ಅರ್ಜಿದಾರರು ಲೋನ್ ಮರುಪಾವತಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆಯೇ ಎಂಬುದನ್ನು ಕ್ರೆಡಿಟ್ ಸ್ಕೋರ್ ತೋರಿಸುತ್ತದೆ. ಮತ್ತು ಕಡಿಮೆ ಕ್ರೆಡಿಟ್ ಸ್ಕೋರ್‌ಗಳೊಂದಿಗೆ ಹೋಮ್ ಲೋನ್‌ಗಳನ್ನು ಪಡೆಯಲು ಸಾಧ್ಯವಿದೆ.
ಹೌಸಿಂಗ್ ಫೈನಾನ್ಸ್ ಕಂಪನಿಯೊಂದಿಗೆ ಮಾತನಾಡಿ ಮತ್ತು ಹೋಮ್ ಲೋನ್ ಪಡೆಯಲು ಸಮಾಲೋಚನೆ ನಡೆಸಬಹುದೇ ಎಂದು ನೋಡಿ.
ಲೋನ್ ಅರ್ಹತೆಯಲ್ಲಿ ಕ್ರೆಡಿಟ್ ಸ್ಕೋರ್ ಅನ್ನು ಮಾತ್ರ ಪರಿಗಣಿಸುವುದಿಲ್ಲ. ನಿಮ್ಮ ಮರುಪಾವತಿ ಸಾಮರ್ಥ್ಯ ಮತ್ತು ಆಸ್ತಿ ಮೌಲ್ಯವನ್ನು ತೋರಿಸುವ ಮೂಲಕ ನೀವು ಇನ್ನೂ ಹೋಮ್ ಲೋನ್‌ಗೆ ಅರ್ಹರಾಗಬಹುದು.
ಹೋಮ್ ಲೋನ್‌ಗೆ ಅಪ್ಲೈ ಮಾಡುವಾಗ, ಸಹ-ಅರ್ಜಿದಾರರನ್ನು ಹೊಂದಿರುವುದರಿಂದ ನಿಮ್ಮ ಲೋನ್ ಅಪ್ಲಿಕೇಶನ್ ಮೌಲ್ಯ ಹೆಚ್ಚುತ್ತದೆ ಮತ್ತು ನಿಮಗೆ ಅರ್ಹತೆ ಪಡೆಯಲು ಸಹಾಯ ಆಗುತ್ತದೆ.
ಅನೇಕ ಲೋನ್ ಅಪ್ಲಿಕೇಶನ್‌ಗಳನ್ನು ಹೊಂದಿರುವುದು ನಿಮಗೆ ಉತ್ತಮವಲ್ಲ. ಆದ್ದರಿಂದ ಹಾಗೆ ಮಾಡಬೇಡಿ ಮತ್ತು ಒಂದು ಬಾರಿಗೆ ಒಬ್ಬ ಸಾಲದಾತರೊಂದಿಗೆ ಹೋಮ್ ಲೋನ್‌ಗೆ ಅಪ್ಲೈ ಮಾಡಿ.