ನಾಯಕತ್ವದ ಗುಂಪು
ಎನ್ಎಸ್ಇ: ₹ ▲ ▼ ₹
ಬಿಎಸ್ಇ: ₹ ▲ ▼ ₹
ಕೊನೆಯ ಅಪ್ಡೇಟ್:
-
english
ಹುಡುಕಿ ಆನ್ಲೈನ್ ಪಾವತಿ
-
ಲೋನ್ ಪ್ರಾಡಕ್ಟ್ಗಳು
-
ಹೌಸಿಂಗ್ ಲೋನ್ಗಳು
-
ಇತರೆ ಹೋಮ್ ಲೋನ್ಗಳು
-
-
ರೋಶ್ನಿ ಲೋನ್ಗಳು
-
ಕೈಗೆಟಕುವ ಹೌಸಿಂಗ್
-
- ಫಿಕ್ಸೆಡ್ ಡೆಪಾಸಿಟ್
-
ಕ್ಯಾಲ್ಕುಲೇಟರ್ಗಳು
-
ನಿಮ್ಮ ಹಣಕಾಸಿನ ಸ್ಥಿತಿಗತಿಯನ್ನು ತಿಳಿದುಕೊಳ್ಳುವುದು
-
ನಿಮ್ಮ ಹಣಕಾಸನ್ನು ನಿರ್ವಹಿಸುವುದು
-
ಹೆಚ್ಚುವರಿ ವೆಚ್ಚಗಳನ್ನು ಲೆಕ್ಕ ಹಾಕುವುದು
-
-
ಜ್ಞಾನ ಕೇಂದ್ರ
-
ಹೂಡಿಕೆದಾರರು
-
ಹೂಡಿಕೆದಾರರ ಸಂಪರ್ಕ
-
ಕಾರ್ಪೋರೇಟ್ ಆಡಳಿತ
-
ಹಣಕಾಸು
-
ಡಿಸ್ಕ್ಲೋಸರ್ಗಳು
-
ಪಿಎನ್ಬಿ ಹೌಸಿಂಗ್ನಲ್ಲಿ ಹೊಸತು
-
-
ನಮ್ಮ ಬಗ್ಗೆ
-
ಮ್ಯಾನೇಜ್ಮೆಂಟ್
-
ಒತ್ತಿ
-
ಉದ್ಯೋಗಿ
-
- ನಮ್ಮನ್ನು ಸಂಪರ್ಕಿಸಿ
ಪಿಎನ್ಬಿ ಹೌಸಿಂಗ್ ಪರಿಚಯ
ಪಿಎನ್ಬಿ ಹೌಸಿಂಗ್
ನಾಯಕತ್ವದ ಗುಂಪು
ಗಿರೀಶ್ ಕೌಸ್ಗಿ ಅವರು ನಮ್ಮ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದಾರೆ. ಅವರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್ ಅಂಡ್ ಟ್ರೇಡ್ನಿಂದ ಬಿಸಿನೆಸ್ ಅಡ್ಮಿನಿಸ್ಟ್ರೇಶನ್ನಲ್ಲಿ ಎಕ್ಸಿಕ್ಯೂಟಿವ್ ಮಾಸ್ಟರ್ಸ್ ಡಿಪ್ಲೋಮಾ ಪಡೆದಿದ್ದಾರೆ. ಅವರು ಹಣಕಾಸು ಸೇವಾ ವಲಯದಲ್ಲಿ 21 ವರ್ಷಗಳಿಗಿಂತ ಹೆಚ್ಚಿನ ಅನುಭವವನ್ನು ಹೊಂದಿದ್ದಾರೆ. ಈ ಮೊದಲು, ಅವರು ಕೆನ್ ಫಿನ್ ಹೋಮ್ಸ್ ಲಿಮಿಟೆಡ್ನಲ್ಲಿ ವ್ಯವಸ್ಥಾಪಕ ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಟಾಟಾ ಕ್ಯಾಪಿಟಲ್ ಫೈನಾನ್ಶಿಯಲ್ ಸರ್ವಿಸಸ್ ಲಿಮಿಟೆಡ್ನ ರಿಟೇಲ್ - ಕ್ರೆಡಿಟ್ ಮತ್ತು ರಿಸ್ಕ್ನ ಮುಖ್ಯಸ್ಥರು, ಐಡಿಎಫ್ಸಿ ಬ್ಯಾಂಕ್ ಲಿಮಿಟೆಡ್ನ ಕಾರ್ಯನಿರ್ವಾಹಕ ಉಪಾಧ್ಯಕ್ಷರು ಮತ್ತು ಐಸಿಐಸಿಐ ಬ್ಯಾಂಕ್ ಲಿಮಿಟೆಡ್ನಲ್ಲಿ ಜಂಟಿ ಜನರಲ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಅವರು ನಮ್ಮ ಅಂಗಸಂಸ್ಥೆಗಳಾದ ಪಿಎಚ್ಎಫ್ಎಲ್ ಹೋಮ್ ಲೋನ್ಸ್ ಮತ್ತು ಸರ್ವಿಸಸ್ ಲಿಮಿಟೆಡ್ ಮತ್ತು ಪಿಇಎಚ್ಇಎಲ್ ಫೌಂಡೇಶನ್ನ ಮಂಡಳಿಯಲ್ಲಿ ನಿರ್ದೇಶಕರಾಗಿ ಕೂಡ ಸೇವೆ ಸಲ್ಲಿಸುತ್ತಿದ್ದಾರೆ. ಅಕ್ಟೋಬರ್ 21, 2022 ರಿಂದ ಅವರನ್ನು ನಮ್ಮ ಮಂಡಳಿಯಲ್ಲಿ ನೇಮಕ ಮಾಡಲಾಗಿದೆ.
