PNB Housing Finance Limited

ಎನ್ಎಸ್ಇ:

ಬಿಎಸ್ಇ:

ಕೊನೆಯ ಅಪ್ಡೇಟ್:

()
ಸರಾಸರಿ ರೇಟಿಂಗ್
ಹಂಚಿಕೊಳ್ಳಿ
ಕಾಪಿ ಮಾಡಿ

ಸಿಬಿಲ್ ಸ್ಕೋರ್ ಎಂದರೇನು ಮತ್ತು ಅದು ಹೇಗೆ ಕೆಲಸ ಮಾಡುತ್ತದೆ?

give your alt text here

ಹೋಮ್ ಲೋನ್ ಅರ್ಹತೆ ಮೌಲ್ಯಮಾಪನ ಮಾಡುವಾಗ ಅಥವಾ ಯಾವುದೇ ಇತರ ರೂಪದ ಲೋನ್ ಪಡೆಯುವಾಗ 'ಸಿಬಿಲ್ ಸ್ಕೋರ್' ಅಥವಾ ಕ್ರೆಡಿಟ್ ಸ್ಕೋರ್ ಅತ್ಯಂತ ಪ್ರಮುಖವಾಗುತ್ತದೆ. ಅರ್ಜಿದಾರರು ತಮ್ಮ ಸ್ಕೋರ್ ಪರಿಶೀಲಿಸಬೇಕು ಮತ್ತು ತಮ್ಮ ಅರ್ಹತೆಯನ್ನು, ತಮಗೆ ವಿಧಿಸುವ ಬಡ್ಡಿದರವನ್ನು ಅರ್ಥಮಾಡಿಕೊಳ್ಳಲು ಮತ್ತು ಅದಕ್ಕೆ ಅನುಗುಣವಾಗಿ ತಮ್ಮ ಲೋನ್ ಅನ್ನು ಯೋಜಿಸಲು ಆ ಸ್ಕೋರ್ ಒಂದು ನಿರ್ದಿಷ್ಟ ಸಂಖ್ಯೆಗಿಂತ ಹೆಚ್ಚಿದೆಯೇ ಎಂದು ಪರಿಶೀಲಿಸಬೇಕು. ಸರಳವಾಗಿ ಹೇಳುವುದಾದರೆ, ಸಿಬಿಲ್ ಸ್ಕೋರ್ ಎಂಬುದು ಪ್ರಮುಖ ವೃತ್ತಿಪರ ಪರೀಕ್ಷೆಯಲ್ಲಿ ಪಡೆದ ಅಂಕಗಳು ಎಂದು ಹೇಳಬಹುದು. ಆದರೆ ಅದು ಹಾಗಲ್ಲ. ವಾಸ್ತವದಲ್ಲಿ, ಅದು ಅರ್ಜಿದಾರರ ಕ್ರೆಡಿಟ್ ಅರ್ಹತೆಯ ಮೌಲ್ಯಮಾಪನವಾಗಿದೆ.

ಆದ್ದರಿಂದ, ಸಿಬಿಲ್ ಸ್ಕೋರ್ ಎಂದರೇನು, ಅದು ಹೇಗೆ ಕೆಲಸ ಮಾಡುತ್ತದೆ ಮತ್ತು ಹೋಮ್ ಲೋನ್‌ಗಳ ವಿಷಯಕ್ಕೆ ಬಂದಾಗ ಅದು ಏಕೆ ಮುಖ್ಯವಾಗುತ್ತದೆ? ಈ ಬ್ಲಾಗ್‌ನಲ್ಲಿ ಈ ವಿಷಯವನ್ನು ವಿವರವಾಗಿ ಅರ್ಥಮಾಡಿಕೊಳ್ಳೋಣ.

ಸಿಬಿಲ್ ಸ್ಕೋರ‍್ ಎಂದರೇನು?

