PNB Housing Finance Limited

ಎನ್ಎಸ್ಇ:

ಬಿಎಸ್ಇ:

ಕೊನೆಯ ಅಪ್ಡೇಟ್:

()
ಸರಾಸರಿ ರೇಟಿಂಗ್
ಹಂಚಿಕೊಳ್ಳಿ
ಕಾಪಿ ಮಾಡಿ

ಆಸ್ತಿ ಮೇಲಿನ ಲೋನ್ ವರ್ಸಸ್ ಪರ್ಸನಲ್ ಲೋನ್ - ಯಾವುದು ಉತ್ತಮ?

give your alt text here

ಒಬ್ಬ ವ್ಯಕ್ತಿಯ ಆದಾಯ ಮತ್ತು ಉಳಿತಾಯಕ್ಕಿಂತ ಹೆಚ್ಚುವರಿಯಾಗಿ ಅದರಲ್ಲೂ ವಿಶೇಷವಾಗಿ ಪ್ರಸ್ತುತ ಸನ್ನಿವೇಶದಲ್ಲಿ ಹೆಚ್ಚುತ್ತಿರುವ ಅವಶ್ಯಕತೆಗಳೊಂದಿಗೆ ಹಣದ ಅಗತ್ಯತೆ ಉಂಟಾಗುವುದು ಒಂದು ಸಾಮಾನ್ಯ ಘಟನೆಯಾಗಿದೆ. ಈ ಫಂಡ್‌ಗಳನ್ನು ಪಡೆಯಲು ವಿವಿಧ ಮಾರ್ಗಗಳಿದ್ದರೂ, ಪರ್ಸನಲ್ ಲೋನ್ ವಿಧಾನದ ಮೂಲಕ ಹಣಕಾಸು ಪಡೆಯುವುದು ಹೆಚ್ಚು ಜನರು ಬಯಸುವ ಒಂದು ಮಾರ್ಗವಾಗಿದೆ. ತ್ವರಿತ ಮಂಜೂರಾತಿಗಳು ಮತ್ತು ವೇಗವಾದ ವಿತರಣೆಗಳು ಇದನ್ನು ಹಣ ಪಡೆಯುವ ಲಾಭದಾಯಕ ಮಾರ್ಗವಾಗಿಸುತ್ತವೆ. ಆದರೆ, ಇದೊಂದೇ ಈ ರೀತಿಯ ಏಕೈಕ ಲೋನ್ ಅಲ್ಲ. ಆಸ್ತಿ ಮೇಲಿನ ಲೋನ್ (ಎಲ್‌ಎಪಿ) ಒಂದು ರೀತಿಯ ಫಂಡ್ ಮೂಲವಾಗಿದ್ದು, ಇದು ಇದೇ ರೀತಿಯ ಪ್ರಯೋಜನಗಳನ್ನು ಹೊಂದಿರುತ್ತದೆ ಆದರೆ ಇದರ ಬಗ್ಗೆ ವ್ಯಾಪಕವಾಗಿ ತಿಳಿದಿರುವುದಿಲ್ಲ.

