ಅರ್ಹತಾ ಮಾನದಂಡ
ಎನ್ಎಸ್ಇ: ₹ ▲ ▼ ₹
ಬಿಎಸ್ಇ: ₹ ▲ ▼ ₹
ಕೊನೆಯ ಅಪ್ಡೇಟ್:
-
english
ಹುಡುಕಿ ಆನ್ಲೈನ್ ಪಾವತಿ
-
ಲೋನ್ ಪ್ರಾಡಕ್ಟ್ಗಳು
-
ಹೌಸಿಂಗ್ ಲೋನ್‌ಗಳು
-
ಇತರೆ ಹೋಮ್ ಲೋನ್‌ಗಳು
-
-
ರೋಶ್ನಿ ಲೋನ್‌ಗಳು
-
ಕೈಗೆಟಕುವ ಹೌಸಿಂಗ್
-
- ಫಿಕ್ಸೆಡ್ ಡೆಪಾಸಿಟ್
-
ಕ್ಯಾಲ್ಕುಲೇಟರ್ಗಳು
-
ನಿಮ್ಮ ಹಣಕಾಸಿನ ಸ್ಥಿತಿಗತಿಯನ್ನು ತಿಳಿದುಕೊಳ್ಳುವುದು
-
ನಿಮ್ಮ ಹಣಕಾಸನ್ನು ನಿರ್ವಹಿಸುವುದು
-
ಹೆಚ್ಚುವರಿ ವೆಚ್ಚಗಳನ್ನು ಲೆಕ್ಕ ಹಾಕುವುದು
-
-
ಜ್ಞಾನ ಕೇಂದ್ರ
-
ಹೂಡಿಕೆದಾರರು
-
ಹೂಡಿಕೆದಾರರ ಸಂಪರ್ಕ
-
ಕಾರ್ಪೋರೇಟ್ ಆಡಳಿತ
-
ಹಣಕಾಸು
-
ಡಿಸ್ಕ್ಲೋಸರ್ಗಳು
-
ಪಿಎನ್‌ಬಿ ಹೌಸಿಂಗ್‌ನಲ್ಲಿ ಹೊಸತು
-
-
ನಮ್ಮ ಬಗ್ಗೆ
-
ಮ್ಯಾನೇಜ್ಮೆಂಟ್
-
ಒತ್ತಿ
-
ಉದ್ಯೋಗಿ
-
- ನಮ್ಮನ್ನು ಸಂಪರ್ಕಿಸಿ
ಪಡೆಯಬಹುದಾದ ಗರಿಷ್ಠ ಹೋಮ್ ಲೋನ್
ನಿಮ್ಮ ಆಸ್ತಿ ಮೌಲ್ಯದ 90%
ಹೋಮ್ ಲೋನ್
ಅರ್ಹತಾ ಮಾನದಂಡ
ಮಾರ್ಕೆಟ್‌ನಲ್ಲಿ ಕೆಲವು ಅತ್ಯಂತ ಕಡಿಮೆ ಹೋಮ್ ಲೋನ್ ಬಡ್ಡಿ ದರಗಳೊಂದಿಗೆ, ಪಿಎನ್‌ಬಿ ಹೌಸಿಂಗ್ ಕನಸಿನ ಮನೆಯನ್ನು ಖರೀದಿಸುವ ಅಥವಾ ನಿರ್ಮಿಸುವ ತಮ್ಮ ಆಕಾಂಕ್ಷೆಗಳನ್ನು ಪೂರೈಸಲು ಬಯಸುವ ಎಲ್ಲರಿಗೂ ಪ್ರಯೋಜನಗಳ ಶ್ರೇಣಿಯನ್ನು ಒದಗಿಸುತ್ತದೆ.
ಆದ್ದರಿಂದ, ನೀವು 30 ವರ್ಷಗಳ ಅವಧಿಗೆ, ಯಾವುದೇ ಮುಂಗಡ ಪಾವತಿ ಅಥವಾ ಫೋರ್‌ಕ್ಲೋಸರ್ ಶುಲ್ಕಗಳಿಲ್ಲದೆ ಮತ್ತು ಆಸ್ತಿ ಮೌಲ್ಯದ 90% ವರೆಗಿನ ಮೌಲ್ಯವನ್ನು ಪರ್ಸನಲೈಸ್ ಮಾಡಿದ ಹೋಮ್ ಲೋನ್ ಆಗಿ ಹೇಗೆ ಪಡೆಯುತ್ತೀರಿ, ಸುಲಭದಲ್ಲಿ! ಸರ್ಕಾರಿ ವಲಯದಲ್ಲಿ ಕೆಲಸ ಮಾಡುತ್ತಿರಲಿ ಅಥವಾ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರಲಿ, ಎಲ್ಲಾ ರೀತಿಯ ಸಂಬಳದ ಉದ್ಯೋಗಿಗಳಿಗೆ ನಾವು ಅತ್ಯಂತ ಪಾರದರ್ಶಕ ಹೋಮ್ ಲೋನ್ ಅರ್ಹತಾ ಮಾನದಂಡವನ್ನು ಹೊಂದಿದ್ದೇವೆ.
ನೀವು ಇವುಗಳ ಮಾನದಂಡಗಳನ್ನು ಪೂರೈಸಿದ್ದೀರಾ ಹೋಮ್ ಲೋನ್ ಪಿಎನ್‌ಬಿ ಹೌಸಿಂಗ್‌ನಿಂದ ಇವುಗಳನ್ನು ಒಳಗೊಂಡಂತೆ ಅನೇಕ ಅಂಶಗಳನ್ನು ಅವಲಂಬಿಸಿರುತ್ತದೆ:
ಹೋಮ್ ಲೋನ್
ಉದ್ಯೋಗದ ಆಧಾರದ ಮೇಲೆ ಅರ್ಹತಾ ಮಾನದಂಡ
-
ವಯಸ್ಸು: ಲೋನ್ ಪ್ರಾರಂಭವಾಗುವ ಸಮಯದಲ್ಲಿ ಎಲ್ಲಾ ಸಂಬಳದ ಅರ್ಜಿದಾರರು 21 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು. ಹೆಚ್ಚುವರಿಯಾಗಿ, ಲೋನ್ ಮೆಚ್ಯೂರಿಟಿ ಸಮಯದಲ್ಲಿ ವಯಸ್ಸು 70 ವರ್ಷಗಳನ್ನು ಮೀರಬಾರದು.