ಸಿಬಿಲ್ ಸ್ಕೋರ್ ಎಂಬುದು ಅರ್ಜಿದಾರರ ಕ್ರೆಡಿಟ್ ಇತಿಹಾಸ ಮತ್ತು ಕಾರ್ಯಕ್ಷಮತೆಯನ್ನು ಸೂಚಿಸುವ ಮೂರು ಅಂಕಿಯ ಸಂಖ್ಯೆಯಾಗಿದೆ. ಇದು 300-900 ವರೆಗೆ ಇರುತ್ತದೆ. ಹೆಚ್ಚಿನ ಸ್ಕೋರ್ ಹೊಂದಿರುವ ಅರ್ಜಿದಾರರನ್ನು ಸಾಲದಾತರಿಗೆ ಕಡಿಮೆ ಅಪಾಯವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ, ಸಿಬಿಲ್ ಸ್ಕೋರ್ ಹೆಚ್ಚಾದಷ್ಟೂ, ಅರ್ಜಿದಾರರು ಲೋನ್ ಪಡೆಯಲು ಅರ್ಹರಾಗಿರುತ್ತಾರೆ. ಇದು ಅಂತಿಮವಾಗಿ, ನೀಡಲಾದ ಯಾವುದೇ ಲೋನ್ ಕೋರಿಕೆಗೆ- ಹೋಮ್ ಲೋನ್‌ಗೆ ಕೂಡ ಹೆಚ್ಚಿನ ಅರ್ಹತೆಯಾಗಿ ಪರಿಗಣಿಸಲಾಗುತ್ತದೆ.

ಮೂರು ಅಂಕಿಯ ಸಿಬಿಲ್ ಸ್ಕೋರ್ ಅನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು, ಸಿಬಿಲ್ ಎಂದರೇನು ಎಂದು ಮೊದಲು ತಿಳಿದುಕೊಳ್ಳಬೇಕು.

  • ಸಿಬಿಲ್ ಎಂದರೆ ಕ್ರೆಡಿಟ್ ಇನ್ಫಾರ್ಮೇಶನ್ ಬ್ಯೂರೋ (ಇಂಡಿಯಾ) ಲಿಮಿಟೆಡ್ - ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ ಪರವಾನಗಿ ಪಡೆದ ಕ್ರೆಡಿಟ್ ಇನ್ಫಾರ್ಮೇಶನ್ ಕಂಪನಿ ಆಗಿದೆ.
  • ಸಿಬಿಲ್ ಭಾರತದ ಅತ್ಯಂತ ಹಳೆಯ ಕ್ರೆಡಿಟ್ ರೇಟಿಂಗ್ ಏಜೆನ್ಸಿಯಾಗಿದೆ ಮತ್ತು ಇದು ಅಮೆರಿಕನ್ ಟ್ರಾನ್ಸ್‌ಯೂನಿಯನ್ ಮಲ್ಟಿನ್ಯಾಷನಲ್ ಗ್ರೂಪ್‌ನ ಭಾಗವಾಗಿದೆ.
  • ಅಗತ್ಯವಾಗಿ, ಸಿಬಿಲ್ ವ್ಯಕ್ತಿಗಳು ಮತ್ತು ಬಿಸಿನೆಸ್‌ಗಳ ಲೋನ್ ಮತ್ತು ಕ್ರೆಡಿಟ್ ಟ್ರಾನ್ಸಾಕ್ಷನ್‌ಗಳ ದಾಖಲೆಗಳನ್ನು ಸಂಗ್ರಹಿಸಲು ಮತ್ತು ನಿರ್ವಹಿಸಲು ಬ್ಯಾಂಕ್‌ಗಳು ಮತ್ತು ಹಣಕಾಸು ಸೇವಾ ಪೂರೈಕೆದಾರರೊಂದಿಗೆ ಒಪ್ಪಂದ ಮಾಡಿಕೊಂಡಿದೆ.
  • ಈ ಕ್ರೆಡಿಟ್ ರೆಕಾರ್ಡ್‌ಗಳನ್ನು ಸಂಕಲಿಸುವ ಮೂಲಕ, ಸಿಬಿಲ್ ಬಿಸಿನೆಸ್ ಘಟಕಗಳ ಕ್ರೆಡಿಟ್ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಬಹುದು - ಅವುಗಳು ಅನೇಕ ಲೋನ್‌ಗಳನ್ನು ಪಡೆಯುತ್ತಿವೆಯೇ, ಲೋನ್‌ಗಳ ಪಾವತಿಯಲ್ಲಿ ಡೀಫಾಲ್ಟ್ ಮಾಡುತ್ತಿವೆಯೇ ಇತ್ಯಾದಿಗಳನ್ನು ತಿಳಿಯಬಹುದು.
  • ಈ ಟ್ರ್ಯಾಕ್ ರೆಕಾರ್ಡ್ ಸಿಬಿಲ್‌ಗೆ ಪ್ರತಿಯೊಬ್ಬರಿಗೂ ಕ್ರೆಡಿಟ್ ರೇಟಿಂಗ್ ನೀಡಲು ಅನುವು ಮಾಡಿಕೊಡುತ್ತದೆ. ಇದರಿಂದಾಗಿ ಅವರು ಭವಿಷ್ಯದ ಲೋನ್‌ಗೆ ಅಪ್ಲೈ ಮಾಡಿದಾಗ, ಲೋನ್ ಮಂಜೂರು ಮಾಡುವುದು ಎಷ್ಟು ಅಪಾಯಕಾರಿ ಎಂದು ಸಾಲದಾತರು ಮೌಲ್ಯಮಾಪನ ಮಾಡಬಹುದು.
  • ಸಿಬಿಲ್ 600 ಮಿಲಿಯನ್‌ಗಿಂತ ಹೆಚ್ಚು ಗ್ರಾಹಕರು ಮತ್ತು 32 ಮಿಲಿಯನ್ ಬಿಸಿನೆಸ್‌ಗಳ ಕ್ರೆಡಿಟ್ ಮಾಹಿತಿಯನ್ನು ಹೊಂದಿದೆ. ಇದು ದೇಶದಲ್ಲಿ ಸಾಲದಾತರಿಂದ ಅತ್ಯಂತ ಆದ್ಯತೆಯ ಕ್ರೆಡಿಟ್ ರೇಟಿಂಗ್ ಆಗಿದೆ.

