ಫಿಕ್ಸೆಡ್ ಡೆಪಾಸಿಟ್ ರಶೀದಿ ಎಂಬುದು ಫಿಕ್ಸೆಡ್ ಡೆಪಾಸಿಟ್ ತೆರೆದಾಗ ಫೈನಾನ್ಶಿಯಲ್ ಸಂಸ್ಥೆಯಿಂದ ಡೆಪಾಸಿಟರ್‌ಗೆ ನೀಡಲಾಗುವ ಡಾಕ್ಯುಮೆಂಟ್ ಆಗಿದೆ. ಇದು ನೀವು ಮಳಿಗೆಯಿಂದ ಏನನ್ನಾದರೂ ಖರೀದಿಸುವಾಗ ಪಡೆಯುವ ಇನ್ವಾಯ್ಸ್‌ನಂತೆಯೇ ಇರುತ್ತದೆ. ಬಿಲ್‌ನಂತೆ, ಇದು ಫಿಕ್ಸೆಡ್ ಡೆಪಾಸಿಟ್ ಬಗ್ಗೆ ಎಲ್ಲಾ ವಿವರಗಳನ್ನು ಒಳಗೊಂಡಿದೆ.
ಎಫ್‌ಡಿಆರ್‌ನ ವಿವರಗಳು
ಎಫ್‌ಡಿ ರಶೀದಿ ಅಥವಾ ಎಫ್‌ಡಿಆರ್ ಒಂದು ಗಣನೀಯ ಡಾಕ್ಯುಮೆಂಟ್ ಆಗಿದ್ದು, ಇದು ಡೆಪಾಸಿಟ್ ಮಾಡಲಾದ ಹಣದ ಮೊತ್ತ, ಅದನ್ನು ನಿಗದಿಪಡಿಸಲಾದ ಸಮಯ ಮತ್ತು ಎಫ್‌ಡಿ ಲಾಕ್ ಮಾಡಲಾದ ಚಾಲ್ತಿಯಲ್ಲಿರುವ ಬಡ್ಡಿ ದರಗಳನ್ನು ನಮೂದಿಸುತ್ತದೆ.
ಎಫ್‌ಡಿ ಯೋಜನೆಯ ಪ್ರತಿಯೊಂದು ನಿರ್ದಿಷ್ಟ ವಿವರವು ಈ ಫಿಕ್ಸೆಡ್ ಡೆಪಾಸಿಟ್ ರಶೀದಿಯಲ್ಲಿದೆ. ಎಫ್‌ಡಿಆರ್ ಫಾರ್ಮ್ಯಾಟ್ ಇವುಗಳನ್ನು ಒಳಗೊಂಡಿದೆ:
- ಫೈನಾನ್ಶಿಯಲ್ ಸಂಸ್ಥೆಯ ಘೋಷಣೆ
- ಡೆಪಾಸಿಟರ್‌ಗಳ ಹೆಸರು ಮತ್ತು ವಯಸ್ಸು
- ಫಿಕ್ಸೆಡ್ ಡೆಪಾಸಿಟ್‌ಗೆ ಲಿಂಕ್ ಆದ ಅಕೌಂಟ್ ನಂಬರ್
- ಅಸಲು ಮೊತ್ತ ಅಥವಾ ಒಟ್ಟು ಡೆಪಾಸಿಟ್ ಮಾಡಲಾದ ಮೊತ್ತ
- ಡೆಪಾಸಿಟ್ ಕಾಲಾವಧಿ ಅಥವಾ ಅವಧಿ
- ಫಿಕ್ಸೆಡ್ ಡೆಪಾಸಿಟ್ ಮೇಲೆ ಅನ್ವಯವಾಗುವ ಬಡ್ಡಿ ದರ
- ಬುಕಿಂಗ್ ದಿನಾಂಕ
- ಮೆಚ್ಯೂರಿಟಿ ದಿನಾಂಕ
- ಟಿಡಿಎಸ್‌ಗೆ ಒಳಪಟ್ಟು ಮೆಚ್ಯೂರಿಟಿಯ ಮೇಲೆ ಡೆಪಾಸಿಟರ್ ಪಡೆಯಬೇಕಾದ ಬಡ್ಡಿ
- ನಾಮಿನಿ
- ದಂಡದ ದರಗಳು, ಎಫ್‌ಡಿ ಮೇಲಿನ ಲೋನ್‌ಗೆ ಸಂಬಂಧಿಸಿದ ಸೂಚನೆಗಳು ಮುಂತಾದ ಡೆಪಾಸಿಟ್‌ಗೆ ಸಂಬಂಧಿಸಿದ ಸೂಚನೆಗಳು.