ಆಸ್ತಿ ಮೇಲಿನ ಲೋನ್ ಎಂಬುದು ಲೋನಿನ ಸುರಕ್ಷಿತ ರೂಪವಾಗಿದ್ದು, ಹೋಮ್ ಲೋನ್ ಜವಾಬ್ದಾರಿಯನ್ನು ಹೊಂದಿರುವ ಅಥವಾ ಅದರ ಅಡಿಯಲ್ಲಿರುವ ಆಸ್ತಿಯ ವಿರುದ್ಧವಾಗಿ ಹಣಕಾಸು ಸಂಸ್ಥೆಯಿಂದ ಲೋನ್ ಪಡೆಯಲಾಗುತ್ತದೆ. ಪರಿಗಣನೆಯಲ್ಲಿರುವ ಆಸ್ತಿಯನ್ನು ಅದರ ಚಾಲ್ತಿಯಲ್ಲಿರುವ ಮಾರುಕಟ್ಟೆ ಮೌಲ್ಯವನ್ನು ಕಂಡುಹಿಡಿಯಲು ಮೌಲ್ಯಮಾಪನ ಮಾಡಲಾಗುತ್ತದೆ ಮತ್ತು ಲೋನ್ ಟು ವ್ಯಾಲ್ಯೂ (ಎಲ್‌ಟಿವಿ) ಎಂದು ಕರೆಯಲಾಗುವ ಲೋನ್ ರೂಪದಲ್ಲಿ ಈ ಮೌಲ್ಯದ ಶೇಕಡಾವಾರನ್ನು ವಿತರಿಸಲಾಗುತ್ತದೆ. ಮೊತ್ತವನ್ನು ಮಂಜೂರು ಮಾಡುವ ಮೊದಲು ಮರುಪಾವತಿ ಸಾಮರ್ಥ್ಯ, ಲೋನಿನ ಕಾರಣ ಇತ್ಯಾದಿಗಳಂತಹ ಇತರ ಅಂಶಗಳನ್ನು ಕೂಡ ಮೌಲ್ಯಮಾಪನ ಮಾಡಲಾಗುತ್ತದೆ. ಪೂರ್ವನಿರ್ಧರಿತ ಬಡ್ಡಿ ದರದಲ್ಲಿ ನಿಗದಿತ ಅವಧಿಗೆ ಸಮನಾದ ಮಾಸಿಕ ಕಂತುಗಳ (ಇಎಂಐ ಗಳು) ಮೂಲಕ ಲೋನನ್ನು ಮರುಪಾವತಿಸಲಾಗುತ್ತದೆ. ಗ್ರಾಹಕರು ಮಕ್ಕಳ ಮದುವೆ, ಬಿಸಿನೆಸ್ ಲೋನ್, ಶಿಕ್ಷಣ ಮತ್ತು ಅನೇಕ ಕಾರಣಗಳಿಗಾಗಿ ಎಲ್ಎಪಿ ಪಡೆಯಬಹುದು.

ಪರ್ಸನಲ್ ಲೋನ್ ಎಂಬುದು ಬ್ಯಾಂಕ್ ಅಥವಾ ನಾನ್-ಬ್ಯಾಂಕಿಂಗ್ ಹಣಕಾಸು ಕಂಪನಿಯಿಂದ (ಎನ್‌ಬಿಎಫ್‌ಸಿ) ವ್ಯಕ್ತಿಗಳು ತಮ್ಮ ವೈಯಕ್ತಿಕ ಅಗತ್ಯಗಳನ್ನು ಪೂರೈಸಲು ತೆಗೆದುಕೊಳ್ಳುವ ಒಂದು ರೀತಿಯ ಲೋನ್ ಆಗಿದೆ. ಪರ್ಸನಲ್ ಲೋನ್‌ಗಳನ್ನು ಪಡೆಯುವಾಗ ಆದಾಯದ ಮಟ್ಟ, ಕ್ರೆಡಿಟ್ ಮತ್ತು ಉದ್ಯೋಗದ ಇತಿಹಾಸ, ಮರುಪಾವತಿ ಸಾಮರ್ಥ್ಯ ಇತ್ಯಾದಿಗಳು ಪ್ರಮುಖ ಮಾನದಂಡಗಳಾಗಿವೆ. ಅಂತಹ ಲೋನ್‌ಗಳು ಅಸುರಕ್ಷಿತವಾಗಿರುವುದರಿಂದ, ಸಾಲಗಾರರು ಅದನ್ನು ಪಡೆಯಲು ಚಿನ್ನ ಅಥವಾ ಆಸ್ತಿಯಂತಹ ಯಾವುದೇ ಅಡಮಾನವನ್ನು ಇರಿಸಬೇಕಾಗಿಲ್ಲ.

ಆದಾಗ್ಯೂ, ಇತರ ಲೋನ್‌ಗಳಿಗೆ ಹೋಲಿಸಿದರೆ ಪರ್ಸನಲ್ ಲೋನ್‌ಗಳ ಮೇಲಿನ ಬಡ್ಡಿ ದರಗಳು ಸಾಮಾನ್ಯವಾಗಿ ಹೆಚ್ಚಾಗಿರುತ್ತವೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು ಏಕೆಂದರೆ ಅವುಗಳು ಸುರಕ್ಷಿತವಲ್ಲ ಮತ್ತು ಈ ಲೋನ್‌ಗಳನ್ನು ವಿತರಿಸುವಾಗ ಹಣಕಾಸು ಸಂಸ್ಥೆಯು ಹೆಚ್ಚಿನ ಅಪಾಯವನ್ನು ಎದುರಿಸುತ್ತದೆ. ಪರ್ಸನಲ್ ಲೋನ್‌ಗಳ ಅವಧಿಯು ಸಾಮಾನ್ಯವಾಗಿ ಆಸ್ತಿ ಮೇಲಿನ ಲೋನ್‌ಗಿಂತ ಕಡಿಮೆಯಾಗಿರುತ್ತದೆ.