ಸಿಬಿಲ್ ಸ್ಕೋರ್ ಅನ್ನು ಹೇಗೆ ದಾಖಲಾಗಿಸುತ್ತದೆ ಎಂಬ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಸಮಯ.

ಓದಲೇಬೇಕಾದವು: ಹೋಮ್ ಲೋನಿಗೆ ಉತ್ತಮ ಸಿಬಿಲ್ ಸ್ಕೋರ್ ಎಷ್ಟು?

ಸಿಬಿಲ್ ವರದಿ ಎಂದರೇನು?

ಕ್ರೆಡಿಟ್ ಮಾಹಿತಿಯನ್ನು ಸಿಬಿಲ್ ಹೇಗೆ ಸಂಗ್ರಹಿಸುತ್ತದೆ ಮತ್ತು ದಾಖಲಿಸುತ್ತದೆ ಎಂದು ಯೋಚಿಸುತ್ತಿದ್ದೀರಾ?? ಅದು ಸಿಬಿಲ್ ವರದಿಯ ಮೂಲಕ ಆಗುತ್ತದೆ.

  • ಸಿಬಿಲ್ ವರದಿ ಅಥವಾ ಕ್ರೆಡಿಟ್ ಮಾಹಿತಿ ವರದಿಯು ವ್ಯಕ್ತಿ ಅಥವಾ ಬಿಸಿನೆಸ್‌ನ ಎಲ್ಲಾ ಕ್ರೆಡಿಟ್ ಟ್ರಾನ್ಸಾಕ್ಷನ್‌ಗಳ ದಾಖಲೆಯಾಗಿದೆ
  • ಇದು ಹಿಂದಿನ ಮತ್ತು ಚಾಲ್ತಿಯಲ್ಲಿರುವ ಲೋನ್‌ಗಳು, ಮರುಪಾವತಿ ಮತ್ತು ಸಾಲದ ಇತಿಹಾಸ, ಯಾವುದೇ ಕ್ರೆಡಿಟ್ ಕಾರ್ಡ್ ಬಾಕಿಗಳು, ಡೀಫಾಲ್ಟ್ ಪಾವತಿಗಳು, ಇಎಂಐ ಟ್ರಾನ್ಸಾಕ್ಷನ್‌ಗಳು ಮುಂತಾದ ಮಾಹಿತಿಯನ್ನು ಒಳಗೊಂಡಿದೆ.
  • ಹೆಚ್ಚುವರಿಯಾಗಿ, ಸಿಬಿಲ್ ವರದಿಯು ವ್ಯಕ್ತಿಯ ಉದ್ಯೋಗ ಪ್ರೊಫೈಲ್ ಹಾಗೂ ವ್ಯಕ್ತಿಯು ಮಾಡಿದ ಲೋನ್ ವಿಚಾರಣೆಗಳ ಎಲ್ಲಾ ಸಂದರ್ಭಗಳನ್ನು ಕೂಡ ದಾಖಲಿಸುತ್ತದೆ. ಇದು ಅರ್ಜಿದಾರರ ವರದಿಯನ್ನು ಪರಿಶೀಲಿಸುವ ಸಾಲದಾತರಿಗೆ, ಅವರ ಹಣಕಾಸಿನ ಪ್ರೊಫೈಲ್‌ನ ಹೆಚ್ಚು ಸಮಗ್ರ ನೋಟವನ್ನು ನೀಡುತ್ತದೆ.
  • ವ್ಯಕ್ತಿಗಳು ಅಧಿಕೃತ ಸಿಬಿಲ್ ವೆಬ್‌ಸೈಟ್‌ನಿಂದ ಸಿಬಿಲ್ ವರದಿಯನ್ನು ಸುಲಭವಾಗಿ ಡೌನ್ಲೋಡ್ ಮಾಡಬಹುದು ಮತ್ತು ಪರಿಶೀಲಿಸಬಹುದು. ಸಾಲದಾತರು ತಮ್ಮ ಆ್ಯಪ್‌ಗಳು ಮತ್ತು ವೆಬ್‌ಸೈಟ್‌ಗಳ ಮೂಲಕ ನಾಮಮಾತ್ರದ ಶುಲ್ಕದಲ್ಲಿ ಈ ಸೌಲಭ್ಯವನ್ನು ಒದಗಿಸುತ್ತಾರೆ.