-
ನಿವಾಸ: ನೀವು ಭಾರತದ ಶಾಶ್ವತ ನಿವಾಸಿಯಾಗಿರಬೇಕು.
-
ಕೆಲಸದ ಅನುಭವ: ನೀವು ಕನಿಷ್ಠ 3 ವರ್ಷಗಳ ಕೆಲಸದ ಅನುಭವವನ್ನು ಹೊಂದಿರಬೇಕು.
-
ಸಂಬಳ: ಪ್ರತಿ ತಿಂಗಳಿಗೆ ಕನಿಷ್ಠ ₹15,000 ಅಥವಾ ಅದಕ್ಕಿಂತ ಹೆಚ್ಚು ಸಂಬಳದ ಅಗತ್ಯವಿರುತ್ತದೆ
-
ಲೋನ್ ಮೊತ್ತ: ₹ 8 ಲಕ್ಷದಿಂದ ಆರಂಭ
-
ಕಾಲಾವಧಿ: 30 ವರ್ಷಗಳವರೆಗೆ
-
ಎಲ್‌ಟಿವಿ: 90% ವರೆಗೆ
-
ಅಗತ್ಯವಿರುವ ಕ್ರೆಡಿಟ್ ಸ್ಕೋರ್: 611+
-
ವಯಸ್ಸು: ಹೋಮ್ ಲೋನ್‌ಗೆ ಅಪ್ಲೈ ಮಾಡುವ ಸಮಯದಲ್ಲಿ ಅರ್ಜಿದಾರರು 21 ವರ್ಷ ಅಥವಾ ಅದಕ್ಕಿಂತ ಹೆಚ್ಚು ವಯಸ್ಸಿನವರಾಗಿರಬೇಕು. ಹೋಮ್ ಲೋನ್ ಮೆಚ್ಯೂರಿಟಿ ಸಮಯದಲ್ಲಿ ವಯಸ್ಸು 70 ವರ್ಷಗಳನ್ನು ಮೀರಬಾರದು.
-
ನಿವಾಸ: ನೀವು ಭಾರತದ ಶಾಶ್ವತ ನಿವಾಸಿಯಾಗಿರಬೇಕು.
-
ಕೆಲಸದ ಅನುಭವ: ನೀವು ಕನಿಷ್ಠ 3 ವರ್ಷಗಳ ಬಿಸಿನೆಸ್ ಮುಂದುವರಿಕೆಯನ್ನು ಹೊಂದಿರಬೇಕು.
-
ಲೋನ್ ಮೊತ್ತ: ₹ 8 ಲಕ್ಷದಿಂದ ಆರಂಭ.
-
ಅವಧಿ: 20 ವರ್ಷಗಳವರೆಗೆ.
-
ಎಲ್‌ಟಿವಿ: 90% ವರೆಗೆ
-
ಹೆಚ್ಚುವರಿ: ನೀವು ಆದಾಯ ತೆರಿಗೆ ರಿಟರ್ನ್‌ಗಳಿಗೆ ಅಪ್ಲೈ ಮಾಡಿ.
-
ಕ್ರೆಡಿಟ್ ಸ್ಕೋರ್: *ಹೋಮ್ ಲೋನ್‌ಗೆ ಅಪ್ಲೈ ಮಾಡಲು ಕನಿಷ್ಠ 611 ಕ್ರೆಡಿಟ್ ಸ್ಕೋರ್ ಅಗತ್ಯವಿದೆ.
ಬಳಸುವ ಸ್ವಾತಂತ್ರ್ಯವನ್ನು ಕೂಡ ನೀಡುತ್ತದೆ.
ಸ್ವಯಂ ಉದ್ಯೋಗಿ/ವೃತ್ತಿಪರರಿಗೆ ಅಗತ್ಯವಿರುವ ಹೋಮ್ ಲೋನ್ ಡಾಕ್ಯುಮೆಂಟ್‌ಗಳು
ಸಂಬಳ ಪಡೆಯುವ ಅರ್ಜಿದಾರರಿಗೆ ಅಗತ್ಯವಿರುವ ಹೋಮ್ ಲೋನ್ ಡಾಕ್ಯುಮೆಂಟ್‌ಗಳು
ಸ್ವಯಂ ಉದ್ಯೋಗಿ/ವೃತ್ತಿಪರರಿಗೆ
-
ಲೋನ್ ಅಪ್ಲಿಕೇಶನ್ ಫಾರ್ಮ್‌ನಂತಹ ಕಡ್ಡಾಯ ಡಾಕ್ಯುಮೆಂಟ್‌ಗಳು
-
ವಯಸ್ಸು ಮತ್ತು ನಿವಾಸದ ಪುರಾವೆಯಾಗಿ ಕೆವೈಸಿ ಡಾಕ್ಯುಮೆಂಟ್‌ಗಳು
-
ಕಳೆದ 3 ವರ್ಷಗಳ ಐಟಿಆರ್, ಕಳೆದ 12 ತಿಂಗಳುಗಳ ಬಿಸಿನೆಸ್ ಅಕೌಂಟ್‌ನ ಬ್ಯಾಂಕ್ ಸ್ಟೇಟ್ಮೆಂಟ್‌ಗಳು
-
ಆಸ್ತಿ ಶೀರ್ಷಿಕೆ, ಅನುಮೋದಿತ ಪ್ಲಾನ್, ಸೇಲ್ ಡೀಡ್ ಮುಂತಾದ ಇತರ ಆಸ್ತಿ ಡಾಕ್ಯುಮೆಂಟ್‌ಗಳು.
