ಎಫ್‌ಡಿ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಫಿಕ್ಸೆಡ್ ಡೆಪಾಸಿಟ್‌ಗಳು, ಉತ್ತಮ ಆದಾಯವನ್ನು ನೀಡುವ ಜೊತೆಗೆ ನಿಗದಿತ ಅವಧಿಗೆ ಹಣವನ್ನು ಹೂಡಿಕೆ ಮಾಡಲು ಹೆಚ್ಚು ಬೇಡಿಕೆಯಿರುವ ಸಾಧನಗಳಲ್ಲಿ ಒಂದಾಗಿದೆ.
ಕಾರ್ಪೊರೇಟ್‌ಗಳು ಮತ್ತು ಹೌಸಿಂಗ್ ಫೈನಾನ್ಸ್ ಕಂಪನಿಗಳು (ಎಚ್ಎಫ್‌ಸಿ) ನೀಡುವ ಎಫ್‌ಡಿಗಳು ಪೂರ್ವ-ನಿರ್ಧರಿತ ಬಡ್ಡಿ ದರವನ್ನು ನೀಡುತ್ತವೆ ಮತ್ತು ಹಿರಿಯ ನಾಗರಿಕರಂತಹ ಕೆಲವು ವಿಭಾಗಗಳಿಗೆ ವಿಶೇಷ ಯೋಜನೆಗಳನ್ನು ಸಹ ಒದಗಿಸುತ್ತವೆ. ಇದು ಸಂಸ್ಥೆಗಳಿಗೆ ಹಣವನ್ನು ಸಂಗ್ರಹಿಸಲು ಮತ್ತು ಬಿಸಿನೆಸ್ ಉದ್ದೇಶಗಳಿಗಾಗಿ ಅವುಗಳನ್ನು ನಿಯೋಜಿಸಲು ಸಹಾಯ ಮಾಡುತ್ತದೆ. ಹಾಗೆಯೇ ಡೆಪಾಸಿಟರ್‌ಗಳು ತಮ್ಮ ಹೂಡಿಕೆಯ ಮೇಲೆ ಖಚಿತವಾದ ಬಡ್ಡಿ ಗಳಿಕೆಗಳನ್ನು ಆನಂದಿಸುತ್ತಾರೆ.
ಇಕ್ವಿಟಿ, ಮ್ಯೂಚುಯಲ್ ಫಂಡ್‌ಗಳು ಅಥವಾ ಬ್ಯಾಂಕ್ ಎಫ್‌ಡಿಗಳಿಗೆ ಬದಲಾಗಿ ಕಾರ್ಪೊರೇಟ್ ಎಫ್‌ಡಿಯಲ್ಲಿ ಅಥವಾ ಎಚ್‌ಎಫ್‌ಸಿಗಳು ನೀಡುವ ಫಿಕ್ಸೆಡ್ ಡೆಪಾಸಿಟ್‌ಗಳಲ್ಲಿ ಹೂಡಿಕೆ ಮಾಡುವ ಪ್ರಯೋಜನಗಳೇನು ಎಂಬ ಕೆಲವು ಅಂಶಗಳ ಬಗ್ಗೆ ಹೂಡಿಕೆದಾರರು ಯೋಚಿಸಬಹುದು. ಅವುಗಳು ಎಷ್ಟು ಸುರಕ್ಷಿತವಾಗಿವೆ ಮತ್ತು ಈ ಗಳಿಕೆಗಳಿಗೆ ಯಾವುದಾದರೂ ತೆರಿಗೆ ನಿಯಮಗಳು ಇವೆಯೇ ? ಅವುಗಳಿಗೆ ಇಲ್ಲಿ ಉತ್ತರಗಳನ್ನು ನೋಡೋಣ..