ವಿನಯ್ ಗುಪ್ತಾ ಅವರು ನಮ್ಮ ಕಂಪನಿಯ ಮುಖ್ಯ ಹಣಕಾಸು ಅಧಿಕಾರಿಯಾಗಿದ್ದಾರೆ. ಅವರು ಅಕ್ಟೋಬರ್ 26, 2022 ರಂದು ನಮ್ಮ ಕಂಪನಿಗೆ ಸೇರಿದರು. ನಮ್ಮ ಕಂಪನಿಯ ಒಟ್ಟಾರೆ ಹಣಕಾಸು, ಖಜಾನೆ ಮತ್ತು ಹೂಡಿಕೆದಾರರ ಸಂಬಂಧಗಳ ಕಾರ್ಯಕ್ಕೆ ಅವರು ಜವಾಬ್ದಾರರಾಗಿದ್ದಾರೆ. ಅವರು ದೆಹಲಿ ವಿಶ್ವವಿದ್ಯಾಲಯದಿಂದ ವಾಣಿಜ್ಯ ವಿಭಾಗದಲ್ಲಿ ಬ್ಯಾಚುಲರ್ಸ್ ಪದವಿ ಪಡೆದಿದ್ದಾರೆ. ಅವರು ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದ ಸದಸ್ಯರಾಗಿದ್ದಾರೆ. ಈ ಮೊದಲು, ಅವರು ಎಸ್ಬಿಐ ಕಾರ್ಡ್ಸ್ ಆಂಡ್ ಪೇಮೆಂಟ್ ಸರ್ವೀಸಸ್ ಲಿಮಿಟೆಡ್, ಜಿಇ ಕ್ಯಾಪಿಟಲ್ ಸರ್ವೀಸಸ್ ಲಿಮಿಟೆಡ್ ಮತ್ತು ಪ್ರೈಸ್ ವಾಟರ್ಹೌಸ್ನಲ್ಲಿ ಕಾರ್ಯ ನಿರ್ವಹಿಸಿದ್ದಾರೆ.
ಅಮಿತ್ ಸಿಂಗ್ ನಮ್ಮ ಕಂಪನಿಯ ಚೀಫ್ ಪೀಪಲ್ ಆಫೀಸರ್ ಆಗಿದ್ದಾರೆ. ಅವರು ಡಿಸೆಂಬರ್ 1, 2021 ರಂದು ನಮ್ಮ ಕಂಪನಿಗೆ ಸೇರಿದರು. ಮಾನವ ಸಂಪನ್ಮೂಲ, ಕಲಿಕೆ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಮುನ್ನಡೆಸುವ ಮೂಲಕ ನಮ್ಮ ಕಂಪನಿಯ ಜನರ ಕಾರ್ಯತಂತ್ರವನ್ನು ನಿರ್ವಹಿಸುವ ಜವಾಬ್ದಾರಿಯನ್ನು ಅವರು ಹೊಂದಿದ್ದಾರೆ. ಅವರು ಸಿಎಸ್ಆರ್ ಮತ್ತು ಆಡಳಿತಾತ್ಮಕ ಕಾರ್ಯಗಳನ್ನು ಕೂಡ ಮುನ್ನಡೆಸುತ್ತಾರೆ. ಅವರು ಚೌಧರಿ ಚರಣ್ ಸಿಂಗ್ ವಿಶ್ವವಿದ್ಯಾಲಯ, ಮೀರತ್ನಿಂದ ಬಿಸಿನೆಸ್ ಅಡ್ಮಿನಿಸ್ಟ್ರೇಶನ್ನಲ್ಲಿ ಪದವಿ ಮತ್ತು ಐಸಿಎಫ್ಎಐ ವಿಶ್ವವಿದ್ಯಾಲಯದ ಐಸಿಎಫ್ಎಐ ಬಿಸಿನೆಸ್ ಸ್ಕೂಲ್ನಿಂದ ಬಿಸಿನೆಸ್ ಅಡ್ಮಿನಿಸ್ಟ್ರೇಶನ್ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಈ ಮೊದಲು, ಅವರು ಎಸ್ಬಿಐ ಫಂಡ್ಸ್ ಮ್ಯಾನೇಜ್ಮೆಂಟ್ ಪ್ರೈವೇಟ್ ಲಿಮಿಟೆಡ್ನಲ್ಲಿ ಕೆಲಸ ಮಾಡಿದ್ದರು.
