ಮೊದಲ ಬಾರಿಯ ಹೋಮ್ ಲೋನ್ ಅರ್ಜಿದಾರರಿಗೆ ಸಂಪೂರ್ಣ ಮಾರ್ಗದರ್ಶಿ
ನನ್ನದು ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಸ್ವಂತ ಮನೆಯನ್ನು ಖರೀದಿಸುವುದು ಜೀವಮಾನದ ಅನುಭವ. ಇದಕ್ಕೆ ನಿಖರವಾದ ಅಗತ್ಯಗಳು ಮತ್ತು ನಿರೀಕ್ಷಿತ ಮನೆ ಮತ್ತು ಅದರ ಡೆವಲಪರ್ ಇತ್ಯಾದಿಗಳ ಸಂಶೋಧನೆಯ ಬಗ್ಗೆ ಕುಟುಂಬದ ಸದಸ್ಯರು ಬಹಳಷ್ಟು ಪ್ಲಾನ್ ಮಾಡಬೇಕಾದ ಅಗತ್ಯವಿದೆ. ಇವುಗಳು ಮುಗಿದ ನಂತರ, ನಿಮ್ಮ ಕನಸಿನ ಮನೆಯನ್ನು ಖರೀದಿಸಲು ನಿಮಗೆ ಅಂತಿಮವಾಗಿ ಹಣಕಾಸಿನ ಅಗತ್ಯವಿದೆ.
ಅಗತ್ಯಗಳ ಬಗ್ಗೆ ಯೋಜಿಸುವುದು ಮತ್ತು ಸರಿಯಾದ ಮನೆಯನ್ನು ಗುರುತಿಸುವುದು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು, ನೀವು ಅದೇ ಸಮಯದಲ್ಲಿ ಇನ್ನೊಂದು ಹೋಮ್‌ವರ್ಕ್ ಮಾಡಬೇಕು, ಅಂದರೆ ಕೈಗೆಟಕುವ ಇಎಂಐಗಳೊಂದಿಗೆ ನಿಮಗೆ ಸುಲಭವಾಗಿ ಹೋಮ್ ಲೋನ್ ಒದಗಿಸಬಹುದಾದ ಹೌಸಿಂಗ್ ಫೈನಾನ್ಸ್ ಕಂಪನಿಯನ್ನು ಹುಡುಕುವುದು. ಆದರೆ ಅದಕ್ಕಿಂತ ಮೊದಲು, ಹೋಮ್ ಲೋನ್‌ನ ವಿವಿಧ ಅಂಶಗಳನ್ನು ನೋಡೋಣ:
ಹೋಮ್ ಲೋನ್ ಎಂದರೆ ಏನು?
ಹೋಮ್ ಲೋನ್ ಎಂಬುದು ಹೌಸಿಂಗ್ ಫೈನಾನ್ಸ್ ಕಂಪನಿಗಳು ಅಥವಾ ಬ್ಯಾಂಕ್ ನಿಮ್ಮ ಮನೆಯ ಭದ್ರತೆಯ ಮೇಲೆ ನೀಡುವ ಸುರಕ್ಷಿತ ಲೋನ್ ಆಗಿದೆ. ಮನೆ ಖರೀದಿಸಲು ಅಥವಾ ನಿರ್ಮಿಸಲು ಬಯಸುವ ವ್ಯಕ್ತಿಗಳಿಗೆ ಹೋಮ್ ಲೋನ್ ನೀಡಲಾಗುತ್ತದೆ. ಲೋನ್ ಮರುಪಾವತಿ ಆಗುವವರೆಗೆ ಆಸ್ತಿಯನ್ನು ಸಾಲದಾತರಿಗೆ (ಹೌಸಿಂಗ್ ಫೈನಾನ್ಸ್ ಕಂಪನಿ ಅಥವಾ ಬ್ಯಾಂಕ್) ಭದ್ರತೆಯಾಗಿ ಅಡಮಾನ ಇಡಲಾಗುತ್ತದೆ. ಪೂರ್ವ ನಿರ್ಧರಿತ ಬಡ್ಡಿಯೊಂದಿಗೆ ಲೋನ್ ಮರಳಿ ಪಾವತಿಸುವವರೆಗೆ ಸಾಲದಾತರು ಆಸ್ತಿಯ ಶೀರ್ಷಿಕೆ ಅಥವಾ ಪತ್ರವನ್ನು ಹೊಂದಿರುತ್ತಾರೆ. ಗ್ರಾಹಕರು ಲೋನ್ ಮರುಪಾವತಿಸಲು ವಿಫಲವಾದರೆ, ಲೋನ್ ನೀಡುವ ಸಂಸ್ಥೆಯು ಆಸ್ತಿಯನ್ನು ಮಾರಾಟ ಮಾಡುವ ಮೂಲಕ ಲೋನ್ ಹಣವನ್ನು ಪಡೆಯಬಹುದು.