ಸಂಬಳ ಪಡೆಯುವ ಅರ್ಜಿದಾರರಿಗೆ
-
ವಿಳಾಸದ ಪುರಾವೆ : ಆಧಾರ್ ಕಾರ್ಡ್, ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಟೆಲಿಫೋನ್ ಬಿಲ್, ರೇಷನ್ ಕಾರ್ಡ್, ಎಲೆಕ್ಷನ್ ಕಾರ್ಡ್, ಶಾಸನಬದ್ಧ ಪ್ರಾಧಿಕಾರ ನೀಡಿದ ಯಾವುದೇ ಇತರ ಪ್ರಮಾಣಪತ್ರ
-
ವಯಸ್ಸಿನ ಪುರಾವೆ : ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್, ಶಾಸನಬದ್ಧ ಪ್ರಾಧಿಕಾರದಿಂದ ಯಾವುದೇ ಇತರ ಪ್ರಮಾಣಪತ್ರ
-
ಆದಾಯ ಪುರಾವೆ: ಕಳೆದ 3 ತಿಂಗಳ ಸಂಬಳದ ಸ್ಲಿಪ್‌ಗಳು
ನಿಮ್ಮ ಅರ್ಹತೆಯನ್ನು ಲೆಕ್ಕ ಹಾಕಿ
ಹೋಮ್ ಲೋನ್
ವಯಸ್ಸಿನ ಆಧಾರದ ಮೇಲೆ ಅರ್ಹತಾ ಮಾನದಂಡ
ಅರ್ಜಿದಾರರ ವಯಸ್ಸು | ಗರಿಷ್ಠ ಹೋಮ್ ಲೋನ್ ಅವಧಿ |
---|---|
25 ವರ್ಷಗಳು | 30 ವರ್ಷಗಳು |
30 ವರ್ಷಗಳು | 30 ವರ್ಷಗಳು |
35 ವರ್ಷಗಳು | 30 ವರ್ಷಗಳು |
40 ವರ್ಷಗಳು | 30 ವರ್ಷಗಳು |
45 ವರ್ಷಗಳು | 25 ವರ್ಷಗಳು |
50 ವರ್ಷಗಳು | ಕಂಪನಿಯ ವಿವೇಚನೆಯ ಪ್ರಕಾರ* |
ಪರಿಶೀಲಿಸಿ
ಆನ್ಲೈನ್‌ನಲ್ಲಿ ಹೋಮ್ ಲೋನ್ ಅರ್ಹತಾ ಮಾನದಂಡ
ಆದರೆ ಹೋಮ್ ಲೋನ್ ಅರ್ಹತೆಯ ಮಾನದಂಡಗಳನ್ನು ಪ್ರಭಾವಿಸುವ ಅಂಶಗಳು ಯಾವುವು? ಅಗತ್ಯವಾಗಿ, ಅವುಗಳು ನಿಮ್ಮ ಕ್ರೆಡಿಟ್ ಅರ್ಹತೆ ಮತ್ತು ಡೀಫಾಲ್ಟ್ ಮಾಡದೆ ಹೋಮ್ ಲೋನ್ ಮರು ಪಾವತಿಸುವ ನಿಮ್ಮ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಲು ಸಾಲದಾತರಿಗೆ ಅನುವು ಮಾಡಿಕೊಡುವ ಮಾನದಂಡಗಳಾಗಿವೆ. ಆ ಪ್ರಮುಖ ಅಂಶಗಳು ವಯಸ್ಸು, ಆದಾಯ, ಉದ್ಯೋಗ, ಕ್ರೆಡಿಟ್ ಇತಿಹಾಸ, ಆಸ್ತಿ ಮೌಲ್ಯ, ಯಾವುದೇ ಅಸ್ತಿತ್ವದಲ್ಲಿರುವ ಲೋನ್‌ಗಳು/ಇಎಂಐಗಳು ಇತ್ಯಾದಿಗಳನ್ನು ಒಳಗೊಂಡಿವೆ.
ಪಿಎನ್‌ಬಿ ಹೌಸಿಂಗ್‌ನೊಂದಿಗೆ, ನೀವು ಈಗ ಸುಲಭವಾಗಿ ಆನ್‌ಲೈನ್‌ನಲ್ಲಿ ಹೋಮ್ ಲೋನ್ ಅರ್ಹತೆಯನ್ನು ಪರಿಶೀಲಿಸಬಹುದು. ನಮ್ಮ ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಬಳಸಲು ಸರಳ ಮತ್ತು ಸುಲಭವಾಗಿದೆ. ಈ ಕೆಳಗಿನ ವಿವರಗಳನ್ನು ನಮೂದಿಸಿ ಮತ್ತು ನೀವು ಎಷ್ಟು ಲೋನ್ ಮೊತ್ತಕ್ಕೆ ಅರ್ಹರಾಗಿದ್ದೀರಿ ಎಂಬುದನ್ನು ನಿರ್ಧರಿಸಲು ಸ್ಲೈಡರ್‌ಗಳನ್ನು ಬಳಸಿ:
ಒಟ್ಟು ತಿಂಗಳ ಆದಾಯ
ಅಪೇಕ್ಷಿತ ಲೋನ್ ಕಾಲಾವಧಿ
ಬಡ್ಡಿ ದರ
ಯಾವುದೇ ಅಸ್ತಿತ್ವದಲ್ಲಿರುವ ಇಎಂಐಗಳು
ಶಿಫಾರಸು ಮಾಡಲಾದ ಬರಹಗಳು
ಹೋಮ್ ಲೋನ್ ಬ್ಲಾಗ್‌ಗಳು








.jpg/4343a0f3-b1f0-73f6-1bbe-1371a3c3b483?version=1.0&t=1740120801621)



ಅರ್ಹತಾ ಮಾನದಂಡ ಸಂಬಂಧಿತ
ಆಗಾಗ ಕೇಳುವ ಪ್ರಶ್ನೆಗಳು
ವೆಬ್‌ಸೈಟ್‌ನಲ್ಲಿ ವಿವರಗಳನ್ನು ಪರಿಶೀಲಿಸಿ: ಪಿಎನ್‌ಬಿ ಹೌಸಿಂಗ್ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾದ ಹೋಮ್ ಲೋನ್ ಅರ್ಹತಾ ಮಾನದಂಡವು ಹೋಮ್ ಲೋನ್ ಪಡೆಯಲು ಸರ್ಕಾರಿ ಉದ್ಯೋಗಿಗಳು/ಸಂಬಳ ಪಡೆಯುವ ವ್ಯಕ್ತಿಗಳು/ಸ್ವಯಂ ಉದ್ಯೋಗಿಗಳಿಗೆ ಬೇಕಾದ ಪ್ರಮುಖ ಅವಶ್ಯಕತೆಗಳ ಬಗ್ಗೆ ವಿವರಗಳನ್ನು ಒದಗಿಸುತ್ತದೆ.
ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಬಳಸಿ: ಅರ್ಹ ಲೋನ್ ಮೊತ್ತವನ್ನು ನಿರ್ಧರಿಸಲು ವೆಬ್‌ಸೈಟ್‌ನ ಪಿಎನ್‌ಬಿ ಹೌಸಿಂಗ್ ಕ್ಯಾಲ್ಕುಲೇಟರ್‌ನಲ್ಲಿ ಕೆಲವು ಸಂಖ್ಯೆಗಳನ್ನು ನಮೂದಿಸಿ. ಈ ದಕ್ಷ ಸಾಧನವು ಸ್ಲೈಡರ್‌ಗಳನ್ನು ಬಳಸಿ ನಿಮ್ಮ ಹೋಮ್ ಲೋನ್ ಕೋಟ್ ಪರ್ಸನಲೈಸ್ ಮಾಡಲು ನಿಮಗೆ ಅವಕಾಶ ನೀಡುತ್ತದೆ.
ನಮ್ಮ ಪ್ರತಿನಿಧಿಗಳನ್ನು ಸಂಪರ್ಕಿಸಿ: ನಮ್ಮ ಹೋಮ್ ಲೋನ್ ಪ್ರತಿನಿಧಿಗಳು ಅರ್ಹತಾ ಪರಿಶೀಲನೆಗಳು ಮತ್ತು ಇತರ ಪ್ರಶ್ನೆಗಳ ವಿಷಯದಲ್ಲಿ ನಿಮಗೆ ಸಹಾಯ ಮಾಡಲು ಯಾವಾಗಲೂ - ಕರೆ, ಇಮೇಲ್ ಅಥವಾ ವೈಯಕ್ತಿಕವಾಗಿ ಲಭ್ಯವಿದ್ದಾರೆ.
ಹೋಮ್ ಲೋನ್ ಮೂಲಕ ನಿಮ್ಮ ಕನಸಿನ ಮನೆಗೆ ಹಣಕಾಸು ಒದಗಿಸಲು, ನೀವು ಅಥವಾ ಇತರ ಯಾವುದೇ ಅರ್ಜಿದಾರರು ಮೂಲಭೂತ ಹೋಮ್ ಲೋನ್ ಅರ್ಹತಾ ಮಾನದಂಡವನ್ನು ಪೂರೈಸಬೇಕು. ಅಂತಹ ಮಾನದಂಡವು ಕ್ರೆಡಿಟ್ ಸ್ಕೋರ್, ಪ್ರಸ್ತುತ ವಯಸ್ಸು, ಪ್ರಸ್ತುತ ಆದಾಯ, ಯಾವುದೇ ಹಣಕಾಸಿನ ಜವಾಬ್ದಾರಿಗಳು ಇತ್ಯಾದಿಗಳನ್ನು ಒಳಗೊಂಡಂತೆ ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ.
ಪಿಎನ್‌ಬಿ ಹೌಸಿಂಗ್‌ನಲ್ಲಿ, ಮನೆ ಖರೀದಿಸಲು ಸಾಧ್ಯವಾಗುವ ಪ್ರತಿ ವ್ಯಕ್ತಿಗೆ ಸೇವೆ ನೀಡಲು ಸುಲಭವಾಗಿ ಪೂರೈಸಬಹುದಾದ ಅರ್ಹತಾ ಮಾನದಂಡಗಳಲ್ಲಿ ಹೋಮ್ ಲೋನ್‌ಗಳನ್ನು ಒದಗಿಸುವ ಜನಪ್ರಿಯತೆಯನ್ನು ನಾವು ಗಳಿಸಿದ್ದೇವೆ. ಸಂಕ್ಷಿಪ್ತವಾಗಿ ನಮ್ಮ ಪ್ರಮುಖ ಹೋಮ್ ಲೋನ್ ಅವಶ್ಯಕತೆಗಳು ಹೀಗಿವೆ:
ವಯಸ್ಸಿನ ಮಿತಿ |
ಹೋಮ್ ಲೋನ್‌ಗೆ ಅಪ್ಲೈ ಮಾಡುವ ಸಮಯದಲ್ಲಿ ಅರ್ಜಿದಾರರು 21 ವರ್ಷ ಅಥವಾ ಅದಕ್ಕಿಂತ ಹೆಚ್ಚು ವಯಸ್ಸಿನವರಾಗಿರಬೇಕು. ಹೋಮ್ ಲೋನ್ ಮೆಚ್ಯೂರಿಟಿ ಸಮಯದಲ್ಲಿ ವಯಸ್ಸು 70 ವರ್ಷಗಳನ್ನು ಮೀರಬಾರದು. |
ಮಾಸಿಕ ಸಂಬಳ/ ಆದಾಯ |
₹15,000 ಮತ್ತು ಅದಕ್ಕಿಂತ ಹೆಚ್ಚು |
ಅಗತ್ಯವಿರುವ ಸಿಬಿಲ್ ಸ್ಕೋರ್ |
611+ |
ಸಂಬಳ ಪಡೆಯುವ ವ್ಯಕ್ತಿಗಳಿಗೆ ಕೆಲಸದ ಅನುಭವ |
3+ ವರ್ಷಗಳು |
ಸ್ವಯಂ ಉದ್ಯೋಗಿಗಳಿಗೆ ಬಿಸಿನೆಸ್ ಮುಂದುವರಿಕೆ |
3+ ವರ್ಷಗಳು |
ರಾಷ್ಟ್ರೀಯತೆ |
ಭಾರತೀಯ (ನಿವಾಸಿ) |
ಹೋಮ್ ಲೋನ್ ಪಡೆಯಲು ವಯಸ್ಸಿನ ಅರ್ಹತೆಯು ಸಾಲದಾತರಿಂದ ಸಾಲದಾತರಿಗೆ ಬದಲಾಗುತ್ತದೆ.