ಓದಲೇಬೇಕಾದವು: ಮನೆ ಖರೀದಿಸಲು ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದೀರಾ? ಸರಿಯಾದ ಸಮಯ ಈಗ ಇದೆ!

ಎರಡರ ಪ್ರಮುಖ ಫೀಚರ್‌ಗಳನ್ನು ವಿವರವಾಗಿ ನೋಡೋಣ:

ಎಲ್‌ಎಪಿ ವರ್ಸಸ್ ಪರ್ಸನಲ್ ಲೋನಿನಲ್ಲಿ ದೀರ್ಘಾವಧಿ: ಎಲ್ಎಪಿ ಸುರಕ್ಷಿತ ಲೋನ್ ಆಗಿರುವುದರಿಂದ, ವಯಸ್ಸು, ಆದಾಯ ಮತ್ತು ಆಸ್ತಿ ಮೇಲಿನ ಲೋನಿಗೆ ಅರ್ಜಿದಾರರ ಇತರ ಅರ್ಹತಾ ಮಾನದಂಡಗಳನ್ನು ಅವಲಂಬಿಸಿ ಬ್ಯಾಂಕ್‌ಗಳು 15 ವರ್ಷಗಳವರೆಗಿನ ದೀರ್ಘ ಅವಧಿಯನ್ನು ಒದಗಿಸುತ್ತವೆ. ಇಎಂಐ ಅನ್ನು ಕಡಿಮೆ ಮಾಡುವ ದೀರ್ಘ ಕಾಲಾವಧಿಯು ಗ್ರಾಹಕರಿಗೆ ಹೆಚ್ಚಿನ ಖರ್ಚಿನ ಹೊರೆಯನ್ನು ನೀಡುತ್ತವೆ. ಮತ್ತೊಂದೆಡೆ, ಪರ್ಸನಲ್ ಲೋನ್‌ಗಳನ್ನು ಸಾಮಾನ್ಯವಾಗಿ 5 ವರ್ಷಗಳವರೆಗೆ ಮಾತ್ರ ನೀಡಲಾಗುತ್ತದೆ.

ಮಂಜೂರು ಮಾಡಿದ ಲೋನ್ ಮೊತ್ತ: ಅರ್ಜಿದಾರರು ಆಸ್ತಿಯ ಮೇಲೆ ಎಲ್ಎಪಿ ಪಡೆಯುವುದರಿಂದ, ಹಣಕಾಸು ಸಂಸ್ಥೆಗಳು ಭೌತಿಕ ಆಸ್ತಿಯ ರೂಪದಲ್ಲಿ ಭದ್ರತೆಯ ಪ್ರಯೋಜನವನ್ನು ಹೊಂದಿರುತ್ತವೆ. ಆದ್ದರಿಂದ, ಅವರು ಗಣನೀಯ ಮೊತ್ತವನ್ನು ಲೋನ್ ಆಗಿ ನೀಡಲು ಸಿದ್ಧರಾಗಿರುತ್ತಾರೆ. ಆದಾಗ್ಯೂ, ಇದು ಎಲ್ಲಾ ಸರಿಯಾದ ಪರಿಶೀಲನೆ ಮತ್ತು ಪ್ರಸ್ತುತ ಮೌಲ್ಯ ಮತ್ತು ಆಸ್ತಿಯ ಅಡಮಾನ ಸಾಮರ್ಥ್ಯಕ್ಕೆ ಒಳಪಟ್ಟಿರುತ್ತದೆ. ಪರ್ಸನಲ್ ಲೋನ್‌ಗಳಲ್ಲಿ, ಗರಿಷ್ಠ ಲೋನ್ ಮೊತ್ತವು ಗಣನೀಯವಾಗಿ ಅಂದರೆ ಸಾಮಾನ್ಯವಾಗಿ ₹ 15-20 ಲಕ್ಷಗಳ ಶ್ರೇಣಿಯಲ್ಲಿ ಕಡಿಮೆಯಾಗಿರುತ್ತದೆ ಮತ್ತು ಪ್ರಮುಖವಾಗಿ ವ್ಯಕ್ತಿಯ ಆದಾಯವನ್ನು ಅವಲಂಬಿಸಿರುತ್ತದೆ.

