ಫಿಕ್ಸೆಡ್ ಡೆಪಾಸಿಟ್‌ಗಳು ಅಪಾಯ-ರಹಿತ ಹೂಡಿಕೆದಾರರಿಗೆ ಸೂಕ್ತವಾದ ಹೂಡಿಕೆಯ ರೂಪವಾಗಿದೆ. ಇದು ಅವರಿಗೆ ನಿಗದಿತ ಅವಧಿಗೆ ನಿಗದಿತ ಬಡ್ಡಿ ದರದಲ್ಲಿ ತಮ್ಮ ಹಣವನ್ನು ಹೂಡಿಕೆ ಮಾಡಲು ಅವಕಾಶ ನೀಡುತ್ತದೆ. ಫಿಕ್ಸೆಡ್ ಡೆಪಾಸಿಟ್ ಬಡ್ಡಿ ದರಗಳು ಅವಧಿಯ ಆಧಾರದ ಮೇಲೆ ಪೂರ್ವನಿರ್ಧರಿತವಾಗಿದೆ. ಹಿರಿಯ ನಾಗರಿಕರಿಗೆ ಬಡ್ಡಿ ದರಗಳು ಸ್ವಲ್ಪ ಹೆಚ್ಚಾಗಿರುತ್ತವೆ, ಮತ್ತು ಶೇಕಡಾವಾರು ಹಣಕಾಸು ಸಂಸ್ಥೆಯ ವಿವೇಚನೆಗೆ ಸೇರಿದ ವಿಷಯವಾಗಿದೆ.
ಒಮ್ಮೆ ಡೆಪಾಸಿಟರ್‌ಗಳು ಫಿಕ್ಸೆಡ್ ಡೆಪಾಸಿಟ್ ಅರ್ಹತಾ ಮಾನದಂಡಗಳನ್ನು ಪೂರೈಸಿದ ನಂತರ ಮತ್ತು ಫಿಕ್ಸೆಡ್ ಡೆಪಾಸಿಟ್‌ಗೆ ಅಗತ್ಯವಿರುವ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿದ ನಂತರ, ಅವರ ಹಣವು ನಿಗದಿತ ಅವಧಿಗೆ ಲಾಕ್ ಆಗುತ್ತದೆ.
ಯಾವುದೇ ಕಾರಣಕ್ಕಾಗಿ, ಲಾಕ್-ಇನ್ ಅವಧಿ ಮುಗಿಯುವ ಮೊದಲು ಡೆಪಾಸಿಟರ್‌ಗಳು ಎಫ್‌ಡಿಯನ್ನು ಮುರಿಯಬೇಕಾಗಿ ಬಂದರೆ, ಅವಧಿ ಪೂರ್ವ ವಿತ್‌ಡ್ರಾವಲ್ ದಂಡವನ್ನು ವಿಧಿಸಲಾಗುತ್ತದೆ ಮತ್ತು ಅವರು ಸ್ವಲ್ಪ ಬಡ್ಡಿಯನ್ನು ಕಳೆದುಕೊಳ್ಳುತ್ತಾರೆ. ಪಿಎನ್‌ಬಿ ಹೌಸಿಂಗ್ ಫೈನಾನ್ಸ್‌ನಂತಹ ಎಚ್ಎಫ್‌ಸಿಗಳಲ್ಲಿ, ಲಾಕ್-ಇನ್ ಅವಧಿ 3 ತಿಂಗಳು ಆಗಿದೆ.
ವಿವಿಧ ರೀತಿಯ ಫಿಕ್ಸೆಡ್ ಡೆಪಾಸಿಟ್‌ಗಳು
ಹಣಕಾಸು ಸಂಸ್ಥೆಗಳು ವಿವಿಧ ರೀತಿಯ ಫಿಕ್ಸೆಡ್ ಡೆಪಾಸಿಟ್‌ಗಳನ್ನು ನೀಡುತ್ತವೆ. ಕೆಲವು ಸಾಮಾನ್ಯ ಡೆಪಾಸಿಟ್‌ಗಳು ಇಲ್ಲಿವೆ:
1. ಸ್ಟ್ಯಾಂಡರ್ಡ್ ಫಿಕ್ಸೆಡ್ ಡೆಪಾಸಿಟ್‌ಗಳು
ಬಹುತೇಕ ಪ್ರತಿ ಹಣಕಾಸು ಸಂಸ್ಥೆಯು ತನ್ನ ಗ್ರಾಹಕರಿಗೆ ಈ ರೀತಿಯ ಫಿಕ್ಸೆಡ್ ಡೆಪಾಸಿಟ್ ಅನ್ನು ಒದಗಿಸುತ್ತದೆ. ಡೆಪಾಸಿಟರ್‌ಗಳು ಸ್ಟ್ಯಾಂಡರ್ಡ್ ಫಿಕ್ಸೆಡ್ ಡೆಪಾಸಿಟ್ ಅನ್ನು ಆಯ್ಕೆ ಮಾಡಿದಾಗ, ಅವರ ಹಣವನ್ನು ಫಿಕ್ಸೆಡ್ ಅವಧಿಗೆ ಹೂಡಿಕೆ ಮಾಡಲಾಗುತ್ತದೆ ಮತ್ತು ಅವರು ಡೆಪಾಸಿಟ್ ಅವಧಿಯನ್ನು ಅವಲಂಬಿಸಿ ಫಿಕ್ಸೆಡ್ ಬಡ್ಡಿ ದರವನ್ನು ಪಡೆಯುತ್ತಾರೆ.
