ನಾವೆಲ್ಲರೂ ಟ್ರಾವೆಲ್ ಮಾಡಲು ಮತ್ತು ನಮ್ಮದೇ ರೀತಿಯಲ್ಲಿ ಜಗತ್ತನ್ನು ಅನ್ವೇಷಿಸುವ ಬಯಕೆಯನ್ನು ಹೊಂದಿರುತ್ತೇವೆ ಮತ್ತು ನಾವು ಆ ಆಸೆಯನ್ನು ಹಾಗೆಯೇ ಮುಚ್ಚಿಟ್ಟು ಬಿಟ್ಟಿರುತ್ತೇವೆ. ಏಕೆಂದರೆ ನಮ್ಮ ಆದಾಯ ಅಥವಾ ಉಳಿತಾಯವು ಖರ್ಚುಗಳನ್ನು ಪೂರೈಸಲು ಕಡಿಮೆಯಾಗಬಹುದು ಮತ್ತು ನಮ್ಮ ಆರ್ಥಿಕ ಸ್ಥಿರತೆಯನ್ನು ಹಳಿ ತಪ್ಪಿಸಬಹುದು ಎಂದು ನಾವು ಭಾವಿಸುತ್ತೇವೆ.
ಆದರೆ ಇದು ನಿಜವಲ್ಲ ಮತ್ತು ನಿಮ್ಮ ನಿಯಮಿತ ಉಳಿತಾಯಗಳ ಮೇಲೆ ಪರಿಣಾಮ ಬೀರದೆ ನೀವು ಸ್ಮಾರ್ಟ್ ಮತ್ತು ಯೋಜಿತ ಹೂಡಿಕೆಗಳ ಮೂಲಕ ನಿಮ್ಮ ಪ್ರಯಾಣದ ಯೋಜನೆಗಳಿಗೆ ಸುಲಭವಾಗಿ ಹಣಕಾಸು ಒದಗಿಸಬಹುದು.
ಮತ್ತು, ನಿಮ್ಮ ಪ್ರಯಾಣದ ಗುರಿಗಳಿಗೆ ಹಣಕಾಸು ಒದಗಿಸಲು ಎಫ್‌ಡಿಯಲ್ಲಿ ಹೂಡಿಕೆ ಮಾಡುವುದು ಅತ್ಯಂತ ಸೂಕ್ತ ವಿಧಾನವಾಗಿದೆ. ನಿಮ್ಮ ರಜಾದಿನವನ್ನು ಯೋಜಿಸಲು ಫಿಕ್ಸೆಡ್ ಡೆಪಾಸಿಟ್‌ಗಳನ್ನು ಆಯ್ಕೆ ಮಾಡುವ ಕೆಲವು ಪ್ರಯೋಜನಗಳು ಇಲ್ಲಿವೆ:
ಆಕರ್ಷಕ ಬಡ್ಡಿ ದರ
ಸಾಮಾನ್ಯ ಉಳಿತಾಯ ಬ್ಯಾಂಕ್ ಅಕೌಂಟ್‌ಗೆ ಹೋಲಿಸಿದರೆ, ಫಿಕ್ಸೆಡ್ ಡೆಪಾಸಿಟ್‌ಗಳು ಡೆಪಾಸಿಟ್‌ಗಳ ಮೇಲೆ ಹೆಚ್ಚಿನ ಆದಾಯದ ದರವನ್ನು ನೀಡುವ ಮೂಲಕ ಅದನ್ನು ಆಕರ್ಷಕ ಆಯ್ಕೆಯಾಗಿ ಮಾಡುತ್ತದೆ. ಇದಲ್ಲದೆ, ವಾರ್ಷಿಕವಾಗಿ ಬಡ್ಡಿ ದರಗಳನ್ನು ಸಂಯೋಜಿಸಲಾಗುತ್ತದೆ ; ಇದು ಹೆಚ್ಚು ತ್ವರಿತವಾಗಿ ಸಂಪತ್ತನ್ನು ಸಂಗ್ರಹಿಸಲು ಸಹಾಯ ಮಾಡುತ್ತದೆ.
ಅಲ್ಲದೆ, ಕಂಪನಿ ಡೆಪಾಸಿಟ್‌ಗಳು ಎಂದೂ ಕರೆಯಲ್ಪಡುವ ಎಚ್ಎಫ್‌ಸಿಗಳು/ಎನ್‌ಬಿಎಫ್‌ಸಿಗಳು ನೀಡುವ ಎಫ್‌ಡಿ ಯೋಜನೆಗಳು, ಭಾರತದಲ್ಲಿ ಹೆಚ್ಚಿನ ಎಫ್‌ಡಿ ದರಗಳನ್ನು ನೀಡುತ್ತದೆ ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ. ಉದಾಹರಣೆಗೆ, ಭಾರತದ 2 ನೇ ಅತಿದೊಡ್ಡ ಡೆಪಾಸಿಟ್-ಪಡೆಯುವ ಎಚ್ಎಫ್‌ಸಿ ಆಗಿರುವ, ಪಿಎನ್‌ಬಿ ಹೌಸಿಂಗ್ ಲಿಮಿಟೆಡ್ ಹೆಚ್ಚಿನ ಬ್ಯಾಂಕ್‌ಗಳಿಗಿಂತ ತುಲನಾತ್ಮಕವಾಗಿ ಹೆಚ್ಚಿನ ಬಡ್ಡಿ ದರಗಳನ್ನು ನೀಡುತ್ತದೆ.
