ಹೋಮ್ ಲೋನ್‌ಗಳನ್ನು ಅನುಮೋದಿಸುವಾಗ ಹಣಕಾಸು ಸಂಸ್ಥೆಗಳು ವೈದ್ಯಕೀಯ, ಪ್ರಯಾಣ ಇತ್ಯಾದಿಗಳಂತಹ ಭತ್ಯೆಗಳನ್ನು ಹೊರತುಪಡಿಸಿ ನಿಮ್ಮ ಕೈಗೆ ಸಿಗುವ ಸಂಬಳವನ್ನು ಪರಿಗಣಿಸುತ್ತವೆ.
ಹಣಕಾಸು ಸಂಸ್ಥೆಗಳು ನಿಮ್ಮ ಸಂಬಳದ ಸುಮಾರು 60 ಪಟ್ಟು ಹೋಮ್ ಲೋನ್ ನೀಡಬಹುದು. ನಿಖರವಾದ ಮೊತ್ತವು ಬಡ್ಡಿ ದರ ಮತ್ತು ಕಾಲಾವಧಿಯನ್ನು ಅವಲಂಬಿಸಿರುತ್ತದೆ.
ನಿಮ್ಮ ಸಂಬಳ ₹40,000 ಆಗಿದ್ದರೆ ಮತ್ತು ನೀವು ವರ್ಷಕ್ಕೆ 8.5% ದರದಲ್ಲಿ 20 ವರ್ಷಗಳವರೆಗೆ ಹೋಮ್ ಲೋನ್ ತೆಗೆದುಕೊಂಡರೆ, ನೀವು ₹2,304,617 ಮೌಲ್ಯದ ಹೋಮ್ ಲೋನ್‌ಗೆ ಅರ್ಹರಾಗಿರುತ್ತೀರಿ.
ನಿಮ್ಮ ಸಂಬಳವನ್ನು ಹೊರತುಪಡಿಸಿ, ಹೋಮ್ ಲೋನ್ ಅನುಮೋದಿಸುವಾಗ ಹಣಕಾಸು ಸಂಸ್ಥೆಗಳು ಈ ಕೆಳಗಿನ ಅಂಶಗಳನ್ನು ಕೂಡ ಪರಿಗಣಿಸುತ್ತವೆ:
– ಲೋನ್ ಅವಧಿ
– ವಯಸ್ಸು
– ಕ್ರೆಡಿಟ್ ಸ್ಕೋರ್
– ಅಸ್ತಿತ್ವದಲ್ಲಿರುವ ಹಣಕಾಸಿನ ಜವಾಬ್ದಾರಿಗಳು
ನಿಮ್ಮ ಅರ್ಹತೆಯನ್ನು ಪರಿಶೀಲಿಸುವ ಸುಲಭ ಮಾರ್ಗವೆಂದರೆ ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಬಳಸುವುದು. ಇದು ಉಚಿತ ಆನ್ಲೈನ್ ಸಾಧನವಾಗಿದ್ದು, ನೀವು ಅರ್ಹರಾಗಿರುವ ಲೋನ್ ಮೊತ್ತವನ್ನು ಮತ್ತು ನಂತರದ ಮಾಸಿಕ ಇಎಂಐ ಅನ್ನು ಅಂದಾಜು ಮಾಡುತ್ತದೆ.
ನಿಮ್ಮ ನಿವ್ವಳ ಮಾಸಿಕ ಆದಾಯ, ಲೋನ್ ಕಾಲಾವಧಿ, ಬಡ್ಡಿ ದರ ಮತ್ತು ಇತರ ಅಸ್ತಿತ್ವದಲ್ಲಿರುವ ಇಎಂಐಗಳನ್ನು ನಮೂದಿಸಿ. ಕಾಲಾವಧಿಯ ಆಧಾರದ ಮೇಲೆ ಅರ್ಹತೆಯು ಹೇಗೆ ಭಿನ್ನವಾಗಿರುತ್ತದೆ ಎಂಬುದನ್ನು ಪರಿಶೀಲಿಸಲು ನೀವು ಸ್ಲೈಡರ್ ಬಳಸಬಹುದು.