ಸಾಮಾನ್ಯ ಫೀಚರ್‌ಗಳು ಇವುಗಳನ್ನು ಒಳಗೊಂಡಿವೆ:
- ಏಳು ದಿನಗಳಿಂದ ಹತ್ತು ವರ್ಷಗಳವರೆಗಿನ ಫಿಕ್ಸೆಡ್ ಟರ್ಮ್. ಎಚ್ಎಫ್‌ಸಿ ಎಫ್‌ಡಿಗಾಗಿ, ಕಾಲಾವಧಿಯು 1 ವರ್ಷದಿಂದ 10 ವರ್ಷಗಳ ನಡುವೆ ಇರುತ್ತದೆ.
- ಮಾರುಕಟ್ಟೆಯ ಏರಿಳಿತಗಳ ಬದಲಾವಣೆಗೆ ಒಳಪಡದ ಪೂರ್ವ-ನಿರ್ಧರಿತ ಬಡ್ಡಿ ದರ
- ಸೇವಿಂಗ್ ಅಕೌಂಟ್ ಡೆಪಾಸಿಟ್‌ಗೆ ಹೋಲಿಸಿದರೆ ಹೆಚ್ಚಿನ ಎಫ್‌ಡಿ ಬಡ್ಡಿ ದರ.
2. ತೆರಿಗೆ-ಉಳಿತಾಯದ ಫಿಕ್ಸೆಡ್ ಡೆಪಾಸಿಟ್ (ಬ್ಯಾಂಕ್‌ಗಳು ಮತ್ತು ಪೋಸ್ಟ್ ಆಫೀಸ್ ಎಫ್‌ಡಿಗಳಿಗೆ ಮಾತ್ರ ಅನ್ವಯ)
ತೆರಿಗೆ-ಉಳಿತಾಯದ ಫಿಕ್ಸೆಡ್ ಡೆಪಾಸಿಟ್‌ಗೆ ಡೆಪಾಸಿಟರ್‌ಗಳು ತಮ್ಮ ಹಣವನ್ನು ಕನಿಷ್ಠ ಐದು ವರ್ಷಗಳವರೆಗೆ ಹೂಡಿಕೆ ಮಾಡಬೇಕಾಗುತ್ತದೆ. ತೆರಿಗೆ ಉಳಿತಾಯ ಎಫ್‌ಡಿಯಲ್ಲಿ ಹೂಡಿಕೆ ಮಾಡಿದ ಮೊತ್ತವು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ವಿನಾಯಿತಿಗೆ ಅರ್ಹವಾಗಿರುತ್ತದೆ. ಈ ಎಫ್‌ಡಿ ಮೇಲೆ ಗಳಿಸಿದ ಬಡ್ಡಿಯು ತೆರಿಗೆ ಕಡಿತಕ್ಕೆ ಅರ್ಹವಾಗಿದೆ.
ಸಾಮಾನ್ಯ ಫೀಚರ್‌ಗಳು ಹೀಗಿವೆ:
- ಐದು ವರ್ಷಗಳ ಕನಿಷ್ಠ ಲಾಕ್-ಇನ್ ಅವಧಿ
- ₹ 1.5 ಲಕ್ಷದವರೆಗೆ ತೆರಿಗೆ ವಿನಾಯಿತಿ
- ಒಟ್ಟು ಮೊತ್ತದ ಡೆಪಾಸಿಟ್‌ಗಳನ್ನು ಮಾತ್ರ ಮಾಡಬಹುದು
ಓದಲೇಬೇಕಾದವು: ಆನ್ಲೈನ್‌ನಲ್ಲಿ ಫಿಕ್ಸೆಡ್ ಡೆಪಾಸಿಟ್ ಅಕೌಂಟ್ ತೆರೆಯುವುದು ಹೇಗೆ?