ಹೀಗಾಗಿ, ಸಿಬಿಲ್ ವರದಿಯು ಸಾಲದಾತರಿಗೆ ಅಗತ್ಯವಿರುವ ಅಗತ್ಯ ಡಾಕ್ಯುಮೆಂಟ್‌ಗಳಲ್ಲಿ ಒಂದಾಗಿದೆ.

ಸಿಬಿಲ್ ಸ್ಕೋರ್ ಹೇಗೆ ಕೆಲಸ ಮಾಡುತ್ತದೆ?

ಸಿಬಿಲ್ ಸ್ಕೋರ್ ಎಂದರೇನು ಎಂಬ ಬಗ್ಗೆ ನಾವು ಚರ್ಚಿಸಿದ್ದೇವೆ. ಈಗ ಅದನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ ಮತ್ತು ಅದು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳೋಣ.

ಸಿಬಿಲ್ ಸ್ಕೋರ್ ಅನ್ನು ನಿಗದಿಪಡಿಸಲಾಗಿಲ್ಲ. ವ್ಯಕ್ತಿಯ ಕ್ರೆಡಿಟ್ ಇತಿಹಾಸ ಮತ್ತು ಕಾರ್ಯಕ್ಷಮತೆಯ ಆಧಾರದ ಮೇಲೆ ನಿರಂತರವಾಗಿ ಏರಿಳಿತವಾಗುತ್ತದೆ. ಅದರ ಮೇಲೆ ಪರಿಣಾಮ ಬೀರುವ ನಾಲ್ಕು ಅಂಶಗಳು ಇಲ್ಲಿವೆ:

  1. ಪಾವತಿ ಇತಿಹಾಸ – ಒಬ್ಬ ವ್ಯಕ್ತಿಯು ಸಮಯಕ್ಕೆ ಸರಿಯಾಗಿ ಲೋನ್ ಪಾವತಿಗಳು ಮತ್ತು ಇಎಂಐಗಳನ್ನು ಪಾವತಿಸಲು ವಿಫಲರಾದರೆ ಅಥವಾ ನಿರಂತರವಾಗಿ ಡೀಫಾಲ್ಟ್ ಆದರೆ, ಸಿಬಿಲ್ ಸ್ಕೋರ್ ಕಡಿಮೆಯಾಗುತ್ತದೆ.
  2. ಕ್ರೆಡಿಟ್ ಮಿಕ್ಸ್ – ಅರ್ಜಿದಾರರು ಸುರಕ್ಷಿತ ಮತ್ತು ಭದ್ರತೆ ರಹಿತ ಲೋನ್‌ಗಳ ಸಮತೋಲಿತ ಮಿಶ್ರಣವನ್ನು ಹೊಂದಿದ್ದರೆ, ಸಿಬಿಲ್ ಸ್ಕೋರ್ ಸಕಾರಾತ್ಮಕವಾಗಿರುತ್ತದೆ. ಇಲ್ಲಿ, ಸುರಕ್ಷಿತ ಲೋನ್‌ಗಳೆಂದರೆ ಹೋಮ್ ಲೋನ್‌ಗಳು, ಕಾರ್ ಲೋನ್‌ಗಳು ಮುಂತಾದ ಲೋನ್‌ಗಳಾಗಿವೆ. ಅದೇ ರೀತಿ, ಭದ್ರತೆ ರಹಿತ ಲೋನ್‌ಗಳೆಂದರೆ ಕ್ರೆಡಿಟ್ ಕಾರ್ಡ್ ಬಿಲ್‌ಗಳು, ಪರ್ಸನಲ್ ಲೋನ್‌ಗಳು ಇತ್ಯಾದಿಗಳಾಗಿವೆ.
  3. ಲೋನ್ ವಿಚಾರಣೆಗಳು – ವರದಿಯಲ್ಲಿ ಅನೇಕ ಕ್ರೆಡಿಟ್ ಅಥವಾ ಲೋನ್ ತಿರಸ್ಕಾರಗಳನ್ನು ಹೊಂದಿರುವುದು ಸ್ಕೋರ್ ಮೇಲೆ ಪರಿಣಾಮ ಬೀರಬಹುದು. ಅದೇ ರೀತಿ, ವ್ಯಕ್ತಿಯು ಇತ್ತೀಚೆಗೆ ಅನೇಕ ಲೋನ್‌ಗಳನ್ನು ಪಡೆದಿದ್ದರೆ, ಅವರ ಸಾಲದ ಹೊರೆ ಹೆಚ್ಚಾಗುತ್ತದೆ. ಅದು ಅವರ ಕ್ರೆಡಿಟ್ ರೇಟಿಂಗ್ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಮತ್ತು ಭವಿಷ್ಯದ ಲೋನ್‌ಗಳ ವಿಚಾರದಲ್ಲಿ ಸಾಲದಾತರನ್ನು ಜಾಗೃತಗೊಳಿಸುತ್ತದೆ.
  4. ಕ್ರೆಡಿಟ್ ಬಳಕೆ – ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ಬಳಕೆ ಹೆಚ್ಚಾದಂತೆ, ಕಾರ್ಡ್ ಹೋಲ್ಡರ್ ಸಾಲ ಹೆಚ್ಚುತ್ತದೆ, ಅದು ಅವರ ಸಿಬಿಲ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆ.

ಪ್ರತಿ ತಿಂಗಳು ಈ ಎಲ್ಲಾ ಮಾನದಂಡಗಳನ್ನು ಮೌಲ್ಯಮಾಪನ ಮಾಡುವ ಮೂಲಕ, ಸಿಬಿಲ್ ಪ್ರತಿ ವ್ಯಕ್ತಿಗೆ ಅಪ್ಡೇಟ್ ಆದ ಸ್ಕೋರ್ ರಚಿಸುತ್ತದೆ. ಆದ್ದರಿಂದ, ಒಬ್ಬ ವ್ಯಕ್ತಿಯು ಮುಂದಿನ ಲೋನ್‌ಗೆ ಅಪ್ಲೈ ಮಾಡಿದಾಗ, ಸಾಲದಾತರು ಅವರ ಹಣಕಾಸಿನ ವಿಶ್ವಾಸಾರ್ಹತೆಯನ್ನು ಮೌಲ್ಯಮಾಪನ ಮಾಡಲು ತಮ್ಮ ಅಪ್ಲಿಕೇಶನ್ ಪ್ರಕ್ರಿಯೆಯಲ್ಲಿ ಇತ್ತೀಚಿನ ಸಿಬಿಲ್ ಸ್ಕೋರ್ ಮತ್ತು ವರದಿಯನ್ನು ಪರಿಶೀಲಿಸುತ್ತಾರೆ. ಅವರು ಲೋನ್‌ನ ಅಗತ್ಯ ಮಾನದಂಡಗಳನ್ನು ಪಾಸ್ ಮಾಡಿದರೆ, ತ್ವರಿತವಾಗಿ ಲೋನ್ ಮಂಜೂರು ಮಾಡಲಾಗುತ್ತದೆ. ಇಲ್ಲದಿದ್ದರೆ, ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ ಅಥವಾ ಬಡ್ಡಿ ದರವು ಹೆಚ್ಚಾಗುತ್ತದೆ.