ಕಾರ್ಪೊರೇಟ್ ಎಫ್‌ಡಿಯಲ್ಲಿ ಹೂಡಿಕೆ ಮಾಡುವ ಪ್ರಯೋಜನ:
- ಬಂಡವಾಳ ಮಾರುಕಟ್ಟೆ ಅಪಾಯಗಳು ಮತ್ತು ಅನಿಶ್ಚಿತತೆಗೆ ವಿರುದ್ಧವಾಗಿರುವವರಿಗೆ, ಫಿಕ್ಸೆಡ್ ಡೆಪಾಸಿಟ್‌ಗಳು ಸುರಕ್ಷಿತ ಹೂಡಿಕೆ ಆಗಿರುವುದರಿಂದ ಸರಿಯಾದ ಆಯ್ಕೆಯಾಗಿದೆ. ಎಫ್‌ಡಿ ದರಗಳಲ್ಲಿ ಯಾವುದೇ ಬದಲಾವಣೆಯು ಹೊಸ ಹೂಡಿಕೆದಾರರ ಮೇಲೆ ಮಾತ್ರ ಪರಿಣಾಮ ಬೀರುತ್ತದೆ. ಅದರಲ್ಲಿಯೂ, ಕಾರ್ಪೊರೇಟ್‌ಗಳು ನೀಡುವ ಫಿಕ್ಸೆಡ್ ಡೆಪಾಸಿಟ್‌ಗಳು ಮತ್ತು ಎಚ್ಎಫ್‌ಸಿಗಳು ಬ್ಯಾಂಕ್ ಎಫ್‌ಡಿಗಳಿಗಿಂತ ತುಲನಾತ್ಮಕವಾಗಿ ಹೆಚ್ಚಿನ ಬಡ್ಡಿ ದರವನ್ನು ಒದಗಿಸುತ್ತವೆ. ಪಿಎನ್‌ಬಿ ಹೌಸಿಂಗ್ ಎಫ್‌ಡಿ ದರಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ
- ಹೂಡಿಕೆದಾರರು ತಮ್ಮ ಡೆಪಾಸಿಟ್‌ಗಳನ್ನು ಕೆಲವು ವರ್ಷಗಳವರೆಗೆ ಲಾಕ್ ಮಾಡಿರುವುದರಿಂದ ಚಿಂತಿಸಬೇಕಾಗಿಲ್ಲ. ಆ ಸಮಯದಲ್ಲಿ ಅವರು ತಮ್ಮ ಆಯ್ಕೆಯ ಪ್ರಕಾರ ಒಟ್ಟುಗೂಡಿಸದ ಬಡ್ಡಿ ಪಾವತಿಯನ್ನು- ಮಾಸಿಕ, ತ್ರೈಮಾಸಿಕ, ಅರ್ಧ-ವಾರ್ಷಿಕ ಅಥವಾ ವಾರ್ಷಿಕ ಬಡ್ಡಿ ಪಾವತಿಯನ್ನು ಆಯ್ಕೆ ಮಾಡಬಹುದು ಅಥವಾ ಒಟ್ಟುಗೂಡಿಸಿದ, ಅಂದರೆ ಅಸಲು ಮೊತ್ತ ಮತ್ತು ಒಟ್ಟು ಬಡ್ಡಿಯನ್ನು ಮೆಚ್ಯೂರಿಟಿಯ ನಂತರ ಪಾವತಿಸುವುದನ್ನು ಆಯ್ಕೆ ಮಾಡಬಹುದು
- ಫಿಕ್ಸೆಡ್ ಡೆಪಾಸಿಟ್‌ನ ಶಕ್ತಿಯು ಸಂಯೋಜನೆಯಲ್ಲಿದೆ, ಅಲ್ಲಿ ಕಾಲಕ್ರಮೇಣ ಗಳಿಸಿದ ಹಣವನ್ನು ಮರುಹೂಡಿಕೆ ಮಾಡಲಾಗುತ್ತದೆ