3. ವಿಶೇಷ ಫಿಕ್ಸೆಡ್ ಡೆಪಾಸಿಟ್‌ಗಳು
ಈ ಎಫ್‌ಡಿಗಳನ್ನು 'ವಿಶೇಷ' ಎಂದು ಕರೆಯಲಾಗುತ್ತದೆ ಏಕೆಂದರೆ ಅವುಗಳು ವಿಶೇಷ ಕಾಲಾವಧಿಗಳಿಗೆ ಲಭ್ಯವಿವೆ. ಈ ಅವಧಿಯು 290 ಅಥವಾ 390 ನಂತಹ ಯಾವುದೇ ಅನಿರೀಕ್ಷಿತ ದಿನಗಳಾಗಿರಬಹುದು (ಬ್ಯಾಂಕ್‌ಗಳಲ್ಲಿ ನೀಡಲಾಗುತ್ತದೆ). ವಿಶೇಷ ಎಫ್‌ಡಿಗಳ ಮೇಲಿನ ಹೆಚ್ಚಿನ ಬಡ್ಡಿ ದರಗಳಿಂದಾಗಿ, ಅವುಗಳು ಜನಪ್ರಿಯ ಹೂಡಿಕೆ ಆಯ್ಕೆಯಾಗಿವೆ. ವಿಶೇಷ ಫಿಕ್ಸೆಡ್ ಡೆಪಾಸಿಟ್‌ಗಳ ಫೀಚರ್‌ಗಳು ಹೀಗಿವೆ:
- ನಿರ್ದಿಷ್ಟ ಅವಧಿಗೆ ಹೂಡಿಕೆ.
- ಕಾಲಾವಧಿ ಮುಗಿಯುವವರೆಗೆ ಹಣವನ್ನು ವಿತ್‌ಡ್ರಾ ಮಾಡಲಾಗುವುದಿಲ್ಲ
- ಸ್ಟ್ಯಾಂಡರ್ಡ್ ಫಿಕ್ಸೆಡ್ ಡೆಪಾಸಿಟ್ ಬಡ್ಡಿ ದರಗಳಿಗಿಂತ ವಿಶೇಷ ಫಿಕ್ಸೆಡ್ ಡೆಪಾಸಿಟ್ ಬಡ್ಡಿ ದರಗಳು ಹೆಚ್ಚಾಗಿರುತ್ತವೆ
4. ಒಟ್ಟುಗೂಡಿಸಿದ ಫಿಕ್ಸೆಡ್ ಡೆಪಾಸಿಟ್‌ಗಳು
ಆಯ್ಕೆ ಮಾಡಿದ ಅವಧಿಯ ಪ್ರಕಾರ ಈ ಎಫ್‌ಡಿಗಳ ಮೇಲಿನ ಬಡ್ಡಿಯನ್ನು ಸಂಯೋಜಿಸಲಾಗುತ್ತದೆ. ಮೆಚ್ಯೂರಿಟಿಯಲ್ಲಿ, ಬಡ್ಡಿಯನ್ನು ಹೂಡಿಕೆ ಮೊತ್ತಕ್ಕೆ ಸೇರಿಸಲಾಗುತ್ತದೆ.
5. ಒಟ್ಟುಗೂಡಿಸದ ಫಿಕ್ಸೆಡ್ ಡೆಪಾಸಿಟ್
ಒಟ್ಟುಗೂಡಿಸಿದ ಎಫ್‍ಡಿಗಳಿಗೆ ವಿರುದ್ಧವಾಗಿ, ಇಲ್ಲಿ ಬಡ್ಡಿಯನ್ನು ನಿಯಮಿತ ಮಧ್ಯಂತರಗಳಲ್ಲಿ ಪಾವತಿಸಲಾಗುತ್ತದೆ.
ಕೆಲವು ಫೀಚರ್‌ಗಳು:
- ಎಫ್‌ಡಿ ತೆರೆಯುವ ಸಮಯದಲ್ಲಿ ನಿಗದಿಸಿದ ಆವರ್ತನದ ಪ್ರಕಾರ ಬಡ್ಡಿಯನ್ನು ಪಾವತಿಸಲಾಗುತ್ತದೆ - ಇದು ವಾರ್ಷಿಕ, ಮಾಸಿಕ, ದ್ವೈ-ವಾರ್ಷಿಕ, ಅಥವಾ ಪ್ರತಿ ತ್ರೈಮಾಸಿಕವಾಗಿರಬಹುದು.
