ಫಿಕ್ಸೆಡ್ ಡೆಪಾಸಿಟ್‌ಗಳು ಅನೇಕರಿಗೆ ತಮ್ಮ ಹಣವನ್ನು ಉಳಿಸಲು ಮತ್ತು ಖಚಿತವಾದ ಆದಾಯವನ್ನು ಪಡೆಯಲು ಆದ್ಯತೆಯ ಹೂಡಿಕೆ ಸಾಧನಗಳಾಗಿವೆ. ಇದು ಭವಿಷ್ಯದ ಗುರಿಗಳು ಮತ್ತು ಹಣಕಾಸಿನ ತುರ್ತುಸ್ಥಿತಿಗಳಿಗಾಗಿ ಹಣವನ್ನು ಉಳಿಸಲು ಸುರಕ್ಷಿತ ಆಯ್ಕೆಯಾಗಿದೆ. ಹೆಚ್ಚಿನ ಫೈನಾನ್ಶಿಯಲ್ ಸಂಸ್ಥೆಗಳು ವ್ಯಕ್ತಿಯ ಹಣಕಾಸಿನ ಗುರಿಗಳು ಮತ್ತು ಆದ್ಯತೆಗಳಿಗೆ ಸೂಕ್ತವಾದ ಅನೇಕ ಫಿಕ್ಸೆಡ್ ಡೆಪಾಸಿಟ್ ಪ್ರಾಡಕ್ಟ್‌ಗಳನ್ನು ಒದಗಿಸುತ್ತವೆ. ಫಿಕ್ಸೆಡ್ ಡೆಪಾಸಿಟ್ ಬಡ್ಡಿ ದರಗಳು ಫೈನಾನ್ಶಿಯಲ್ ಸಂಸ್ಥೆ, ಆಯ್ಕೆ ಮಾಡಿದ ಎಫ್‌ಡಿ ಪ್ರಕಾರ, ಕಾಲಾವಧಿ ಮತ್ತು ವಯಸ್ಸಿನ ಮಿತಿಯ ಆಧಾರದ ಮೇಲೆ ಬದಲಾಗುತ್ತವೆ.
1 ಲಕ್ಷದ ಫಿಕ್ಸೆಡ್ ಡೆಪಾಸಿಟ್‌ಗೆ ಮಾಸಿಕ ಬಡ್ಡಿಯನ್ನು ಅಂದಾಜು ಮಾಡುವ ಮೊದಲು, ವಿವಿಧ ರೀತಿಯ ಎಫ್‌ಡಿಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ.
ವಿವಿಧ ರೀತಿಯ ಫಿಕ್ಸೆಡ್ ಡೆಪಾಸಿಟ್‌ಗಳು
ಫೈನಾನ್ಶಿಯಲ್ ಸಂಸ್ಥೆಗಳು ಒಟ್ಟುಗೂಡಿಸಿದ ಮತ್ತು ಒಟ್ಟುಗೂಡಿಸದ ಬಡ್ಡಿ ಪಾವತಿ ಮಾದರಿಗಳ ಆಧಾರದ ಮೇಲೆ ಎರಡು ರೀತಿಯ ಎಫ್‌ಡಿಗಳನ್ನು ಒದಗಿಸುತ್ತವೆ.
- ಒಟ್ಟುಗೂಡಿಸದ: ಡೆಪಾಸಿಟರ್‌ಗಳ ಆಯ್ಕೆಯ ಆವರ್ತನದ ಪ್ರಕಾರ ಒಟ್ಟುಗೂಡಿಸದ ಫಿಕ್ಸೆಡ್ ಡೆಪಾಸಿಟ್ ಮೇಲೆ ಬಡ್ಡಿಯನ್ನು ಪಾವತಿಸಲಾಗುತ್ತದೆ. ಇದು ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಮತ್ತು ವಾರ್ಷಿಕವಾಗಿರಬಹುದು ಮತ್ತು ಮೆಚ್ಯೂರಿಟಿ ಸಮಯದಲ್ಲಿ ಅಸಲು ಮೊತ್ತದಲ್ಲಿ ಬದಲಾವಣೆ ಆಗುವುದಿಲ್ಲ.
- ಒಟ್ಟುಗೂಡಿಸಿದ: ಈ ವರ್ಗದ ಎಫ್‌ಡಿಗಳ ಅಡಿಯಲ್ಲಿ ಸಂಗ್ರಹಿಸಲಾದ ಬಡ್ಡಿಯು ಅಸಲು ಮೊತ್ತಕ್ಕೆ ಸೇರ್ಪಡೆ ಆಗುತ್ತಿರುತ್ತದೆ. ಮೆಚ್ಯೂರಿಟಿಯಲ್ಲಿ ಪಾವತಿಸಿದ ಒಟ್ಟುಗೂಡಿಸಿದ ಬ್ಯಾಲೆನ್ಸ್ ಮೇಲೆ ಸಂಯುಕ್ತ ಬಡ್ಡಿಯಿಂದ ಹೂಡಿಕೆದಾರರು ಪ್ರಯೋಜನ ಪಡೆಯಬಹುದು.