ವಿವಿಧ ರೀತಿಯ ಹೋಮ್ ಲೋನ್‌ಗಳು ಯಾವುವು
ಹೋಮ್ ಲೋನ್ ಮೂಲಕ ನೀವು ಹೊಸ ಮನೆ/ಫ್ಲಾಟ್ ಖರೀದಿಸಬಹುದು ಅಥವಾ ನಿರ್ಮಿಸಬಹುದು. ಆದಾಗ್ಯೂ, ನೀವು ಈಗಾಗಲೇ ಮನೆಯನ್ನು ಹೊಂದಿದ್ದರೆ, ಮನೆಯಲ್ಲಿ ಇನ್ನಷ್ಟು ಸ್ಥಳ / ಕೊಠಡಿಯನ್ನು ಸೇರಿಸಲು ನೀವು ಮನೆ ವಿಸ್ತರಣೆ ಲೋನ್ ಅಥವಾ ನಿಮ್ಮ ಮನೆಯನ್ನು ನವೀಕರಿಸಲು ಬಯಸಿದರೆ ಮನೆ ನವೀಕರಣ ಲೋನ್ ಪಡೆಯಬಹುದು. ಮನೆ ನಿರ್ಮಿಸಲು ಭೂಮಿ ಖರೀದಿಸಲು ನೀವು ಲೋನ್ ಕೂಡ ತೆಗೆದುಕೊಳ್ಳಬಹುದು.
ಈಗಾಗಲೇ ಅಸ್ತಿತ್ವದಲ್ಲಿರುವ ಆಸ್ತಿ ಮೇಲಿನ ಲೋನ್ ಪಡೆಯಲು ಬಯಸುವ ವ್ಯಕ್ತಿಗಳಿಗೆ ಆಸ್ತಿ ಮೇಲಿನ ಲೋನ್ ಕೂಡ ನೀಡಲಾಗುತ್ತದೆ. ಕಡಿಮೆ ಬಡ್ಡಿ ದರದಲ್ಲಿ ಲೋನ್ ಪಡೆಯಲು ನಿಮ್ಮ ಅಸ್ತಿತ್ವದಲ್ಲಿರುವ ಹೆಚ್ಚಿನ ವೆಚ್ಚದ ಲೋನ್ ಅನ್ನು ಟ್ರಾನ್ಸ್‌ಫರ್ ಮಾಡಲು ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಕೂಡ ಸಾಧ್ಯವಾಗುತ್ತದೆ.
ಓದಲೇಬೇಕಾದವು: ಹೋಮ್‌ಲೋನ್‌ಗೆ ಅಗತ್ಯವಿರುವ ಕನಿಷ್ಠ ಡೌನ್ ಪೇಮೆಂಟ್ ಎಷ್ಟು?