ಪಿಎನ್‌ಬಿ ಹೌಸಿಂಗ್ ಅತ್ಯುತ್ತಮ ಹೋಮ್ ಲೋನ್ ಬಡ್ಡಿ ದರಗಳು 21 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಅರ್ಜಿದಾರರಿಗೆ ಒದಗಿಸುತ್ತದೆ
ಹೆಚ್ಚುವರಿಯಾಗಿ, ನಿಮ್ಮ ಹೋಮ್ ಲೋನ್ ಮೆಚ್ಯೂರಿಟಿ ಸಮಯದಲ್ಲಿ ನಿಮ್ಮ ವಯಸ್ಸು 70 ವರ್ಷಗಳಿಗಿಂತ ಹೆಚ್ಚಾಗಿರಬಾರದು
ಹೋಮ್ ಲೋನ್‌ಗೆ ವಯಸ್ಸು ಪ್ರಮುಖ ಮಾನದಂಡವಾಗಿದೆ, ಏಕೆಂದರೆ ಇದು ನಿಮ್ಮ ಲೋನ್ ಅವಧಿಯನ್ನು ನಿರ್ಧರಿಸುತ್ತದೆ ಮತ್ತು ಲೋನ್ ಅರ್ಹತೆ ಮತ್ತು ಇಎಂಐ ಮೇಲೆ ಕೂಡ ಪರಿಣಾಮ ಬೀರುತ್ತದೆ. ಆದ್ದರಿಂದ, ಸಾಕಷ್ಟು ಕ್ರೆಡಿಟ್ ಅರ್ಹತೆ ಮತ್ತು ಹೋಮ್ ಲೋನ್ ಮರುಪಾವತಿ ಸಾಮರ್ಥ್ಯ ಹೊಂದಿರುವಾಗಲೇ, ಅಂದರೆ ಸಣ್ಣ ವಯಸ್ಸಿನಲ್ಲಿಯೇ ಹೋಮ್ ಲೋನ್ ತೆಗೆದುಕೊಳ್ಳುವುದನ್ನು ಪರಿಗಣಿಸುವುದು ಉತ್ತಮ.
ಪಿಂಚಣಿದಾರರಿಗೆ ಅಥವಾ ನಿವೃತ್ತ ವ್ಯಕ್ತಿಗಳಿಗೆ ಹೋಮ್ ಲೋನ್ ಪಡೆಯುವುದು ಸುಲಭದ ಕೆಲಸವಲ್ಲ. ಯಾಕೆಂದರೆ ಆ ವಯಸ್ಸಿನಲ್ಲಿ ಸಮಯಕ್ಕೆ ಸರಿಯಾಗಿ ಇಎಂಐ ಪಾವತಿಸುವ ಅವರ ಸಾಮರ್ಥ್ಯದ ಬಗ್ಗೆ ಸಾಲದಾತರಿಗೆ ವಿಶ್ವಾಸವಿರುವುದಿಲ್ಲ. ಆದಾಗ್ಯೂ, ಪಿಂಚಣಿದಾರರು ಪಿಎನ್‌ಬಿ ಹೌಸಿಂಗ್‌ನಂತಹ ವಿಶ್ವಾಸಾರ್ಹ ಸಾಲದಾತರಿಂದ ಖಂಡಿತವಾಗಿಯೂ ಹೋಮ್ ಲೋನ್ ಪಡೆಯಬಹುದು. ನಾವು ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಪಾರದರ್ಶಕ ಮತ್ತು ತೊಂದರೆ ರಹಿತವಾಗಿಸುತ್ತೇವೆ ಮತ್ತು ಸಾಮಾನ್ಯವಾಗಿ ಸ್ಥಿರ ಮತ್ತು ನಿಯಮಿತ ಆದಾಯ ಹೊಂದಿರುವ ಸಹ-ಅರ್ಜಿದಾರರನ್ನು ತಮ್ಮ ಲೋನ್ ಅಪ್ಲಿಕೇಶನ್‌ನಲ್ಲಿ ಹೊಂದಬಹುದಾದ ಪಿಂಚಣಿದಾರರಿಗೆ ಹೋಮ್ ಲೋನ್‌ಗಳನ್ನು ಒದಗಿಸುತ್ತೇವೆ.