ಜತುಲ್ ಆನಂದ್ ನಮ್ಮ ಕಂಪನಿಯ ಮುಖ್ಯ ಕ್ರೆಡಿಟ್ ಮತ್ತು ಸಂಗ್ರಹಣಾ ಅಧಿಕಾರಿಯಾಗಿದ್ದಾರೆ. ಅವರು ಜೂನ್ 19, 2013 ರಂದು ನಮ್ಮ ಕಂಪನಿಗೆ ಸೇರಿದರು. ನಮ್ಮ ಕಂಪನಿಯಲ್ಲಿ ರಿಟೇಲ್ ಬಿಸಿನೆಸ್ಗಾಗಿ ಕ್ರೆಡಿಟ್ ಅಂಡರ್ರೈಟಿಂಗ್ ಮತ್ತು ಸಂಗ್ರಹಗಳಿಗೆ ಅವರು ಜವಾಬ್ದಾರರಾಗಿದ್ದಾರೆ. ಅವರು ದೆಹಲಿ ವಿಶ್ವವಿದ್ಯಾಲಯದಿಂದ ವಾಣಿಜ್ಯದಲ್ಲಿ ಪದವಿ ಹೊಂದಿದ್ದಾರೆ ಮತ್ತು ಭಾರತೀಯ ಬ್ಯಾಂಕಿಂಗ್ ಮತ್ತು ಹಣಕಾಸು ಸಂಸ್ಥೆಯಿಂದ ಕೋರ್ಸ್ ಅನ್ನು ಪೂರ್ಣಗೊಳಿಸಿದ್ದಾರೆ. ಅವರು 2002 ರಿಂದ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದ ಸದಸ್ಯರಾಗಿದ್ದಾರೆ. ಈ ಮೊದಲು, ಅವರು ಐಸಿಐಸಿಐ ಬ್ಯಾಂಕ್ ಲಿಮಿಟೆಡ್ ಮತ್ತು ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ನೊಂದಿಗೆ ಕೆಲಸ ಮಾಡಿದ್ದಾರೆ.
ಅಜಯ್ ಕುಮಾರ್ ಮೊಹಂತಿ ಅವರು ನಮ್ಮ ಕಂಪನಿಯ ಆಂತರಿಕ ಆಡಿಟ್ನ ಮುಖ್ಯಸ್ಥರಾಗಿದ್ದಾರೆ. ಅವರು ಜುಲೈ 1, 2020 ರಂದು ನಮ್ಮ ಕಂಪನಿಗೆ ಸೇರಿದರು. ನಮ್ಮ ಕಂಪನಿಯ ಆಂತರಿಕ ಆಡಿಟ್ ಕಾರ್ಯಗಳನ್ನು ಮುನ್ನಡೆಸುವ ಜವಾಬ್ದಾರಿ ಅವರದ್ದಾಗಿದೆ. ಅವರು ಉತ್ಕಾಲ್ ವಿಶ್ವವಿದ್ಯಾಲಯದಿಂದ ವಾಣಿಜ್ಯದಲ್ಲಿ ಪದವಿ ಪಡೆದಿದ್ದಾರೆ ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಅಹಮದಾಬಾದ್ನಿಂದ ಸೀನಿಯರ್ ಮ್ಯಾನೇಜ್ಮೆಂಟ್ ಪ್ರೋಗ್ರಾಂ ಪೂರ್ಣಗೊಳಿಸಿದ್ದಾರೆ. ಅವರು 1989 ರಿಂದ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದ ಸದಸ್ಯರಾಗಿದ್ದಾರೆ. ಅವರು ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದಿಂದ ಇನ್ಫರ್ಮೇಶನ್ ಸಿಸ್ಟಮ್ಸ್ ಆಡಿಟ್ನಲ್ಲಿ ಪೋಸ್ಟ್ ಕ್ವಾಲಿಫಿಕೇಶನ್ ಕೋರ್ಸ್ ಕೂಡ ಪೂರ್ಣಗೊಳಿಸಿದ್ದಾರೆ. ಅವರು ಭಾರತೀಯ ಬ್ಯಾಂಕಿಂಗ್ ಮತ್ತು ಹಣಕಾಸು ಸಂಸ್ಥೆಯ ಪ್ರಮಾಣೀಕೃತ ಸಹವರ್ತಿಯಾಗಿದ್ದಾರೆ. ಈ ಮೊದಲು, ಅವರು ಐಸಿಐಸಿಐ ಹೋಮ್ ಫೈನಾನ್ಸ್ ಕಂಪನಿ ಲಿಮಿಟೆಡ್ ಮತ್ತು ಐಸಿಐಸಿಐ ಬ್ಯಾಂಕ್ ಲಿಮಿಟೆಡ್ನಲ್ಲಿ ಕೆಲಸ ಮಾಡಿದ್ದರು.
ಅನುಜೈ ಸಕ್ಸೇನಾ ನಮ್ಮ ಕಂಪನಿಯ 'ಬಿಸಿನೆಸ್ ಮುಖ್ಯಸ್ಥ - ಅಫರ್ಡೆಬಲ್ ಬಿಸಿನೆಸ್' ಆಗಿದ್ದಾರೆ. ಅವರು ಮೇ 3, 2021 ರಂದು ನಮ್ಮ ಕಂಪನಿಗೆ ಸೇರಿದರು. ನಮ್ಮ ಕಂಪನಿಯ ಬಿಸಿನೆಸ್ ಪರಿವರ್ತನೆಯ ಪ್ರಯಾಣವನ್ನು ಚಾಲನೆ ಮಾಡುವ ಜವಾಬ್ದಾರಿಯನ್ನು ಅವರು ಹೊಂದಿದ್ದಾರೆ. ಅವರು ಮೋಹನ್ಲಾಲ್ ಸುಖಾಡಿಯಾ ವಿಶ್ವವಿದ್ಯಾಲಯ, ಉದಯಪುರದಿಂದ ವಿಜ್ಞಾನದಲ್ಲಿ ಪದವಿ ಮತ್ತು ನರ್ಸಿ ಮೋಂಜಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ನಿಂದ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ನಲ್ಲಿ (ಜಾಹೀರಾತು ಮತ್ತು ಸಂವಹನ ನಿರ್ವಹಣೆ) ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಈ ಮೊದಲು, ಅವರು ಐಸಿಐಸಿಐ ಬ್ಯಾಂಕ್ ಲಿಮಿಟೆಡ್ ಮತ್ತು ಪೈನ್ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್ನಲ್ಲಿ ಕಾರ್ಯ ನಿರ್ವಹಿಸಿದ್ದರು.
