ಸಿಬಿಲ್ ಸ್ಕೋರ್ ನಿಮ್ಮ ಕ್ರೆಡಿಟ್ ಹಿಸ್ಟರಿಯನ್ನು ಸಂಕ್ಷಿಪ್ತವಾಗಿ ವಿವರಿಸುವ ಮೂರು ಅಂಕಿಯ ಸಂಖ್ಯೆಯಾಗಿದೆ. ಲೋನ್ ಅನುಮೋದನೆಗಾಗಿ ನಿಮ್ಮ ಕ್ರೆಡಿಟ್ ಅರ್ಹತೆಯನ್ನು ಅಳೆಯಲು ಹಣಕಾಸು ಸಂಸ್ಥೆಗಳು ಈ ಸ್ಕೋರ್ ಅ ನ್ನು ಪರಿಶೀಲಿಸುತ್ತವೆ.
ಹೆಚ್ಚಿನ ಸಿಬಿಲ್ ಸ್ಕೋರ್ ನಿಮಗೆ ಇವುಗಳನ್ನು ಪಡೆಯಲು ಸಹಾಯ ಮಾಡುತ್ತದೆ:
– ತ್ವರಿತ ಲೋನ್ ಅನುಮೋದನೆ
– ದೊಡ್ಡ ಲೋನ್ ಮೊತ್ತಕ್ಕೆ ಅನುಮೋದನೆ
– ದೀರ್ಘ ಲೋನ್ ಅವಧಿ
– ಕಡಿಮೆ ಬಡ್ಡಿ ದರ
ಸಮಯಕ್ಕೆ ಸರಿಯಾಗಿ ಬಿಲ್‌ಗಳು ಮತ್ತು ಇಎಂಐಗಳನ್ನು ಪಾವತಿಸುವುದು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಹೆಚ್ಚಿಸುತ್ತವೆ ಮತ್ತು ತಡವಾದ ಪಾವತಿ ದಂಡಗಳಿಂದ ನಿಮ್ಮನ್ನು ಉಳಿಸುತ್ತವೆ.
ದೀರ್ಘ ಲೋನ್ ಅವಧಿಯನ್ನು ಆಯ್ಕೆ ಮಾಡುವ ಪ್ರಮುಖ ಪ್ರಯೋಜನವೆಂದರೆ ಸಣ್ಣ ಹಾಗೂ ಸುಲಭವಾಗಿ ನಿರ್ವಹಿಸಬಹುದಾದ ಇಎಂಐಗಳು. ಇದು ನಿಮ್ಮ ಡೀಫಾಲ್ಟ್ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ.
ಕ್ರೆಡಿಟ್ ಬಳಕೆಯ ಅನುಪಾತ (ಸಿಯುಆರ್) ಎಂದರೆ, ನೀವು ಪಡೆದ ಕ್ರೆಡಿಟ್ ಅನ್ನು ಲಭ್ಯವಿರುವ ಒಟ್ಟು ಕ್ರೆಡಿಟ್‌ನಿಂದ ಭಾಗಿಸಿದಾಗ ಸಿಗುವ ಸಂಖ್ಯೆ ಆಗಿದೆ. ಕ್ರೆಡಿಟ್ ಮಿತಿಯ 30% ಗಿಂತ ಕಡಿಮೆ ಬಳಸಲು ಸಲಹೆ ನೀಡಲಾಗುತ್ತದೆ.
ಅನೇಕ ಲೋನ್‌ಗಳು ನಿಮ್ಮನ್ನು ಕ್ರೆಡಿಟ್-ಅವಲಂಬಿತ ವ್ಯಕ್ತಿಯಾಗಿ ಚಿತ್ರಿಸಬಹುದು. ನಿಮ್ಮ ಚಾಲ್ತಿಯಲ್ಲಿರುವ ಲೋನ್‌ಗಳನ್ನು ಮರುಪಾವತಿಸುವುದನ್ನು ಮತ್ತು ನಂತರ ಹೊಸದಕ್ಕೆ ಅಪ್ಲೈ ಮಾಡುವುದನ್ನು ಪರಿಗಣಿಸಿ.
ವರದಿಯಲ್ಲಿನ ಕೆಲವು ದೋಷದಿಂದಾಗಿ ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆ ಇರಬಹುದು. ನಿಯಮಿತವಾಗಿ ನಿಮ್ಮ ಕ್ರೆಡಿಟ್ ರಿಪೋರ್ಟ್ ಪರಿಶೀಲಿಸಿ ಮತ್ತು ಅದನ್ನು ಅಪ್ಡೇಟ್ ಮಾಡಿಕೊಳ್ಳಿ.