- ನಿಯಮಿತ ಹಣದ ಹರಿವನ್ನು ಪಡೆಯಲು ಬಯಸುವ ನಿವೃತ್ತ ಜನರು ಅಥವಾ ಪಿಂಚಣಿದಾರರಿಗೆ ಈ ರೀತಿಯ ಹೂಡಿಕೆಯು ಹೆಚ್ಚು ಸೂಕ್ತವಾಗಿದೆ.
6. ಹಿರಿಯ ನಾಗರಿಕರ ಫಿಕ್ಸೆಡ್ ಡೆಪಾಸಿಟ್
ಹೆಸರೇ ಸೂಚಿಸುವಂತೆ, ಈ ಎಫ್‌ಡಿ ಯು 60 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮಾತ್ರ ಇರುತ್ತದೆ.
ಹಿರಿಯ ನಾಗರಿಕರ ಫಿಕ್ಸೆಡ್ ಡೆಪಾಸಿಟ್‌ನ ಫೀಚರ್‌ಗಳು:
- ಹಿರಿಯ ನಾಗರಿಕರಿಗೆ ಬಡ್ಡಿ ದರವು ಸ್ಟ್ಯಾಂಡರ್ಡ್ ಎಫ್‌ಡಿ ಬಡ್ಡಿ ದರಗಳಿಗಿಂತ ಸುಮಾರು 0.25% ರಿಂದ 0.75% ಅಧಿಕವಾಗಿದೆ. ಪಿಎನ್‌ಬಿ ಹೌಸಿಂಗ್ ಹಿರಿಯ ನಾಗರಿಕರಿಗೆ 0.25% ಹೆಚ್ಚುವರಿ ಆರ್‌ಒಐ ನೀಡುತ್ತದೆ.
- ಫ್ಲೆಕ್ಸಿಬಲ್ ನಿಯಮಗಳು
ಅತ್ಯುತ್ತಮ ಫಿಕ್ಸೆಡ್ ಡೆಪಾಸಿಟ್ ಅನ್ನು ಆಯ್ಕೆ ಮಾಡುವುದು ಹೇಗೆ?
ಅತ್ಯಂತ ಸೂಕ್ತವಾದ ಫಿಕ್ಸೆಡ್ ಡೆಪಾಸಿಟ್ ಆಯ್ಕೆ ಮಾಡಲು, ಡೆಪಾಸಿಟರ್‌ಗಳು ಕೆಲವು ಅಂಶಗಳನ್ನು ಮೌಲ್ಯಮಾಪನ ಮಾಡಬೇಕು:
1. ಫಿಕ್ಸೆಡ್ ಡೆಪಾಸಿಟ್ ಅವಧಿ
ಎಫ್‌ಡಿ ಬಡ್ಡಿ ದರಗಳು ಕಾಲಾವಧಿಯೊಂದಿಗೆ ಬದಲಾಗುತ್ತವೆ ; ಹೆಚ್ಚಿನ ಕಾಲಾವಧಿಗೆ, ಬಡ್ಡಿ ದರ ಹೆಚ್ಚಾಗಿರುತ್ತದೆ. ದೀರ್ಘಾವಧಿಯ ಎಫ್‌ಡಿಗಳು ಉತ್ತಮವಾಗಿ ಕಾಣಬಹುದು, ಆದರೆ ಡೆಪಾಸಿಟ್ ಮಾಡಲಾದ ಹಣವು ದೀರ್ಘ ಅವಧಿಗಳವರೆಗೆ ಲಾಕ್ ಆಗಿರುವುದರಿಂದ, ಹೂಡಿಕೆದಾರರ ಲಿಕ್ವಿಡಿಟಿಗೆ ತೊಂದರೆ ಆಗಬಹುದು. ಹೀಗಾಗಿ, ಡೆಪಾಸಿಟರ್‌ಗಳ ಹಣಕಾಸಿನ ಪರಿಸ್ಥಿತಿ ಮತ್ತು ಗುರಿಗಳ ಆಧಾರದ ಮೇಲೆ ಕಾಲಾವಧಿಯ ಫ್ಲೆಕ್ಸಿಬಿಲಿಟಿಯನ್ನು ಒದಗಿಸುವ ಎಫ್‌ಡಿಯನ್ನು ಆಯ್ಕೆ ಮಾಡುವುದು ಅಗತ್ಯವಾಗಿದೆ.