- ಡೆಪಾಸಿಟ್ ಪಡೆಯುವ ಅನೇಕ ಕಾರ್ಪೊರೇಟ್ ಹೌಸ್‌ಗಳು ಮತ್ತು ಹೌಸಿಂಗ್ ಫೈನಾನ್ಸ್ ಕಂಪನಿಗಳು ಗ್ರಾಹಕರಿಗೆ ಪರಿಣಾಮಕಾರಿ ಸೇವೆಯನ್ನು ಒದಗಿಸುವ ದೇಶಾದ್ಯಂತ ಇರುವ ವಿಶಾಲವಾದ ಬ್ರೋಕರ್‌ಗಳು ಮತ್ತು ರಿಲೇಶನ್‌ಶಿಪ್ ಮ್ಯಾನೇಜರ್‌ಗಳ ನೆಟ್ವರ್ಕ್ ಮೂಲಕ ಫಿಕ್ಸೆಡ್ ಡೆಪಾಸಿಟ್‌ಗಳನ್ನು ಒದಗಿಸುತ್ತವೆ. ಪಿಎನ್‌ಬಿ ಹೌಸಿಂಗ್‌ನೊಂದಿಗೆ, ನೀವು ಅಕೌಂಟ್‌ಗಳ ಸ್ಟೇಟ್ಮೆಂಟ್ ಪಡೆಯುವ, ಪ್ರಶ್ನೆಗಳನ್ನು ಸಲ್ಲಿಸುವ ಮತ್ತು ಗ್ರಾಹಕ ಪೋರ್ಟಲ್‌ನಲ್ಲಿ ಲೈವ್ ಚಾಟ್ ಮೂಲಕ ಅಧಿಕಾರಿಗಳೊಂದಿಗೆ ಮಾತನಾಡುವ ಪ್ರಯೋಜನಗಳನ್ನು ಪಡೆಯಬಹುದು. ಯಾವುದೇ ತೊಂದರೆಯಿಲ್ಲದೆ ನಿಮ್ಮ ಡೆಪಾಸಿಟ್ ಅನ್ನು ಆಟೋಮ್ಯಾಟಿಕ್ ಆಗಿ ನವೀಕರಣಗೊಳಿಸುವ ಫೀಚರ್ ಕೂಡಾ ಲಭ್ಯವಿದೆ.
ಸುರಕ್ಷತೆ:
- ಎಲ್ಲಾ ಕಂಪನಿಗಳು ಮತ್ತು ಎಚ್ಎಫ್‌ಸಿಗಳು ಭಾರತದಲ್ಲಿ ಡೆಪಾಸಿಟ್‌ಗಳನ್ನು ಒದಗಿಸಲು ಸಾಧ್ಯವಿಲ್ಲ. ಆ ಕುರಿತು ಅಪ್ಲೈ ಮಾಡುವ ಸಂಸ್ಥೆಗಳಿಗೆ ಅಪೆಕ್ಸ್ ಸಂಸ್ಥೆಗಳು ಪರವಾನಗಿಗಳನ್ನು ನೀಡುತ್ತವೆ, ಆ ನಂತರ ಮಾತ್ರ ಆ ಸಂಸ್ಥೆಗಳು ಸಾರ್ವಜನಿಕರಿಂದ ಡೆಪಾಸಿಟ್‌ಗಳನ್ನು ಅಂಗೀಕರಿಸಬಹುದು
- ಕಾರ್ಪೊರೇಟ್ ಎಫ್‌ಡಿಗಳು ಮತ್ತು ಎಚ್ಎಫ್ಸಿಗಳು ನೀಡುವ ಡೆಪಾಸಿಟ್‌ಗಳನ್ನು ವಿವಿಧ ಅಂಶಗಳ ಆಧಾರದ ಮೇಲೆ ಕ್ರೆಡಿಟ್ ರೇಟಿಂಗ್ ಏಜೆನ್ಸಿಗಳು ರೇಟ್ ಮಾಡುತ್ತವೆ. 'ಎಎಎ' ಅಥವಾ ಅದಕ್ಕಿಂತ ಹೆಚ್ಚಿನ ದರದ ಫಿಕ್ಸೆಡ್ ಡೆಪಾಸಿಟ್‌ಗಳು ಉನ್ನತ ಮಟ್ಟದ ಸುರಕ್ಷತೆಯನ್ನು ಸೂಚಿಸುತ್ತವೆ ಮತ್ತು ಹೂಡಿಕೆದಾರರು ಅವುಗಳನ್ನು ಪರಿಗಣಿಸಬಹುದು. ಪಿಎನ್‌ಬಿ ಹೌಸಿಂಗ್ ಫಿಕ್ಸೆಡ್ ಡೆಪಾಸಿಟ್‌ನ ಕ್ರೆಡಿಟ್ ರೇಟಿಂಗ್ ತಿಳಿದುಕೊಳ್ಳಲು, ಇಲ್ಲಿ ಕ್ಲಿಕ್ ಮಾಡಿ