ಯಾವ ಎಫ್‌ಡಿ ಉತ್ತಮವಾಗಿದೆ?
ಫಿಕ್ಸೆಡ್ ಡೆಪಾಸಿಟ್ ಬಡ್ಡಿ ದರಗಳು ಸಂಸ್ಥೆಯಿಂದ ಸಂಸ್ಥೆಗೆ ಬದಲಾಗುತ್ತವೆ, ಆ ಮೂಲಕ ಹೂಡಿಕೆಯ ಮೇಲಿನ ಆದಾಯವನ್ನು ನಿರ್ಧರಿಸುತ್ತದೆ. ನಿವೃತ್ತ ವ್ಯಕ್ತಿಗಳು ಮತ್ತು ಹಿರಿಯ ನಾಗರಿಕರಂತಹ ಫಿಕ್ಸೆಡ್ ಡೆಪಾಸಿಟ್‌ಗಳ ಬಡ್ಡಿ ಆದಾಯವನ್ನು ಅವಲಂಬಿಸಿರುವವರು ಒಟ್ಟುಗೂಡಿಸದ ಫಿಕ್ಸೆಡ್ ಡೆಪಾಸಿಟ್‌ನಿಂದ ಪ್ರಯೋಜನ ಪಡೆಯುತ್ತಾರೆ. ಮತ್ತೊಂದೆಡೆ, ತಮ್ಮ ದೀರ್ಘಾವಧಿಯ ಹಣಕಾಸಿನ ಗುರಿಗಳನ್ನು ಪೂರೈಸಲು ಹಣ ಉಳಿಸುವವರು ಒಟ್ಟುಗೂಡಿಸಿದ ಫಿಕ್ಸೆಡ್ ಡೆಪಾಸಿಟ್‌ಗಳನ್ನು ಆಯ್ಕೆ ಮಾಡಬಹುದು ಮತ್ತು ಸಂಯೋಜನೆಯಿಂದ ಪ್ರಯೋಜನ ಪಡೆಯಬಹುದು.
ಓದಲೇಬೇಕಾದವು: ಫಿಕ್ಸೆಡ್ ಡೆಪಾಸಿಟ್ ರಶೀದಿ ಎಂದರೇನು?
ಫಿಕ್ಸೆಡ್ ಡೆಪಾಸಿಟ್ ಬಡ್ಡಿ ದರಗಳು
ಪಿಎನ್‌ಬಿ ಹೌಸಿಂಗ್‌ನಿಂದ ಬಡ್ಡಿ ದರಗಳು ಇಲ್ಲಿವೆ, ಇದನ್ನು ಬಳಸಿಕೊಂಡು ನೀವು ಪ್ರತಿ ತಿಂಗಳು ಅಥವಾ ವರ್ಷಕ್ಕೆ 1 ಲಕ್ಷದ ಫಿಕ್ಸೆಡ್ ಡೆಪಾಸಿಟ್ ಮೇಲಿನ ಬಡ್ಡಿಯನ್ನು ಲೆಕ್ಕ ಹಾಕಬಹುದು:
ಫಿಕ್ಸೆಡ್ ಡೆಪಾಸಿಟ್ ಬಡ್ಡಿ ದರಗಳು (₹5 ಕೋಟಿಯವರೆಗೆ) | ||||||
ಅವಧಿ | ಒಟ್ಟುಗೂಡಿಸಿದ ಆಯ್ಕೆ* ಆರ್‌ಒಐ (ವಾರ್ಷಿಕವಾಗಿ) | ಒಟ್ಟುಗೂಡಿಸದ ಆಯ್ಕೆ ಆರ್‌ಒಐ (ವಾರ್ಷಿಕವಾಗಿ) | ||||
---|---|---|---|---|---|---|
ತಿಂಗಳು | ಆರ್‌ಒಐ (ವಾರ್ಷಿಕ) | ಮೆಚ್ಯೂರಿಟಿ ವೇಳೆ ತಾತ್ಕಾಲಿಕ ಆದಾಯ | ಮಾಸಿಕ | ತ್ರೈಮಾಸಿಕ | ಅರ್ಧ ವಾರ್ಷಿಕ | ವಾರ್ಷಿಕ |
12 – 23 | 7.35% | 7.35% | 7.11% | 7.15% | 7.22% | 7.35% |
24 – 35 | 7.00% | 7.25% | 6.79% | 6.83% | 6.89% | 7.00% |
36 – 47 | 7.70% | 8.31% | 7.44% | 7.49% | 7.56% | 7.70% |
48 – 59 | 7.40% | 8.26% | 7.16% | 7.20% | 7.26% | 7.40% |
60 -71 | 7.50% | 8.71% | 7.25% | 7.29% | 7.36% | 7.50% |
72 – 84 | 7.40% | 8.91% | 7.16% | 7.20% | 7.27% | 7.40% |
120 | 7.40% | 10.42% | 7.16% | 7.20% | 7.27% | 7.40% |
ಗಮನದಲ್ಲಿಟ್ಟುಕೊಳ್ಳಬೇಕಾದ ಕೆಲವು ಅಂಶಗಳು:
- ಮೆಚ್ಯೂರಿಟಿಗೆ ಮುಂಚಿತವಾಗಿ ಎಫ್‌ಡಿ ತೆಗೆಯುವುದರಿಂದ ನಿಗದಿತ ಬಡ್ಡಿ ದರಗಳಲ್ಲಿ ಬದಲಾವಣೆ ಆಗಬಹುದು.