ಲೋನ್ ಪಡೆಯಬಹುದಾದ ಗರಿಷ್ಠ ಮೊತ್ತ ಎಷ್ಟು
ಪಡೆಯಬಹುದಾದ ಲೋನ್ ಮೊತ್ತವು ಸಾಮಾನ್ಯವಾಗಿ ಗ್ರಾಹಕರ ಮರುಪಾವತಿ ಸಾಮರ್ಥ್ಯ, ಅವರ ಕ್ರೆಡಿಟ್ ಸ್ಕೋರ್, ಅವರ ಆದಾಯದ ಮಟ್ಟ (ಅವರು ಎಷ್ಟು ಇಎಂಐ ಪಾವತಿಸಬಹುದು ಎಂಬುದನ್ನು ಖಚಿತಪಡಿಸಿಕೊಳ್ಳಲು) ಮತ್ತು ಹೋಮ್ ಲೋನ್ ವಿಧವನ್ನು (ಅಂದರೆ, ಹೊಸ ಖರೀದಿ, ನವೀಕರಣ, ವಿಸ್ತರಣೆ ಅಥವಾ ಆಸ್ತಿ ಮೇಲಿನ ಲೋನ್) ಅವಲಂಬಿಸಿರುತ್ತದೆ. ಸಾಮಾನ್ಯವಾಗಿ ಅಗತ್ಯವಿರುವ ಲೋನ್ ಮೊತ್ತವನ್ನು ಅವಲಂಬಿಸಿ ಮತ್ತು ಉಳಿದ ಷರತ್ತುಗಳನ್ನು ಪೂರೈಸಿದರೆ ಆಸ್ತಿಯ ವೆಚ್ಚದ 90% ವರೆಗೆ ಲೋನ್ ನೀಡಲಾಗುತ್ತದೆ.
ಬಡ್ಡಿ ದರಗಳ ವಿಧಗಳು ಯಾವುವು
ಹೋಮ್ ಲೋನ್‌ಗಳ ಬಡ್ಡಿ ದರಗಳು ಎರಡು ವಿಧಗಳಾಗಿವೆ – ಫಿಕ್ಸೆಡ್ ದರ ಅಥವಾ ಫ್ಲೋಟಿಂಗ್ ದರ. ಕೆಲವು ಹೌಸಿಂಗ್ ಫೈನಾನ್ಸ್ ಕಂಪನಿಗಳು ಸಾಲಗಾರರ ಅಗತ್ಯಗಳಿಗೆ ಅನುಗುಣವಾಗಿ ಭಾಗಶಃ ಫಿಕ್ಸೆಡ್ ಮತ್ತು/ಅಥವಾ ಭಾಗಶಃ ಫ್ಲೋಟಿಂಗ್ ದರವನ್ನು ಒದಗಿಸಬಹುದು.
ಫಿಕ್ಸೆಡ್ ದರದ ಹೋಮ್ ಲೋನ್ - ಫಿಕ್ಸೆಡ್ ದರದ ಲೋನ್ ನಿರ್ದಿಷ್ಟ ಅವಧಿಗೆ ಪೂರ್ವ-ನಿರ್ದಿಷ್ಟ ಬಡ್ಡಿ ದರದಲ್ಲಿ ಬರುತ್ತದೆ, ಅದರ ನಂತರ ಅದನ್ನು ಫ್ಲೋಟಿಂಗ್ ದರದಲ್ಲಿ ಮರುಪಾವತಿಸಲಾಗುತ್ತದೆ
ಫ್ಲೋಟಿಂಗ್ ದರದ ಹೋಮ್ ಲೋನ್– ಫ್ಲೋಟಿಂಗ್ ದರದ ಲೋನ್ ಸಂದರ್ಭದಲ್ಲಿ, ಆರ್ಥಿಕ ಪರಿಸ್ಥಿತಿಗಳ ಆಧಾರದ ಮೇಲೆ ಬದಲಾಗುವ ಉಲ್ಲೇಖ ಬಡ್ಡಿ ದರಕ್ಕೆ ಸಂಬಂಧಿಸಿರುವುದರಿಂದ ದರವು ಲೋನ್ ಅವಧಿಯುದ್ದಕ್ಕೂ ದರವು ಬದಲಾಗಬಹುದು.