- ಎಫ್‌ಡಿಗಳನ್ನು ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಲಾಗುತ್ತದೆ, ಆದಾಗ್ಯೂ, ಯಾವುದೇ ಸಣ್ಣ ಅಪಾಯಗಳನ್ನು ಕಡಿಮೆ ಮಾಡಲು ವ್ಯಕ್ತಿಯು ಟ್ರಾನ್ಸಾಕ್ಷನ್ ಅನ್ನು ಕಾರ್ಯಗತಗೊಳಿಸುವ ಮೊದಲು ಕ್ರೆಡಿಟ್ ರೇಟಿಂಗ್‌ಗಳೊಂದಿಗೆ ಕಂಪನಿಯ ಮೂಲಭೂತ ಅಂಶಗಳು, ಹಣಕಾಸುಗಳು, ಪ್ರತಿಷ್ಠಾನ ಮತ್ತು ಬ್ರ್ಯಾಂಡ್ ವಿಂಟೇಜ್ ಅನ್ನು ಪರಿಶೀಲಿಸಬೇಕು
ತೆರಿಗೆ ಹೊಣೆಗಾರಿಕೆ:
- ಬ್ಯಾಂಕ್ ಎಫ್‌ಡಿಗಳಂತೆ, ಕಾರ್ಪೊರೇಟ್ ಎಫ್‌ಡಿಗಳು ಮತ್ತು ಎಚ್ಎಫ್ಸಿಗಳು ನೀಡುವ ಫಿಕ್ಸೆಡ್ ಡೆಪಾಸಿಟ್‌ಗಳ ಮೇಲೆ ಗಳಿಸಿದ ಬಡ್ಡಿ ಕೂಡ ಡೆಪಾಸಿಟ್ ಹೊಂದಿರುವವರ ಅತ್ಯಧಿಕ ಆದಾಯ ತೆರಿಗೆ ಮಿತಿಯಲ್ಲಿ ತೆರಿಗೆಗೆ ಒಳಪಡುತ್ತದೆ. ಆದಾಗ್ಯೂ, ಡೆಪಾಸಿಟ್‌ನಿಂದ ಗಳಿಸಿದ ವಾರ್ಷಿಕ ಬಡ್ಡಿ ಆದಾಯವು ₹5,000 ಕ್ಕಿಂತ ಹೆಚ್ಚಾಗಿದ್ದರೆ ಮಾತ್ರ ಹೂಡಿಕೆದಾರರು ತೆರಿಗೆ ಪಾವತಿಸಬೇಕಾಗುತ್ತದೆ.
ಬಹುತೇಕ ಭಾರತೀಯ ಹೂಡಿಕೆ ಸಾಧನಗಳು ನೀಡುವಂತೆಯೇ, ಕಂಪನಿಗಳು ಮತ್ತು ಎಚ್ಎಫ್ಸಿಗಳು ನೀಡುವ ಎಫ್‌ಡಿಗಳು ವಿವಿಧ ಪ್ರಯೋಜನಗಳು ಮತ್ತು ಆಕರ್ಷಕ ಆದಾಯ ದರವನ್ನು ಹೊಂದಿರುವ ಉತ್ತಮ ಆಯ್ಕೆಯಾಗಿದೆ, ಅದೂ ಕೂಡ ಕನಿಷ್ಠ ಅಪಾಯದೊಂದಿಗೆ. ಆದಾಗ್ಯೂ, ನಿಮ್ಮ ಮೆಚ್ಚಿನ ಫಿಕ್ಸೆಡ್ ಡೆಪಾಸಿಟ್ ಆಯ್ಕೆ ಮಾಡುವ ಮೊದಲು ಸಂಪೂರ್ಣ ಸಂಶೋಧನೆ ಮಾಡುವುದು ಸೂಕ್ತವಾಗಿದೆ.