- 60 ವರ್ಷಗಳು ಮತ್ತು ಅದಕ್ಕಿಂತ ಹೆಚ್ಚು ವಯಸ್ಸಿನ ಹಿರಿಯ ನಾಗರಿಕರು 1 ಕೋಟಿ ಫಿಕ್ಸೆಡ್ ಡೆಪಾಸಿಟ್ ಮಿತಿಯವರೆಗೆ ಎಫ್‌ಡಿ ಬಡ್ಡಿ ದರಕ್ಕಿಂತ 0.25% ಹೆಚ್ಚಿನ ಆದ್ಯತೆಯ ದರವನ್ನು ಪಡೆಯುತ್ತಾರೆ.
ಓದಲೇಬೇಕಾದವು: ನಿಮ್ಮ ರಜಾದಿನವನ್ನು ಯೋಜಿಸಲು ಫಿಕ್ಸೆಡ್ ಡೆಪಾಸಿಟ್ ಯಾಕೆ ಉತ್ತಮ ಆಯ್ಕೆಯಾಗಿದೆ
1 ಲಕ್ಷದ ಫಿಕ್ಸೆಡ್ ಡೆಪಾಸಿಟ್‌ಗೆ ಮಾಸಿಕ ಬಡ್ಡಿ ಎಷ್ಟು?
ಇಂದಿನ ಡಿಜಿಟಲ್ ಯುಗದಲ್ಲಿ, ಪ್ರತಿ ಹಣಕಾಸು ಸಂಸ್ಥೆಯು ಒಟ್ಟುಗೂಡಿಸದ ಮತ್ತು ಒಟ್ಟುಗೂಡಿಸಿದ ಫಿಕ್ಸೆಡ್ ಡೆಪಾಸಿಟ್ ಬಡ್ಡಿ ದರಗಳನ್ನು ಲೆಕ್ಕ ಹಾಕಲು ಆನ್ಲೈನ್‌ನಲ್ಲಿ ಕ್ಯಾಲ್ಕುಲೇಟರ್ ಅನ್ನು ಒದಗಿಸುತ್ತದೆ. ಒಟ್ಟುಗೂಡಿಸಿದ ಡೆಪಾಸಿಟ್‌ಗಾಗಿ, ಬಳಸುವ ಫಾರ್ಮುಲಾ:
a = p (1+r/n) ^ (n * t), ಇಲ್ಲಿ:
- a = ಮೆಚ್ಯೂರಿಟಿ ಮೊತ್ತ
- p = ಅಸಲು ಮೊತ್ತ
- r = ಎಫ್‌ಡಿ ಬಡ್ಡಿ ದರ
- n = ಕಾಂಪೌಂಡಿಂಗ್ ಫ್ರೀಕ್ವೆನ್ಸಿ
- t = ವರ್ಷದ ಅವಧಿ
ಪ್ರತಿ ತಿಂಗಳಿಗೆ 1 ಲಕ್ಷ ಫಿಕ್ಸೆಡ್ ಡೆಪಾಸಿಟ್ ಬಡ್ಡಿಯನ್ನು ಆವರ್ತನ ಮತ್ತು ಹಣಕಾಸು ಸಂಸ್ಥೆಯು ನೀಡುವ ಉತ್ತೇಜಿತ ಬಡ್ಡಿಯಿಂದ ನಿರ್ಧರಿಸಲಾಗುತ್ತದೆ. 1 ಲಕ್ಷದ ಫಿಕ್ಸೆಡ್ ಡೆಪಾಸಿಟ್‌ಗೆ ಮಾಸಿಕ ಬಡ್ಡಿಯನ್ನು ಲೆಕ್ಕ ಹಾಕಲು ಅಗತ್ಯವಾದ ಪ್ರಾಥಮಿಕ ಇನ್ಪುಟ್‌ಗಳು ಎಫ್‌ಡಿ ಬಡ್ಡಿ ದರ, ಕಾಲಾವಧಿ ಮತ್ತು ಮೊತ್ತವಾಗಿವೆ, ಈ ಸಂದರ್ಭದಲ್ಲಿ ಅದು 1 ಲಕ್ಷವಾಗಿದೆ.