ಹೋಮ್ ಲೋನ್ ಮೇಲಿನ ತೆರಿಗೆ ಪ್ರಯೋಜನಗಳು ಯಾವುವು
ಹೋಮ್ ಲೋನ್ ಮೇಲೆ ಆಕರ್ಷಕ ಆದಾಯ ತೆರಿಗೆ ಪ್ರಯೋಜನಗಳು ಇವೆ ಮತ್ತು ವಿಶಾಲವಾಗಿ ಮೂರು ಭಾಗಗಳಾಗಿ ವರ್ಗೀಕರಿಸಬಹುದು –
- ಆದಾಯ ತೆರಿಗೆ ಕಾಯ್ದೆ 1961 ರ ಸೆಕ್ಷನ್ 24 ಅಡಿಯಲ್ಲಿ ಸ್ವಯಂ ಸ್ವಾಧೀನದ ಆಸ್ತಿಗೆ ಪಾವತಿಸಿದ ಬಡ್ಡಿಯ ಮೇಲೆ ₹200,000 ಕಡಿತವನ್ನು ಕ್ಲೈಮ್ ಮಾಡಬಹುದು
- ಆದಾಯ ತೆರಿಗೆ ಕಾಯ್ದೆ 1961 ರ ಸೆಕ್ಷನ್ 80 ಸಿ ಅಡಿಯಲ್ಲಿ ಸ್ವಯಂ ಸ್ವಾಧೀನದ ಆಸ್ತಿಗೆ ಅಸಲು ಮರುಪಾವತಿ ಮೇಲಿನ ₹150,000 ಕಡಿತವನ್ನು ಕ್ಲೈಮ್ ಮಾಡಬಹುದು.
- ಹಣಕಾಸು ವರ್ಷ 2016-17 ರ ನಂತರ ಹೋಮ್ ಲೋನ್ ಪಡೆದಿದ್ದರೆ, ಮನೆಯ ಮೌಲ್ಯವು ₹50 ಲಕ್ಷಕ್ಕಿಂತ ಕಡಿಮೆ ಇದ್ದರೆ, ಹೋಮ್ ಲೋನ್ ಮೊತ್ತವು ₹35 ಲಕ್ಷಕ್ಕಿಂತ ಕಡಿಮೆ ಇದ್ದರೆ ಮತ್ತು ಲೋನ್ ಮಂಜೂರಾದ ದಿನಾಂಕದಂದು ತೆರಿಗೆದಾರರು ಯಾವುದೇ ಆಸ್ತಿಯನ್ನು ಹೊಂದಿರದಿದ್ದರೆ ₹50,000 ತೆರಿಗೆ ಪ್ರಯೋಜನವನ್ನು "ಹೋಮ್ ಲೋನ್ ಮೇಲಿನ ಬಡ್ಡಿ" ಎಂದು ಕ್ಲೈಮ್ ಮಾಡಬಹುದು.
ಅಗತ್ಯವಿರುವ ಡಾಕ್ಯುಮೆಂಟ್‌ಗಳು ಯಾವುವು
ನೀವು ಸಂಬಳ ಪಡೆಯುವ ವ್ಯಕ್ತಿ ಅಥವಾ ಸ್ವಯಂ ಉದ್ಯೋಗಿ ವೃತ್ತಿಪರರಾಗಿದ್ದರೆ ಹೋಮ್ ಲೋನ್‌ಗೆ ಅಗತ್ಯವಿರುವ ಡಾಕ್ಯುಮೆಂಟ್‌ಗಳು ಕೆಳಗಿನಂತಿವೆ–
ಸಂಬಳ ಪಡೆಯುವ ಉದ್ಯೋಗಿಗಳು | ಸ್ವಯಂ ಉದ್ಯೋಗಿ/ವೃತ್ತಿಪರರು |
---|---|
ಸರಿಯಾಗಿ ಭರ್ತಿ ಮಾಡಲಾದ ಅಪ್ಲಿಕೇಶನ್ ಫಾರ್ಮ್ ಜೊತೆಗೆ ಫೋಟೋ | ಸರಿಯಾಗಿ ಭರ್ತಿ ಮಾಡಲಾದ ಅಪ್ಲಿಕೇಶನ್ ಫಾರ್ಮ್ ಜೊತೆಗೆ ಫೋಟೋ |
ವಯಸ್ಸಿನ ಪುರಾವೆ (ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್, ಶಾಸನಬದ್ಧ ಪ್ರಾಧಿಕಾರದಿಂದ ಪಡೆದ ಯಾವುದೇ ಇತರ ಪ್ರಮಾಣಪತ್ರ) | ವಯಸ್ಸಿನ ಪುರಾವೆ (ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್, ಶಾಸನಬದ್ಧ ಪ್ರಾಧಿಕಾರದಿಂದ ಪಡೆದ ಯಾವುದೇ ಇತರ ಪ್ರಮಾಣಪತ್ರ) |