ವೀಣಾ ಜಿ ಕಾಮತ್ 53 ವರ್ಷ ವಯಸ್ಸಿನವರು. ಅವರು ಬಿಸಿನೆಸ್ ಮ್ಯಾನೇಜ್ಮೆಂಟ್ (ಬಿಬಿಎಂ) ಮತ್ತು ಲಾ (ಎಲ್ಎಲ್ಬಿ) ಪದವಿಗಳನ್ನು ಹೊಂದಿದ್ದಾರೆ. ಅವರು 2008 ರಿಂದ ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರೀಸ್ ಆಫ್ ಇಂಡಿಯಾದ (ಐಸಿಎಸ್ಐ) ಸದಸ್ಯರಾಗಿದ್ದಾರೆ.
ಅವರು ಅಕ್ಟೋಬರ್ 1998 ರಿಂದ ಕೆನ್ ಫಿನ್ ಹೋಮ್ಸ್ ಲಿಮಿಟೆಡ್ನೊಂದಿಗೆ ದೀರ್ಘಾವಧಿಯ ಸಂಬಂಧವನ್ನು ಹೊಂದಿದ್ದರು. ಅವರ ಅಧಿಕಾರಾವಧಿಯಲ್ಲಿ, ಅವರು ಕಂಪನಿಯ ಕಂಪನಿ ಕಾರ್ಯದರ್ಶಿ ಮತ್ತು ಅನುಸರಣೆ ಅಧಿಕಾರಿಯಾಗಿದ್ದರು (ಪ್ರಮುಖ ವ್ಯವಸ್ಥಾಪಕ ಸಿಬ್ಬಂದಿ) ಮತ್ತು ಅನುಸರಣೆಗಳನ್ನು ಖಾತ್ರಿಪಡಿಸಿದರು, ವಿವಿಧ ಪಾಲಿಸಿಗಳನ್ನು ರಚಿಸಿದರು, ನಿಯಂತ್ರಕರೊಂದಿಗೆ ಸಂಪರ್ಕ ಹೊಂದಿದ್ದರು ಮತ್ತು ಅನುಸರಣೆಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ್ದಾರೆ. ಅವರು ವಿವಿಧ ಇಲಾಖೆಗಳ ಮುಖ್ಯಸ್ಥರಾಗಿದ್ದರು ಮತ್ತು ಕಾನೂನು, ಮಂಡಳಿ ಕಾರ್ಯದರ್ಶಿ, ತೆರಿಗೆ, ಇತ್ಯಾದಿಗಳಲ್ಲಿ ವ್ಯಾಪಕ ಮಾನ್ಯತೆ ಮತ್ತು ಅನುಭವವನ್ನು ಹೊಂದಿದ್ದಾರೆ ಮತ್ತು ಕಾರ್ಪೊರೇಟ್ ಆಡಳಿತದಲ್ಲಿ ಪರಿಣತಿಯನ್ನು ಪಡೆದಿದ್ದಾರೆ. ಅವರು ಕಂಪನಿಯಲ್ಲಿ ಅಧಿಕಾರಿಯ ಶ್ರೇಣಿಯಿಂದ ಡೆಪ್ಯುಟಿ ಜನರಲ್ ಮ್ಯಾನೇಜರ್ ಶ್ರೇಣಿಗೆ ಬೆಳೆದಿದ್ದಾರೆ. ಅದಕ್ಕಿಂತಲೂ ಮೊದಲು ಅವರು ಐಸಿಡಿಎಸ್ ಲಿಮಿಟೆಡ್, ಹೈಯರ್ ಪರ್ಚೇಸ್ ಮತ್ತು ಲೀಸಿಂಗ್ ಕಂಪನಿಯಲ್ಲಿ ಕೆಲಸ ಮಾಡಿದ್ದಾರೆ (1995-1998). ಅವರು ಮೈಸೂರು ನ್ಯಾಯಾಲಯದಲ್ಲಿ ನಾಗರಿಕ ಕಾನೂನನ್ನು ಸಹ ಅಭ್ಯಾಸ ಮಾಡಿದ್ದರು (1992-1995).