ಅನೇಕ ಗ್ರಾಹಕರು ಹೋಮ್ ಲೋನ್‌ಗೆ ಸಹ-ಅರ್ಜಿದಾರರನ್ನು ಹೊಂದುವುದು ಗಮನಾರ್ಹ ಮಾನದಂಡವಲ್ಲ ಎಂದು ಭಾವಿಸುತ್ತಾರೆ. ಆದಾಗ್ಯೂ, ಪಿಎನ್‌ಬಿ ಹೌಸಿಂಗ್‌ನಲ್ಲಿ ಹೋಮ್ ಲೋನ್ ಅರ್ಜಿದಾರರು ತಮ್ಮ ಹೋಮ್ ಲೋನ್ ಅಪ್ಲಿಕೇಶನ್‌ನಲ್ಲಿ ಸಹ-ಅರ್ಜಿದಾರರನ್ನು ಹೊಂದಿರುವುದು ಕಡ್ಡಾಯವಾಗಿದೆ. ಹಣಕಾಸಿನ ಹೊಣೆಗಾರಿಕೆಯ ಹೊರೆಯನ್ನು ಸುಲಭಗೊಳಿಸಲು ಮತ್ತು ಅನುಕೂಲಕರ ಹೋಮ್ ಲೋನ್ ನಿಯಮಗಳನ್ನು ಪಡೆಯಲು ನಮ್ಮ ಎಕ್ಸ್‌ಪರ್ಟ್‌ಗಳು ಸಹ-ಅರ್ಜಿದಾರರನ್ನು ಸೇರಿಸಲು ಶಿಫಾರಸು ಮಾಡುತ್ತಾರೆ. ಮುಖ್ಯ ಅರ್ಜಿದಾರರು ಸಣ್ಣ ವಯಸ್ಸಿನವರಾಗಿದ್ದರೆ, ಸಾಕಷ್ಟು ಆದಾಯ ಅಥವಾ ಕ್ರೆಡಿಟ್ ಸ್ಕೋರ್ ಹೊಂದಿಲ್ಲದಿದ್ದರೆ, ಅಥವಾ ಪಿಂಚಣಿದಾರರಾಗಿದ್ದರೆ, ಸಹ-ಅರ್ಜಿದಾರರು ತುಂಬಾ ಮುಖ್ಯವಾಗುತ್ತಾರೆ. ಅವರು ನಿಮ್ಮ ಒಟ್ಟಾರೆ ಹೋಮ್ ಲೋನ್ ಅರ್ಹತೆಯನ್ನು ಹೆಚ್ಚಿಸುತ್ತಾರೆ. ಹೀಗಾಗಿ, ಸಹ-ಅರ್ಜಿದಾರರು ದೀರ್ಘ ಅವಧಿಗೆ ಕೈಗೆಟಕುವ ಬಡ್ಡಿ ದರಗಳಲ್ಲಿ ಹೆಚ್ಚಿನ ಲೋನ್ ಮೊತ್ತವನ್ನು ಪಡೆಯುವ ಸಾಧ್ಯತೆಗಳನ್ನು ಹೆಚ್ಚಿಸುತ್ತಾರೆ. ಇನ್ನೊಂದು ವಿಷಯ ಗೊತ್ತೇ? ನೀವು ಅವರೊಂದಿಗೆ ನಿಮಗೆ ಸೂಕ್ತವಾಗುವಂತೆ ಇಎಂಐ ಅನ್ನು ವಿಭಜಿಸಬಹುದು! ನೀವು ಸಹ-ಅರ್ಜಿದಾರರೊಂದಿಗೆ ಮುಂದುವರೆಯಲು ಬಯಸಿದರೆ ನಮ್ಮ ಅಗತ್ಯ ಹೋಮ್ ಲೋನ್ ಡಾಕ್ಯುಮೆಂಟ್‌ಗಳ ಲಿಸ್ಟ್ ಮತ್ತು ಹೋಮ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಅನ್ನು ನೋಡಿ.
ಒಂದು ಬಾರಿಗೆ ನೀವು ಒಂದು ಹೋಮ್ ಲೋನ್ ಮಾತ್ರ ತೆಗೆದುಕೊಳ್ಳಬಹುದು ಎಂಬ ನಂಬಿಕೆ ಸುಳ್ಳು. ವಾಸ್ತವವಾಗಿ, ನೀವು ಅರ್ಹತಾ ಮಾನದಂಡಗಳನ್ನು ಪೂರೈಸುವವರೆಗೆ, ಒಂದೇ ಸಮಯದಲ್ಲಿ ತೆಗೆದುಕೊಳ್ಳಬಹುದಾದ ಹೋಮ್ ಲೋನ್‌ಗಳ ಸಂಖ್ಯೆಗೆ ಯಾವುದೇ ಮಿತಿಯಿಲ್ಲ. ಆದಾಗ್ಯೂ, ಮೊದಲ ಹೋಮ್ ಲೋನ್ ನಂತರ ನೀವು ಪಡೆಯುವ ಪ್ರತಿಯೊಂದು ಹೋಮ್ ಲೋನ್‌ನೊಂದಿಗೆ, ನಿಮ್ಮ ಎಲ್‌ಟಿವಿ ಶೇಕಡಾವಾರು ಕಡಿಮೆಯಾಗುತ್ತದೆ. ಆಸ್ತಿ ಹೂಡಿಕೆದಾರರು ಎಲ್ಲಾ ಸಮಯದಲ್ಲೂ ಹೀಗೆ ಮಾಡುತ್ತಾರೆ. ಸಾಲಗಾರರು ಅನೇಕ ಹೋಮ್ ಲೋನ್‌ಗಳಿಗೆ ಅರ್ಹರಾಗಲು ಸಾಕಷ್ಟು ಮರುಪಾವತಿ ಸಾಮರ್ಥ್ಯ, ಹಿಂದಿನ ಲೋನ್‌ಗಳನ್ನು ಮುಚ್ಚಿರುವ ಮತ್ತು ಸಮಯಕ್ಕೆ ಸರಿಯಾಗಿ ಇಎಂಐ ಟ್ರಾನ್ಸಾಕ್ಷನ್‌ಗಳನ್ನು ಮಾಡುವ ಉತ್ತಮ ಟ್ರ್ಯಾಕ್ ರೆಕಾರ್ಡ್ ಹಾಗೂ ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರಬೇಕು.