ಈ ಫಿಕ್ಸೆಡ್ ಡೆಪಾಸಿಟ್ ರಶೀದಿಯು ಅಗತ್ಯವಾಗಿ ಮಾಲೀಕತ್ವದ ಪುರಾವೆಯಾಗಿದ್ದು, ಡೆಪಾಸಿಟರ್‌ಗಳು ಸುರಕ್ಷಿತವಾಗಿ ಇರಿಸಬೇಕಾದ ಪ್ರಮುಖ ಡಾಕ್ಯುಮೆಂಟ್ ಆಗಿದೆ.
ಓದಲೇಬೇಕಾದವು: ಭಾರತದಲ್ಲಿ ಫಿಕ್ಸೆಡ್ ಡೆಪಾಸಿಟ್‌ಗಳ ವಿಧಗಳು
ಎಫ್‌ಡಿಆರ್‌ನ ಉದ್ದೇಶ ಏನು?
ಫಿಕ್ಸೆಡ್ ಡೆಪಾಸಿಟ್ ರಶೀದಿಯು ಫೈನಾನ್ಶಿಯಲ್ ಸಂಸ್ಥೆಯು ಹಲವಾರು ಸಂದರ್ಭಗಳಲ್ಲಿ ಕೇಳಬಹುದಾದ ಪ್ರಮುಖ ಡಾಕ್ಯುಮೆಂಟ್ ಆಗಿದೆ:
ಎಫ್‌ಡಿ ನವೀಕರಣದ ಸಮಯದಲ್ಲಿ
ಆಫ್‌ಲೈನ್‌ನಲ್ಲಿ ಫಿಕ್ಸೆಡ್ ಡೆಪಾಸಿಟ್ ತೆರೆದಿದ್ದರೆ, ಡೆಪಾಸಿಟರ್ ಅದನ್ನು ನವೀಕರಿಸಲು ಅಸ್ತಿತ್ವದಲ್ಲಿರುವ ಎಫ್‌ಡಿಆರ್ ಅನ್ನು ಸರೆಂಡರ್ ಮಾಡಬೇಕಾಗಬಹುದು. ಅಪ್ಡೇಟ್ ಆದ ಕಾಲಾವಧಿಯೊಂದಿಗೆ ಹೊಸ ಎಫ್‌ಡಿ ರಶೀದಿಯನ್ನು ನೀಡಲಾಗುತ್ತದೆ.
ಅವಧಿ ಪೂರ್ವ ವಿತ್‌ಡ್ರಾವಲ್‌ಗಳಿಗಾಗಿ
ಡೆಪಾಸಿಟರ್ ಎಫ್‌ಡಿಯನ್ನು ಮುರಿಯಬೇಕು ಮತ್ತು ಮೆಚ್ಯೂರಿಟಿ ದಿನಾಂಕಕ್ಕಿಂತ ಮೊದಲು ಹಣವನ್ನು ವಿತ್‌ಡ್ರಾ ಮಾಡಬೇಕು ಎಂದು ಬಯಸಿದರೆ, ಅವರು ಎಫ್‌ಡಿ ರಶೀದಿಯನ್ನು ಮಾಲೀಕತ್ವದ ಪುರಾವೆಯಾಗಿ ನೀಡಬೇಕು.