ದಿಲೀಪ್ ವೈತೀಶ್ವರನ್ ಮುಖ್ಯ ಮಾರಾಟ ಅಧಿಕಾರಿಯಾಗಿದ್ದಾರೆ - ಕಂಪನಿಯ ರಿಟೇಲ್. ಅವರು ಸಾಲ ನೀಡುವಿಕೆ ವಿಭಾಗದಲ್ಲಿ ಪ್ರಮುಖ ಮತ್ತು ಉದಯೋನ್ಮುಖ ಮಾರುಕಟ್ಟೆಗಳ ವ್ಯವಹಾರಗಳನ್ನು ಮತ್ತು ಸಂಸ್ಥೆಗೆ ಡೆಪಾಸಿಟ್ಗಳ ವ್ಯವಹಾರವನ್ನು ಮುನ್ನಡೆಸುತ್ತಾರೆ. ಅವರು ಸಂಸ್ಥೆಗಾಗಿ ಬಿಸಿನೆಸ್ ಇಂಟೆಲಿಜೆನ್ಸ್ ಮತ್ತು ವಿಶ್ಲೇಷಣಾ ಕಾರ್ಯಕ್ರಮದ ಮುಖ್ಯಸ್ಥರಾಗಿದ್ದಾರೆ. ಬಿಸಿನೆಸ್ ಕಾರ್ಯತಂತ್ರ, ಪ್ರಾಡಕ್ಟ್ ಮತ್ತು ಪೋರ್ಟ್ಫೋಲಿಯೋ ಮ್ಯಾನೇಜ್ಮೆಂಟ್, ಸೇಲ್ಸ್ ಮತ್ತು ಡಿಸ್ಟ್ರಿಬ್ಯೂಶನ್ ಮತ್ತು ಪಿ & ಎಲ್ ಮ್ಯಾನೇಜ್ಮೆಂಟ್ ಕಾರ್ಯಗಳ ರಿಟೇಲ್ ಲೆಂಡಿಂಗ್ ಬಿಸಿನೆಸ್ನಲ್ಲಿ ಅವರು 15+ ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಅವರು ಏಪ್ರಿಲ್ 2023 ರಲ್ಲಿ ನಮ್ಮ ಕಂಪನಿಗೆ ಸೇರಿದರು. ಕಂಪನಿಯ ರಿಟೇಲ್ ಬಿಸಿನೆಸ್ನ ಬೆಳವಣಿಗೆ ಮತ್ತು ಲಾಭದಾಯಕ ಫಲಿತಾಂಶಗಳಿಗೆ ಅವರು ಜವಾಬ್ದಾರರಾಗಿದ್ದಾರೆ. ಅವರು ಚೆನ್ನೈನ ಅನ್ನಾ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ನಲ್ಲಿ ಪದವಿ ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಫಾರಿನ್ ಟ್ರೇಡ್, ನವದೆಹಲಿಯಿಂದ ಬಿಸಿನೆಸ್ ಅಡ್ಮಿನಿಸ್ಟ್ರೇಶನ್ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ನಮ್ಮೊಂದಿಗೆ ಸೇರುವ ಮೊದಲು, ಅವರು ಎಕ್ಸಿಸ್ ಬ್ಯಾಂಕ್ ಲಿಮಿಟೆಡ್ನಲ್ಲಿ ಕೆಲಸ ಮಾಡಿದ್ದಾರೆ.
ಕೃಷ್ಣ ಕಾಂತ್ ಕಂಪನಿಯ ಮುಖ್ಯ ಅನುಸರಣೆ ಅಧಿಕಾರಿಯಾಗಿದ್ದಾರೆ ಮತ್ತು ಡಿಸೆಂಬರ್ 2023. ರಿಂದ ಸಂಸ್ಥೆಯೊಂದಿಗೆ ಸಹಭಾಗಿತ್ವ ಹೊಂದಿದ್ದಾರೆ. ಅನುಸರಣೆಯ ಕ್ಷೇತ್ರದಲ್ಲಿ ಅವರು ಅನುಭವಿ ವೃತ್ತಿಪರರಾಗಿದ್ದಾರೆ ಮತ್ತು ಬಿಎಫ್ಎಸ್ಐನಲ್ಲಿ ಎರಡು ದಶಕಗಳ ಅನುಭವವನ್ನು ಹೊಂದಿದ್ದಾರೆ. ಪಿಎನ್ಬಿ ಹೌಸಿಂಗ್ ಫೈನಾನ್ಸ್ನಲ್ಲಿ, ನಿಯಂತ್ರಕ ಅನುಸರಣೆ ಕಾರ್ಯವನ್ನು ಮುನ್ನಡೆಸುವುದು, ಸಂಸ್ಥೆಯಾದ್ಯಂತ ಅನುಸರಣೆ ಕಾರ್ಯಗಳು ಪರಿಣಾಮಕಾರಿ ಮತ್ತು ದಕ್ಷವಾಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಮಾನದಂಡಗಳನ್ನು ಸ್ಥಾಪಿಸುವುದು ಮತ್ತು ಕಾರ್ಯವಿಧಾನಗಳನ್ನು ಅನುಷ್ಠಾನಗೊಳಿಸುವುದು ಅವರ ಜವಾಬ್ದಾರಿಯಾಗಿದೆ. ಪಿಎನ್ಬಿ ಹೌಸಿಂಗ್ಗೆ ಸೇರುವ ಮೊದಲು ಅವರು ಬಂಧನ್ ಬ್ಯಾಂಕ್ ಮತ್ತು ಕೆನರಾ ಬ್ಯಾಂಕ್ನಲ್ಲಿ ಕಾರ್ಯ ನಿರ್ವಹಿಸಿದ್ದರು.
ಅವರು ಯುಕೆಯ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದಿಂದ ಆಡಳಿತ, ಅಪಾಯ ಮತ್ತು ಅನುಸರಣೆಯಲ್ಲಿ ಐಸಿಎ ಡಿಪ್ಲೊಮಾವನ್ನು ಹೊಂದಿದ್ದಾರೆ ಮತ್ತು ನವದೆಹಲಿಯ ಇಂಟರ್ನ್ಯಾಷನಲ್ ಮ್ಯಾನೇಜ್ಮೆಂಟ್ ಇನ್ಸ್ಟಿಟ್ಯೂಟ್ನಿಂದ ಎಗ್ಸಿಕ್ಯೂಟಿವ್ ಪಿಜಿಡಿಎಂ ಪೂರ್ಣಗೊಳಿಸಿದ್ದಾರೆ. ಅವರು ಮುಂಬೈನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಆಂಡ್ ಫೈನಾನ್ಸ್ನ ಸರ್ಟಿಫೈಡ್ ಅಸೋಸಿಯೇಟ್ ಆಗಿದ್ದಾರೆ.