ನೀವು ಕಳಪೆ ಕ್ರೆಡಿಟ್ ಮತ್ತು ಲೋನ್ ಇತಿಹಾಸವನ್ನು ಹೊಂದಿದ್ದರೆ, ಹೋಮ್ ಲೋನ್‌ಗೆ ಅರ್ಹರಾಗಲು ನಿಮಗೆ ಕಷ್ಟವಾಗುತ್ತದೆ. ಸಾಲದಾತರ ದೃಷ್ಟಿಯಲ್ಲಿ ನೀವು ಹೆಚ್ಚಿನ ಅಪಾಯದ ವರ್ಗಕ್ಕೆ ಸೇರುತ್ತೀರಿ. ಆದಾಗ್ಯೂ, ನೀವು ಈ ಮೂಲಕ ಹೋಮ್ ಲೋನ್ ಪಡೆಯಬಹುದು:
ನಿಮ್ಮ ಕ್ರೆಡಿಟ್ ಸ್ಕೋರ್ ಸುಧಾರಿಸಲು ನಿಮ್ಮ ಸಾಲಗಳನ್ನು ಪಾವತಿಸುವುದು
ನಿಮ್ಮ ಸಾಲದಾತರೊಂದಿಗೆ ಸಾಲವನ್ನು ಸೆಟಲ್ ಮಾಡುವುದು ಮತ್ತು ಎನ್ಒಸಿ ಪಡೆಯುವುದು
ಉತ್ತಮ ಕ್ರೆಡಿಟ್ ಇತಿಹಾಸ ಹೊಂದಿರುವ ಸಹ-ಅರ್ಜಿದಾರರೊಂದಿಗೆ ಲೋನ್‌ಗೆ ಅಪ್ಲೈ ಮಾಡುವುದು
ಸಿಬಿಲ್ ಸ್ಕೋರ್ ಎಂಬುದು 3-ಅಂಕಿಯ ನಂಬರ್ ಆಗಿದ್ದು, ಇದು ನಿಮ್ಮ ಹಿಂದಿನ ಲೋನ್‌ಗಳು ಮತ್ತು ಇಎಂಐಗಳ ಆಧಾರದ ಮೇಲೆ ನಿಮ್ಮ ಕ್ರೆಡಿಟ್ ಇತಿಹಾಸ ಮತ್ತು ಕ್ರೆಡಿಟ್-ಅರ್ಹತೆಯನ್ನು ನಿರ್ಧರಿಸುತ್ತದೆ. ಸಿಬಿಲ್ ಎಂದರೆ ಕ್ರೆಡಿಟ್ ಇನ್ಫಾರ್ಮೇಶನ್ ಬ್ಯೂರೋ (ಇಂಡಿಯಾ) ಲಿಮಿಟೆಡ್.
ಮತ್ತೊಮ್ಮೆ, ಹೋಮ್ ಲೋನ್‌ಗೆ ಬೇಕಾದ ಕನಿಷ್ಠ ಸಿಬಿಲ್ ಸ್ಕೋರ್ ಸಾಲದಾತರಿಂದ ಸಾಲದಾತರಿಗೆ ಬದಲಾಗುತ್ತದೆ. ಉತ್ತಮ ಲೋನ್ ಡೀಲ್‌ಗೆ ಸಾಮಾನ್ಯ ಕಟ್-ಆಫ್ ಸ್ಕೋರ್ 611+ ಆಗಿರುತ್ತದೆ. ಪಿಎನ್‌ಬಿ ಹೌಸಿಂಗ್‌ನಲ್ಲಿ, ನಾವು ವಿವಿಧ ಸಿಬಿಲ್ ಸ್ಕೋರ್‌ಗಳ ಶ್ರೇಣಿಯನ್ನು ಹೊಂದಿರುವ ವ್ಯಕ್ತಿಗಳಿಗೆ ವಿವಿಧ ಬಡ್ಡಿ ದರಗಳನ್ನು ಒದಗಿಸುತ್ತೇವೆ, 800+ ಸ್ಕೋರ್‌ಗೆ ಕನಿಷ್ಠ ಬಡ್ಡಿ ವಿಧಿಸಲಾಗುತ್ತದೆ ಮತ್ತು ನೆಗಟಿವ್ ಸ್ಕೋರ್ ಹೊಂದಿರುವವರಿಗೆ ಅತಿ ಹೆಚ್ಚು ವಿಧಿಸಲಾಗುತ್ತದೆ. ಸಿಬಿಲ್ ಸ್ಕೋರ್ ಆಧಾರದ ಮೇಲೆ ನೀವು ಪಿಎನ್‌ಬಿ ಹೌಸಿಂಗ್ ಹೋಮ್ ಲೋನ್ ಬಡ್ಡಿ ದರಗಳನ್ನು ಪರಿಶೀಲಿಸಬಹುದು.