ಸಿಬಿಲ್ ಸ್ಕೋರ್‌ನ ಪ್ರಾಮುಖ್ಯತೆ - ಅದು ಏಕೆ ಮುಖ್ಯವಾಗುತ್ತದೆ?

  • ಸಿಬಿಲ್ ಸ್ಕೋರ್ ಎಂಬುದು ವ್ಯಕ್ತಿಯ ಕ್ರೆಡಿಟ್ ಅರ್ಹತೆಯ ಪುರಾವೆ ಆಗಿದೆ ಮತ್ತು ಲೋನ್ ಅಪ್ಲಿಕೇಶನ್ ಪ್ರಕ್ರಿಯೆಯಲ್ಲಿ ಪ್ರಮುಖ ಅರ್ಹತಾ ಮಾನದಂಡವಾಗಿದೆ.
  • ಸಿಬಿಲ್ ಸ್ಕೋರ್ ಉತ್ತಮವಾಗಿದ್ದರೆ, ಅರ್ಜಿದಾರರ ಅನುಮೋದನೆಯ ಅವಕಾಶಗಳು ಹೆಚ್ಚಿರುತ್ತವೆ. ಹೆಚ್ಚಿನ ಸಿಬಿಲ್ ಸ್ಕೋರ್ ಸಾಧ್ಯವಾದಷ್ಟು ಉತ್ತಮ ಲೋನ್ ನಿಯಮಗಳನ್ನು ಕೂಡ ಪಡೆಯುತ್ತದೆ.
  • ಕಡಿಮೆ ಸಿಬಿಲ್ ಸ್ಕೋರ್, ಭವಿಷ್ಯದಲ್ಲಿ ಯಾವುದೇ ಲೋನ್ ಪಡೆಯುವ ಅವಕಾಶಗಳನ್ನು ಕಡಿಮೆ ಮಾಡಬಹುದು.

ಅತ್ಯುತ್ತಮ ಸಿಬಿಲ್ ಸ್ಕೋರ್ ಎಂದರೇನು?

ಉತ್ತಮ ಸಿಬಿಲ್ ಸ್ಕೋರ್ ಹೊಂದುವ ಪ್ರಾಮುಖ್ಯತೆಯನ್ನು ನಾವು ಅರ್ಥೈಸಿಕೊಂಡಿದ್ದೇವೆ. ಆದರೆ ಅತ್ಯುತ್ತಮ ಸಿಬಿಲ್ ಸ್ಕೋರ್ ಎಷ್ಟು?

ನಿರ್ದಿಷ್ಟ ಲೋನ್‌ನ ಅವಶ್ಯಕತೆಗಳನ್ನು ಪೂರೈಸಲು ಸೂಕ್ತವಾದ ಸಿಬಿಲ್ ಸ್ಕೋರ್ ಸಾಲದಾತರಿಂದ ಸಾಲದಾತರಿಗೆ ಭಿನ್ನವಾಗಿರುತ್ತದೆ. ಹೋಮ್ ಲೋನ್‌ಗೆ, 700 ಅಥವಾ 750 ಕ್ಕಿಂತ ಹೆಚ್ಚಿನ ಸಿಬಿಲ್ ಸ್ಕೋರ್ ಸೂಕ್ತವಾಗಿದೆ. ಹೌದು, ಸಿಬಿಲ್ ಸ್ಕೋರ್ ಹೆಚ್ಚಾದಷ್ಟೂ ಅರ್ಜಿದಾರರು- ಕಡಿಮೆ ಹೋಮ್ ಲೋನ್ ಬಡ್ಡಿ ದರಗಳು ಸೇರಿದಂತೆ ಉತ್ತಮ ಹೋಮ್ ಲೋನ್ ನಿಯಮಗಳನ್ನು ಪಡೆಯುತ್ತಾರೆ. ಸಾಮಾನ್ಯವಾಗಿ, ಎಲ್ಲಾ ಸಾಲದಾತರು ವಿವಿಧ ಸಿಬಿಲ್ ಸ್ಕೋರ್ ಶ್ರೇಣಿಗಳಿಗೆ ವಿವಿಧ ಬಡ್ಡಿ ದರಗಳನ್ನು ಹೊಂದಿರುತ್ತಾರೆ.