ಖಾತರಿ ಆದಾಯ
ಫಿಕ್ಸೆಡ್ ಡೆಪಾಸಿಟ್‌ಗಳು ಯಾವುದೇ ಮಾರುಕಟ್ಟೆ ಸಂಬಂಧಿತ ಅಸ್ಥಿರತೆ ಅಥವಾ ಬಾಹ್ಯ ಅಂಶಗಳಿಂದ ಬದಲಾಗದೇ ಇರುವುದರಿಂದ, ಎಫ್‌ಡಿ ರಿಟರ್ನ್‌ಗಳು ಖಚಿತವಾಗಿವೆ ಮತ್ತು ಅಪಾಯ-ಮುಕ್ತವಾಗಿವೆ. ಎಫ್‌ಡಿ ಅಕೌಂಟ್ ತೆರೆಯುವ ಸಮಯದಲ್ಲಿ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯಿಂದ ಮೆಚ್ಯೂರಿಟಿ ವೇಳೆಯಲ್ಲಿ ಎಫ್‌ಡಿ ಮೊತ್ತ ಎಷ್ಟು ಎಂದು ತಿಳಿಸಲಾಗುತ್ತದೆ. ಅದಕ್ಕೆ ಅನುಗುಣವಾಗಿ ನಿಮ್ಮ ರಜಾದಿನವನ್ನು ಯೋಜಿಸಲು ಇದು ಸಹಾಯ ಮಾಡುತ್ತದೆ.
ಓದಲೇಬೇಕಾದವು: ಫಿಕ್ಸೆಡ್ ಡೆಪಾಸಿಟ್ ಅಕೌಂಟ್‌ನ ಫೀಚರ್‌ಗಳು ಮತ್ತು ಪ್ರಯೋಜನಗಳು ಯಾವುವು?
ಫ್ಲೆಕ್ಸಿಬಲ್ ಕಾಲಾವಧಿ
ರಜಾದಿನಗಳ ಯೋಜನೆಗೆ ಫಿಕ್ಸೆಡ್ ಡೆಪಾಸಿಟ್‌ಗಳು ಏಕೆ ಸೂಕ್ತವಾದ ಆಯ್ಕೆ ಎಂಬುದಕ್ಕೆ ಇನ್ನೊಂದು ಕಾರಣವೆಂದರೆ ಅದರ ಫ್ಲೆಕ್ಸಿಬಲ್ ಕಾಲಾವಧಿ ಫೀಚರ್. ಪಿಎನ್‌ಬಿ ಹೌಸಿಂಗ್‌ನಲ್ಲಿ ಎಫ್‌ಡಿ ಅವಧಿಯು 12 ತಿಂಗಳಿಂದ 10 ವರ್ಷಗಳವರೆಗೆ ಇರುತ್ತದೆ, ಇದು ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ನಿಮ್ಮ ಡೆಪಾಸಿಟ್‌ಗಳನ್ನು ಲಾಕ್-ಇನ್ ಮಾಡಲು ಸಹಾಯ ಮಾಡುತ್ತದೆ.
ಉದಾಹರಣೆಗೆ, ನೀವು ಮುಂದಿನ 3 ವರ್ಷಗಳಲ್ಲಿ ವಿದೇಶ ಪ್ರವಾಸಕ್ಕೆ ಹೋಗಲು ಯೋಜಿಸುತ್ತಿದ್ದರೆ, ನೀವು 36 ತಿಂಗಳವರೆಗೆ ಡೆಪಾಸಿಟ್ ಮಾಡಬಹುದು ಮತ್ತು ನಿಮ್ಮ ಪ್ರಯಾಣದ ವೆಚ್ಚಗಳನ್ನು ಪೂರೈಸಲು ಸಾಕಷ್ಟು ಹಣವನ್ನು ಸೇರಿಸಬಹುದು.