ನಿವಾಸದ ಪುರಾವೆ (ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಟೆಲಿಫೋನ್ ಬಿಲ್, ರೇಷನ್ ಕಾರ್ಡ್, ಎಲೆಕ್ಷನ್ ಕಾರ್ಡ್, ಶಾಸನಬದ್ಧ ಪ್ರಾಧಿಕಾರದಿಂದ ಪಡೆದ ಯಾವುದೇ ಇತರ ಪ್ರಮಾಣಪತ್ರ) | ನಿವಾಸದ ಪುರಾವೆ (ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಟೆಲಿಫೋನ್ ಬಿಲ್, ರೇಷನ್ ಕಾರ್ಡ್, ಎಲೆಕ್ಷನ್ ಕಾರ್ಡ್, ಶಾಸನಬದ್ಧ ಪ್ರಾಧಿಕಾರದಿಂದ ಪಡೆದ ಯಾವುದೇ ಇತರ ಪ್ರಮಾಣಪತ್ರ) |
ಶಿಕ್ಷಣ ಅರ್ಹತೆಗಳು - ಇತ್ತೀಚಿಗೆ ಪಡೆದ ಪದವಿ | ಶಿಕ್ಷಣ ಅರ್ಹತೆಗಳು - ಇತ್ತೀಚಿನ ಪದವಿ (ವೃತ್ತಿಪರರಿಗೆ) |
ಇತ್ತೀಚಿನ 3 ತಿಂಗಳ ಸಂಬಳ-ಸ್ಲಿಪ್‌ಗಳು | ಬಿಸಿನೆಸ್ ಪ್ರೊಫೈಲ್ ಜೊತೆಗೆ ಬಿಸಿನೆಸ್ ಅಸ್ತಿತ್ವದ ಪ್ರಮಾಣಪತ್ರ ಮತ್ತು ಪುರಾವೆ |
ಕಳೆದ 2 ವರ್ಷಗಳ ಫಾರ್ಮ್ 16 | ಚಾರ್ಟರ್ಡ್ ಅಕೌಂಟೆಂಟ್ ಪ್ರಮಾಣೀಕೃತ/ಆಡಿಟ್ ಮಾಡಿದ ಲಾಭ ಮತ್ತು ನಷ್ಟ ಅಕೌಂಟ್ ಮತ್ತು ಬ್ಯಾಲೆನ್ಸ್ ಶೀಟ್‌ಗಳೊಂದಿಗೆ ಕಳೆದ 3 ವರ್ಷಗಳ ಆದಾಯ ತೆರಿಗೆ ರಿಟರ್ನ್ಸ್ (ಸ್ವಯಂ ಮತ್ತು ಬಿಸಿನೆಸ್) |
ಕಳೆದ 6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್‌ಗಳು (ಸಂಬಳದ ಅಕೌಂಟ್) | ಕಳೆದ 12 ತಿಂಗಳ ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್‌ಗಳು (ಸ್ವಯಂ ಮತ್ತು ಬಿಸಿನೆಸ್) |
'ಪಿಎನ್‌ಬಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್' ಪರವಾಗಿ ಪ್ರಕ್ರಿಯಾ ಶುಲ್ಕದ ಚೆಕ್ | 'ಪಿಎನ್‌ಬಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್' ಪರವಾಗಿ ಪ್ರಕ್ರಿಯಾ ಶುಲ್ಕದ ಚೆಕ್ |
ಆಸ್ತಿಯ ಶೀರ್ಷಿಕೆ ಡಾಕ್ಯುಮೆಂಟ್‌ಗಳ, ಅನುಮೋದಿತ ಪ್ಲಾನ್‌ನ ಫೋಟೋಕಾಪಿ | ಆಸ್ತಿಯ ಟೈಟಲ್ ಡಾಕ್ಯುಮೆಂಟ್‌ಗಳು, ಅನುಮೋದಿತ ಪ್ಲಾನ್ ಇತ್ಯಾದಿಗಳ ಫೋಟೋಕಾಪಿ. |
ಎಲ್ಲಾ ಡಾಕ್ಯುಮೆಂಟ್‌ಗಳಿಗೆ ಸ್ವಯಂ ದೃಢೀಕರಣದ ಅಗತ್ಯವಿದೆ.