ಅಂಶುಲ್ ದಲೇಲಾ ಅವರು ನಮ್ಮ ಕಂಪನಿಯ ಗ್ರಾಹಕ ಸೇವೆ ಮತ್ತು ಕಾರ್ಯಾಚರಣೆಗಳ ಮುಖ್ಯಸ್ಥರಾಗಿದ್ದಾರೆ. ಅವರು ನವೆಂಬರ್ 11, 2016 ರಂದು ನಮ್ಮ ಕಂಪನಿಗೆ ಸೇರಿದರು. ಅವರು ನಮ್ಮ ಕಂಪನಿಯಲ್ಲಿ ಬ್ರಾಂಚ್ ಕಾರ್ಯಾಚರಣೆಗಳು ಮತ್ತು ಗ್ರಾಹಕ ಸೇವೆಗೆ ಜವಾಬ್ದಾರರಾಗಿದ್ದಾರೆ. ಅವರು ರಾಜಸ್ಥಾನ ವಿಶ್ವವಿದ್ಯಾಲಯ, ಜೈಪುರದಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ನಲ್ಲಿ ಪದವಿ ಮತ್ತು ರಾಜಸ್ಥಾನ ವಿಶ್ವವಿದ್ಯಾಲಯ, ಜೈಪುರದಿಂದ ಬಿಸಿನೆಸ್ ಅಡ್ಮಿನಿಸ್ಟ್ರೇಶನ್ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಈ ಮೊದಲು, ಅವರು ಜೆನ್ವರ್ಥ್ ಫೈನಾನ್ಶಿಯಲ್ ಮಾರ್ಟ್ಗೇಜ್ ಗ್ಯಾರಂಟಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಐಸಿಐಸಿಐ ಬ್ಯಾಂಕ್ ಲಿಮಿಟೆಡ್ನಲ್ಲಿ ಕಾರ್ಯ ನಿರ್ವಹಿಸಿದ್ದಾರೆ.
ಅನುಭವ್ ರಜಪೂತ್ ನಮ್ಮ ಕಂಪನಿಯ ಮುಖ್ಯ ಮಾಹಿತಿ ಅಧಿಕಾರಿಯಾಗಿದ್ದಾರೆ. ಅವರು ಏಪ್ರಿಲ್ 12, 2022 ರಂದು ನಮ್ಮ ಕಂಪನಿಗೆ ಸೇರಿದರು. ಅವರು ನಮ್ಮ ಕಂಪನಿಯ ಮಾಹಿತಿ ತಂತ್ರಜ್ಞಾನ ಮತ್ತು ಡಿಜಿಟಲ್ ಉಪಕ್ರಮಗಳನ್ನು ನಿರ್ವಹಿಸಲು ಜವಾಬ್ದಾರರಾಗಿದ್ದಾರೆ. ಅವರು ಚೌಧರಿ ಚರಣ್ ಸಿಂಗ್ ವಿಶ್ವವಿದ್ಯಾಲಯ, ಮೀರತ್ನಿಂದ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ನಲ್ಲಿ ಪದವಿ ಮತ್ತು ಎಸ್.ಪಿ.ಜೈನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ & ರಿಸರ್ಚ್ನಿಂದ ಮಾಹಿತಿ ನಿರ್ವಹಣೆಯಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪಡೆದಿದ್ದಾರೆ. ಈ ಮೊದಲು, ಅವರು ಚೋಲಮಂಡಲಂ ಎಂಎಸ್ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ ಮತ್ತು ನಿವಾ ಬೂಪ ಹೆಲ್ತ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ನಲ್ಲಿ (ಈ ಮೊದಲು ಮ್ಯಾಕ್ಸ್ ಬೂಪ ಹೆಲ್ತ್ ಇನ್ಶೂರೆನ್ಸ್ ಲಿಮಿಟೆಡ್ ಎಂದು ಕರೆಯಲ್ಪಡುತ್ತಿತ್ತು) ಕಾರ್ಯನಿರ್ವಹಿಸಿದ್ದಾರೆ.
ವಲ್ಲಿ ಸೇಕರ್ ನಮ್ಮ ಕಂಪನಿಯ ಚೀಫ್ ಸೇಲ್ಸ್ ಅಂಡ್ ಕಲೆಕ್ಷನ್ ಆಫೀಸರ್- ಅಫೋರ್ಡೆಬಲ್ ಆಗಿದ್ದಾರೆ. ಅವರು ಜೂನ್ 6, 2022 ರಂದು ನಮ್ಮ ಕಂಪನಿಗೆ ಸೇರಿದರು. ನಮ್ಮ ಕಂಪನಿಯಲ್ಲಿ ಅಫೋರ್ಡೆಬಲ್ ವಿಭಾಗದ ಮಾರಾಟ, ಬಿಸಿನೆಸ್ ಅಭಿವೃದ್ಧಿ ಮತ್ತು ಸಂಗ್ರಹಗಳಿಗೆ ಅವರು ಜವಾಬ್ದಾರರಾಗಿದ್ದಾರೆ. ಅವರು ಮನೋನ್ಮಣಿಯಂ ಸುಂದರನಾರ್ ವಿಶ್ವವಿದ್ಯಾಲಯ ತಿರುನಲ್ವೇಲಿಯಿಂದ ವಾಣಿಜ್ಯ ಪದವಿ ಪಡೆದಿದ್ದಾರೆ. ಈ ಮೊದಲು, ಅವರು ಮೋತಿಲಾಲ್ ಓಸ್ವಾಲ್ ಹೋಮ್ ಫೈನಾನ್ಸ್ ಲಿಮಿಟೆಡ್ನಲ್ಲಿ ಕಾರ್ಯ ನಿರ್ವಹಿಸಿದ್ದರು.
