧ್ಯವಾಗುತ್ತದೆ. ಆದಾಗ್ಯೂ, ನಿಮ್ಮ ಇಎಂಐ ಖರ್ಚು ಹೆಚ್ಚಾಗಿರುತ್ತದೆ. ಇದಕ್ಕೆ ತದ್ವಿರುದ್ಧವಾಗಿ, ದೀರ್ಘ ಅಮೊರ್ಟೈಸೇಶನ್ ಶೆಡ್ಯೂಲ್ ಎಂದರೆ ದೊಡ್ಡ ಬಡ್ಡಿಯ ಅಂಶವಾಗಿದೆ.
ಆದಾಗ್ಯೂ, ನಿಮ್ಮ ಮಾಸಿಕ ಇಎಂಐ ಹೆಚ್ಚು ಕೈಗೆಟಕುವಂತಿರುತ್ತದೆ. ಕಾಲಾವಧಿಯಲ್ಲಿ ನಿಮ್ಮ ಲೋನನ್ನು ಮುಂಗಡ ಪಾವತಿ ಮಾಡಲು ಕೂಡ ನೀವು ಆಯ್ಕೆ ಮಾಡಬಹುದು. ಇದು ಕಾಲಾವಧಿ ಅಥವಾ ನಿಮ್ಮ ಇಎಂಐಗಳನ್ನು ಕಡಿಮೆ ಮಾಡುತ್ತದೆ ಮತ್ತು ಲೋನಿನ ಒಟ್ಟು ವೆಚ್ಚವನ್ನು ಕೂಡ ಕಡಿಮೆ ಮಾಡುತ್ತದೆ. ಆದ್ದರಿಂದ, ನಿಮ್ಮ ಹಣಕಾಸಿನ ಯೋಜನೆಯ ಆಧಾರದ ಮೇಲೆ ನೀವು ಆರಿಸಿಕೊಳ್ಳಬಹುದು.
ಲೋನ್ ಮರುಪಾವತಿ ಶೆಡ್ಯೂಲ್ ಹೇಗೆ ಕೆಲಸ ಮಾಡುತ್ತದೆ ಅಥವಾ ನಿಮಗೆ ಹೇಗೆ ಪ್ರಯೋಜನ ನೀಡುತ್ತದೆ ಎಂಬುದರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು, ಪಿಎನ್‌ಬಿ ಹೌಸಿಂಗ್‌ನಲ್ಲಿರುವ ನಮ್ಮ ಗ್ರಾಹಕ ಸಹಾಯ ತಂಡವನ್ನು ಸಂಪರ್ಕಿಸಲು ಹಿಂಜರಿಯಬೇಡಿ!