ಹೊಂದಿಕೊಳ್ಳುವ ಹೂಡಿಕೆ ಮೊತ್ತ
ಫಿಕ್ಸೆಡ್ ಡೆಪಾಸಿಟ್ ಹೂಡಿಕೆಯನ್ನು ₹10,000 ದಷ್ಟು ಕಡಿಮೆ ಮೊತ್ತದೊಂದಿಗೆ ಪ್ರಾರಂಭಿಸಬಹುದು, ಮತ್ತು ಅದಕ್ಕೆ ಯಾವುದೇ ಗರಿಷ್ಠ ಮಿತಿ ಇಲ್ಲ. ಆದ್ದರಿಂದ, ಇದು ಎರಡೂ ರೀತಿಯ ಟ್ರಾವೆಲ್ ಪ್ಲಾನ್‌ಗಳಿಗೆ, ಅಂದರೆ ಸಣ್ಣ ಬಜೆಟ್ ಪ್ರವಾಸವಾಗಿರಲಿ ಅಥವಾ ನಿಯಮಿತ ರಜಾದಿನವಾಗಿರಲಿ ಎರಡಕ್ಕೂ ಸೂಕ್ತವಾದ ಹೂಡಿಕೆ ಆಯ್ಕೆಯಾಗಿದೆ.
ಫಂಡ್‌ಗಳಿಗೆ ತ್ವರಿತ ಅಕ್ಸೆಸ್
ನಿಮ್ಮ ರಜಾದಿನಕ್ಕಾಗಿ ಹಣಕಾಸಿನ ಯೋಜನೆಯು ಮುಂಚಿತವಾಗಿ, ಅಂದರೆ ನಿಗದಿತ ದಿನಾಂಕಕ್ಕಿಂತ 1 ರಿಂದ 2 ವರ್ಷಗಳ ಮೊದಲು ಆರಂಭವಾಗುತ್ತದೆ. ಮತ್ತು, ಸಾಮಾನ್ಯವಾಗಿ, ಪ್ರಯಾಣ ಮತ್ತು ಕಾಯ್ದಿರಿಸುವಿಕೆಗಳ ನಿಜವಾದ ದಿನಾಂಕವನ್ನು ಮುಂಚಿತವಾಗಿ ಅಂತಿಮಗೊಳಿಸಲಾಗುವುದಿಲ್ಲ. ಆದ್ದರಿಂದ, ನೀವು ಖಚಿತವಾದ ಆದಾಯ ಮತ್ತು ಫಂಡ್‌ಗಳಿಗೆ ತ್ವರಿತ ಅಕ್ಸೆಸ್ ಪಡೆಯುವ ಆಯ್ಕೆಯಲ್ಲಿ ಹೂಡಿಕೆ ಮಾಡುವುದು ಮುಖ್ಯವಾಗಿದೆ.
ಇಲ್ಲಿ ಎಫ್‌ಡಿ ಕೆಲಸ ಮಾಡುತ್ತದೆ. ಇದು ಖಚಿತವಾದ ಆದಾಯವನ್ನು ಖಚಿತಪಡಿಸುವುದು ಮಾತ್ರವಲ್ಲದೆ, ನಿಮ್ಮ ರಜಾದಿನದ ಅವಶ್ಯಕತೆಗಳನ್ನು ಪೂರೈಸಲು ತ್ವರಿತ ಲಿಕ್ವಿಡಿಟಿಯನ್ನು ಒದಗಿಸುತ್ತದೆ. ಅಲ್ಲದೆ, ಎಲ್ಲಾ ಸಮಯದಲ್ಲೂ ನಿಮ್ಮ ಎಫ್‌ಡಿ ಸ್ಟೇಟಸ್ ಬಗ್ಗೆ ನೀವು ತಿಳಿದಿರುತ್ತೀರಿ.
ಪ್ರವಾಸವನ್ನು ಸ್ಮರಣೀಯ ಮತ್ತು ಸುಂದರ ಅನುಭವವನ್ನಾಗಿ ಮಾಡಲು ಹಣಕಾಸಿನ ವ್ಯವಸ್ಥೆ ಮಾಡುವುದರಿಂದ ಹಿಡಿದು, ಎಲ್ಲಾ ಲಾಜಿಸ್ಟಿಕ್‌ಗಳನ್ನು ನೋಡಿಕೊಳ್ಳುವವರೆಗೆ ಪರಿಪೂರ್ಣ ರಜಾದಿನಕ್ಕೆ ಪರಿಣಾಮಕಾರಿ ಯೋಜನೆಯ ಅಗತ್ಯವಿದೆ. ಮತ್ತು, ಫಿಕ್ಸೆಡ್ ಡೆಪಾಸಿಟ್ ಹೂಡಿಕೆಯೊಂದಿಗೆ ಅದನ್ನು ಯೋಜಿಸುವುದು ನಿಮ್ಮ ಕನಸಿನ ರಜಾದಿನವನ್ನು ನನಸಾಗಿಸಲು ಮತ್ತು ಪ್ರಾರಂಭಿಸಲು ಉತ್ತಮ ಮಾರ್ಗವಾಗಿದೆ.