ವಿಕಾಸ್ ರಾಣಾ ನಿರ್ಮಾಣ ಹಣಕಾಸು ವ್ಯವಹಾರದ ಮುಖ್ಯಸ್ಥರಾಗಿದ್ದಾರೆ. ಅವರು ಜೂನ್ 18, 2024 ರಂದು ನಮ್ಮ ಕಂಪನಿಗೆ ಸೇರಿದರು. ಅಪಾಯ ಹೊಂದಿರುವ ಅಧಿಕ ಲಾಭದ ನಿರ್ಮಾಣ ಮತ್ತು ರಿಯಲ್ಟಿ ಫೈನಾನ್ಸ್ ಬಿಸಿನೆಸ್ ಅನ್ನು ನಿರ್ಮಿಸಲು ಮತ್ತು ನಿರ್ವಹಿಸಲು ಅವರು ಜವಾಬ್ದಾರರಾಗಿದ್ದಾರೆ. ಅವರು ತನ್ನ ಬಿ.ಕಾಂ ಅನ್ನು ಮುಂಬೈಯ ಎನ್ಎಂ ಕಾಲೇಜಿನಿಂದ, ಐಸಿಡಬ್ಲ್ಯೂಎಐ ಕೋಲ್ಕತ್ತಾದಿಂದ ಐಸಿಡಬ್ಲ್ಯೂಎ ಅನ್ನು ಮತ್ತು ಹೈದರಾಬಾದ್ನ ಐಸಿಎಫ್ಎಐ ನಿಂದ ಸಿಎಫ್ಎ ಅನ್ನು ಪೂರ್ಣಗೊಳಿಸಿದ್ದಾರೆ. ಅವರು ಐಸಿಐಸಿಐ ಬ್ಯಾಂಕ್ ಲಿಮಿಟೆಡ್ನಲ್ಲಿ ನಿರ್ಮಾಣ ಮತ್ತು ರಿಯಲ್ಟಿ ಫಂಡಿಂಗ್ ಬಿಸಿನೆಸ್ನಲ್ಲಿ 13+ ವರ್ಷಗಳನ್ನು ಒಳಗೊಂಡಂತೆ ಬ್ಯಾಂಕಿಂಗ್ ಮತ್ತು ಹಣಕಾಸು ಸೇವಾ ವಲಯದಲ್ಲಿ 30+ ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಅವರು ರಿಯಲ್ ಎಸ್ಟೇಟ್ ಫಂಡಿಂಗ್, ಎಸ್ಎಂಇ ಸಾಲ ನೀಡುವಿಕೆ, ಕ್ಯಾಪಿಟಲ್ ಮಾರ್ಕೆಟ್ಗಳು, ಕಾರ್ಪೊರೇಟ್ ಬ್ಯಾಂಕಿಂಗ್, ಸರ್ಕಾರಿ ವ್ಯವಹಾರ ಮತ್ತು ಹೂಡಿಕೆ ಬ್ಯಾಂಕಿಂಗ್ ಸೇರಿದಂತೆ ವಿವಿಧ ಸ್ಥಾನಗಳಲ್ಲಿ ಐಸಿಐಸಿಐ ಬ್ಯಾಂಕ್ ಲಿಮಿಟೆಡ್, ಐಡಿಬಿಐ ಬ್ಯಾಂಕ್ ಲಿಮಿಟೆಡ್, ವಿಎಲ್ಎಸ್ ಫೈನಾನ್ಸ್ ಲಿಮಿಟೆಡ್ನೊಂದಿಗೆ ಈ ಹಿಂದೆ ಕಾರ್ಯನಿರ್ವಹಿಸಿದ್ದಾರೆ.