ಎಫ್‌ಡಿ ಮೇಲೆ ಲೋನ್ ಪಡೆಯಲು
ನಗದು ತೊಂದರೆಯಂತಹ ಕಾರಣಗಳಿಗಾಗಿ ಡೆಪಾಸಿಟರ್‌ಗೆ ಲೋನ್ ಅಗತ್ಯವಿದ್ದರೆ, ಅವರು ತಮ್ಮ ಅಸ್ತಿತ್ವದಲ್ಲಿರುವ ಫಿಕ್ಸೆಡ್ ಡೆಪಾಸಿಟ್ ಮೇಲೆ ಅಪ್ಲೈ ಮಾಡಬಹುದು. ಈ ಲೋನನ್ನು ಭದ್ರತೆ ರಹಿತ ಲೋನಿಗಿಂತ ಕಡಿಮೆ ಬಡ್ಡಿ ದರದಲ್ಲಿ ನೀಡಲಾಗುತ್ತದೆ. ಈ ಲೋನ್ ಪಡೆಯಲು, ಅರ್ಜಿದಾರರು ಲೋನಿನ ಅವಧಿಗೆ ಎಫ್‌ಡಿಆರ್ ಅನ್ನು ಹಣಕಾಸು ಸಂಸ್ಥೆಗೆ ಡೆಪಾಸಿಟ್ ಮಾಡಬೇಕು. ಡೆಪಾಸಿಟರ್ ಲೋನನ್ನು ಮರುಪಾವತಿಸಿದ ನಂತರ, ಅವರು ಅಪ್ಡೇಟ್ ಆದ ವಿವರಗಳೊಂದಿಗೆ ಎಫ್‌ಡಿಆರ್ ಅನ್ನು ಮರಳಿ ಪಡೆಯುತ್ತಾರೆ.
ಓದಲೇಬೇಕಾದವು: ನಿಮ್ಮ ರಜಾದಿನವನ್ನು ಯೋಜಿಸಲು ಫಿಕ್ಸೆಡ್ ಡೆಪಾಸಿಟ್ ಯಾಕೆ ಉತ್ತಮ ಆಯ್ಕೆಯಾಗಿದೆ
ಫಿಕ್ಸೆಡ್ ಡೆಪಾಸಿಟ್ ರಶೀದಿ ಚೆಕ್‌ಲಿಸ್ಟ್
ಫಿಕ್ಸೆಡ್ ಡೆಪಾಸಿಟ್ ರಶೀದಿಗಳನ್ನು ಸರಿಯಾಗಿ ಪರಿಶೀಲಿಸುವುದು ಮುಖ್ಯವಾಗಿದೆ ಏಕೆಂದರೆ ಅವುಗಳು ಫಿಕ್ಸೆಡ್ ಡೆಪಾಸಿಟ್ ನಿಯಮಗಳನ್ನು ಒಳಗೊಂಡಿರುತ್ತವೆ. ಹಣಕಾಸು ಸಂಸ್ಥೆಯಿಂದ ಎಫ್‌ಡಿಆರ್ ಸ್ವೀಕರಿಸುವಾಗ ನೋಡಬೇಕಾದ ಕೆಲವು ವಿವರಗಳು:
- ಅನ್ವಯವಾಗುವ ಫಿಕ್ಸೆಡ್ ಡೆಪಾಸಿಟ್ ಬಡ್ಡಿ ದರಗಳು ಮತ್ತು ನಿಯಮಗಳು: ಇದು ಎಫ್‌ಡಿಯ ಅತ್ಯಂತ ಮೂಲಭೂತ ಅಂಶವಾಗಿದ್ದು, ಇದನ್ನು ಡಬಲ್-ಚೆಕ್ ಮಾಡಬೇಕು. ಮೆಚ್ಯೂರಿಟಿ ಅವಧಿ ಮತ್ತು ಅನ್ವಯವಾಗುವ ಫಿಕ್ಸೆಡ್ ಡೆಪಾಸಿಟ್ ಬಡ್ಡಿ ದರಗಳನ್ನು, ವಿಶೇಷವಾಗಿ ಅಸ್ತಿತ್ವದಲ್ಲಿರುವ ಫಿಕ್ಸೆಡ್ ಡೆಪಾಸಿಟ್ ಅನ್ನು ನವೀಕರಿಸುವಾಗ ಗಮನಿಸಬೇಕು. ಏಕೆಂದರೆ ಬಡ್ಡಿ ದರವು ಬದಲಾವಣೆಗೆ ಒಳಪಡುತ್ತದೆ ಮತ್ತು ನವೀಕರಣದ ಸಮಯದಲ್ಲಿ ಅದು ಬದಲಾಗಬಹುದು.