ಅಂತಿಮವಾಗಿ, ಅತ್ಯುತ್ತಮ ಹೋಮ್ ಲೋನ್ ಆಫರ್‌ಗಳನ್ನು ಪಡೆಯಲು, ಶೂನ್ಯ ಅರ್ಹತಾ ಸಮಸ್ಯೆಗಳನ್ನು ಎದುರಿಸಲು ಮತ್ತು ತ್ವರಿತ ಲೋನ್ ಅಪ್ಲಿಕೇಶನ್ ಅನುಮೋದನೆ ಮತ್ತು ಲೋನ್ ಮಂಜೂರಾತಿಯನ್ನು ಪಡೆಯಲು, 800 ಕ್ಕಿಂತ ಹೆಚ್ಚಿನ ಸಿಬಿಲ್ ಸ್ಕೋರ್ ಹೊಂದಿದ್ದರೆ ಉತ್ತಮ.

ಓದಲೇಬೇಕು: ನಿಮ್ಮ ಸಿಬಿಲ್ ಸ್ಕೋರ್ ಅನ್ನು 500 ರಿಂದ 750 ವರೆಗೆ ಸುಧಾರಿಸುವುದು ಹೇಗೆ?

ಮುಕ್ತಾಯ

ಉತ್ತಮ ಸಿಬಿಲ್ ಸ್ಕೋರ್ ನಿರ್ವಹಿಸುವುದು ಮುಖ್ಯವಾಗಿದೆ. ಹೇಗೆ ಎಂಬುದು ಇಲ್ಲಿದೆ:

  • ಪಾವತಿಗಳು ಮತ್ತು ಇಎಂಐಗಳನ್ನು ಎಂದಿಗೂ ತಪ್ಪಿಸಬೇಡಿ.
  • ಕ್ರೆಡಿಟ್ ಬ್ಯಾಲೆನ್ಸ್ ಮತ್ತು ಸಾಲಗಳನ್ನು ಕಡಿಮೆ ಇರಿಸಿಕೊಳ್ಳಿ.
  • ಉತ್ತಮ ಕ್ರೆಡಿಟ್ ಮಿಕ್ಸ್ ಇರಿಸಿ.
  • ಹೆಚ್ಚುವರಿ ಲೋನ್‌ಗಳಿಗೆ ಅಪ್ಲೈ ಮಾಡಬೇಡಿ ಅಥವಾ ಕ್ರೆಡಿಟ್ ಪಡೆಯಬೇಡಿ.
  • ಯಾವಾಗಲೂ ಸ್ಕೋರ್ ಅನ್ನು ಪರಿಶೀಲಿಸಿ ಮತ್ತು ನಿರ್ವಹಿಸಿ.
  • ತಿರಸ್ಕಾರಗಳನ್ನು ತಪ್ಪಿಸಲು ಅಪ್ಲೈ ಮಾಡುವ ಮೊದಲು ಸಿಬಿಲ್ ಸ್ಕೋರ್ ಸುಧಾರಿಸಿ.

ಪಿಎನ್‌ಬಿ ಹೌಸಿಂಗ್‌ನಲ್ಲಿ, ಯಾವುದೇ ತೊಂದರೆಗಳಿಲ್ಲದೆ ಹೋಮ್ ಲೋನ್ ಪಡೆಯಲು ಎಲ್ಲರಿಗೂ ನೆರವಾಗುವಂತೆ ನಾವು ಕ್ರೆಡಿಟ್ ಸ್ಕೋರ್ ಮಾನದಂಡಗಳನ್ನು ಸಡಿಲಗೊಳಿಸಿದ್ದೇವೆ. ವಿವಿಧ ಸಿಬಿಲ್ ಸ್ಕೋರ್ ಶ್ರೇಣಿಗಳಿಗೆ ಹೋಮ್ ಲೋನ್ ಬಡ್ಡಿ ದರದ ಅರ್ಹತೆಯನ್ನು ಮೌಲ್ಯಮಾಪನ ಮಾಡಲು ಈ ಲಿಂಕ್ ಪರಿಶೀಲಿಸಿ.

ಕೇವಲ 3 ನಿಮಿಷಗಳಲ್ಲಿ
3 ನಿಮಿಷಗಳು, ತೊಂದರೆ-ರಹಿತ!

ಪಿಎನ್‌ಬಿ ಹೌಸಿಂಗ್

ಅನ್ವೇಷಿಸಲು ಇತರ ವಿಷಯಗಳು

Request Call Back at PNB Housing
ಕಾಲ್ ಬ್ಯಾಕ್ ಮಾಡಿ