ಭವ್ಯ ತನೇಜ ಮಾರ್ಕೆಟಿಂಗ್ನ ರಾಷ್ಟ್ರೀಯ ಮುಖ್ಯಸ್ಥರಾಗಿದ್ದಾರೆ. ಅವರು ಜುಲೈ 15, 2019 ರಂದು ನಮ್ಮ ಕಂಪನಿಗೆ ಸೇರಿದರು. ಮಾರ್ಕೆಟಿಂಗ್ ಡೊಮೇನ್ನಲ್ಲಿ ವಿಶಾಲ ವ್ಯಾಪ್ತಿಯ 16 ವರ್ಷಗಳ ವೃತ್ತಿಜೀವನದ ಅನುಭವ ಹೊಂದಿದ್ದಾರೆ. ಸಂಸ್ಥೆಯ ಕಾರ್ಯತಂತ್ರದ ಮಾರುಕಟ್ಟೆ ಸ್ಥಾನವನ್ನು ವ್ಯಾಖ್ಯಾನಿಸುವುದು, ಬ್ರ್ಯಾಂಡ್ ನಿರ್ವಹಣೆಯನ್ನು ಮೇಲ್ವಿಚಾರಣೆ ಮಾಡುವುದು, ಸಾರ್ವಜನಿಕ ಸಂಬಂಧಗಳನ್ನು ನಿರ್ವಹಿಸುವುದು ಮತ್ತು ಹೊರಗಿನ ಸಂಪರ್ಕ ಕೇಂದ್ರದ ಮೂಲಕ ಡಿಜಿಟಲ್ ಮಾರ್ಕೆಟಿಂಗ್ ತಂತ್ರಗಳನ್ನು ಕಾರ್ಯಗತಗೊಳಿಸುವುದು ಅವರು ಜವಾಬ್ದಾರಿಯಾಗಿದೆ. ಅವರು ಐಐಎಂ ಇಂದೋರ್ನಿಂದ ಡಿಜಿಟಲ್ ಮಾರ್ಕೆಟಿಂಗ್ ಮತ್ತು ಸ್ಟ್ರಾಟಜಿಯಲ್ಲಿ ಸರ್ಟಿಫಿಕೇಟ್ ಪ್ರೋಗ್ರಾಮ್ ಅನ್ನು ಮಾಡಿದ್ದಾರೆ, ಮಾರ್ಕೆಟಿಂಗ್ನಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಮತ್ತು ವಾಣಿಜ್ಯ ವಿಷಯದಲ್ಲಿ ಬ್ಯಾಚುಲರ್ಸ್ ಡಿಗ್ರಿಯನ್ನು ಹೊಂದಿದ್ದಾರೆ. ಈ ಹಿಂದೆ ಅವರು ಐಐಎಫ್ಎಲ್ ವೆಲ್ತ್ ಆಂಡ್ ಅಸೆಟ್ ಮ್ಯಾನೇಜ್ಮೆಂಟ್, ಎಚ್ಎಸ್ಬಿಸಿ, ಕೋಟಕ್ ಮಹೀಂದ್ರಾ ಬ್ಯಾಂಕ್ ಮತ್ತು ಕೋಟಕ್ ಲೈಫ್ ಇನ್ಶೂರೆನ್ಸ್ನೊಂದಿಗೆ ಸಹಯೋಗ ಹೊಂದಿದ್ದರು.
ನೀರಜ್ ಮನ್ಚಂದಾ ಅವರು ಕಂಪನಿಯ ಚೀಫ್ ರಿಸ್ಕ್ ಆಫೀಸರ್ ಆಗಿದ್ದಾರೆ. ಅವರು ಏಪ್ರಿಲ್ 15, 2013 ರಂದು ನಮ್ಮ ಕಂಪನಿಗೆ ಸೇರಿದರು. ನಮ್ಮ ಕಂಪನಿಯಲ್ಲಿ ಒಟ್ಟಾರೆ ರಿಸ್ಕ್ ಮ್ಯಾನೇಜ್ಮೆಂಟ್ಗೆ ಅವರು ಜವಾಬ್ದಾರರಾಗಿದ್ದಾರೆ. ಅವರು ದೆಹಲಿ ವಿಶ್ವವಿದ್ಯಾಲಯದಿಂದ ವಾಣಿಜ್ಯದಲ್ಲಿ ಪದವಿ ಮತ್ತು ಐಸಿಎಫ್ಎಐ ಬಿಸಿನೆಸ್ ಸ್ಕೂಲ್ನಿಂದ ಬಿಸಿನೆಸ್ ಅಡ್ಮಿನಿಸ್ಟ್ರೇಶನ್ನಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪದವಿ ಪಡೆದಿದ್ದಾರೆ. ಈ ಮೊದಲು, ಅವರು ಹ್ಯಾಬಿಟ್ಯಾಟ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ನಲ್ಲಿ ಕಾರ್ಯ ನಿರ್ವಹಿಸಿದ್ದರು.
ತ್ವರಿತ ಹೋಮ್ ಲೋನ್ ಮಂಜೂರಾತಿ ಪಡೆಯಿರಿ
ನಿಮ್ಮ ಮೀಸಲಾದ ರಿಲೇಶನ್ಶಿಪ್ ಮ್ಯಾನೇಜರ್ನಿಂದ ಕರೆ ಪಡೆಯಿರಿ
ತ್ವರಿತ ಹೋಮ್ ಲೋನ್ ಮಂಜೂರಾತಿ ಪಡೆಯಿರಿ
ನಿಮ್ಮ ಮೀಸಲಾದ ರಿಲೇಶನ್ಶಿಪ್ ಮ್ಯಾನೇಜರ್ನಿಂದ ಕರೆ ಪಡೆಯಿರಿ
ನಾವು +91 ಗೆ ಒಟಿಪಿಯನ್ನು ಕಳುಹಿಸಿದ್ದೇವೆ .
ನಿಮ್ಮ ಭೇಟಿಗೆ ಧನ್ಯವಾದಗಳು, ನಮ್ಮ ಪ್ರತಿನಿಧಿ ನಿಮಗೆ ಕರೆ ಮಾಡುತ್ತಾರೆ.
ಪಿಎನ್ಬಿ ಹೌಸಿಂಗ್ ಬಗ್ಗೆ






ನಿಮ್ಮ ಆಸಕ್ತಿಗೆ ಧನ್ಯವಾದಗಳು! ಪ್ರತಿನಿಧಿಯು ಶೀಘ್ರದಲ್ಲೇ ಸಂಪರ್ಕದಲ್ಲಿರುತ್ತಾರೆ
ಕಾಲ್ ಬ್ಯಾಕಿಗೆ ಕೋರಿಕೆ ಸಲ್ಲಿಸಿ
ಒಟಿಪಿ ಪರಿಶೀಲಿಸಿ
ನಾವು +91 ಗೆ ಒಟಿಪಿಯನ್ನು ಕಳುಹಿಸಿದ್ದೇವೆ .
ದಯವಿಟ್ಟು ಕೆಳಗೆ ನಮೂದಿಸಿ.