ಆದಾಯದ ಪುರಾವೆಯು ಅರ್ಜಿದಾರರ ಲೋನ್ ಮರುಪಾವತಿ ಸಾಮರ್ಥ್ಯ ಮತ್ತು ಹೋಮ್ ಲೋನ್ ಅರ್ಹತೆಯನ್ನು ಸ್ಥಾಪಿಸುವ ಪ್ರಮುಖ ಡಾಕ್ಯುಮೆಂಟ್ ಆಗಿದೆ. ಆದಾಗ್ಯೂ, ಪಿಎನ್‌ಬಿ ಹೌಸಿಂಗ್‌ನ ಪ್ರಗತಿಶೀಲ ಉನ್ನತಿ ಹೋಮ್ ಲೋನ್‌ಗಳು ಔಪಚಾರಿಕ ಆದಾಯ ಪುರಾವೆಯನ್ನು ಹೊಂದಿಲ್ಲದ, ಆದರೆ ಜವಾಬ್ದಾರಿಗಳನ್ನು ಪೂರೈಸಲು ಸಾಕಷ್ಟು ಆದಾಯವನ್ನು ಹೊಂದಿರುವ ವ್ಯಕ್ತಿಗಳಿಗೆ ಹೋಮ್ ಲೋನ್‌ಗಳನ್ನು ಒದಗಿಸುತ್ತವೆ.ಉನ್ನತಿ ಹೋಮ್ ಲೋನ್‌ಗಳಕೆಲವು ಫೀಚರ್‌ಗಳು ಇಲ್ಲಿವೆ:
35 ಲಕ್ಷಗಳವರೆಗಿನ ಲೋನ್ ಮೊತ್ತ
ಆಸ್ತಿಯ 90% ಮಾರ್ಕೆಟ್ ಮೌಲ್ಯದವರೆಗಿನ ಹಣಕಾಸು
ಕನಿಷ್ಠ ಫಾರ್ಮಲ್ ಆದಾಯ ಡಾಕ್ಯುಮೆಂಟೇಶನ್
30 ವರ್ಷಗಳ ಅವಧಿಯೊಂದಿಗೆ ಕಡಿಮೆ ಇಎಂಐಗಳು
ನಿಮ್ಮ ಅಗತ್ಯಗಳನ್ನು ಸರಿಹೊಂದಿಸುವಂತೆ ಕಸ್ಟಮೈಜ್ ಮಾಡಿದ ಅರ್ಹತೆ
ಇಲ್ಲ, ನಿಮ್ಮ ಆಸ್ತಿಯ ನೋಂದಣಿ ಇಲ್ಲದೆ ನೀವು ಹೋಮ್ ಲೋನ್ ಪಡೆಯಲು ಸಾಧ್ಯವಿಲ್ಲ. ನೆನಪಿಡಿ, ಪಿಎನ್‌ಬಿ ಹೌಸಿಂಗ್ ಸೇರಿದಂತೆ ಯಾವುದೇ ಸಾಲದಾತರು ಯಾವುದೇ ನೋಂದಾಯಿತವಲ್ಲದ ಆಸ್ತಿಗೆ ಲೋನ್‌ಗಳನ್ನು ಒದಗಿಸುವುದಿಲ್ಲ. ಆದ್ದರಿಂದ, ಹೋಮ್ ಲೋನ್‌ಗೆ ಅಪ್ಲೈ ಮಾಡಲು ಯೋಜಿಸುವ ಮೊದಲು ಅರ್ಜಿದಾರರು ನೋಂದಣಿ ಡಾಕ್ಯುಮೆಂಟ್‌ಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಆದಾಗ್ಯೂ, ನೀವು ನಿರ್ಮಾಣದಲ್ಲಿರುವ ಆಸ್ತಿಯನ್ನು ಹೊಂದಿದ್ದರೆ, ನೋಂದಣಿ ಇಲ್ಲದೆ ಹೋಮ್ ಲೋನ್ ಪಡೆಯಲು ಸಾಧ್ಯವಾಗುತ್ತದೆ.
ಕಳೆದ 30 ನಿಮಿಷಗಳಲ್ಲಿ ಅಪ್ಲೈ ಮಾಡಿದ ಜನರು.
ತ್ವರಿತ ಹೋಮ್ ಲೋನ್ ಮಂಜೂರಾತಿ ಪಡೆಯಿರಿ
ನಿಮ್ಮ ಮೀಸಲಾದ ರಿಲೇಶನ್ಶಿಪ್ ಮ್ಯಾನೇಜರ್ನಿಂದ ಕರೆ ಪಡೆಯಿರಿ
ತ್ವರಿತ ಹೋಮ್ ಲೋನ್ ಮಂಜೂರಾತಿ ಪಡೆಯಿರಿ
ನಿಮ್ಮ ಮೀಸಲಾದ ರಿಲೇಶನ್ಶಿಪ್ ಮ್ಯಾನೇಜರ್ನಿಂದ ಕರೆ ಪಡೆಯಿರಿ
ನಾವು +91 ಗೆ ಒಟಿಪಿಯನ್ನು ಕಳುಹಿಸಿದ್ದೇವೆ .
ನಿಮ್ಮ ಭೇಟಿಗೆ ಧನ್ಯವಾದಗಳು, ನಮ್ಮ ಪ್ರತಿನಿಧಿ ನಿಮಗೆ ಕರೆ ಮಾಡುತ್ತಾರೆ.
ಪಿಎನ್‌ಬಿ ಹೌಸಿಂಗ್ ಬಗ್ಗೆ






ನಿಮ್ಮ ಆಸಕ್ತಿಗೆ ಧನ್ಯವಾದಗಳು! ಪ್ರತಿನಿಧಿಯು ಶೀಘ್ರದಲ್ಲೇ ಸಂಪರ್ಕದಲ್ಲಿರುತ್ತಾರೆ
ಕಾಲ್ ಬ್ಯಾಕಿಗೆ ಕೋರಿಕೆ ಸಲ್ಲಿಸಿ
ಒಟಿಪಿ ಪರಿಶೀಲಿಸಿ
ನಾವು +91 ಗೆ ಒಟಿಪಿಯನ್ನು ಕಳುಹಿಸಿದ್ದೇವೆ .
ದಯವಿಟ್ಟು ಕೆಳಗೆ ನಮೂದಿಸಿ.