2. ಅಕಾಲಿಕ ವಿತ್‌ಡ್ರಾವಲ್ ನಿಯಮಗಳು
ಫಿಕ್ಸೆಡ್ ಡೆಪಾಸಿಟ್ ಆಯ್ಕೆ ಮಾಡುವ ಮೊದಲು, ಅವಧಿ ಪೂರ್ವ ವಿತ್‌ಡ್ರಾವಲ್ ನಿಯಮಗಳು ಮತ್ತು ದಂಡಗಳನ್ನು ಮೌಲ್ಯಮಾಪನ ಮಾಡುವುದು ಸೂಕ್ತವಾಗಿದೆ. ಹೂಡಿಕೆದಾರರು ತುಂಬಾ ಹೆಚ್ಚಿನ ಬೆಲೆ ತೆರದೆ ತಮ್ಮ ಎಫ್‌ಡಿಯನ್ನು ಲಿಕ್ವಿಡೇಟ್ ಮಾಡುವ ಸ್ವಾತಂತ್ರ್ಯವನ್ನು ಹೊಂದಿರಬೇಕು.
ಓದಲೇಬೇಕಾದವು: ಟರ್ಮ್ ಡೆಪಾಸಿಟ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವೂ
3. ಬಡ್ಡಿ ದರ
ಎಫ್‌ಡಿ ತೆರೆಯುವ ಮುಖ್ಯ ಕಾರಣವೆಂದರೆ ಅವುಗಳ ಮೇಲೆ ಬಡ್ಡಿಯನ್ನು ಗಳಿಸುವುದು. ಸ್ಪರ್ಧಾತ್ಮಕ ಎಫ್‌ಡಿ ಬಡ್ಡಿ ದರಗಳನ್ನು ನೀಡುವ ಹಣಕಾಸು ಸಂಸ್ಥೆಯನ್ನು ಆಯ್ಕೆ ಮಾಡಿ.
4. ಹೆಚ್ಚುವರಿ ಲಾಭಗಳು
ಕೇವಲ ಬಡ್ಡಿ ದರಗಳನ್ನು ಮಾತ್ರ ನೋಡಬೇಡಿ ; ಕೆಲವು ಹೆಚ್ಚುವರಿ ಪ್ರಯೋಜನಗಳಿಗಾಗಿ ನೋಡಿ. ಇವುಗಳು ಆಟೋ-ರಿನೀವಲ್ ಆಯ್ಕೆಗಳು, ಫಿಕ್ಸೆಡ್ ಡೆಪಾಸಿಟ್ ಮೇಲಿನ ಲೋನ್ ಸೌಲಭ್ಯ, ಹೆಚ್ಚಿನ ಲಿಕ್ವಿಡಿಟಿಗಾಗಿ ಓವರ್‌ಡ್ರಾಫ್ಟ್ ಸೌಲಭ್ಯ ಮತ್ತು ಅಂತಹ ಇತರ ಫೀಚರ್‌ಗಳನ್ನು ಒಳಗೊಂಡಿವೆ.
ವಿವಿಧ ಹೂಡಿಕೆ ಆಯ್ಕೆಗಳು ಲಭ್ಯವಿವೆ, ಆದರೆ ಫಿಕ್ಸೆಡ್ ಡೆಪಾಸಿಟ್‌ಗಳು ಹೂಡಿಕೆದಾರರ ಮೆಚ್ಚಿನ ಆಯ್ಕೆಯಾಗಿದೆ. ಏಕೆಂದರೆ ಎಫ್‌ಡಿ ಸುರಕ್ಷಿತ ಮತ್ತು ಸುಭದ್ರ ಸ್ವರೂಪವು ನಿಗದಿತ ಆದಾಯ ಮತ್ತು ಸ್ಥಿರ ಬೆಳವಣಿಗೆಯನ್ನು ಖಾತರಿಪಡಿಸುತ್ತದೆ. ಆಯ್ಕೆ ಮಾಡಲು ವಿವಿಧ ರೀತಿಯ ಫಿಕ್ಸೆಡ್ ಡೆಪಾಸಿಟ್‌ಗಳು ಇರುವಾಗ, ಡೆಪಾಸಿಟರ್‌ಗಳು ತಮ್ಮ ಹಣಕ್ಕೆ ಸೂಕ್ತವಾದದ್ದನ್ನು ಕಂಡುಕೊಳ್ಳುತ್ತಾರೆ.