ನೀಡಲಾಗುವ ಬಡ್ಡಿ ದರಗಳು: ಅರ್ಜಿದಾರರ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ನೀಡಲಾಗುವ ಬಡ್ಡಿ ದರವು ಪ್ರಮುಖ ಪಾತ್ರ ವಹಿಸುತ್ತದೆ. ಎಲ್ಎಪಿ ನಲ್ಲಿ ಒಳಗೊಂಡಿರುವ ಅಪಾಯದ ಮಟ್ಟದಿಂದಾಗಿ ಪರ್ಸನಲ್ ಲೋನ್‌ಗೆ ಹೋಲಿಸಿದರೆ ತುಲನಾತ್ಮಕವಾಗಿ ಕಡಿಮೆ ಬಡ್ಡಿ ದರದಲ್ಲಿ ಲೋನನ್ನು ನೀಡಲಾಗುತ್ತದೆ. ಈ ಮೊದಲು ವಿವರಿಸಿದಂತೆ, ಎಲ್ಎಪಿ ಸುರಕ್ಷಿತ ಲೋನ್ ಆಗಿರುವುದರಿಂದ, ಹಣಕಾಸು ಸಂಸ್ಥೆಯು ವಿತರಿಸಲಾದ ಮೊತ್ತದ ಮೇಲೆ ಕಡಿಮೆ ದರವನ್ನು ವಿಧಿಸುತ್ತದೆ. ಅಲ್ಲದೆ, ಹಣಕಾಸು ಸಂಸ್ಥೆಗಳು ಎಲ್‌ಎಪಿ ನಲ್ಲಿ ಫ್ಲೋಟಿಂಗ್ ದರದ ಆಯ್ಕೆಯನ್ನು ಒದಗಿಸುತ್ತವೆ, ಅಂದರೆ ಬಡ್ಡಿ ದರಗಳು ಕಡಿಮೆಯಾದಾಗ, ಗ್ರಾಹಕರಿಗೂ ಕೂಡ ಅದರ ಪ್ರಯೋಜನವನ್ನು ನೀಡಲಾಗುತ್ತದೆ.

ಪರ್ಸನಲ್ ಲೋನ್‌ಗಳಲ್ಲಿ ತ್ವರಿತ ವಿತರಣೆ: ಪರ್ಸನಲ್ ಲೋನ್‌ಗಳು ಎಲ್ಎಪಿ ಗಿಂತ ತ್ವರಿತ ಟರ್ನ್‌ಅರೌಂಡ್ ಸಮಯವನ್ನು ಹೊಂದಿವೆ, ಏಕೆಂದರೆ ಆಸ್ತಿಯ ಮೌಲ್ಯದ ಮೌಲ್ಯಮಾಪನದೊಂದಿಗೆ ಸರಿಯಾದ ಮೌಲ್ಯಮಾಪನವನ್ನು ಅನುಸರಿಸಲಾಗುತ್ತದೆ. ಆದಾಗ್ಯೂ ಹಣಕಾಸು ಸಂಸ್ಥೆಗಳು ತಮ್ಮ ಟರ್ನ್‌ಅರೌಂಡ್ ಸಮಯವನ್ನು ಗಣನೀಯವಾಗಿ ಹೆಚ್ಚಿಸಿವೆ ಮತ್ತು ಪ್ರಸ್ತುತ ಸನ್ನಿವೇಶದಲ್ಲಿ ಸರಾಸರಿಯಲ್ಲಿ 7 ದಿನಗಳ ಒಳಗೆ ಎಲ್‌ಎಪಿ ಯನ್ನು ವಿತರಿಸಲು ಸಾಧ್ಯವಾಗುತ್ತದೆ.