ವಿವಿಧ ಪಾವತಿ ಫ್ರೀಕ್ವೆನ್ಸಿಗಳ ಆಧಾರದ ಮೇಲೆ 12 ತಿಂಗಳ ಅವಧಿಗೆ ₹1 ಲಕ್ಷದ ಎಫ್‌ಡಿ ಮೇಲೆ ನಿಮ್ಮ ಬಡ್ಡಿ ಪಾವತಿಗಳು ಹೇಗಿರುತ್ತವೆ ಎಂಬುದರ ಉದಾಹರಣೆ ಇಲ್ಲಿದೆ.
ಪಾವತಿ ಫ್ರೀಕ್ವೆನ್ಸಿ | ಬಡ್ಡಿ ದರ | ವಾರ್ಷಿಕ ಒಟ್ಟು ಬಡ್ಡಿ ಪಾವತಿ | m, q, h & y ಬಡ್ಡಿ ಪಾವತಿ | ಒಟ್ಟು ಪಾವತಿ |
---|---|---|---|---|
ಮಾಸಿಕ | 7.11% | 6,581 | 548 | 1,06,581* |
ತ್ರೈಮಾಸಿಕ | 7.15% | 6,620 | 551 | 1,06,620* |
ಅರ್ಧ ವಾರ್ಷಿಕ | 7.22% | 6,854 | 571 | 1,06,854* |
ವಾರ್ಷಿಕ | 7.35% | 6,980 | 581 | 1,06,980* |
ಆದ್ದರಿಂದ, ನೀವು 1 ಲಕ್ಷದ ಫಿಕ್ಸೆಡ್ ಡೆಪಾಸಿಟ್‌ಗೆ ಮಾಸಿಕ ಬಡ್ಡಿಯನ್ನು ನಿರ್ಧರಿಸಲು ಬಯಸಿದರೆ, ನೀವು ಮಾಸಿಕ ಬಡ್ಡಿ ಪಾವತಿಯನ್ನು 7.11% ರಲ್ಲಿ ವಿಂಗಡಿಸಬಹುದು, ಅಂದರೆ ವರ್ಷಕ್ಕೆ 6,581 ಮತ್ತು ಅದನ್ನು ತಿಂಗಳ ಸಂಖ್ಯೆಯಿಂದ, ಅಂದರೆ 12 ರಿಂದ ವಿಭಜಿಸಬಹುದು. ₹1,00,000 ಎಫ್‌ಡಿಗೆ ಮಾಸಿಕ ಬಡ್ಡಿ ₹548.
ಮುಕ್ತಾಯ
ಫಿಕ್ಸೆಡ್ ಡೆಪಾಸಿಟ್‌ಗಳು ಸುರಕ್ಷಿತ ಹೂಡಿಕೆಯನ್ನು ಬಯಸುವ ಮತ್ತು ಅಪಾಯವನ್ನು ತಪ್ಪಿಸಲು ಬಯಸುವ ಜನರಿಗೆ ಉತ್ತಮ ಹೂಡಿಕೆ ಸಾಧನವಾಗಿದೆ. ಪಾವತಿಯ ಫ್ಲೆಕ್ಸಿಬಿಲಿಟಿ ಮತ್ತು ಸುಲಭ ಲಭ್ಯತೆಯೊಂದಿಗೆ, ಇದು ದೇಶಾದ್ಯಂತ ಹೂಡಿಕೆದಾರರಿಗೆ ಆದ್ಯತೆಯ ಆಯ್ಕೆಯಾಗಿದೆ. ಆದರೂ ಹೂಡಿಕೆ ಮಾಡುವ ಮೊದಲು, ನಿಮಗೆ ಲಭ್ಯವಿರುವ ಎಲ್ಲಾ ಆಯ್ಕೆಗಳ ಬಗ್ಗೆ ತಿಳಿದುಕೊಳ್ಳುವುದು ಮತ್ತು ಅವುಗಳನ್ನು ಹೋಲಿಕೆ ಮಾಡುವುದು ಉತ್ತಮ.