ಓದಲೇಬೇಕಾದವು: ಹೋಮ್ ಲೋನ್‌ಗಳ ಮೇಲೆ ತೆರಿಗೆ ಪ್ರಯೋಜನಗಳು ಯಾವುವು? ಅವುಗಳನ್ನು ಪಡೆಯುವುದು ಹೇಗೆ?
ಲೋನ್ ಅರ್ಹತೆಯನ್ನು ಲೆಕ್ಕ ಹಾಕುವುದು ಹೇಗೆ
ನಿಮ್ಮ ಲೋನ್ ಅರ್ಹತೆಯು ನಿಮ್ಮ ವಯಸ್ಸು, ಆದಾಯದ ಮಟ್ಟ, ಮರುಪಾವತಿ ಸಾಮರ್ಥ್ಯ (ಇಎಂಐನಿಂದ ಆದಾಯದ ಅನುಪಾತ), ಇತರ ಲೋನ್‌ಗಳ ಮರುಪಾವತಿ ಹಿಸ್ಟರಿ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಕ್ರೆಡಿಟ್ ಸ್ಕೋರ್ ಅನ್ನು ಅವಲಂಬಿಸಿರುತ್ತದೆ. ನಿಮ್ಮ ಹೋಮ್ ಲೋನ್ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಲು ನೀವು ಈ ಹೋಮ್ ಲೋನ್ ಕ್ಯಾಲ್ಕುಲೇಟರ್ ಬಳಸಬಹುದು.
ಮನೆ ಎಂಬುದು ನಿಮ್ಮ ಜೀವಮಾನದಲ್ಲಿ ನೀವು ಖರೀದಿಸುವ ಅತ್ಯಂತ ಪ್ರಮುಖ ಸ್ವತ್ತುಗಳಲ್ಲಿ ಒಂದಾಗಿದೆ ; ಈ ಸಲಹೆಗಳು ನಿಮಗೆ ತೊಂದರೆ ರಹಿತವಾಗಿ ಮನೆ ಖರೀದಿಸಲು ಸಹಾಯ ಮಾಡುತ್ತವೆ.
ಪಿಎನ್‌ಬಿ ಹೌಸಿಂಗ್ ಫೈನಾನ್ಸ್ ತನ್ನ ಕ್ಲೈಂಟ್‌ಗಳಿಗೆ ಫಿಕ್ಸೆಡ್ ಮತ್ತು ಫ್ಲೋಟಿಂಗ್ ದರದಲ್ಲಿ ವಿವಿಧ ಅವಧಿಗಳಿಗೆ ಹೌಸಿಂಗ್ ಲೋನ್‌ಗಳ ಡೈನಮಿಕ್ ಶ್ರೇಣಿಯನ್ನು ಒದಗಿಸುತ್ತದೆ. ನಾವು ನಿಮ್ಮ ಲೋನ್‌ಗಳನ್ನು 7 ದಿನಗಳಲ್ಲಿ ಪ್ರಕ್ರಿಯೆಗೊಳಿಸುತ್ತೇವೆ ಎಂದು ನಿಮಗೆ ತಿಳಿಸಲು ನಮಗೆ ಸಂತೋಷವಾಗುತ್ತದೆ. ಏಕೆಂದರೆ, ನೀವು ನಿಮ್ಮ ಕನಸಿನ ಮನೆಯನ್ನು ಹೊಂದಲು ಎಷ್ಟು ಉತ್ಸುಕರಾಗಿದ್ದೀರಿ ಎಂದು ನಾವು ಅರ್ಥಮಾಡಿಕೊಳ್ಳುತ್ತೇವೆ.