ಹೆಚ್ಚುವರಿ ಓದು: ಫಿಕ್ಸೆಡ್ ವರ್ಸಸ್ ಫ್ಲೋಟಿಂಗ್ ಬಡ್ಡಿ ದರ - ನಿಮಗೆ ಯಾವುದು ಸೂಕ್ತವಾಗಿದೆ

ಮುಂಪಾವತಿ ಫ್ಲೆಕ್ಸಿಬಿಲಿಟಿ: ಗ್ರಾಹಕರು ಯಾವುದೇ ಮುಂಪಾವತಿ ಶುಲ್ಕಗಳಿಲ್ಲದೆ ಪಡೆದ ಎಲ್‌ಎಪಿ ಯಲ್ಲಿ ಅನೇಕ ಭಾಗಶಃ ಪಾವತಿಗಳನ್ನು ಮಾಡುವ ಫ್ಲೆಕ್ಸಿಬಿಲಿಟಿಯನ್ನು ಹೊಂದಿದ್ದಾರೆ, ಆದರೆ ಕೆಲವು ನಿಯಮ ಮತ್ತು ಷರತ್ತುಗಳೊಂದಿಗೆ. ಆದಾಗ್ಯೂ, ಪರ್ಸನಲ್ ಲೋನ್‌ಗಳ ಸಂದರ್ಭದಲ್ಲಿ ಈ ಅನುಕೂಲತೆ ಅನೇಕ ಬಾರಿ ಲಭ್ಯವಿಲ್ಲ.

ಟಾಪ್ ಅಪ್ ಲೋನ್ ಸೌಲಭ್ಯ: ಗ್ರಾಹಕರು ಈಗಾಗಲೇ ಆಸ್ತಿ ಮೇಲಿನ ಲೋನನ್ನು ಪಡೆದಿದ್ದರೆ, ಆದರೆ ಗರಿಷ್ಠ ಮಿತಿಯವರೆಗೆ ಇಲ್ಲದಿದ್ದರೆ, ಹಣಕಾಸು ಸಂಸ್ಥೆಯಿಂದ ಎಲ್ಲಾ ಸರಿಯಾದ ಪರಿಶೀಲನೆ ಮತ್ತು ಪ್ರಮಾಣಿಕರಣದ ನಂತರ, ಅವರು ಅಸ್ತಿತ್ವದಲ್ಲಿರುವ ಲೋನ್ ಮೇಲೆ ಟಾಪ್ ಅಪ್ ಪಡೆಯಬಹುದು.

ಎಲ್ಎಪಿ ಮತ್ತು ಪರ್ಸನಲ್ ಲೋನ್‌ಗಳು ತಮ್ಮದೇ ಆದ ಅನುಕೂಲಗಳು ಮತ್ತು ಅನಾನುಕೂಲಗಳನ್ನು ಹೊಂದಿದ್ದರೂ, ಅರ್ಜಿದಾರರು ಅನುಕೂಲ, ಆಫರ್ ಮೇಲಿನ ಬಡ್ಡಿ ದರ, ಪ್ರಕ್ರಿಯಾ ಸಮಯ ಮತ್ತು ಅಗತ್ಯವಿರುವ ಮೊತ್ತದ ಆಧಾರದ ಮೇಲೆ ನಿರ್ಧಾರವನ್ನು ತೆಗೆದುಕೊಳ್ಳಬಹುದು.

ಆಥರ್ : ಶಾಜಿ ವರ್ಗೀಸ್
(ಲೇಖಕರು ಪಿಎನ್‌ಬಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕರು ಮತ್ತು ಬಿಸಿನೆಸ್ ಮುಖ್ಯಸ್ಥರಾಗಿದ್ದಾರೆ)

ಕೇವಲ 3 ನಿಮಿಷಗಳಲ್ಲಿ
3 ನಿಮಿಷಗಳು, ತೊಂದರೆ-ರಹಿತ!

ಪಿಎನ್‌ಬಿ ಹೌಸಿಂಗ್

ಅನ್ವೇಷಿಸಲು ಇತರ ವಿಷಯಗಳು

Request Call Back at PNB Housing
ಕಾಲ್ ಬ್ಯಾಕ್ ಮಾಡಿ