- ಆಟೋ-ರಿನೀವಲ್ ದಿನಾಂಕಗಳು ಮತ್ತು ಮೆಚ್ಯೂರಿಟಿ: ಎಫ್‌ಡಿಆರ್ ಅಂಗೀಕರಿಸುವ ಮೊದಲು ಮೆಚ್ಯೂರಿಟಿ ದಿನಾಂಕವನ್ನು ಪರಿಶೀಲಿಸುವುದು ಮುಖ್ಯವಾಗಿದೆ. ಇಲ್ಲದಿದ್ದರೆ, ಸ್ಪಷ್ಟತೆ ಸಿಗದಿರಬಹುದು, ಮತ್ತು ಮೆಚ್ಯೂರಿಟಿ ದಿನಾಂಕಕ್ಕೂ ಮೊದಲು ಮೊತ್ತವನ್ನು ಅಕ್ಸೆಸ್ ಮಾಡಬಹುದು. ಇದರಿಂದ ಮೆಚ್ಯೂರಿಟಿಗೆ ಮುಂಚಿತವಾಗಿ ವಿತ್‌ಡ್ರಾವಲ್ ಕಾರಣದಿಂದಾಗಿ ಬಡ್ಡಿಯ ನಷ್ಟದಂತಹ ಹಣಕಾಸಿನ ನಷ್ಟ ಉಂಟಾಗಬಹುದು. ಡೆಪಾಸಿಟರ್ ಆಟೋ-ರಿನೀವಲ್ ಸೌಲಭ್ಯವನ್ನು ಆಯ್ಕೆ ಮಾಡಿದ್ದರೆ ನವೀಕರಣ ದಿನಾಂಕದ ಬಗ್ಗೆ ಸ್ಪಷ್ಟತೆ ಇರಬೇಕು.
- ಶುಲ್ಕಗಳು ಮತ್ತು ದಂಡಗಳು: ಫಿಕ್ಸೆಡ್ ಡೆಪಾಸಿಟ್‌ಗೆ ಸಂಬಂಧಿಸಿದ ಯಾವುದೇ ಶುಲ್ಕಗಳು ಅಥವಾ ದಂಡಗಳನ್ನು ಎಫ್‌ಡಿ ರಶೀದಿಯಲ್ಲಿ ತಿಳಿಸಬೇಕು.
- ನಾಮಿನೇಶನ್ ವಿವರಗಳು: ಒಂದು ವೇಳೆ ಡೆಪಾಸಿಟರ್‌ಗೆ ಏನಾದರೂ ಕೆಟ್ಟದ್ದು ಸಂಭವಿಸಿದರೆ ಎಫ್‌ಡಿ ಮೊತ್ತವನ್ನು ಪಡೆಯುವ ವ್ಯಕ್ತಿಯು ನಾಮಿನಿಯಾಗಿರುತ್ತಾರೆ. ಭವಿಷ್ಯದ ಸಮಸ್ಯೆಗಳನ್ನು ತಪ್ಪಿಸಲು ಈ ನಿರ್ದಿಷ್ಟ ವಿವರವನ್ನು ಕೂಡ ಕ್ರಾಸ್-ಚೆಕ್ ಮಾಡಬೇಕು.
ಈ ಮೊದಲು, ಈ ಎಫ್‌ಡಿ ರಶೀದಿಗಳು ಮಾಲೀಕತ್ವದ ಏಕೈಕ ಪುರಾವೆಯಾಗಿದ್ದು, ಅದನ್ನು ಸುರಕ್ಷಿತವಾಗಿ ಇರಿಸಬೇಕಾಗಿತ್ತು. ಈಗ ಎಫ್‌ಡಿಗಳನ್ನು ತೆರೆಯುವ ಸಂಪೂರ್ಣ ಪ್ರಕ್ರಿಯೆ ಆನ್ಲೈನ್ ಆಗಿರುವುದರಿಂದ, ಡೆಪಾಸಿಟರ್‌ಗಳು ಆನ್ಲೈನ್ ಎಫ್‌ಡಿಆರ್ ಪಡೆಯುವ ಸಾಧ್ಯತೆ ಹೆಚ್ಚಾಗಿದ್ದು, ಇದನ್ನು ಸುಲಭವಾಗಿ ಅಕ್ಸೆಸ್ ಮಾಡಬಹುದು. ಆಫ್ಲೈನ್‌ನಲ್ಲಿ ಬ್ಯಾಂಕಿಂಗ್ ಸೇವೆಗಳನ್ನು ಅನುಸರಿಸುವವರು ಈ ರಶೀದಿಯನ್ನು ಸುರಕ್ಷಿತ ಸ್ಥಳದಲ್ಲಿ ಇರಿಸಬೇಕು ಮತ್ತು ಅಗತ್ಯವಿದ್ದಾಗ ಒದಗಿಸಬೇಕು.